Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28-06-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 99/2021 ಕಲಂ 447, 427 ಸಂಗಡ 34 ಐಪಿಸಿ : ನಿನ್ನೆ ದಿನಾಂಕ 26.06.2021 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಆರೋಪಿತರಾದ ಸಾಬಣ್ಣ ಮತ್ತು ಬಸಪ್ಪ ಇವರು ತನ್ನ ಸಹೋದರನಾದ ಫಿರ್ಯಾದಿಗೆ ಯಂಕಪ್ಪ ಈತನ ಹೊಲದಗಳ ಸವರ್ೆ ನಂಬರ 109, 178, 179 ನೇದ್ದರ ಜಮೀನುಗಳಲ್ಲಿ ಅಕ್ರಮ ಪ್ರವೇಶ ಮಾಡಿ ಹೊಲಗಳಲ್ಲಿ ಬಿತ್ತಿದ್ದ ಹತ್ತಿ ಬೆಳೆಯನ್ನು ನಾಶ ಮಾಡಲು ಆರೋಪಿತರಾದ ಭೀಮರಡ್ಡಿ ಮತ್ತು ಅನಂತ್ಯ ಎಂಬುವರರ ಟ್ರ್ಯಾಕ್ಟರಗಳೊಂದಿಗೆ ಅವರನ್ನು ಕರೆದುಕೊಂಡು ಹೋಗಿ ಫಿರ್ಯಾದಿಗೆ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿದ್ದು ಆ ಬಗ್ಗೆ ಫಿರ್ಯಾದಿಗೆ ಇಂದು ಠಾಣೆಗೆ ಬಂದು ನೀಡಿದ ಲಿಖಿತ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 99/2021 ಕಲಂ: 447, 427 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 45/2021 279, 304(ಎ) ಐಪಿಸಿ:ದಿನಾಂಕ:27/06/2021 ರಂದು ಶ್ರೀ. ಮಹೇಶ ತಂದೆ ಶ್ರೀಮಂತಗೌಡ ಪಾಟೀಲ ವಯಾ-45 ವರ್ಷ, ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಉಪ್ಪಲದಿನ್ನಿ ತಾ:ಬ.ಬಾಗೇವಾಡಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರು ಸಲ್ಲಿಸಿದ್ದರ ಸಾರಾಂಶವೆನೆಂದರೇ, ಫಿರ್ಯಾದಿಯ ಅಣ್ಣನಾದ ಮೃತ ಸುನೀಲಕುಮಾರ ತಂದೆ ಶ್ರೀಮಂತಗೌಡ ಪಾಟೀಲ ವಯಾ-47 ವರ್ಷ, ಜಾ:ಲಿಂಗಾಯತ ಉ:ಸ.ಪ್ರಾ. ಶಾಲೆ ಶಿಕ್ಷಕರು ಸಾ:ಉಪ್ಪಲದಿನ್ನಿ ತಾ:ಬ.ಬಾಗೇವಾಡಿ ಈತನು ದಿನಾಂಕ:25/06/2021 ರಂದು ರಾತ್ರಿ ವೇಳೆಯಲ್ಲಿ ಹುಣಸಗಿ-ನಾರಾಯಣಪೂರ ರಸ್ತೆಯ ಮೇಲೆ ಬಲಶೆಟ್ಟಿಹಾಳ ಗ್ರಾಮದ ಸುಭಾಷ ತಂದೆ ಬಸಣ್ಣ ವಡವಡೊಗಿ ಇವರ ಹೊಲದ ಹತ್ತಿರ ತಾನು ಚಲಾಯಿಸುವ ಹಿರೋ ಹೋಂಡಾ ಸುಪರ್ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ:ಕೆಎ-33 ಎಸ್-5084 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಮೊಟಾರ್ ಸೈಕಲ್ ಸಮೇತ ರಸ್ತೆಯ ಕೆಳಗೆ ತೆಗ್ಗಿನಲ್ಲಿ ಬಿದ್ದಿದ್ದು, ಮೋಟಾರ್ ಸೈಕಲ್ ಆತನ ಮೇಲೆ ಬಿದ್ದು, ತಲೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಪರಾಧ.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ.102/2021 . 102/2021 ಕಲಂ ಕನರ್ಾಟಕ ಮುಂಜಾಗ್ರತಾ ಪ್ರಾಣಿ ಹಿಂಸೆ, ತಡೆಗಟ್ಟುವ ಕಾಯಿದೆ 1964 ಕಲಂ: 8,11, ಪ್ರಾಣಿ ಹಿಂಸೆ ತಡೆ ಕಾಯಿದೆ 1960 ಕಲಂ: 11(ಎ), 11(ಡಿ) 20, 26, ಕನರ್ಾಟಕ ಜಾನುವಾರು ಹತ್ಯೆ ಪ್ರತಿಭಂಧಕ ಮತ್ತು ಸಂರಕ್ಷಣ ಆಧ್ಯಾದೇಶ ಕಾಯಿದೆ 2020. 4, 5,7, 12, ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 2015 ಕಲಂ 125 ಇ 1, 2, 3, 4. ಟ್ರಾನ್ಸಪೋರ್ಟ ಆಫ್ ಎನಿಮಲ್ಸ್ ರೂಲ್ಸ್ 1978 ಕಲಂ: 46 ರಿಂದ 57, 96 ರಿಂದ 98, ಐಎಮ್ವಿ, ಆ್ಯಕ್ಟ್ 192 (ಎ) ಸಂ 177 ನೇದ್ದರ ಅಡಿಯಲ್ಲಿ : ಇಂದು ದಿನಾಂಕ 27/06/2021 ರಂದು ಬೆಳಿಗ್ಗೆ 08-30 ಗಂಟೆಗೆ ಶ್ರೀ ಭೀಮರಾಯ ಪಿ.ಎಸ್.ಐ (ಕಾ.ಸು) ರವರು ಠಾಣೆಗೆ ಹಾಜರಾಗಿ ಜಪ್ತಿ ಪಮಚನಾಮೆ ಮತ್ತು ವರದಿ ನೀಡಿದ ಸಾರಂಶವೆನೆಂದರೆ ನಾವು ಈ ಮೇಲ್ಕಂಡ ಹೆಸರು ವಿಳಾಸದ ಉಭಯ ಪಂಚರಿಗೆ ಇಂದು ದಿನಾಂಕ: 27-06-2021 ರಂದು ಬೆಳಿಗ್ಗೆ 05-00 ಗಂಟೆಗೆ ಸೈದಾಪೂರ ಪೊಲೀಸ ಠಾಣೆಯ ಶ್ರೀ ಭೀಮರಾಯ .ಪಿ ಎಸ್ ಐ ಸಾಹೇಬರು ನಮಗೆ ಹೇಳಿ ಕರೆಸಿದ್ದ ಮೇರೆಗೆ ನಾವು ಸೈದಾಪೂರ ಪೊಲೀಸ ಠಾಣೆಗೆ ಬಂದೆವು. ಠಾಣೆಯಲ್ಲಿ ಪಿ ಎಸ್ ಐ ಸಾಹೇಬರು ಹಾಗು ಅವರ ಸಿಬ್ಬಂದಿಯವರಾದ 1) ಮಾಣಿಕಪ್ಪ ಹೆಚ್.ಸಿ-67. 2) ಶ್ರೀ ನೂರಂದ ಪಿಸಿ-368. ಇವರು ಹಾಜರಿದ್ದರು ನಮಗೆ ಪಿ ಎಸ್ ಐ ಸಾಹೇಬರು ತಿಳಿಸಿದ್ದೇನಂದರೆ. ಮುನಗಲ್ ಗ್ರಾಮದ ಕಡೆಯಿಂದ ಯಾರೋ ಒಂದು ಡಿ.ಸಿ.ಎಮ್ ವಾಹನದಲ್ಲಿ ದನಗಳನ್ನು ಖಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಖಚಿತವಾದ ಮಾಹಿತಿ ಬೆಳಿಗ್ಗೆ 05-30 ಗಂಟೆಗೆ ಬಂದಿದೆ. ನಾವು ದಾಳಿ ಮಾಡುವದು ಇದ್ದು ತಾವು ನಮ್ಮ ಸಂಗಡ ಬಂದು ನಾವು ದಾಳಿ ಮಾಡಿದ ನಂತರ ಜಪ್ತಿ ಪಂಚನಾಮೆಗೆ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ನಾವು ಉಭಯ ಪಂಚರು ಅದಕ್ಕೆ ಒಪ್ಪಿಕೊಂಡು ನಾವೆಲ್ಲಾರು ಕೂಡಿ ಠಾಣೆಯ ಪೊಲೀಸ ಜೀಪ ನಂ-ಕೆಎ-33-ಜಿ-138 ನೇದ್ದರಲ್ಲಿ ಕುಳಿತುಕೊಂಡೆವು ಠಾಣೆಯಿಂದ ಗ್ರಾಮಸೈದಾಪೂರ ಒಳಗಡೆ ಹೋಗುವ ರಸ್ತೆಯ ಹತ್ತಿರ ಹೋಗುತ್ತಿದ್ದಾಗ ಮುನಗಲ್ ರೋಡ ಕಡೆಯಿಂದ ಒಂದು ಡಿ.ಸಿ.ಎಮ್ ವಾಹನದಲ್ಲಿ ದನಗಳನ್ನು ತುಂಬಿಕೊಂಡು ರಾಚನಳ್ಳಿ ಕ್ರಾಸ ಕಡೆಗೆ ಬರುತ್ತಿರುವದನ್ನು ಕಂಡು ಅದರ ಮೇಲೆ ಸಂಶಯ ಬಂದು ನಾವೆಲ್ಲ್ಲರು ಜೀಪಿನಿಂದ ಇಳಿದೆವು. ಪಿ ಎಸ್ ಐ ಸಾಹೇಬರು ಹಾಗು ಅವರ ಸಿಬ್ಬಂದಿಯವರು ಕೂಡಿ ದನಗಳನ್ನು ತಂದ ಡಿಸಿ ಎಮ್.ವಾಹನವನ್ನು ಬೆಳಿಗ್ಗೆ 06-00 ಗಂಟೆಗೆ ದಾಳಿ ಮಾಡಿ ಅದರಲ್ಲಿ ಇದ್ದ ಚಾಲಕನಿಗೆ ಹಿಡಿದು ಹೆಸರು ವಿಳಾಸವನ್ನು ಪಿ ಎಸ್ ಐ ಸಾಹೇಬರು ವಿಚಾರಿಸಿದಾಗ ಅವನು ತನ್ನ ಹೆಸರು. ಬಾಬುರಾವ ತಂದೆ ವಿನಾಯಕ ವಯ|| 45 ವರ್ಷ, ಜಾ|| ಕಬ್ಬಲಿಗ ಉ|| ಟ್ರಾಕ್ಟರ ಚಾಲಕ ಸಾ|| ಗುರುಮಠಕಲ ತಾ|| ಗುರುಮಠಕಲ ಜಿ|| ಯಾದಗಿರಿ ಅಂತ
ತಿಳಿಸಿದ್ದು, ಸದರಿ ವಾಹನದಲ್ಲಿರುವ ಇನ್ನೊಬ್ಬ ವ್ಯಕ್ತಿಯನ್ನು ವಿಚಾರಿಸಲಾಗಿ ಅವನ ಹೆಸರು ಮಹ್ಮದ ಪಾಶಾ ತಂದೆ ಅಲ್ಲಾವುದ್ದೀನ ವಯ|| 40 ವರ್ಷ, ಜಾ|| ಮುಸ್ಲಿಂ, ಉ|| ವ್ಯಾಪಾರ ಸಾ|| ಅಂಗಡಿ ರಾಯಚೂರ ಮಂಡಲ|| ಕೋಡಂಗಲ ಜಿ|| ಮಹಬೂಬ ನಗರ ರಾಜ್ಯ ತೆಲಂಗಾಣ ಅಂತ ತಿಳಿಸಿದನು. ನಂತರ ವಾಹನವನ್ನು ಪರಿಶೀಲಸಿ ನೋಡಲಾಗಿ ಡಿಸಿಎಮ್. ವಾಹನ ಇದ್ದು ಅದರ ನಂಬರ ಕೆ.ಎ-33, ಎ-2629 ಇದ್ದು ಅದರಲ್ಲಿ 18 ಜಾನುವಾರುಗಳನ್ನು ತುಂಬಿಕೊಂಡು ಗುರುಮಠಕಲ ಕಡೆಗೆ ಹೊಗುತ್ತಿರುವದು ಗೊತ್ತಾಗಿರುತ್ತದೆ. ಸದರಿ ದನಗಳನ್ನು ಪರಿಶೀಲಿಸಿ ನೋಡಲಾಗಿ 1) ಬಿಳಿ ಮತ್ತು ಬೂದು ಮಿಶ್ರಿತ ಬಣ್ಣದ ಹೋರಿ 2) ಕಪ್ಪು ಮತ್ತು ಬೂದು ಬಣ್ಣದ ಹೋರಿ 3) ಕರಿ ಬಣ್ಣದ ಹೋರಿ 4) ಬಿಳಿ ಬಣ್ಣದ ಹೋರಿ 5) ಕೆಂಪು-ಕರಿ-ಬಳಿ ಮಿಶ್ರಿತ ಹೋರಿ 6) ಬದಾಮ ಕಲರ ಹೋರಿ 7) ಕರಿ ಬಣ್ಣದ ಹೋರಿ 8) ಬಿಳಿ ಬಣ್ಣದ ಹೋರಿ 9) ಬಿಳಿ ಬಣ್ಣದ ಹೋರಿ 10) ಕರಿ ಬಣ್ಣದ ಹೋರಿ 11) ಬಿಳಿ ಬಣ್ಣದ ಹೋರಿ 12) ಬದಾಮ ಮಿಶ್ರೀತ ಬಣ್ಣದ್ದು 13) ಬದಾಮ ಬಣ್ಣದ್ದು 14) ಬಿಳಿ ಬಣ್ಣದ ಹೋರಿ 15) ಕರಿಬಣ್ಣದ ಹೋರಿ 16) ಬಿಳಿ ಬಣ್ಣದ ಹೋರಿ 17 ಕರಿ ಬಣ್ಣದ ಹೋರಿ 18) ಬಿಳಿ ಬಣ್ಣದ ಹೋರಿಗಳು ಇದ್ದು ಸದರಿ ದನಗಳನ್ನು ಮಾರಾಟ ಮಾಡುವದು ಮತ್ತು ದನಗಳನ್ನು ವದೆ ಮಾಡುವದು ಕನರ್ಾಟಕ ಸರಕಾರ ನéೀಷೆದ ಮಾಡಿದ್ದು ಗೋತ್ತಿದ್ದರು ಕೂಡ ದನಗಳನ್ನು ವದೇ ಮಾಡಲು ವಾಹನದಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ತೆಗೆದುಕೊಂಡು ಹೋಗುತ್ತಿರುವದು ಗೊತ್ತಾಗಿರುತ್ತದೆ. ಸದರಿಯವುಗಳನ್ನು ಪಿ.ಎಸ್.ಐ ಸಾಹೇಬರು ತಮ್ಮ ತಾಬೆಗೆ ತೆಗೆದುಕೊಂಡರು. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 27.06.2021 ರಂದು ಬೆಳಿಗ್ಗೆ.6.00 ಗಂಟೆಯಿಂದ 07-45 ಗಂಟೆ ವರೆಗಿನ ಅವಧಿಯಲ್ಲಿ ಲ್ಯಾಪಟ್ಯಾಪದಲ್ಲಿ ಟೈಪ ಮಾಡಿ ಮುಗಿಸಲಾಯಿತು. ಅಂತ ದೂರಿನ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 149/20201 ಕಲಂ 323 324 354 504 506 ಸಂ 34 ಐ.ಪಿ.ಸಿ : ಇಂದು ದಿನಾಂಕ 27/06/2021 ರಂದು ಸಾಯಂಕಾಲ 18-00 ಗಂಟೆಗೆ ಶ್ರೀಮತಿ ಚಂದ್ರಮ್ಮ ಗಂಡ ಹೊನ್ನಪ್ಪ ಕೆರಿಬಲಿ,್ಲ ವಯಸ್ಸು 55 ವರ್ಷ, ಜಾತಿ ಪ.ಜಾತಿ(ಮಾದಿಗ), ಉಃ ಹೊಲಮನೆ ಕೆಲಸ, ಸಾಃ ಗುಂಡಗುತರ್ಿ, ತಾಃ ವಡಗೇರಾ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಮ್ಮೂರ ಮುಂದೆ ನನ್ನ ಗಂಡ ಹೊನ್ನಪ್ಪ ತಂದೆ ಮರೆಪ್ಪ ಕೆರಿಬಲ್ಲಿ ವಯಸ್ಸು 60 ವರ್ಷ ಇವರ ಹೆಸರಿನಲ್ಲಿ ಹೊಲ ಸವರ್ೇ ನಂಬರ 138 ಆಕಾರ 1 ಎಕರೆ ಜಮೀನು ಇರುತ್ತದೆ ನಮ್ಮ ಜಮೀನಿಗೆ ಹೊಂದಿಕೊಂಡು, ನನ್ನ ಭಾವ ಹಣಮಂತ ತಂದೆ ಚಂದಪ್ಪ ಕೆರಿಬಲ್ಲಿ ವಯಸ್ಸು 65 ಇವರ ಜಮೀನು ಇರುತ್ತದೆ.
ಹೀಗಿರುವಾಗ ಇಂದು ದಿನಾಂಕ 27/06/2021 ರಂದು, ಮುಂಜಾನೆಯ ಸುಮಾರಿಗೆ ನನ್ನ ಗಂಡ ಹೊಲದ ಕಡೆಗೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದರು, ಸ್ವಲ್ಪ ಸಮಯದ ನಂತರ ನನ್ನ ಗಂಡ ಮರಳಿ ಮನೆಗೆ ಬಂದು ಹೇಳಿದ್ದೇನೆಂದರೆ, ಇಂದು ಮುಂಜಾನೆ ಹೊಲಕ್ಕೆ ಹೋದಾಗ ನನ್ನ ಅಣ್ಣ ಹಣಮಂತ ಈತನು ಇಬ್ಬರ ಮದ್ಯ ಇರುವ ಬದುವಿನ ಮೇಲೆ ಮಣ್ಣು ಹಾಕುವುದನ್ನು ಬಿಟ್ಟು ನಮ್ಮ ಹೊಲದಲ್ಲಿ ಹಾಕಿದ್ದಾನೆ ಕೇಳಿದಕ್ಕೆ ನನ್ನ ಜೊತೆ ತಕರಾರು ಮಾಡಲು ಬರುತಿದ್ದಾನೆ ಅಂತಾ ಹೇಳಿದಾಗ, ನಾನು ಮತ್ತು ನನ್ನ ಗಂಡ ಇಬ್ಬರೂ ಮುಂಜಾನೆ 10-30 ಗಂಟೆಗೆ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ, ನಮ್ಮ ಹೊಲದಲ್ಲಿ ಮಣ್ಣು ಹಾಕಿದ್ದನ್ನು ನೋಡಿ ಪಕ್ಕದಲ್ಲಿಯೇ ಹೊಲದಲ್ಲಿದ್ದ ಕೆಲಸ ಮಾಡುತಿದ್ದೆ ನಮ್ಮ ಭಾವ ಹಣಮಂತ ಮತ್ತು ಅವರ ಮಗ ಚಂದಪ್ಪ ತಂದೆ ಹಣಮಂತ ಕೆರಿಬಲ್ಲಿ ವಯಸ್ಸು 25 ವರ್ಷ ಇವರ ಹತ್ತಿರ ಹೋಗಿ, ಇಬ್ಬರ ಮಧ್ಯದಲ್ಲಿರುವ ಬದುವಿನ ಮೇಲೆ ಮಣ್ಣು ಹಾಕಬೇಕಿತ್ತು ಅದನ್ನು ಬಿಟ್ಟು ನಮ್ಮ ಹೊಲದಲ್ಲಿ ಏಕೆ ಹಾಕಿದ್ದಿರಿ, ಮಳೆ ಬಂದರೆ ಹತ್ತಿ ಬೀಜ ಊರುವರು ಇದ್ದೇವೆ, ನಮಗೆ ಹೊಲ ಇರುವುದೇ ಒಂದು ಎಕರೆ ಇದೆ ಅದರಲ್ಲಿ ನೀವು ಮಣ್ಣು ಹಾಕಿದರೇ ಹೇಗೆ ಅಂತ ಕೇಳಿದಕ್ಕೆ ಹಣಮಂತ ಈತನು ನನ್ನ ಗಂಡನಿಗೆ ಏ ಬೋಸ್ಡಿ ಮಗನೇ ಹಂಡತಿನ ಕರೆದುಕೊಂಡು ಬಂದರೇ ಏನ್ ಅಂಜತಿನಿ ಅಂತ ತಿಳಿದುಕೊಂಡಿ ಅಂತಾ ನನ್ನ ಗಂಡನ ಜೊತೆ ಜಗಳಕ್ಕೆ ಬಿದ್ದಾಗ, ನಾನು ಜಗಳ ಬಿಡಿಸಲು ಹೋದಾಗ ಹಣಮಂತ ಈತನು ಒಂದು ಬಡಿಗೆಯಿಂದ ನನ್ನ ತಲೆಗೆ ಹೊಡೆದರಿಂದ ರಕ್ತ ಬಂದಿರುತ್ತದೆ ಪುನಃ ಹೊಡೆಯಲು ಬಂದಾಗ ನಾನು ನನ್ನ ಬಲಗೈ ಅಡ್ಡ ತಂದಿದ್ದರಿಂದ ಬಲಗೈ ಮೊಳಕೈಗೆ ಮತ್ತು ಬಲಗೈ ತೋರು ಬೆರಳಿಗೆ ಒಳಪೆಟ್ಟಾಗಿರುತ್ತದೆ ನನ್ನ ತಲೆಯ ಕೂದಲು ಮತ್ತು ಮೈಮೇಲಿನ ಬ್ಲೌಜ್ ಮತ್ತು ಸಿರೆ ಹಿಡಿದು ಎಳೆದಾಡುತ್ತಿರುವಾಗ ನನ್ನ ಗಂಡ ಅಡ್ಡ ಬಂದಿದ್ದರಿಂದ ಅವನಿಗೆ ಚಂದಪ್ಪ ಈತನು ಬಡಿಗೆಯಿಂದ ತಲೆಯ ಮೇಲೆ ಹೊಡೆದರಿಂದ ರಕ್ತ ಬಂದಿರುತ್ತದೆಮತ್ತು ಕೈಯಿಂದ ಹೊಡೆದು ಅಲ್ಲಲ್ಲಿ ಒಳಪೆಟ್ಟು ಮಾಡಿರುತ್ತಾನೆ, ಆಗ ನಾವು ಚಿರಾಡುತಿದ್ದಾಗ ರಸ್ತೆಯ ಮೇಲೆ ಹೋಗುತಿದ್ದ ಶ್ರೀಮತಿ ಲಕ್ಷ್ಮೀ ಗಂಡ ಮಲ್ಲಪ್ಪ ಕೆರಿಬಲ್ಲಿ ಇವರು ನೋಡಿ ಜಗಳ ಬಿಡಿಸಿಕೊಂಡರು. ಈ ಜಗಳವು ಇಂದು ಮುಂಜಾನೆ 10-30 ಗಂಟೆಯಿಂದ 10-45 ಗಂಟೆಯ ಅವಧಿಯಲ್ಲಿ ಆಗಿರುತ್ತದೆ.
ನಂತರ ನನಗೆ ಮತ್ತು ನನ್ನ ಗಂಡನಿಗೆ ಹೊಡೆ ಬಡೆ ಮಾಡಿದ 1) ಹಣಮಂತ ತಂದೆ ಚಂದಪ್ಪ ಕೆರಿಬಲ್ಲಿ ಮತ್ತು ಆತನ ಮಗ 2) ಚಂದಪ್ಪ ತಂದೆ ಹಣಮಂತ ಕೆರಿಬಲ್ಲಿ ಇಬ್ಬರೂ ಈ ಸಲ ಬಚಾವ್ ಆದ್ರಿ ಇನ್ನೊಂದು ಸಲ ಏನಾದರು ನಮ್ಮ ತಂಟೆಗೆ ಬಂದರೆ ನೋಡಿ ನಿಮಗೆ ಒಂದು ಗತಿ ಕಾಣಿಸದೆ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋದರು. ನಂತರ ಲಕ್ಷ್ಮೀ ಇವಳು ನಮಗೆ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾಳೆ. ಉಪಚಾರ ಪಡೆದುಕೊಂಡು ದೂರು ನೀಡು ಠಾಣೆಗೆ ಬಂದಿರುತ್ತೇನೆ ಕಾರಣ ನನಗೆ ಮತ್ತು ನನ್ನ ಗಂಡನಿಗೆ ಹೊಡೆ ಬಡೆ ಮಾಡಿದವರ ವಿರುದ್ಧ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 149/2021 ಕಲಂ 323, 324, 354, 504, 506 ಸಂ 34 ಐ.ಪಿ.ಸಿ

Last Updated: 28-06-2021 01:52 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080