ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-06-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 105/2022 ಕಲಂ 279,337, 338, 304(ಎ) ಐಪಿಸಿ : ಇಂದು ದಿನಾಂಕಃ 27/06/2022 ರಂದು 7-35 ಪಿ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯಹೊಂದಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ವಿಚಾರಿಸಿ ಅವರಲ್ಲಿ ಶ್ರೀಮತಿ ಶಿಲ್ಪಾ ಗಂಡ ಜಗದೀಶ ದೇವಶೆಟ್ಟಿ ಸಾಃ ರುಕ್ಮಾಪೂರ ಇವಳ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಸಾಯಂಕಾಲ ನನ್ನ ತವರೂರಾದ ದೇವಾಪೂರ ಗ್ರಾಮಕ್ಕೆ ಹೋಗುವ ಸಲುವಾಗಿ ನಾನು ನನ್ನ ಮಕ್ಕಳಾದ ವೈಷ್ಣವಿ ವಯಃ 4 ವರ್ಷ ಹಾಗು ವಿನಾಯಕ ವಯಃ 9 ತಿಂಗಳು ಇಬ್ಬರನ್ನು ಜೊತೆಯಲ್ಲಿ ಕರೆದುಕೊಂಡು ರುಕ್ಮಾಪೂರ ಗ್ರಾಮದಿಂದ ಸುರಪೂರಕ್ಕೆ ಬಂದಿದ್ದೇನು. ಸುರಪೂರದಿಂದ ದೇವಾಪೂರ ಕಡೆಗೆ ಹೋಗುವ ಸಲುವಾಗಿ ಸುರಪೂರ ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ನಿಂತಿದ್ದಾಗ ಗೋಪಾಲಸ್ವಾಮಿ ದೇವಸ್ಥಾನದ ಕಡೆಯಿಂದ ದೇವಾಪೂರ ಗ್ರಾಮದ ಹುಲಗಪ್ಪ ತಂದೆ ರಂಗಪ್ಪ ತಳವಾರ ಇತನು ತನ್ನ ಅಟೋರಿಕ್ಷಾ ನಂಬರ ಕೆ.ಎ 33 ಎ 1179 ನೇದ್ದನ್ನು ನಡೆಸಿಕೊಂಡು ಹೊರಟಿದ್ದರಿಂದ ನಾನು ಆತನಿಗೆ ಕೈ ಮಾಡಿ ನಿಲ್ಲಿಸಿ ಅಣ್ಣಾ ದೇವಾಪೂರಕ್ಕೆ ಬರುತ್ತೇನೆ ಅಂತ ಹೇಳಿ ಅಟೋರಿಕ್ಷಾದಲ್ಲಿ ಕುಳಿತುಕೊಂಡೇನು. ಅಟೋರಿಕ್ಷಾದಲ್ಲಿ ದೇವಾಪೂರ ಗ್ರಾಮದ ಯಲ್ಲಪ್ಪ ತಂದೆ ನಾಗಪ್ಪ ತಳವಾರಗೇರಾ, ಆತನ ಹೆಂಡತಿ ಮಲ್ಲಮ್ಮ ಗಂಡ ಯಲ್ಲಪ್ಪ ತಳವಾರಗೇರಾ ಹಾಗು ಕಾಶಿಬಾಯಿ ಗಂಡ ಮಲ್ಲಣ್ಣ ಮೇಟಿ ಸಾ: ಮುಷ್ಟಳ್ಳಿ ಇವರು ಸಹ ಕುಳಿತಿದ್ದರು. ನಾವು ಕುಳಿತುಕೊಂಡು ಹೊರಟಿದ್ದ ಅಟೋರಿಕ್ಷಾ ಚಾಲಕ ಹುಲಗಪ್ಪ ಇತನು ಸುರಪೂರದಿಂದ ಹೊರಟು ಕುಂಬಾರಪೇಟ ಮಾರ್ಗವಾಗಿ ದೇವಾಪೂರ ಕಡೆಗೆ ಮುಖ್ಯರಸ್ತೆಯ ಮೇಲೆ ತನ್ನ ಸೈಡಿಗೆ ಅಟೋರಿಕ್ಷಾ ನಡೆಸಿಕೊಂಡು ಹೊರಟಿದ್ದಾಗ 6-45 ಪಿ.ಎಮ್ ಸುಮಾರಿಗೆ ಕವಡಿಮಟ್ಟಿ ಸಿಮಾಂತರದ ಪೆಟ್ರೋಲ್ ಬಂಕ್ ಸಮೀಪ ಹಿಂದಿನಿಂದ ಕಲ್ಯಾಣ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಂಬರ ಕೆ.ಎ 32 ಎಫ್ 2478 ನೇದ್ದರ ಚಾಲಕನು ತನ್ನ ಬಸ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಾವು ಕುಳಿತುಕೊಂಡು ಹೊರಟಿದ್ದ ಅಟೋರಿಕ್ಷಾಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿಪಡಿಸಿದರಿಂದ ಅಟೋರಿಕ್ಷಾ ರಸ್ತೆಯ ಪಕ್ಕದಲ್ಲಿ ಹೋಗಿ ಪಲ್ಟಿಯಾಗಿ ಬಿದ್ದಿತು. ಸದರಿ ಅಪಘಾತದಲ್ಲಿ ಫಿಯರ್ಾದಿಯ ಮಗಳಾದ ವೈಷ್ಣವಿ ಮೃತಪಟ್ಟಿದ್ದು, ಇನ್ನುಳಿದ 6 ಜನರಿಗೆ ಸಾದಾ ಹಾಗು ಭಾರಿ ಸ್ವರೂಪದ ಗಾಯಗಳಾಗಿದ್ದು, ಸದರಿ ಬಸ್ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 105/2022 ಕಲಂ. 279, 337, 338, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂಬರ 109/2022 ಕಲಂ 143, 147, 447, 323, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 27.06.2022 ರಂದು 5.00 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಲಕ್ಷ್ಮಣ ತಂದೆ ಹೂವಪ್ಪ ಪೂಜಾರಿ ವ|| 45ವರ್ಷ ಜಾ|| ಹಿಂದೂ ಕುರಬರ ಉ|| ಒಕ್ಕಲುತನ ಸಾ|| ಮುದನೂರ(ಬಿ) ತಾ|| ಹುಣಸಗಿ ರವರು ಠಾಣೆಗೆ ಹಾಜರಾಗಿ ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ಕಾದಳ್ಳಿ ಸೀಮಾಂತರದಲ್ಲಿ ನಮ್ಮದು ಹೊಲ ಸವರ್ೆ ನಂಬರ 24 ರಲ್ಲಿ 15 ಎಕರೆ 12 ಗುಂಟೆ ಹೊಲವಿದ್ದು ಸದರಿ ಹೊಲದಲ್ಲಿ ತನಗೂ ಪಾಲು ಬರುತ್ತದೆ ಅಂತ ನಮ್ಮೂರ ನಮ್ಮ ಜನಾಂಗದ ಭೀಮಣ್ಣ ತಂದೆ ಮಲ್ಲಪ್ಪ ಪೂಜಾರಿ ಈತನು ವಿನಾಕಾರಣ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ 24.06.2022 ರಂದು 12.30 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮ ಸೊಸೆಯಂದಿರರಾದ ಶಾಂತಮ್ಮ ಗಂಡ ಸಿದ್ದಪ್ಪ ಪೂಜಾರಿ, ಮಲ್ಲಮ್ಮ ಗಂಡ ಮಾನಪ್ಪ ಪೂಜಾರಿ, ರೇಣುಕಾ ಗಂಡ ನಾಗಪ್ಪ ಪೂಜಾರಿ ಮತ್ತು ನನ್ನ ಹೆಂಡತಿಯಾದ ಪರಮವ್ವ ಗಂಡ ಲಕ್ಷ್ಮಣ ಪೂಜಾರಿ ಎಲ್ಲರೂ ಕೂಡಿಕೊಂಡು ಕಾದಳ್ಳಿ ಸೀಮಾಂತರದ ನಮ್ಮ ಹೊಲ ಸವರ್ೆ ನಂಬರ 24 ರಲ್ಲಿ ಬಿತ್ತನೆ ಮಾಡುವ ಕುರಿತು ಹೋದಾಗ ಅದೇ ಸಮಯಕ್ಕೆ ನಮ್ಮೊಂದಿಗೆ ತಕರಾರು ಮಾಡುತ್ತಾ ಇದ್ದ 1) ಭೀಮಣ್ಣ ತಂದೆ ಮಲ್ಲಪ್ಪ ಪೂಜಾರಿ 2) ನಿಂಗಪ್ಪ ತಂದೆ ಮಲ್ಲಪ್ಪ ಪೂಜಾರಿ 3) ಪರಶುರಾಮ ತಂದೆ ನಿಂಗಪ್ಪ ಪೂಜಾರಿ 4) ದೇವಪ್ಪ ತಂದೆ ಜೆಟ್ಟೆಪ್ಪ ಪೂಜಾರಿ 5) ತಿಪ್ಪಣ್ಣ ತಂದೆ ಜೆಟ್ಟೆಪ್ಪ ಪೂಜಾರಿ 6) ಭೀಮಬಾಯಿ ಗಂಡ ಜೆಟ್ಟೆಪ್ಪ ಪೂಜಾರಿ 7) ಭೀಮಣ್ಣ ತಂದೆ ರಾಮಚಂದ್ರಪ್ಪ ಮಲಕಾಪೂರ 8) ಶೇಖರ ತಂದೆ ಮಡಿವಾಳಪ್ಪ ಹೂಗಾರ 9) ಮಲ್ಲಮ್ಮ ಗಂಡ ಶಿವಣ್ಣ ಪೂಜಾರಿ ಎಲ್ಲರೂ ಸಾ|| ಮುದನೂರ ಇವರೆಲ್ಲರೂ ಕೂಡಿ ಬಂದು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಏನಲೇ ಸೂಳೇ ಮಗನೇ ಈ ಹೊಲದಲ್ಲಿ ನಮಗೆ ಪಾಲು ಬರುತ್ತದೆ ನೀವು ಬಿತ್ತಬೇಡಿರಿ ಅಂತ ಅಂದಾಗ, ನಾನು ನಿನ್ನದು ಯಾವುದೇ ದಾಖಲಾತಿಗಳು ಇದ್ದಲ್ಲಿ ತೋರಿಸು ನಾವು ಬಿತ್ತುವದು ಬಿಡುತ್ತೇವೆ ಅಂತ ಅಂದಾಗ ಎಲ್ಲರೂ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಹೊಲದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸೊಸೆಯಾದ ಮಲ್ಲಮ್ಮ ಗಂಡ ಮಾನಪ್ಪ ಪೂಜಾರಿ ಇವಳು ಬಿಡಿಸಿಕೊಳ್ಳಲು ಬಂದಾಗ ಅವಳಿಗೂ ಸಹ ಎಲ್ಲರೂ ಈ ಸೂಳೆಯದು ಬಹಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಭೀಮಣ್ಣ ಪೂಜಾರಿ ಈತನು ಮಲ್ಲಮ್ಮ ಇವಳ ಸೀರೆ ಸೆರಗು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಹೊಡೆಯುತ್ತಿದ್ದಾಗ ಅಲ್ಲಿಯೇ ಇದ್ದ ಶಾಂತಮ್ಮ ಗಂಡ ಸಿದ್ದಪ್ಪ ಪೂಜಾರಿ, ಪರಮವ್ವ ಗಂಡ ಲಕ್ಷ್ಮಣ ಪೂಜಾರಿ ಹಾಗು ರೇಣುಕಾ ಗಂಡ ನಾಗಪ್ಪ ಪೂಜಾರಿ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇನ್ನೊಮ್ಮೆ ಈ ಹೊಲದಲ್ಲಿ ಬಿತ್ತನೆ ಮಾಡಿದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಈ ವಿಷಯದಲ್ಲಿ ನಾವೆಲ್ಲರೂ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 09 ಜನರು ಆಸ್ತಿ ವಿಷಯದಲ್ಲಿ ನಮ್ಮೊಂದಿಗೆ ಜಗಳ ತೆಗೆದು ಹೊಲದಲ್ಲ್ಲಿ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ, ಜೀವದ ಭಯ ಹಾಕಿದ್ದು ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 109/2022 ಕಲಂ 143, 147, 447, 323, 354, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 110/2022 ಕಲಂ 323, 504, 506 ಐಪಿಸಿ : ಸದರಿ ಪ್ರಕರಣದಲ್ಲಿ ಪಿರ್ಯಾದಿಯು ಆಸ್ತಿಯಲ್ಲಿ ಪಾಲು ಪಡೆಯುವ ಸಲುವಾಗಿ ದಾಖಲಾತಿಗಳನ್ನು ಪಡೆಯುವ ಸಲುವಾಗಿ ಗುರುಮಠಕಲ್ ಪಟ್ಟಣದ ತನ್ನ ತಾಯಿ ಮನೆಗೆ ಬಂದು ಆಸ್ತಿಯಲ್ಲಿ ಪಾಲು ಬೇಕು ಅಂತಾ ಕೇಳಿದಕ್ಕೆ ಆರೋಪಿತರು ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಪಿರ್ಯಾಧಿ ನಿನ್ನೆ ದಿನ ದೂರು ನೀಡಿದ್ದು ಪಿರ್ಯಾಧಿ ದೂರಿನಲ್ಲಿರುವ ಸಾರಂಶವು ಅಸಂಜ್ಞಯ ಅಪರಾದವಾಗುತ್ತಿದ್ದರಿಂದ ಎನ್ಸಿ-ನಂ:02/2022 ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 28-06-2022 01:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080