ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-07-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ:81/2021 ಕಲಂ:341,323,504,506 ಸಂ.34 ಐಪಿಸಿ : ಇಂದು ದಿನಾಂಕ.27/07/2021 ರಂದು 7-30 ಪಿಎಂಕ್ಕೆ ಶ್ರೀ ರಾಘವೇಂದ್ರ ತಂದೆ ದೇವಿಂದ್ರಪ್ಪ ಕೊಟ್ರಕಿ ವ; 29 ಜಾಃ ಕಬ್ಬಲಿಗ ಉಃ ಗೌಂಡಿಕೆಲಸ ಸಾಃ ಬಂಡಿಗೇರಾ ಯಾದಗಿರಿ ರವರು ಠಾಣೆಗೆ ಬಂದು ಒಂದು ಹೇಳಿಕೆಯನ್ನು ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾನು ಮತ್ತು ನಮ್ಮ ತಮ್ಮಂದಿರಾದ 1) ಮಲ್ಲಿಕಾಜರ್ುನ 2) ಚಂದ್ರು ಅಂತಾ ಮೂರು ಜನ ಗಂಡು ಮಕ್ಕಳಿದ್ದು ನನಗೆ ಮಹೇಶ್ವರಿ ಎಂಬುವವರೊಂದಿಗೆ ಮದುವೆಯಾಗಿದ್ದು ನನ್ನ ಇಬ್ಬರು ತಮ್ಮಂದಿರಿಗೆ ಇನ್ನು ಮದುವೆಯಾಗಿರುವುದಿಲ್ಲ. ಈ ಮೇಲಿನ ನಾವೆಲ್ಲರೂ ನಮ್ಮ ತಂದೆ ದೇವಿಂದ್ರಪ್ಪ ಕೊಟ್ರಕಿ ಮತ್ತು ತಾಯಿ ವಿಜಯಲಕ್ಷ್ಮೀ ರವರೊಂದಿಗೆ ಬಂಡಿಗೇರಾದ ನಮ್ಮ ಸ್ವಂತ ಮನೆಯಲ್ಲಿ ವಾಸಮಾಡಿಕೊಂಡಿರುತ್ತೇವೆ. ನಮ್ಮ ಏರಿಯಾದವರಾದ ನಾಗಪ್ಪ ತಂದೆ ದುರ್ಗಪ್ಪ ಅಂಬಿಗೇರ ಈತನು ಕಟ್ಟಡ ನಿಮರ್ಾಣ ಗುತ್ತಿಗೆಗೆ ಪಡೆದುಕೊಂಡು ನನಗೆ ಗೌಂಡಿ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದನು. ಯಾವಾಗಲೂ ನಾನು ಕೆಲಸ ಮಾಡಿದ ಹಣವನ್ನು ಕೊಡಲು ಸತಾಯಿಸುತ್ತಿದ್ದನು. ಹಿಗೀದ್ದು ದಿನಾಂಕ; 23/07/2021 ರಂದು 9-30 ಪಿಎಮ್ ಸುಮಾರಿಗೆ ನಾನು ಮಾಡಿದ ಕೂಲಿ ಹಣ 7500/- ರೂ. ಗಳನ್ನು ಕೇಳಲು ನಾಗಪ್ಪ ತಂದೆ ದುರ್ಗಪ್ಪ ಅಂಬಿಗೇರ ಈತನ ಮನೆ ಮುಂದುಗಡೆ ಹೋಗಿ ನಾಗಪ್ಪ ಈತನಿಗೆ ಕರೆದಾಗ ನಾಗಪ್ಪ ತಂದೆ ದುರ್ಗಪ್ಪ ಅಂಬಿಗೇರ, ಅವನ ತಮ್ಮ ಚೇತನ ತಂದೆ ದುರ್ಗಪ್ಪ ಅಂಬಿಗೇರ ಹಾಗೂ ನಾಗಪ್ಪ ಈತನ ಅಳಿಯ ಕೃಷ್ಣ ತಂದೆ ದೇವಪ್ಪ ರವರು ಹೊರಗಡೆ ಬಂದರು. ಆಗ ನಾನು ನಾಗಪ್ಪ ಈತನಿಗೆ ನಾನು ಕೂಲಿಕೆಲಸ ಮಾಡಿದ ಹಣ ಕೊಡು ಎಷ್ಟು ದಿನ ಆಯಿತು ಯಾವಾಗಲೂ ಕೊಡುತ್ತೀನಿ ಅಂತಾ ಹೇಳುತ್ತಾ ಬರುತ್ತೀಯಾ ಆದರೆ ಇಲ್ಲಿಯವರೆಗೆ ಹಣ ಕೊಟ್ಟಿಲ್ಲ ಅಂತಾ ಅಂದಾಗ ನಾಗಪ್ಪ ಈತನು ಆಯಿತು ಕೊಡುತ್ತೇನೆ ಇನ್ನು ಸ್ವಲ್ಪ ದಿನ ತಡೆ ಅಂತಾ ಹೇಳಿದನು. ನನಗೆ ಈಗ ಹಣದ ಅವಶ್ಯಕತೆ ಬಹಳ ಇದೆ ನಾನು ಸಾಲ ಮಾಡಿದ್ದು ಸಂಘದವರಿಗೆ ಹಣ ಕಟ್ಟಬೇಕು ಕೂಲಿ ಮಾಡಿದ ಹಣ ಕೊಡಲು ಯಾಕೆ ನೀನು ನನಗೆ ಸತಾಯಿಸುತ್ತೀಯಾ ಅಂತಾ ಅಂದಾಗ ನಾಗಪ್ಪ ಈತನು ಲೇ ಸೂಳೇ ಮಗನೇ ನಿನಗೆ ಎಷ್ಟು ಸಲಾ ಹೇಳಬೇಕು ಹಣ ಆಮೇಲೆ ಕೊಡುತ್ತೇನೆ ಅಂತಾ ಅಂದರು ಪದೇ ಪದೇ ಹಣ ಕೊಡು ಅಂತಾ ಸತಾಯಿಸುತ್ತೀಯಾ ಅಂತಾ ಎದೆಯ ಮೇಲಿನ ಅಂಗಿ ಹಿಡಿದು ಕೈ ಮುಷ್ಟಿ ಮಾಡಿ ಎದೆಗೆ ಗುದ್ದಿದನು. ಆಗ ನಾನು ತಪ್ಪಿಸಿಕೊಂಡು ಹೋಗುತ್ತಿರುವಾಗ ಚೇತನ ಈತನು ಎಲ್ಲಿಗೆ ಹೋಗುತ್ತಿಯಾ ಮಗನೇ ಅಂತಾ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಸಿದಾಗ ಕೃಷ್ಣ ಈತನು ನನ್ನ ಹೊಟ್ಟೆಗೆ ಕೈಯಿಂದ ಗುದ್ದಿ ಗುಪ್ತ ಪೆಟ್ಟು ಮಾಡಿದನು. ಆಗ ಅಲ್ಲಿಗೆ ಬಂದ ನಾಗಪ್ಪ ಈತನ ಅಣ್ಣ ಸುರೇಶ ಅಂಬಿಗೇರ ಈತನು ಈ ರಾಘ್ಯಾ ಸೂಳೆ ಮಗ ಆಗಾಗ ಮನೆಗೆ ಬಂದು ಕಿರಿಕಿರಿ ಮಾಡುತ್ತಾನೆ ಇವನಿಂದ ಸಾಕಾಗಿದೆ ಇವನಿಗೆ ಜೀವ ಸಹಿತ ಬಿಡಬೇಡಿರಿ ಅಂತಾ ಜೀವದ ಬೆದರಿಕೆ ಹಾಕಿ ನನಗೆ ಬಾಗಿಸಿ ಬೆನ್ನ ಮೇಲೆ ಗುದ್ದಿದನು. ಆಗ ಜಗಳದ ವಿಷಯ ಕೇಳಿ ಅಲ್ಲಿಗೆ ಬಂದ ನನ್ನ ತಮ್ಮಂದಿರಾದ ಮಲ್ಲಿಕಾಜರ್ುನ, ಚಂದ್ರು ರವರು ಹಾಗೂ ಮಲ್ಲಿಕಾಜರ್ುನ ತಂದೆ ತಾಯಪ್ಪ ತಾಂಡೂರಕರ್ ರವರು ಜಗಳ ಬಿಡಿಸಿದ್ದು ಇರುತ್ತದೆ. ನಂತರ ದಿನಾಂಕ; 26/07/2021 ರಂದು ನಾನು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿದ್ದು ಉಪಚಾರ ಪಡೆಯುವ ಕಾಲಕ್ಕೆ ಯಾದಗಿರಿ ನಗರ ಠಾಣೆ ಪೊಲೀಸರು ನನಗೆ ವಿಚಾರಿಸಿದ್ದು ಆಗ ನಾನು, ಪೊಲೀಸರಿಗೆ ಈಗ ನನ್ನದು ಯಾವುದೇ ದೂರು ಇರುವುದಿಲ್ಲ. ನಾನು ಮನೆಯಲ್ಲಿ ವಿಚಾರಿಸಿ ನಂತರ ನಾವು ಠಾಣೆಗೆ ಬಂದು ದೂರು ಸಲ್ಲಿಸುತ್ತೇನೆ ಅಂತಾ ತಿಳಿಸಿದ್ದು ಈಗ ಇಂದು ದಿನಾಂಕ; 27/07/2021 ರಂದು ನಾನು ಠಾಣೆಗೆ ಬಂದು ದೂರು ನೀಡುತ್ತಿದ್ದು ನನಗೆ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ ಈ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.81/2021 ಕಲಂ.341, 323, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 115/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 27-07-2021 ರಂದು ಸಾಯಂಕಾಲ 05-30 ಗಂಟೆಗೆ ಪಿ.ಐ ರವರು ಠಾಣೆಗೆ ಹಾಜರಾಗಿ ಕೂಡ್ಲೂರ ಗ್ರಾಮದ ಬಸಲಿಂಗಪ್ಪ ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 1250=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.115/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಭೀಗುಡಿ ಪೊಲೀಸ ಠಾಣೆ
ಗುನ್ನೆ ನಂ : 52/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ 27/07/2021 ರಂದು 06.00 ಪಿ.ಎಮ್.ಕ್ಕೆ ಭೀ.ಗುಡಿಯಜ್ಯೋತಿಧಾಬಾಹತ್ತಿರಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 7.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 8.15 ಪಿ.ಎಮ್.ಕ್ಕೆ ದಾಳಿ ಮಾಡಿಆರೋಪಿತನಿಂದ 1) ನಗದು ಹಣರೂಪಾಯಿ 2130=00, 2) ಮಟಕಾ ನಂಬರ ಬರೆದಒಂದುಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದಕ್ರಮ ಜರುಗಿಸಿದ ಬಗ್ಗೆ.


ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ. 45/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:27.07.2021 ರಂದು 5:30 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ತಾವು ದಿನಾಂಕ:27.07.2021 ರಂದು ಮಧ್ಯಾಹ್ನ 2:30 ಪಿ.ಎಮ್ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಬೀಟ್ ಸಿಬ್ಬಂದಿಯಾದ ಸಂಗನಗೌಡ ಹೆಚ್.ಸಿ-16 ರವರು ನನಗೆ ತಿಳಿಸಿದ್ದು ಏನೆಂದರೆ ಕಕ್ಕೇರಾ ಪಟ್ಟಣದ ಬಲಶೆಟ್ಟಿಹಾಳ-ಶಾಂತಪೂರ ಕ್ರಾಸ್ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮೂಲಕ ಕಳುಹಿಸಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 5:25 ಪಿ.ಎಮ್ಕ್ಕೆ ಠಾಣೆಗೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:45/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

 


ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 117/2021 ಕಲಂ: 143, 147, 148, 323, 324 354 504, 506 ಸಂ.149 ಐಪಿಸಿ : ದಿನಾಂಕ 27.07.2021 ರಂದು ಫಿರ್ಯಾದಿ ಮನೆಯ ಪಕ್ಕದಲ್ಲಿರುವ ಆರೋಪಿತರು ತಮ್ಮ ಮನೆಗೆ ಕಂಪೌಂಡ ಕಟ್ಟಿಕೊಂಡಿದ್ದು ಇದರಿಂದಾಗಿ ಪಿರ್ಯಾಧಿಗೆ ದಾರಿ ಇಲ್ಲದಂತಾಗಿ ಆರೋಪಿತರಿಗೆ ಕೇಳಿದ್ದು ಇದೇ ಸಿಟ್ಟಿನಿಂದ ಇಂದು ದಿನಾಂಕ27.07.2021 ರಂದು 5.00 ಗಂಟೆಯ ಸುಮಾರಿಗೆ ಪಿರ್ಯಾಧಿಯು ಮತ್ತು ಅವರ ಮನೆಯವರ ತಮ್ಮ ಮನೆಯಮುಂದೆ ಮತನಾಡುತ್ತಾ ಕುಳಿತ್ತಿದ್ದಾಗ ಆರೋಪಿತರೆಲ್ಲರು ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಮಾನಬಂಗ ಪಡಿಸಿದ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ವಗೈರೆ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 117/2021 ಕಲಂ: 143, 147, 148, 323, 324, 354 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 28-07-2021 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080