ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-07-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 279, 337, 338 ಐ.ಪಿ.ಸಿ: ಇಂದು ದಿನಾಂಕ: 27/07/2022 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಶ್ರೀ ದೇವರಾಜ ತಂದೆ ಮರೆಪ್ಪ ತಳವಾರ ವಯ: 25 ವರ್ಷ ಜಾ:ಕಬ್ಬಲಿಗ ಉ:ಕೂಲಿಕೆಲಸ ಸಾ:ರಾಕಮಗೇರಾ ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಾರಾಂಶವೆನೆಂದರೆ, ದಿನಾಂಕ: 21/07/2022 ರಂದು ಬೆಳಿಗ್ಗೆ 11-15 ಗಂಟೆ ಸುಮಾರಿಗೆ ರಾಕಮಗೇರಾ ಏರಿಯಾದ ನಮ್ಮ ಓಣಿಯ ಭಾಗಪ್ಪ ತಂದೆ ಖಂಡಪ್ಪ ತಳವಾರ ಈತನ ಆಟೋ ನಂ: ಕೆ.ಎ 33/ಬಿ-0667 ನೇದ್ದರಲ್ಲಿ ಶಹಾಪೂರ ಮಾಕರ್ೆಟಗೆ ಹೋಗುವ ಕುರಿತು ನಮ್ಮ ತಂದೆ ಮರೆಪ್ಪ ಮತ್ತು ನಮ್ಮ ಓಣಿಯ ಹಣಮಂತ್ರಯಾಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ ಹಾಗೂ ಈಶಮ್ಮ ಹೊಸಮನಿ ಎಲ್ಲರೂ ಕೂಡಿ ಆಟೋದಲ್ಲಿ ಶಹಾಪೂರ ಮಾಕರ್ೆಟಗೆ ಹೋದರು ನಂತರ 11-45 ಎ.ಎಮ್ ಕ್ಕೆ ಹಣಮಂತ್ರಾಯಗೌಡ ಪೊಲೀಸ್ ಪಾಟೀಲ ಇವರು ನನಗೆ ಪೋನ ಮಾಡಿ ತಿಳಿಸಿದ್ದೆನೆಂದದರೆ ಆಟೋದಲ್ಲಿ ರಾಕಮಗೇರಾದಿಂದ ಶಹಾಪೂರದ ರಾಯಲ್-ಎನಪೀಲ್ಡ ಟೈಯರ ಅಂಗಡಿ ಎದುರುಗಡೆ ಇರುವ ಜೀಶಾನ ಪಾಟಾ ಗ್ಯಾರೆಜ ಮುಂದೆ ಮುಖ್ಯ ರಸ್ತೆ ಮೇಲೆ ಬಸವೇಶ್ವರ ಸರ್ಕಲ ಕಡೆಗೆ ಬರುತ್ತಿರುವಾಗ ಆಟೋ ಚಾಲಕನಾದ ಬಾಗಪ್ಪ ತಳವಾರ ಈತನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ ಹಾಕಿದ್ದು, ಆಟೋ ಎಡಬದಿಗೆ ಪಲ್ಟಿಯಾಗಿ ರಸ್ತೆ ಮೇಲೆ ಬಿದ್ದಿರುತ್ತದೆ. ಆಟೋದಲ್ಲಿದ್ದ ನನಗೆ ಎಡಕೈ ಮುಂಗೈ ಹತ್ತಿರ ತರಚಿದ ರಕ್ತಗಾಯ ಆಗಿದ್ದು, ನಿಮ್ಮ ತಂದೆಯಾದ ಮರೆಪ್ಪ ತಂದೆ ಸಾಯಬಣ್ಣ ತಳವಾರ ಈತನಿಗೆ ಎರಡು ಮೋಳಕಾಲು ಕೆಳಗೆ ಬಾರೀ ರಕ್ತಗಾಯ, ಬಲಗಡೆ ಮುಂಡಿಗೆ ಭಾರೀ ಒಳಪೆಟ್ಟು ಆಗಿದ್ದು, ಹಾಗೂ ಬಲಭಾಗಕ್ಕೆ ತರಚಿದ ರಕ್ತಗಾಯ ಆಗಿರುತ್ತದೆ. ಅಲ್ಲದೇ ಈಶಮ್ಮ ಹೊಸಮನಿ ಹಾಗೂ ಆಟೋ ಚಾಲಕನಾದ ಭಾಗಪ್ಪನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ, ನಂತರ ಎಲ್ಲರೂ ಕೂಡಿ ನಿಮ್ಮ ತಂದೆಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿರುತ್ತೇವೆ. ಅಂತಾ ತಿಳಿಸಿದ ಕೂಡಲೇ ನಾನು ಮತ್ತು ನನ್ನ ಚಿಕ್ಕಪ್ಪನ ಮಗನಾದ ಮರೆಪ್ಪ ತಂದೆ ಭೀಮರಾಯ ಇಬ್ಬರು ಕೂಡಿ ಆಸ್ಪತ್ರೆಗೆ ಬಂದು ನಮ್ಮ ತಂದೆಗೆ ನೋಡಲಾಗಿ ಮೇಲೆ ಹೇಳಿದಂತೆ ರಕ್ತಗಾಯಗಳಾಗಿರುತ್ತದೆ. ಕೂಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಕುರಾಳ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಅಲ್ಲಿ ಅಷ್ಟೊಂದ ಚಿಕಿತ್ಸೆ ಸೌಲಭ್ಯ ಇಲ್ಲದಿರುವುದಿಂದ ಅಲ್ಲಿಂದ ಉಪಚಾರ ಕುರಿತು ದಿನಾಂಕ: 24/07/2022 ರಂದು ಚಿರಾಯಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿರುತ್ತೇವೆ. ನಂತರ ನಾನು ಉಪಚಾರ ಕುರಿತು ಸೇರಿಕೆ ಮಾಡಿ, ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಉಳಿದವರಿಗೆ ಅಷ್ಟೇನು ರಕ್ತಗಾಯಗಳು ಆಗದೆ ಇರುವುದರಿಂದ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಆದ್ದರಿಂದ ನಮ್ಮ ತಂದೆಯಾದ ಮರೆಪ್ಪ ಮತ್ತು ನಮ್ಮ ಏರಿಯಾದ ಈಶಮ್ಮ ಹೊಸಮನಿ ಹಾಗೂ ಹಣಮಂತ್ರಾಗೌಡ ತಂದೆ ಭೀಮರಾಯಗೌಡ ಪೊಲೀಸ್ ಪಾಟೀಲ ಎಲ್ಲರೂ ನಮ್ಮ ಏರಿಯಾದ ಆಟೋ ನಂ: ಆಟೋ ನಂ: ಕೆ.ಎ 33/ಬಿ-0667 ನೇದ್ದರಲ್ಲಿ ಕುಳಿತು ಹೋಗುವಾಗ ಚಾಲಕನಾದ ಭಾಗಪ್ಪ ತಂದೆ ಖಂಡಪ್ಪ ತಳವಾರ ಈತನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಆಟೋ ಪಲ್ಟಿಯಾಗಿ ಬಿದ್ದು ಭಾರೀ ಮತ್ತು ಸಾದಾ ಗಾಯ ಪಡಿಸಿದ್ದು. ಸದರಿ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 135/2022 ಕಲಂ: 279, 337, 338 ಐಪಿಸಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.


ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 117/2022 ಕಲಂ: 3&7 ಇಸಿ ಯ್ಯಾಕ್ಟ ಮತ್ತುಕಲಂ: 07 ರಸಗೊಬ್ಬರ ನಿಯಂತ್ರಣ ಆಧೇಶ 1985: ಇಂದು ದಿ: 27/07/2022 ರಂದು 04 ಪಿ.ಎಮ್ ಕ್ಕೆ ಶ್ರೀ ಗುರುನಾಥತಂದೆ ಮಲ್ಲಿನಾಥ ಬೂಸ್ನೂರೆ ವ|| 30 ವರ್ಷಜಾ|| ಲಿಂಗಾಯತ ಉ|| ಸಾಹಾಯಕ ಕೃಷಿ ನಿದರ್ೇಶಕರು ಸುರಪರ ಸಾ|| ನಾಗಲೆಗಾಂವ್ತಾ|| ಆಳಂದ ಹಾ||ವ|| ಸುರಪುರಇವರುಠಾಣೆಗೆ ಹಾಜರಾಗಿಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಹೀಗಿದ್ದುಇಂದು ದಿನಾಂಕ:27/07/2022 ರಂದುಅಂದಾಜು 10:00 ಎಎಮ್ ಸುಮಾರಿಗೆ ನಾನು ಮತ್ತು ಸುರೇಶ ಕೃಷಿ ಅಧಿಕಾರಿಗಳು ಸುರಪುರ, ವಿನಾಯಕ ಸಾಹಾಯಕ ಕೃಷಿ ಅದಿಕಾರಿಗಳು ಮೂರುಜನರು ಸಾಹಾಯಕ ಕೃಷಿ ನಿದರ್ೇಶಕಕಾಯರ್ಾಲಯದಲ್ಲಿರುವಾಗ, ಬಾದ್ಯಾಪೂರಗ್ರಾಮದಲ್ಲಿಚನ್ನಪ್ಪತಂದೆಅಯ್ಯಣ್ಣಜಾಲಹಳ್ಳಿ ಎಂಬ ವ್ಯಕ್ತಿಯುಅಕ್ರಮವಾಗಿ ಕಳಪೆ ರಸಗೊಬ್ಬರ ಮಾರಾಟ ಮಾಡುತ್ತಿದ್ದಾನೆ ಮತ್ತುಅಕ್ರಮವಾಗಿ ರಸಗೊಬ್ಬರಗಳನ್ನು ಬೇರೆಕಡೆಗೋದಾಮಿನಲ್ಲಿ ಶೇಖರಿಸಿಟ್ಟಿರುತ್ತಾನೆ ಅಂತಾಖಚಿತ ಬಾತ್ಮಿ ಬಂದಿದೆ ಪೊಲೀಸ್ರ ಸಾಹಾಯದಿಂದ ಸ್ಥಳಕ್ಕೆ ಹೊಗಿ ದಾಳಿ ಮಾಡೋಣಅಂತಾ ತಿಳಿಸಿ ಸ್ಥಳ ಪಂಚನಾಮೆ ಕುರಿತು ನಮ್ಮಇಲಾಖೆಯ 1) ಶ್ರೀ ಮೆಹೆಬೂಬ ತಂದೆರಹಿಮ ಬೇಗ್ ವ|| 32 ವರ್ಷಜಾ|| ಮುಸ್ಲಿಂ ಉ|| ಡಿ ಗ್ರುಪ್ ನೌಕರ ಸಾ|| ಮುಲ್ಲಾ ಮೊಹಲ್ಲಾ ಸುರಪುರ, 2) ಶೇಖರಯ್ಯತಂದೆ ಪಂಚಯ್ಯ ಸ್ವಾಮಿ ವ|| 34 ವರ್ಷಜಾ|| ಜಂಗಮ ಉ|| ಡಿ ಗ್ರುಪ್ ನೌಕರ ಸಾ|| ಸಗರತಾ|| ಶಹಾಪುರ ಹಾ|| ಸುರಪುರ ಇವರುಗಳನ್ನು ಪಂಚರನ್ನಾಗಿ ನಮ್ಮಜೊತೆಯಲ್ಲಿಕರೆದುಕೊಂಡು ಸುರಪುರ ಪೊಲೀಸ್ಠಾಣೆಗೆ 10:30 ಎ.ಎಂ ಕ್ಕೆ ಬಂದುಠಾಣೆಯಲ್ಲಿದ್ದ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ, ಅವರ ಸಿಬ್ಬಂದಿಯವರಾದ ಶ್ರೀ ಮಹಿಬೂಬ ಅಲೀ ಹೆಚ್ಸಿ-83, ಶ್ರೀ ಬಸವರಾಜ ಸಿಪಿಸಿ-395 ರವರುಗಳಿಗೆ ಈ ಮೇಲಿನ ವಿಷಯ ತಿಳಿಸಿ ನಾವು ಮತ್ತು ಪೊಲೀಸ್ರೊಂದಿಗೆ ನಮ್ಮ ಇಲಾಖೆ ಮತ್ತು ಪೊಲೀಸ್ಇಲಾಖೆಯ ಜೀಪ್ಗಳಲ್ಲಿ ಪೊಲೀಸ್ಠಾಣೆಯಿಂದ 11:00 ಎ.ಎಂ ಕ್ಕೆ ಹೊರಟು ಬಾದ್ಯಾಪುರಗ್ರಾಮಕ್ಕೆ 11:20 ಎ.ಎಂ ಕ್ಕೆ ತಲುಪಿ ಬಾದ್ಯಾಪುರಗ್ರಾಮದಲ್ಲಿಯಚನ್ನಪ್ಪತಂದೆಅಯ್ಯಣ್ಣಜಾಲಹಳ್ಳಿ ಇತನಗೋದಾಮ ಸ್ವಲ್ಪ ಮುಂದೆಇರುವಂತೆಒಂದು ಮನೆಯ ಹತ್ತಿರ ಮರೆಯಲ್ಲಿ ನಿಂತು ನೋಡಲಾಗಿಒಬ್ಬ ವ್ಯಕ್ತಿಯುಗೊದಾಮ ಒಳಗಡೆಯಿಂದ ರಸಗೊಬ್ಬರಗಳನ್ನು ತಂದು ಮಾರಾಟ ಮಾಡುತ್ತಿದ್ದುಖಚಿತ ಪಡಿಸಿಕೊಂಡು 11:30 ಎ.ಎಂ ಕ್ಕೆ ಹೊಗುವಷ್ಟರಲ್ಲಿ ಆ ವ್ಯಕ್ತಿಯು ನಮಗೆ ಮತ್ತು ಪೊಲೀಸ್ರನ್ನು ನೋಡಿ ಓಡಿ ಹೊದನು. ನಂತರ ನಾವು ಪಂಚರ ಸಮಕ್ಷಮಗೊದಾಮದಲ್ಲಿದ್ದದಾಸ್ತಾನು ಮಾಡಿದ ರಸಗೊಬ್ಬರಳನ್ನು ನೊಡಲಾಗಿ ಮೇಲ್ ನೋಟಕ್ಕೆ ಸಂಶಯಾತ್ಮಕ ಕಳಪೆ ಮಟ್ಟದ್ದುಅಂತಾಕಂಡು ಬರುತ್ತಿದ್ದುಗೊದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಸದರಿರಸಗೊಬ್ಬರವನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿ ನೋಡಲಾಗಿ

sl no

Fertilizer

Batch no Product Name quantity Amount

1

10.26:26

July-2022

CIL

16 bags of 50 Kg

23,520/- 

2

16:20:0:13

May-2022

CIL

150 bags of 50 Kg

2,10,000/- 

3

Urea

May-2022

CIL

18 bags of 45 Kg

4,788/- 

4

Urea

(05) A/2022

IPL

21 bags of 45 Kg

5,586/-

5

17:17:17

(03) 06/2022

Kamadhenu chemicals and fertilizers

90 bags of 50 Kg

1,12,500/- 

6

10.26:26

June-2021

Zuari

10 bags of 50 Kg 

14,700/- 

7

10.26:26

June-2021

Zuari

2 bags of 50 Kg 

2,940/- 

8

Mycorhiza

UC00515

Rallis India Limited

35 boxes of 16 kg

1,00,000/- 

9

MicrozymeBiostimulant

MZ-001

Royal Agri life Sciences

16 boxes of 10 kg

40,000/- 

Total

5,14,034/-

 

ಸದರಿಗೊಬ್ಬರದ ಚೀಲಗಳಿಂದ ಸ್ಯಾಂಪಲ್ ಮತ್ತುತಜ್ಞರ ಪರೀಕ್ಷೆಕುರಿತು ನಮ್ಮಇಲಾಖೆಯ ಮಾರ್ಗ ಸೂಚಿಯಂತೆರಸಗೊಬ್ಬರವನ್ನು ಪಂಚರ ಸಮಕ್ಷಮಜಪ್ತಿ ಮಾಡಿ ಪತ್ಯೇಕವಾಗಿತೆಗೆದಿರಿಸಲಾಯಿತು ಮತ್ತು ಸದರಿಗೋದಾಮಗೆಯಾವುದೇಅದಿಕೃತ ಪರವಾನಿಗೆ ಪಡೆಯದೇಅನಾದಿಕೃತವಾಗಿ ವ್ಯಾಪಾರ ಮಾಡಿದ್ದರಿಂದ ಸದರಿಗೊದಾಮನ್ನುರಸಗೊಬ್ಬರ ಮಾಲು ಸಮೇತ ಪಂಚರ ಸಮಕ್ಷಮ ಬೀಗ್ ಮುದ್ರೆ ಹಾಕಲಾಯಿತು. ನಂತರಅಲ್ಲಿದ್ದ ಸಾರ್ವಜನಿಕರಾದಆನಂದತಂದೆ ಬಾಲದಂಡಪ್ಪ ಪುಜಾರಿ, ಭೀಮರಾಯತಂದೆ ನಿಂಗಪ್ಪ ಮಾಚಗುಂಡಾಳ, ತಿಪ್ಪಣ್ಣತಂದೆದ್ಯಾವಪ್ಪ ಬಾಡದ, ಭೀಮಣ್ಣತಂದೆ ಮಾಹಾದೇವಪ್ಪ, ವೆಂಕಟೇಶತಂದೆಗುಂಡಪ್ಪಇವರಿಗೆ ವಿಚಾರಿಸಲಾಗಿ ಓಡಿ ಹೊಗಿದ್ದಗೊದಾಮ ಮತ್ತುರಸಗೊಬ್ಬರ ಮಾಲಿಕಚನ್ನಪ್ಪತಂದೆಅಯ್ಯಣ್ಣಜಾಲಹಳ್ಳಿ ಸಾ|| ಬಾದ್ಯಾಪುರಅಂತಾಗೊತ್ತಾಗಿರುತ್ತದೆ. ನಂತರ ಸದರಿಯವನುಊರಲ್ಲಿ ಶ್ರೀ ಮಂಜುನಾಥ ಕೃಷಿ ಕೇಂದ್ರಅಂತಾಅಂಗಡಿಇಟ್ಟುಕೊಂಡು ವ್ಯಾಪಾರ ಮಾಡುವುದಾಗಿ ತಿಳಿಸಿದರು. ನಂತರ ಸದರಿ ಸ್ಥಳದಲ್ಲಿ ಪಂಚರ ಸಮಕ್ಷಮ ಪಂಚನಾಮೆಯನ್ನು 11:30 ಎ.ಎಂ ದಿಂದ 1:30 ಪಿ.ಎಂ ದಅವರೆಗೆ ಪಂಚನಾಮೆಯನ್ನು ಮುಗಿಸಿಕೊಂಡು ನಂತರಅಲ್ಲಿಂದಆತನಅಂಗಡಿಯಾದ ಶ್ರೀ ಮಂಜುನಾಥ ಕೃಷಿ ಕೇಂದ್ರಕ್ಕೆ 1:45 ಪಿ.ಎಂ ಕ್ಕೆ ಹೊದಾಗಅಂಗಡಿಯು ಬೀಗ ಸಮೇತ ಮುಚ್ಚಿದ್ದುಇರುತ್ತದೆ. ಮೇಲಿನ ಸಾರ್ವಜನಿಕರಿಂದ ಸದರಿಆರೋಪಿತನುಗೋದಾಮಿನಿಂದ ಈ ಅಂಗಡಿಗೆ ರಸಗೊಬ್ಬರಗಳನ್ನು ತಂದಿಟ್ಟು ಮಾರಾಟ ಮಾಡುತ್ತಾನೆಅಂತಾ ತಿಳಿಸಿದರು. ನಂತರ ನಾವು ಸದರಿಅಂಗಡಿಯಲ್ಲಿಯುಕೂಡಾ ಕಳಪೆ ಮಟ್ಟದ ಸಂಶಯಾತ್ಮಕ ರಸಗೊಬ್ಬರಗಳು ಇಟ್ಟು ಮಾರಾಟ ಮಾಡುತ್ತಿರಬಹುದುಅಂತಾಅಂಗಡಿಯುಕೂಡ ಪಂಚರ ಸಮಕ್ಷಮ 1:45 ಪಿಎಂ ದಿಂದ 2:30 ಪಿ.ಎಂ ದ ವರೆಗೆ ಬೀಗ ಮುದ್ರೆ ಮಾಡಿಲಾಯಿತು. ನಂತರ ಸದರಿಜಪ್ತಿ ಪಂಚನಾಮೆಯನ್ನು 11:30 ಎ.ಎಂ ದಿಂದ 2:30 ಪಿಎಂ ದ ವರೆಗೆ ಪಂಚರ ಸಮಕ್ಷಮ ಮುಗಿಸಲಾಯಿತು. ಕಾರಣಅನದಿಕೃತವಾಗಿಗೊದಾಮ ನಡೆಸಲುಯಾವುದೇಅದಿಕೃತ ಪರವಾನಿಗೆಇಲ್ಲದೆ ರಸಗೊಬ್ಬರಗಳನ್ನು ಸಂಗ್ರಹಿಸಿಟ್ಟು ವ್ಯಾಪಾರ ಮಾಡುತ್ತಿದ್ದಚನ್ನಪ್ಪತಂದೆಅಯ್ಯಣ್ಣಜಾಲಹಳ್ಳಿ ಸಾ|| ಬಾದ್ಯಾಪುರಇತನ ವಿರುದ್ದ ಕಾನೂನು ಕ್ರಮಕ್ಕಾಗಿಠಾಣೆಗೆ 04:00 ಪಿಎಂ ಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ನನ್ನ ವರದಿಯೊಂದಿಗೆಜಪ್ತಿ ಪಂಚನಾಮೆಯನ್ನು ಒಪ್ಪಿಸಿದ್ದು ಆರೋಪಿತನ ವಿರುದ್ದ ಕಾನೂನು ಕ್ರಮಜರಗಿಸಲು ವಿನಂತಿ.ದೂರುಅಜರ್ಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ.117/2022 ಕಲಂ: 3&7 ಇಸಿ ಯ್ಯಾಕ್ಟ ಮತ್ತುಕಲಂ: 07 ರಸಗೊಬ್ಬರ ನಿಯಂತ್ರಣಆಧೇಶ 1985ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 118/2022 ಕಲಂ 32, 34 ಕನರ್ಾಟಕ ಅಭಕಾರಿ ಕಾಯ್ದೆ 1965: : ಇಂದು ದಿನಾಂಕ: 27/07/2022 ರಂದು 8.30 ಪಿ.ಎಂ.ಕ್ಕೆ ಸ.ತ ಪಿರ್ಯಾದಿದಾರರಾದ ಶ್ರೀ ನಬಿಲಾಲ ಪಿ.ಎಸ್.ಐ. ರವರು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚನಾಮೆ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:27/07/2022 ರಂದು 7 ಪಿ.ಎಂ.ಕ್ಕೆ ಹೆಮ್ಮಡಗಿ ಗ್ರಾಮದ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲಿ ಆರೋಪಿತನು ರಟ್ಟಿನ ಬಾಕ್ಸನಲ್ಲಿ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿದ್ದು, ಆರೋಪಿತನು ಓಡಿ ಹೊಗಿದ್ದು ರಟ್ಟಿನ ಬಾಕ್ಸನಲ್ಲಿ ಓರಿಜಿನಲ್ ಚೊಯಿಸ್ 90 ಎಮ್ಎಲ್ನ 60 ಪೌಚುಗಳು ಇದ್ದು, ಪ್ರತಿಯೊಂದಕ್ಕೆ 35=13 ರೂಗಳು, ಹೀಗೆ ಒಟ್ಟು 5400 ಎಮ್.ಎಲ್ನ ಮಧ್ಯವಿದ್ದು ಅದರ ಅ.ಕಿ 2107=00 ರೂ. ಕಿಮ್ಮತ್ತು ಇರುತ್ತದೆ. ಸದರಿ ಮದ್ಯವನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.118/2022 ಕಲಂ: 32, 34 ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 123/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 27.07.2022 ರಂದು 7.00 ಪಿಎಂ ಕ್ಕೆ ಶ್ರೀ ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ ಕೆಂಭಾವಿ ಠಾಣೆ ಇದ್ದು ನಾನು ಇಂದು ದಿನಾಂಕ 27.07.2022 ರಂದು 5.20 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಸಂಜೀವನಗರ ಹನುಮಾನ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಪ್ರಭುಗೌಡ ಪಿಸಿ 361 ಮತ್ತು ಕಾಶಿನಾಥ ಪಿಸಿ 293 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 5.30 ಪಿಎಂ ಕ್ಕೆ ಹೊರಟು ಕೆಂಭಾವಿ ಪಟ್ಟಣದ ಸಂಜೀವನಗರ ಹನುಮಾನ ದೇವಸ್ಥಾನದ ಹತ್ತಿರ 5.40 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 5.45 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಹಣಮಂತ ತಂದೆ ಸಿದ್ದಣ್ಣ ಯರಗಲ್ ವ|| 29 ಜಾ|| ಕುರುಬರ ಉ|| ವ್ಯಾಪಾರ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಕೆಂಭಾವಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 1210/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 5.45 ಪಿಎಂ ದಿಂದ 6.45 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 123/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 28-07-2022 11:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080