ಅಭಿಪ್ರಾಯ / ಸಲಹೆಗಳು

                                          ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-09-2021

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ:100/2021 ಕಲಂ: 341,427,504,506, ಸಂ. 34 ಐಪಿಸಿ;- ದಿನಾಂಕ. 27/09/2021 ರಂದು 7-30 ಪಿಎಂಕ್ಕೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ.26/09/2021 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮತ್ತು ನಮ್ಮಲ್ಲಿ ಕೆಲಸ ಮಾಡುವ ಬಂದಗಿಸಾಬ ತಂ. ಮಹಿಬೂಬಸಾಬ, ಇಮ್ರಾನ ತಂ.ಮಹಿಬೂಬಸಾಬ ರವರು ಕೂಡಿಕೊಂಡು ವಾಟರ ಸವರ್ಿಸಿಂಗದಲ್ಲಿ ಇದ್ದಾಗ 1. ಮಹಮ್ಮದ ಅಫ್ಜಲ್ ತಂ. ಮಹಮ್ಮದ ತಾಹೇರ 2. ಮಹಮ್ಮದ ಅಫ್ಸರ ತಂ. ಮಹಮ್ಮದ ತಾಹೇರ ಹಾಗೂ ನನ್ನ ಭಾಮೈದ 3. ಮಹಮ್ಮದ ಆಸೀಪ್ ತಂ. ಮಹಮ್ಮದ ತಾಹೇರ ಸಾಃ ಎಲ್ಲರೂ ನಾಲವಾರ ತಾಃ ಚಿತ್ತಾಪೂರ ರವರು ಕೂಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ, ಏ ಬೋಸಡಿ ಮಗನೇ ನಿನ್ನ ಅಂಗಡಿ ಖಾಲಿ ಮಾಡಿ ನಮ್ಮ ಜಾಗೆ ಬಿಟ್ಟುಕೊಡುವಂತೆ ಹೇಳಿದರೂ ಕೂಡಾ ಬಿಡುತ್ತಿಲ್ಲಾ ಮಗನೇ ಅಂತಾ ಅಂದಾಗ ನಾನು ಇನ್ನೂ 5 ವರ್ಷ ಕರಾರು ಇದೆ ನಾನು ಜಾಗ ಬಿಡುವುದಿಲ್ಲಾ ಅಂತಾ ಅಂದಾಗ ಅವರು ನಿನಗೆ ಎಷ್ಟು ಸಲ ಹೇಳಿದರೂ ನೀನು ಇದೇ ನೆಪ ಹೇಳುತ್ತಿ ಸೂಳಿ ಮಗನೇ ಅಂತಾ ನಿನಗೆ ಮಾತಿನಲ್ಲಿ ಹೇಳಿದರೆ ಕೇಳುವುದಿಲ್ಲಾ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಇವತ್ತು ಅಂತಾ ಅಂದವರೆ ಮಹ್ಮದ ಅಫ್ಜಲ್ ಈತನು ದೊಡ್ಡ ಸುತ್ತಿಗೆ (ಗನ್)ದಿಂದ ಜಾಕ್ ಏರ್ ಟ್ಯಾಂಕಗೆ ಒಡೆದು ಮುರಿದಿದ್ದು, ಮತ್ತು ಮಹಮ್ಮದ ಅಫ್ಸರ ಈತನು ನನ್ನ ಅಂಗಡಿ ಸೆಟರಗೆ ಕಬ್ಬಿಣದ ರಾಡಿನಿಂದ ಚುಚ್ಚಿ ತೂತುಗಳು ಹಾಕಿದ್ದು, ಮಹಮ್ಮದ ಅಫ್ಜಲ್ ಈತನು ಅದೇ ಸುತ್ತಿಗೆಯಿಂದ ಸೆಟರ್ಗೆ ಹೊಡೆದು ಲುಕ್ಸಾನ ಮಾಡಿದ್ದು, ನಳದ ಪೈಪುಗಳು ಒಡೆದು ಹಾಕಿದ್ದು, ಮತ್ತು ಕಟ್ಟೆಯನ್ನು ಬಿಳಿಸಿದ್ದು, ಮತ್ತು ಮಹಮ್ಮದ ಆಸೀಫ್ ಈತನು ರಾಡನಿಂದ ವಾಲ ಪಂಪ, ಮೋಟಾರ್ ಅಳವಡಿಸಿದ ಪೈಪುಗಳುಗಳನ್ನು ಒಡೆದು ಹಾಕಿದ್ದು ಇರುತ್ತದೆ. ಆಗ ನಾವು ಚೀರಾಡುತ್ತಿರುವಾಗ ಅವರೆಲ್ಲರೂ ಮಗನೇ ನಮ್ಮ ಜಾಗೆ ಖಾಲಿ ಮಾಡದ್ದಿದ್ದರೆ ಮತ್ತೆ ಮತ್ತೆ ಇದೇ ರೀತಿ ತೊಂದರೆ ಕೊಡುತ್ತೇವೆ ಅಂತಾ ಹೇಳಿ ಹೋರಟು ಹೋದರು. ಕಾರಣ ಸದರಿಯವರು ನಮ್ಮ ಅಂಗಡಿಗೆ ಬಂದು ಸಾಮಾನುಗಳನ್ನು ಒಡೆದು ಹಾಕಿ 95,000-00 ರೂ ದಷ್ಟು ಲುಕ್ಸಾನ ಮಾಡಿರುತ್ತಾರೆ. ಈ ಘಟನೆಯನ್ನು ಪಕ್ಕದ ಅಂಗಡಿಯವರಾದ ಅಮರನಾಥ ತಂ. ದೀಲಿಪಕುಮಾರ ರವರು ಕೂಡಾ ನೋಡಿರುತ್ತಾರೆ.ಕಾರಣ ಈ ವಿಷಯದ ಬಗ್ಗೆ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು ಕಾರಣ 1. ಮಹಮ್ಮದ ಅಫ್ಜಲ್ ತಂ. ಮಹಮ್ಮದ ತಾಹೇರ 2. ಮಹಮ್ಮದ ಅಫ್ಸರ ತಂ. ಮಹಮ್ಮದ ತಾಹೇರ ಹಾಗೂ ನನ್ನ ಭಾಮೈದ 3. ಮಹಮ್ಮದ ಆಸೀಪ್ ತಂ. ಮಹಮ್ಮದ ತಾಹೇರ ಸಾಃ ಎಲ್ಲರೂ ನಾಲವಾರ ತಾಃ ಚಿತ್ತಾಪೂರ ರವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.100/2021 ಕಲಂ.341,427,504,506,ಸಂ.34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ. 49/2021 ಕಲಂ 279,338 ಐಪಿಸಿ ಸಂ.187 ಐಎಂವಿ ಆ್ಯಕ್ಟ್;- ದಿನಾಂಕ 27/09/2021 ರಂದು 1-15 ಪಿ.ಎಂ.ಕ್ಕೆ ಶ್ರೀ ಈಶ್ವರ ತಂದೆ ಶರಣಪ್ಪ ಹಡಪದ ವಯ;28 ವರ್ಷ, ಉ;ಟ್ರಾವೆಲ್ಸ್ ಏಜೆನ್ಸಿ ಕೆಲಸ, ಜಾ;ಹಡಪದ, ಸಾ;ಓರುಂಚಾ, ತಾ;ಜಿ;ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿ ದೂರನ್ನು ನೀಡಿದ್ದರ ಸಾರಾಂಶವೇನೆಂದರೆ ನಾನು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನನ್ನ ಭಾವನವರಾದ ಮಲ್ಲಿಕಾಜರ್ುನ ತಂದೆ ಯಂಕಪ್ಪ ಹಡಪದ ಸಾ;ಓರುಂಚಾ ಇವರ ಮಗನಾದ ನಾಗೇಶ್ ವಯ;16 ವರ್ಷ ಈತನು ಯಾದಗಿರಿಯ ಚಿತ್ತಾಪುರ ಮುಖ್ಯ ರಸ್ತೆಯಲ್ಲಿ ಬರುವ ಆದರ್ಶ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡು ದಿನಾಲು ಓರುಂಚಾ ಗ್ರಾಮದಿಂದ ಬಸ್ಸಿಗೆ/ಆಟೋಕ್ಕೆ ಹೋಗಿ ಬರುವುದು ಮಾಡುತ್ತಾನೆ. ಹೀಗಿದ್ದು ದಿನಾಂಕ 24/04/2021 ರಂದು ಮದ್ಯಾಹ್ನ 2-15 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಭಾವ ಮತ್ತು ನನ್ನ ಅಕ್ಕಳಾದ ಕಾಶಮ್ಮ ಇಬ್ಬರು ಬಂದು ಅವರಲ್ಲಿ ನನ್ನ ಭಾವನವರು ನನಗೆ ತಿಳಿಸಿದ್ದೇನೆಂದರೆ ಈಗಷ್ಟೆ ನನಗೆ ಆದರ್ಶ ಶಾಲೆಯ ಹುಡುಗರಲ್ಲಿ ಯಾರೋ ಒಬ್ಬರು ತಮಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನನ್ನ ಮಗ ನಾಗೇಶ್ ಈತನು ಶಾಲೆ ಮುಗಿಸಿಕೊಂಡು ಮನೆಗೆ ಬರಲು ಯಾದಗಿರಿ-ವಾಡಿ ಮುಖ್ಯ ರಸ್ತೆಯ ಬದಿಯಲ್ಲಿ ತನ್ನ ಸ್ನೇಹಿತರೊಂದಿಗೆ ವಾಹನಕ್ಕಾಗಿ ಕಾಯುತ್ತಾ ನಿಂತು ಕೊಂಡಿದ್ದಾಗ ಅದೇ ಸಮಯಕ್ಕೆ ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೊಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನನ್ನ ಮಗ ನಾಗೇಶ್ ಈತನಿಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಈ ಅಪಘಾತವು ಇಂದು ದಿನಾಂಕ 24/09/2021 ರಂದು ಮದ್ಯಾಹ್ನ 2 ಪಿ.ಎಂ.ಕ್ಕೆ ಜರುಗಿದ್ದು, ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ ಸಮೇತ ಘಟನಾ ಸ್ಥಳದಿಂದ ಓಡಿ ಹೋಗಿದ್ದು ಆತನನ್ನು ಹುಡುಗರು ಮತ್ತೆ ನೋಡಿದಲ್ಲಿ ಗುತರ್ಿಸುವುದಾಗಿ ತಿಳಿಸಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನ್ನ ಮಗ ನಾಗೇಶ್ ಈತನಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಅಲ್ಲಿಗೆ ಬರಬೇಕು ಅಂತಾ ತಿಳಿಸಿರುತ್ತಾರೆ ನಾನು ನಮ್ಮುರಿನ ಶ್ರೀ ರಾಘವೇಂದ್ರ ತಂದೆ ಸಿದ್ರಾಮರೆಡ್ಡಿ ಹಳ್ಳೇರ ಇವರಿಗೆ ಪೋನ್ ಮಾಡಿ ನನ್ನ ಮಗನಿಗೆ ಅಪಘಾತವಾಗಿದ್ದರ ಬಗ್ಗೆ ತಿಳಿಸಿ ಅವರಿಗೆ ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗಲು ತಿಳಿಸಿರುತ್ತೇನೆ ನಡೀರಿ ನಾವು ಬೇಗ ಹೋಗೋಣ ಅಂದಾಗ ನಾನು ಕೂಡ ಅವರೊಂದಿಗೆ ತಯಾರಾಗಿ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಅಳಿಯ ನಾಗೇಶ ಈತನು ಉಪಚಾರ ಹೊಂದುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ, ನಮ್ಮೂರಿನ ರಾಘವೇಂದ್ರ ಇವರು ಕೂಡ ಆಸ್ಪತ್ರೆಯಲ್ಲಿ ಬಂದಿದ್ದು ಇರುತ್ತದೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ನನ್ನ ಅಳಿಯನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿರುತ್ತಾರೆ. ನನ್ನ ಅಳಿಯ ನಾಗೇಶ ಈತನಿಗೆ ಅದೇ ದಿವಸ ಕಲಬುರಗಿಯ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತೇವೆ. ನಂತರ ಎಮ್.ಎಲ್.ಸಿ ವಿಚಾರಣೆಗೆ ಬಂದಿದ್ದ ಪೊಲೀಸರಿಗೆ ನಾವುಗಳು ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ನಂತರ ತಿಳಿಸುವುದಾಗಿ ಹೇಳಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 27/09/2021 ರಂದು ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರು ಕೇಸು ಮಾಡು ಅಂತಾ ನನ್ನ ಭಾವ ಮಲ್ಲಿಕಾಜರ್ುನ ಇವರಿಗೆ ತಿಳಿಸಿದ್ದರಿಂದ ಅವರು ನನಗೆ ಯಾದಗಿರಿ ಸಂಚಾರಿ ಠಾಣೆಗೆ ಹೋಗಿ ದೂರು ನೀಡಲು ತಿಳಿಸಿದ್ದರಿಂದ ನಾನು ತಡವಾಗಿ ಠಾಣೆಗೆ ಹಾಜರಾಗಿ ಈ ಲಿಖಿತ ದೂರು ಅಜರ್ಿ ಸಲ್ಲಿಸುತ್ತಿದ್ದು ದಿನಾಂಕ 24/09/2021 ರಂದು ಮದ್ಯಾಹ್ನ 2 ಪಿ.ಎಂ.ದ ಗಂಟೆ ಸುಮಾರಿಗೆ ನನ್ನ ಅಳಿಯ ನಾಗೇಶ್ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಮೋಟಾರು ಸೈಕಲ್ ಸವಾರನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ದೂರು ಅಜರ್ಿ ಇರುತ್ತದೆ ಅಂತಾ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 49/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಗುರಮಿಠಕಲ ಪೊಲೀಸ್ ಠಾಣೆ
ಗುನ್ನೆ ನಂ: 155/2021 ಕಲಂ 379 ಐ.ಪಿ.ಸಿ.;- ಐಚಿಡಿಜಟಿ & ಖಿಠಣಛಡಿಠ ಐಟಣಜಜ ಕಂಪನಿಯು ಯಾದಗಿರ- ಗುರುಮಠಕಲ್ ವ್ಯಾಪ್ತಿಯಲ್ಲಿ ಗುರುಮಠಕಲ್ ಹೊರವಲಯದ ಹಳ್ಳಿಗಳ ಕೆರೆ ತುಂಬುವ ಯೋಜನೆ ಸಲುವಾಗಿ ಯಾದಗಿರ ದಿಂದ ಗುರುಮಠಕಲ್ ಗೆ ಬರುವ ಮುಖ್ಯ ರಸ್ತೆಗೆ ಹೊಂದಿಕೊಂಡು ಪ್ರತಿ 500 ಮೀಟರ ಗೆ ಒಂದರಂತೆ ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ ಗಳು ಅಳವಡಿಸಿದ್ದು ಇವುಗಳಲ್ಲಿ ಅರಕೇರಾ ದಿಂದ ಕಂದಕೂರವರೆ ಅಲ್ಲಿಲ್ಲಿ 11 ಂಖ ಗಿಚಿಟತಜ ಘಣ ಖಟಣಛಿಜ ಗಿಚಿಟತಜ 150 ಟಟ ಪ್ರತಿಯೊಂದಕ್ಕೆ ರೂ 43,940=00 ರಂತೆ 11 ವಾಲ್ಗಳಿಗೆ ಅಂದಾಜು ಕಿಮ್ಮತ್ತು ಒಟ್ಟು ರೂ 4,83,340=00 ನ ಇವುಗಳನ್ನು ಯಾರೋ ಕಳ್ಳರು ಕಳ್ಳತನಮಾಡಿಕೊಂಡು ಹೋದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ. 147/2021 ಕಲಂ. 323, 354, 504, 506 ಸಂಗಡ 34 ಐಪಿಸಿ;- ದಿನಾಂಕ. 26.09.2021 ರಂದು ಬೆಳಿಗ್ಗೆ 6.00 ಗಂಟೆಗೆ ಫಿಯರ್ಾದಿ ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಸೇರಿಕೊಂಡು ಫಿಯರ್ಾದಿ ಮನೆಯ ಮುಂದೆ ಬಂದು ಫಿಯರ್ಾದಿಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ, ಎದೆಮೇಲಿನ ಕುಪ್ಪಸ ಜಗ್ಗಿ ಅವಮಾನ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಾರಾಂಶ ಇರುತ್ತದೆ.ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ. 94/2021 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 27/09/2021 ರಂದು 11.25 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಶ್ರೀನಿವಾಸ ಅಲ್ಲಾಪೂರ ಆರಕ್ಷಕ ವೃತ್ತ ನೀರಿಕ್ಷಕರು ಶಹಾಪೂರ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 27/09/2021 ರಂದು ಚಾಮ ಹೋಸ್ಕೇರಾ ಗ್ರಾಮದ ಶೆಟ್ಟಿಕೇರಾ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಭೀಮಯ್ಯ ತಂದೆ ರಂಗಯ್ಯ ಗುತ್ತೇದಾರ ವಯಾ:30 ವರ್ಷ ಉ: ಹೋಟೆಲ ಜಾ:ಇಳೀಗ ಸಾ: ಹೋಸ್ಕೇರಾ ತಾ: ಶಹಾಪೂರ ಜಿ: ಯಾದಗಿರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 09.40 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1680/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 94/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 28-09-2021 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080