ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-09-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 143/2022 ಕಲಂ : 363 ಐಪಿಸಿ : ಎಂದಿನಂತೆ ದಿನಾಂಕ 20.09.2022 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಫೀರ್ಯಾದಿಯ ಸೌತಿಯ ಮಗಳಾದ ಕುಮಾರಿ.ಸಂಗೀತಾಳು ಕಾಲೇಜಿನ ವಿದ್ಯಾಭ್ಯಾಸಕ್ಕೆಂದು ಹತ್ತಿಕುಣಿಗೆ ಹೋಗಿದ್ದು ಫಿರ್ಯಾದಿ ಮತ್ತು ಆಕೆಯ ಗಂಡ ಹಾಗೂ ಮಗ ಮೂರು ಜನರು ಕೆಲಸಕ್ಕೆಂದು ಹೊಲಕ್ಕೆ ಹೋಗಿ ಮರಳಿ ಬಂದ ನಂತರವು ಸಹ ಸಂಗೀತ ಮನೆಯಲ್ಲಿ ಕಾಣಿಸದೇ ಇದ್ದಾಗ ಅಕ್ಕ-ಪಕ್ಕದ ಮನೆಯಲ್ಲಿ ಕುಂತಿರಬೇಕೆಂದು ತಿಳಿದು ಅಲ್ಲಿಯೂ ನೋಡಿದಾಗಲೂ ಕೂಡ ಸಂಗೀತ ಕಾಣಿಸದೇ ಇದ್ದಾಗ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಫೋನ್ ಮಾಡಿ ವಿಚಾರಿಸಿದ ನಂತರ ಸಂಗೀತಳು ಎಲ್ಲಿಯೂ ಇಲ್ಲವೆಂದು ಗೊತ್ತಾದ ಮೇಲೆ ಫಿರ್ಯಾದಿಯು ತನ್ನ ಗಂಡನೊಂದಿಗೆ ಮನೆಯಲ್ಲಿ ವಿಚಾರ ಮಾಡಿದ ನಂತರ ತನ್ನ ಸೌತಿಯ ಮಗಳಾದ ಸಂಗೀತಾಗಳನ್ನು ಯಾರೋ, ಯಾವುದೋ ಉದ್ದೆಶಕ್ಕೆ ಅಪಹರಣ ಮಾಡಿಕೊಂಡು ಹೋಗಿರಬೇಕೆಂದು ಅನುಮಾನಗೊಂಡು ಇಂದು ದಿನಾಂಕ 27.09.2022 ರಂದು ಸಂಜೆ 6:00 ಗಂಟೆಗೆ ಖುದ್ದಾಗಿ ಠಾಣೆಗೆ ಬಂದು ತನ್ನ ಮಗಳು ಸಂಗೀತಾಳನ್ನು ಪತ್ತೆ ಮಾಡಿಕೊಡುವಂತೆ ಒಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 143/2022 ಕಲಂ: 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 110/2022 ಕಲಂ 160 ಐಪಿಸಿ : ಇಂದು ದಿನಾಂಕ 27.09.2022 ರಂದು ಸಾಯಂಕಾಲ 6 ಗಂಟೆಗೆ ಕಾಳಪ್ಪ ಎಮ್ ಬಡಿಗೇರ ಪಿ.ಐ ಸೈದಾಪೂರ ಠಾಣೆ ರವರು ನನಗೆ ವರದಿ ನೀಡಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿರುತ್ತಾರೆ. ವರದಿ ಸಂಕ್ಷಿಪ್ತ ಸಾರಂಶವೇನೆಂದರೆ ಇಂದು ದಿನಾಂಕ 27.09.2022 ರಂದು ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸಾವೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಯಾದಗಿರಿ-ಸೈದಾಪೂರ ರಸ್ತೆ ಕಿಲೋ ಮೀಟರ್ 10.80 ರಿಂದ 20.00 ರವರೆಗೆ (ಆಯ್ದ ಭಾಗಗಳಲ್ಲಿ) ರಸ್ತೆ ಸುಧಾರಣೆ ಅಡಿಗಲ್ಲು ಸಮಾರಂಭ ನಿಗದಿಯಾಗಿತ್ತು. ಸದರಿ ಸಮಾರಂಭಕ್ಕೆ ಸ್ಥಳೀಯ ಶಾಸಕರಾದ ನಾಗನಗೌಡ ಕಂದಕೂರು ಮತ್ತು ಗುರುಮಠಕಲ್ ಮತ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಮತ್ತು ಅಂಭಿಗರ ಚೌಡಯ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಾಬೂರಾವ್ ಚಿಂಚನಸೂರು ರವರು ಬರುವ ಸಾಧ್ಯತೆ ಇದ್ದುದ್ದರಿಂದ ಸೈದಾಪೂರ ಠಾಣೆಯಲ್ಲಿ ಲಬ್ಯವಿದ್ದ ಅಧಿಕಾರಿ ಮತ್ತು ಸಿಬಂದಿಯವರನ್ನು ನಾನು ಸಂಗಡ ಕರೆದುಕೊಂಡು ಸದರಿ ಕಾರ್ಯಕ್ರಮದ ಬಂದೋಬಸ್ತ ಕರ್ತವಕ್ಕೆ ಬೆಳಿಗ್ಗೆ ಹೋಗಿದ್ದೆ. ಕಾರ್ಯಕ್ರಮದ ಸ್ಟೇಜಿನ ಮೇಲೆ ಕಾಮಗಾರಿಗೆ ಸಂಬಂದಿಸಿದ ಬ್ಯಾನರ್ನಲ್ಲಿ ಗುರುಮಠಕಲ್ ಮತಕ್ಷೇತ್ರದ ಎಮ್.ಎಲ್.ಎ ನಾಗನಗೌಡ ಕಂದಕೂರು ರವರ ಬಾವಚಿತ್ರ ಇದ್ದುದ್ದನ್ನು ಕಂಡ ಬಾಬೂರಾವ ಚಿಂಚನಸೂರು ಬೆಂಬಲಿಗರು ಬ್ಯಾನರಿನಲ್ಲಿ ಬಾಬೂರಾವ ಚಿಂಚನಸೂರು ಭಾವಚಿತ್ರ ಏಕೆ ಹಾಕಿಲ್ಲ ಅಂತಾ ಸಂಬಂಧಪಟ್ಟ ಲೋಕೋಪಯೋಗಿ ಅಧಿಕಾರಿಗಳೊಟ್ಟಿಗೆ ಚಚರ್ೆಮಾಡಿ ಬ್ಯಾನರ್ ತೆಗೆಯಲು ಹಠಮಾಡಿ ಬ್ಯಾನರ್ ತೆಗೆಸಿದರು. ಬ್ಯಾನರ್ ವಿಷಯದಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ರಾಜಕೀಯ ಪಕ್ಷದ ಕಾರ್ಯಕರ್ತರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿರುತ್ತಾರೆ ಅಂತಾ ವಗೈರೆ ಆಪಾದನೆ.

ಇತ್ತೀಚಿನ ನವೀಕರಣ​ : 28-09-2022 03:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080