ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-10-2021

ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ: 113/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ. 27/10/2021 ರಂದು 12.30 ಪಿ.ಎಮ್ ಕ್ಕೆ ಪಿರ್ಯಾದಿ ಠಾಣೆಗೆ ಬಂದು ಒಂದು ದೂರು ಅಜರ್ಿ ನೀಡಿದ್ದು ಸಾರಾಂಶವೆನಂದರೆ, ಯಾಗದಿರಿ ನಗರದ ಹಳೆ ಬಸ ನಿಲ್ದಾಣ ಹತ್ತಿರ ನಮ್ಮದೊಂದು ಅಮಿತ ಪುಟವೇರ ಅಂತಾ ಚಪ್ಪಲಿ ಅಂಗಡಿ ಇದ್ದು ನಾನು ಮತ್ತು ನನ್ನ ತಮ್ಮ ಅಮಿತ ತಂದೆ ಕೃಷ್ಣಪ್ಪ ಸೂರ್ಯವಂಶಿ ಇಬ್ಬರು ವ್ಯಾಪಾರ ಮಾಡಿಕೊಂಡು ಇರುತ್ತೇವೆ. ನನ್ನ ತಮ್ಮ ಅಮಿತ ಈತನು ಆಗಾಗ ಮಧ್ಯಪಾನ ಮಾಡುತ್ತಿದ್ದು ನಾವು ಮನೆಯಲ್ಲಿ ಆತನಿಗೆ ಮಧ್ಯಪಾನ ಚಟ ಬಿಡುವಂತೆ ಮನೆಯಲ್ಲಿ ಬುದ್ದಿಮಾತು ಹೇಳುತ್ತಾ ಬಂದಿದ್ದೆವು. ಅಮಿತ ಈತನು ಕುಡಿಯುವುದು ಬಿಟ್ಟಿರುವುದಿಲ್ಲ. ಹಿಗೀದ್ದು ದಿನಾಂಕ; 24/09/2021 ರಂದು 3-00 ಪಿಎಮ್ ಸುಮಾರಿಗೆ ಅಮಿತ ಈತನು ನಾನು ಏಕಿ ಮಾಡಿ ಬರುತ್ತೇನೆ ಅಂತಾ ಅಂಗಡಿಯಿಂದ ಹೇಳಿ ಹೋದನು. ತುಂಬಾ ಸಮಯವಾದರು ಅಮಿತ ಅಂಗಡಿಗೆ ವಾಪಾಸ್ಸು ಬರಲಿಲ್ಲ ಆಗ ಮನೆಗೆ ಹೋಗಿರಬೇಕು ಅಂತಾ ಸುಮ್ಮನಿದ್ದೆವು ನಂತರ 7-30 ಪಿಎಮ್ ಸುಮಾರಿಗೆ ಅಂಗಡಿಯನು ಮುಚ್ಚಿಕೊಂಡು ಮನೆಗೆ ಹೋಗಿ ನೋಡಲಾಗಿ ಅಮಿತ ಈತನು ಇನ್ನು ಮನೆಗೆ ಬಂದಿರಲಿಲ್ಲ. ಆಗ ನಾನು ಮತ್ತು ಗೆಳೆಯನಾದ ಪ್ರವೀಣ, ಬಸವರಾಜ ರವರು ಕೂಡಿಕೊಂಡು ಯಾದಗಿರಿ ನಗರದ ಅಲ್ಲಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ತಮ್ಮ ಅಮಿತ ಈತನು ಸಿಕ್ಕಿರುವುದಿಲ್ಲ. ನಂತರ ನಮ್ಮ ಸಂಭಂದಿಕರಲ್ಲಿ ಕೂಡಾ ವಿಚಾರಿಸಲು ನನ್ನ ತಮ್ಮನ ಬಗ್ಗೆ ಸುಳಿವು ಸಿಗಲಿಲ್ಲಾ. ಎಲ್ಲಿಗೆ ಹೋಗಿರುತ್ತಾನೆ ಎಂಬುವುದರ ಮಾಹಿತಿ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ತಂದೆ ತಮ್ಮನ ಚಹರೆ ಪಟ್ಟಿ, ಸಾದಾಕಪ್ಪು ಬಣ್ಣ, ದುಂಡನೆಯ ಮುಖ, ಎತ್ತರ 5 ಪೀಟ್ 2 ಇಂಚು ಎತ್ತರ, ಸಾಧಾರಣ ಮೈಕಟ್ಟು, ತಲೆಯ ಮೇಲೆ ಕಪ್ಪು ಕೂದಲು, ಪರ್ಪಲ ಬಣ್ಣದ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿದ್ದು ಕನ್ನಡ ಭಾಷೆ, ಹಿಂದಿ, ತೆಲುಗು, ಇಂಗ್ಲೀಷ್ ಭಾಷೆ, ಮಾತನಾಡುತ್ತಾನೆ. ಕಾರಣ ಕಾಣೆಯಾದ ನನ್ನ ತಮ್ಮ ಅಮೀತ ತಂದೆ ಕೃಷ್ಣಪ್ಪ ಸೂರ್ಯವಂಶಿ ಸಾ; ಲಕ್ಷ್ಮೀನಗರ ಯಾದಗಿರಿ ಈತನಿಗೆ ಹುಡುಕಾಡಲಾಗಿ ಇಲ್ಲಿಯವರೆಗೆ ಯಾವುದೇ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಂದ ಠಾಣೆ ಗುನ್ನೆ ನಂ.113/2021 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 143/2021 ಕಲಂ. 78(3) ಕೆ.ಪಿ. ಆಕ್ಟ ತಿದ್ದುಪಡಿ ಕಾಯ್ದೆ 2021 : ಇಂದು ದಿನಾಂಕ 27-10-2021 ರಂದು ಸಂಜೆ 06-45 ಗಂಟೆಗೆ ಶ್ರೀಮತಿ ಮಂಜುಳಾ ಪಿ.ಎಸ್.ಐ.(ಅ.ವಿ) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಈ ಮೂಲಕ ಬರೆದುಕೊಡುವ ವರದಿ ಏನೆಂದರೆ ಇಂದು ದಿನಾಂಕ 27-10-2021 ರಂದು ಸಾಯಂಕಾಲ 4-30 ಗಂಟೆಗೆ ಮುಸ್ಟೂರು ಗ್ರಾಮದ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇರುವಾಗ ಮಾಹಿತಿ ಬಂದಿದ್ದೆನೆಂದರೆ ಶೇಟಿಗೇರಾ ಗ್ರಾಮದ ಶಿವಪ್ಪ ಮುತ್ಯಾನ ಮಠದ ಹತ್ತಿರ ಯಾರೊ ಒಬ್ಭ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಭೀಮಾಶಂಕರ ಎ.ಎಸ್.ಐ,ಶ್ರೀ ಮಹೇಶ ಸಿಪಿಸಿ-358, ಶ್ರೀ ಮೋನಪ್ಪ ಪಿಸಿ.263 ಕೂಡಿಕೊಂಡು ಶೇಟ್ಟಿಗೇರಾ ಗ್ರಾಮದ ಕ್ರಾಸ್ ಹತ್ತಿರ 4-45 ಗಂಟೆಗೆ ಹೋಗಿ ಇಬ್ಬರು ಪಂಚರಾದ 1) ಭೀಮರಾಯ ತಂದೆ ಮರಲಿಂಗಪ್ಪ ಕ್ವಾಟೆರ ವ:32 ಜಾ:ಕುರುಬರ 2) ಮಹಾದೇವಪ್ಪ ತಂದೆ ನರಸಪ್ಪ ಬೈಲಪ್ಪನೋರ್ ವ:32 ವರ್ಷ ಜಾ: ಉಪ್ಪಾರ ಸಾ:ಇಬ್ಬರೂ ಶೇಟ್ಟಿಗೇರಾ ಗ್ರಾಮ ತಾ:ಯಾದಗಿರಿ ರವರನ್ನು ಬರಮಾಡಿಕೊಂಡು ನಮ್ಮ ಸಿಬ್ಬಂದಿಗೆ ಮತ್ತು ಪಂಚರಿಗೆ ದಾಳಿಯ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ಶೇಟಿಗೇರಾ ಗ್ರಾಮದ ಕ್ರಾಸ್ ದಿಂದ ಶಿವಪ್ಪ ಮುತ್ಯಾನ ಮಠದ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆದ್ದು ಮಜಾ ಮಾಡಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಸಾಯಂಕಾಲ 5:15 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಬಸವರಾಜ ತಂದೆ ಹುಸೆನಪ್ಪ ಕುಂಬಾರ ವ:38 ವರ್ಷ ಜಾ:ಕುಂಬಾರ ಸಾ:ಶೇಟಿಗೇರಾ ಅಂತಾ ತಿಳಿಸಿದನು. ನಂತರ ಅವನ ಅಂಗ ಶೋದನೆ ಮಾಡಲಾಗಿ ಅವರ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 5150/ ರೂ ನಗದು ಹಣ, ಮೂರು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲಪೆನ್ನ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಈ ಎಲ್ಲಾ ಹಣ ಮತ್ತು ಮಟಕಾ ನಂಬರುಗಳು ಯಾರಿಗೆ ಕೊಡುತ್ತಿ ಅಂತಾ ಕೇಳಿದಾಗ ಸಾಬಣ್ಣ ಶೇಖಸಿಂದಿ ಜೀನಕೆರಾ ಇತನಿಗೆ ಕೊಡುವುದಾಗಿ ತಿಳಿಸಿದನು ಈ ಸವಿಸ್ತಾರವಾದ ಪಂಚನಾಮೆಯನ್ನು ಸಾಯಂಕಾಲ 5:15 ಗಂಟೆಯಿಂದ 6:15 ಗಂಟೆಯವರೆಗೆ ಮಾಡಿಕೊಂಡು ಇಂದು ದಿನಾಂಕ: 27/10/2021 ರಂದು ಸಂಜೆ 6:45 ಗಂಟೆಗೆ ಮರಳಿ ಠಾಣೆಗೆ ಬಂದು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಬಂದು ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಇರುತ್ತದೆ. ಸದರಿ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ 143/2021 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ:168/2021 ಕಲಂ 279,337,338 ಐಪಿಸಿ : ನಿನ್ನೆ ದಿನಾಂಕ 27.10.2021 ರಂದು ರಾತ್ರಿ 10:40 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳು ಪರಶುರಾಮ ರಾಠೋಡ ಇಬ್ಬರು ಕೂಡಿ ಗುರುಮಠಕಲ್ ಪಟ್ಟಣದಿಂದ ಬೆಟ್ಟದಳ್ಳಿ ಗ್ರಾಮಕ್ಕೆ ಮರಳಿ ಹೋಗುತ್ತಿದ್ದಾಗ ಗಾಯಾಳು ಪರಶುರಾಮ ರಾಠೊಡ ಈತನು ಮೋಟಾರು ಸೈಕಲ್ ನಂಬರ ಕೆಎ-33-ಇ.ಎ-6887 ನೇದ್ದರಲ್ಲಿ ತನ್ನ ಹಿಂದೆ ಫೀರ್ಯಾದಿಯನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಬೂದೂರ ಗೇಟ್-ಬೋರಬಂಡ ಗ್ರಾಮಗಳ ನಡುವೆ ರಸ್ತೆಯ ತಿರುವಿನಲ್ಲಿ ನಿತಂತ್ರಿಸಲು ಸಾಧ್ಯವಾಗದೇ ಸ್ಕೀಡ್ ಆಗಿ ಬಿದ್ದು ಅಪಘಾತ ಸಂಭವಿಸಿದ್ದು ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಸಾದಾ ಸ್ವರೂಪದ ಗುಪ್ತಗಾಯ ಹಾಗೂ ಆರೋಪಿ ಪರಶುರಾಮ ರಾಠೋಡನಿಗೆ ಭಾರಿ ಸ್ವರೂಪದ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದು ಆ ಬಗ್ಗೆ ಫಿರ್ಯಾದಿ ತಡವಾಗಿ ಠಾಣೆಗೆ ಬಂದು ದುರು ನೀಡಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:168/2021 ಕಲಂ 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 28-10-2021 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080