ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-10-2022
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ:156/2022 ಕಲಂ. 279, 338 ಐಪಿಸಿ: ದಿನಾಂಕ: 27-10-2022 ರಂದು ಸಾಯಂಕಾಲ 04-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ದಿನಾಂಕ: 24-10-2022 ರಂದು ಬೆಳಿಗ್ಗೆ 10-00 ಗಂಟೆಗೆ ಗಾಯಾಳು ಮತ್ತು ಆಕೆಯ ಅಜ್ಜಿ ಇಬ್ಬರು ಕೂಡಿ ಹತ್ತಿಕುಣಿ ಗ್ರಾಮಕ್ಕೆ ಬಂದು ಹತ್ತಿಕಿಣಿ ಗ್ರಾಮದಲ್ಲಿ ರೇಷನ್ ಹಾಕಿಸಿಕೊಂಡು ಹತ್ತಿಕುಣಿ ಗ್ರಾಮದ ಗೇಟ್ ಹತ್ತಿ ರೋಡ ದಾಟುತ್ತಿರುವಾಗ ಮೋಟರ ಸೈಕಲ್ ನಂ. ಮೋಟರ ಸೈಕಲ್ ನಂ. ಕೆಎ-33 ಎಲ್ -0423 ನೇದ್ದರ ಚಾಲಕನು ತಾನು ನಡೆಸುವ ಮೋಟರ ಸೈಕಲನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದಿ ಅಪಘಾತಪಡಿಸಿದ್ದರಿಮದ ಮಲ್ಲಮ್ಮಳಿಗೆ ಎಡಗಾಲಿಗೆ ತರಚಿದಗಾಯ, ಎದೆಗೆ ಹೊಟ್ಟೆಗೆ ಬಾರಿ ಒಳಪೆಟ್ಟು ಆಗಿರುತ್ತದೆ ಮೋಟರ ಸೈಕಲ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿಯರ್ಾದಿ
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: : 114/2022 ಕಲಂ 454, 457, 380 ಐಪಿಸಿ: ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ವಾಸವಾಗಿರುತ್ತೇವೆ. ನನ್ನ ಹೆಂಡತಿ ಸುಮಾರು 3 ತಿಂಗಳ ಹಿಂದೆ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದು, ಮನೆಯಲ್ಲಿ ಸದ್ಯ ನಾನು ಮಾತ್ರ ಇರುತ್ತೇನೆ. ನನ್ನ ಸ್ವಂತ ಊರು ಮೊಗದಂಪೂರ ಗ್ರಾಮ ಇರುವುದ್ದರಿಂದ ಆಗಾಗ ಊರಿಗೆ ಹೋಗಿ ಬಂದು ಮಾಡುತ್ತೇನೆ. ಹೀಗಿದ್ದು ದಿನಾಂಕ 26/10/2022 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಬೀಗ ಹಾಕಿಕೊಂಡು ಮೊಗದಂಪೂರ ಗ್ರಾಮಕ್ಕೆ ಹೋಗಿ ಅಲ್ಲೆ ಇದ್ದು ಇಂದು ದಿನಾಂಕ 27/10/2022 ರಂದು ಬೆಳಿಗ್ಗೆ 06-00 ಗಂಟೆ ಸುಮಾರಿಗೆ ಯಾದಗಿರಿಯಲ್ಲಿ ಇರುವ ನನ್ನ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ಕೀಲಿಕೊಂಡಿ ಮುರಿದು ಬಾಗಿಲು ಮುಚ್ಚಿದ್ದು, ಕಂಡು ಬಂತು. ನಂತರ ನಾನು ಒಳಗೆ ಹೋಗಿ ನೋಡಿದಾಗ ಮನೆಯ ಬೆಡ್ ರೂಮಿನ ಪ್ಲೆವುಡ್ ಅಲಮರಿಯಲ್ಲಿ ಇದ್ದ ಬಟ್ಟೆ ಬರೆ ಸಾಮಾನುಗಳು ಮನೆಯ ತುಂಬ ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಗಾಭರಿಯಾಗಿ ಪರಿಶೀಲಿಸಿ ನೋಡಲಾಗಿ ಅಲಮರಿಯಲ್ಲಿ ಇದ್ದ 1] 10. ಗ್ರಾಂ. ಬಂಗಾರ ಒಂದು ಸುತ್ತುಂಗುರ, ಅ.ಕಿ 45,000/- ರೂ|| ಗಳು, 2] 5 ಗ್ರಾಂ. ಬಂಗಾರದ ಒಂದು ಉಂಗುರ, ಅ.ಕಿ 22,500/- ರೂ|| ಗಳು, 3] ತಲಾ 01 ಗ್ರಾಂ. ಬಂಗಾರದ 2 ಹುಡುಗರ ಉಂಗುರ, ಅ.ಕಿ 9000/- ರೂ|| ಗಳು, 4] 5 ಗ್ರಾಂ. ಬಂಗಾರ ಒಂದು ಜೊತೆ ಜುಮಕಿ, ಅ.ಕಿ 22,500/- ರೂ|| ಗಳು, ಮತ್ತು 5] ನಗದು ಹಣ 15,000/-ರೂಪಯಿಗಳು, ಹೀಗೆ ಒಟ್ಟು 22 ಗ್ರಾಂ. ಬಂಗಾರದ ಆಭರಣಗಳು, ಅ.ಕಿ 99,000/- ರೂ|| ಗಳು ಮತ್ತು ನಗದು ಹಣ 15,000/- ರೂ|| ಗಳು ಇರಲಿಲ್ಲ. ಕಾರಣ ದಿನಾಂಕ 26/10/2022 ರಂದು ಮಧ್ಯಾಹ್ನ 01-00 ಗಂಟೆಯಿಂದ ದಿನಾಂಕ 27/10/2022 ರಂದು ಬೆಳಿಗ್ಗೆ 6-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೀಗದ ಕೀಲಿ ಕೊಂಡಿ ಮುರಿದು ಬೆಡ್ ರೂಮಿನ ಅಲಮರಿಯಲ್ಲಿ ಇದ್ದ ಒಟ್ಟು 1,14,000/- ರೂ|| ಕಿಮ್ಮತ್ತಿನ 22 ಗ್ರಾಂ. ಬಂಗಾರದ ಆಭರಣಗಳು ನಗದು ಹಣ 15,000/- ರೂ|| ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಮನೆ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 114/2022 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: . 115/2022 ಕಲಂ: 143, 147, 323, 324, 308, 504, 506 ಸಂ. 149 ಐಪಿಸಿ: ಇಂದು ದಿನಾಂಕ; 27/10/2022 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದರ ಸಾರಾಂಶವೆನಂದರೆ, ನಾನು ಫೋಟೋ ಸ್ಟುಡೀಯೋ ಇಟ್ಟುಕೊಂಡು ನನ್ನ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಚಿಕ್ಕಪ್ಪ ಅಸದಬಿನ್ ಸಾಲಂ ರಹೆಮತ್ ಬೇಗಂ ಇವರಿಗೆ 3 ಜನ ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇರುತ್ತಾರೆ. ಅವರಲ್ಲಿ ಸಿರೀನ್ ಬೇಗಂ ಇವಳು 3 ನೇಯ ಮಗಳಾಗಿದ್ದು ಅವಳನ್ನು ಯಾದಗಿರಿ ನಗರದ ದುಖಾನವಾಡಿ ನಿವಾಸಿಯಾದ ಮಹ್ಮದ ಅಸ್ಲಾಂ ತಂದೆ ಮಹ್ಮದ ಪಾಷಾ ಈತನಿಗೆ ಕೊಟ್ಟು ಸುಮಾರು 11-12 ತಿಂಗಳ ಹಿಂದೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ತಂಗಿ ಸಿರೀನ್ ಬೇಗಂ ಇವಳು ಸುಮಾರು 5-6 ತಿಂಗಳ ಹಿಂದೆ ಗಭರ್ಿಣಿ ಆಗಿದ್ದು ವೈದ್ಯಾಧಿಕಾರಿಗಳಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾಗ ಅವಳು ಗಬರ್ಿಣಿ ಇದ್ದ ಬಗ್ಗೆ ಖಚಿತಪಟ್ಟು ಆದರೆ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಸರಿಯಾಗಿ ಆಗಿಲ್ಲ ಇನ್ಪೆಕ್ಷನ್ ಆಗಿದ್ದರಿಂದ ಆಬರೇಷನ್ ಮಾಡಬೇಕೆಂದು ಡಾಕ್ಟರ ಸಲಹೆ ನೀಡಿದ್ದು ಆಗ ಅವಳ ಗಂಡ ಮಹ್ಮದ ಅಸ್ಲಾಂ ಮತ್ತು ಸಂಬಂಧಿಕರೆಲ್ಲರೂ ಸೇರಿ ಅವಳಿಗೆ ಆಪರೇಷನ ಮಾಡಿಸಿ ಚಿಕಿತ್ಸೆ ಮಾಡಿಸಿದ್ದು ಇರುತ್ತದೆ. ಅದೇ ವಿಷಯದಲ್ಲಿ ಅವರಿಬ್ಬರ ಮದ್ಯೆ ತಕರಾರು ಮಾಡಿಕೊಂಡು ಅವರ ಕುಟುಂಬಗಳ ಮದ್ಯೆ ತಕರಾರುಗಳಾಗಿದ್ದು ಇರುತ್ತದೆ. ಆಗ ನಾನು ಮದ್ಯಸ್ಥಿಕೆ ವಹಿಸಿ ಅವರಿಗೆ ತಿಳುವಳಿಕೆ ಹೇಳಿದ್ದು ಈ ಮದ್ಯೆ ಮಹ್ಮದ ಅಸ್ಲಾಂ ಈತನು ತನ್ನ ಹೆಂಡತಿಯನ್ನು ಅವಳ ತವರು ಮನೆಯಲ್ಲಿ ಬಿಟ್ಟು ನೀನು ನಿಮ್ಮ ತಂದೆ ತಾಯಿಯ ಹತ್ತಿರ ಇರು ನಮ್ಮ ಮನೆಗೆ ಬರುವುದು ಬೇಡಾ ಅಂತಾ ನನ್ನ ತಂಗಿಗೆ ಅವಳ ತವರು ಮನೆಯಲ್ಲಿ ಬಿಟ್ಟಿದ್ದು ಇರುತ್ತದೆ. ನನ್ನ ತಂಗಿಗೆ ನ್ಯಾಯ ಕೊಡಿಸುವುದಕ್ಕಾಗಿ ನಾನು ಹಲವಾರು ಬಾರಿ ಅವರ ಕುಟುಂಬದವರಿಗೆ ವಿನಂತಿಸಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ 26/10/2022 ರಂದು 07.30 ಗಂಟೆಯ ಸಮಯದಲ್ಲಿ ನಾನು ಹತ್ತಿಕುಣಿ ಕ್ರಾಸಿನಲ್ಲಿರುವಾಗ ಕಾರ ನಂಬರ ಕೆಎ-33 ಎಮ್-9577 ನೇದ್ದರಲ್ಲಿ ಅಸ್ಲಂ ತಂದೆ ಪಾಷಾ, ಪಾಷಾ ತಂದೆ ಮುಸ್ತಫ, ಶಕೀಲ ತಂದೆ ಮುಸ್ತಫ, ಮತೀನ ತಂದೆ ಮುಸ್ತಫ, ಯುನೂಸ ತಂದೆ ಮುಸ್ತಫ ಮತ್ತು ಅವರ ಅಳಿಯ ವಸೀಮ ಎಂಬುವವರು ಬಂದವರೆ ನನ್ನ ಹತ್ತಿರ ಕಾರ ನಿಲ್ಲಿಸಿ ಸಿರೀನ್ ಬೇಗಂ ಇವಳ ವಿಷಯದಲ್ಲಿ ನಿನೇಕೆ ಅಡ್ಡ ಬರುತ್ತೀಯಾ ಮಗನೇ ಅಂತಾ ಹಲ್ಲೆ ಮಾಡಿ ಜಗಳ ತೆಗೆದು ಅಸ್ಲಾಂ ಎಂಬುವವನು ಸೈಕಲ್ ಚೈನ್ನಿಂದ ನನ್ನ ಕುತ್ತಿಗೆ ಎಡಭಾಗಕ್ಕೆ, ಮೂಗಿಗೆ ಎಡಕಪಾಳಕ್ಕೆ ಬಾಯಿಗೆ ಹೊಡೆದು ರಕ್ತಗಾಯಪಡಿಸಿದ್ದು, ವಸೀಮ ಎಂಬುವವನು ನನ್ನ ಕುತ್ತಿಗೆ ಹಿಡಿದ್ದು ಜೋರಾಗಿ ಒತ್ತಿದ್ದು, ಅಲ್ಲದೇ ನನ್ನಲ್ಲಿರುವ ಮೋಬೈಲ್ ಪೋನ್ ಕಸಿದುಕೊಂಡಿದ್ದು ಇನ್ನುಳಿದವರು ಜೋರಾಗಿ ದಬ್ಬಿ ನೆಲಕ್ಕೆ ಕೆಡವಿ ಈ ಸೂಳೆ ಮಗನದು ಬಹಳ ಆಗಿದೆ ಇವತ್ತು ಜೀವಂತ ಬಿಡುವುದು ಬೇಡ ಅಂತಾ ಕೈಗಳಿಂದ ಮೈಗೆಲ್ಲ ಹೊಡೆದು ಕಾಲುಗಳಿಂದ ಒದ್ದು ಗುಪ್ತಗಾಯಪಡಿಸಿದ್ದು ಆಗ ನಾನು ಚೀರಾಡುವುದನ್ನು ನೋಡಿದ ಆರೀಪ ಸಗರಿ ಮತ್ತು ಸೈಯ್ಯದ ದಾದಾಪೀರ ಎಂಬುವವರು ಬಂದು ಜಗಳ ಬಿಡಿಸಿದ್ದು ವಿಷಯ ತಿಳಿದು ನನ್ನ ಅಣ್ಣನಾದ ಸೈಯ್ಯದ ಶಹಾಬುದ್ದನ್ ಈತನು ಬಂದು ಗಾಯಗೊಂಡ ನನ್ನನ್ನು ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮ ಮನೆಯಲ್ಲಿ ವಿಚಾರ ಮಾಡಿ ನಾನು ಉಪಚಾರ ಹೊಂದಿ ಇಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ಸಲ್ಲಿಸಿದ್ದು ಇರುತ್ತದೆ. ಕಾರಣ ನನ್ನ ತಂಗಿಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾನು ಪ್ರಯತ್ನ ಮಾಡಿದ್ದಕ್ಕೆ ಮೇಲ್ಕಂಡ ಜನರೆಲ್ಲರೂ ನನ್ನ ಮೇಲೆ ಹಲ್ಲೆ ಮಾಡಿ ಸೈಕಲ್ ಚೈನ್ನಿಂದ ಹೊಡೆದರೆ ಸಾಯಬಹುದು ಅಂತಾ ಗೊತ್ತಿದ್ದರು ಸಹ ಸೈಕಲ್ ಚೈನನಿಂದ ಹೊಡೆದು ರಕ್ತಗಾಯಪಡಿಸಿ ಕುತ್ತಿಗೆ ಹಿಚುಕಿ ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಜೀವ ಬೆದರಿಕೆ ಹಾಕಿದ್ದು ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.115/2022 ಕಲಂ.143, 147, 323, 324, 308, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 49/2022 ಕಲಂ 279 ಐಪಿಸಿ: ಇಂದು ದಿನಾಂಕ 27/10/2022 ರಂದು 02-30 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಶಿವರಾಜ ತಂದೆ ನಾಗರೆಡ್ಡಿ ಪಾಟೀಲ್ ವಯ;50 ವರ್ಷ, ಜಾ;ಲಿಂಗಾಯತ್, ಉ;ಕಾರ್ ಮಾಲೀಕರು & ಚಾಲಕ, ಸಾ;ಗುರುಸುಣಗಿ, ತಾ;ವಡಗೇರಾ, ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಈ ಮೂಲಕ ದೂರು ಸಲ್ಲಿಸುವುದೇನೆಂದರೆ, ಇಂದು ದಿನಾಂಕ 27/10/2022 ರಂದು ಮದ್ಯಾಹ್ನ 01;20 ಪಿ.ಎಂ.ಕ್ಕೆ ನನ್ನ ಕೆಲಸದ ಮೇಲೆ ನನಗೆ ಸೇರಿದ ಹೊಂಡಾ ಕ್ರಿಯೇಟಾ ಕಾರ್ ನಂ.ಕೆಎ-33, ಎನ್-0274 ನೇದ್ದನ್ನು ನಡೆಸಿಕೊಂಡು ಯಾದಗಿರಿಯ ಡಿಗ್ರಿ ಕಾಲೇಜ್ ಕಡೆಯಿಂದ ಗಾಂಧಿಚೌಕ್ ಕಡೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಎಸ್.ಡಿ.ಎನ್. ಹೊಟೆಲ್ ಹತ್ತಿರ ಒಬ್ಬ ಸ್ಕೂಲ್ ಬಸ್ ಚಾಲಕನು ತನ್ನ ಬಸ್ಸನ್ನು ಡಿಗ್ರಿ ಕಾಲೇಜಿನ ಕಡೆಯಿಂದ ನಮ್ಮ ವಿರುದ್ದ ಮಾರ್ಗದಲ್ಲಿ ಚಲಿಸುತ್ತಿದ್ದು, ನಾನು ನೋಡುತ್ತಿದ್ದಂತೆ ನಾನು ಹೋಗುತ್ತಿದ್ದ ಮಾರ್ಗಕ್ಕೆ ವಿರುದ್ದವಾಗಿ ಶಾಲಾ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ನಾನು ಹೋಗುತ್ತಿದ್ದ ರಸ್ತೆಗೆ ಅಡ್ಡ ಬಂದು ನಾನು ನಡೆಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಾಗ ಅಪಘಾತವಾಗಿದ್ದು, ಸದರಿ ಅಪಘಾತದಲ್ಲಿ ನನಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ನನ್ನ ಕಾರಿಗೆ ಬಲಗಡೆ ಬಹಳ ಡ್ಯಾಮೇಜ್ ಆಗಿದ್ದು ಇರುತ್ತದೆ. ಈ ಅಪಘಾತವನ್ನು ಕಂಡು ನನಗೆ ಪರಿಚಯ ಇರುವ ಶ್ರೀ ಉದಯಪಾಟೀಲ್ ತಂದೆ ಸೂಗಣ್ಣಗೌಡ ಮಾಲಿ ಪಾಟೀಲ್ ಸಾ;ಯಾದಗಿರಿ ಹಾಗೂ ಮಲ್ಲಿಕಾಜರ್ುನ ತಂದೆ ಸೋಮಯ್ಯ ಗುಡಿಮಠ ಸಾ;ಗುರಸುಣಗಿ ಇವರುಗಳು ಬಂದು ನನಗೆ ವಿಚಾರಿಸಿರುತ್ತಾರೆ. ನನ್ನ ಕಾರಿಗೆ ಅಪಘಾತಪಡಿಸಿದ ಶಾಲಾ ಬಸ್ ಯಾದಗಿರಿ ಶಾರದಾ ಮೆಡಿಕಲ್ ಕಾಲೇಜ್ ಅಂತಾ ಇದ್ದು ಅದರ ನಂಬರ ನೋಡಲಾಗಿ ಕೆಎ-33, ಎ-9817 ನೇದ್ದು ಇರುತ್ತದೆ. ಅದರ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ತನ್ನ ಹೆಸರು ಸೋಮಪ್ಪ ತಂದೆ ಪಡದಪ್ಪ ಕಟ್ಟಿಮನಿ ಸಾ;ನಗನೂರ, ಹಾ;ವ;ಬಸವೇಶ್ವರ ನಗರ ಯಾದಗಿರಿ ಅಂತಾ ತಿಳಿಸಿರುತ್ತಾನೆ. ಸದರಿ ಶಾಲಾ ಬಸ್ಗೆ ಯಾವ ಕ್ಲೀನರ್ ಕೂಡ ಇದ್ದಿರುವುದಿಲ್ಲ. ಬಸ್ ಚಾಲಕನು ತಾನು ರಸ್ತೆಯ ವಿರುದ್ದ ದಿಕ್ಕಿನಲ್ಲಿ ಶಾಲಾ ಬಸನ್ನು ನಡೆಸಿಕೊಂಡು ಒಮ್ಮೊಲೆ ರಸ್ತೆಗೆ ವಿರುದ್ದ ದಿಕ್ಕಿಗೆ ಎಡಬದಿಗೆ ಟರ್ನ ಮಾಡುತ್ತಾ ನನ್ನ ರಸ್ತೆಗೆ ಬಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಬಸ್ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರನ್ನು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.49/2022 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: ಪಿ,ಎ,ಆರ್. ನಂ. 74/2022 ಕಲಂ 107 ಸಿ.ಆರ್.ಪಿ.ಸಿ.: ಮಾನ್ಯರವರಲ್ಲಿ ನಾನು ಹೊನ್ನಪ್ಪ ಎ ಎಸ್ ಐ ಶಹಾಪೂರ ಪೊಲೀಸ್ ಠಾಣೆ ಇದ್ದು ಇಂದು ದಿನಾಂಕ: 27/10/2022 ರಂದು 13-00 ಗಂಟೆಗೆ ಠಾಣೆಯಲ್ಲಿ ವರಧಿಯಾದ ಗುನ್ನೆ ನಂಬರ 183/2022 ಕಲಂ 341,323,504,506,114 ಸಂಗಡ 34 ಐಪಿಸಿ ಪ್ರಕರಣದ ತನಿಖೆ ಕುರಿತು ಘಟನಾ ಸ್ಥಳಕ್ಕೆ ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಬಂದ ಮಾಹಿತಿ ಏನಂದರೆ ಠಾಣೆಯಲ್ಲಿ ನಿನ್ನೆ ದಿನಾಂಕ 26/10/2022 ರಂದು ವರಧಿಯಾದ ಗುನ್ನೆ ನಂಬರ 182/2022 ಕಲಂ 143,147,448,323,504,506 ಸಂಗಡಿ 149 ಐಪಿಸಿ ಪ್ರತಿ ಗುನ್ನೆ ನಂಬರ 183/2022 ನೇದ್ದವಗಳು ಆಸ್ತಿ ವಿಷಯದಲ್ಲಿ ವರಧಿಯಾಗಿದ್ದು ಸದರಿ ಗುನ್ನೆ ಹಾಗು ಪ್ರತಿಗುನ್ನೆಗಳು ವರಧಿಯಾದಾಗಿನಿಂದ ಪಟ್ಟಣದಲ್ಲಿ ಎರಡು ಪಾಟರ್ಿಗಳಾಗಿದ್ದು ಪಟ್ಟಣದ ಮಹೀಂದರಾ ಟ್ರ್ಯಾಕ್ಟರ ಶೋ ರೂಮ ಹಾಗು ಶ್ರೀ ಶಿವ ಸಾಯಿ ಸೂಪರ್ ಬಜಾರ ಇವುಗಳ ಪಾಲುದಾರಿಕೆಯ ವಿಷಯದಲ್ಲಿ ಶಶಿಕಲಾ ಗಂಡ ಬಸವರಾಜಗೌಡ ಕುರಾಳ ಮತ್ತು ಭೀಮರಡ್ಡಿ ಮಲ್ಲಣಗೌಡ ಕುರಾಳ ಇವರ ಮದ್ಯ ಭಾರೀ ವೈಮನಸ್ಸು ಬೆಳೆದು ಪಟ್ಟಣದಲ್ಲಿ ಎರಡು ಪಾಟರ್ಿಗಳಾಗಿ ಎರಡು ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದು ಎರಡು ಪಾಟರ್ಿ ಜನರ ಮದ್ಯ ಗುನ್ನೆ ಹಾಗು ಪ್ರತಿ ಗುನ್ನೆಗಳು ವರಧಿಯಾಗಿದ್ದು ಈ ವಿಷಯದಲ್ಲಿ ಯಾವ ಸಂದರ್ಭದಲ್ಲಾದರೂ ಗಲಾಟೆಯಾಗಿ ಸಾರ್ವಜನಿಕ ಆಸ್ತಿಗೆ ದಕ್ಕೆಯಾಗುವದಲ್ಲದೇ ಜೀವ ಹಾನಿ ಆಗುವ ಸಂಭವವಿರುತ್ತದೆ ಅಂತ ತಿಳಿದು ಬಂದ ಬಾತ್ಮಿ ಮೇರೆಗೆ ನಾನು ಮರಳಿ ಠಾಣೆಗೆ 16.00 ಗಂಟೆಗೆ ಬಂದು ಒಂದನೇಯ ಪಾಟರ್ಿಯ 1] ಭೀಮರಡ್ಡಿ ತಂದೆ ಮಲ್ಲಣಗೌಡ ಕುರಾಳ ವ|| 52 ಜಾ|| ರಡ್ಡಿ ಉ|| ವ್ಯಾಪಾರ ಸಾ|| ಸೂಗುರು ಎನ್ ತಾ|| ಚಿತಾಪೂರ ಹಾ|| ಶಹಾಪೂರ 2] ರಾಜಶಂಕರ ತಂದೆ ನರಸರಡ್ಡಿ ದುಗನೂರ ವ|| 38 ಜಾ|| ರಡ್ಡಿ ಉ|| ವ್ಯಾಪಾರ ಸಾ|| ಬಸವೇಶ್ವರ ನಗರ ಶಹಾಪೂರ 3] ಸುರೇಶ ತಂದೆ ಚಂದ್ರಕಾಂತ ಜಕರೆಡ್ಡಿ ವ|| 34 ಜಾ|| ರಡ್ಡಿ ಉ|| ವ್ಯಾಪಾರ ಸಾ|| ಶಹಾಪೂರ ರವರ ವಿರುದ್ದ ಮುಂಜಾಗ್ರತಾ ಕ್ರಮದ ವರಧಿ ನಂಬರ 74/2022 ಕಲಂ 107 ಸಿ ಆರ್ ಪಿ ಸಿ ನೇದ್ದರ ಪ್ರಕಾರ ಕ್ರಮ ಜರುಗಿಸಿದ್ದು ಕಾರಣ ಮಾನ್ಯರವರು ಸದರಿ ಜನರನ್ನು ಕರೆಯಿಸಿ ಪಟ್ಟಣದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿ ಆರ್ ಪಿ ಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು ಮಾನ್ಯರವರಲ್ಲಿ ವಿನಂತಿ.
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 141/2022 ಕಲಂ: 279, 338 ಐಪಿಸಿ: ಇಂದು ದಿ: 27/10/2022 ರಂದು 07:30 ಪಿ. ಎಮ್ಕ್ಕೆ ಶ್ರೀ ಮಹ್ಮದ್ ತಂದೆ ಹುಸೇನ್ ಬಾಷಾ ಗಿರಣಿ ವ|| 31 ವರ್ಷ ಜಾ|| ಮಸ್ಲಿಂ ಉ|| ವಾಟರ್ ಸವರ್ಿಸಿಂಗ್ ಕೆಲಸ ಸಾ|| ಕಬಾಡಗೇರಾ ಸುರಪೂರ ಜಿ: ಯಾದಗಿರಿ ರವರು ಠಾಣೆಗೆ ಬಂದು ಕನ್ನಡದಲ್ಲಿ ಬರೆದ ಒಂದು ದೂರು ಅಜರ್ಿ ನೀಡಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನಾನು ಸುರಪೂರ ಪಟ್ಟಣದಲ್ಲಿ ಭಾರತ ಮೋಟರ್ಸ್ ಗ್ಯಾರೇಜ್ ಅಂತಾ ಅಂಗಡಿ ಇಟ್ಟುಕೊಂಡು ಉಪಜೀವನ ಸಾಗಿಸುತ್ತೇನೆ. ನನಗೆ 1) ಆಯೇಶಾ ಫಾಯಿಮಾ ವ|| 9 ವರ್ಷ, 2) ಎಮ್.ಡಿ. ಹಸನೇನ್ ವ|| 3 ವರ್ಷ, 3) ಜಿಶಾನ್ ವ|| 4 ತಿಂಗಳು ಹೀಗೆ ಒಟ್ಟು ಮೂರು ಜನ ಮಕ್ಕಳಿರುತ್ತಾರೆ. ಹೀಗಿದ್ದು ನನ್ನ ಹೆಂಡತಿ ಸಿಮಾಬಾನು ಇವಳು ಚಿಕ್ಕಪ್ಪನಾದ ಫಕೀರಸಾಬ್ ತಂದೆ ಲಾಲಅಹ್ಮದ್ ಗಿರಣಿ ಇವರಿಗೆ ಮಕ್ಕಳಿರದ ಕಾರಣ ಆಗಾಗ ನನ್ನ ಹೆಂಡತಿ, ಮಕ್ಕಳು ಆತನ ಮನೆಗೆ ಹೋಗಿ 2-3 ದಿವಸ ಇದ್ದು ನಂತರ ಮನೆಗೆ ಬರುತ್ತಿದ್ದರು. ಹೀಗಿದ್ದು ಈಗ ಎರಡು ದಿವಸಗಳಿಂದೆ ನನ್ನ ಹೆಂಡತಿ ಸಿಮಾಬಾನು ಇವಳು ನನ್ನ ಮೂರು ಜನ ಮಕ್ಕಳೊಂದಿಗೆ ತನ್ನ ಚಿಕ್ಕಪ್ಪ ಫಕೀರಸಾಬ್ ಗಿರಣಿ ಈತನ ಮನೆಗೆ ಹೋಗಿದ್ದರು. ನಿನ್ನೆ ದಿನಾಂಕ: 26/10/2022 ರಂದು ಮದ್ಯಾಹ್ನ 12:15 ಗಂಟೆ ಸುಮಾರಿಗೆ ನಾನು ನನ್ನ ಭಾರತ ಮೋಟರ್ಸ್ ಗ್ಯಾರೇಜ್ದಲ್ಲಿದ್ದಾಗ ನನ್ನ ಹೆಂಡತಿ ಸಿಮಾಬಾನು ಇವಳು ಪೋನ್ ಮಾಡಿ ನನಗೆ ತಿಳಿಸಿದ್ದೆನೆಂದರೆ, ನಾನು ನಮ್ಮ ಚಿಕ್ಕಪ್ಪನ ಮನೆಯ ಮುಂದಿನ ಗೇಟ್ ಹತ್ತಿರ ನಿಂತುಕೊಂಡಾಗ ನಮ್ಮ ಮಗನಾದ ಎಮ್.ಡಿ. ಹಸನೇನ್ ಈತನು ಮನೆಯ ಗೇಟ್ ಮುಂದುಗಡೆ ಆಟ ಆಡುತ್ತಿರುವಾಗ ಆಸರ ಮೋಹಲ್ಲಾ ಮೇಲಿನ ಓಣಿಯಿಂದ ಒಂದು ಕಾರ್ ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಚಿಕ್ಕಪ್ಪನ ಮನೆಯ ಮುಂದೆ ಪೂತರ್ಿ ಎಡಗಡೆ ಸೈಡಿನಲ್ಲಿ ಮನೆಯ ಗೇಟ್ ಮುಂದುಗಡೆ ಆಟವಾಡುತ್ತಿದ್ದ ನಮ್ಮ ಮಗ ಎಮ್.ಡಿ. ಹಸನೇನ್ ಈತನಿಗೆ ಜೋರಾಗಿ ಡಿಕ್ಕಿಪಡಿಸಿ ಕಾರ್ ಸಮೇತ ಅಲ್ಲೇ ನಿಂತಿದ್ದು, ಅಪಘಾತದಲ್ಲಿ ನಮ್ಮ ಮಗನಿಗೆ ಬಾಯಿಗೆ ಮತ್ತು ಗದ್ದಕ್ಕೆ ಬಾರೀ ರಕ್ತಗಾಯವಾಗಿದ್ದು ಮತ್ತು ಎರಡು ಕೈಗಳಿಗೆ, ಎದೆಗೆ ತರಚಿದ ಗಾಯಗಳಾಗಿದ್ದು ನಾನು ಮತ್ತು ಮನೆಯಲ್ಲಿದ್ದ ಚಿಕ್ಕಪ್ಪ ಫಕೀರಸಾಬ್ ಹಾಗೂ ಪಕ್ಕದ ಮನೆಯ ಆರೀಫ್ ಷಾ ಮಕಂದಾರ ಘಟನೆಯನ್ನು ನೋಡಿ ಕಾರ್ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಭೀಮಪ್ಪ ತಂದೆ ಶರಣಪ್ಪ ಸಾ|| ಯಲಿಗಾರ ಓಣಿ ತಿಮ್ಮಾಪೂರ ಅಂತಾ ತಿಳಿಸಿದ್ದು ಕಾರ್ ನೋಡಲಾಗಿ ಕೀಯಾ ಕಂಪನಿಯ ಕಾರ್ ನಂ. ಕೆಎ-33. ಎಮ್-9445 ಅಂತಾ ಇರುತ್ತದೆ. ಈ ಘಟನೆಯು ಮದ್ಯಾಹ್ನ 12 ಗಂಟೆ ಸುಮಾರಿಗೆ ಜರುಗಿದ್ದು ಇರುತ್ತದೆ. ಕೂಡಲೆ ಬರುವಂತೆ ತಿಳಸಿದ್ದರಿಂದ ನಾನು ಸ್ಥಳಕ್ಕೆ ಬಂದು ನೋಡಲಾಗಿ ಈ ಮೇಲಿನಂತೆ ಘಟನೆ ಜರುಗಿದ್ದು ಅಪಘಾತದಲ್ಲಿ ನನ್ನ ಮಗನಿಗೆ ಈ ಮೇಲಿನಂತೆ ಬಾರಿ ಮತ್ತು ತರಚಿದ ಗಾಯಗಳು ಆಗಿದ್ದು ಇರುತ್ತದೆ. ನಂತರ ನಾವು ಮನೆಯವರು ನನ್ನ ಮಗನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ಸೇರಿಕೆ ಮಾಡಿ, ನಂತರ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಯುನೈಟೆಡ್ ಆಸ್ಪತ್ರೆ ಕಲಬುರಗಿಗೆ ಸೇರಿಸಿ ಈಗ ತಡವಾಗಿ ಬಂದು ಈ ದೂರನ್ನು ಸಲ್ಲಿಸುತ್ತಿದ್ದೇನೆ. ಕಾರಣ ಕಾರ್ ನಂ. ಕೆಎ-33. ಎಮ್-9445 ನೇದ್ದರ ಚಾಲಕ ಭೀಮಪ್ಪ ತಂದೆ ಶರಣಪ್ಪ ಸಾ|| ಸುರಪೂರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.141/2022 ಕಲಂ:279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 156/2022 ಕಲಂ: 143,147,148,323,324,504,506 ಸಂ.149 ಐಪಿಸಿ: ಹೊಲದ ಬಾಂದಾರಿ ವಿಷಯದಲ್ಲಿ ಈ ಪ್ರಕರಣದಲ್ಲಿ ಆರೋಪಿತರೆಲ್ಲರೂ ಕೂಡಿ ಒಂದು ಅಕ್ರಮಕೂಟವನ್ನು ಕಟ್ಟಿಕೊಂಡು ಬಂದವರೆ ಈ ಕೇಸಿನ ಫಿಯರ್ಾದಿ ಮತ್ತು ಆತನ ಹೆಂಡತಿ, ಮಗನೊಂದಿಗೆ ಜಗಳ ತೆಗೆದು, ಅವಾಚ್ಯವಾಗಿ ಬೈದು, ಕೈಯಿಂದ ಮತ್ತು ಬಡಿಗೆಗಳಿಂದ ಹೊಡೆಬಡೆ ಮಾಡಿ ರಕ್ತ ಮತ್ತು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿ ಹೋಗಿರುವ ಬಗ್ಗೆ ದೂರು.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 157/2022 ಕಲಂ: 323,324,504,506 ಸಂ.34 ಐಪಿಸಿ: ಹೊಲದ ಬಾಂದಾರಿ ವಿಷಯದಲ್ಲಿ ಈ ಪ್ರಕರಣದಲ್ಲಿ ಆರೋಪಿತರೆಲ್ಲರೂ ಕೂಡಿ ಫಿಯರ್ಾದಿಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡುತ್ತಿರುವಾಗ ಜಗಳ ಸಪ್ಪಳ ಕೇಳಿ ಫಿಯರ್ಾದಿಯ ಮಕ್ಕಳು ಜಗಳ ಬಿಡಿಸಲು ಹೋದಾಗ ಆರೋಪಿತರು ಅವರಿಗೂ ಸಹ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಹೋಗಿರುವ ಬಗ್ಗೆ ದೂರು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 122/2022 ಕಲಂ 279, 304(ಎ) ಐಪಿಸಿ: ಇಂದು ದಿನಾಂಕ:27/10/2022 ರಂದು ಸಾಯಂಕಾಲ ಉದಯಕುಮಾರ ತಂದೆ ಭೀಮರಾಯ ಕಿಣಕೇರಿ ಸಾ:ಖಾನಾಪೂರ ಈತನು ಖಾನಾಪೂರ ಗ್ರಾಮದ ಸುತ್ತಮುತ್ತ ತನ್ನ ಟಂ ಟಂ ಅಟೋದಿಂದ ಪ್ರಯಾಣಿಕರನ್ನು ಬಾಡಿಗೆಗೆ ಸಾಗಿಸಿ, ಸಾಯಂಕಾಲ ತನ್ನ ಹೆಂಡತಿ ತವರೂರಾದ ಯಾದಗಿರಿಯ ಗಾಂಧಿನಗರಕ್ಕೆ ಹೋಗಬೇಕೆಂದು ತಾನು ಒಬ್ಬನೆ ತನ್ನ ಟಂ ಟಂ ಅಟೋ ನಂ. ಕೆಎ 33/4295 ನೇದನ್ನು ಚಲಾಯಿಸಿಕೊಂಡು ಯಾದಗಿರಿಗೆ ಹೋಗುತ್ತಿದ್ದಾಗ ಯಾದಗಿರಿ-ಶಹಾಪೂರ ಮೇನ ರೋಡ ಮನಗನಾಳ ಮಸೀದಿ ಸಮೀಪ ಸಾಯಂಕಾಲ 7-15 ಗಂಟೆ ಸುಮಾರಿಗೆ ಸದರಿ ಉದಯಕುಮಾರನು ತನ್ನ ಟಂ ಟಂ ಅಟೋವನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಟಂ ಟಂ ಅನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಲ್ಟಿ ಮಾಡಿಕೊಂಡು ಬಿದ್ದಿದ್ದರಿಂದ ಟಂ ಟಂ ದ ಬಾಡಿ ಅವನ ಎಡಗಡೆ ಮೆಲಕಿನ ಮೇಲೆ ಬಿದ್ದು, ಮೆಲಕಿಗೆ ಮತ್ತು ಅಲ್ಲಲ್ಲಿ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ಫಿರ್ಯಾಧಿದಾರರು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 122/2022 ಕಲಂ:279, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 157/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 27/10/2022 ರಂದು 7.10 ಪಿಎಮ್ ಕ್ಕೆ ಸರಕಾರಿ ಆಸ್ಪತ್ರೆ ಕೆಂಭಾವಿಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಎಮ್.ಎಲ್.ಸಿ ವಿಚಾರಣೆ ಕುರಿತು ಠಾಣೆಯ ಸುಭಾಷ್ಚಂದ್ರ ಹೆಚ್.ಸಿ 08 ರವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ವಿಚಾರಿಸಲಾಗಿ ಗಾಯಾಳುಗಳು ಭಾರೀ ಸ್ವರೂಪದ ಗಾಯಗಳಾಗಿ ಮಾತನಾಡದ ಸ್ಥಿತಿಯಲ್ಲಿದ್ದುದರಿಂದ ಗಾಯಾಳು ಸಂತೋಷನ ತಂದೆಯಾದ ಮಡಿವಾಳಪ್ಪ ತಂದೆ ಬಸಪ್ಪ ಅಗಸರ ವ|| 45 ಜಾ|| ಅಗಸರ ಉ|| ಕೂಲಿ ಸಾ|| ಯಾಳಗಿ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡು ಹೆಚ್.ಸಿ 08 ರವರು ಮರಳಿ ಠಾಣೆಗೆ 8.45 ಪಿಎಂ ಕ್ಕೆ ಬಂದು ಹೇಳಿಕೆ ನೀಡಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ, ಇಂದು ದಿನಾಂಕ 27/10/2022 ರಂದು 5.30 ಪಿಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನಾದ ಸಂತೋಷ ತಂದೆ ಮಡಿವಾಳಪ್ಪ ಅಗಸರ ಸಾ|| ಯಾಳಗಿ ಈತನು ನಮ್ಮ ಸೈಕಲ್ ಮೋಟಾರ ನಂ ಕೆಎ 33 ಇಎ 3407 ನೇದ್ದನ್ನು ತೆಗೆದುಕೊಂಡು ಕೆಂಭಾವಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಸೈಕಲ್ ಮೋಟಾರ ಚಾಲೂವ್ ಮಾಡಿಕೊಂಡು ಕೆಂಭಾವಿ ಕಡೆಗೆ ಹೋಗಿದ್ದನು. ನಂತರ 6.35 ಪಿಎಂ ಸುಮಾರಿಗೆ ನಮ್ಮೂರ ಆಕಾಶ ತಂದೆ ಬಸವರಾಜ ಕವಿತಾಳ ಮತ್ತು ಶರಣು ಹೆಳವರ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಕೆಂಭಾವಿ ಯಾಳಗಿ ರಸ್ತೆಯ ಮೇಲೆ ಕೆಂಭಾವಿ ಕೆಇಬಿ ಹತ್ತಿರದ ಹೀರೋ ಶೋರೂಮ್ ಹತ್ತಿರ ನಿಮ್ಮ ಮಗನಾದ ಸಂತೋಷನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದು ಎದುರಿನಿಂದ ಇನ್ನೊಬ್ಬ ಸೈಕಲ್ ಮೋಟಾರ ನಂ ಕೆಎ 33 ಎಕ್ಸ್ 5138 ನೇದ್ದರ ಚಾಲಕನಾದ ಗುರುರಾಜ ಕೊರಮ ಈತನು ಕೂಡಾ ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದು ಸಂತೋಷ ಮತ್ತು ಗುರುರಾಜ ಇಬ್ಬರೂ ತಮ್ಮ ಸೈಕಲ್ ಮೋಟಾರಗಳನ್ನು ಮುಖಾಮುಖಿ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಸಂತೋಷ ಮತ್ತು ಗುರುರಾಜ ಇಬ್ಬರಿಗೂ ಭಾರೀ ಸ್ವರೂಪದ ಗಾಯಗಳಾಗಿದ್ದು ಇಬ್ಬರಿಗೂ 108 ಅಂಬುಲೆನ್ಸ್ ವಾಹನದಲ್ಲಿ ಹಾಕಿಕೊಂಡು ಕೆಂಭಾವಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಅಲ್ಲಿಗೆ ಬನ್ನಿರಿ ಅಂತಾ ತಿಳಿಸಿದ್ದರಿಂದ ನಾನು ತಕ್ಷಣ ಕೆಂಭಾವಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗನಾದ ಸಂತೋಷನಿಗೆ ತಲೆಯ ಮುಂಭಾಗದಲ್ಲಿ ಹಣೆಗೆ ಎರಡು ಕಡೆಗೆ ಭಾರೀ ಸ್ವರೂಪದ ರಕ್ತಗಾಯ ಮತ್ತು ಬಲಗೈಗೆ, ಬಲಗಾಲಿಗೆ ತರಚಿದ ಗಾಯ, ಗುಪ್ತಗಾಯವಾಗಿದ್ದು ಕಂಡು ಬಂದಿದ್ದು, ಇನ್ನೊಬ್ಬ ಗಾಯಾಳುವಾದ ಗುರುರಾಜನಿಗೆ ನೋಡಲಾಗಿ ಎರಡೂ ತುಟಿಗಳಿಗೆ ರಕ್ತಗಾಯವಾಗಿದ್ದು ತಲೆಗೆ ಭಾರೀ ಒಳಪೆಟ್ಟು ಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದುದು ಕಂಡು ಬಂದಿದ್ದು ಗುರುರಾಜನು ಮಾತನಾಡದ ಸ್ಥಿತಿಯಲ್ಲಿದ್ದುದರಿಂದ ವೈದ್ಯಾಧಿಕಾರಿಗಳ ಸಲಹೆಯಂತೆ ಗುರುರಾಜನಿಗೆ ವಿಜಯಪೂರ ಭಾಗ್ಯವಂತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಗುರುರಾಜನ ಪೂರ್ಣ ಹೆಸರು ಕೇಳಲಾಗಿ ಗುರುರಾಜ ತಂದೆ ದ್ಯಾವಪ್ಪ ಕೊರಮ ವ|| 31ವರ್ಷ ಜಾ|| ಕೊರಮ ಉ|| ಕೂದಲು ವ್ಯಾಪಾರ ಸಾ|| ಕೆಂಭಾವಿ ಅಂತಾ ತಿಳಿದು ಬಂದಿದ್ದು, ನನ್ನ ಮಗನಾದ ಸಂತೋಷ ತಂದೆ ಮಡಿವಾಳಪ್ಪ ಅಗಸರ ವ|| 16 ಜಾ|| ಅಗಸರ ಉ|| ವಿದ್ಯಾಥರ್ಿ ಸಾ|| ಯಾಳಗಿ ಈತನಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ನನ್ನ ಮಗನಾದ ಸಂತೋಷನು ಸೈಕಲ್ ಮೋಟಾರ ನಂ ಕೆಎ 33 ಇಎ 3407 ನೆದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಎದುರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿರುವ ಸೈಕಲ್ ಮೋಟಾರ ನಂ ಕೆಎ 33 ಎಕ್ಸ್ 5138 ನೇದ್ದರ ಚಾಲಕನಾದ ಗುರುರಾಜನ ಸೈಕಲ್ ಮೋಟಾರಗೆ ಮುಖಾಮುಖಿ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಇಬ್ಬರೂ ಸೈಕಲ್ ಮೋಟಾರ ಚಾಲಕರಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು ಇಬ್ಬರೂ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 157/2022 ಕಲಂ 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.