ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-11-2021

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ: 72/2021 ಕಲಂ: 354, 504, 506, 307 ಸಂಗಡ 34 ಐಪಿಸಿ : ಇಂದು ದಿನಾಂಕ:27.11.2021 ರಂದು 5:00 ಪಿಎಮ್ಕ್ಕೆ ಪಿರ್ಯಾಧಿ ಶ್ರೀಮತಿ ಲಕ್ಷ್ಮೀಬಾಯಿ ತಂದೆ ನಿಂಗಯ್ಯ ಗುತ್ತೇದಾರ ವಯಸ್ಸು:33 ವರ್ಷ ಉದ್ಯೋಗ: ಮನೆಕೆಲಸ ಜಾ:ಹಿಂದೂ ಇಳಿಗೇರ ಸಾ:ಜುಮಾಲಪೂರ ತಾ:ಹುಣಸಗಿ ಜಿಲ್ಲೆ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರು ಅಜರ್ಿಯ ಸಾರಾಂಶವೆನೇಂದರೆ ನಾನು ನನ್ನ ಮಗನೊಂದಿಗೆ ನನ್ನ ತಂದೆ ತಾಯಿ ಮನೆಯಲ್ಲಿ ಉಪಜೀವನ ಮಾಡುತ್ತೇನೆ. ಮೊಬೈಲ್ನಲ್ಲಿ ನನ್ನ ಭಾವ ಚಿತ್ರಗಳನ್ನು ಅಶ್ಲೀಲವಾಗಿ ಮುದ್ರಿಸಿ ಸಾರ್ವಜನಿಕವಾಗಿ ಸಾಕಷ್ಟು ಜನರಿಗೆ ಅವುಗಳನ್ನು ರವಾನಿಸಿ ನನ್ನನ್ನು ಅವಮಾನಿಸಿ ಅವಾಚ್ಯ ಶಬ್ದಗಳಿಂದ ಬೈದು ಹಾಗೂ ನನ್ನನ್ನು ಸುಮಾರು ದಿನಗಳಿಂದ ಲೈಂಗಿಕವಾಗಿ ಬಳಸಿಕೊಂಡು ಜೀವ ಬೆದರಿಕೆ ಹಾಕಿ ಸೀರೆ ಸೆರಗೂ ಮತ್ತು ಕೂದಲು ಹಿಡಿದು ಜಗ್ಗಾಡಿ ಕೊಲೆ ಮಾಡಲು ಯತ್ನಿಸಿದವರ ವಿರುದ್ದ ಕ್ರಮ ಕೈಗೊಳ್ಳಲು ದೂರು. ನಾನು ದಿನಾಂಕ:25.11.2021 ರಂದು ಸಮಯ ರಾತ್ರಿ 7:30 ನಿ.ಕ್ಕೆ. ನನ್ನ ತಂದೆ-ತಾಯಿಯ ಮನೆಯಲ್ಲಿದ್ದಾಗ 1) ಗದ್ದೆಪ್ಪ ತಂದೆ ಬಸಪ್ಪ ಗುಜಲರ್ ಹಾಗೂ ಇನ್ನಿತರರು ಕೂಡಿಕೊಂಡು ಬಂದು ಹೇಳಿದ್ದೆನೆಂದರೆ, ಏನಲೇ ಬೊಸುಡಿ ಸೂಳಿ ನನ್ನ ನಿನ್ನ ಅನೈತಿಕ ಸಂಬಂಧದ ಬಗ್ಗೆ ಅಶ್ಲೀಲವಾಗಿ ಅನೇಕ ಭಾವಚಿತ್ರಗಳನ್ನು ಸಾಕಷ್ಟು ಜನರ ಮೊಬೈಲ್ಗಳಿಗೆ ಬಿಟ್ಟಿದ್ದೇನೆ. ನೀನು ಏನು ಕಿಸಿತಿ ಕಿಸಿ ಸೂಳಿ ಅಂದವನೇ ನನ್ನ ಸೀರೆ ಸೆರಗು ಹಿಡಿದು ಕೂದಲು ಹಿಡಿದು ದರ ದರನೆ ಹೊರಗಡೆ ಎಳೆದುಕೊಂಡು ಬಂದು ನೆಲಕ್ಕೆ ಕೆಡವಿ ಸೀರೆ ಸೆರಗಿನಿಂದ ನನ್ನ ಕುತ್ತಿಗೆಗೆ ಉರುಲು ಹಾಕಿ ಸಾಯಿಸಲು ಪ್ರಯತ್ನಿಸುತ್ತಿದ್ದನು. ಆಗ ನನ್ನ ತಂದೆ ತಾಯಿ ಹಾಗೂ ತಮ್ಮನು ಬಂದು ಜಗಳ ಬಿಡಿಸಿಕೊಂಡರು. ಈ ರೀತಿಯಾಗಿ ನನ್ನ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟು ನನ್ನನ್ನು ಸಾಯುವ ಸ್ಥಿತಿಗೆ ತಂದಹ ಇವರುಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಂಡು ನನಗೆ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ಈ ದೂರು ಸಲ್ಲಿಸುತ್ತಿದ್ದೇನೆ ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.72/2021 ಕಲಂ: 354, 504, 506, 307 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 160/2021 ಕಲಂ: ಕಲಂ 87 ಕೆ.ಪಿ. ಆ್ಯಕ್ಟ ತಿದ್ದುಪಡಿ 2021 : ಮಾನ್ಯರವರಲ್ಲಿ ಮೇಲ್ಕಂಡ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ ಇಂದು ದಿನಾಂಕ: 27/11/2021 ರಂದು 10-00 ಪಿ.ಎಮ್ ಕ್ಕೆ ಶ್ರೀ ಸುರೇಶಕುಮಾರ ಪಿ.ಎಸ್.ಐ.(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ಜಪ್ತಿ ಪಂಚೆನಾಮೆ, 4 ಜನ ಆರೋಪಿತರು ಮತ್ತು ಮುದ್ದೆಮಾಲು ಹಾಗೂ ಒಂದು ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 27/11/2021 ರಂದು ರಾತ್ರಿ 7-30 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ನನಗೆ ಒಂದು ಮೊಬೈಲ್ ನಂ.9606334664.ನೆದ್ದರಿಂದ ಮಾಹಿತಿ ಬಂದಿದ್ದೆನೆಂದರೆ ಲಿಂಗೆರಿ ತಾಂಡದ ಸೀಮಾಂತರದಲ್ಲಿ ಬರುವ ಹೊಲದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಎಲೇಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದಾರೆೆ ಅಂತಾ ಮಾಹಿತಿ ಬಂದಿದ್ದರಿಂದ ಅಲ್ಲಿಗೆ ಹೋಗಿ ದಾಳಿ ಮಾಡುವ ಸಲುವಾಗಿ ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಸೈಯದ ಅಲಿ ಎಚ್.ಸಿ ಶ್ರೀ ಪ್ರಭುಗೌಡ ಪಿ.ಸಿ.361 ಶ್ರೀ ಭೀಮಪ್ಪ ಪಿ.ಸಿ.33. ಶ್ರೀ ಮೋನಪ್ಪಾ ಪಿಸಿ. 263, ಶ್ರೀ ಸಂತೊಷ ಪಿಸಿ-312,ಶ್ರೀಮೈಬೂಬ ಸಾಬ ಪಿ.ಸಿ.55 ಸಿಬ್ಬಂದಿಯವರಿಗೆ ದಾಳಿ ಮಾಡುವ ಮಾಹಿತಿ ತಿಳಿಸಿ 7.45 ಪಿ.ಎಮ್ ಕ್ಕೆ ಠಾಣೆಯಿಂದ ಲಿಂಗೆರಿ ಕಡೆಗೆ ಹೋರಟೇವು ರಾತ್ರಿ 8:10 ಕ್ಕೆ ಬಂದು ಹಾಜರಾಗಿ ಅಲ್ಲಿ ಇಬ್ಬರೂ ಪಂಚರನ್ನು ಕರೆಯಿಸಿ ಪಂಚರಾದ 1) ಶ್ರೀ ಮುಖೆಶ ತಂದೆ ಶಂಕರ ರಾಠೋಡ ವ:31 ವರ್ಷ ಜಾ:ಲಮಾಣಿ ಉ:ಒಕ್ಕಲುತನ ಸಾ:ಲಿಂಗೆರಿ ತಾಂಡ 2) ಶ್ರೀ ಈಶಪ್ಪ ತಂದೆ ಪಾಲ್ಯಾ ಚವ್ಹಾಣ ವ:40 ವರ್ಷ ಸಾ: ಲಿಂಗೆರಿ ತಾಂಡ ಇವರಿಗೆ ಕರೆಯಿಸಿ ಅವರಿಗೆ ಮತ್ತು ಸಿಬ್ಬಂದಿಯವರಿಗೆ ದಾಳಿ ಮಾಡುವ ಮಾಹಿತಿ ತಿಳಿಸಿ ಲಿಂಗೆರಿ ತಾಂಡದ ಊರ ಮುಂದಿನ ಹೊಲದಲ್ಲಿ ಹತ್ತಿರ ಹೊಗಿ ಅಲ್ಲಿಯೇ ಮರೆಯಲ್ಲಿ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೊಡಲಾಗಿ ಹೊಲದ ಇರುವ ಒಂದು ಗಿಡದ ಕೆಳಗಡೆ ಇದ್ದ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಚಿತ ಪಡಿಸಿಕೊಂಡು ಎಲ್ಲರೂ ಅವರನ್ನು ಜೀಪನ್ನು ನಿಲ್ಲಿಸಿದಾಗ ನಮ್ಮ ಜೀಪ ನೋಡಿ ಕೇಲವರು ನಮ್ಮನ್ನು ನೋಡಿ ಕತ್ತಲಲ್ಲಿ ಹೊಡಿಹೋಗಿರುತ್ತಾರೆ ಸಿಬ್ಬಂದಿಯವರ ಸಾಹಯದಿಂದ ಸುತ್ತುವರೆದು 4 ಜನರನ್ನು ಹಿಡಿದುಕೊಂಡೆವು, ಕೈಗೆ ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ ಅವರ ಹೆಸರು 1) ಶಂಕ್ರಪ್ಪ ತಂದೆ ರಾಮು ಚವ್ಹಾಣ ವ:42 ವರ್ಷ ಉ:ಒಕ್ಕಲುತನ 2) ಶೇಖಿಲ ಅಹ್ಮದ ತಂದೆ ನಜಿರ ಅಹ್ಮದ ರಜಿಬರ ವ:41 ವರ್ಷ ಜಾ:ಮುಸ್ಲಿಂ 3) ರವಿ ತಂದೆ ತುಕ್ಯಾ ರಾಠೋಡ ವ: 40 ವರ್ಷ ಸಾ: ಮಲ್ಹಾರ ತಾಂಡ 4) ಹಣಮಂತ ತಂದೆ ರಾಮು ಚವ್ಹಾಣ ವ: 30 ಸಾ:ಲಿಂಗೆರಿ ತಾಂಡ. ಅಂತಾ ತಿಳಿಸಿದರು.ಹಾಗೂ ನಮ್ಮ ವಶಕ್ಕೆ ಪಡೆದುಕೊಂಡ 4 ಜನರಿಂದ ಜೂಜಾಟ ಕಣದಲ್ಲಿ ಇಸ್ಪಿಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 6550/ರೂ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡೆವು, ಈ ಸವಿಸ್ತಾರವಾದ ಪಂಚನಾಮೆಯನ್ನು ಇಂದು ದಿನಾಂಕ 27-11-2021 ರಂದು 8-30 ಪಿ.ಎಮ ದಿಂದ 9-30 ಪಿ.ಎಮ್ ದವರೆಗೆ ಮಾಡಿ ಮರಳಿ ಠಾಣೆಗೆ 10:00 ಪಿಎಂ. ಕ್ಕೆ ಬಂದು ಜಪ್ತಿ ಪಂಚನಾಮೆ, 4 ಜನ ಆರೋಪಿತರು, ಮುದ್ದೆಮಾಲು ಮತ್ತು ವರದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜುರಪಡಿಸಿದ್ದು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ 160/2021 ಕಲಂ 87 ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 28-11-2021 10:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080