ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 28-12-2021
ಯಾದಗಿರಿ ಮಹಿಳಾ ಪೊಲೀಸ ಠಾಣೆ
ಗುನ್ನೆ ನಂ: 134/2021 ಕಲಂ. ಮಹಿಳಾಕಾಣೆ : ಇಂದು ದಿನಾಂಕ.27/12/2021 ರಂದು 6-30 ಪಿಎಂಕ್ಕೆ ಪಿರ್ಯಾದಿ ಶ್ರೀ ಹಣಮಂತ ತಂದೆ ಚನ್ನಪ್ಪ ಜಟ್ಟಿ ವ;62 ಜಾ; ಮಾದಿಗ ಉ; ಕೂಲಿಕೆಲಸ ಸಾ; ಅಮ್ಮಾಪಲ್ಲಿ ತಾ; ಗುರುಮಿಠಕಲ್ ಜಿ; ಯಾದಗಿರಿ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ದೊಡ್ಡ ಮಗಳು ಕಾಶಮ್ಮ ಗಂಡ ಸಾವಪ್ಪ ಮೂಕಿ ಇವಳಿಗೆ ಅನಪೂರ ಗ್ರಾಮದ ಸಾವಪ್ಪ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಮಗಳು ಕಾಶಮ್ಮ ಮತ್ತು ನನ್ನ ಅಳಿಯ ಮದುವೆಯಾದಾಗಿನಿಂದಲೂ ಚೆನ್ನಾಗಿ ಸಂಸಾರ ಮಾಡಿಕೊಂಡಿದ್ದು ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಹಿಗೇ ಸುಮಾರು ಎಂಟು ತಿಂಗಳುಗಳಿಂದ ನನ್ನ ಮಗಳಿಗೆ ಹುಷಾರಿರಲಿಲ್ಲ. ಎಲ್ಲಾ ಕಡೆ ಆಸ್ಪತ್ರೆಗೆ ತೋರಿಸಿದರೂ ಕೂಡಾ ಕಡಿಮೆಯಾಗಿರುವುದಿಲ್ಲ. ಹುಷಾರಿಲ್ಲದ್ದರಿಂದ ನನ್ನ ಮಗಳು ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಒಬ್ಬಳೇ ಮಾತನಾಡುತ್ತಾ, ಆಗಾಗ ಯಾರಿಗೂ ಹೇಳದೇ ಮನೆ ಬಿಟ್ಟು ಹೊರಗಡೆ ಹೋಗುವುದು ಮಾಡುತ್ತಿದ್ದಳು. ನಾವು ಅವಳಿಗೆ ಸ್ವಲ್ಪ ದಿನ ನಮ್ಮಲ್ಲಿ ಇಟ್ಟುಕೊಂಡು ಆಸ್ಪತ್ರೆಗೆ ತೋರಿಸಿದರೇ ಸರಿಯಾಗುತ್ತಾಳೆ ಅಂತಾ ನಮ್ಮ ಊರಿಗೆ ಕರೆದುಕೊಂಡು ಬಂದು ನಮ್ಮ ಮನೆಯಲ್ಲಿ ಇಟ್ಟುಕೊಂಡೆನು. ನಂತರ ನಾವು ಅಲ್ಲಲ್ಲಿ ಉಪಚಾರ ಕೊಡಿಸಿದ್ದರಿಂದ ನನ್ನ ಮಗಳು ಸ್ವಲ್ಪ ಗುಣವಾಗಿದ್ದು, ಮುಂಬೈದಲ್ಲಿರುವ ನನ್ನ ಹೆಂಡತಿ ಮತ್ತು ಮಗನ ಹತ್ತಿರ ಹೋಗಿ ಸ್ವಲ್ಪ ದಿನಗಳು ಇದ್ದು ಬರೋಣಾ ಅಂತಾ ಹೇಳುತ್ತಿದ್ದಳು. ಆಗ ನಾನು ಸ್ವಲ್ಪ ದಿನ ಆಗಲಿ ಹೋಗೋಣ ಅಂತಾ ಹೇಳುತ್ತಾ ಬಂದಿದ್ದೆನು. ಹಿಗೀದ್ದು ದಿನಾಂಕ; 23/12/2021 ರಂದು 9-30 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ಮಗಳು ಕಾಶಮ್ಮ ಇಬ್ಬರು ಮುಂಬೈ ಹೋದರಾಯಿತು ಅಂತಾ ನಮ್ಮ ಊರಿನಿಂದ ಯಾದಗಿರಿಯ ರೈಲ್ವೆ ನಿಲ್ದಾಣಕ್ಕೆ ಬಂದು ಊಟ ಮಾಡಿಕೊಂಡು ಬರೋಣಾ ಅಂತಾ ಇಬ್ಬರು ರೈಲ್ವೆ ನಿಲ್ದಾಣದಿಂದ ಹೊರಗಡೆ ಬಂದೆವು. ಕತ್ತಲು ಆಗಿದ್ದರಿಂದ ನನ್ನ ಮಗಳು ನನಗೆ, ನೀನು ಇಲ್ಲಿಯೇ ಇರು ನಾನು ಊಟ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ರೆಲ್ವೆ ನಿಲ್ದಾಣದ ಹೊರಗಡೆ ನಿಲ್ಲಿಸಿ ಹೋದಳು. ಬಹಳ ಸಮಯವಾದರು ನನ್ನ ಮಗಳು ವಾಪಾಸ್ಸು ಬರಲಿಲ್ಲ. ಆಗ ನಾನು ನನ್ನ ಅಳಿಯ ಶಿವಮೂತರ್ಿ ತಂದೆ ಹಣಮಂತ ರಾಮಸಮುದ್ರ ಈತನಿಗೆ ವಿಷಯ ತಿಳಿಸಿ ಕರೆಸಿಕೊಂಡಿದ್ದು ಇಬ್ಬರು ಕೂಡಿಕೊಂಡು ರಾತ್ರಿ ಪೂತರ್ಿ ಯಾದಗಿರಿ ರೈಲ್ವೆ ಸ್ಟೇಷನ್ ಏರಿಯಾ, ಬಸನಿಲ್ದಾಣ ಮತ್ತು ಇತರೆ ಕಡೆಗಳಲ್ಲಿ ಹುಡುಕಾಡಲು ನನ್ನ ಮಗಳು ಸಿಗಲಿಲ್ಲ. ನಂತರ ನಾನು ದಿನಾಂಕ; 24/12/2021 ರಂದು ಬೆಳೆಗ್ಗೆ 8-00 ಗಂಟೆ ಸುಮಾರಿಗೆ ನನ್ನ ಹೆಂಡತಿ ಮತ್ತು ಮಗನಿಗೆ ಹಾಗೂ ಅಳಿಯ ಸಾವಪ್ಪ ಈತನಿಗೆ ಫೋನ ಮಾಡಿ ನನ್ನ ಮಗಳು ಕಾಣೆಯಾದ ವಿಷಯ ತಿಳಿಸಿದೆನು. ನಂತರ ನನ್ನ ಹೆಂಡತಿ, ಮಗ, ಅಳಿಯ ಹಾಗೂ ನಮ್ಮ ಸಂಭಂದಿಕರು ಯಾದಗಿರಿಗೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಮತ್ತು ನಮ್ಮ ಎಲ್ಲಾ ಸಂಭಂಧಿಕರಲ್ಲಿ ವಿಚಾರಿಸಿದ್ದು ನನ್ನ ಮಗಳ ಬಗ್ಗೆ ತಿಳಿದು ಬಂದಿರುವುದಿಲ್ಲಾ. ನನ್ನ ಮಗಳಿಗೆ ಇಲ್ಲಿಯವರೆಗೆ ಹುಡುಕಾಡಲಾಗಿ ನನ್ನ ಮಗಳು ಕಾಶಮ್ಮ ಇವಳು ಸಿಗದೆ ಕಾಣೆಯಾಗಿರುತ್ತಾಳೆ. ಕಾಣೆಯಾದ ನನ್ನ ಮಗಳ ಚಹರೆ ಪಟ್ಟಿ,ಃ- ಸಾದಾ ಕಪ್ಪು ಮೈಬಣ್ಣ, ಉದ್ದನೆಯ ಮುಖ, ಎತ್ತರ 4 ಪೀಟ್ 6 ಇಂಚು ಎತ್ತರ, ಸಾದಾರಣ ಮೈಕಟ್ಟು, ಹಸಿರು ಬಣ್ಣದ ಸೀರೆ, ಹಸಿರು ಬಣ್ಣದ ಕುಪ್ಪಸ ಧರಿಸಿದ್ದು ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡುತ್ತಾಳೆ. ನನ್ನ ಮಗಳು ಕಾಶಮ್ಮ ಇವಳು ಊಟ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿದ್ದು, ಇಲ್ಲಿಯವರೆಗೆ ಬರದೇ ಕಾಣೆಯಾಗಿರುತ್ತಾಳೆ. ಕಾಣೆಯಾದ ನನ್ನ ಮಗಳು ಕಾಶಮ್ಮ ಇವಳಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.134/2021 ಕಲಂ.ಮಹಿಳೆ ಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ
ಗುನ್ನೆ ನಂ 114/2021 ಕಲಂ: 279, 338, 304 (ಂ) ಐಪಿಸಿ : ಇಂದು ದಿನಾಂಕ: 27/12/2021 ರಂದು 07.30 ಎಎಂಕ್ಕೆ ಪಿಯರ್ಾದಿ ಶ್ರೀಮತಿ. ಶರಣಮ್ಮ ಗಂಡ ಅಶೋಕ ದೇಸಾಯಿ ವಯಾ:42 ವರ್ಷ ಉ: ಮನೆಗೆಲಸ ಜಾ:ಲಿಂಗಾಯತ ಸಾ: ಹಂಗರಗಿ ತಾ: ಯಡ್ರಾಮಿ ಜಿ: ಕಲಬುರಗಿ ಇವರು ಠಾಣೆಗೆ ಬಂದು ಒಂದು ಅಜರ್ಿ ಹಾಜರ ಪಡೆಸಿದ್ದು ಅದರ ಸಾರಂಶ ಏನಂದರೆ, ನಿನ್ನೆ ದಿನಾಂಕ:26/12/2012 ರಂದು 04.30 ಪಿಎಂ ಸುಮಾರಿಗೆ ನನ್ನ ಗಂಡನಾದ ಅಶೋಕ ತಂದೆ ಬಸವರಾಜ ದೇಸಾಯಿ ವಯಾ:45 ಉ: ಒಕ್ಕಲುತನ ಜಾ: ಲಿಂಗಾಯತ ಸಾ: ಹಂಗರಗಿ ತಾ: ಯಡ್ರಾಮಿ ಇವರು ಹಳಿಸಗರ ಕ್ಕೆ ಹೋಗಿ ಬರುವದಾಗಿ ಮೋಟಾರ ಸೈಕಲ್ ನಂ: ಕೆಎ-33-ಎಲ್-8101 ನೇದ್ದರ ಮೇಲೆ ನಮ್ಮ ಅಣ್ಣನ ಮಗನಾದ ಶ್ರೀಶೈಲ್ ತಂದೆ ಮಲ್ಲಿಕಾಜರ್ುನ ಆಲೂರ ವಯಾ:21 ಸಾ: ಹಂಗರಗಿ ಈತನಿಗೆ ಹಿಂದೆ ಕೂಡಿಸಿಕೊಂಡು ಶಹಾಪೂರ ಹತ್ತಿರ ಇರುವ ಹಳಿಸಗರ ಗ್ರಾಮಕ್ಕೆ ಹೋಗಿದ್ದರು. ನಂತರ ಸಾಯಂಕಾಲ 06.15 ಪಿಎಂ ಸುಮಾರಿಗೆ ನಮ್ಮ ಅಳಿಯನ ಪೋನ ದಿಂದ ನನ್ನ ಮಗನಾದ ಸುನೀಲ ತಂದೆ ಅಶೋಕ ಈತನ ಪೋನಿಗೆ ಕರೆ ಮಾಡಿ ತಾವು ಮೋಟಾರ್ ಸೈಕಲ್ ಮೇಲೆ ಹಳಿಸಗರಕ್ಕೆ ಹೋಗುವಾಗ ಶಹಾಪೂರ-ಸಿಂದಗಿ ಮೇನ್ ರೋಡಿನ ರಬ್ಬನಳ್ಳಿ ಕ್ರಾಸ್ ಮತ್ತು ಕರಕಳ್ಳಿ ಕ್ರಾಸ್ ಮಧ್ಯದಲ್ಲಿ ಶಹಾಪೂರ ಕಡೆಯಿಂದ ಒಂದು ಕಾರ್ ನಂ: ಕೆಎ-33-ಎಂ-3903 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರೊಡಿನಲ್ಲಿನ ಜಂಪಗೆ ಕಟ್ ಹೋಡೆಯಲು ಹೋಗಿ ನಿಯಂತ್ರಣ ತಪ್ಪಿ ನಮ್ಮ ಮೋಟಾರ್ ಸೈಕಲಕ್ಕೆ ಡಿಕ್ಕಿ ಪಡೆಸಿದ್ದರ ಪರಿಣಾಮವಾಗಿ ಮೋಟಾರ್ ಸೈಕಲ್ ನಡೆಸುತ್ತಿದ್ದ ಮಾವನಾದ (ನನ್ನ ಗಂಡ) ಅಶೋಕ ತಂದೆ ಬಸವರಾಜ ದೇಸಾಯಿ ಇವರಿಗೆ ತೆಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿದ್ದು, ಬಲಗಾಲಿನ ತೋಡೆಯಿಂದ ಪಾದದ ವರೆಗೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿರುತ್ತದೆ. ಹಿಂದೆ ಕುಳತಿದ್ದ ತನಗೆ ಬಲಗೈ ರಟ್ಟೆಯ ಹತ್ತಿರ ಭಾರಿ ಗುಪ್ತಗಾಯ ಆಗಿ ತರಚಿದ ಗಾಯವಾಗಿರುತ್ತದೆ. ಮತ್ತು ಮೂಗಿನ ಹತ್ತಿರ ತರಚಿದ ಗಾಯವಾಗಿರುತ್ತದೆ. ಅಪಘಾತ ನೋಡಿದ ತಾಯಪ್ಪ ತಂದೆ ಯಂಕಪ್ಪ ಕೊಂಡಿಕಾರ ಜಾ: ಯಾದವ ಗೋಗಿ ಕೆ ಇವರು ಬಂದು ನಮಗೆ ಎಬ್ಬಸಿರುತ್ತಾರೆ. ಅಂತಾ ತಿಳಿಸಿದ ಕೂಡಲೆ ನಾನು ನನ್ನ ಮಕ್ಕಳಾದ ಸುನೀಲ ಮತ್ತು ವಿನೋದ ಹಾಗೂ ನಮ್ಮ ಅಳಿಯ (ಮಗಳ ಗಂಡ) ಷಣ್ಮೂಕ ತಂದೆ ಅಶೋಕ ಸಾತಿಹಾಳ ಹಾಗೂ ನಮ್ಮ ಮೈದುನ ಆನಂದ ತಂದೆ ಸಿದ್ದಣ್ಣ ದೇಸಾಯಿ ಎಲ್ಲರೂ ಕೂಡಿ ರಬ್ಬನಳ್ಳಿ ಹತ್ತಿರ ಬಂದಾಗ ನನ್ನ ಗಂಡನು ನಡೆಸಿದ ಮೋಟಾರ ಸೈಕಲ್ ನಂ: ಕೆಎ-33-ಎಲ್-8101 ನೇದ್ದು ಮತ್ತು ಅಪಘಾತ ಮಾಡಿದ ಕಾರ್ ನಂ: ಕೆಎ-33-ಎಂ-3903 ನೇದ್ದು ಸ್ಥಳದಲ್ಲಿ ಇದ್ದವು. ಯಾರೋ ಅಂಬೂಲೆನ್ಸಗೆ ಪೋನ ಮಾಡಿದ್ದರಿಂದ ನನ್ನ ಗಂಡನಿಗೆ ಮತ್ತು ನಮ್ಮ ಅಳಿಯನಿಗೆ ಶಹಾಪೂರ ಆಸ್ಪತ್ರೆಗೆ ಕಳುಹಿಸಿದ್ದರು, ನಂತರ ನಾವು ಶಹಾಪುರಕ್ಕೆ ಹೋಗಿ ನನ್ನ ಗಂಡನಿಗೆ ನೋಡಲಾಗಿ ಬಲಗಾಲಿನ ತೋಡಯಿಂದ ಪಾದದ ವರೆಗೆ ಭಾರಿ ರಕ್ತಗಾಯವಾಗಿ ಗುಪ್ತಗಾಯ ಪೆಟ್ಟುಗಳಾಗಿದ್ದವು, ತೆಲೆಯ ಹಿಂದೆ ಭಾರಿ ರಕ್ತಗಾಯವಾಗಿತ್ತು, ನಮ್ಮ ಅಳಿಯ ಶ್ರೀಶೈಲ್ ಇವನಿಗೆ ಬಲಗೈ ರಟ್ಟೆಯ ಹತ್ತಿರ ಭಾರಿ ಗುಪ್ತ ಪೆಟ್ಟಾಗಿ ತರಚಿದ ಗಾಯವಾಗಿದ್ದು, ಮೂಗಿನ ಹತ್ತಿರ ತರಚಿದ ಗಾಯವಾಗಿತ್ತು. ಕಾರ ಚಾಲಕನ ಬಗ್ಗೆ ವಿಚಾರಿಸಿದಾಗ ಆತನ ಹೆಸರು ರಮೇಶ ತಂದೆ ಪ್ರಭು ಸುರಪೂರ ಸಾ: ಕೋಡೆಕಲ್ ಅಂತಾ ತಿಳಿದು ಬಂದಿತು. ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ನನ್ನ ಗಂಡನಿಗೆ ಕಲಬುರಗಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನನ್ನ ಗಂಡನು ಪರತಾಬಾದ ಹತ್ತಿರ ಸುಮಾರು 09.00 ಪಿಎಂ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ. ನಮ್ಮ ಅಳಿಯನಿಗೆ ಕಾಮರಡ್ಡಿ ಆಸ್ಪತ್ರೆಗೆ ಕಳುಹಿಸಿ ನನ್ನ ಗಂಡನಾದ ಅಶೋಕ ತಂದೆ ಬಸವರಾಜ ದೇಸಾಯಿ ಇವರ ಶವವನ್ನು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತೇವೆ. ನಂತರ ಇಂದು ದಿನಾಂಕ:27/12/2021 ರಂದು ಬೆಳಿಗ್ಗೆ 07.30 ಎಎಂ ಕ್ಕೆ ಠಾಣೆಗೆ ಬಂದು ಈ ಅಜರ್ಿ ನೀಡಿದ್ದು ಇರುತ್ತದೆ.
ನನ್ನ ಗಂಡನಾದ ಅಶೋಕ ದೇಸಾಯಿ ಇವರು ನಡೆಸುತ್ತಿದ್ದ ಮೋಟಾರ ಸೈಕಲ ನಂ: ಕೆಎ-33-ಎಲ್-8101 ಕ್ಕೆ ಎದುರಿನಿಂದ ಕಾರ ನಂ: ಕೆಎ-33-ಎಂ-3903 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡೆಸಿದ್ದರಿಂದ ಈ ಘಟನೆ ಜರುಗಿದ್ದು ಕಾರಣ ಸದರಿ ಕಾರ ಚಾಲಕನಾದ ರಮೇಶ ತಂದೆ ಪ್ರಭು ಸುರಪೂರ ಸಾ: ಕೋಡೆಕಲ್ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿ ನೀಡಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 114/2021 ಕಲಂ: 279, 338, 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೇ ಕೈಕೊಂಡಿದ್ದು ಇರುತ್ತದೆ.
.
ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 68/2021 ಕಲಂ: 323, 324, 354, 504 ಸಂಗಡ 34 ಐಪಿಸಿ : ಇಂದು ದಿನಾಂಕ 27/12/2021 ರಂದು ಮದ್ಯಾಹ್ನ 1:00 ಪಿ.ಎಂ ಕ್ಕೆ ಪಿಯರ್ಾದಿ ಶ್ರೀ ಮೌಲಾಸಾಬ್ ತಂದೆ ಇಮಾಮ್ಸಾಬ್ ಶಿವಣಗಿ ವಯ :35 ವರ್ಷ, ಉ :ಒಕ್ಕಲುತನ, ಜಾ :ಮುಸ್ಲಿಂ, ಸಾ :ಯಣ್ಣಿವಡಗೇರಾ ತಾ :ಹುಣಸಗಿ ಜಿ :ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿಕೊಂಡು ಬಂದು ಪಿಯರ್ಾದಿಯನ್ನು ಹಾಜರು ಪಡಿಸಿದ್ದು ಸದರಿ ಪಿಯರ್ಾದಿಯ ಸಾರಾಂಶವೆನೆಂದರೆ ನನಗೆ ಮೂರು ಜನ ಮಕ್ಕಳಿದ್ದು, ಒಕ್ಕಲುತನ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದು, ನನ್ನದು 5 ವರ್ಷಗಳ ಹಿಂದೆ ನನ್ನೊದೊಂದು ಮಹಿಂದ್ರಾ ಟ್ರ್ಯಾಕ್ಟರ್ ಇದ್ದು, ಬಾಡಿಗೆ ಹೊಡೆಯುತ್ತಿದ್ದು, 5 ವರ್ಷಗಳ ಹಿಂದೆ ನಮ್ಮೂರ ಶಿವಪ್ಪ ತಂದೆ ನಿಂಗಪ್ಪ ಕತಬಿ ಸಾ :ಯಣ್ಣೀವಡಗೇರಾ ಇವರ 5 ಎಕರೆ ಹೊಲಕ್ಕೆ 22 ಗಂಟೆಗಳ ನೇಗಿಲು ಹೊಡೆದಿದ್ದು ಅದರ ಬಾಡಿಗೆ 8800/-ರೂ ಗಳ ಆಗಿದ್ದು, ಅದರಲ್ಲಿ 4000/- ರೂ ಗಳನ್ನು ಆಗಲೇ ಕೊಟ್ಟಿದ್ದು, ಉಳಿದ ಹಣ ಇಲ್ಲಿಯವರೆಗೆ ಕೊಡುತ್ತೇನೆ ಅಂತಾ ಹೇಳುತ್ತಾ ಬಂದಿದ್ದು, ನಾನು ದಿನಾಂಕ :24.12.2021 ರಂದು ಬೆಳಿಗ್ಗೆ 08 :30 ಗಂಟೆಯ ಸುಮಾರಿಗೆ ಯಣ್ಣಿವಡಗೇರಾ ಗ್ರಾಮದಲ್ಲಿ ನಾನು ನಮ್ಮ ಹೊಲಕ್ಕೆ ಹೋಗುವ ಸಮಯದಲ್ಲಿ ನಮ್ಮ ಮನೆಯ ಮುಂದಿನ ದಾರಿಯ ಮೇಲೆ ಶಿವಪ್ಪನು ಸಿಕ್ಕಿದ್ದು, ಶಿವಪ್ಪನಿಗೆ ಉಳಿದ ಬಾಡಿಗೆಯ 4800/- ರೂ ಹಣವನ್ನು ಕೊಡು ಅಂತಾ ಕೇಳಿದಾಗ ಶಿವಪ್ಪನು ಇನ್ನು ಎರಡು ದಿನ ತಡಿ ಲೆಕ್ಕ ಮಾಡಿ ಕೊಡುತ್ತೇನೆ ಅಂತಾ ಅಂದನು ಆಗ ಅಲ್ಲಿಯೇ ಇದ್ದ ಬಸಲಿಂಗಪ್ಪನು ಒಂದು ತಾಸಿಗೆ ನೇಗಿಲು ಹೊಡೆಯಲು 300 ರೂ ತಗೆದುಕೊಳ್ಳುತ್ತಾರೆ ನೀನು 400/- ರೂ ಅಂತಾ ಹೇಳುತ್ತಿದ್ದಿಯಾ ಅಂತಾ ಅಂದನು ಅದಕ್ಕೆ ನಾನು ಬಸಲಿಂಗಪ್ಪನಿಗೆ ನೀನೆಗೆನು ಗೊತ್ತಿದೆ ಹುಚ್ಚಿ ನೀನು ಸುಮ್ಮನಿರು ಅಂತಾ ಅಂದೇನು ಅದಕ್ಕೆ ಬಸಲಿಂಗಪ್ಪ ತಂದೆ ಗದ್ದೆಪ್ಪ ಆಶ್ಯಾಳ ಈತನು ಬೋಸುಡಿ ಮಗನ್ಯ ನನಗೆ ಹುಚಿ ಗಿಚ್ಚಿ ಅಂತಾ ಅಂತಿಯಾ ಬೋಸುಡಿ ಸುಳೆ ಮಗನೆ ಅಂತಾ ಅಂದು ಅಲ್ಲಿಯೇ ಬಿದ್ದಿದ್ದ ರಾಡಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಆಗ ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಇದ್ದ ನನ್ನ ಹೆಂಡತಿ ಜನ್ನತಿಬಿ ವ :30 ವರ್ಷ ರವರು ಬಿಡಿಸಿಕೊಳ್ಳಲು ಬಂದಾಗ ಈರಪ್ಪ ತಂದೆ ಗದ್ದೆಪ್ಪ ಆಶ್ಯಾಳ ಈತನು ನನ್ನ ಹೆಂಡತಿಯ ಬಲಗಡೆ ಪಕ್ಕಡಿಗೆ ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲದೆ ನನ್ನ ಹೆಂಡತಿಯ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದ್ದು ನಂತರ ಶಿವಪ್ಪ ತಂದೆ ನಿಂಗಪ್ಪ ತತಬೇರಿ ರವರು ಬಂದು ನನ್ನ ಕಪಾಳಕ್ಕೆ ಕೈಯಿಂದ ಹೊಡೆದಿದ್ದು ಆಗ ಅಲ್ಲಯೇ ಇದ್ದ ದೂಳಪ್ಪ ತತಬೇರಿ ಹಾಗೂ ಇತರರು ಬಿಡಿಸಿಕೊಂಡಿದ್ದು ಇರುತ್ತದೆ ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ನಾಲತವಾಡ ಸರಕಾರಿ ದವಾಖಾನೆಗೆ ಹೋಗಿದ್ದು ನಾನು ನಾಲತವಾಡ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದು ನನ್ನ ಹೆಂಡತಿಗೆ ಅಷ್ಟೆನು ಪೆಟ್ಟು ಆಗಿಲ್ಲವಾಗಿದ್ದರಿಂದ ನನ್ನ ಹೆಂಡತಿ ದವಾಖಾನೆಗೆ ತೋರಿಸಿಕೊಳ್ಳಲಿಲ್ಲ ನಂತರ ನಾನು ನಾಲತವಾಡದಿಂದ ಹೆಚ್ಚಿನ ಉಪಚಾರ ಕುರಿತು ಮುದ್ದೆಬಿಹಾಳ ಸರಕಾರಿ ಆಸ್ಪತ್ರೆಗೆ ತೋರಿಸಿಕೊಂಡು ನಂತರ ವಿಜಯಪೂರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತೋರಿಸಿಕೊಂಡು ಇಂದು ಇಲ್ಲಿಗೆ ಬಂದು ತಡವಾಗಿ ಪಿಯರ್ಾದಿಕೊಟ್ಟಿದ್ದು ಇರುತ್ತದೆ ಕಾರಣ ನನಗೆ ಹೊಡೆಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 68/2021 ಕಲಂ 323, 324, 354, 504, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ್ ಠಾಣೆ
ಗುನ್ನೆ ನಂ: 69/2021 ಕಲಂ: 323, 324, 354, 504,506 ಸಂಗಡ 34 ಐಪಿಸಿ : ಇಂದು ದಿನಾಂಕ 27/12/2021 ರಂದು ಮದ್ಯಾಹ್ನ 4:00 ಪಿ.ಎಂ ಕ್ಕೆ ಪಿಯರ್ಾದಿ ಅವ್ವಮ್ಮ ಗಂಡ ನಿಂಗಪ್ಪ ತತಬೇರಿ ವ : 55 ವರ್ಷ ಉ :ಮನೆಕೆಲಸ ಜಾ :ಹಿಂದು ಕುರಬರ ಸಾ : ಯಣ್ಣಿವಡಗೇರಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿಕೊಂಡು ಬಂದು ಪಿಯರ್ಾದಿಯನ್ನು ಹಾಜರು ಪಡಿಸಿದ್ದು ಸದರಿ ಪಿಯರ್ಾದಿಯ ಸಾರಾಂಶವೆನೆಂದರೆ ನನಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಇರುತ್ತಾಳೆ. ನಾನು ಮತ್ತು ನಮ್ಮ ಮಕ್ಕಳು ಈಗ ಸುಮಾರು 5-6 ವರ್ಷಗಳಿಂದ ನಮ್ಮೂರನ್ನು ಬಿಟ್ಟು ಮದಲಿಂಗನಾಳ ಗ್ರಾಮದಲ್ಲಿ ವಾಸವಾಗಿದ್ದು ದಿನಾಂಕ 24/12/2021 ರಂದು ಮುಂಜಾನೆ ನಾನು ಮತ್ತು ನನ್ನ ಮಗ ಶಿವಪ್ಪ ವರ್ಷ 32 ವರ್ಷ ಇಬ್ಬರು ಕೂಡಿ ನಮ್ಮ ತೊಗರಿ ಹೊಲದ ರಾಶಿ ಮಾಡಿಸುವ ಸಲುವಾಗಿ ಯಣ್ಣಿವಡಗೇರಾ ಗ್ರಾಮಕ್ಕೆ ಬಂದು ನಮ್ಮೂರ ನಮ್ಮ ಸಂಬಂದಿಕನಾದ ಬಸಲಿಂಗಪ್ಪನ ಮನೆಗೆ ಬಂದು ಬಸಲಿಂಗಪ್ಪನ ಮನೆಯ ಮುಂದೆ ಇರುವ ದಾರಿ ಮೇಲೆ ನಿಂತಾಗ 8 :30 ಎ.ಎಂ ಸುಮಾರಿಗೆ ಅಲ್ಲಿಗೆ ಬಂದ ಯಣ್ಣಿವಡಿಗೇರಿ ಗ್ರಾಮದ ಮೌಲಪ್ಪ ತಂದೆ ಇಮಾಮಸಾಬ ಹಾಗೂ ಅವನ ಹೆಂಡತಿ ಜನ್ನತಬಿ ಗಂಡ ಮೌಲಪ್ಪ ಇಬ್ಬರು ಅಲ್ಲಿಗೆ ಬಂದು ಅವರಲ್ಲಿಯ ಮೌಲಪ್ಪನು ನನ್ನ ಮಗ ಶಿವಪ್ಪನಿಗೆ ನೀವು ಈಗ ಐದು ವರ್ಷಗಳ ಹಿಂದೆ ನಿಮ್ಮ ಹೊಲ ಗಳೆಹೊಡಿಸಿಕೊಂಡ ಹಣ 4800/- ರೂ ಗಳನ್ನು ಇನ್ನು ಕೊಟ್ಟಿರುವದಿಲ್ಲ ಕೊಡರಿ ಅಂತಾ ಅಂದನು ಆಗ ನನ್ನ ಮಗ ಶಿವಪ್ಪನು ನಾವು ಆವಾಗಲೆ ಗಳೆ ಹೊಡೆದ ಹಣವನ್ನು ಕೊಟ್ಟಿರುತ್ತೆವೆ ಎರಡು ತಾಸು ನೆಗಲು ಹೊಡೆದ ಹಣವನ್ನು ಬಿಡಿಸಿಕೊಂಡಿರುತ್ತೆವೆ ಅಂತಾ ಅಂದನು. ಆಗ ಮೌಲಪ್ಪನು ಇಲ್ಲ ನೀವು ನೆಗಲಿ ಹೊಡೆದ ಹಣವನ್ನು ಕೊಟ್ಟಿರುವದಿಲ್ಲ ಇವತ್ತು ನೀವು ಹಣವನ್ನು ಕೊಟ್ಟ ಹೋಗಬೇಕು ಅಂತಾ ಅಂದನು. ಆಗ ನಾನು ಮೌಲಪ್ಪನಿಗೆ ಅಲ್ಲಪ ಯಾರದರು ನೆಗಿಲುಹೊಡೆದ ಹಣವನ್ನು 5 ವರ್ಷಗಳ ವರೆಗೆ ಇಟ್ಟುಕೊಳ್ಳುತ್ತಾರ ನಾವು ಆವಗಲೆ ನಿನಗೆ ನೇಗಿಲು ಹೊಡೆದ ಹಣವನ್ನು ಕೊಟ್ಟಿದ್ದು ಎರಡು ತಾಸು ನೇಗಿಲು ಹೊಡದ ಹಣವನ್ನು ಬಿಡಿಸಿಕೊಂಡಿರುತ್ತೇವೆ ಅಂತಾ ಅಂದೇನು. ಆಗ ಮೌಲಪ್ಪನು ಬೋಸುಡಿ ಸೂಳಿ ಹಣವನ್ನು ಕೊಡಲಾರದ ಕೊಟ್ಟಿನಿ ಅಂತಾ ಸುಳ್ಳು ಬೊಗಳಕತ್ತಿಯಾ ಅಂತಾ ಅಂದನು, ಆಗ ನನ್ನ ಮಗ ಶಿವಪ್ಪನು ಮೌಲಪ್ಪನಿಗೆ ಹೆಣ್ಣುಮಕ್ಕಳ ಜೊತೆ ಸರಿಯಾಗಿ ಮತಡಪಾ ಅಂತಾ ಅಂದಾಗ ಮೌಲಪ್ಪನು ನನ್ನ ಮಗ ಶಿವಪ್ಪನಿಗೆ ಬೋಸುಡಿ ಮಕ್ಕಳೆ ತಾಯಿ ಮಕ್ಕಳು ಇಬ್ಬರು ಸೇರಿ ನಾಟಕ ಮಾಡಕತ್ತಿರೇನು ಹಣ ಕೊಡು ಅಂದರ ಇಲ್ಲದ್ದೆಲ್ಲ ಮಾತನಾಡುತ್ತಿರೇನು ಅಂತಾ ಅಂದು ನನ್ನ ಮಗನಿಗೆ ಕೈಯಿಂದ ಕಪಾಳಕ್ಕೆ ಹೊಡೆದು ತೆಕ್ಕೆಕುಸ್ತಿ ಬಿದ್ದನು, ಮೌಲಪ್ಪನ ಹೆಂಡತಿ ಜನ್ನತಬಿ ಇವಳು ನನ್ನ ಮಗ ನೆಲಕ್ಕೆ ಬಿದ್ದಾಗ ಕಾಲಿನಿಂದ ನನ್ನ ಮಗನಿಗೆ ಒದಿಯತೊಡಗಿದಳು, ಆಗ ನಾನು ಬಿಡಿಸಿಕೊಳ್ಳಲು ಹೋದಾಗ ಮೌಲಪ್ಪನು ನನಗೆ ಕಾಲಿನಿಂದ ನನ್ನ ಹೊಟ್ಟೆಗೆ ಒದ್ದು ನನ್ನ ಸೀರೆ ಹಿಡಿದು ಎಳೆದು ಅವಮಾನ ಮಾಡಿದ್ದು ಜನ್ನತ ಬಿ ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ಡುಬ್ಬಕ್ಕೆ ಹೊಡೆದು ಒಳಪೆಟ್ಟು ಪಡಿಸಿದ್ದು ನಂತರ ಅಲ್ಲಿಗೆ ಬಂದ ರಾಜಸಾಬ ತಂದೆ ಇಮಾಮಸಾಬ ಈತನು ಬೋಸುಡಿ ಮಕ್ಕಳೆ ಇನ್ನೊಮ್ಮ ನಮ್ಮ ತಮ್ಮ ತಂಟೆಗೆ ಬಂದರೆ ನಿಮಗ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಆಗ ಅಲ್ಲಿಯೇ ಇದ್ದ ಬಸಪ್ಪ ಕಿದರ್ಿ, ದೇವಪ್ಪ ಆಶ್ಯಾಳ, ರವರು ಬಂದು ಬಿಡಿಸಿದ್ದು ಇರುತ್ತದೆ. ನಂತರ ನಾವು ನಮ್ಮ ಮನೆಗೆ ಹೋಗಿದ್ದು ನಾವು ಜಗಳದ ಬಗ್ಗೆ ನಮ್ಮ ಮನೆಯವರ ಜೊತೆ ವಿಚಾರ ಮಾಡಿಕೊಂಡು ಇಂದು ಬಂದು ಪಿಯರ್ಾದಿ ಕೊಟ್ಟಿದ್ದು ಇರುತ್ತದೆ ಆದ್ದರಿಂದ ನಮಗೆ ಹೊಡೆಬಡೆ ಮಾಡಿದವರ ಮೇಲೆ ಕೇಸು ಮಾಡಲು ಮಾನ್ಯರಲ್ಲಿ ವಿನಂತಿ. ಅಂತಾ ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 69/2021 ಕಲಂ 323, 324, 354, 504, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.