ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-04-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ 379 ಐಪಿಸಿ : ಇಂದು ದಿನಾಂಕ: 28/04/2022 ರಂದು 5-45 ಎಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 28/04/2022 ರಂದು ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಮತ್ತು ಅಬ್ದುಲ ಬಾಷಾ ಪಿಸಿ-237 ಇವರೊಂದಿಗೆ ಠಾಣೆಯ ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕುರಿತು ಠಾಣೆಯಿಂದ 4-30 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ಹೋರಟು ಹತ್ತಿಕುಣಿ ಕ್ರಾಸ ಮೂಲಕ ಗಂಗಾನಗರ ಕ್ರಾಸನಲ್ಲಿ ಹೋಗುತ್ತಿರುವಾಗ 5-00 ಪಿಎಂಕ್ಕೆ ನಮ್ಮ ಎದುರುಗಡೆಯಿಂದ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟಿಪ್ಪರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಟಿಪ್ಪರ ನಂ. ಕೆಎ.33.ಎ.6857 ನೇದ್ದು ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಟಿಪ್ಪರ ಚಾಲಕನು ಟಿಪ್ಪರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟಿಪ್ಪರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟಿಪ್ಪರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟಿಪ್ಪರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟಿಪ್ಪರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 5-30 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರ ನಂ. ಕೆಎ.33.ಎ.6857 ನೇದ್ದು ಅ.ಕಿ.6,00,000/-ರೂ, ಮತ್ತು ಮರಳು ಅ.ಕಿ.15,000/-ರೂ ನೇದ್ದವುಗಳನ್ನು ಒಪ್ಪಿಸಿ, ಟಿಪ್ಪರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಠಾಣೆ ಗುನ್ನೆ ನಂ.43/2022 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ:279, 338 ಐಪಿಸಿ : ಇಂದು ದಿನಾಂಕ:28/04/2022 ರಂದು 6-30 ಪಿಎಮ್ ಕ್ಕೆ ಶ್ರೀಮತಿ ಸುಮಿತ್ರಾ ಗಂಡ ಸಾಯಿಬಣ್ಣ ಭಜಂತ್ರಿ, ವ:42, ಜಾ:ಕೊರಮ, ಉ:ಮನೆಕೆಲಸ ಸಾ:ಕೋಳಕುರ ತಾ:ಜೇವಗರ್ಿ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಮನೆಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನನ್ನ ಗಂಡನು ಪಾಪಡಿ ಮಾರಾಟ ಮಾಡಿಕೊಂಡಿರುತ್ತಾನೆ. ಸದರಿ ಪಾಪಡಿ ಮಾರಾಟ ಮಾಡಲು ನನ್ನ ಗಂಡನು ಊರುರು ಮೋಟರ್ ಸೈಕಲ್ ಮೇಲೆ ಹೋಗಿ ಬರುತ್ತಾನೆ. ದಿನಾಂಕ:25/04/2022 ರಂದು ನನ್ನ ಗಂಡನು ಪಾಪಡಿ ವ್ಯಾಪಾರ ಮಾಡುತ್ತಾ ಯಾದಗಿರಿಗೆ ಯಾದಗಿರಿಯಲ್ಲಿರುವ ನನ್ನ ಮಗಳು ಮತ್ತು ಅಳಿಯನ ಮನೆಯಲ್ಲಿ ವಸತಿ ಇದ್ದು, ಮರು ದಿವಸ ದಿನಾಂಕ:26/04/2022 ರಂದು ಸಾಯಂಕಾಲದ ವರೆಗೆ ಯಾದಗಿರಿ ಸುತ್ತಮುತ್ತ ವ್ಯಾಪಾರ ಮಾಡಿ ಸಾಯಂಕಾಲ 5-30 ಗಂಟೆ ಸುಮಾರಿಗೆ ನನಗೆ ಫೋನ ಮಾಡಿ ನಾನು ವ್ಯಾಪಾರ ಮುಗಿಸಿಕೊಂಡು ಯಾದಗಿರಿಯಿಂದ ಮರಳಿ ಊರಿಗೆ ಶಹಾಪೂರ ಮಾರ್ಗವಾಗಿ ಬರುತ್ತಿದ್ದೆನೆ ಎಂದು ಹೇಳಿದನು. ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಿಗೆ ಪರಿಚಯಸ್ಥರಾದ ರಾಜೇಶ ಕಲಾಲ ಯಾದಗಿರಿ ಇವರು ಫೋನ ನನಗೆ ಫೋನ ಮಾಡಿ ಹೇಳಿದ್ದೇನಂದರೆ ಯಾದಗಿರಿ-ಶಹಾಪೂರ ಮೇನ ರೋಡ ಮನಗನಾಳ ಕೆ.ಬಿ.ಎನ್ ಹತ್ತಿ ಮಿಲ್ ಸಮೀಪ ನಿಮ್ಮ ಗಂಡನು ಮೋಟರ್ ಸೈಕಲ್ ಮೇಲೆ ಶಹಾಪೂರ ಕಡೆ ಹೋಗುವಾಗ ಟಾಟಾ ಎಸ್ ವಾಹನ ಡಿಕ್ಕಿಪಡಿಸಿದೆ ಎಂದು ಹೇಳಿದನು. ಆಗ ಗಾಬರಿಯಾದ ನಾನು ಮತ್ತು ನಮ್ಮ ಸಂಬಂಧಿಕ ಹಣಮಂತ ಪಾಯಣ್ಣ ಭಜಂತ್ರಿ ಸಾ:ಸುಂಬಡ ಕೂಡಿ ಹೊರಟು ಯಾದಗಿರಿಗೆ ಬಂದೆವು. ಬರುವಾಗ ದಾರಿಯಲ್ಲಿ ಅಪಘಾತ ಸ್ಥಳವನ್ನು ನೋಡಿದೇವು. ನನ್ನ ಗಂಡನು ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಇರುವುದಾಗಿ ಗೊತ್ತಾಗಿ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಿದೆನು. ಅಪಘಾತದಲ್ಲಿ ನನ್ನ ಗಂಡನ ಎಡ ತಲೆ ಮುಂಭಾಗದಲ್ಲಿ ತುತು ಬಿದ್ದ ರಕ್ತಗಾಯ, ತಲೆ ಹಿಂಭಾಗ ಭಾರಿ ರಕ್ತಗಾಯವಾಗಿತ್ತು ಮತ್ತು ಎಡ ಮೊಣಕಾಲಿಗೆ ಭಾರಿಗಾಯವಾಗಿ ಚಿಪ್ಪು ಮುರಿದಿತ್ತು. ಮುಖಕ್ಕೆ ಮತ್ತು ಅಲ್ಲಲ್ಲಿ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ರಾಜೇಶ ಕಲಾಲ ಇವರಿಗೆ ಕೇಳಿದಾಗ ಅವರು ಹೇಳಿದ್ದೇನಂದರೆ ನಿಮ್ಮ ಗಂಡ ಸಾಯಿಬಣ್ಣನು ಪಾಪಡಿ ವ್ಯಾಪಾರ ಮಾಡುತ್ತಿದ್ದು, ನನ್ನ ಪಾನ ಡಬ್ಬಾ ವ್ಯಾಪಾರ ಇದ್ದು, ನನಗೆ ಪಾಪಡಿ ಹಾಕುತ್ತಿದ್ದರಿಂದ ಪರಿಚಯವಿರುತ್ತಾರೆ. ಹೀಗಿದ್ದು ನಾನು ಶಹಾಪೂರದಿಂದ ಯಾದಗಿರಿಗೆ ನನ್ನ ಮೋಟರ್ ಸೈಕಲ್ ಮೇಲೆ ಬರುತ್ತಿದ್ದಾಗ ಯಾದಗಿರಿ-ಶಹಾಪುರ ಮೇನ ರೋಡ ಕೆ.ಬಿ.ಎನ್ ಹತ್ತಿ ಮಿಲ್ ಸಮೀಪ 6-30 ಪಿಎಮ್ ಸುಮಾರಿಗೆ ನಿಮ್ಮ ಗಂಡ ತನ್ನ ಮೋಟರ್ ಸೈಕಲ್ ನಂ. ಕೆಎ 32 ಇಕೆ 3095 ಚೆಸ್ಸಿ ನಂ. ಒಆ2ಂ51ಃಚ2ಆಘಅ31375 ಇಂಜನ್ ನಂ. ಕಂಚಘಆಅ71479 ನೇದರ ಮೇಲೆ ಶಹಾಪೂರ ಕಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟಾಟಾ ಎಸ್ ವಾಹನ ನಂ. ಕೆಎ 32 ಡಿ 7073 ನೇದರ ಚಾಲಕನು ಶಹಾಪೂರ ಕಡೆಯಿಂದ ತನ್ನ ಟಾಟಾ ಎಸ್ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ್ ಸೈಕಲ ಹೊರಟ ನಿಮ್ಮ ಗಂಡ ಸಾಯಿಬಣ್ಣನಿಗೆ ಡಿಕ್ಕಿಪಡಿಸಿದ್ದರಿಂದ ಸಾಯಿಬಣ್ಣನು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುಬಿಟ್ಟನು. ನಾನು ಹೋಗಿ ನೋಡಿದಾಗ ಸಾಯಿಬಣ್ಣನಿಗೆ ಅಪಘಾತದಲ್ಲಿ ಎಡ ತಲೆ ಮುಂಭಾಗದಲ್ಲಿ ತುತು ಬಿದ್ದ ರಕ್ತಗಾಯ, ತಲೆ ಹಿಂಭಾಗ ಭಾರಿ ರಕ್ತಗಾಯವಾಗಿತ್ತು ಮತ್ತು ಎಡ ಮೊಣಕಾಲಿಗೆ ಭಾರಿಗಾಯವಾಗಿ ಚಿಪ್ಪು ಮುರಿದಿತ್ತು. ಮುಖಕ್ಕೆ ಮತ್ತು ಅಲ್ಲಲ್ಲಿ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು. ಟಾಟಾ ಎಸ್ ವಾಹನ ಚಾಲಕನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಸಾಗರ ತಂದೆ ಶಾಂತಕುಮಾರ ಮುನ್ನೊಳ್ಳಿ ಸಾ:ಕಲಬುರಗಿ ಅಂತಾ ಹೇಳಿದನು. ಆಗ ನಾನು ನಿಮಗೆ ಫೋನ ಮಾಡಿ ಅಪಘಾತದ ವಿಷಯ ತಿಳಿಸಿ, ಅಷ್ಟೊತ್ತಿಗೆ ಬಂದಿದ್ದ 112 ಪೊಲೀಸ್ ವಾಹನದಲ್ಲಿ ಗಾಯಾಳುವಿಗೆ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ ಎಂದು ಹೇಳಿದನು. ನನ್ನ ಗಂಡನಿಗೆ ಭಾರಿ ಗಾಯಗಳಾಗಿದ್ದರಿಂದ ತಕ್ಷಣ ಕಲಬುರಗಿ/ರಾಯಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯಾಧಿಕಾರಿಗಳು ಹೇಳಿದ್ದರಿಂದ ನಾವು ನನ್ನ ಗಂಡನಿಗೆ ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಕಾರಣ ಟಾಟಾ ಎಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಚಾಲನೆ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಮೇಲೆ ಹೊರಟ ನನ್ನ ಗಂಡನಿಗೆ ಡಿಕ್ಕಿಪಡಿಸಿ, ಭಾರಿ ಗಾಯಗೊಳಿಸಿದ ಟಾಟಾ ಎಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನನ್ನ ಗಂಡನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 57/2022 ಕಲಂ:279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ:279, 337, 338 ಐಪಿಸಿ : ಇಂದು ದಿನಾಂಕ:28/04/2022 ರಂದು 8-15 ಪಿಎಮ್ ಕ್ಕೆ ಶ್ರೀ ರಾಜಕುಮಾರ ತಂದೆ ಶಾಂತಪ್ಪ ಚವ್ಹಾಣ, ವ:32, ಜಾ:ಲಮ್ಮಾಣಿ, ಉ:ಕೂಲಿ ಸಾ:ಕಂಠಿ ತಾಂಡಾ ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಾವು 6 ಜನ ಅಣ್ಣತಮ್ಮಂದಿರು ಇರುತ್ತೇವೆ. ಇಬ್ಬರು ಅಕ್ಕ ತಂಗಿಯರು ಇರುತ್ತಾರೆ. ನನ್ನ ತಮ್ಮನಾದ ತಿಪ್ಪಣ್ಣ ತಂದೆ ಶಾಂತಪ್ಪ ಚವ್ಹಾಣ ವ:28 ಈತನಿಗೆ ಲಗ್ನವಾಗಿದ್ದು, ತನ್ನ ಹೆಂಡತಿ-ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ನನ್ನ ತಮ್ಮನ ಹೆಂಡತಿ ತವರು ಮನೆ ದೇವದುರ್ಗ ತಾಲೂಕಾ ನಾಮಾನಾಯಕ ತಾಂಡಾ ಇರುತ್ತದೆ. ಹೀಗಿದ್ದು ದಿನಾಂಕ:26/04/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ತಮ್ಮನು ತನ್ನ ಹೆಂಡತಿ ತವರು ಮನೆ ನಾಮಾನಾಯಕ ತಾಂಡಾಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮೋಟರ್ ಸೈಕಲ್ ನಂ. ಕೆಎ 33 ವೈ 6595 ನೇದ್ದರ ಮೇಲೆ ಹೋದನು. ನಾನು ಮನೆಯಲ್ಲಿದ್ದೇನು. ನಂತರ 7-30 ಪಿಎಮ್ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡಾದ ಶಂಕರ ತಂದೆ ಯಂಕಪ್ಪ ಪವ್ಹಾರ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ಗೊಂದೆನೂರು ಕ್ರಾಸದಿಂದ ವಡಗೇರಾಕ್ಕೆ ಬರುವ ರೋಡಿನ ಮೇಲೆ ಗೊಂದೆನೂರು ಕ್ರಾಸ ಸಮೀಪ ನಿಮ್ಮ ತಮ್ಮ ತಿಪ್ಪಣ್ಣನಿಗೆ ಟಂ ಟಂ ಅಪಘಾತವಾಗಿದೆ ಎಂದು ಹೇಳಿದನು. ಆಗ ಗಾಬರಿಯಾದ ನಾನು ತಕ್ಷಣ ನಮ್ಮ ತಾಂಡಾದಿಂದ ಗೊಂದೆನೂರು ಕ್ರಾಸ ಸಮೀಪ ಹೋಗಿ ನೋಡಿದಾಗ ನನ್ನ ತಮ್ಮ ತಿಪ್ಪಣ್ಣನಿಗೆ ಅಪಘಾತದಲ್ಲಿ ಬಲಗಡೆ ತಲೆಗೆ ಭಾರಿ ರಕ್ತಗಾಯ ಮತ್ತು ಬಲ ಮೊಣಕಾಲಿಗೆ ರಕ್ತ ಮತ್ತು ಗುಪ್ತಗಾಯವಾಗಿತ್ತು. ಅಲ್ಲಿಯೇ ಅಪಘಾತ ಮಾಡಿದ ಟಂ ಟಂ ನಿಂತಿದ್ದು, ಅದರ ನಂ. ಕೆಎ 33 ಎ 4491 ಇತ್ತು. ಸದರಿ ಟಂ ಟಂ ಒಳಗಡೆ ಬಲ ಸೈಡಿಗೆ ಕುಂತಿದ್ದ ಭೀಮಾಶಂಕರ ತಂದೆ ಮಾಳಪ್ಪ ದೇವರಕರ ಸಾ:ಹೊರಟೂರು ಈತನಿಗೆ ಬಲಗಾಲಿನ ತೊಡೆಗೆ ಭಾರಿ ಗಾಯ, ಮೊಳಕಾಲ ಕೆಳಗಡೆ ರಕ್ತಗಾಯ, ಬಲ ಹಣೆಗೆ ಗಾಯ ಮತ್ತು ಎಡ ಮೊಣಕಾಲಿಗೆ ತರಚಿದ ಗಾಯವಾಗಿತ್ತು. ಅಲ್ಲಿಯೇ ಇದ್ದ ಟಂ ಟಂ ಚಾಲಕನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ನಿಂಗಪ್ಪ ತಂದೆ ಭೀಮಣ್ಣ ಸಾವೂರ ಸಾ:ಹೊರಟೂರು ಎಂದು ಹೇಳಿದನು. ಅಪಘಾತದ ಬಗ್ಗೆ ಅಲ್ಲಿಯೇ ಇದ್ದ ನಮ್ಮ ತಾಂಡಾದ ಶಂಕರನಿಗೆ ವಿಚಾರಿಸಿದಾಗ ಅವನು ಹೇಳಿದ್ದೇನಂದರೆ ನಾನು ಕೊಂಕಲದಲ್ಲಿ ಕೆಲಸ ಮುಗಿಸಿಕೊಂಡು ನನ್ನ ಮೋಟರ್ ಸೈಕಲ್ ಮೇಲೆ ತಾಂಡಾಕ್ಕೆ ಬರುತ್ತಿದ್ದೇನು. ನನ್ನ ಮುಂದೆ ಟಂ ಟಂ ನಂ. ಕೆಎ 33 ಎ 4491 ನೇದರಲ್ಲಿ ಎರಡು-ಮೂರು ಜನ ಪ್ರಯಾಣಿಕರನ್ನು ಅದರ ಚಾಲಕನು ಕೂಡಿಸಿಕೊಂಡು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಿದ್ದು, ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಎದುರುಗಡೆಯಿಂದ ಮೋಟರ್ ಸೈಕಲ್ ಮೇಲೆ ಹೊರಟಿದ್ದ ನಿಮ್ಮ ತಮ್ಮನಿಗೆ ಡಿಕ್ಕಿಪಡಿಸಿದನು. ಆಗ ನಿಮ್ಮ ತಮ್ಮನಿಗೆ ಮತ್ತು ಟಂ ಟಂ ದ ಒಳಗಡೆ ಬಲ ಸೈಡಿಗೆ ಕುಂತಿದ್ದ ಭೀಮಾಶಂಕರ ಇಬ್ಬರಿಗೆ ಭಾರಿ ಗಾಯಗಳಾಗಿರುತ್ತವೆ ಎಂದು ಹೇಳಿದನು. ನಂತರ ನಾವು ನಮ್ಮ ಖಾಸಗಿ ವಾಹನದಲ್ಲಿ ನಮ್ಮ ತಮ್ಮನಿಗೆ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಅಲ್ಲಿಂದ ನೇರವಾಗಿ 108 ಅಂಬುಲೇನ್ಸದಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೇವೆ. ಭೀಮಾಶಂಕರನಿಗೆ ಅವರು ರಾಯಚೂರು ಶಿವಂ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತಾರೆ. ಕಾರಣ ಟಂ ಟಂ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಚಾಲನೆ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಮೇಲೆ ಹೊರಟ ತಮ್ಮನಿಗೆ ಡಿಕ್ಕಿಪಡಿಸಿದಾಗ ನಮ್ಮ ತಮ್ಮ ಮತ್ತು ಟಂ ಟಂ ದಲ್ಲಿ ಕುಂತಿದ್ದ ಭೀಮಾಶಂಕರ ಇಬ್ಬರಿಗೆ ಭಾರಿ ಗಾಯಗೊಳಿಸಿರುತ್ತಾನೆ. ಸದರಿ ಟಂ ಟಂ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನನ್ನ ತಮ್ಮನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 58/2022 ಕಲಂ:279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 66/2022 ಕಲಂ 143,147,148,323,324,504,506 ಸಂಗಡ 149 ಐಪಿಸಿ : ಇಂದು ದಿನಾಂಕ: 28/04/2022 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀಮತಿ ಸುನಿತಾ ಗಂಡ ಮಲ್ಲಪ್ಪ ಬಿರಾದಾರ ವಯಸ್ಸು: 45 ವರ್ಷ ಜಾ: ಕುರುಬ ಉ: ಮನೆಗೆಲಸ ಸಾ: ವಿಬೂತಹಳ್ಳಿ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ ನಮಗೆ ಮತ್ತು ಗಂಡನ ಅಣ್ಣ-ತಮ್ಮ ಪೈಕಿಯವರಾದ ನಿಂಗಪ್ಪ ತಂದೆ ಭೀಮಶ್ಯಾ ಬಿರಾದಾರ ಇವರ ಮಧ್ಯ ನಮ್ಮ ಮನೆಯ ಹತ್ತಿರ ಇರುವ ಸಾರ್ವಜನಿಕ ನಳದ ನೀರಿನ ವಿಷಯವಾಗಿ ಸುಮಾರು ದಿನಗಳಿಂದ ಬಾಯಿ ಬಾತಿನಿಂದ ತಕರಾರು ಆಗಿ, ಇಬ್ಬರ ಮದ್ಯ ವೈಮನಸ್ಸು ಆಗಿದ್ದು, ನಮ್ಮ ಓಣಿಯ ಹಿರಿಯರು ತಿಳುವಳಿಕೆ ಹೇಳಿದ್ದರಿಂದ ಇರಲಿ ಬಿಡು ಅಂತಾ ನಾವೇ ಸುಮ್ಮೆನಿದ್ದೆವು.
ಹೀಗಿದ್ದು ದಿನಾಂಕ: 23/04/2022 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದಾಗ ನಮ್ಮ ಗಂಡನ ಅಣ್ಣ-ತಮ್ಮ ಪೈಕಿಯಾದ 1) ಅಮರೇಶ ತಂದೆ ನಿಂಗಪ್ಪ ವಯಾ: 22 ವರ್ಷ 2) ದೇವಪ್ಪ ತಂದೆ ನಿಂಗಪ್ಪ ವಯಾ: 38 ವರ್ಷ, 3) ಮಹಾಂತಪ್ಪ ತಂದೆ ಮಾನಪ್ಪ ವಯಾ: 25 ವರ್ಷ 4) ಪರಮಣ್ಣ ತಂದೆ ನಿಂಗಪ್ಪ ವಯಾ: 19 ವರ್ಷ 5) ನಿಂಗಪ್ಪ ತಂದೆ ಭಿಮಶ್ಯಾ ವಯಾ: 60 ವರ್ಷ ಎಲ್ಲರೂ ಕೈಯಲ್ಲಿ ಕಲ್ಲು, ಬಡಿಗೆ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಅಕ್ರಮಕೂಟ ಕಟ್ಟಿಕೊಂಡು ನಮ್ಮ ಮನೆಯ ಹತ್ತಿರ ಬಂದವರೆ ನನಗೆ ಎಲೇ ಸೂಳೆ ನಿಮಗೆ ಎಷ್ಟು ಸಲ ಹೇಳೊದು, ಈ ನಳದ ನೀರನ್ನು ನಿಮ್ಮ ಹೊಲದಿಂದ ನಮ್ಮ ಹೊಲಕ್ಕೆ ಯಾಕೆ ಬಿಡುತ್ತೀರಿ, ಸೋಳೆ ಮಕ್ಕಳೆ ನಿಮ್ಮದು ಸೊಕ್ಕು ಬಹಾಳ ಆಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇವತ್ತು ನಿಮಗೆ ಬಿಡುವುದಿಲ್ಲ ಅಂತಾ ಅಂದವರೆ ಅವರ ಪೈಕಿ ಅಮರೇಶ ತಂದೆ ನಿಂಗಪ್ಪ ಈತನು ನನಗೆ ನಿನ್ನ ಗಂಡ ಮಲ್ಲಪ್ಪನದು ಬಹಾಳ ಆಗಿದೆ ಅಂತಾ ಬಯ್ಯುತ್ತಾ, ಕಾಲಿನಿಂದ ನನಗೆ ಹೊಟ್ಟೆಗೆ ಒದ್ದನು, ಅಲ್ಲೇ ಇದ್ದ ನನ್ನ ಮಗನಾದ ತಿಪ್ಪಣ್ಣ ವಯಾ: 22 ವರ್ಷ ಈತನು ಬಂದು ನಮ್ಮ ತಾಯಿಗೆ ಯಾಕೆ ಹೊಡೆಯುತ್ತಿ ಅಂತಾ ಕೇಳಿದ್ದಕ್ಕೆ ಅವರಲ್ಲಿಯ ದೇವಪ್ಪ ತಂದೆ ನಿಂಗಪ್ಪ ಈತನು ಕಪಾಳಕ್ಕೆ ಕೈಯಿಂದ ಹೊಡೆದನು, ಮಹಾಂತಪ್ಪ ತಂದೆ ಮಾನಪ್ಪ, ಪರಮಣ್ಣ ತಂದೆ ನಿಂಗಪ್ಪ, ಇಬ್ಬರೂ ಬಡಿಗೆಯಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದರು. ನಂತರ ನಿಂಗಪ್ಪ ತಂದೆ ಭಿಮಶ್ಯಾ ಈತನು ಇವತ್ತು ಬಿಡಬ್ಯಾಡರಿ ಖಲಾಸ ಮಾಡಿರಿ ಅಂತಾ ಎಲ್ಲರೂ ಕೂಡಿ ನೆಲಕ್ಕೆ ಕೆಡವಿ ಕೈಯಿಂದ ಕಪಾಳಕ್ಕೆ, ಬಡಿಗೆಯಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದರು. ನಂತರ ಅಮರೇಶ ಈತನು ಅಲ್ಲೇ ಬಿದ್ದಿದ್ದ ಕಲ್ಲಿನಿಂದ ಮಗ ತಿಪ್ಪಣ್ಣ ಈತನ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ನನ್ನ ಮಗನು ನೆಲಕ್ಕೆ ಬಿದ್ದು ಚಿರಾಡುವಾಗ ಅಲ್ಲೇ ಇದ್ದ ನಮ್ಮೂರಿನ ಭೀಮಣ್ಣ ತಂದೆ ಬಸಲಿಂಗಪ್ಪ ಕಪಲಗಂಚಿ, ಮರೆಮ್ಮ ಗಂಡ ಮಹಾದೇವಪ್ಪ ಮಾಲಿಪಾಟೀಲ ವಯಾ: 55 ವರ್ಷ, ಹಣಮಂತ್ರಾಯ ತಂದೆ ದೇವಿಂದ್ರಪ್ಪ ತಿಮ್ಮಣ್ಣೋವರು ವಯಾ: 32 ವರ್ಷ ದೇವಪ್ಪ ತಂದೆ ನಾಗಪ್ಪ ವಯಾ:27 ಎಲ್ಲರೂ ಕೂಡಿ ನಮಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡಿರುತ್ತಾರೆ. ನಂತರ ಅವರೆಲ್ಲರೂ ಕೆಕೆ ಹಾಕುತ್ತಾ ಮಕ್ಕಳೆ ಇವತ್ತು ನಮ್ಮ ಕೈಯಲ್ಲಿ ಉಳಿದಿರಿ ಇನ್ನೊಮ್ಮೆ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ, ಒಂದು ವೇಳೆ ನಮ್ಮ ಮೇಲೆ ಕೇಸು ಅಂತಾ ಪೊಲೀಸ್ ಠಾಣೆಗೆ ಹೋದರು ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಅವಾಚ್ಯವಾಗಿ ಬೈಯುತ್ತಾ ಜೀವ ಬೇದರಿಕೆ ಹಾಕಿ ಹೊರಟು ಹೋದರು. ನಂತರ ನನಗೆ ಮತ್ತು ನನ್ನ ಮಗನಾದ ತಿಪ್ಪಣ್ಣ ಇಬ್ಬರಿಗೂ ಒಳಪೆಟ್ಟು ಆಗಿದ್ದರಿಂದ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಹೋಗಿ ಉಪಚಾರ ಪಡೆದುಕೊಂಡು ಮನೆಗೆ ಬಂದಿರುತ್ತೇವೆ. ನಂತರ ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನಗೆ ಮತ್ತು ನನ್ನ ಮಗ ತಿಪ್ಪಣ್ಣ ಇಬ್ಬರಿಗೆ, ಮನೆಯ ಹತ್ತಿರ ಇರುವ ನಳದ ನೀರನ್ನು ನಮ್ಮ ಹೊಲದಿಂದ ಮೇಲ್ಕಾಣಿಸಿದವರ ಹೊಲಕ್ಕೆ ಹೋಗುತ್ತವೆ ಅಂತಾ ಎಲ್ಲರೂ ಕೂಡಿಕೊಂಡು ಕೈಯಲ್ಲಿ ಬಡಿಗೆ ಕಲ್ಲು ಹಿಡಿದುಕೊಂಡು ನಮ್ಮ ಮನೆಯ ಹತ್ತಿರ ಬಂದು ಅವಾಚ್ಯವಾಗಿ ಬೈದು ಕೈಯಿಂದ, ಕಲ್ಲಿನಿಂದ, ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ಜೀವದ ಬೇದರಿಕೆ ಹಾಕಿದ ಮೇಲ್ಕಾಣಿಸಿದ 5 ಜನರ ಮೇಲೆ ಕಾನುನು ಪ್ರಕಾರ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 66/2022 ಕಲಂ: 143,147,148,323,324,504,506 ಸಂಗಡ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಕೊಂಡಿರುತ್ತೇನೆ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 67/2022 ಕಲಂ 143, 147, 148, 323, 324, 326, 354, 504, 506 ಸಂಗಡ 149 ಐ.ಪಿ.ಸಿ: ಇಂದು ದಿನಾಂಕ, 28/04/2022 ರಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾದಿ ಶ್ರೀಮತಿ ನೀಲಮ್ಮ ಗಂಡ ಚಂದ್ರಶೇಖರ @ ಶೇಖಪ್ಪ ಘಂಟಿ, ವಯಸ್ಸು 25 ವರ್ಷ, ಜಾತಿ ಪ.ಜಾತಿ (ಹೊಲೆಯ) ಉಃ ಹೊಲ ಮನೆ ಕೆಲಸ ಸಾಃ ಹತ್ತಿಗೂಡುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಮ್ಮ ಮನೆ ಮತ್ತು ನನ್ನ ಗಂಡನ ಎರಡನೇ ಅಣ್ಣ-ತಮ್ಮಕಿಯಾದ ಚಂದ್ರಪ್ಪ ತಂದೆ ಮಲ್ಲಪ್ಪ ಘಂಟಿ ಇವರ ಮನೆ ಒಂದೆ ಓಣಿಯಲ್ಲಿ ಅಕ್ಕ-ಪಕ್ಕದಲ್ಲಿರುತ್ತವೆ. ಓಣಿಯಲ್ಲಿ ಭಾಗಮ್ಮ ಆಯಿ ಕಟ್ಟೆ ಇರುತ್ತದೆ ಕಟ್ಟೆಯ ಹತ್ತಿರ ನಮ್ಮ ಕುಟುಂಬದವರು ಬಹಳ ದಿನಗಳಿಂದ ಅಶೋಕ ಲೈಲ್ಯಾಂಡ್ ವಾಹನ ಮತ್ತು ಮೋಟರ್ ಸೈಕಲ್ ನಿಲ್ಲಿಸಿಕೊಂಡು ಬಂದಿರುತ್ತಾರೆ. ಅದರಂತೆ ತಾಯಮ್ಮ ಮತ್ತು ಅವರ ಕುಟುಂಬದವರು ಪಕ್ಕದಲ್ಲಿಯೇ ಆಡುಗಳನ್ನು ಕಟ್ಟುತಿದ್ದರು. ತಾಯಮ್ಮನ ಮಕ್ಕಳು ಚಂದ್ರಪ್ಪ ಘಂಟಿ, ನಿಂಗಪ್ಪ ಘಂಟಿ, ಮರೇಪ್ಪ ಘಂಟಿ ಇವರೆಲ್ಲರೂ ಇದೇ ವಿಷಯಕ್ಕೆ ನಮ್ಮ ಕುಟುಂಬದವರ ಜೊತೆ ತಂಟೆ ತಕರಾರು ಮಾಡಿಕೊಂಡು ಬಂದಿದ್ದರು.
ಹೀಗಿರುವಾಗ ದಿನಾಂಕ 22/04/2022 ರಂದು (ಶುಕ್ರವಾರದಿನದಂದು) ಸಾಯಂಕಾಲ 6-45 ಗಂಟೆಯ ಸುಮಾರಿಗೆ ನಾನು, ಮತ್ತು ಮಾವ ಶಂಕ್ರೆಪ್ಪ ಅತ್ತೆ ನಾಗಮ್ಮ, ನಾದನಿ ರೇಣುಕಾ ರವರೆಲ್ಲರೂ ಮನೆಯಲ್ಲಿದ್ದಾಗ, ನನ್ನ ಭಾವ ಮೌನೇಶ @ ಮಾನಪ್ಪ ಈತನು ಭಾಗಮ್ಮ ಆಯಿ ಕಟ್ಟೆಯ ಹತ್ತಿರ ಅಶೋಕ ಲೈಲ್ಯಾಂಡ್ ವಾಹನ ನಿಲ್ಲಿಸಲು ಹೋದಾಗ ತಾಯಮ್ಮ ಇವಳು ತನ್ನ ಆಡುಮರಿಗಳನ್ನು ಕಟ್ಟಲು ಬಂದು ನನ್ನ ಜೊತೆ ತಕರಾರು ಮಾಡಿ ನಾಳೆಯಿಂದ ಈ ಜಾಗದಲ್ಲಿ ನಿಮ್ಮ ಗಾಡಿಗಳನ್ನು ನಿಲ್ಲಿಸಬೇಡಿ ಅಂತಾ ತಕರಾರು ಮಾಡಿರುತ್ತಾಳೆ ಅಂತಾ ತಿಳಿಸಿದಾಗ, ನಾವೆಲ್ಲರೂ ಕೂಡಿ ವಿಚಾರಿಸಿದರಾಯಿತು ಅಂತಾ ಅವರಿಗೆ ಕೇಳಲು ಹೋಗುತಿದ್ದಾಗ, ಸಾಯಂಕಾಲ 7-00 ಗಂಟೆಯ ಸುಮಾರಿಗೆ ಭಾಗಮ್ಮ ಆಯಿ ಗುಡಿ ಹತ್ತಿರ ಎದರುಗಡೆಯಿಂದ 1) ಚಂದ್ರಪ್ಪ ತಂದೆ ಮಲ್ಲಪ್ಪ ಘಂಟಿ, 2) ನಿಂಗಪ್ಪ ತಂದೆ ಮಲ್ಲಪ್ಪ ಘಂಟಿ, 3) ಮರೆಪ್ಪ ತಂದೆ ಮಲ್ಲಪ್ಪ ಘಂಟಿ, 4) ತಾಯಮ್ಮ ಗಂಡ ಮಲ್ಲಪ್ಪ ಘಂಟಿ, 5) ಬಸಮ್ಮ ತಂದೆ ಮಲ್ಲಪ್ಪ ಘಂಟಿ ರವರೆಲ್ಲರೂ ಜಗಳ ಮಾಡುವ ಉದ್ದೇಶದಿಂದ ಚಂದ್ರಪ್ಪನು ಒಂದು ಕಬ್ಬಿಣದ ರಾಡ್ ಹಾಗೂ ನಿಂಗಪ್ಪ ಮತ್ತು ಬಸಮ್ಮ ಇಬ್ಬರೂ ತಲಾ ಒಂದೊಂದು ಬಡಿಗೆ ಹಿಡಿದುಕೊಂಡು ಬಂದವರೆ ಏಕಾ-ಏಕಿ 1) ಚಂದ್ರಪ್ಪ ಘಂಟಿ ಈತನು ನಮ್ಮ ಭಾವನಿಗೆ ಏ ಮೌನ್ಯಾ ಬೋಸ್ಡಿ ಮಗನೇ ನಿನ್ನದು ಬಹಳ ಆಗಿದೆ ಮಗನೇ ಈ ದಿನ ಎರಡರಲ್ಲೊಂದು ಆಗಬೇಕು ಅಂತಾ ಅಂದವನೆ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ನಿಂದ ಮೌನೇಶ @ ಮಾನಪ್ಪನ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿದನು. 2) ನಿಂಗಪ್ಪ ಘಂಟಿ ಈತನು ತನ್ನ ಕೈಯಲ್ಲಿದ ಬಡಿಗೆಯಿಂದ ಮೌನೇಶ @ ಮಾನಪ್ಪನ ಈತನ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿ ಕೈಯಿಂದ ಮುಷ್ಠಿಮಾಡಿ ಹೊಟ್ಟೆಗೆ, ಬೆನ್ನಿಗೆ ಹೊಡೆಯುತಿದ್ದಾಗ, ನಮ್ಮ ಮಾವ ಶಂಕ್ರೆಪ್ಪ ಮತ್ತು ಅತ್ತೆ ನಾಗಮ್ಮ ಘಂಟಿ ಇವರು ಜಗಳ ಬಿಡಿಸಿಕೊಳ್ಳಲು ಹೋಗಿದ್ದು ಆಗ 3) ಮರೆಪ್ಪ ಘಂಟಿ ಈತನು ನಮ್ಮ ಮಾವ ಶಂಕ್ರೆಪ್ಪನಿಗೆ ದಬ್ಬಿಸಿಕೊಟ್ಟು, ಅತ್ತೆ ನಾಗಮ್ಮಳ ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆಯುತಿದ್ದಾಗ, ರೇಣುಕಾಳು ಜಗಳದ ಮಧ್ಯ ಹೋದಾಗ ಅವಳಿಗೆ ತಾಯಮ್ಮ ಇವಳು ಏ ರಂಡಿ ನಿನ್ನದು ಬಹಳ ಆಗಿದೇ ಅಂತಾ ಅವಾಚ್ಯವಾಗಿ ಬೈದು ಬಾರಲೇ ಅಂತಾ ಅವಳ ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆಯುತಿದ್ದಾಗ, ಬಸಮ್ಮ ಘಂಟಿ ಇವಳು ತನ್ನ ಕೈಯಲ್ಲಿದ್ದ ಬಡಿಗೆಯಿಂದ ರೇಣುಕಾಳ ತಲೆಯ ಮೇಲೆ ಜೊರಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾಳೆ ಅದೆ ಬಡಿಗೆಯಿಂದ ಬೆನ್ನಿಗೆ, ಬಲಭಾಗದ ಭುಜಕ್ಕೆ ಹೊಡೆಯುತಿದ್ದಾಗ ಜಗಳದ ಸುದ್ದಿ ತಿಳಿದು ನನ್ನ ಗಂಡ ನನ್ನ ಗಂಡ ಚಂದ್ರಶೇಖರ @ ಶೇಖಪ್ಪ ಮತ್ತು ಮೈದುನರಾದ ಹಣಮಂತ ತಂದೆ ಶಂಕ್ರೆಪ್ಪ ಘಂಟಿ ಮತ್ತು ಶೇಖಪ್ಪ ತಂದೆ ಮರೆಪ್ಪ ಘಂಟಿ ರವರೆಲ್ಲರೂ ಸ್ಥಳಕ್ಕೆ ಓಡಿ ಬಂದಿದ್ದು, ನಾವೆಲ್ಲರೂ ಕೂಡಿ ಜಗಳ ಬಿಡಿಸಿಕೊಂಡೆವು. ಜಗಳ ಬಿಡಿಸಿಕೊಳ್ಳುವ ಕಾಲಕ್ಕೆ ಜಗಳದಲ್ಲಿ ಚಂದ್ರಪ್ಪ, ನಿಂಗಪ್ಪ ಮತ್ತು ಬಸಮ್ಮ ಇವರು ಹೊಡೆಯಲು ಉಪಯೋಗಿಸಿದ ರಾಡ್ ಮತ್ತು ಬಡಿಗೆಗಳನ್ನು ಕಸಿದುಕೊಂಡು ಮನೆಯಲ್ಲಿಟ್ಟಿರುತ್ತದೆ. ಜಗಳದಲ್ಲಿ ಹೊಡೆ ಬಡೆ ಮಾಡಿದ ತಾಯಮ್ಮ ಮತ್ತು ಅವರ ಮಕ್ಕಳೆಲ್ಲರೂ ನಮ್ಮ ಕುಟುಂಬದವರಿಗೆ ಇನ್ನೊಂದು ಸಲ ಏನಾದರು ಭಾಗಮ್ಮ ಆಯಿ ಕಟ್ಟೆಯ ವಿಷಯಕ್ಕೆ ನಮ್ಮ ಜೊತೆ ತಂಟೆ ತಕರಾರು ಮಾಡಿದರೇ ನಿಮಗೆ ಒಂದು ಗತಿ ಕಾಣಿಸದೇ ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿ ಹೋದರು. ಸ್ಥಳಕ್ಕೆ ಅಂಬುಲೆನ್ಸ ವಾಹನ ಬಂದಿದ್ದು ಗಾಯಗೊಂಡ ಮೌನೇಶ @ ಮಾನಪ್ಪ ಮತ್ತು ರೇಣುಕಾ ಇವರಿಗೆ ಉಪಚಾರ ಕುರಿತು ಶಹಾಪೂರ ಸರಕಾರಿಗೆ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗಿ ಜಯದೇವ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಈ ಬಗ್ಗೆ ನಮ್ಮ ಕುಟುಂಬದವರ ಜೊತೆ ವಿಚಾರಣೆ ಮಾಡಿ ತಡವಾಗಿ ಈ ದಿನ ಠಾಣೆಗೆ ಬಂದು ದೂರು ಸಲ್ಲಿಸುತಿದ್ದೇನೆ. ಈ ಘಟನೆಯು ದಿನಾಂಕ 22/04/2022 ರಂದು ಸಾಯಂಕಾಲ 7-00 ಗಂಟೆಯಿಂದ 7-15 ಗಂಟೆಯವರೆಗೆ ಜರುಗಿರುತ್ತದೆ. ಕಾರಣ ತಾಯಮ್ಮ ಮತ್ತು ಆಕೆಯ ಮಕ್ಕಳು, ನಮ್ಮ ಕುಟುಂಬದವರ ಜೊತೆ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯ ಹಾಗು ಗುಪ್ತಗಾಯ ಮಾಡಿದ್ದು ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 67/2022 ಕಲಂ 143, 147, 148, 323, 324, 326, 354, 504, 506 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 72/2022 ಕಲಂ: 279, 337, 338 ಐಪಿಸಿ, 187 ಐಎಂವಿ ಯಾಕ್ಟ್ : ಇಂದು ದಿನಾಂಕ 28.04.2022 ರಂದು 06.45 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರಿ ನಭಿಸಾ ತಂದೆ ಮಾಬುಸಾ ಮಂಗಳೂರ ವ|| 42ವರ್ಷ ಜಾ|| ಮುಸ್ಲೀಂ ಉ|| ಕೂಲಿಕೆಲಸ ಸಾ|| ಅಗ್ನಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಏಳು ಜನ ಮಕ್ಕಳಿದ್ದು ಅವರಲ್ಲಿ ಮೂರು ಜನ ಗಂಡು ಮಕ್ಕಳು ನಾಲ್ಕು ಜನ ಹೆಣ್ಣು ಮಕ್ಕಳಿರುತ್ತೇವೆ. ಎಲ್ಲಾ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ನಾವು ಎಲ್ಲಾ ಜನ ಗಂಡು ಮಕ್ಕಳದು ಮದುವೆಯಾಗಿದ್ದು ಎಲ್ಲಾ ಗಂಡು ಮಕ್ಕಳು ಕೂಡಿಯೇ ಸಂಸಾರ ಮಾಡಿಕೊಂಡು ಇರುತ್ತೇವೆ. ನಾವು ಎಲ್ಲಾ ಜನರು ಕೂಲಿಕೆಲಸ ಮಾಡಿಕೊಂಡು ಇರುತ್ತೇವೆ. ನಮ್ಮ ತಮ್ಮನಾದ ರಾಜಅಹ್ಮದ್ ತಂದೆ ಮಾಬುಸಾ ಮಂಗಳೂರು ವ|| 36 ವರ್ಷ ಈತನು ಅಲ್ಲಿಇಲ್ಲಿ ಕೂಲಿಕೆಲಸ ಮಾಡಿಕೊಂಡು ಇದ್ದನು. ಹೀಗಿದ್ದು ದಿನಾಂಕ 17.04.2022 ರಂದು ಬೆಳಿಗ್ಗೆ 7 ಗಂಟೆಗೆ ನಮ್ಮ ತಮ್ಮನಾದ ರಾಜಹ್ಮದ್ ಈತನು ನಮ್ಮ ಹೊಲದಲ್ಲಿ ಗಿಡಗಳನ್ನು ಹಚ್ಚಿದ್ದು ಅವುಗಳಿಗೆ ನೀರು ಬಿಡಲು ಹೋಗಿದ್ದನು. ನಾನು ನಮ್ಮ ಮನೆಯಲ್ಲಿಯೇ ಇದ್ದೆನು. ರಾತ್ರಿ 9 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಮಹ್ಮದ್ ಸರ್ಫರಾಜ ತಂದೆ ಲಾಲಸಾಬ ಪೀರಾಪೂರ ಈತನು ನನಗೆ ಫೋನ ಮಾಡಿ ನಮ್ಮ ತಮ್ಮನಾದ ರಾಜಅಹ್ಮದ ಈತನಿಗೆ ನಮ್ಮೂರ ಸೀಮಾಂತರದ ಕೆನಾಲ ರೋಡಿನ ಎಸ್ಕೇಪ್ ಗೇಟ ಹತ್ತಿರ ಅಪಘಾತವಾಗಿದೆ ಅಂತ ತಿಳಿಸಿದಾಗ ನಾನು ಕೂಡಲೇ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನು ಅಲ್ಲಿಯೇ ಕೆನಾಲ ರೋಡಿನ ಪಕ್ಕದಲ್ಲಿ ಬಿದ್ದಿದ್ದನು. ಆತನಿಗೆ ನೋಡಿ ವಿಚಾರಿಸಲಾಗಿ ಆತನಿಗೆ ಎಡಗಾಲ ಮೊಳಕಾಲ ಕೆಳಗೆ ರಕ್ತಗಾಯವಾಗಿ ಕಾಲು ಮುರಿದಂತಾಗಿತ್ತು. ನಂತರ ಆತನಿಗೆ ವಿಚಾರಿಸಲಾಗಿ ಅವನು ಹೊಲದಿಂದ ಮನೆಗೆ ಬರುವ ಕುರಿತು ಕೆನಾಲ ರೋಡಿನ ಬಂದೇನವಾಜ ಕೊತ್ವಾಲ್ ಇವರ ಹೊಲದ ಪಕ್ಕದ ರೋಡಿನಲ್ಲಿ ನಡೆದುಕೊಂಡು ಬರುವಾಗ ಎದುರಿನಿಂದ ನಮ್ಮೂರ ಕುಲಕಣರ್ಿ ಇವರ ಟ್ರ್ಯಾಕ್ಟರ ಇಂಜಿನ ನಂಬರ ಕೆಎ-33ಟಿಬಿ-0003 ನೇದ್ದರ ಚಾಲಕ ನಾಗೇಶ್ವರರಾವ ತ ಮಂದೆ ಶಂಕರರಾವ ಕುಲಕಣರ್ಿ ರವರು ತಮ್ಮ ಟ್ರ್ಯಾಕ್ಟ್ಟರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಲವಾಗಿ ಡಿಕ್ಕಿಡಪಿಸಿದ್ದರಿಂದ ನನ್ನ ಎಡಗಾಲ ಮೊಳಕಾಲ ಹತ್ತಿರ ಕಾಲು ಮುರಿದಂತಾಗಿರುತ್ತದೆ ಅಂತ ತಿಳಿಸಿದ್ದು ಇರುತ್ತದೆ. ಅಪಘಾತ ಪಡಿಸಿದ ಟ್ರ್ಯಾಕ್ಟರ ನೋಡಲಾಗಿ ಅಲ್ಲಿಯೇ ನಿಂತಿದ್ದು ಅದರ ನಂಬರ ನೋಡಲಾಗಿ ಕೆಎ-33ಟಿಬಿ-0003 ಅಂತ ಇತ್ತು. ಅದರ ಚಾಲಕ ನಾಗೇಶ್ವರರಾವ ಕುಲಕಣರ್ಿ ರವರು ಅಪಘಾತ ಪಡಿಸಿದ ತಕ್ಷಣ ತಮ್ಮ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮ್ಮ ತಮ್ಮನನ್ನು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ವಿಜಯಪುರದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಪಡಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ನನ್ನ ತಮ್ಮನಿಗೆ ಅಪಘಾತ ಪಡಿಸಿದ ನಾಗೇಶ್ವರರಾವ ಕುಲಕಣರ್ಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂಬರ 72/2022 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 29-04-2022 10:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080