ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29-06-2021

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 98/2021 ಕಲಂ. 279. 337, 338 , 304(ಎ) ಐಪಿಸಿ : ದಿನಾಂಕ: 24-06-2021 ರಂದು ಮದ್ಯಾಹ್ನ 01-45 ಗಂಟೆಗೆ ಪಿಯಾಧಿದಾರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಸವೆನೆಂದರೆ ದಿನಾಂಕ: 22-06-2021 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಬಳಿಚಕ್ರ ಗ್ರಾಮದಿಂದ ಜೈಗ್ರಾಮ ಗ್ರಾಮಕ್ಕೆ ಕವಳಿ ಚೀಲಗಳನ್ನು ಬುಲೇರೋ ವಾಹನದಲ್ಲಿ ಹಾಕಿಕೊಂಡು ಅಕ್ಕಿ ಮಿಲಗೆ ಹೋಗಿ ಅಲ್ಲಿ ಕವಳಿಗಳನ್ನು ಮಿಲಗೆ ಹಾಕಿಸಿಕೊಂಡು ವಾಪಸ ಬಳಿಚಕ್ರ ಗ್ರಾಮಕ್ಕೆ ಬಳಿಚಕ್ರ-ಕಾಳಬೆಳಗುಂದಿ ರೋಡಿನ ಮೇಲೆ ಬಳಿಚಕ್ರ ಗ್ರಾಮದ ಬೋರವೆಲ್ ಹತ್ತಿರ ರಾತ್ರಿ 10-30 ಗಂಟೆಗೆ ಬುಲೇರೊ ಪಿಕಪ್ ವಾಹನದ ಇಂಜಿನ್ನಂಖಿಐಐ4ಒ83524 ಹಾಗೂ ಚೆಸ್ಸಿ ನಂ. ಒಂ1ಚಕ2ಖಿಐಏಒ6ಂ27931 ನೇದ್ದರ ವಾಹನ ಚಾಲಕನು ತಾನು ನಡೆಸುವ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ರೋಡಿನ ಪಕ್ಕದ ತಗ್ಗಿಗೆ ಹಾಕಿದ್ದರಿಂದ ವಾಹನದಲ್ಲಿ ಕುಳಿತವರಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳು ಅಗಿರುತ್ತವೆ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು, ಸದರಿ ಪ್ರಕರಣದಲ್ಲಿನ ಗಾಯಾಳು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು, ಉಪಚಾರ ಫಲಕಾರಿಯಾಗದೇ ದಿನಾಂಕ. 27.06.2021 ರಂದು ಸಾಯಂಕಾಲ 5-10 ಗಂಟೆಗೆ ಗಾಯಾಳು ಚಂದ್ರಪ್ಪ @ ಚಂದ್ರಾಮ ತಂದೆ ನಾಗಪ್ಪ ಬೋಯಿನ್, ವ|| 50 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬಳಿಚಕ್ರ ತಾ||ಜಿ|| ಯಾದಗಿರಿ ಇವನು ಮೃತಪಟ್ಟಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ.304(ಎ)ಐಪಿಸಿ ಅಳವಡಿಸಿಕೊಂಡಿದ್ದು ಇರುತ್ತದೆ.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 103/2021 ಕಲಂ 32,34 ಕೆ,ಇ ಯಾಕ್ಟ್ : ಇಂದು ದಿನಾಂಕ: 28.06.2021 ರಂದು ಸಾಯಂಕಾಲ 5-30 ಗಂಟೆಗೆ ಸ.ತಫರ್ೇ ಶ್ರೀ ಭೀಮರಾಯ ಬಂಕ್ಲೀ ಪಿ.ಎಸ್.ಐ ಸಾಹೇಬರು ಜ್ಞಾಪನ ಪತ್ರದೊಂದಿಗೆ ಮೂಲ ಜಪ್ತಿಪಂಚನಾಮೆ ಮತ್ತು ಮುದ್ದೆಮಾಲು ಠಾಣೆಗೆ ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:28.06.2021 ರಂದು ಮಧ್ಯಾಹ್ನ 03.00 ಗಂಟೆಗೆ ನಾನು ಸೈದಾಪೂರ ಪೊಲೀಸ್ ಠಾಣೆಯಲ್ಲಿರುವಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಬೆಳಗುಂದಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಮದ್ಯದ ಬಾಟಲಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿ ಜನರ ಸಂಗಡ ಸರಕಾರಿ ಜೀಪ ನಂ. ಕೆ.ಎ-33 ಜಿ- 138 ನೇದ್ದರಲ್ಲಿ ಹೋಗಿ ಬೆಳಗುಂದಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಹಣಮಂತ ತಂದೆ ಚಂದ್ರಪ್ಪ ವಡ್ಡರ ಇವರ ಹೊಟೇಲ್ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ದಾಳಿ ಮಾಡಿದ್ದು ಮದ್ಯ ಮಾರಾಟ ಮಾಡುತ್ತಿದ್ದ 1) ಹಣಮಂತ ತಂದೆ ಚಂದ್ರಪ್ಪ ವಡ್ಡರ ವಯ|| 35 ವರ್ಷ, ಜಾ|| ವಡ್ಡರ ಉ|| ಹೊಟೆಲ ಕೆಲಸ ಸಾ|| ಬೆಳಗುಂದಿ ತಾ|| ಜಿ|| ಯಾದಗಿರಿ ಮತ್ತು 2) ಆದಿ ತಂದೆ ನರಸಯ್ಯ ಕಲಾಲ ವಯ|| 29 ವರ್ಷ, ಜಾ|| ಕಲಾಲ ಉ|| ಅಟೋ ಚಾಲಕ ಸಾ|| ನಾಗಪ್ಪನ ಕಟ್ಟೆ ಹತ್ತಿರ ಮೈಲಾಪೂರ ಅಗಸಿ ಯಾದಗಿರಿ ಇಬ್ಬರು ವ್ಯಕ್ತಿಗಳು ಅಲ್ಲಿಂದ ಓಡಿ ಹೋಗಿದ್ದು ಅಲ್ಲಿ 2 ರಟ್ಟಿನ ಬಾಕ್ಸಗಳಲ್ಲಿ ಇದ್ದ ಒರಿಜನಲ್ ಚಾಯ್ಸ್ ಡಿಲಕ್ಷ್ ವಿಸ್ಕೀ 180 ಎಮ್.ಎಲ್ನ 96 ಟೆಟ್ರಾ ಪ್ಯಾಕೇಟ್ಗಳು ಅ|| ಕಿ|| 6720=00 ರೂ.ಮದ್ಯದ ಪ್ಯಾಕೇಟಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆಮಾಲನ್ನು ಇಂದು ದಿನಾಂಕ. 28.06.2021 ರಂದು ಸಾಯಂಕಾಲ 05-30 ಗಂಟೆಗೆ ಠಾಣೆಗೆ ಒಪ್ಪಿಸಿ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮಕ್ಕಾಗಿ ಜ್ಞಾಪನ ನೀಡಿ ಜಪ್ತಿಪಂಚನಾಮೆಯನ್ನು ಹಾಜರಪಡಿಸಿದ್ದರ ಮೇಲಿಂದ ಸೈದಾಪೂರ ಠಾಣಾ ಗುನ್ನೆ ನಂ. 103/2021 ಕಲಂ. 32, 34 ಕೆ.ಇ ಆಕ್ಟ್ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 68/2021 ಕಲಂ: 341, 323, 324, 307, 504, 506 ಸಂ: 149 ಐಪಿಸಿ : ಇಂದು ದಿನಾಂಕ: 28/06/2021 ರಂದು 01.30 ಪಿಎಂ ಕ್ಕೆ ಶ್ರೀ. ಅನೀಲಕುಮಾರ ತಂದೆ ತಿರುಪತಿನಾಯ್ಕ ಮುನಮುಟಗಿ ವಯಾ: 28 ವರ್ಷ ಉ: ಒಕ್ಕಲುತನ ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದರ ಸಾರಂಶ ಏನಂದರೆ, ನಮ್ಮ ಓಣಿಯ ಜನನಾಯಕ ತಂದೆ ನಾಗಪ್ಪ ಹುಣಸಿಗಿಡದ ಇವರ ಮನೆಯವರು ನಮ್ಮ ಮನೆಯ ಮುಂದೆ ಚರಂಡಿ ಮಾಡಿಸುವ ವಿಷಯದಲ್ಲಿ ಜನನಾಯಕ ಮತ್ತು ಅವರ ಮನೆಯವರು ನಮ್ಮ ಮೇಲೆ ಸಿಟ್ಟು ಇಟ್ಟುಕೊಂಡು ನಮ್ಮ ಜೋತೆಗೆ ಜಗಳ ಮಾಡುತ್ತಿದ್ದರು. ಹೀಗಿದ್ದು, ನಿನ್ನೆ ದಿನಾಂಕ:27/06/2021 ರಂದು 06.30 ಪಿಎಂ ಸುಮಾರಿಗೆ ನಮ್ಮ ತಮ್ಮಂದಿರಾದ ವಿಶ್ವರಾಧ್ಯ ತಂದೆ ತಿರುಪತಿನಾಯಕ ಮುನಮುಟಗಿ ವಯಾ:24 ವರ್ಷ, ಅಶೋಕ ತಂದೆ ತಿರುಪತಿನಾಯ್ಕ ಮುನಮುಟಗಿ ವಯಾ:26 ಇವರು ಇಬ್ಬರು ಮೋಟಾರ್ ಸೈಕಲ್ ತಗೆದುಕೊಂಡು ಹೊಲಕ್ಕೆ ಹೊಗುತ್ತಿದ್ದಾಗ ನಮ್ಮೂರಿನಲ್ಲಿಯ ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡದ ಇವರ ಮನೆಯ ಮುಂದೆ ರೋಡಿನಲ್ಲಿ 1) ಜನನಾಯಕ ತಂದೆ ನಾಗಪ್ಪ ಹುಣಸಿಗಿಡ 2) ವಿಕಾಸ ತಂದೆ ಬಸವರಾಜ ಹುಣಸಿಗಿಡ 3) ವಿನಾಯಕ ತಂದೆ ಬಸವರಾಜ ಹುಣಸಿಗಿಡ 4) ನಾಗಪ್ಪ ತಂದೆ ಮಹಾದೆವಪ್ಪ ಹುಣಸಿಗಿಡ ಇವರುಗಳು ಒಮ್ಮೆಲೆ ಮೋಟಾರ್ ಸೈಕಲ ಮೇಲೆ ಹೊಗುತ್ತಿದ್ದ ನನ್ನ ತಮ್ಮಂದಿರರಿಗೆ ತಡೆದು ನಿಲ್ಲಿಸಿ, ಸೂಳೆ ಮಕ್ಕಳೆ ನಿಮಗೆ ಇವತ್ತು ಯಾರು ಉಳಿಸುತ್ತಾರೆ ನೋಡುತ್ತೇವೆ ಅಂತಾ ಅವಾಚ್ಯವಾಗಿ ಬೈಯುತ್ತಾ ಜಗಳ ತಗೆದು ಹೊಡೆಯುತ್ತಿದ್ದಾರೆ ಅಂತಾ ಸುದ್ದಿ ಕೇಳಿ ನಾನು ಮತ್ತು ಗೋಪಾಲನಾಯ್ಕ ತಂದೆ ಮಾದಪ್ಪನಾಯ್ಕ ಮುನಮುಟಗಿ, ರಂಗಪ್ಪನಾಯ್ಕ ತಂದೆ ಮದಪ್ಪನಾಯಕ ಮುನಮುಟಗಿ, ಮತ್ತು ನರಸಿಂಹ್ ನಾಯಕ ತಂದೆ ವೆಂಕೋಬಾ ನಾಯಕ ಇವರುಗಳು ಕೂಡಿ ಓಡಿ ಹೋಗುವಷ್ಟರಲ್ಲಿ ಜನನಾಯಕ ಈತನು ನಮ್ಮ ತಮ್ಮನಾದ ವಿಸ್ವರಾಧ್ಯ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ಇಂದು ರಾಡಿನಿಂದ ವಿಶ್ವರಾಧ್ಯ ಈತನ ತೆಲೆಗೆ ಹೊಡೆದನು, ತಲೆಯ ಮೆಲಕಿನ ಹತ್ತಿರ ಭಾರಿ ರಕ್ತಗಾಯವಾಯಿತು, ವಿಕಾಸ್ ಮತ್ತು ವಿನಾಯಕ ಇವರು ನಮ್ಮ ತಮ್ಮನಾದ ಅಶೋಕ ಈತನಿಗೆ ಕೈಯಿಂದ ಹೊಟ್ಟೆಗೆ ಮತ್ತು ಬೆನ್ನಿಗೆ ಗುದ್ದಿ ಗುಪ್ತ ಪೆಟ್ಟು ಮಾಡಿರುತ್ತಾರೆ. ನಾಗಪ್ಪ ಈತನು ಅಶೋಕನ ಬಲಗೈ ಗೆ ಒಂದು ಹಿಡಿಗಾತ್ರದ ಕಲ್ಲಿನಿಂದ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಆಗ 5) ಭಿಮರಾಯ ತಂದೆ ಹಣಮಂತ್ರಾಯ ಹುಣಸಿಗಿಡ, 6) ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡ ಇವರುಗಳು ಬಂದು ಹೊಡಿರಿ ಖಲಾಸ್ ಮಾಡರಿ ಈ ಸೂಳೆ ಮಕ್ಕಳದು ಬಹಳ ಆಗಿದೆ ಅಂತಾ ಅವಾಚ್ಯವಾಗಿ ಬೈಯುತ್ತಾ ಅವರು ಕೂಡ ಕೈಯಿಂದ ವಿಶ್ವಾರದ್ಯ ಈತನಿಗೆ ಹೊಡೆಯುತ್ತಿದ್ದರು, ಆಗ ವಿಕಾಶ ಈತನು ಒಂದು ಬಡಿಗೆಯಿಂದ ವಿಶ್ವರಾಧ್ಯ ಈತನ ತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಅಶೋಕ ಈತನಿಗೆ ಬೆನ್ನಿಗೆ ಹೊಡೆದನು. ಅಷ್ರಲ್ಲಿ ನಾನು ಮತ್ತು ಗೋಪಾಲನಾಯ್ಕ ತಂದೆ ಮಾದಪ್ಪನಾಯ್ಕ ಮುನಮುಟಗಿ, ರಂಗಪ್ಪನಾಯ್ಕ ತಂದೆ ಮಾದಪ್ಪನಾಯಕ ಮುನಮುಟಗಿ, ಮತ್ತು ನರಸಿಂಹ್ನಾಯಕ ತಂದೆ ವೆಂಕೋಬಾ ನಾಯಕ ಇವರುಗಳು ಕೂಡಿ ಬಿಡಿಸಿಕೊಂಡೆವು. ಆಗ ಮಕ್ಕಳೆ ನೀವು ಈ ಊರಲ್ಲಿ ಕಾಲ ಮಾಡುವ ಹಾಗಿಲ್ಲ ಇಲ್ಲಿ ಕಂಡರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ.ನಮ್ಮ ತಮ್ಮಂದಿರಾದ ವಿಶ್ವರಾದ್ಯ ಈತನಿಗೆ ತಲೆಗೆ ಭಾರಿ ರಕ್ತಗಾಯ ಆಗಿದ್ದರಿಂಧ ಮತ್ತು ಅಶೋಕ ಈತನಿಗೆ ಗುಪ್ತ ಪೆಟ್ಟುಗಳು ಆಗಿದ್ದರಿಂದ ನಾವು ಇಬ್ಬರಿಗೂ ನಿನ್ನೆ ದಿ:27/06/2021 ರಂದು ಶಹಾಪುರ ಆಸ್ಪತ್ರೆಗೆ ತಗೆದುಕೊಂಡು ಹೊಗಿ ಉಪಚಾರ ಮಾಡಿಸಿಕೊಂಡು ಅಲ್ಲಿಂದ ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೊಗಿ ಸೇರಿಕೆ ಮಾಡಿರುತ್ತೇವೆ ನಂತರ ವಿವರಾಧ್ಯ ಈತನಿಗೆ ಹೆಚ್ಚಿನ ಉಪಚಾರಕ್ಕೆ ಯುನೈಟೇಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿರುತ್ತೆವೆ ಉಪಚಾರ ಪಡೆಯುತ್ತಿದ್ದಾನೆ. ನಮ್ಮ ತಮ್ಮನಿಗೆ ಉಪಚಾರಕ್ಕೆ ಸೇರಿಸಿ ಇಂದು ದಿನಾಂಕ:28/06/2021 ರಂದು ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ. ಈ ಹಿಂದಿನ ವೈಷ್ಯಮ್ಯದ ವಿಷಯದಲ್ಲಿ ಸಿಟ್ಟು ಇಟ್ಟುಕೊಂಡು ನಮ್ಮ ತಮ್ಮಂದಿರರಿಗೆ ಕೊಲೆ ಮಾಡುವ ಉದ್ದೇಶದಿಂದ ತಡೆದು ನಿಲ್ಲಿಸಿ ರಾಡಿನಿಂದ ಬಡಿಗೆಯಿಂದ ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯ ಮಾಡಿ ಅವಾಚ್ಯವಾಗಿ ಬೈಯ್ದು, ಜೀವದ ಭಯ ಹಾಕಿರುವ 1) ಜನನಾಯಕ ತಂದೆ ನಾಗಪ್ಪ ಹುಣಸಿಗಿಡ 2) ವಿಕಾಸ ತಂದೆ ಬಸವರಾಜ ಹುಣಸಿಗಿಡ 3) ವಿನಾಯಕ ತಂದೆ ಬಸವರಾಜ ಹುಣಸಿಗಿಡ 4) ನಾಗಪ್ಪ ತಂದೆ ಮಹಾದೆವಪ್ಪ ಹುಣಸಿಗಿಡ 5) ಭೀಮರಾಯ ತಂದೆ ಹಣಮಂತ್ರಾಯ ಹುಣಸಿಗಿಡ, 6) ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡ ಎಲ್ಲರು ಜಾ: ಬೇಡರ ಸಾ: ವನದುಗರ್ಾ ತಾ: ಶಹಾಪೂರ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2021 ಕಲಂ: 341, 323, 324, 307, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ: 40/2021 ಕಲಂ: 87 ಕೆ.ಪಿ ಆಕ್ಟ್ : ಇಂದು ದಿನಾಂಕ:28.06.2021 ರಂದು 8:05 ಪಿಎಮ್ ಕ್ಕೆ ಶ್ರೀ ದೌಲತ್ ಎನ್.ಕೆ ಸಿಪಿಐ ಸಾಹೇಬರು ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರವನ್ನು ಮತ್ತು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಹಾಜರುಪಡಿಸಿದ್ದು ಮಾನ್ಯ ಸಿಪಿಐ ಸಾಹೇಬರು ಹಾಜರುಪಡಿಸಿದ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ:28.06.2021 ರಂದು 7:00 ಪಿಎಮ್ ಕ್ಕೆ ನಾನು ವೃತ್ತ ಕಚೇರಿ ಹುಣಸಗಿಯಲ್ಲಿದ್ದಾಗ ಕೊಡೆಕಲ್ಲ ಪೊಲೀಸ್ ಠಾಣೆಯ ಪಿಎಸ್ಐ ರವರಾದ ಬಾಷುಮಿಯಾ ರವರ ಮೂಲಕ ಪೀರುನಾಯಕ ತಾಂಡಾ ಕಕ್ಕೇರಾದ ಸೇವಾಲಾಲ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವರಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದಿದ್ದು. ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಈ-ಮೇಲ್ ಮುಖಾಂತರ ಯಾದಿಯನ್ನು ರವಾನಿಸಿ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲದಿಂದ ಈ-ಮೇಲ್ ಮುಖಾಂತರ ಪರವಾನಿಗೆ 7:35 ಪಿಎಮ್ಕ್ಕೆ ಬಂದಿದ್ದು ನಾನು ಮಾನ್ಯ ನ್ಯಾಯಾಲಯವು ನೀಡಿದ ಪರವಾನಿಗೆಯನ್ನು ಇಂದು ದಿನಾಂಕ:28.06.2021 ರಂದು 8:00 ಪಿಎಮ್ಕ್ಕೆ ಕೊಡೆಕಲ್ಲ ಠಾಣೆಗೆ ಬಂದು ನಿಮಗೆ ಹಾಜರ ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ, ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:40/2021 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.ನಂತರ ಮಾನ್ಯ ಸಿಪಿಐ ಸಾಹೇಬರು 11:55 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು 52 ಇಸ್ಪೀಟ್ ಎಲೆಗಳು ಮತ್ತು 21,400/-ರೂ ನಗದು ಹಣವನ್ನು ಜಪ್ತಿ ಪಡಿಸಿಕೊಂಡು, ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.



ಇತ್ತೀಚಿನ ನವೀಕರಣ​ : 29-06-2021 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080