ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-06-2022
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 75/2022 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಪ್ಯಾಶನ್ ಪ್ರೋ ಮೋಟರ್ ಸೈಕಲ್ ನಂ ಏಂ 33 ಏ 3280 ಅಂತಾ ಇದ್ದು, ಅದರ ಇಟಿರಟಿಜ ಓಠ-ಊಂ10ಇಆಂಉಏ21272, ಅಊಂಖಖಖ ಓಔ-ಒಃಐಊಂ10ಂಊಂಉಏ24108, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/-ರೂ|| ಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ನಾನು ದಿನಾಂಕ 19/06/2022 ರಂದು ಮಧ್ಯಾಹ್ನ 03-30 ಗಂಟೆಯ ಸುಮಾರಿಗೆ ನನ್ನ ಮೋಟರ್ ನಂ ಏಂ 33 ಏ 3280 ನೇದ್ದನ್ನು ಯಾದಗಿರಿಯ ಹೊಸಾ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಹತ್ತಿರ ನಿಲ್ಲಿಸಿ, ಕಲಬುರಗಿಗೆ ಹೋಗಿ, ಮರಳಿ ದಿನಾಂಕ 20/06/2022 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಯಾದಗಿರಿಯ ಹೊಸಾ ಬಸ್ ನಿಲ್ದಾಣಕ್ಕೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ನಮ್ಮ ಬಸ್ ನಿಲ್ದಾಣದ ಎಲ್ಲಾ ಕಡೆ ನೋಡಿದರು ಮೋಟರ್ ಸೈಕಲ್ ಕಾಣದೇ ಇದ್ದ ಕಾರಣ ನಮ್ಮ ಗೆಳೆಯರಾದ 1] ಸುನೀಲ್ ತಂದೆ ಶಿವರುದ್ರಪ್ಪ ಹಾಗೂ 2] ಗೌತಂ ತಂದೆ ಶಾಂತಪ್ಪ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿ ನನಗೆ ವಿಚಾರಿಸಿದರು. ನಂತರ ಎಲ್ಲರು ಕೂಡಿ ಯಾದಗಿರಿ ನಗರದ ಇತರ ಕಡೆಗಳಲ್ಲಿ ತಿರುಗಾಡಿ ನೋಡಲಾಗಿ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 75/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:76/2022 ಕಲಂ: 143, 341, 323, 504, 506 ಸಂ. 149 ಐಪಿಸಿ : ಇಂದು ದಿನಾಂಕ; 28/06/2022 ರಂದು 7-30 ಪಿಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ಸಿ. ರಾಜು ತಂದೆ ಸಿ. ಮುದುಕಪ್ಪ ವ;42 ಜಾ; ಮಡಿವಾಳ ಉ; ಕೂಲಿಕೆಲಸ ಸಾ; ಕೋಸಗಿ ತಾ; ಮಂತ್ರಾಲಯ ಹಾ.ವ; ಭಂಗಿಕುಂಟಯ್ಯ ಏರಿಯಾ (ಪಿಂಜಾರವಾಡಿ) ರಾಯಚೂರು ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ; 18/06/2022 ರಂದು ನನ್ನ ಅಣ್ಣನ ಮಗನ ಮದುವೆಯ ಲಗ್ನ ಪತ್ರಿಕೆ ಹಾಗೂ ಮದುವೆಗೆ ಬರಲು ಹೇಳುವ ಕುರಿತು ನಾನು ಮತ್ತು ಅಳಿಯನಾದ ಉಪೇಂದ್ರ ತಂದೆ ಸತ್ಯನಾರಾಯಣ ಇಬ್ಬರು ಕೂಡಿಕೊಂಡು ಯಾದಗಿರಿಗೆ ಬಂದು ನಮ್ಮ ಸಂಭಂದಿಕರಾದ ನಾಗರಾಜ ಎಂಬುವವರಿಗೆ ಮದುವೆಯ ವಿಷಯ ತಿಳಿಸಿ, ಮದುವೆಗೆ ಬರುವಂತೆ ಹೇಳಿ ಮರಳಿ ರಾಯಚೂರಿಗೆ ಹೋಗಲು ರೈಲ್ವೆ ಸ್ಟೇಷನ ಏರಿಯಾಕ್ಕೆ ಬಂದು ನಮಗೆ ಹೊಟ್ಟೆ ಹಸಿವಾಗಿದ್ದರಿಂದ 7-30 ಪಿಎಮ್ ಸುಮಾರಿಗೆ ಅಲ್ಲೇ ಇರುವ ಸೂಗೂರೇಶ್ವರ ಖಾನಾವಳಿಗೆ ಹೋಗಿ ಊಟ ಮಾಡಿದೆವು ಊಟ ಮಾಡಿದ ನಂತರ ಊಟದ ಹಣ ಕೊಡಲು ನಮ್ಮ ಜೇಬು ನೋಡಿಕೊಳ್ಳಲು ಹಣ ಇರಲಿಲ್ಲ. ಆಗ ಖಾನಾವಳಿಯವರಿಗೆ ನನ್ನ ಹತ್ತಿರ ಹಣ ಇಲ್ಲ ಅಂತಾ ತಿಳಿಸಿ ಅವರ ನಂಬರ ತೆಗೆದುಕೊಂಡು ಫೋನ ಪೇ ಮೂಲಕ ಹಣ ಕಳಿಸಲು ಫೋನ ಪೇ ಆಗಲಿಲ್ಲ. ಮತ್ತೆ ಮತ್ತೆ ಪ್ರಯತ್ನಿಸಿದಾಗ ಫೋನ ಪೇ ಟ್ರಾನಜಾಕ್ಷನ್ ಪೇಲ್ಡ್ ಅಂತಾ ಬಂದಿದ್ದು ಇರುತ್ತದೆ. ಹೊಟೇಲ ಮಾಲೀಕರಿಗೆ ನಂತರ ನಿಮಗೆ ಹಣ ಕೊಡುತ್ತೇನೆ ಅಂತಾ ತಿಳಿಸಿದಾಗ ಮಾಲೀಕರು ಹಣ ಇಲ್ಲದೇ ಊಟಕ್ಕೆ ಹೇಗೆ ಬಂದಿರುವೆ, ನನಗೆ ಈಗಲೇ ಊಟದ ಹಣ ಕೊಡು ಅಂತಾ ಹೇಳಿದಾಗ, ನಾನು ಆಯಿತು ಹಣ ಕೊಡುತ್ತೇನೆ ಅಂತಾ ಖಾನಾವಳಿಯಿಂದ ಹೊರಗಡೆ ಬಂದಿದ್ದು ಆಗ ಖಾನಾವಳಿಯಲ್ಲಿ ಕೆಲಸ ಮಾಡುವ ಸುಮಾರು 7-8 ಜನರು ಕೂಡಿಕೊಂಡು ಬಂದವರೇ, ಎಲ್ಲಿಗೆ ಹೋಗುತ್ತೀಯಾ ಸೂಳೇ ಮಗನೇ ಊಟ ಮಾಡಿದ ಹಣ ಕೊಟ್ಟು ಹೋಗು ಅಂತಾ ನನ್ನ ಎದೆ ಮೇಲಿನ ಅಂಗಿ ಹಿಡಿದು ನನಗೆ ತಡೆದು ನಿಲ್ಲಿಸಿ, ಕೈಯಿಂದ ನನ್ನ ಎರಡು ಪಕ್ಕೆಗಳಿಗೆ ಮತ್ತು ಅಲ್ಲಲ್ಲಿ ಹೊಡೆದು ಒಳಪೆಟ್ಟು ಮಾಡಿದ್ದು ಆಗ ನಾನು ಊಟ ಮಾಡಿದ 120/-ರೂಪಾಯಿಗಳಿಗೆ ಈ ತರಹ ಎಲ್ಲರೂ ಸೇರಿ ನನಗೆ ಹೊಡೆಯುತ್ತೀರಿ ಅಂತಾ ಅಂದಾಗ ಆಗ ಅವರು ಮತ್ತೇನು ತಿರುಗಿ ಮಾತನಾಡುತೀಯಾ ಮಗನೇ ನಿನಗೆ ಸೊಕ್ಕು ಬಹಳ ಇದೆ ನಿನಗೆ ಇವತ್ತು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು, ಆಗ ನನ್ನ ಜೊತೆಯಲ್ಲಿದ್ದ ಉಪೇಂದ್ರ ಮತ್ತು ಇತರರು ಕೂಡಿಕೊಂಡು ಜಗಳ ಬಿಡಿಸಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ; 18/06/2022 ರಂದು 8-00 ಗಂಟೆ ಸುಮಾರಿಗೆ ಯಾದಗಿರಿಯ ಸ್ಷೇಷನ ಏರಿಯಾದ ಸೂಗೂರೇಶ್ವರ ಖಾನಾವಳಿ ಮುಂದುಗಡೆ ಜರುಗಿದ್ದು ಇರುತ್ತದೆ. ಕಾರಣ ನನಗೆ ಊಟದ ಹಣದ ವಿಷಯವಾಗಿ ತಡೆದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ, ನಾನು ನಮ್ಮ ಕುಟುಂಬದವರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.76/2022 ಕಲಂ.143, 341, 323, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 114/2022.ಕಲಂ, 143,147,323,324,504,506ಸಂ,149. ಐ.ಪಿ.ಸಿ. : ಇಂದು ದಿನಾಂಕ 28/06/2022 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀ ಮಾನಸಿಂಗ ತಂದೆ ದೇವ್ಯಾ ಚವ್ಹಾಣ ವ|| 50 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಜಾಪಾನಾಯಕ ತಾಂಡಾ ಕನ್ಯಾಕೊಳ್ಳೂರ. - 9611431920 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ನನಗು ಮತ್ತು ನನ್ನ ತಮ್ಮನಾದ ಹಣಮಂತನಿಗು ಸುಮಾರು 4 ವರ್ಷಗಳಿಂದ ನಮ್ಮ ಹಿರಿಯ ಆಸ್ತಿಯ ಪಾಲದ ಸಂಬಂದವಾಗಿ ತಕರಾರು ಇದ್ದು ನನ್ನ ಜೊತೆ ಹಣಮಂತನು ಆಗಾಗ ಜಗಳ ತೆಗೆಯುತ್ತಿದ್ದನು. ನನಗೆ ನಮ್ಮ ಹಿರಿಯರು ಬುದ್ದಿಮಾತು ಹೇಳಿದ್ದರಿಂದ ನಾನು ಸುಮ್ಮನೆ ಆಗಿದ್ದೆನು. ಹಿಗಿದು ದಿನಾಂಕ 19/06/2022 ರಂದು ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ಸಕ್ಕುಬಾಯಿ ಗಂಡ ಮಾನಸಿಂಗ ಚವ್ಹಾಣ, ನನ್ನ ಮಗಳಾದ ಸವೀತಾ ಗಂಡ ಕುಮಾರ ರಾಠೋಡ ಎಲ್ಲರು ನಮ್ಮ ತಾಂಡಾದ ಸೇವಾಲಾಲ ಗುಡಿಯ ಹತ್ತಿರ ಇದ್ದಾಗ ಅಲ್ಲೆ ನಿಂತಿದ್ದ 1] ಗನ್ಯಾ ತಂದೆ ಲೋಕ್ಯಾ ರಾಠೋಡ, 2] ರಾಜು ತಂದೆ ಲೋಕ್ಯಾ ರಾಠೋಡ, 3] ಹಣಮಂತ ತಂದೆ ದೆವ್ಯಾ ಚವ್ಹಾಣ, 4] ಶಾಂತಿಬಾಯಿ ಗಂಡ ಪೂರ್ಯಾ ಚವ್ಹಾಣ, 5] ಪಾರಿಬಾಯಿ ಗಂಡ ಹಣಮಂತ ಚವ್ಹಾಣ, ಇವರೆಲ್ಲರು ಕೂಡಿಕೊಂಡು ನಮ್ಮ ಹತ್ತಿರ ಬಂದವರೆ ಅವರಲ್ಲಿ ನನ್ನ ತಮ್ಮನಾದ ಹಣಮಂತನು ನಮ್ಮ ಮನೆಯ ಹತ್ತಿರ ಇರುವ ವಿಧ್ಯೂತ್ ಕಂಬವನ್ನು ತೆಗೆದು ನಮ್ಮ ಮನೆಯ ಮುಂದೆ ವಿಧ್ಯೂತ ಕಂಬವನ್ನು ಹಾಕುತ್ತೇನೆ ಅಂತ ಅಂದಾಗ, ನಾನು ಸದರಿ ವಿಧ್ಯೂತ ಕಂಬವನ್ನು ತೆಗೆಯಬೆಡಾ ಈ ಕಂಬದಿಂದ ನಮ್ಮ ಮನೆಗೆ ಕರೆಂಟ ವೈಯರ ತೆಗೆದುಕೊಂಡಿದ್ದೆನೆ ಈ ವಿದ್ಯೂತ ಕಂಬವನ್ನು ಅಲ್ಲೆ ಇರಲಿ ಅಂತ ಅಂದಾಗ. ಹಣಮಂತನು ಈ ಸೂಳಿ ಮಗನು ಯಾವಾಗಲು ನನ್ನೊಂದಿಗೆ ತಕರಾರು ಮಾಡುತ್ತಾನೆ ಅಂತ ಅಂದನು. ಆಗ ಅವರೆಲ್ಲರು ಲೇ ಮಾನಸಿಂಗ ನಿನ್ನದು ತಾಂಡಾದಲ್ಲಿ ಬಹಳವಾಗಿದೆ ಸೂಳಿ ಮಗನೆ ಅಂತ ಅಂದರು. ಅವರಲ್ಲಿ ಗನ್ಯಾ ಈತನು ಲೇ ಮನ್ಯಾ ಸೂಳಿ ಮಗನೆ ಅಂತ ಅಂದವನೆ ಅಲ್ಲೆ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬಲಗಡೆ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಗನ್ಯಾ ಈತನು ಅದೆ ಬಡಿಗೆಯಿಂದ ನನಗೆ ಹಿಂದಿನ ಕುತ್ತಿಗೆಗೆ ಹೋಡೆದು ಗುಪ್ತಗಾಯ ಮಾಡಿದನು. ರಾಜು ಮತ್ತು ಹಣಮಂತ ಇಬ್ಬರು ಕೂಡಿ ನನಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ನನ್ನ ಬಲಗಾಲು ಮೋಳಕಾಳಿಗೆ ತರಚಿದ ಗಾಯವಾಗಿದ್ದು, ರಾಜು ಮತ್ತು ಹಣಮಂತ ಇವರು ತಮ್ಮ ಕೈಇಂದ ನನಗೆ ಎದೆಗೆ ಹೊಟ್ಟೆಗೆ ಹೋಡೆದು ಗುಪ್ತಗಾಯ ಮಾಡಿದ್ದು ಇರುತ್ತದೆ. ನನಗೆ ಹೋಡೆಯುವದನ್ನು ನೋಡಿ ನನ್ನ ಮಗಳು ಸವೀತಾ ಬಿಡಿಸಿಕೊಳ್ಳಲು ಬಂದಾಗ, ಅವಳಿಗೆ ಶಾಂತಿ ಬಾಯಿ, ಪಾರಿಬಾಯಿ, ಇವರಿಬ್ಬರು ಸವೀತಾಳಿಗೆ ಕೂದಲು ಹಿಡಿದು ಜಗ್ಗಾಡಿದ್ದು ಇರುತ್ತದೆ. ಆಗ ಅಲ್ಲೆ ಇದ್ದ ನನ್ನ ಹೆಂಡತಿ ಸಕ್ಕುಬಾಯಿ ಮತ್ತು ಅಲ್ಲೆ ಇದ್ದ ಬಸವರಾಜ ತಂದೆ ಠಾಕ್ರ್ಯಾ ಚವ್ಹಾಣ, ಜೇಮಸಿಂಗ ತಂದೆ ರಾಮಾ ಚವ್ಹಾಣ, ಗುಂಡ್ಯಾ ತಂದೆ ಗೇನ್ಯಾ ರಾಠೋಡ. ಇವರೆಲ್ಲರು ಸದರಿ ಜಗಳವನ್ನು ನೋಡಿ ಬಂದು ಬಿಡಿಸಿಕೊಂಡರು. ಆಗ ಈ ಮೇಲಿನ 5 ಜನರು ನಮಗೆ ಇವತ್ತು ಉಳುದುಕೊಂಡಿರಿ ಮಕ್ಕಳೆ ಇಲ್ಲಾ ಅಂದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತ ಜೀವದ ಭಯಹಾಕಿದ್ದು ಇರುತ್ತದೆ. ಸದರಿ ಜಗಳವು ನಮ್ಮ ತಾಂಡಾದ ಸೇವಾಲಾಲ ಗುಡಿಯ ಹತ್ತಿರ ಬೆಳಿಗ್ಗೆ 10-30 ಗಂಟೆಯ ಸುಮಾರಿಗೆ ಜರುಗಿರುತ್ತದೆ. ನನಗೆ ಉಪಚಾರ ಕುರಿತು ನನ್ನ ಹೆಂಡತಿ ಸಕ್ಕುಬಾಯಿ. ನನ್ನ ಮಗಳು ಸವೀತಾ ಇಬ್ಬರು ಕೂಡಿ ನನಗೆ ಕರೆದುಕೊಂಡು ಬಂದು ಶಹಾಪುರ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದರು. ನನಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಹೆಂಡತಿ ಸಕ್ಕುಬಾಯಿ ನನಗೆ ಕರೆದುಕೊಂಡು ಹೋಗಿ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿದ್ದು ನಂತರ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಪಡೆದಿರುತ್ತೆನೆ. ನನ್ನ ಮಗಳಾದ ಸವೀತಾ ಇವಳಿಗೆ ಸಣ್ಣ ಪುಟ್ಟ ಬೆನೆ ಯಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು. ಹೋಡೆಬಡೆ ಮಾಡಿ ನನ್ನ ಮಗಳಿಗೆ ಕೂದಲು ಹಿಡಿದು ಜಗ್ಗಾಡಿ ನಮಗೆ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 114/2022 ಕಲಂ 143,147,323,324,504,506,ಸಂ,149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ-115/2022 ಕಲಂ 457, 380 ಐಪಿಸಿ : ಇಂದು ದಿನಾಂಕ: 28/06/2022 ರಂದು ಸಾಯಂಕಾಲ: 5-30 ಪಿ,ಎಂ ಕ್ಕೆ ಠಾಣೆಗೆ ಫಿಯರ್ಾದಿ ಶ್ರೀ ನಿಜಗುಣಪ್ಪ ತಂದೆ ಈರಪ್ಪ ಕಾಡಂಗೇರಾ, ವಯ|| 46 ವರ್ಷ, ಜಾ|| ಕುರುಬರ, ಉ|| ವ್ಯಾಪಾರ ಸಾ|| ಮಡ್ನಾಳ ಹಾ|| ವ|| ಕನಕ ನಗರ ಶಹಾಪೂರ, ತಾ: ಶಹಾಪೂರ ಜಿ: ಯಾದಗಿರ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ. ನಾನು ಈಗ್ಗೆ ಸುಮಾರು 05 ವರ್ಷಗಳಿಂದ ಶಹಾಪುರ ನಗರದ ಶಹಾಪೂರ -ಯಾದಗಿರ ಮುಖ್ಯ ರಸ್ತೆಯಲ್ಲಿ ಬರುವ ಹಳಿಸಗರ ಬ್ರಿಡ್ಜ ಹತ್ತಿರ ಒಂದು ಕನಕ ಕೃಷಿ ಕೇಂದ್ರ ಅಂತ ಗೊಬ್ಬರ ಬೀಜ ಕ್ರಿಮಿನಾಶಕ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೆನೆ. ನಮ್ಮ ಅಂಗಡಿಯಲ್ಲಿ ನಾನು ಮತ್ತು ನನ್ನೊಂದಿಗೆ ನಮ್ಮೂರ ಅಮಲಪ್ಪ ತಂದೆ ಭೀಮರಾಯ ತೇಕರಾಳ ಈತನನ್ನು ಗುಮಾಸ್ತ ಕೆಲಸಕ್ಕೆ ಇಟ್ಟುಕೊಂಡಿರುತ್ತೆನೆೆ. ನಾವಿಬ್ಬರೂ ಕೂಡಿ ದಿನಾಲು ನಮ್ಮ ಅಂಗಡಿಯನ್ನು ಬೆಳಿಗ್ಗೆ 9.00 ಎ.ಎಂ ಕ್ಕೆ ತೆರದುಕೊಂಡು ರಾತ್ರಿ 7.30 ಪಿ,ಎಂ ದ ವರೆಗೆ ವ್ಯಾಪಾರ ಮಾಡಿಕೊಂಡು ಬಂದಿರುತ್ತೆವೆ. ಹಿಗಿದ್ದು ಪ್ರತಿ ದಿನದಂತೆ ನಾವು ನಮ್ಮ ಅಂಗಡಿಯನ್ನು ದಿನಾಂಕ: 22/06/2022 ರಂದು ಬೆಳಗ್ಗೆ 9.00 ಎ.ಎಂ ಕ್ಕೆ ತೆರದು ಅಂದು ರಾತ್ರಿ 7.30 ಪಿ ಎಂ ಕ್ಕೆ ಬಂದ ಮಾಡಿಕೊಂಡು ನಮ್ಮ ಅಂಗಡಿಯ ಶಟರ ಕೀಲಿ ಹಾಕಿಕೊಂಡು ನಾವಿಬ್ಬರೂ ನಮ್ಮ ನಮ್ಮ ಮನೆಗಳಿಗೆ ಹೋಗಿದ್ದೆವು. ನಂತರ ದಿನಾಂಕ: 23/06/2022 ರಂದು ಪ್ರತಿ ನಿತ್ಯದಂತೆ ಬೆಳಗ್ಗೆ 9.00 ಎ,ಎಂ ಕ್ಕೆ ನಾನು ನಮ್ಮ ಗುಮಾಸ್ತ ಅಮಲಪ್ಪ ಇಬ್ಬರೂ ಕೂಡಿ ನಮ್ಮ ಕನಕ ಕೃಷಿ ಕೇಂದ್ರದ ಶಟರನ್ನು ತೆದೆರು ಓಳಗಡೆ ಹೊದಾಗ ಅಂಗಡಿಯಲ್ಲಿ ಬೆಳಕು ಬಿದ್ದಿತ್ತು ಮತ್ತು ಲೈಟ ಚಾಲು ಇದ್ದವು ಮತ್ತು ಮೇಲಿನ ಒಂದು ಪತ್ರಾ ಕಿತ್ತಿತ್ತು. ಅದನ್ನು ನೋಡಿ ನಾನು ಮತ್ತು ಗುಮಾಸ್ತ ಇಬ್ಬರೂ ಗಾಬರಿಯಾದೆವು. ನಂತರ ನಾನು ನಮ್ಮ ಅಂಗಡಿಯಲ್ಲಿದ್ದ ಗಲ್ಲಾ ತೆರೆದು ನೋಡಲಾಗಿ ದಿನಾಂಕ: 22/06/2022 ರಂದು ಅಂಗಡಿ ಬಂದ ಮಾಡಿಕೊಂಡು ಮನೆಗೆ ಹೊಗುವಾಗ ಗಲ್ಲಾದಲ್ಲಿಟ್ಟ ನಗದು ಹಣ 18300-00 ರೂ ಇರಲಿಲ್ಲ. ಯಾರೋ ಕಳ್ಳರು ನಾವು ದಿನಾಂಕ: 22/06/2022 ರಂದು ರಾತ್ರಿ ನಾನು ನಮ್ಮ ಅಂಗಡಿಗೆ ಕೀಲಿ ಹಾಕಿಕೊಂಡು ಹೊದಾಗ ರಾತ್ರಿ ಸಮಯದಲ್ಲಿ ನಮ್ಮ ಅಂಗಡಿಯ ಮೇಲೆ ಏರಿ ಮೇಲಿನ ಪತ್ರಾಸ ನಟ್ಟ ಬಿಚ್ಚಿ ನಮ್ಮ ಅಂಗಡಿಯ ಓಳಗೆ ಇಳಿದು ಅಂಗಡಿಯಲ್ಲಿ ಲೈಟ ಹಾಕಿ ಅಂಗಡಿಯ ಗಲ್ಲಾದಲ್ಲಿದ್ದ ನಗದು ಹಣ 18300-00 ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಈ ಬಗ್ಗೆ ನಾನು ನಮ್ಮ ಮನೆಯಲ್ಲಿ ನಮ್ಮ ಹಿರಿಯರಲ್ಲಿ ವಿಚಾರಿಸಿ ಠಾಣೆಗೆ ದೂರು ಕೊಡಲು ಬರಲು ತಡವಾಗಿರುತ್ತದೆ. ಯಾರೋ ಕಳ್ಳರು ನಮ್ಮ ಅಂಗಡಿಯ ಮೇಲೆ ಏರಿ ಮೇಲಿನ ಪತ್ರಾಸ ನಟ್ಟ ಬಿಚ್ಚಿ ಅಂಗಡಿಯ ಒಳಗಡೆ ಇಳಿದು ಅಂಗಡಿಯಲ್ಲಿನ ಲೈಟ ಹಾಕಿ ಅಂಗಡಿಯಲ್ಲಿನ ಗಲ್ಲಾದಲ್ಲಿಟ್ಟ ನಗದು ಹಣ 18300-00 ರೂ ಕಳ್ಳತನ ಮಾಡಿಕೊಂಡು ಹೋಗಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 115/2022 ಕಲಂ. 457. 380 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 46/2022 ಕಲಂ:78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 28/06/2022 ರಂದು 05.15 ಪಿ.ಎಮ್ ಕ್ಕೆ ನಾಗನಟಗಿ ಗ್ರಾಮದ ಗ್ರಾಮ ಪಂಚಾಯತಿಯ ಪಕ್ಕದ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಪಿ.ಎಸ್.ಐ ರವರಿಗೆ ಬಾತ್ಮಿ ಬಂದಿದ್ದರಿಂದ ಪಿ.ಎಸ್.ಐ ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ 06.00 ಪಿಎಮ್ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಮಾನಶೆಪ್ಪ ತಂದೆ ರಂಗಪ್ಪ ದೇವದುರ್ಗ, ವ:43ವರ್ಷ, ಜಾ:ಬೇಡರ, ಉ:ಒಕ್ಕಲುತನ, ಸಾ:ನಾಗನಟಗಿ, ತಾ:ಶಹಾಪೂರ ಜಿ: ಯಾದಗಿರಿ ಈತನಿಗೆ ಹಿಡಿದು ಸದರಿಯವನಿಂದ ನಗದು ಹಣ 1550/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 06.00 ಪಿಎಮ್ ದಿಂದ 07.00 ಪಿ.ಎಮ್ ವರೆಗೆ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 46/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 24/2022 ಕಲಂ 143, 147, 323, 341, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ: 28/06/2022 ರಂದು 1:30 ಪಿ.ಎಂ. ಕ್ಕೆ ಶ್ರೀಮತಿ ರೇಣುಕಾ ಗಂಡ ಕೆಂಚಪ್ಪ ಅಣ್ಣಗೇರಿ ವ:55 ವರ್ಷ ಉ:ಮನೆ ಕೆಲಸ ಜಾ:ಹಿಂದು ಗಾಣಿಗ ಸಾ:ಬೀಳಗಿ ಜಿ:ಬಾಗಲಕೋಟ ಹಾ:ವ:ನಾರಾಯಣಪೂರ ಮೋ.ನಂ:8970945589 ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೆನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಹಾಗೂ ಒಬ್ಬ ಹೆಣ್ಣು ಮಗಳು ಇರುತ್ತಾಳೆ ನನ್ನ ಮೂರು ಜನ ಮಕ್ಕಳು ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗಿರತ್ತಾರೆ, ನನ್ನ ಮಗಳು ಛಾಯಾ ಇವಳಿಗೆ ಈಗ ಸುಮಾರು 4 ವರ್ಷಗಳ ಹಿಂದೆ ಲಿಂಗಸೂರ ತಾಲೂಕಿನ ನಾಗರಾಳ ಗ್ರಾಮದ ಶರಣಬಸು ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಮಗಳು ಛಾಯಾಳಿಗೂ ಹಾಗೂ ಅವಳ ಗಂಡ ಶರಣಬಸವನಿಗೆ ಮದುವೆಯಾದ ನಂತರ ಇಬ್ಬರಿಗೆ ಹೊಂದಾಣಿಕೆಯಾಗದೆ ಇದ್ದುದರಿಂದ ನನ್ನ ಮಗಳು ತನ್ನ ಗಂಡನನ್ನು ಬಿಟ್ಟು ಬಂದು ನಮ್ಮ ಮನೆಯಲ್ಲಿ ಇದ್ದಳು, ನಾವು ಈ ಬಗ್ಗೆ ಸುರಪೂರ ಪ್ಯಾಮಿಲಿ ಕೊರ್ಟನಲ್ಲಿ ದಾವೆ ಮಾಡಿದ್ದು ಅದು ವಿಚಾರಣೆಯಲ್ಲಿ ಇರುತ್ತದೆ. ದಿನಾಂಕ 09/05/2022 ರಂದು 4:30 ಪಿ.ಎಂ ಸುಮಾರಿಗೆ ನಾನು ಹಾಗೂ ನನ್ನ ಗಂಡ ಕೆಂಚಪ್ಪ ಹಾಗೂ ನನ್ನ ಮಗಳು ಛಾಯಾ ಮೂವರು ಕೂಡಿ ನಾರಾಯಣಪೂರ ಗ್ರಾಮದ ಯು.ಕೆ.ಪಿ ಕ್ಯಾಂಪನಲ್ಲಿ ಇರುವ ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಮನೆಗೆ ಬಂದ ನನ್ನ ಮಗಳು ಗಂಡನ ಮನೆಯವರಾದ 1) ಹೊನ್ನಪ್ಪ ತಂದೆ ಗುಂಡಪ್ಪ ಮೇಟಿ 2) ನಿಂಗಪ್ಪ ತಂದೆ ಈಶ್ವರಪ್ಪ ಸಗರ 3) ದ್ಯಾಮವ್ವ ಗಂಡ ನಿಂಗಪ್ಪ ಸಗರ 4) ಶರಣಬಸು ತಂದೆ ನಿಂಗಪ್ಪ ಸಗರ 5) ಸುನಿತಾ ಸಗರ 6) ಕೊಳ್ಳಪ್ಪ ತಂದೆ ಆದಪ್ಪ ಮೇಟಿ 7) ಶಿವಪ್ಪ ತಂದೆ ಆದಪ್ಪ ಮೇಟಿ ಸಾ: ಎಲ್ಲರೂ ನಾಗರಾಳ ರವರು ನಮ್ಮ ಮನೆಗೆ ಬಂದು ನಮ್ಮ ಮನೆಯ ಮುಂದೆ ನಿಂತು ಎಲ್ಲರೂ ಕೂಡಿ ನನಗೆ ಹಾಗೂ ನನ್ನ ಗಂಡ ಕೆಂಚಪ್ಪನಿಗೆ ಬೊಸುಡಿ ಮಕ್ಕಳೆ ಹೊರಗ ಬರಿಲೆ ಒಳಗ ಕುಂತ ಏನ ಮಾಡತಿರಿ ಅಂತಾ ಅಂದರು ಆಗ ನಾನು ಮತ್ತು ನನ್ನ ಗಂಡ ಮನೆಯಿಂದ ಹೊರಗೆ ಬಂದಿದ್ದು ಆಗ ಅವರಲ್ಲಿ ಶರಣಬಸು ಈತನು ನನ್ನ ಗಂಡ ಕೆಂಚಪ್ಪನಿಗೆ ಬೋಸುಡಿ ಮಗನ್ಯಾ ನನ್ನ ಹೆಂಡತಿನ ನನ್ನ ಮನೆಗೆ ಕಳಸರಿ ಇಲ್ಲಾಂದರ ನನಗೆ ಇನ್ನೊಂದು ಮದುವೆ ಮಾಡಿಕೊಳ್ಳಾಕ ನಿಮ್ಮ ಮಗಳ ಕಡೆಯಿಂದ ಸಹಿ ಮಾಡಸರಿ ಅಂತಾ ಅಂದನು, ಆಗ ನಾನು ಇಲ್ಲ ನಮ್ಮ ಮಗಳನ್ನು ನಾವು ಸದ್ಯಕ್ಕೆ ಕಳುಹಿಸುವದಿಲ್ಲ ಅಂದಾಗ ಅವರಲ್ಲಿಯ ದ್ಯಾಮವ್ವ ಗಂಡ ನಿಂಗಪ್ಪ ಸಗರ ಈತಳು ಬೋಸುಡಿ ಸೂಳಿ ನಮ್ಮ ಮಗಳನ್ನು ಕಳುಸಂಗಿಲ್ಲ ಸಹಿನು ಮಾಡಂಗಿಲ್ಲ ಅಂದರ ನನ್ನ ಮಗನ ಜೀವ ಹೆಂಗ ನಡಿಬೇಕು ಅಂತಾ ನನಗೆ ಅವಾಚ್ಯವಾಗಿ ಬೈಯತೊಡಗಿದಳು, ಆಗ ನನ್ನ ಗಂಡ ಕೆಂಚಪ್ಪನು ಅವರಿಗೆ ಸ್ವಲ್ಪ ತಡೆಯಿರಿ ನಮ್ಮ ಊರಿನ ದೈವವನ್ನು ಕರದುಕೊಂಡು ಬರುತ್ತೇನೆ ಅವರ ಸಮಕ್ಷಮ ಮಾತನಾಡೋಣಾ ಅಂತಾ ಹೊರಗಡೆ ಹೋಗುತ್ತಿದ್ದಾಗ ಅವರಲ್ಲಿಯ ಹೊನ್ನಪ್ಪ ಈತನು ಬೋಸುಡಿ ಮಗನ್ಯಾ ನಿಂದರ ಇಲ್ಲಿ ಎಲ್ಲಿಗೆ ಹೋಗುತ್ತಿ ನಿಮ್ಮ ಊರ ದೈವ ಏನು ಕರೆಯಿತ್ತಿ ಬೋಸುಡಕ್ಯಾ ಅಂತಾ ಅವಾಚ್ಯವಾಗಿ ಬೈದು ನನ್ನ ಗಂಡನನ್ನು ತಡೆದು ನಿಲ್ಲಿಸಿ ಅವನಿಗೆ ಕೈಯಿಂದ ಕಪಾಳಕ್ಕೆ ಹೊಡೆದು ಕಾಲಿನಿಂದ ಅವನ ಸೊಂಟಕ್ಕೆ ಒದ್ದನು, ಆಗ ನನ್ನ ಗಂಡನಿಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಹೋದ ನನಗೆ ದ್ಯಾಮವ್ವ ಗಂಡ ನಿಂಗಪ್ಪ ಸಗರ ಇವಳು ಬಂದು ನನಗೆ ಹಿಡಿದುಕೊಂಡು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಳು ಆಗ ಅಲ್ಲಿಯೇ ಇದ್ದ ನನ್ನ ಮಗಳು ಛಾಯಾ ಹಾಗೂ ಪಕ್ಕದ ಮನೆಯವರಾದ ನಶೀಮಾ ಬೇಗಂ ಗಂಡ ಮಹ್ಮದರಫಿ ಹೊಸಮನಿ ಹಾಗೂ ದುರ್ಗಪ್ಪ ಖ್ಯಾದಗಿ ರವರು ಬಂದು ಬಿಡಿಸಕೊಂಡರು ಆಗ ಉಳಿದವರಾದ ನಿಂಗಪ್ಪ ಸಗರ, ಶರಣಬಸು ಸಗರ, ಸುನಿತಾ ಸಗರ, ಕೊಳ್ಳಪ್ಪ ಮೇಟಿ, ಶಿವಪ್ಪ ಮೇಟಿ ರವರು ನನಗೆ ಮತ್ತು ನನ್ನ ಗಂಡನಿಗೆ ಬೋಸುಡಿ ಮಕ್ಕಳೆ ನಿನ್ನ ಮಗಳ ಕಡೆಯಿಂದ ಸಹಿಮಾಡಿಸದಿದ್ದರೆ ನಿಮಗೆ ಜೀವಂತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿಹೊಗಿದ್ದು ಇರುತ್ತದೆ ಈ ಜಗಳದಲ್ಲಿ ನನಗೆ ಮತ್ತು ನನ್ನ ಗಂಡನಿಗೆ ಅಷ್ಟೇನು ಪೆಟ್ಟಾಗಿರುವದಿಲ್ಲ ನಾವು ಆಸ್ಪತ್ರೆಗೆ ಹೋಗುವದಿಲ್ಲ ನಮ್ಮ ಒಬ್ಬ ಮಗ ಬೆಂಗಳೂರ ಹಾಗೂ ಒಬ್ಬ ಮಗ ರಾಯಚೂರದಲ್ಲಿ ಇದ್ದುದರಿಂದ ಅವರು ಊರಿಗೆ ಬಂದ ನಂತರ ಅವರೊಂದಿಗೆ ವಿಚಾರ ಮಾಡಿಕೊಂಡು ಇಂದು ತಡವಾಗಿ ಬಂದು ಪಿಯರ್ಾದಿ ಕೊಟ್ಟಿದ್ದು ಇರುತ್ತದೆ ಆದ್ದರಿಂದ ನನಗೆ ಹಾಗೂ ನನ್ನ ಗಂಡನಿಗೆ ಹೊಡೆಬಡೆ ಮಾಡಿ ನನ್ನ ಗಂಡನಿಗೆ ತಡೆದು ನಿಲ್ಲಿಸಿ ನಮಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ತಮ್ಮಲ್ಲಿ ವಿನಂತಿ ಅಜರ್ಿ ಇರುತ್ತದೆ.ಅಂತಾ ನೀಡಿದ ಪಿಯರ್ಾದಿ ಅಜರ್ೀಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 24/2022 ಕಲಂ 143, 147, 323, 341, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 116/2022 ಕಲಂ 323, 324, 504, 506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 28/06/2022 ರಂದು ರಾತ್ರಿ 20-30 ಗಂಟೆಗೆ ಫಿಯರ್ಾದಿ ಹಣಮಂತ ತಂದೆ ದೇವ್ಯಾ ಚವ್ಹಾಣ, ವಯಸ್ಸು 38 ವರ್ಷ, ಜಾತಿ ಲಂಬಾಣಿ, ಉಃ ಒಕ್ಕಲುತನ ಕೆಲಸ ಸಾಃ ಜಾಪಾನಾಯಕ ತಾಂಡಾ ಕನ್ಯಾಕೊಳ್ಳುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಕನ್ಯಾಕೊಳ್ಳುರ ಗ್ರಾಮದ ಸೀಮಾಂತರದಲ್ಲಿ ನಮ್ಮ ಹಿರಿಯರ ಆಸ್ತಿ ಇದ್ದು, ಆ ಆಸ್ತಿಯು ನನ್ನ ಹಿರಿಯ ಅಣ್ಣನ ಹೆಂಡತಿಯ ಹೆಸರಿನಲ್ಲಿದ್ದು ಆ ಆಸ್ತಿಗೆ ನಾನು ಯಾವುದೇ ಸಂಬಂಧವಿರುವುದಿಲ್ಲ ಸಂಬಂಧವಿಲ್ಲದ ಆಸ್ತಿಯು ನನಗೆ ಹಂಚಿಕೆ ಮಾಡಿಕೊಡು ಅಂತಾ ನನ್ನ ಖಾಸಾ ಅಣ್ಣನಾದ ಮಾನಸಿಂಗ್ ತಂದೆ ದೇವ್ಯ ಚವ್ಹಾಣ ವಯಸ್ಸು 50 ವರ್ಷ ಈತನು ಸುಮಾರು 4-5 ವರ್ಷಗಳಿಂದ ನನ್ನ ಜೊತೆ ತಕರಾರು ಮಾಡುತಿದ್ದಾನೆ. ಅದೇ ವಿಷಯಕ್ಕೆ ಈ ಹಿಂದೆ ನನ್ನ ಅಣ್ಣನು ನನ್ನ ಜೊತೆ ಒಂದೇರಡು ಬಾರಿ ಜಗಳ ಮಾಡಿರುತ್ತಾನೆ. ಅದಲ್ಲದೆ ನನ್ನ ಮನೆಯ ಮುಂದೆ ಕೆ.ಇ.ಬಿ ಲೈಟಿನ ಕಂಬವಿದ್ದು, ಮನೆಯ ಛತ್ತ್ ಹಾಕುವ ಸಂಧರ್ಭದಲ್ಲಿ ಲೈಟಿನ್ ಕಂಬದಿಂದ ತೂಂದರೆಯಾಗುತಿದ್ದರಿಂದ ಅದನ್ನು ತೆಗೆದು ಬೇರೆ ಕಡೆಗೆ ಸ್ಥಳಾಂತರಿಸುವ ಕುರಿತು ನಾನು ಶಹಾಪೂರ ಕೆ.ಇ.ಬಿ ಇಲಾಖೆಯವರಿಗೆ ಅಜರ್ಿ ಸಲ್ಲಿಸಿರುತ್ತೇನೆ. ಹೀಗಿರುವಾಗ ದಿನಾಂಕ 19/06/2022 ರಂದು, ಮುಂಜಾನೆಯ ಸುಮಾರಿಗೆ ಕೆ.ಇ.ಬಿ ಲೈನ್ ಮ್ಯಾನ್ ಇವರು ನಮ್ಮ ತಾಂಡಾದ ಸೇವಾಲಾಲ್ ಗುಡಿಯ ಹತ್ತಿರ ಬಂದಿರುವ ವಿಷಯ ತಿಳಿದು ನಾನು ನನ್ನ ಹೆಂಡತಿ ಪಾರ್ವತಿ, ಮಗಳು ಸಾವಿತ್ರಿ @ ಪೂಜಾ ರವರೆಲ್ಲರೂ ಕೂಡಿ ಸೇವಾಲಾಲ್ ಗುಡಿಯ ಹತ್ತಿರ ಹೋದಾಗ ಅಲ್ಲಿ ಲೈನ್ ಮ್ಯಾನ ಇವರು ಹಾಜರಿದ್ದರು. ನನ್ನ ಮನೆಯ ಮುಂದೆ ಇದ್ದ ಲೈಟಿನ್ ಕಂಬವನ್ನು ತೆಗೆಯುವ ಸಂಬಂಧ ಅವರ ಜೊತೆ ವಿಚಾರಣೆ ಮಾಡುತಿದ್ದಾಗ, ಮುಂಜಾನೆ 10-30 ಗಂಟೆಯ ಸುಮಾರಿಗೆ ನನ್ನ ಅಣ್ಣ ಮಾನಸಿಂಗ್ ಮತ್ತು ಅವನ ಹೆಂಡತಿ ಸಕ್ಕುಬಾಯಿ ಇಬ್ಬರೂ ಜಗಳ ತೆಗೆಯುವ ಉದ್ದೇಶದ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಲ್ಲಿಗೆ ಬಂದನು. ನನ್ನ ಅಣ್ಣನು ಲೈಟ್ ಕಂಬ ಇಲ್ಲಿಂದ ತೆಗೆದು ಬೇರೆ ಕಡೆಗೆ ಯಾಕೇ ಹಾಕ್ತಿಯಾ ನಾನು ಲೈಟ್ ಕಂಬ ಇಲ್ಲಿಂದ ತೆಗೆಯಲು ಬಿಡುವುದಿಲ್ಲ ಅಂತಾ ಹೇಳಿದನು. ಆಗ ನಾನು ಕೆಲವು ದಿನದಲ್ಲಿ ಮನೆಯ ಛತ್ ಹಾಕುವುದಿದೆ ವೈರ್ ಮನೆಯ ಮೇಲೆ ಹಾದು ಹೋಗಿದೆ ಯಾರಿಗಾದರು ವೈರ್ ಹತ್ತಿದರೆ ಸಮಸ್ಯ ಆಗುತ್ತದೆ ಆದ್ದರಿಂದ ಸ್ವಲ್ಪ ಮುಂದಕ್ಕೆ ಹಾಕಿಸುತ್ತೇನೆ ಅಂತಾ ಹೇಳಿದ್ದಕ್ಕೆ, ನನ್ನ ಅಣ್ಣನು ಏಕಾ-ಏಕಿ ನನಗೆ ಏ ಬೋಸ್ಡಿ ಮಗನ್ಯಾ ಅದಕ್ಕೆ ನಾವೇನು ಮಾಡಬೇಕು ಅಂತಾ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಗೆ, ಬೆನ್ನಿಗೆ ಹೊಡಿದಿದ್ದರಿಂದ ತಲೆಯಿಂದ ರಕ್ತ ಬಂದಿರುತ್ತದೆ. ಆಗ ನನ್ನ ಹೆಂಡತಿ ಪಾರ್ವತಿ ಮತ್ತು ಮಗಳು ಸಾವಿತ್ರಿ @ ಪೂಜಾ ಇವರು ಜಗಳ ಬಿಡಿಸಲು ಬಂದಾಗ, ನನ್ನ ಹೆಂಡತಿಗೆ, ಸಕ್ಕುಬಾಯಿ ಇವಳು ಕೂದಲು ಹಿಡಿದು ಜಗ್ಗಾಡಿ ದಬ್ಬಿಸಿಕೊಟ್ಟಿದ್ದರಿಂದ ಸಣ್ಣ-ಪುಟ್ಟ ತರಚಿದ ಗಾಯಗಳಾಗಿರುತ್ತವೆ ಮತ್ತು ಮಗಳು ಸಾವಿತ್ರಿ @ ಪೂಜಾ ಇವಳಿಗೆ ಸಕ್ಕುಬಾಯಿ ಇವಳು ಕಪಾಳಕ್ಕೆ, ಬೆನ್ನಿಗೆ, ಹೊಟ್ಟೆಗೆ ಕೈಯಿಂದ ಹೊಡೆಯುತಿದ್ದಾಗ ಜಗಳದ ಶಬ್ದ ಕೇಳಿ ಓಣಿಯ ಗಣಪತಿ ತಂದೆ ಲೋಕ್ಯಾ ರಾಠೋಡ, ರಾಜು ತಂದೆ ಲೋಕ್ಯಾ ರಾಠೋಡ, ಶಾಂತಿಬಾಯಿ ಗಂಡ ಪೂರ್ಯಾ ಚವ್ಹಾಣ, ಮೂರು ಜನರು ಬಂದು ಜಗಳ ಜಗಳ ಬಿಡಿಸಿಕೊಂಡರು. ಜಗಳ ಬಿಡಿಸಿದ ರಾಜು ಈತನು ನಮ್ಮ ಅಣ್ಣನಿಗೆ ನೀವಿಬ್ಬರೂ ಅಣ್ಣ-ತಮ್ಮಂದಿರರು ಇದ್ದು ಈ ರೀತಿ ಜಗಳವಾಡುವುದು ಸರಿಯಲ್ಲ ಅಂತಾ ಹೇಳಿ ನಮ್ಮಣ್ಣನ ಕೈಯಲ್ಲಿದ ಬಡಿಗೆಯನ್ನು ಕಸಿದುಕೊಂಡು ನಮ್ಮ ಮನೆಯ ಗೋಡೆಗೆ ಹತ್ತಿರ ಬಿಸಾಕಿದನು. ಈ ಜಗಳವು ನಮ್ಮೂರ ಸೇವಾಲಾಲ್ ಗುಡಿಯ ಹತ್ತಿರ ಮುಂಜಾನೆ 10-30 ಗಂಟೆಯಿಂದ 10-45 ಗಂಟೆಯವರೆಗೆ ಜರುಗಿರುತ್ತದೆ ನಮಗೆ ಹೊಡೆ ಬಡೆ ಮಾಡಿದ ನನ್ನ ಅಣ್ಣ ಮತ್ತು ಅತ್ತಿಗೆ ಸಕ್ಕುಬಾಯಿ ಇಬ್ಬರೂ ಆ ಲೈಟಿನ ಕಂಬ ಅಲ್ಲಿಂದ ತೆಗೆಯುವ ವಿಷಯಕ್ಕೆ ಹೋದರೆ ನೋಡು ನಿಮ್ಮ ಪರಿಸ್ಥಿತಿ ಚನ್ನಾಗಿ ಇರುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿಹೋದರು. ನನ್ನ ಹೆಂಡತಿ ಮತ್ತು ಮಗಳು ಸಾವಿತ್ರಿ @ ಪೂಜಾ ಇವರು ನನಗೆ ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ. ಆಸ್ಪತ್ರೆಯಲ್ಲಿ ನಾನೊಬ್ಬನೆ ಉಪಚಾರ ಪಡೆದುಕೊಂಡಿದ್ದು ನನ್ನ ಹೆಂಡತಿ ಮತ್ತು ಮಗಳು ಅವರು ಉಪಚಾರ ಪಡೆದುಕೊಂಡಿರುವುದಿಲ್ಲ. ನನಗೆ ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿಗೆ ಹೋಗಿ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಊರಿಗೆ ಹೋಗಿರುತ್ತೇವೆ. ಈ ಬಗ್ಗೆ ನನ್ನ ಕುಟುಂಬದ ಜೊತೆ ವಿಚಾರಣೆ ಮಾಡಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ. ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನಗೆ ಮತ್ತು ನನ್ನ ಕುಟುಂಬದವರ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ಧ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 116/2022 ಕಲಂ 323, 324, 504, 506 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.