ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-07-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 166/2021 ಕಲಂ 279, 338, 304(ಎ) ಐ.ಪಿ.ಸಿ. : ಇಂದು ದಿನಾಂಕ 28/07/2021 ರಂದು ಬೆಳಿಗ್ಗೆ 2.00 ಪಿ.ಎಂ. ಗಂಟೆಗೆ ಫಿಯರ್ಾದಿ ಶ್ರೀಮತಿ ಹೀರಾದೇವಿ ಗಂ/ ಚಂದ್ರಬಾನ ಬಘೇಲ್, ಸಾ|| ವಾರ್ಡ.ನಂ.08, ಪತಾರೆ ಸಾಮನೆ, ಮೇನ್ ರೋಡ್ ದಬೋಹ, ಪೋಸ್ಟ್: ಅಮಾಹಾ, ಜಿ|| ಭೀಂಡ್ (ಮಧ್ಯ ಪ್ರದೇಶ ರಾಜ್ಯ) ಹಾ.ವ|| ಐಕೂರ, ತಾ|| ವಡಗೇರಾ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದರ ಸಾರಾಂಶವೇನೆಂದರೆ, ನಾನು ಮತ್ತು ನನ್ನ ಗಂಡನಾದ ಚಂದ್ರಬಾನ ತಂ/ ಸಿರೋವಾನ ಬಘೇಲ್, ವ|| 37 ವರ್ಷ, ಜಾ|| ಬಘೇಲ್, ಮತ್ತು ಮಕ್ಕಳಾದ ಬಿಕಾಸ್ ಮತ್ತು ಬಿಸಾಲ್ ರವರೊಂದಿಗೆ ಸುಮಾರು 3 ವರ್ಷಗಳಿಂದ ವಡಗೇರಾ ತಾಲೂಕಿನ ಐಕೂರು ಗ್ರಾಮಕ್ಕೆ ಬಂದು ಪಾನಿ ಪೂರಿ ವ್ಯಾಪಾರ ಮಾಡಿಕೊಂಡು ಉಪ ಜೀವನ ಸಾಗಿಸುತ್ತಿದ್ದೇವೆ. ಹೀಗಿದ್ದು ಇಂದು ದಿನಾಂಕ: 28/07/2021 ರಂದು ಬೆಳಿಗ್ಗೆ 10.00 ಎ.ಎಂ.ಕ್ಕೆ ನನ್ನ ಗಂಡ ಚಂದ್ರಬಾನ ಇವರು ಶಹಾಪೂರಕ್ಕೆ ಹೋಗಿ ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಮೋಟರ ಸೈಕಲ್ ನಂ. ಕೆಎ-33 ಹೆಚ್-8117 ಅನ್ನು ನಡೆಸಿಕೊಂಡು ಹೋದರು. 12.00 ಪಿ.ಎಂ. ಸುಮಾರಿಗೆ ಕನ್ಯಾಕೊಳ್ಳರದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ನನ್ನ ಸಂಬಂಧಿ ಸೂರಜ್ಸಿಂಗ್ ಪಾಲ್ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಮಾವ ಚಂದ್ರಬಾನ ಬಘೇಲ್ ರವರು ಶಹಾಪೂರ ಇಂದ ಐಕೂರಿಗೆ ಬರುವಾಗ ಶಹಾಪೂರ-ಹತ್ತಿಗುಡೂರ ಮುಖ್ಯ ರಸ್ತೆಯಲ್ಲಿರುವ ಶಹಾಪೂರ ನಗರದ ವೆಲ್ಕಮ್ ಬೋರ್ಡ ಹತ್ತಿರ ಅಪಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಾನು ಘಟನೆ ಸ್ಥಳಕ್ಕೆ ಹೋಗುತ್ತಿದ್ದೇನೆ ನೀವು ಬನ್ನಿ ಅಂತಾ ಅಂದಾಗ ನಾನು ಮತ್ತು ನನ್ನ ಮಕ್ಕಳಾದ ಬಿಸಾಲ್ ಮತ್ತು ಬಿಕಾಸ್ ರವರೊಂದಿಗೆ ಶಹಾಪುರ ಸರಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿದ್ದ ನನ್ನ ಗಂಡನ ಬಲಗಾಲ ಮೊಳಕಾಲಿನಿಂದ ತೊಡೆಯವರೆಗೆ ರಕ್ತಗಾಯವಾಗಿ ಎಲುಬು ಮುರಿದಂತೆ ಕಂಡು ಬಂದಿದ್ದು, ಬಲಗೈಗೆ ಭಾರೀ ರಕ್ತಗಾಯವಾಗಿ ಮುರಿದಂತೆ ಕಂಡುಬಂದಿದ್ದು, ತಲೆಗೆ ಬಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾರೆ. ಅಲ್ಲಿಯೇ ಇದ್ದ ಸೂರಜ್ಸಿಂಗೆ ವಿಚಾರಿಸಲಾಗಿ ಅಲ್ಲಿಯೇ ಇದ್ದ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಶರಣಪ್ಪಗೌಡ ಪೊಲೀಸ್ ಪಾಟೀಲ್ ಸಾ|| ಕನ್ಯಾಕೊಳ್ಳೂರ ರವರ ಕಡೆಗೆ ತೋರಿಸಿ ಇವರೇ ಘಟನೆಯನ್ನು ನೋಡಿರುತ್ತಾರೆ ಇವರಿಗೆ ವಿಚಾರಿಸಲು ಹೇಳಿದಾಗ ಸದರಿ ಶರಣಪ್ಪಗೌಡರಿಂದ ಗೊತ್ತಾಗಿದ್ದೇನೆಂದರೆ, ನಾನು ಇಂದು ಬೆಳಿಗ್ಗೆ ಶಹಾಪೂರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೊರಟಿದ್ದಾಗ 11.30 ಎ.ಎಂ. ಸುಮಾರಿಗೆ ಶಹಾಪೂರ-ಹತ್ತಿಗುಡೂರ ಮುಖ್ಯ ರಸ್ತೆಯಲ್ಲಿರುವ ಶಹಾಪೂರ ನಗರದ ವೆಲ್ಕಮ್ ಬೋರ್ಡ ಹತ್ತಿರ ಇದ್ದಾಗ ಎದುರಿನಿಂದ ಅಂದರೆ ಹತ್ತಿಗುಡೂರ ಕಡೆಯಿಂದ ಒಂದು ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಾ ನನ್ನ ಮುಂದೆ ರೋಡಿನ ಎಡ ಸೈಡಿನಲ್ಲಿ ಹೊರಟಿದ್ದ ಒಂದು ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ಪರಿಣಾಮ ಮೋಟರ ಸೈಕಲ್ ಚಾಲಕನು ರೋಡಿನ ಪಕ್ಕದಲ್ಲಿ ಹೋಗಿ ಬಿದ್ದನು ಆಗ ನಾನು ಹತ್ತಿರು ಹೋಗಿ ನೋಡಲಾಗಿ ಮೋಟರ ಸೈಕಲ ಚಾಲಕನಿಗೆ ಭಾರೀ ರಕ್ತಗಾಯವಾಗಿ ಮೃತಪಟ್ಟಿದ್ದನು. ಮೋಟರ ಸೈಕಲ್ ಸವಾರನು ನಮ್ಮೂರಿಗೆ ಆಗಾಗ ಬಂದು ನಮ್ಮುರಲ್ಲಿ ಪಾನಿಪೂರಿ ವ್ಯಾಪಾರ ಮಾಡುತ್ತಿದ್ದ ಸೂರಜ್ ಸಿಂಗನಿಗೆ ಬೇಟಿಯಾಗಿದ್ದನ್ನು ನೋಡಿದ್ದರಿಂದ ಈ ವಿಷಯ ಸೂರಜ್ ಸಿಂಗನಿಗೆ ತಿಳಿಸಿರುತ್ತೇನೆ. ನಂತರ ಅಪಘಾತಪಡಿಸಿದ ಲಾರಿ ನಂಬರ ನೋಡಲಾಗಿ ಕೆಎ-52 ಬಿ-1611 ಅಂತಾ ಇದ್ದು, ಅಲ್ಲಿಯೇ ಇದ್ದ ಲಾರಿ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ರಮೇಶ ತಂ/ ಚಂದಪ್ಪ ಇಲಕಲ್ ಸಾ|| ಹಣಮನಾಳ, ತಾ|| ಕುಷ್ಟಗಿ, ಜಿ|| ಕೊಪ್ಪಳ ಅಂತಾ ಹೇಳಿದನು ಅಂತಾ ಹೇಳಿದ್ದು ಕೇಳಿ ಗೊತ್ತಾಗಿರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಲಾರಿ.ನಂ. ಕೆಎ-52 ಬಿ-1611 ನೇದ್ದರ ಚಾಲಕ ನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 166/2021 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆನೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 167/2021 ಕಲಂ ಮಹಿಳೆ ಮತ್ತು ಮಗು ಕಾಣೆ : ಇಂದು ದಿನಾಂಕ: 28-07-2021 ರಂದು 5:00 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಬಂಡೆಪ್ಪ ತಂದೆ ನಿಂಗಪ್ಪ ಪೊಲೀಸ ಪಟೀಲ ವಯ: 60 ವರ್ಷ ಜಾ: ಉಪ್ಪಾರ ಉ: ಒಕ್ಕಲುತನ ಸಾ: ಬೆನಕನಹಳ್ಳಿ ಜೆ ಯಾ: ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ದೂರು ಹಾಜರು ಪಡಿಸಿದ್ದು ಏನಂದರೆ, ನನ್ನ ಮಗಳು ನಾಗಮ್ಮ ಎಂಬುವವಳನ್ನು ಹುಲಕಲ್ ಗ್ರಾಮದ ಸಂಜೀವಪ್ಪ ತಂದೆ ಭೀಮಣ್ಣ ಪೂಜಾರಿ ಎಂಬುವವನಿಗೆ ಕೊಟ್ಟು ಈಗ 10 ವರ್ಷಗಳ ಹಿಂದೆ ಮದುವೆ ಮಾಡಿದ್ದು ಇತ್ತು. ನಮ್ಮ ಅಳಿಯನು ಮದ್ಯಪಾನದ ವ್ಯಸನಿಯಾಗಿದ್ದರಿಂದ ನನ್ನ ಮಗಳು ನಮ್ಮೂರಿನಲ್ಲೇ ವಾಸವಾಗಿದ್ದಳೂ ಅವಳಿಗೆ ಎರಡು ಮಕ್ಕಳಿದ್ದಾರೆ (ಗಂಡು ಮಗ ಭೀಮಶಂಕರ 8 ವರ್ಷ ಮತ್ತು ಭೂಮಿಕಾ 5 ವರ್ಷ) ನಮ್ಮ ಅಳಿಯನೂ ಕೂಡಾ ಆಗಾಗ ಬಂದು ಹೋಗುತ್ತಾನೆ ಹೀಗಿದ್ದು ದಿನಾಂಕ: 23-07-2021 ರಂದು 10:30 ಗಂಟೆ ಸುಮಾರಿಗೆ ನನ್ನ ಮಗಳು ನಾಗಮ್ಮ ತನ್ನ ಮಗಳಾದ ಭೂಮಿಕಾ ಳನ್ನು ಕರೆದುಕೊಂಡು ತನ್ನ ಗಂಡನ ಮನೆ ಹುಲಕಲ್ ಗೆ ಹೋಗಿ ಬರುತ್ತೇನೆ ಅಲ್ಲಿ ನನ್ನ ಗಂಡ ಟೀನ ಶೆಡ್ ಹಾಕುತ್ತೇನೆ ಅಂತಾ ಹೇಳಿದ್ದಾನೆ ಹಾಕಿದ್ದಾನೋ ಇಲ್ಲವೋ ಎಂದು ನೋಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೋದಳು. ಆಕೆಯ ಮಗ ಭೀಮಾಶಂಕರನು ನಮ್ಮೂರಿನಲ್ಲಿಯೇ ಉಳಿದನು. ಆದರೆ ಸಾಯಂಕಾಲವಾದರೂ ನನ್ನ ಮಗಳು ಮರಳಿ ಬಂದಿರುವುದಿಲ್ಲ. ನಾವು ಹುಲಕಲ್ ಗ್ರಾಮಕ್ಕೆ ಫೋನ ಮಾಡಿ ವಿಚಾರಿಸಲಾಗಿ ಅಲ್ಲಿಗೆ ಹೋಗಿರುವುದಿಲ್ಲವೆಂದು ತಿಳಿಯಿತು. ನನ್ನ ಮಗಳನ್ನು ಇಲ್ಲಿಯವರೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ತನ್ನ ಮಗಳು ಭೂಮಿಕಾಳೊಂದಿಗೆ ಕಾಣೆಯಾಗಿರುತ್ತಾಳೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 169/2021 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 28/07/2021 ರಂದು, ಸಂಜೆ 19-45 -ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, ಕನ್ನಡದಲ್ಲಿ ಟೈಪ್ ಮಾಡಿದ ವರದಿ ಸಲ್ಲಿಸಿದ್ದೇನೆಂದರೆ, ನಾನು ಇಂದು ದಿನಾಂಕ: 28/07/2021 ರಂದು, ಸಾಯಂಕಾಲ 17-30 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ಪಟ್ಟಣದ ಮಚಗರ ಗಡ್ಡಿಯ ಸರಾಫ್ ಬಜಾರ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂಬರ 41/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ನೋಂದಣಿ ಮಾಡಿಕೊಂಡು, ಸದರಿ ವಿಷಯ ಕುರಿತು ಗುನ್ನೆ ದಾಖಲಿಸಿಕೊಂಡು, ದಾಳಿ ಮಾಡಿ ತನಿಖೆ ಕೈಕೊಳ್ಳುವ ಕುರಿತು ಮಾನ್ಯ ಪ್ರಧಾನ ಜೆ.ಎಮ್.ಎಪ್.ಸಿ ನ್ಯಾಯಾಲಯ ಶಹಪೂರ ರವರಿಗೆ ಪತ್ರ ಬರೆದು ವಿನಂತಿಸಿಕೊಂಡ ಮೇರೆಗೆ , ಮಾನ್ಯ ನ್ಯಾಯಾಲಯವು ಇಂದು ಸಂಜೆ 19-30 ಗಂಟೆಗೆ ಅನುಮತಿ ನೀಡಿರುತ್ತಾರೆ. ಕಾರಣ ಮಟಕಾ ನಂಬರ ಬರೆದುಕೊಳ್ಳುವ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಅಂತ ಇತ್ಯಾದಿ ಫಿಯರ್ಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 169/2021 ಕಲಂ 78(3) ಕೆ.ಪಿಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ನಂತರ ದಾಳಿ ಮಾಡಿ ಆರೋಪಿತನಿಂದ ನಗದು ಹಣ 3150 ರೂಪಾಯಿ ಮತ್ತು ಒಂದು ಬಾಲ್ ಪೆನ್ ಹಾಗೂ ಎರಡು ಮಟಕಾ ಚೀಟಿಗಳು ಜಪ್ತಿ ಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲು ಹಾಜರ ಪಡಿಸಿರುತ್ತಾರೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 168/2020 ಕಲಂ 498(ಎ) 323. 504. 506. ಸಂ: 149 ಐಪಿಸಿ. : ಇಂದು ದಿನಾಂಕ 28/07/2021 ರಂದು 18-10 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀಮತಿ, ಕರೀಷ್ಮಾ ಗಂಡ ಹಣಮತ ಚವ್ಹಾಣ ವ|| 25 ಜಾ|| ಲಂಬಾಣಿ ಉ|| ಕೂಲಿ ಸಾ|| ಜಾಪಾನಾಯಕ ತಾಂಡಾ ಕನ್ಯಾಕೊಳ್ಳೂರ ಇವರು ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶ ವೆನೆಂದರೆ, ನನ್ನ ತಂದೆ ತಾಯಿಗೆ ನಾವು ನಾಲ್ಕುಜನ ಹೆಣ್ಣು ಮಕ್ಕಳು ಎರಡು ಜನ ಗಂಡು ಮಕ್ಕಳು ಇದ್ದು. ನಾನು ಹಿರಿಮಗಳು ಇದ್ದು ನನಗೆ ನಮ್ಮ ತಾಂಡಾದ ಹಣಮಂತ ತಂದೆ ಭೀಮಾ ಚವ್ಹಾಣ ಈತನೊಂದಿಗೆ ನಮ್ಮ ಸಂಪ್ರದಾಯದಂತೆ ಸುಮಾರು 6 ವರ್ಷಗಳ ಹಿಂದೆ ನಮ್ಮ ತಾಂಡಾದಲ್ಲಿ ನನ್ನ ಗಂಡ ಹಣಮಂತನ ಮನೆಯ ಮುಂದೆ ಮದುವೆ ಮಾಡಿ ಕೊಟ್ಟಿದ್ದು ಇರುತ್ತದೆ.ನಾನು ಮತ್ತು ನನ್ನ ಗಂಡ ಹಣಮಂತ ಇಬ್ಬರು ಮದುವೆಯಾದ ಮೇಲೆ ಸುಮಾರು 4 ವರ್ಷಗಳ ವರೆಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಬಂದಿದ್ದು ನನಗೆ ಒಬ್ಬಕಿ 3 ವರ್ಷದ ಲಾವಣ್ಯ ಹೆಣ್ಣು ಮಗಳು ಇರುತ್ತಾಳೆ, ನಾನು ಮತ್ತು ನನ್ನ ಗಂಡ ಹಣಮಂತ ಮತು ನನ್ನ ಮಾವ ಕುಮಾರ ನನ್ನ ಅಕ್ಕ ಉಷಾ ಎಲ್ಲರು ಬಾಂಬೆಯಲ್ಲಿ ದುಡಿಯಲು ಹೋಗಿ ನಮ್ಮ ತಾಂಡಾಕ್ಕೆ ಬರುತ್ತಿದ್ದೆವು. ನಾವು ನಮ್ಮ ತಾಂಡಾಕ್ಕೆ ಬಂದಾಗ ಈಗ ಸುಮಾರು 2 ವರ್ಷಗಳಿಂದ ನನಗೆ ನನ್ನ ಗಂಡ ಹಣಮಂತ ತಂದೆ ಭೀಮಾ, ನನ್ನ ಮಾವ ಭೀಮಾ ತಂದೆ ರಾಮು, ನನ್ನ ಗಂಡನ ಅಣ್ಣ ಕುಮಾರ ತಂದೆ ಭೀಮಾ, ಅಕ್ಕ ಉಷಾ ಗಂಡ ಕುಮಾರ, ನನ್ನ ಮೈದುನ ಧಶರಥ ತಂದೆ ಭೀಮಾ, ನನ್ನ ಅತ್ತೆ ಹೀರಿಬಾಯಿ ಗಂಡ ಭೀಮಾ, ಇವರೆಲ್ಲರು ನನಗೆ ನಿನು ಚೆನ್ನಾಗಿಲ್ಲ ನಿನಗೆ ಅಡುಗೆ ಮಾಡಲು ಬರುವದಿಲ್ಲ, ಹೋಲಮನಿ ಕೆಲಸ ಮಾಡಲು ಬರುವದಿಲ್ಲಾ, ಹಣಮಂತನಿಗೆ ತಕ್ಕ ಹೆಂಡತಿ ಅಲ್ಲ ಅಂತ ನನಗೆ ಮಾನಸಿಕವಾಗಿ ಬೈಯುವದು, ಕಿರುಕುಳ ಕೊಡುವುದು ಮಡುತ್ತಿದ್ದರು. ನನ್ನ ಗಂಡ ಹಣಮಂತನು ನಿನು ಸರಿಯಾಗಿಲ್ಲ ನನಗೆ ತಕ್ಕ ಹೆಂಡತಿ ಅಲ್ಲ ಅಂತ ಅಂದು ಕಿರುಕುಳ ನಿಡುತ್ತಿದ್ದನು, ಸದರಿ ವಿಷಯವನ್ನು ನನ್ನ ತಂದೆ ತಾಯಿಗೆ ತಿಳಿಸಿಸುತ್ತಿದ್ದೆನು, ಆಗ ನನ್ನ ತಂದೆ ತಾಯಿ ನನ್ನ ಗಂಡನ ಮನೆಯವರಿಗೆ ನನಗೆ ಚೆನ್ನಾಗಿ ನೋಡಿಕೊಳ್ಳಲು ಬುದ್ದಿ ಮಾತು ಹೆಳುತ್ತಿದ್ದರು. ಆದರು ನನ್ನ ಗಂಡನ ಮನೆಯವರು ನನಗೆ ಕಿರುಕುಳ ನಿಡುತ್ತಿದ್ದರು, ನನ್ನ ತಂದೆ ತಾಯಿ ನನಗೆ ಮನಸಿಗೆ ಅಚ್ಚಿಕೊಳ್ಳದೆ ನನ್ನ ಗಂಡನೊಂದಿಗೆ ಸುಖವಾಗಿ ಸಂಸಾರ ಮಾಡಲು ಬುದ್ದಿ ಮಾತು ಹೆಳುತ್ತಿದ್ದರಿಂದ ನಾನು ನನ್ನ ಗಂಡನ ಮನೆಯವರು ಕಿರುಕುಳ ಕೊಟ್ಟರು ಸಹಿಸಿಕೊಂಡು ಜಿವನ ನಡೆಸುತ್ತಿದ್ದೆನು. ಹಿಗಿದ್ದು ದಿನಾಂಕ 15/07/2021 ರಂದು ಸಂಜೆ 6-00 ಗಂಟೆಯ ಸುಮಾರಿಗೆ ನನ್ನ ಗಂಡ 1) ಹಣಮಂತ ತಂದೆ ಭೀಮಾ, ನನ್ನ ಮಾವ 2) ಭೀಮಾ ತಂದೆ ರಾಮು, ನನ್ನ ಗಂಡನ ಅಣ್ಣ 3) ಕುಮಾರ ತಂದೆ ಭೀಮಾ, ಅಕ್ಕ 4) ಉಷಾ ಗಂಡ ಕುಮಾರ, ನನ್ನ ಮೈದುನ 5) ಧಶರಥ ತಂದೆ ಭೀಮಾ, ನನ್ನ ಅತ್ತೆ 6) ಹೀರಿಬಾಯಿ ಗಂಡ ಭೀಮಾ, ಇವರೆಲ್ಲರು ನನಗೆ ಸೂಳಿ ನಿನು ನಿನ್ನ ತವರು ಮನೆಗೆ ಹೊಗು ನಮ್ಮ ಮನೆಯಲ್ಲಿ ಇರಬೆಡಾ ಹಣಮಂತನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂದು ನನಗೆ ಹೊರಗೆ ಹಾಕಿ ನನ್ನ ಅತ್ತೆ ನಮ್ಮ ಮನೆಯ ಮುಂದೆ ನನಗೆ ತನ್ನ ಕೈಯಿಂದ ಹೋಡೆದಳು ಆಗ ಅಲ್ಲೆ ಇದ್ದ 7) ಭೀಮಸಿಂಗ್ ತಂದೆ ಮೋತಿರಾಮ ರಾಠೋಡ, 8] ಮಾರುತಿ ತಂದೆ ಭೀಮಸಿಂಗ್ ರಾಠೋಡ, 9) ಅನುಸುಬಾಯಿ ಗಂಡ ಭೀಮಸಿಂಗ್ ರಾಠೋಡ, 10) ಕವಿತಾ ತಂದೆ ಭೀಮಸಿಂಗ್ ಇವರೆಲ್ಲರು ಬಂದು ನನಗೆ ರಂಡಿ ಸೂಳಿ ನಮ್ಮ ಅಳಿಯ ಹಣಮಂತನಿಗೆ ತಕ್ಕ ಹೆಂಡತಿ ಅಲ್ಲ ನಿನ್ನದು ಊರಲ್ಲಿ ಬಹಳವಾಗಿದೆ. ನಿನು ನಿನ್ನ ತವರು ಮನೆಗೆ ಹೋಗು ಹಣಮಂತನಿಗೆ ಇನ್ನೊಂದು ಮದುವೆ ಮಾಡುತ್ತೆವೆ ಅಂತ ಅಂದು ಅನಸುಬಾಯಿ ಮತ್ತು ಕವಿತಾ ನನಗೆ ಕೂದಲು ಹಿಡಿದು ಜಗ್ಗಾಡಿದ್ದು ಇರುತ್ತದೆ. ಅಲ್ಲೆ ಹೋಗುತ್ತಿದ್ದ ನನ್ನ ತಂದೆ ಗಂಗಾರಾಮ ತಂದೆ ಲೋಕ್ಯಾ ರಾಠೋಡ, ನನ್ನ ತಾಯಿ ಶಾಣಿಬಾಯಿ ಗಂಡ ಗಂಗಾರಾಮ ಮತ್ತು ಅಲ್ಲೆ ಇದ್ದ ನನ್ನ ಚಿಕ್ಕಮ್ಮ ರೇಣಿಬಾಯಿ ಗಂಡ ಹಿರಾಸಿಂಗ್ ರಾಠೋಡ, ಮತ್ತು ನನ್ನ ಚಿಕ್ಕಪ್ಪ ರಮೇಶ ತಂದೆ ಲೋಕೆಶ ರಾಠೋಡ, ಇವರು ಜಗಳ ನೋಡಿ ಬಂದು ಬಿಡಿಸಿದರು. ಆಗ ಈ ಮೇಲ್ಕಂಡ 10 ಜನರು ಇವತ್ತು ಉಳಿದುಕೊಂಡಿದ್ದಿ ಸೂಳಿ ಇನ್ನೊಮ್ಮೆ ಈ ಮನೆಯ ಕಡೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿದು ಇರುತ್ತದೆ, ನನಗೆ ಆಸ್ಪತ್ರೆಗೆ ತೋರಿಸುವಂತ ಗಾಯ ವಾಗದೆ ಇದ್ದುದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ನನಗೆ ಉಪಚಾರದ ಅವಶ್ಯಕತೆ ಇರುವುದಿಲ್ಲ. ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು ಅವಾಶ್ಚವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೆಕು ಅಂತ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 168/2020 ಕಲಂ 498(ಎ) 323, 504, 506, ಸಂ 149 ಐ.ಪಿ.ಸಿ. ನ್ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 170/2021 ಕಲಂ 78[3] ಕೆ.ಪಿ ಆಕ್ಟ : ಇಂದು ದಿನಾಂಕ 28/07/2021 ರಂದು 20-25 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ ಇವರು ಠಾಣೆಗೆ ಹಾಜರಾಗಿ ವರದಿ ನೀಡಿದ್ದೆನೆಂದರೆ, ನಾನು ಇಂದು ದಿನಾಂಕ: 28/07/2021 ರಂದು ರಾತ್ರಿ 20-00 ಗಂಟೆಯ ಸುಮಾರಿಗೆ ನಾನು ಶಹಾಪೂರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಶಹಾಪೂದ ನಗರದ ಸಿ.ಪಿ.ಎಸ್. ಗ್ರೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣೆಯ ಎನ್ ಸಿ ನಂ 41/20214 ನೇದ್ದು ದಾಖಲಿಸಿಕೊಂಡು. ಮಾನ್ಯ ಪ್ರಧಾನ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ ರವರಿಗೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿ ನೀಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು 20-15 ಗಂಟೆಗೆ ಅನುಮತಿ ನೀಡಿದ್ದರಿಂದ ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿ ವರದಿ ನೀಡಿದ ಪ್ರಕಾರ ಠಾಣಾ ಗುನ್ನೆ ನಂಬರ 170/2021 ಕಲಂ 78(3) ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 97/2021 ಕಲಂ: 379 ಐಪಿಸಿ : ದಿನಾಂಕ: 28/07/2021 ರಂದು 11-45 ಎಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ:28/07/2021 ರಂದು ಬೆಳಗ್ಗೆ 9-30 ಗಂಟೆ ಸುಮಾರಿಗೆ ಶ್ರೀ ಸೋಮಶೇಖರ ಎಸ್. ಕೆಂಚರೆಡ್ಡಿ ಸಿ.ಪಿ.ಐ ಯಾದಗಿರಿ ವೃತ್ತ ರವರು ತಮ್ಮ ಸಿಬ್ಬಂದಿಯವರೊಂದಿಗೆ ವಡಗೇರಾ ಠಾಣೆಗೆ ಭೇಟಿ ನೀಡಿದ್ದರು. ಬೆಳಗ್ಗೆ 10:00 ಗಂಟೆ ಸುಮಾರಿಗೆ ಮಾನ್ಯ ಆರಕ್ಷಕ ಉಪ-ಅಧೀಕ್ಷಕರು ಯಾದಗಿರಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಮಾನ್ಯ ಸಿ.ಪಿ.ಐ ಸಾಹೇಬರಿಗೆ ತುಮಕೂರು ಕಡೆಯಿಂದ ವಡಗೇರಾ ಮುಖಾಂತರ ಯಾದಗಿರಿಗೆ ಒಂದು ಟವರಸ್ ಲಾರಿಯಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ಖಚಿತ ಬಂದಿದ್ದರಿಂದ ಮಾನ್ಯ ಸಿ.ಪಿ.ಐ ಸಾಹೇಬರು ನನಗೆ ಮತ್ತು ಸಂಗಡ ಸಿಬ್ಬಂದಿಯವರಾದ ಪ್ರಕಾಶ ಹೆಚ್.ಸಿ 18 ವಡಗೇರಾ ಠಾಣೆ ಹಾಗೂ ಯಾದಗಿರಿ ವೃತ್ತದ ಸಿಬ್ಬಂದಿಯವರಾದ ಸೈದಪ್ಪ ಹೆಚ್.ಸಿ 34, ರಾಘವೇಂದ್ರರೆಡ್ಡಿ ಪಿಸಿ 255 ರವರೊಂದಿಗೆ ಸರಕಾರಿ ಜೀಪ್ ನಂ. ಕೆಎ 33 ಜಿ 0314 ನೇದ್ದರಲ್ಲಿ ಹೊರಟು ತಮಕೂರು ಕೋರ ಗ್ರೀನ ಶುಗರ ಫ್ಯಾಕ್ಟರಿ ಹತ್ತಿರ 10-15 ಎಎಮ್ ಸುಮಾರಿಗೆ ಹೋಗಿ ಶುಗರ ಫ್ಯಾಕ್ಟರಿಯ ಕೋರಿಕೆಯ ಬಸ್ ನಿಲ್ದಾಣವನ್ನು ಮರೆಯಾಗಿ ನಿಂತು ನೋಡುತ್ತಿದ್ದಾಗ 10-30 ಎಎಮ್ ಸುಮಾರಿಗೆ ತುಮಕೂರು ಕಡೆಯಿಂದ ಒಂದು ಟವರಸ್ ಲಾರಿ ಮೇಲ್ಗಡೆ ತಾಡಫಾಲ ಕಟ್ಟಿಕೊಂಡು ಬರುವುದು ನೋಡಿ ಖಚಿತಪಡಿಸಿಕೊಂಡು ನಾವು ಮತ್ತು ಸಿ.ಪಿ.ಐ ಸಾಹೇಬರು ಹೋಗಿ ಸದರಿ ಲಾರಿಯನ್ನು ಕೈ ಮಾಡಿ ನಿಲ್ಲಿಸಿದೆವು. ಲಾರಿ ನಂಬರ್ ನೋಡಲಾಗಿ ಒಊ 12 ಊಆ 869 ಇತ್ತು. ಆಗ ನಾವು ಹಿಂದುಗಡೆ ಹೋಗಿ ಲಾರಿಯ ತಾಡಫಾಲ ಸ್ವಲ್ಪ ಬಿಚ್ಚಿ ಒಳಗಡೆ ನೋಡಿದಾಗ ಲಾರಿಯಲ್ಲಿ ಮರಳು ಇದ್ದದ್ದು ಕಂಡುಬಂತು. ನಾವು ಹಿದುಗಡೆ ಹೋಗಿ ಲಾರಿಯ ತಾಡಫಾಲ ಬಿಚ್ಚುತ್ತಿದ್ದಾಗ ಸದರಿ ಲಾರಿ ಚಾಲಕನು ಇಳಿದು ಓಡಿ ಹೋದನು. ಸದರಿ ಲಾರಿ ಚಾಲಕನಿಗೆ ಪುನಃ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಲಾರಿಯಲ್ಲಿ ಬಾಡಿ ಲೇವಲ್ ವರೆಗೆ ಮರಳು ತುಂಬಿತ್ತು. ಅದರ ಮೇಲೆ ತಾಡಫಾಲ ಕಟ್ಟಿದ್ದರು. ಸದರಿ ಲಾರಿ ಚಾಲಕನು ಕೃಷ್ಣಾ ನದಿಯಿಂದ ಅಕ್ರಮವಾಗಿ ಮತ್ತು ಕಳ್ಳತನದಿಂದ ಲಾರಿಯಲ್ಲಿ ಮರಳು ತುಂಬಿ ಸಾಗಿಸುತ್ತಿದ್ದಾಗ ನಾವು ದಾಳಿ ಮಾಡಿದ್ದನ್ನು ನೋಡಿ ಮರಳು ತುಂಬಿದ ಟವರಸ್ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ಸದರಿ ಲಾರಿ ಚಾಲಕ ಮತ್ತು ಮಾಲಿಕ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಲಾರಿಯನ್ನು ಬೇರೆ ಡ್ರೈವರ ಸಹಾಯದಿಂದ ಚಲಾಯಿಸಿಕೊಂಡು ಠಾಣೆಗೆ ತಂದು ಈ ದೂರು ನೀಡುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 97/2021 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ನಾರಾಯಣಪೂರ ಪೊಲೀಸ ಠಾಣೆ
ಗುನ್ನೆ ನಂ.47/2021 ಕಲಂ: 498(ಎ), 323, 504, 506 ಸಂ 34 ಐಪಿಸಿ ಮತ್ತು ಕಲಂ: 3 & 4 ಡಿಪಿ ಕಾಯ್ದೆ : ಪಿಯರ್ಾದಿಯಾದ ಶ್ರೀಮತಿ ಸ್ವಾತಿ @ ಹನುಮಂತಿ ಗಂಡ ಲಕ್ಷ್ಮಣ ಕಟ್ಟಿಮನಿ ಸಾ:ಮಲ್ಲಗಣ, ತಾ:ಸಿಂದಗಿ, ಜಿ:ವಿಜಯಪೂರ, ಹಾಲಿವಸ್ತಿ: ಕುರೇಕನಾಳ ತಾಂಡಾ, ತಾ: ಹುಣಸಗಿ, ಜಿ: ಯಾದಗಿರಿ ಇವರು ಇವರು ದಿನಾಂಕ:28/07/2021 ರಂದು 7:30 ಪಿಎಮ್ಕ್ಕೆ ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ 2019 ನೇ ಸಾಲಿನಲ್ಲಿ ನಮ್ಮ ತಂದೆ-ತಾಯಿಯವರ ಮತ್ತು ಹಿರಿಯರಾದ ಹುಲಗಪ್ಪ ತಂದೆ ಬಸವರಾಜ ಕಟ್ಟಿಮನಿ ಸಾ|| ತೊಳದಿನ್ನಿ, ತಿಮ್ಮಣ್ಣ ತಂದೆ ಮೂಡ್ಲಪ್ಪ ವಡ್ಡರ ಸಾ|| ಬಲಶೆಟ್ಟಿಹಾಳ, ಲೋಕನಾಥ ತಂದೆ ಸುಬ್ಬಣ್ಣ ಪವಾರ ಸಾ|| ಕುರೇಕನಾಳ ತಾಂಡಾ, ಸಂತೋಷ ತಂದೆ ಹೊಬಣ್ಣ ಪವಾರ ಸಾ||ಕುರೇಕನಾಳ ತಾಂಡಾ, ರಮೇಶ ತಂದೆ ಸುಬ್ಬಣ್ಣ ಪವಾರ ಸಾ|| ಕುರೇಕನಾಳ ತಾಂಡಾ ಇವರ ಸಮಕ್ಷಮದಲ್ಲಿ ನನ್ನ ನಿಶ್ಚಿತಾರ್ಥವು ಲಕ್ಷ್ಮಣ ತಂ. ಜಟ್ಟೆಪ್ಪ ಕಟ್ಟಿಮನಿ ಸಾ: ಮಲ್ಲಗಣ ಇವರೊಂದಿಗೆ ನಡೆದಿದ್ದು ನಿಶ್ಚಿತಾರ್ಥದ ಸಮಯಕ್ಕೆ ನನ್ನ ಗಂಡ ಮತ್ತು ಗಂಡನ ಮನೆಯವರು ವರದಕ್ಷಿಣೆಯಾಗಿ ಎರಡು ತೊಲೆ ಬಂಗಾರ ಮತ್ತು 50,000/- ರೂಪಾಯಿ ಹಣವನ್ನು ಹಾಗೂ 60,000/- ರೂಪಾಯಿ ಮೌಲ್ಯದ ಗೃಹ ಬಳಕೆಯ ವಸ್ತುಗಳನ್ನು ಕೊಡುವಂತೆ ಕೇಳಿಕೊಂಡಿದ್ದು ಅದಕ್ಕೆ ನಮ್ಮ ಮನೆಯವರು ಒಪ್ಪಿ ಗುರುಹಿರಿಯರ ಸಮಕ್ಷಮದಲ್ಲಿ ದಿನಾಂಕ:29-06-2020 ರಂದು ಲಕ್ಷ್ಮಣ ತಂ. ಜಟ್ಟೆಪ್ಪ ಕಟ್ಟಿಮನಿ, ಸಾ: ಮಲ್ಲಗಣ ಇವರೊಂದಿಗೆ ನಡೆದ ನನ್ನ ಮದುವೆಯ ಸಮಯಕ್ಕೆ ನನ್ನ ಗಂಡನಿಗೆ ಮತ್ತು ಗಂಡನ ಮನೆಯವರಿಗೆ ಎರಡು ತೊಲೆ ಬಂಗಾರ ಮತ್ತು 50,000/- ರೂಪಾಯಿ ಹಣವನ್ನು ಹಾಗೂ 60,000/- ರೂಪಾಯಿ ಮೌಲ್ಯದ ಗೃಹ ಬಳಕೆಯ ವಸ್ತುಗಳನ್ನು ನನ್ನ ತವರು ಮನೆಯವರು ಕೊಟ್ಟು ನನ್ನ ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ನಂತರ ನಾನು ನನ್ನ ಗಂಡನ ಮನೆಯಲ್ಲಿ ಸುಮಾರು 06 ತಿಂಗಳವರೆಗೆ ಸಂಸಾರ ಮಾಡಿರುತ್ತೇನೆ. ನಂತರ ನನ್ನ ಗಂಡ ಹಾಗೂ ಮಾವ ಅತ್ತೆ ಮತ್ತು ಮನೆಯವರು ಸೇರಿ ನಿನಗೆ ಮಕ್ಕಳಾಗುವುದಿಲ್ಲ. ನನ್ನ ಮಗನಿಗೆ 2ನೇ ಮದುವೆ ಮಾಡುತ್ತೇವೆ ಅದಕ್ಕೆ ಒಪ್ಪಿಗೆ ಕೊಡಬೇಕು ಇಲ್ಲ ಅಂದರೆ ಇನ್ನೂ ಹೆಚ್ಚಿನ ವರದಕ್ಷಿಣೆಯಾಗಿ ತವರೂ ಮನೆಯಿಂದ 30 ಗ್ರಾಂ ಬಂಗಾರ 1 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬರಬೇಕಂತ ಮನೆಯಿಂದ ಹೊರಗೆ ಹಾಕಿದರು. ನಾನು ನನ್ನ ತವರು ಮನೆಗೆ ಬಂದು ಈ ವಿಷಯ ತಿಳಿಸಿದೆ. ದಿನಾಂಕ:25/05/2021 ರಂದು ಮುಂಜಾನೆ ಊರಿಂದ ಹೊರಟು ಮದ್ಯಾಹ್ನ 1:30 ಗಂಟೆಯ ಸುಮಾರಿಗೆ ನಾನು ನಮ್ಮ ತಂದೆ-ತಾಯಿ, ಅಣ್ಣ ಮತ್ತು ನಿಂಗನಗೌಡ ತಂದೆ ದುರಗಪ್ಪಗೌಡ ಮಾಲಿಪಾಟೀಲ ಸಾ||ಸೊನ್ನಾಪೂರ ಕೂಡಿ ನನ್ನ ಗಂಡನ ಮನೆಗೆ ಹೋದಾಗ ಮನೆಯಲ್ಲಿದ್ದ ನನ್ನ ಗಂಡನಾದ 1) ಲಕ್ಷ್ಮಣ ತಂ. ಜಟ್ಟೆಪ್ಪ ಕಟ್ಟಿಮನಿ, ಮಾವನಾದ 2) ಜಟ್ಟೆಪ್ಪ ತಂ. ಬೂತಾಳಿ ಕಟ್ಟಿಮನಿ, ಅತ್ತೆಯಾದ 3) ಸುಕೀಂದ್ರ ಗಂ. ಜಟ್ಟೆಪ್ಪ ಕಟ್ಟೆಮನಿ, ಮೈದುನನಾದ 4) ರಮೇಶ ತಂ. ಜಟ್ಟೆಪ್ಪ ಕಟ್ಟಿಮನಿ ಸಾ|| ಎಲ್ಲರೂ ಮಲ್ಲಗಣ, ತಾ||ಸಿಂದಗಿ, ಜಿ|| ವಿಜಯಪೂರ ಇವರೆಲ್ಲರೂ ನಮ್ಮ ತಂದೆ-ತಾಯಿ, ಅಣ್ಣ ಮತ್ತು ನಿಂಗನಗೌಡ ಮಾಲಿಪಾಟೀಲ್ ಇವರಿಗೆ ಯಾಕೆ ಇವಳಿಗೆ ಕರೆದುಕೊಂಡು ಬಂದಿರಿ ಬರಿಗೈಯಲ್ಲಿ ನಾವು ಹೇಳಿದ ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಂದಿಲ್ಲ ಅಂದರೆ ಮರಳಿ ಊರಿಗೆ ಕರೆದುಕೊಂಡು ಹೋಗಿ ಅಂತಾ ಅಂದಾಗ ನಮ್ಮ ತಂದೆ-ತಾಯಿವರು ನನ್ನ ಗಂಡನ ಮನೆಯವರಿಗೆ ನಾವು ತುಂಬಾ ಬಡವರು ಇದ್ದಿವಿ ನೀವು ಹೇಳಿದ ಹಣ ಮತ್ತು ಬಂಗಾರ ನಮ್ಮಿಂದ ಕೊಡಲು ಆಗಲ್ಲ ಅಂತಾ ಅಂದಿದ್ದು ನಮ್ಮ ಸಂಗಡ ಇದ್ದ ನಿಂಗನಗೌಡ ಮಾಲಿಪಾಟೀಲ್ ಇವರು ನನ್ನ ಗಂಡನ ಮನೆಯವರಿಗೆ ಸರಿಯಾಗಿ ಮಾಡಿಕೊಂಡು ಉಪ-ಜೀವನ ಸಾಗಿಸಿರಿ ಇನ್ನೂ ಸಣ್ಣ ವಯಸ್ಸು ಇದೆ ಹಣದ ಆಸೆ ಮಾಡ ಬೇಡರಿ ಈಗಾಗಲೆ ಮದುವೆಯ ಕಾಲಕ್ಕೆ ಹಣ ಮತ್ತು ಬಂಗಾರವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದನ್ನು ದೊಡ್ಡದು ಮಾಡಿಕೊಳ್ಳಿ ಅಂತಾ ಅಂದಿದ್ದು ಆಗ ಅವರು ಇದನ್ನೆಲ್ಲಾ ಹೇಳಬೇಡರಿ ನಾವು ಅವಳಿಗೆ ನಡೆಸಿಕೊಳ್ಳುವುದಿಲ್ಲ ಮರಳಿ ಕರೆದುಕೊಂಡು ಹೋಗರ್ರಿ ಅಂತಾ ಹೇಳಿದ್ದು ಇರುತ್ತದೆ. ನಂತರ ನನ್ನ ಗಂಡನು ನನಗೆ ಲೇ ಬೋಸಡಿ, ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಅಂದರೆ ಹಾಗೆ ಬಂದಿಯಾ ಎಂದು ನನ್ನ ಕೈ ಹಿಡಿದು ಜೋರಾಗಿ ಜಗ್ಗಿದನು ನಾನು ಕೆಳಗೆ ಬಿದ್ದೆ ನನ್ನ ಅತ್ತೆಯಾದ ಸುಕೀಂದ್ರ ಈಕೆಯು ನನ್ನ ಸೀರೆ ಹಿಡಿದು ಜಗ್ಗಿ ಬಲಗಡೆ ಕಪಾಳಕ್ಕೆ ಕೈಯಿಂದ ಹೊಡೆದಳು. ನಮ್ಮ ಮಾವ ಮತ್ತು ಮೈದುನ ಇವರು ನನಗೆ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ನಮ್ಮ ಮಾತಿಗೆ ಬೆಲೆ ಕೊಡದೇ ಬರಿಗೈಯಲ್ಲಿ ಬಂದಿದಿ ಮರಳಿ ತವರೂ ಮನೆಗೆ ಹೋಗು ಇಲ್ಲದಿದ್ದರೆ ನಿನಗೆ ಜೀವಂತ ಬಿಡುವುದಿಲ್ಲ ಖಲಾಸ್ ಮಾಡುತ್ತೇವೆ ಅಂತಾ ಜೀವಬೇದರಿಕೆ ಹಾಕಿದ್ದು ಇರುತ್ತದೆ. ನಂತರ ನಾನು ಮರಳಿ ನಮ್ಮ ಊರಿಗೆ ನಮ್ಮವರೊಂದಿಗೆ ಬಂದು ಇಲ್ಲಿಯೇ ತವರೂ ಮನೆಯಲ್ಲಿ ಇಲ್ಲಿಯವರೆಗೆ ವಾಸವಿದ್ದಿದ್ದು ಈ ಬಗ್ಗೆ ನಾನು ದೂರ ದಾಖಲಿಸಲು ನನ್ನ ಗಂಡನ ಊರಾದ ಮಲ್ಲಗಣಕ್ಕೆ ಸಂಬಂದಿಸಿದ ಪೊಲೀಸ್ ಠಾಣೆಗೆ ಹೋಗಬೇಕೆಂದರೆ ನನಗೆ ನನ್ನ ಗಂಡ ಮತ್ತು ಗಂಡನ ಮನೆಯವರ ಭಯ ಇದ್ದುದರಿಂದ ಅಲ್ಲಿಗೇ ಹೋಗಿ ದೂರನ್ನು ನೀಡದೆ ಈ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರಮಾಡಿಕೊಂಡು ತಡವಾಗಿ ಬಂದು ಈ ದೂರು ಅಜರ್ಿಯನ್ನು ನೀಡುತ್ತಿದ್ದು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.47/2021 ಕಲಂ: 498(ಎ), 323, 504, 506 ಸಂ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ. 118/2021 ಕಲಂ 498(ಎ), 306 ಸಂಗಡ 34 ಐಪಿಸಿ : ಪ್ರಕರಣದ ಫಿಯರ್ಾದಿದಾರಳ ಮಗಳಾದ ರಜಿತಾ ಎಂಬುವವಳಿಗೆ ಕಳೆದ 8-9 ವರ್ಷಗಳಿಂದೆ ಗುರುಮಠಕಲ್ ಪಟ್ಟಣದ ಭೀರಪ್ಪ ತಂದೆ ನಾಗಪ್ಪ ಗ್ಯಾಂಗ್ ಎಂಬುವವನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ರಜಿತಾ ಇವಳಿಗೆ ಹೊಲ ಮತ್ತು ಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಬರುವದಿಲ್ಲ ಅಂತಾ ಹೇಳಿ ಪ್ರಕರಣದ ಆಪಾದಿತರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ಮಾಡಿದ್ದರಿಂದ ಆಪಾದಿತರ ಕಿರುಕುಳ ತಾಳದೆ ರಜಿತಾ ದಿನಾಂಕ 27.07.2021 ರಂದು ರಾತ್ರಿ 11 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುತ್ತಾಳೆ. ಗಾಯಾಳುವಿಗೆ ಗುರುಮಠಕಲ್, ಯಾದಗಿರಿ, ರಾಯಚೂರು ಆಸ್ಪತ್ರೆಗಳಲ್ಲಿ ಉಪಚಾರ ಮಾಡಿಸಿದರೂ ಸಹ ಗುಣಮುಖಳಾಗದೆ ಮೃತಪಟ್ಟಿರುತ್ತಾಳೆ ಅಂತಾ ವಗೈರೆ ಫಿಯರ್ಾದಿ.

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 119/2021 ಕಲಂ: 143, 147, 148, 323, 324 504, 506 ಸಂ.149 ಐಪಿಸಿ : ದಿನಾಂಕ 27.07.2021 ರಂದು ಆರೋಪಿತರ ಮನೆಯ ಪಕ್ಕದಲ್ಲಿರುವ ಪಿರ್ಯಾಧಿದಾರರ ಮನೆಯಿದ್ದು ಪಿರ್ಯಾಧಿಯು ತಮ್ಮ ಮನೆಗೆ ಕಂಪೌಂಡ ಕಟ್ಟಿಕೊಂಡಿದ್ದು ಈ ಕಂಪೌಂಡ ಗೋಡೆಯನ್ನು ಆರೋಪಿತರು ಕೆಡವಿದ್ದು ಅದನ್ನು ಕೇಳಿದಕ್ಕೆ ಇದೇ ಸಿಟ್ಟಿನಿಂದ ನಿನ್ನೆ ದಿನಾಂಕ27.07.2021 ರಂದು 6.30 ಗಂಟೆಯ ಸುಮಾರಿಗೆ ಪಿರ್ಯಾಧಿಯು ಮತ್ತು ಅವರ ಮನೆಯವರ ತಮ್ಮ ಮನೆಯಮುಂದೆ ಮತನಾಡುತ್ತಾ ಕುಳಿತ್ತಿದ್ದಾಗ ಆರೋಪಿತರೆಲ್ಲರು ಗುಂಪು ಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ವಗೈರೆ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 119/2021 ಕಲಂ: 143, 147, 148, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 54/2021 143, 147, 148, 323, 324, 504, 506 ಸಂಗಡ 149 ಐಪಿಸಿ : ದಿನಾಂಕ:28/07/2021 ರಂದು ಸಾಯಾಂಕಾಲ 18.30ಪಿ.ಎಮ್ಕ್ಕೆ ಫಿರ್ಯಾದಿಯ ತಂದೆಯಾದ ನಾಗಪ್ಪ ಚವ್ಹಾಣ ಈತನು ಸಿಸಿ ರೋಡ ಕೆಲಸ ಸರಿಯಾಗಿ ನಡೆದಿದೆ, ನೇರವಾಗಿ ಮುಖ್ಯ ರಸ್ತೆಗೆ ಒಯ್ಯಿರಿ ಅಂದಾಗ ಅಷ್ಟಕ್ಕೆ ಫಿರ್ಯಾದಿಯ ಅತ್ತೆಯ ಗಂಡನು ಹಾಗೂ ಇತರರು ಸೇರಿ ಅಕ್ರಮ ಕುಟ ಕಟ್ಟಿಕೊಂಡು ಬಂದು ಫಿರ್ಯಾದಿಗೆ & 2 ಜನ ಮಕ್ಕಳಿಗೆ ಕಲ್ಲಿನಿಂದ 2 ಕೈಗಳಿಗೆ ಹೊಡೆದು ಭಾರಿ ಒಳಪೆಟ್ಟು ಮಾಡಿ ಫಿರ್ಯಾದಿಯ ತಾಯಿಯು ಬಿಡಿಸಲು ಬಂದಾಗ ಅವಳಿಗೂ ಸಹ ಚೂರಿಯಿಂದ ಬಲಗೈ ಹೊಡೆದು ರಕ್ತಗಾಯಪಡಿಸಿದ್ದು,್ತ ಅಲ್ಲದೆ ಕಟ್ಟಿಗೆಯಿಂದ ಕಲ್ಲಿನಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 29-07-2021 03:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080