ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-07-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 114/2022 ಕಲಂ. 279,337, 338 ಐಪಿಸಿ: ಇಂದು ದಿನಾಂಕ 28-07-2022 ರಂದು ಸಾಯಂಕಾಲ 5-10 ಪಿ.ಎಮ್ ಕ್ಕೆ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ದೇವಿಂದ್ರಮ್ಮಾ ಗಂಡ ದೊಡ್ಡ ಹಣಮಂತ ಬಡಿಗೇರ ವಯಾ:50 ಉ: ಹೋಲಮನೆಗೆಲಸ ಸಾ; ಆರ್ ಹೊಸಳ್ಳಿ ತಾ:ಜಿ: ಯಾದಗಿರಿ ಇವರು ಹೇಳಿಕೆ ನೀಡಿದ್ದು ಅದರ ಸಾರಾಂಶವೆನಂದರೆ ಎಂದಿನಂತೆ ಇಂದು ದಿನಾಂಕ 28-07-2022 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಮ್ಮ ಎತ್ತಿನ ಬಂಡಿ ಕಟ್ಟಿಕೊಂಡು ನಾನು ಹಾಗೂ ನನ್ನ ಮಗನಾದ ನಿರಂಜನ ತಂದೆ ದೊಡ್ಡ ಹಣಮಂತ ಹಾಗೂ ನಮ್ಮ ಸಂಭಂಧಿಯಾದ ಮಹಾಂತೇಶ ತಂದೆ ಮಲ್ಲೇಶಪ್ಪಾ ಶಾಂತಮ್ಮನೋರ ಮೂವರು ಕೂಡಿಕೊಂಡು ಬಳಿಚಕ್ರ ರೋಡಿಗೆ ಇದ್ದ ನಮ್ಮ ಹೋಲಕ್ಕೆ ಹೋಗಿ ಸಾಯಂಕಾಲದವರೆಗೆ ಹೋಲದಲ್ಲಿ ಕೆಲಸ ಮಾಡಿ ಎತ್ತುಗಳಿಗೆ ಮೇಯಿಸಿಕೊಂಡು ಮರಳಿ ಸಾಯಂಕಾಲ 4 ಗಂಟೆ ಸುಮಾರಿಗೆ ಮತ್ತೆ ಎತ್ತಿನ ಬಂಡಿ ಕಟ್ಟಿಕೊಂಡು ಮರಳಿ ಮನೆಯ ಕಡೆಗೆ ಹೊರಟು ನಮ್ಮೂರ ಹತ್ತಿರವಿದ್ದ ಟೂಲ್ ನಾಕಾ ಹತ್ತಿರ ಬರುತ್ತಿದ್ದಂತೆ ನಮ್ಮ ಹಿಂದುಗಡೆಯಿಂದ ಅಂದರೆ ಬಳಿಚಕ್ರ ಕಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ಮೇಲೆ ಹಿಂದುಗಡೆ ಇಬ್ಬರನ್ನು ಕೂಡಿಸಿಕೊಂಡು ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಹಿಂದುಗಡೆಯಿಂದ ನಮ್ಮ ಎತ್ತಿನ ಬಂಡಿಗೆ ಡಿಕ್ಕಿಪಡಿಸಿ ಅಪಘಾತಪಡಿಸಿದನು. ಸ್ವಲ್ಪ ಸುದಾರಿಸಿಕೊಂಡು ನೋಡಲಾಗಿ ನನಗೆ ಎಡಗೈ ಮುಂಗ್ಯಗೆ ತರಚಿದ ಗಾಯ, ಎಡಮೊಣಕಾಲಿಗೆ ತರಚಿದ ಗಾಯ ಹಾಗೂ ಬಲಮೊಣಕಾಲಿಗೆ ಭಾರಿ ಗುಪ್ತಗಾಯವಾಗಿತ್ತು. ಅತ್ತೆಇ ಬಂಡಿಯಲ್ಲಿದ್ದ ನನ್ನ ಮಗ ನಿರಂಜನ ಹಾಗೂ ಮಹಾಂತೇಶ ಇವರಿಗೆ ಯಾವುದೇ ಗಾಯಗಳಾಗಿರಲಿಲ್ಲಾ. ಮೋಟಾರ ಸೈಕಲ್ ಮೇಲೆ ಹಿಂದುಗಡೆ ಕುಳಿತ ಈರಪ್ಪಾ ತಂದೆ ನರಸಪ್ಪಾ ಪೂಜಾರೋರ ಇತನಿಗೆ ತಲೆ ಬಲಗಡೆ ಬಾಜು ರಕ್ತಗಾಯ, ಬಲಮೊಣಕಾಲು ಕೆಳಗೆ ತರಚಿದ ಗಾಯಗಳಾಗಿದ್ದವು. ಮೋಟಾರ್ ಸೈಕಲ್ ಮೇಲೆ ಹಿಂದುಗಡೆ ಕುಳಿತ ಇನ್ನೊಬ್ಬ ಮಗಳಾದ ಯಲ್ಲಮ್ಮಾ ಗಂಡ ಸಾಬಣ್ಣಾ ಪೂಜಾರೋರ ಇವಳಿಗೆ ಯಾವುದೇ ಗಾಯಗಳಾಗಿರಲಿಲ್ಲಾ. ಮೋಟಾರ ಸೈಕಲ್ ಚಾಲಕನಾದ ಮಲ್ಲಿಕಾಜರ್ುನ ತಂದೆ ಸಾಬಣ್ಣಾ ಪೂಜಾರೋರ ಸಾ: ಯಾದಗಿರಿ ಇತನಿಗೆ ಎಡಮೊಣಕಾಲಿಗೆ ಭಾರಿ ಗುಪ್ತಗಾಯ ಮತ್ತು ಎಡ ತೊಡೆಗೆ ತರಚಿದ ಗಾಯಗಳಾಗಿದ್ದವು. ನಂತರ ಮೋಟಾರ ಸೈಕಲ್ ನಂಬರ ನೋಡಲಾಗಿ ಅದರ ನಂಬರ ಕೆ.ಎ-33/ಇಬಿ-4940 ಅಂತಾ ಗೊತ್ತಾಯಿತು. ನಂತರ ಸುಮಾರು ಅರ್ದ ತಾಸಿನ ಅಲ್ಲಿಗೆ ಅಂಬುಲೇನ್ಸ ವಾಹನ ಬಂದಿದ್ದು ಗಾಯಹೊಂದಿದ ನಾವೆಲ್ಲರೂ ಅದರಲ್ಲಿ ಕುಳಿತುಕೊಂಡು ಯಾದಗಿರಿಯ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಅಂತಾ ಫಿರ್ಯಾಧಿ ಸಾರಾಂಶವಿರುತ್ತದೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ:78 (3) ಕೆ.ಪಿ ಎಕ್ಟ: ಇಂದು ದಿನಾಂಕ: 28/07/2022 ರಂದು 5-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:28/07/2022 ರಂದು ಮದ್ಯಾಹ್ನ ಸಮಯ ಸಮಯದಲ್ಲಿ ನಾನು ಮತ್ತು ಸಿಬ್ಬಂದಿಯವರಾದ ತಾಯಪ್ಪ ಹೆಚ.ಸಿ 79, ಮಹೇಂದ್ರ ಪಿಸಿ 254, ಬಾಬುರಾಯ ಪಿಸಿ 101 ಹಾಗೂ ಸಾಬರೆಡ್ಡಿ ಪಿಸಿ 290 ರವರು ಠಾಣೆಯಲ್ಲಿದ್ದಾಗ ಬೀಟ್ ಸಂ. 6 ತಡಿಬಿಡಿ ಗ್ರಾಮದ ಬೀಟ ಸಿಬ್ಬಂದಿ ಮಹೇಂದ್ರ ಪಿಸಿ 254 ರವರಿಗೆ ಬಾತ್ಮಿ ಬಂದಿದ್ದೇನಂದರೆ ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಎಂದು ಖಚಿತ ಮಾಹಿತಿ ಬಂದ ಸಂಗಡತಿ ನನಗೆ ತಿಳಿಸಿದಾಗ ನಾನು ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯರು ಮತ್ತು ಸಿಬ್ಬಂದಿಯವರಿಗೆ ಮಟ್ಕಾ ದಾಳಿ ವಿಷಯ ತಿಳಿಸಿ, ಅವರನ್ನು 2-45 ಪಿಎಮ್ ಕ್ಕೆ ಕರೆದುಕೊಂಡು ಹೊರಟು ಸಮಯ 3-30 ಪಿಎಮ್ ಕ್ಕೆ ತಡಿಬಿಡಿ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಅಲ್ಲಿಂದ ಬಸ್ ನಿಲ್ದಾಣದ ವರೆಗೆ ನಡೆದುಕೊಂಡು ಹೋಗಿ ಬಸ್ ನಿಲ್ದಾಣವನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿಯು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ, ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ತನ್ನ ಪಟ್ಟಿಯಲ್ಲಿ ಬರೆದುಕೊಂಡು ಅವರಿಗೆ ಕೂಡಾ ಮಟ್ಕಾ ನಂಬರಗಳನ್ನು ಒಂದೊಂದು ಚೀಟಿ ಮೇಲೆ ಬರೆದುಕೊಡುತ್ತಿದ್ದದ್ದನ್ನು ನೋಡಿ ಖಚಿತಪಡಿಸಿಕೊಂಡು ಸಮಯ 3-45 ಪಿಎಮ್ ಕ್ಕೆ ಪಂಚರ ಸಮಕ್ಷಮ ಒಮ್ಮೆಲೆ ದಾಳಿ ಮಾಡಿ ಅವನಿಗೆ ಹಿಡಿದಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಮಲ್ಲಪ್ಪ ತಂದೆ ತಿಪ್ಪಣ್ಣ ಕಡ್ಡೆರ, ವ:50, ಜಾ:ಕುರುಬರ, ಉ:ಒಕ್ಕಲುತನ ಸಾ:ತಡಿಬಿಡಿ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದ ಒಂದು ಪಟ್ಟಿ ಅ.ಕಿ.00=00, 2) ನಗದು ಹಣ 2930/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ್ದ ಹಣವು ಮಟಕಾ ನಂಬರ ಬರೆದುಕೊಟ್ಟಿದ್ದರಿಂದ ಬಂದಿರುತ್ತದೆ ಅಂತಾ ತಿಳಿಸಿದನು. ಸದರಿ ಮುದ್ದೇಮಾಲನ್ನು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿ, ನಿಮಗೆ ಸರಕಾರಿ ತಫರ್ೆಯಿಂದ ಈ ದೂರು ಸಲ್ಲಿಸುತ್ತಿದ್ದು, ಪ್ರಕರಣ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 100/2022 ಕಲಂ:78(3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 121/2022 ಕಲಂ: 420 ಐಪಿಸಿ ಮತ್ತು 78() ಕೆ.ಪಿ. ಆಕ್ಟ್: ಇಂದು ದಿನಾಂಕ 28.07.2022 ರಂದು ಬೆಳಗ್ಗೆ 11-30 ಎ.ಎಮ ಕ್ಕೆ ಗುರುಮಠಕಲ್ ಪಟ್ಟಣದ ಬಸ ನಿಲ್ದಾಣದ ಮುಂದುಗಡೆ ಯಲ್ಲಮ್ಮ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು 1/- ರೂ ಗೆ 80/- ರೂ ಮಟಕಾ ಬರೆಯಿಸಿರಿ ಅಂತಾ ಕೂಗುತ್ತ ಸಾರ್ವಜನಿಕರಿಗೆ ವಂಚಿಸಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ-ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತ ಬಾತ್ಮಿಯ ಮೆರೆಗೆ ಪಂಚರ ಹಾಗೂ ಸಿಬ್ಬ|ಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿದ ಬಗ್ಗೆ.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 123/2022 ಕಲಂ: 420 ಐಪಿಸಿ ಮತ್ತು 78() ಕೆ.ಪಿ. ಆಕ್ಟ್: ಇಂದು ದಿನಾಂಕ 28.07.2022 ರಂದು ಬೆಳಗ್ಗೆ 3 ಪಿ.ಎಮ ಕ್ಕೆ ಗುರುಮಠಕಲ್ ಪಟ್ಟಣದ ಕೆ.ಕೆ.ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು 1/- ರೂ ಗೆ 80/- ರೂ ಮಟಕಾ ಬರೆಯಿಸಿರಿ ಅಂತಾ ಕೂಗುತ್ತ ಸಾರ್ವಜನಿಕರಿಗೆ ವಂಚಿಸಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ-ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನ್ನು ಖಚಿತ ಬಾತ್ಮಿಯ ಮೆರೆಗೆ ಪಂಚರ ಹಾಗೂ ಸಿಬ್ಬ|ಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿದ ಬಗ್ಗೆ.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 122/2022 ಕಲಂ: 420 ಐಪಿಸಿ ಮತ್ತು 78() ಕೆ.ಪಿ. ಆಕ್ಟ್: ಇಂದು ದಿನಾಂಕ 28.07.2022 ರಂದು ಮಧ್ಯಾಹ್ನ 1:45 ಗಂಟೆಗೆ ಚಿಂತನಳ್ಳೀ ಗ್ರಾಮದ ಬಸ್ ನಿಲ್ದಾಣದಲ್ಲಿ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡು ವಂಚನೆ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರನ್ನು ಮತ್ತು ಪಂಚರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಮಧ್ಯಾಹ್ನ 2:30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಆತನ ವಶದಲ್ಲಿದ್ದ ನಗದು ಹಣ, ಒಂದು ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 3170/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ಸಮಯ ಸಂಜೆ 04:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 122/2022 ಕಲಂ: 420 ಐಪಿಸಿ ಮತ್ತು ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 90/2022 ಕಲಂ 379 ಐಪಿಸಿ: ಇಂದು ದಿನಾಂಕ 28.07.2022 ರಂದು ಮಧ್ಯಾಹ್ನ 2 ಗಂಟೆಗೆ ಸುರೇಶರೆಡ್ಡಿ ತಂದೆ ಸಿದ್ದರಾಮರೆಡ್ಡಿ ಬಿರದಾರ, ವ|| 25 ವರ್ಷ, ಜಾ|| ಲಿಂಗಾಯತ, ಉ|| ಲ್ಯಾಬ ಟೆಕ್ನಿಶಿಯನ್, ಸಾ|| ಮುನಗಲ್ ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನನಗೆ ರಾಯಚೂರುನಲ್ಲಿ ವೈಯುಕ್ತಿಕ ಕೆಲಸವಿದ್ದ ಪ್ರಯುಕ್ತ ದಿನಾಂಕ 23.07.2022 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನನ್ನ ಹೊಂಡ ಡ್ರೀಮ್ ಮೋಟಾರ್ ಸೈಕಲ್ ವಾಹನ ನೊಂದಣೆ ಸಂಖ್ಯೆ ಕೆಎ-33-ಕ್ಯೂ-4029 ವಾಹನವನ್ನು ಸೈದಾಪೂರ ರೈಲ್ವೆ ಸ್ಟೇಷನ್ ಸಮೀಪವಿದ್ದ ಓಂಕಾರ ತಿವಾರಿ ಇವರ ಮನೆಯ ಮುಂದೆ ನಿಲ್ಲಿಸಿ ಮೋಟಾರ್ ಸೈಕಲ್ಗೆ ಹ್ಯಾಂಡಲಾಕ್ ಹಾಕಿಕೊಂಡು ಲಿಂಕ ಟ್ರೇನ್ ಮುಖಾಂತರ ರಾಯಚೂರುಗೆ ಹೋಗಿದ್ದೆ. ಮರುದಿನ ಬೆಳಿಗ್ಗೆ ಅಂದರೆ ದಿನಾಂಕ 24.07.2022 ರಂದು ರಾಯಚೂರುದಿಂದ ನಾನು ಇಂಟರಸಿಟಿ ರೈಲಿನ ಮೂಲಕ ಸೈದಾಪೂರಕ್ಕೆ ಬಂದು ನಾನು ವಾಹನ ನಿಲ್ಲಿಸಿದ ಸ್ಥಳಕ್ಕೆ ಹೋದಾಗ ನನ್ನ ವಾಹನ ಇರಲಿಲ್ಲ. ದಿನಾಂಕ 24.07.2022 ರಿಂದ ಇಂದು ಮಧ್ಯಾಹ್ನದವರೆಗೆ ನಾನು ನನ್ನ ಮೋಟಾರ್ ಸೈಕಲ್ನ್ನು ಸೈದಾಪೂರ, ಕ್ಯಾತನಾಳ, ಮುನಗಲ್, ಕರಿಬೆಟ್ಟ ಕ್ರಾಸ್, ರಾಚನಳ್ಳಿ ಕ್ರಾಸ್ ಹಾಗೂ ಮುಖ್ಯ ರಸ್ತೆಗಿರುವ ದಾಬಾಗಳ ಮುಂದೆ ಹುಡುಕಾಡಿದರೂ ನನ್ನ ಮೋಟಾರ್ ಸೈಕಲ್ ಸಿಗಲಿಲ್ಲ. ದಿನಾಂಕ 23.07.2022 ರಂದು ಸಾಯಂಕಾಲ 5 ಗಂಟೆಯ ನಂತರದ ಸಮಯದಿಂದ ದಿನಾಂಕ 24.07.2022 ರ ಬೆಳಿಗ್ಗೆ 9.15 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು 35 ಸಾವಿರ ರೂಪಾಯಿಗಳು ಬೆಲೆಬಾಳುವ ನನ್ನ ಮೋಟಾರ್ ಸೈಕಲ್ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ವಾಹನ ಕದ್ದಿರುವ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ : 60/2022 78 (3) ಕೆ.ಪಿ ಯಾಕ್ಟ: ದಿನಾಂಕ:28/07/2022 ರಂದು 15.00 ಪಿ.ಎಮ್ ಕ್ಕೆ, ಶ್ರೀ. ಚಿದಾನಂದ ಸೌದಿ ಪಿಎಸ್ಐ (ಕಾ.ಸು)ಹುಣಸಗಿ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:60/2022 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಪಿಎಸ್ಐ ಸಾಹೇಬರು ರವರು 19.30 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 1275/- ರೂ.ಗಳು, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ 19.45 ಪಿ.ಎಮ್ ಕ್ಕೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತನ ಹೆಸರು ಮರೆಪ್ಪ ತಾಯಿ ಹಣಮವ್ವ ಹರಿಜನ ವಯಾ-45 ವರ್ಷ, ಜಾ:ಪ.ಜಾತಿ (ಹಿಂದೂ ಹೊಲೆಯ) ಉ:ಮಟಕಾ ಬರೆಯುವದು ಸಾ:ಯಡಹಳ್ಳಿ ತಾ:ಹುಣಸಗಿ ಜಿ:ಯಾದಗಿರ ಅಂತಾ ಇರುತ್ತದೆ.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ : 61/2022 ಕಲಂ. 279 337 338 ಐಪಿಸಿ: ಇಂದು ದಿನಾಂಕ:28/07/2022 ರಂದು ರಾತ್ರಿ 7.10 ಗಂಟೆಯ ಸುಮಾರಿಗೆ ಹುಣಸಗಿ-ಕೆಂಭಾವಿ ರಸ್ತೆಯ ಮೇಲೆ ಫಿರ್ಯಾದಿದಾರನು ರಸ್ತೆ ದಾಟುವಾಗ, ಹುಣಸಗಿ ಕಡೆಯಿಂದ ಆರೋಪಿತನು ತನ್ನ ಪ್ಲಾಟಿನ ಮೊಟಾರ್ ಸೈಕಲ್ ನಂ:ಕೆಎ-33 ವ್ಹಿ-9821 ನೇದ್ದರ ಮೇಲೆ ಗಾಯಾಳು ಯಲ್ಲಪ್ಪನಿಗೆ ಕೂಡಿಸಿಕೊಂಡು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಜೊರಾಗಿ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿದಾರನಿಗೆ ಟೊಂಕಕ್ಕೆ & ಬಲಗಾಲ ತೊಡೆಗೆ ಭಾರಿ ಒಳಪೆಟ್ಟಾಗಿದ್ದು, ಬಲಗೈ ಮುಂಗೈ ಹತ್ತಿರ ರಕ್ತಗಾಯವಾಗಿದ್ದು, ಆರೋಪಿತನಿಗೆ ತಲೆಗೆ ಭಾರಿ ರಕ್ತಗಾಯ & ಮೈಯೆಲ್ಲಾ ತರಚಿದ ರಕ್ತಗಾಯಗಳಾಗಿದ್ದು, ಇನ್ನೊಬ್ಬ ಗಾಯಾಳುವಿಗೆ ಟೊಂಕಕ್ಕೆ & ಬಲತೊಡೆಗೆ ಭಾರಿ ಒಳಪೆಟ್ಟು & ಬಲಗೈಗೆ ರಕ್ತಗಾಯಗಳಾದ ಬಗ್ಗೆ ಅಪರಾಧ.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ : 124/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 28.07.2022 ರಂದು 8.15 ಪಿಎಂ ಕ್ಕೆ ಶ್ರೀ ವೆಂಕಣ್ಣ ಪಿ.ಎಸ್.ಐ ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ವೆಂಕಣ್ಣ ಪಿ.ಎಸ್.ಐ(ತನಿಖೆ) ಕೆಂಭಾವಿ ಪೊಲೀಸ್ ಠಾಣೆ ಇದ್ದು, ನಾನು ಇಂದು ದಿನಾಂಕ 28.07.2022 ರಂದು 6.00 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಅಗ್ನಿ ಗ್ರಾಮದ ಗ್ರಾಮ ಪಂಚಾಯತ ಕಾಯರ್ಾಲಯದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ ನಾನು, ನಮ್ಮ ಠಾಣೆಯ ಪ್ರಭುಗೌಡ ಪಿಸಿ 361 ಮತ್ತು ಆನಂದ ಪಿಸಿ 43 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.10 ಪಿಎಂ ಕ್ಕೆ ಹೊರಟು ಅಗ್ನಿ ಗ್ರಾಮದ ಗ್ರಾಮ ಪಂಚಾಯತ ಕಾಯರ್ಾಲಯದ ಹತ್ತಿರ 6.35 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 6.40 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ನಿಂಗಣ್ಣ ತಂದೆ ಹವ್ವಣ್ಣ ಮುದನೂರ ವ|| 24 ಜಾ|| ಕುರುಬರ ಉ|| ಒಕ್ಕಲುತನ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಅಗ್ನಿ ತಾ|| ಹುಣಸಗಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 2550/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಪಂಚಾಯತ ಮುಂದಿನ ಲೈಟಿನ ಬೆಳಕಿನಲ್ಲಿ 6.40 ಪಿಎಂ ದಿಂದ 7.40 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 124/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ : 57/2022 ಕಲಂ: 279, 337, 304 (ಎ) ಐಪಿಸಿ: ಇಂದು ದಿನಾಂಕ:28.07.2022 ರಂದು ಮುಂಜಾನೆ 06:00 ಗಂಟೆಗೆ ಪಿರ್ಯಾದಿ ಶ್ರೀ ನಿಂಗಣ್ಣ ತಂದೆ ಹಣಮಂತ @ ಹಣಮಣ್ಣ ಬೂದಗುಂಪಿ ವ:35 ವರ್ಷ ಉ:ಒಕ್ಕಲುತನ ಜಾ:ಹಿಂದೂ ಕುರುಬರ ಸಾ:ಬೂದಗುಂಪೇರದೊಡ್ಡಿ ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ಬಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರಪಡಿಸಿದ್ದು ಅದರ ಸಾರಾಂಶ ಏನೆಂದರೆ, ನಮ್ಮ ತಂದೆ ತಾಯಿಗೆ ಮಾನಪ್ಪ, ಪರಮಣ್ಣ, ಚಂದಪ್ಪ, ನಾನು, ಬಸಣ್ಣ, ಸ್ವಾಮಣ್ಣ, ಹಣಮಂತ ಅಂತಾ ಏಳು ಜನ ಗಂಡು ಮಕ್ಕಳಿದ್ದು ಎಲ್ಲರದೂ ಮದುವೆಯಾಗಿದ್ದು, ನಾವೆಲ್ಲರೂ ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆಯಾಗಿದ್ದು ಇರುತ್ತದೆ. ನಿನ್ನೆ ದಿನಾಂಕ:27.07.2022 ರಂದು ಸಾಯಂಕಾಲ 5:00 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ಮಾನಪ್ಪ ತಂದೆ ಹಣಮಂತ @ ಹಣಮಣ್ಣ ಬೂದಗುಂಪಿ ವ:55 ವರ್ಷ ಉ-ಒಕ್ಕಲುತನ ಇತನು ಕಕ್ಕೇರಾದಲ್ಲಿ ಸಂತೆ ಇದ್ದುದರಿಂದ ಸಂತೆ ಮಾಡಿಕೊಂಡು ಬರುತ್ತೇನೆಂದು ನಮ್ಮೂರ ಮಲ್ಲಪ್ಪ ತಂದೆ ಅಂಬ್ರಪ್ಪ ಗುಡಗುಂಟಿ ಇತನೊಂದಿಗೆ ಕಕ್ಕೇರಾಕ್ಕೆ ಹೋಗಿದ್ದು ಇರುತ್ತದೆ. ನಂತರ ನಾನು ನಿನ್ನೆ ದಿನಾಂಕ 27.07.2022 ರಂದು ರಾತ್ರಿ 9:05 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಅಣ್ಣ ಮಾನಪ್ಪನ ಜೊತೆಗೆ ಕಕ್ಕೇರಾಕ್ಕೆ ಸಂತೆ ಮಾಡಿಕೊಂಡು ಬರಲು ಹೋದ ನಮ್ಮೂರ ಮಲ್ಲಪ್ಪ ಗುಡಗುಂಟಿ ರವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ನಿನ್ನ ಅಣ್ಣನಾದ ಮಾನಪ್ಪ ರವರು ಕೂಡಿಕೊಂಡು ಕಕ್ಕೇರಾದಲ್ಲಿ ಸಂತೆ ಮಾಡಿಕೊಂಡು ರಾತ್ರಿ 9:00 ಗಂಟೆಯ ಸುಮಾರಿಗೆ ಮರಳಿ ನಮ್ಮೂರಿಗೆ ಬರಬೇಕೆಂದು ನಾನು ಮತ್ತು ನಿನ್ನ ಅಣ್ಣ ಇಬ್ಬರೂ ಕೂಡಿ ಕಕ್ಕೇರಾ-ಶಾಂತಪೂರ ಕ್ರಾಸ್ ಮುಖ್ಯ ರಸ್ತೆಯ ಮೇಲೆ ರಾಜು ಹವಾಲ್ದಾರ ರವರ ಪೆಟ್ರೊಲ್ ಪಂಪ್ನಿಂದ ಸ್ವಲ್ಪ ದೂರದಲ್ಲಿರುವ ಪೂಲಿನ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಶಾಂತಪೂರ ಕ್ರಾಸ್ ಕಡೆಯಿಂದ ಒಬ್ಬ ಮೋಟರ್ ಸೈಕಲ ಸವಾರನು ಹಿಂದೆ ಒಬ್ಬನನ್ನು ಕೂಡಿಸಿಕೊಂಡು ತನ್ನ ಮೋಟರ್ ಸೈಕಲ್ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿಮ್ಮ ಅಣ್ಣನಿಗೆ ಡಿಕ್ಕಿ ಪಡಿಸಿ ಸ್ವಲ್ಪ ಮುಂದೆ ಹೋಗಿ ಮೋಟರ್ ಸೈಕಲ್ ಸವಾರನು ಮೋಟರ್ ಸೈಕಲ್ ಸಮೇತ ಬಿದ್ದಿದ್ದು ಇದರಿಂದ ನಿಮ್ಮ ಅಣ್ಣನಿಗೆ ಬಲಭುಜಕ್ಕೆ ತರಚಿದ ಗಾಯ, ಎಡಗಾಲ ತೊಡೆಗೆ ಭಾರಿ ರಕ್ತಗಾಯವಾಗಿದ್ದು, ಎರಡು ಕಾಲುಗಳ ಮೊಳಕಾಲಿಗೆ ತರಚಿದ ರಕ್ತಗಾಯವಾಗಿದ್ದು, ಎಡಗಡೆ ಮೆಲಕಿಗೆ ತರಚಿದ ನಮೂನೆಯ ರಕ್ತಗಾಯವಾಗಿದ್ದು ಮತ್ತು ಬಲಗಡೆ ಮೆಲಕಿನ ಮೇಲೆ ತರಚಿದ ನಮೂನೆಯ ರಕ್ತಗಾಯವಾಗಿದ್ದು ನನಗೆ ಗಾಯ ಆಗಿರುವದಿಲ್ಲ. ನಂತರ ನಮಗೆ ಅಪಘತಪಡಿಸಿದ ಮೋಟರ್ ಸೈಕಲ್ ನೋಡಲಾಗಿ ಅದರ ನೊಂದಣಿ ಸಂಖ್ಯೆ ಕೆಎ-33 ಇಎ-3613 ಅಂತ ಇದ್ದು ಸದರಿ ಮೋಟರ್ ಸೈಕಲ್ ಸವಾರ ಮತ್ತು ಹಿಂದೆ ಕುಳಿತಿದ್ದವನಿಗೆ ನೋಡಲಾಗಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಸದರಿಯವರಿಗೆ ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಮೋಟರ್ ಸೈಕಲ್ ಸವಾರನು ತನ್ನ ಹೆಸರು ಯಮನೂರಿ ತಂದೆ ನಂದಪ್ಪ ಕೊಳೂರ ಸಾ:ಹೊರಟ್ಟಿ ಮತ್ತು ಹಿಂದೆ ಕುಳಿತವನ ಹೆಸರು ಪರಮಪ್ಪ ತಂದೆ ಸಾಯಬಣ್ಣ ಕೊಳೂರ ಸಾ:ಹೊರಟ್ಟಿ ಅಂತ ತಿಳಿಸಿ ಕೂಡಲೇ ಬರುವಂತೆ ತಿಳಿಸಿದ್ದು, ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ನಿಂಗಯ್ಯ ತಂದೆ ಹಣಮಂತ್ರಾಯ ಬೂದಗುಂಪಿ, ಪರಮಣ್ಣ ತಂದೆ ಚಂದಪ್ಪ ಬೂದಗುಂಪಿ ರವರು ಕೂಡಿ ಸದರಿ ಅಪಘಾತವಾದ ಸ್ಥಳಕ್ಕೆ ಬಂದು ನೋಡಲಾಗಿ ಮಲ್ಲಪ್ಪ ಗುಡಗುಂಟಿ ರವರು ಪೋನ್ನಲ್ಲಿ ತಿಳಿಸಿದಂತೆ ನಮ್ಮ ಅಣ್ಣ ಮಾನಪ್ಪನಿಗೆ ಗಾಯಗಳಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ನಂತರ ನಾನು ಮತ್ತು ನಮ್ಮ ಸಂಬಂಧಿಕರಾಗಬೇಕಾದ ನಿಂಗಯ್ಯ, ಪರಮಣ್ಣ ಮತ್ತು ನನಗೆ ಪೋನ್ ಮಾಡಿದ ಮಲ್ಲಪ್ಪ ರವರು ಕೂಡಿಕೊಂಡು ನನ್ನ ಅಣ್ಣ ಮಾನಪ್ಪನಿಗೆ ಉಪಚಾರ ಕುರಿತು ಕಕ್ಕೇರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಅಲ್ಲಿನ ವೈದ್ಯರು ನನ್ನ ಅಣ್ಣ ಮಾನಪ್ಪನಿಗೆ ನೋಡಿ ಅವನು ಸತ್ತಿರುತ್ತಾನೆ ಅಂತ ತಿಳಿಸಿದ್ದು ನಂತರ ನಿನ್ನೆ ರಾತ್ರಿಯಾಗಿದ್ದರಿಂದ ಈ ದಿವಸ ಬಂದು ದೂರು ಕೊಡುತ್ತಿದ್ದು ನನ್ನ ಅಣ್ಣನ ಶವವು ಕಕ್ಕೇರಾ ಸರಕಾರಿ ಆಸ್ಪತ್ರೆಯಲ್ಲಿದ್ದು ಈ ಅಪಘಾತವು ಮೋಟರ್ ಸೈಕಲ್ ನಂ: ಕೆಎ-33 ಇಎ-3613 ನೇದ್ದರ ಸವಾರನಾದ ಯಮನೂರಿ ತಂದೆ ನಂದಪ್ಪ ಕೊಳೂರ ಸಾ:ಹೊರಟ್ಟಿ ತಾ:ಹುಣಸಗಿ ಇತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಸದರಿ ಮೋಟರ್ ಸೈಕಲ್ ಸವಾರನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:57/2022 ಕಲಂ: 279, 337, 304 (ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ : 58/2022 ಕಲಂ: 78(3) ಕೆ.ಪಿ ಆಕ್ಟ್: ಇಂದು ದಿನಾಂಕ:28.05.2022 ರಂದು 1:45 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಶ್ರೀಶೈಲ್ ಅಂಬಾಟಿ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:28.07.2022 ರಂದು 1:00 ಪಿ.ಎಮ್.ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣೆಯ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಪ್ರಭುಗೌಡ ಹೆಚ್.ಸಿ-120 ರವರು ನನಗೆ ತಿಳಿಸಿದ್ದು ಏನೆಂದರೆ ಕಕ್ಕೇರಾ ಪಟ್ಟಣದ ಬನದೊಡ್ಡಿ ಕ್ರಾಸ್ ಹತ್ತಿರ ಡಾ|| ಬಿ.ಆರ್ ಅಂಬೇಡ್ಕರ್ ವೃತ್ತದ ಹತ್ತಿರದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮುಖಾಂತರ ರವಾನಿಸಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 1:40 ಪಿ.ಎಮ್ ಕ್ಕೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:58/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ನಾಗರಾಜ ತಾಯಿ ಬಾಳಮ್ಮ ಚನ್ನಪಟ್ಟಣ ವ:32 ವರ್ಷ, ಉ:ಕೂಲಿಕೆಲಸ, ಜಾ:ಹಿಂದೂ ಮಾದರ ಸಾ||ಅಂಬೇಡ್ಕರ್ ನಗರ ಕಕ್ಕೇರಾ ತಾ||ಸುರಪೂರ ಜಿ||ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1) ನಗದು ಹಣ=650/- ರೂ
2) ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರೂ

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 28/2022 ಕಲಂ: 78 (3) ಕೆ.ಪಿ ಯಾಕ್ಟ್: ಇಂದು ದಿನಾಂಕ: 28/07/2022 ರಂದು 9:00 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಇಂದು ದಿನಾಂಕ 28/07/2022 ರಂದು 7:30 ಪಿ.ಎಂ ಕ್ಕೆ ನಾರಾಯಣಪೂರ ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದಾಗ ನಾರಾಯಣಪೂರ ಗ್ರಾಮದ ಮೌನೇಶ್ವರ ಕ್ಯಾಂಪ ಹತ್ತಿರ ಇರುವ ಕನಕದಾಸ ವೃತ್ತದ ಹತ್ತಿರ ನಾರಾಯಣಪೂರ ಹುಣಸಗಿ ಮುಖ್ಯ ರಸ್ತೆಯ ಮೆಲೆ ಸಾರ್ವಜನಿಕ ಒಬ್ಬ ವೆಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 28/2022 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ನಂತರ ಮಾನ್ಯ ಪಿಎಸ್ಐ ಸಾಹೇಬರು 10:55 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಆರೋಪಿ ಹಾಗೂ ಒಂದು ಬಾಲ್ ಪೆನನ್ನು, ಒಂದು ಅಂಕಿ ಸಂಖ್ಯೆಗಳನ್ನು ಬರೆದ ಮಟಕಾ ಚೀಟಿ ಹಾಗೂ ನಗದು ಹಣ 750/- ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ದೇವರಾಜ ತಂದೆ ಅಮರಪ್ಪ ಹಾದಿಮನಿ ವ:30 ವರ್ಷ ಉ:ಕೂಲಿ ಕೆಲಸ ಜಾ:ಎಸ್.ಸಿ ಸಾ:ನಾರಾಯಣಪೂರ

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 91/2022 ಕಲಂ 78(3) ಕೆ.ಪಿ ಕಾಯ್ದೆ: : ಇಂದು ದಿನಾಂಕ: 28.07.2022 ರಂದು ಸಾಯಂಕಾಲ 6.30 ಗಂಟೆಗೆ ಹಣಮಂತ್ರಾಯ ಪಿ.ಎಸ್.ಐ (ತನಿಖೆ) ಸಾಹೇಬರು ಸೈದಾಪೂರ ಪೊಲೀಸ್ ಠಾಣೆ ರವರು ಬಳಿಚಕ್ರ ಗ್ರಾಮದ ವಾಲ್ಮಿಕಿ ಭವನದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಜೂಜಾಟದಲ್ಲಿ ತೊಡಗಿದ್ದ ಮಲ್ಲಯ್ಯ ತಂದೆ ಆಶಪ್ಪ ಕಲಾಲ್, ವ|| 27 ವರ್ಷ, ಜಾ|| ಈಡಿಗ, ಉ|| ಕೂಲಿಕೆಲಸ, ಸಾ|| ಬಳಿಚಕ್ರ ಗ್ರಾಮ ಈತನನ್ನು ಪಂಚರ ಸಮಕ್ಷಮ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿ ಪಂಚನಾಮೆ, ಆಪಾದಿನನ್ನು ಮತ್ತು ಮುದ್ದೆಮಾಲು ನನಗೆ ಒಪ್ಪಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿರುತ್ತಾರೆ. ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲೆ ನಾನು ಮೋಹನರೆಡ್ಡಿ ಸಿ.ಹೆಚ್.ಸಿ-151 ಸೈದಾಪೂರ ಠಾಣೆ ಠಾಣೆ ಗುನ್ನೆ ಸಂಖ್ಯೆ 91/2022 ಕಲಂ 78(3) ಕನರ್ಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 86/2022 ಕಲಂ 279, 338, 304(ಎ) ಐಪಿಸಿ:ದಿನಾಂಕ 23.07.2022 ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಪ್ಪ ತಂದೆ ನಿಂಗಪ್ಪ ಮುಕಡೆ, ವ|| 55 ವರ್ಷ, ಜಾ|| ಕುರುಬರು, ಉ|| ಒಕ್ಕಲುತನ, ಸಾ|| ಕರಣಿಗಿ ಗ್ರಾಮ ಇವರು ಠಾಣೆಗೆ ಬಂದು ದೂರು ನೀಡಿದ ಸಾರಾಂಶ ಮೇಲಿಂದ ಗೌತಮ ಎ.ಎಸ್.ಐ ಸೈದಾಪೂರ ಠಾಣೆ ರವರು ಠಾಣೆ ಗುನ್ನೆ ಸಂಖ್ಯೆ 86/2022 ಕಲಂ 279, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿರುತ್ತಾರೆ. ರಸ್ತೆ ಅಪಘಾತ ಕಾಲಕ್ಕೆ ಗಾಯಗೊಂಡು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ರಮೇಶ ತಂದೆ ನಿಂಗಪ್ಪ ಮುಕಡೆ, ವ|| 40 ವರ್ಷ, ಜಾ|| ಕುರುಬರು, ಉ|| ಒಕ್ಕಲುತನ, ಸಾ|| ಕರಣಿಗಿ ಗ್ರಾಮ ಈತನು ರಸ್ತೆ ಅಪಘಾತ ಕಾಲಕ್ಕೆ ಆದ ಗಾಯಗಳ ನೋವನುಭವಿಸಿ ಇಂದು ದಿನಾಂಕ 28.07.2022 ರಂದು ಬೆಳಗಿನಜಾವ 3.30 ಗಂಟೆ ಸುಮಾರಿಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಡೆತ್ ಎಂ.ಎಲ್.ಸಿ ಮಾಹಿತಿ ಮತ್ತು ಮೇಲಾಧಿಕಾರಿಗಳ ಆದೇಶದ ಮೇರೆಗೆ ಚಂದ್ರಕಾಂತ ಎ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇವರಿಗೆ ಮುಂದಿನ ಕ್ರಮಕ್ಕಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆ. ಚಂದ್ರಕಾಂತ ಎ.ಎಸ್.ಐ ರವರು ಮರಳಿ ಕೇಂದ್ರ ಸ್ಥಾನಕ್ಕೆ ಬಂದು ಮೃತನ ಮೊದಲನೇ ಹೆಂಡತಿಯಾದ ಮಹಾದೇವಮ್ಮ ಗಂಡ ರಮೇಶ ಮುಕಡೆ, ವ|| 38 ವರ್ಷ, ಜಾ|| ಕುರುಬರು, ಉ|| ಹೊಲಮನೆಕೆಲಸ, ಸಾ|| ಕರಣಿಗಿ ಗ್ರಾಮ ಇವರ ಹೇಳಿಕೆ ಹಾಗೂ ಮೃತ ರಮೇಶನ ಶವ ಪಂಚನಾಮೆಗೆ ವರದಿಗೆ ಸಂಬಂಧಿಸಿದ ದಸ್ತಾವೇಜುಗಳು ನನಗೆ ಒಪ್ಪಿಸಿರುತ್ತಾರೆ. ಪ್ರಕರಣದಲ್ಲಿ 304(ಎ) ಐಪಿಸಿ ಕಾಯ್ದೆ ಕಲಂ ಅಳವಡಿಸಿಕೊಂಡು ತನಿಖೆ ಮುಂದುವರೆಸಿದ್ದ ಬಗ್ಗೆ ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯ ಯಾದಗಿರಿ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿದೆ.

ಇತ್ತೀಚಿನ ನವೀಕರಣ​ : 29-07-2022 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080