ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-08-2021


ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 93/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ.28/08/2021 ರಂದು 12-30 ಪಿಎಂಕ್ಕೆ ಕುಮಾರಿ ಮಲ್ಲಮ್ಮ ತಂದೆ ನಿಂಗಪ್ಪ ಕೊಟಗಾರ ವಃ 25 ಜಾಃ ಹೊಲೆಯ ಉಃ ಮಹಿಳಾ ವಸತಿಯುತ ಸ್ವಾಧಾರ ಗೃಹ ಯಾದಗಿರಿ ಸಾಃ ಹಳಗೇರಾ ಹಾಃವಃ ಬಸವೇಶ್ವರ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ದಿನಾಂಕ. 22/08/2021 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಸೈದಾಪುರ ಪೊಲೀಸ್ ಠಾಣೆಯಿಂದ ಗುನ್ನೆ ನಂ.113/2021 ಕಲಂ. ಮಹಿಳೆಕಾಣೆ ನೇದ್ದರಲ್ಲಿ ಪತ್ತೆಯಾದ ಶ್ರೀಮತಿ ವಚನಶ್ರೀ ಗಂಡ ಸುರೇಶ ವಃ 20 ವರ್ಷ ಜಾಃ ಜಂಗಮ ಉಃ ಮನೆಕೆಲಸ ಸಾಃ ಇಡ್ಲೂರ ತಾಃಜಿಃ ಯಾದಗಿರಿ ರವರನ್ನು ಕರೆದುಕೊಂಡು ಬಂದು ವಚನಶ್ರೀ ರವರು ತಮ್ಮ ಮನೆಯವರೊಂದಿಗೆ ಹೋಗಲು ನಿರಾಕರಿಸಿದ್ದು ಆದ ಕಾರಣ ಇವತ್ತು ಒಂದು ದಿನ ರಾತ್ರಿ ತಾತ್ಕಾಲಿಕವಾಗಿ ಆಶ್ರಯ ನೀಡಲು ಮತ್ತು ನಾಳೆ ದಿನಾಂಕ. 23/08/2021 ರಂದು ಬಂದು ನಾವು ಕರೆದುಕೊಂಡು ಹೋಗುತ್ತೇವೆ ಅಂತಾ ಹೇಳಿ ಲೇಟರ ಮೂಲಕ ಸದರಿಯವಳನ್ನು ನಮ್ಮ ಸ್ವಾಧಾರ ಗೃಹ ಬಿಟ್ಟು ಹೋಗಿದ್ದರು. ನಂತರ ದಿನಾಂಕ.23/08/2021 ರಂದು ಸೈದಾಪುರ ಪೊಲೀಸ್ ಠಾಣೆ ರವರು ಬಂದು ಸಾಧ್ವಾರ ಗೃಹದಿಂದ ವಚನಶ್ರೀ ರವರನ್ನು ತಮ್ಮ ತಾಬಾಕ್ಕೆ ಒಪ್ಪಿಸುವಂತೆ 11-00 ಎಎಂಕ್ಕೆ ಕರೆದುಕೊಂಡು ಹೋದರು. ಸಾಯಂಕಾಲ 4-31 ಗಂಟೆ ಸುಮಾರಿಗೆ ಮತ್ತೆ ಸೈದಾಪೂರ ಪೊಲೀಸ್ ಠಾಣೆರವರು ರವರನ್ನು ನಮ್ಮ ತಾಬಾಕ್ಕೆ ಒಪ್ಪಿಸಿ ಹೋಗಿದ್ದರು. ಹೀಗಿದ್ದು. ದಿನಾಂಕ.26/08/2021 ರಂದು ರಾತ್ರಿ 10-00 ಗಂಟೆ ಸುಮಾರಿಗೆ ವಚನಶ್ರೀ ಇವಳು ಹೊಟ್ಟೆ ನೋವು ಅಂತಾ ಅಂದಾಗ ನಾವು ಮಾತ್ರೆ ತೆಗೆದುಕೊಳ್ಳಲು ತಿಳಿಸಿದಾಗ ಅವಳು ನಿರಾಕರಿಸಿದ್ದು ಆಗ ನಾನು ಬೆಳಿಗ್ಗೆ ಆಸ್ಪತ್ರೆಗೆ ಹೋದರಾಯ್ತು ಅಂತಾ ಹೇಳಿದೆವು. ನಂತರ ದಿನಾಂಕ.27/08/2021 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ವಚನಶ್ರೀ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾಯ್ತು ಅಂತಾ ಅವಳಿಗೆ ಹೇಳಿ ನಾನು ರಡಿಯಾಗಿ ಬರುತ್ತೇನೆ ಅಂತಾ ಹೇಳಿದೆನು. ನಂತರ ನಮ್ಮಲ್ಲಿರುವ ನೊಂದ ಮಹಿಳೆಯರಾದ ರಂಜನಿ ಗಂಡ ಯೇಸುರಾಜ ಮತ್ತು ಪ್ರತೀಕ್ಷಾ ಗಂಡ ದೇವಿಸಿಂಗ ರವರು ಬಾಗಿಲ ಮುಂದುಗಡೆ ಇದ್ದ ನಳದ ಪೈಪ ಮುಖಾಂತರ ಕುಡಿಯಲು ನೀರು ತುಂಬುತ್ತಿರುವಾಗ ವಚನಶ್ರೀ ಬಾಗಿಲು ತೆರೆದಿದ್ದನ್ನು ಗಮನಿಸಿ ಯಾರಿಗೂ ಅನುಮಾನ ಬಾರದಂತೆ ಹೊರಗೆ ಹೋಗಿದ್ದು, ಆಗ ನಾವು ಕೂಡಲೇ ಸುತ್ತ ಮುತ್ತ ಹುಡುಕಾಡಲಾಗಿ ಸಿಕ್ಕಿರುವುದಿಲ್ಲಾ. ವಚನಶ್ರೀ ಇವಳು ಮರಳಿ ಸ್ವಾಧಾರ ಗೃಹಕ್ಕೆ ಮರಳಿ ಇಲ್ಲಿಯವರೆಗೆ ಬರದೆ ಕಾಣೆಯಾಗಿದ್ದು ಹುಡುಕಾಡಿಕೊಡಬೇಕಾಗಿ ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 93/2021 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 110/2021 ಕಲಂ: 504, 324, 323, ಸಂ 34 ಐಪಿಸಿ : ಇಂದು ದಿನಾಂಕ:28/08/2021 ರಂದು 6-30ಪಿಎಮ್ಕ್ಕೆ ಪಿಯರ್ಾದಿದಾರಾದ ಶ್ರೀನಂದಪ್ಪ ತಂದೆ ಹಣಮಂತ ಬೇವಿನಗಿಡದ, ವ:45, ಜಾ:ಕುರುಬರು, ಉ:ಕುರಿಕಾಯಿಯುವುದು, ಸಾ:ಕಕ್ಕಸಗೇರಾ ಹಾಲಿವಸತಿ:ಕುರಕುಂದಾ ಇವರು ಪೋಲಿಸ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ ನಮ್ಮ ತಂದೆ-ತಾಯಿಗೆ ನಾನು ಮತ್ತು ಬೀರಣ್ಣ ಅಂತಾ ಇಬ್ಬರು ಮಕ್ಕಳಿರುತ್ತೇವೆ ನನಗೆ 4 ವರ್ಷಗಳ ಹಿಂದೆ ಮದುವೆಯಾಗಿರುತ್ತದೆ. ಸುಮಾರು ಒಂದು ವರ್ಷಗಳ ಹಿಂದೆ ನನಗೆ ಮತ್ತು ನನ್ನ ತಮ್ಮ ಬೀರಣ್ಣನಿಗೆ ಸಂಸಾರದಲ್ಲಿ ಆಗಿ ಬರದ ಕಾರಣ ಇಬ್ಬರೂ ಬೇರೆ-ಬೇರೆ ಮಾಡಿಕೊಂಡಿರುತ್ತೇವೆ. ನಾವು ಸಂಸಾರ ಬೇರೆಯಾದಾಗ ನಮ್ಮ ಪಾಲಿಗೆ 25 ಕುರಿಗಳು ಮತ್ತು 2 ಎಕರೆ ಹೊಲವನ್ನು ಹಿರಿಯರು ನನ್ನ ಪಾಲಿಗೆ ಕೊಟ್ಟಿರುತ್ತಾರೆ. ನಾವು ಬೇರೆ ಸಂಸಾರ ಮಾಡಿಕೊಂಡು ಇದ್ದಾಗಿನಿಂದ ನಮ್ಮ ತಂದೆ ಹಣಮಂತ ಮತ್ತು ತಮ್ಮನಾದ ಭೀರಣ್ಣ ಇಬ್ಬರೂ ನನ್ನೊಂದಿಗೆ ಸಣ್ಣ ಪುಟ್ಟ ವಿಷಯಕ್ಕಾಗಿ ತಕರಾರು ಮಾಡಿಕೊಂಡು ಬರುತ್ತಿದ್ದರು. ನಮ್ಮ ತಂದೆ, ತಮ್ಮನ ಉಪಟಳ ತಾಳಲಾರದೇ ನಾನು ನಮ್ಮ ಊರಿನ ಇತರರ ಜನರ ಸುಮಾರು 40 ಕುರಿಗಳನ್ನು ಲೀಜಿಗೆ ಹಾಕಿಕೊಂಡು ಊರು ಹೊರಗಡೆ ಕುರಿಗಳನ್ನು ಮೇಯಿಸಿಕೊಂಡು ಅಡವಿಯಲ್ಲೇ ಇರುತಿದ್ದೇನು. ಹೀಗಿದ್ದು ನಮ್ಮ ಊರಿನಲ್ಲಿ ಕುರಿ ಮೇಯಿಸಲು ಸೀಮೆ ಇರದ ಕಾರಣ ನಾನು ಶಹಾಪೂರು, ದೋರನಹಳ್ಳಿ ಖಾನಪೂರು, ಕುರುಕುಂದಾ ಕಡೇ ಕುರಿಗಳನ್ನು ಮೇಯಿಸಿಕೊಂಡು ಇರುತ್ತೇನೆ. ಹೀಗಿದ್ದು ಕುರಕುಂದಾ ಗ್ರಾಮದಲ್ಲಿ ಕುರಿ ಮೇಯಿಸುತ್ತಾ ಇದ್ದಾಗ ನನ್ನ ಸಂಸಾರಕ್ಕೆ ಹಣಕಾಸಿನ ಅಡಚಣೆಯಿಂದ ನಿನ್ನೆ ದಿನಾಂಕ: 27/08/2021 ರಂದು ಮುಂಜಾನೆ 8 ಗಂಟೆ ಸುಮಾರಿಗೆ ನಾನು ನನ್ನ 4 ಕುರಿಗಳನ್ನು ಶಹಾಪೂರು ಸಂತೆಗೆ ಹೋಗಿ ಮಾರಾಟ ಮಾಡಿ ಬಂದರಾಯಿತ್ತು ಅಂತಾ ಹೋದಾಗ ಅಲ್ಲಿ ವ್ಯಾಪಾರ ಸರಿಯಾಗದ ಕಾರಣ ನಾನು ಕುರಕುಂದಾ ಗ್ರಾಮಕ್ಕೆ ನನ್ನ ಕುರಿ ಸಮೇತ ಮರಳಿ ವಾಪಾಸ್ಸು ಬಂದು ಸಂಜೆ 6 ಗಂಟೆ ಸುಮಾರಿಗೆ ಕುರುಕುಂದಾ ಗ್ರಾಮದ ನಾಗಪ್ಪ ಪೂಜಾರಿ ಇವರ ಹೊಲದ ಹಾಕಿದ ಕುರಿ ದಡಿಯಲ್ಲಿ ಇದ್ದಾಗ ನನ್ನ ತಂದೆ ಹಣಮಂತ ತಂದೆ ನಂದಪ್ಪ, ತಮ್ಮ ಬೀರಣ್ಣ ತಂದೆ ಹಣಮಂತ ಮತ್ತು ತಾಯಿ ಅಯ್ಯಮ್ಮ ಗಂಡ ಹಣಮಂತ ಎಲ್ಲರೂ ಸಾ: ಕಕ್ಕಸಗೇರಾ ಕೂಡಿ ಬಂದವರೆ ಇದೇ ಸೂಳೆ ಮಗ ನೋಡು ನಮ್ಮ ಕುರಿಗಳನ್ನು ಮಾರಾಟ ಮಾಡೊಕೆ ಶಹಾಪುರಕ್ಕೆ ತಂದವನು ಅಂತಾ ಅವಾಚ್ಯವಾಗಿ ಬೈದು ಸೂಳೆ ಮಗನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ಇವತ್ತು ನಿನ್ನ ಸೊಕ್ಕು ಮುರಿಯುತ್ತೇವೆ ಎಂದು ಜಗಳ ತೆಗೆದವರೆ ಬೀರಣ್ಣ ಈತನು ಅಲ್ಲಿಯೇ ಬಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ- ಹೊಡೆದು ಗುಪ್ತಗಾಯಪಡಿಸಿದನು. ನನ್ನ ತಂದೆ ಹಣಮಂತ ಈತನು ತನ್ನ ಎರಡು ಕೈಯಲ್ಲಿ ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ನನ್ನ ತಾಯಿ ಅಯ್ಯಮ್ಮ ಗಂಡ ಹಣಮಂತ ಈಕೆಯು ತನ್ನ ಕೈಯಿಂದ ಕಪಾಳಕ್ಕೆ ಹೊಡೆದಳು ನಂತರ ಮೂರು ಜನ ಸೇರಿ ನನಗೆ ನೆಲಕ್ಕೆ ನೂಕಿ ಕಾಲಿನಿಂದ ಹೊಟ್ಟೆ, ತೊಡೆ ಮತ್ತು ಬೆನ್ನಿಗೆ ತುಳಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನನ್ನ ಹೆಂಡತಿ ದೇವಮ್ಮ ಮತ್ತು ಸಕ್ರಪ್ಪೆ ತಂದೆ ಬಸಣ್ಣ ಅಮ್ಮಾಪೂರು ಇವರು ಬಂದು ಜಗಳ ಬಿಡಿಸಿರುತ್ತಾರೆ. ನನ್ನೊಂದಿಗೆ ಜಗಳ ತೆಗೆದು ಅವಾಚ್ಯ ಬೈದು ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ.ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ.110/2021 ಕಲಂ: 504, 324, 323, ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ 200/2021. ಕಲಂ. 279.338.ಐ.ಪಿ.ಸಿ. : ಇಂದು ದಿನಾಂಕ: 28/08/2021 ರಂದು 14-00 ಗಂಟೆಗೆ ಪಿಯರ್ಾದಿ ಶ್ರೀ ರಮೇಶ ತಂದೆ ಅಂಬ್ಲಪ್ಪ ದೊಡ್ಡಮನಿ ವ|| 49 ಜಾ|| ಪ.ಜಾತಿ, ಉ|| ಕೂಲಿ ಸಾ|| ಇಂಗಳಿಗಿ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 24/08/2021 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ನಮ್ಮೂರ ಶರಣಪ್ಪ ತಂದೆ ಮಲ್ಲಣ್ಣ ಕಂದಕೂರ ಈತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ. ನಾನು ಮತ್ತು ನಿನ್ನ ಮಗ ಮಲ್ಲಿಕಾಜರ್ುನ್ ತಂದೆ ರಮೇಶ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಬಂದು ಮರಳಿ ಸಾಯಂಕಾಲ 6-40 ಗಂಟೆಯ ಸುಮಾರಿಗೆ ನಮ್ಮೂರಿಗೆ ನನ್ನ ಮೋಟರ್ ಸೈಕಲ್ ನಂ ಕೆಎ-33 ಡಬ್ಲೂ-4842 ನೇದ್ದರ ಮೇಲೆ ಶಹಾಪೂರ ದಿಂದ ಇಂಗಳಿಗೆ ಹೊರಟೆವು. ಸದರಿ ಮೋಟರ್ ಸೈಕಲ್ನ್ನು ನಾನು ಚಾಲಾಯಿಸುತ್ತಿದ್ದೆನು, ನನ್ನ ಮೋಟರ್ ಸೈಕಲ್ ಮೇಲೆ ನನ್ನ ಹಿಂದೆ ಮಲ್ಲಿಕಾಜರ್ುನ್ ಕುಳಿತುಕೊಂಡಿದ್ದನು, ನಾನು ನನ್ನ ಮೋಟರ್ ಸೈಕಲ್ನ್ನು ಶಹಾಪೂರ-ಶಿರವಾಳ ಮುಖ್ಯ ರಸ್ತೆಯ ಮೇಲೆ ಮಡ್ನಾಳ ಗ್ರಾಮ ಇನ್ನು ಅಂದಾಜು 400 ಮೀಟರ್ ಮುಂದೆ ಇರುವಾಗ ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ನ್ನು ನನ್ನ ಎಡಗಡೆ ಸೈಡಿಗೆ ನಿದಾನವಾಗಿ ಸವಾರಿಮಾಡಿಕೊಂಡು ಹೋಗುತ್ತಿರುವಾಗ ಮಡ್ನಾಳ ಕಡೆಯಿಂದ ಒಂದು ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ್ ಸೈಕಲ್ಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿದನು. ಆಗ ನಾವು ರಸ್ತೆಯ ಮೇಲೆ ಬಿದ್ದೆವು, ಸದರಿ ಅಪಘಾತದಲ್ಲಿ ಮಲ್ಲಿಕಾಜರ್ುನನಿಗೆ ನೋಡಲಾಗಿ ಹಣೆಗೆ ರಕ್ತಗಾಯ, ತಲೇಗೆ ಭಾರಿ ಗುಪ್ತಗಾಯ, ಬಲಗಾಲ ಬೆರಳಿಗೆ ತರಚಿದ ಗಾಯ, ಎಡಗೈ ಮೊಳಕೈಗೆ ತರಚಿದಗಾಯವಾಗಿರುತ್ತವೆ, ನನಗೆ ಎರಡು ಪಾದದ ಬೆರಳುಗಳಿಗೆ, ಮೊಳಕಾಲುಗಳಿಗೆ ತರಚಿದ ಗಾಯ, ಬಲಗಾಲ ಮೊಳಕಾಲು ಕೆಳಗೆ ಭಾರಿ ರಕ್ತಗಾಯ, ಗದ್ದಕ್ಕೆ, ಮುಖಕ್ಕೆ ತರಚಿದ ರಕ್ತಗಾಯವಾಗಿರುತ್ತವೆ. ನಮಗೆ ಅಪಘಾತ ಮಾಡಿದ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಅಶೋಕರೆಡ್ಡಿ ತಂದೆ ಮೋಹನರೆಡ್ಡಿ ಸಾ|| ಸಲಾದಪೂರ ಅಂತ ತಿಳಿಸಿದನು. ಸದರಿಯವನಿಗೆ ಬಲಗೈ ಮಣಿಕಟ್ಟಿನ ಹತ್ತಿರ, ಬಲಗಾಲ ಪಾದದ ಬೆರಳುಗಳಿಗೆ ತರಚಿದ ಗಾಯ ವಾಗಿದ್ದು ಇರುತ್ತದೆ. ನಮಗೆ ಅಪಘಾತ ಮಾಡಿದ ಮೋಟರ್ ಸೈಕಲ್ ನಂ ಕೆಎ-33 ಇಎ-9208 ನೇದ್ದು ಇದ್ದು. ನಮ್ಮ ಮೋಟರ್ ಸೈಕಲ್ ನಂ ಕೆಎ-33 ಡಬ್ಲೂ-4842 ನೇದ್ದು ಜಕಂ ಗೊಂಡಿರುತ್ತವೆ ನಮ್ಮೂರ ವಿಶ್ವನಾಥ ತಂದೆ ಮಹಾಂತಗೌಡ ಪೊಲೀಸ್ ಪಾಟೀಲ್ ಈತನಿಗೆ ಪೋನ ಮಾಡಿ ಅಪಘಾತದ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಬಂದು ನಮಗೆ ಆಸ್ಪತ್ರೆಗೆ ಕರೆದುಕೊಂಡು ಹೊರಟಿರುತ್ತಾರೆ ಅಂತ ತಿಳಿಸಿದನು. ಆಗ ನಾನು ಶಹಾಪುರದ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಮಗ ಮಲ್ಲಿಕಾಜರ್ುನ್ನಿಗೆ ನೋಡಿ ಶರಣಪ್ಪನಿಗೆ ಮತ್ತು ವಿಶ್ವನಾಥನಿಗೆ ವಿಚಾರಿಸಿದ್ದು ಈ ಮೇಲಿನಂತೆ ತಿಳಿಸಿದ್ದು ಇರುತ್ತದೆ. ನನ್ನ ಮಗ ಮಲ್ಲಿಕಾಜರ್ುನನಿಗೆ ಮತ್ತು ಶರಣಪ್ಪನಿಗೆ ಉಪಚಾರ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನಾನು ಮತ್ತು ವಿಶ್ವನಾಥ ಇಬ್ಬರು ಕೂಡಿಕೊಂಡು ಒಂದು ಅಂಬುಲೇನ್ಸದಲ್ಲಿ ಕಲಬುರಗಿಯ ಯುನೈಟೇಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಅಶೋಕರೆಡ್ಡಿ ಈತನಿಗೆ ಸಣ್ಣ ಪುಟ್ಟ ಗಾಯವಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲಾ ಅಂತ ಗೊತ್ತಾಯಿತು. ನನ್ನ ಮಗ ಮಲ್ಲಿಕಾಜರ್ುನನಿಗೆ ಉಪಚಾರ ಮಾಡಿಸುವುದು ಅವಶ್ಯವಾಗಿದ್ದರಿಂದ ಉಪಚಾರ ಮಾಡಿಸಿ ನಮ್ಮ ಹಿರಿಯರಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 200/2021 ಕಲಂ: 279, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 29-08-2021 11:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080