ಅಭಿಪ್ರಾಯ / ಸಲಹೆಗಳು

                                ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-09-2021


ಯಾದಗಿರ ನಗರ ಠಾಣೆ ಗುನ್ನೆ ನಂ. 101/2021 ಕಲಂ 188, 269 ಐಪಿಸಿ ಸಂಗಡ ಕಲಂ 51 ಖಿಜ ಆಚಿಣಜಡಿ ಒಚಿಟಿಚಿರಟಜಟಿಣ ಂಛಿಣ 2005, : ಇಂದು ದಿನಾಂಕ; 28/09/2021 ರಂದು 8-30 ಪಿ.ಎಮ್ ಕ್ಕೆ ಶ್ರೀ ಸಿದ್ದಾರ್ಥ ತಂದೆ ಮಲ್ಲಿಕಾಜರ್ುನ ವ;27 ಜಾ; ಲಿಂಗಾಯತ ಉ; ಕಿರಿಯ ಆರೋಗ್ಯ ನಿರೀಕ್ಷಕರು ನಗರಸಭೆ ಯಾದಗಿರಿ ಸಾ; ಪಟೇಲವಾಡಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/12/2021-22 ದಿನಾಂಕ; 14/09/2021 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಳ ಶ್ರೀ ಗಣೇಶೋತ್ಸವ ಹಬ್ಬದ ಆಚರಣೆ ಪ್ರಯುಕ್ತ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಸಾರ್ವಜನಿಕರಿಗೆ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಸರಳ ರೀತಿಯಿಂದ ಗಣೇಶ ಹಬ್ಬವನ್ನು ಆಚರಿಸುವಂತೆ 11 ದಿವಸಗಳ ಗಣೇಶ ಮೂತರ್ಿ ಪ್ರತಿಷ್ಠಾಪನೆಯ ಪರವಾನಿಗೆ ನೀಡಿ ಈ ಮೇಲಿನಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಅದರಂತೆ ಯಾದಗಿರಿ ನಗರದಲ್ಲಿ ಅಲ್ಲಲ್ಲಿ ದಿನಾಂಕ; 10/09/2021 ರಂದು ಗಣೇಶ ಮೂತರ್ಿ ಪ್ರತಿಷ್ಠಾಪನೆ ಮಾಡಿ ದಿನಾಂಕ; 20/09/2021 ರಂದು ಗಣೇಶ ಮೂತರ್ಿಗಳ ವಿಸರ್ಜನೆ ಮಾಡಬೇಕಾಗಿದ್ದು ಇರುತ್ತದೆ. ಶ್ರೀ ಅಂಬಾಭವಾನಿ ದೇವಿಯ ದೇವಸ್ಥಾನದ ಮುಂದುಗಡೆ ಒಂದು ಗಣೇಶ ಮೂತರ್ಿ ಪ್ರತಿಷ್ಠಾಪನೆ ಮಾಡಿದ್ದು ಅಲ್ಲಿ ಸುಮಾರು 30 ರಿಂದ 35 ಜನರು ಗುಂಪು ಗುಂಪಾಗಿ ಸೇರಿದ್ದು ಆಗ ನಾವು ಸ್ಥಳಕ್ಕೆ ಹೋಗಿ ನೋಡಲಾಗಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶದ ಪ್ರಕಾರ ಗಣೇಶ ಮೂತರ್ಿಯು 4 ಅಡಿ ಮೀರದಂತೆ ಪ್ರತಿಷ್ಠಾಪನೆಗೆ ಆದೇಶ ನೀಡಿದ್ದು ಆದರೆ ಈ ಗಣೇಶ ಮೂತರ್ಿಯು 4 ಅಡಿಗಿಂತ ಎತ್ತರವಿದ್ದು ಜನರೂ ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರಿಗೊಬ್ಬರು ಅಂಟಿಸಿಕೊಂಡು ನಿಂತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿರುತ್ತಾರೆ. ಸಾರ್ವಜನಿಕರ ಭಾತ್ಮಿ ಮೇಲಿಂದ ಯಾದಗಿರಿಯ ಬಜರಂಗ ದಳದ ಹಿಂದೂ ಮಹಾ ಗಣಪತಿ ವತಿಯಿಂದ ಗಣೇಶ ಪ್ರತಿಷ್ಠಾಪನೆ ಮಾಡಿದ್ದು ಆರೋಪಿತರು ಕೂಡಿಕೊಂಡು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಸರಳ ಶ್ರೀ ಗಣೇಶೋತ್ಸವ ಹಬ್ಬದ ಆಚರಣೆ ಪ್ರಯುಕ್ತ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಸಾರ್ವಜನಿಕರಿಗೆ ಯಾವುದೇ ರೋಗ ಹರಡದಂತೆ ಮತ್ತು ತೊಂದರೆಯಾಗದಂತೆ ಸರಳ ರೀತಿಯಿಂದ ಗಣೇಶ ಹಬ್ಬವನ್ನು ಆಚರಿಸುವಂತೆ 11 ದಿವಸಗಳ ಗಣೇಶ ಮೂತರ್ಿ ಪ್ರತಿಷ್ಠಾಪನೆಯ ಪರವಾನಿಗೆ ನೀಡಿ ಆದೇಶ ಹೊರಡಿಸಿದರು ಕೂಡಾ ಇಲ್ಲಿಯವರೆಗೆ ಗಣೇಶ ಮೂತರ್ಿ ವಿಸರ್ಜನೆ ಮಾಡದೇ ಆದೇಶ ಉಲ್ಲಂಘನೆ ಮಾಡಿದ್ದು ಈ ಮೇಲಿನಂತೆ ಪ್ರಕರಣ ದಾಖಲಾಗಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ: ಗುನ್ನೆ ನಂ 141/2021 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 28.09.2021 ರಂದು 07.45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಚೆನ್ನಮ್ಮ ಗಂಡ ಮಡಿವಾಳಪ್ಪ ಮಡಿವಾಳ ವ|| 40 ವರ್ಷ ಜಾ|| ಮಡಿವಾಳ ಉ|| ಕೂಲಿಕೆಲಸ ಸಾ|| ಜೈನಾಪೂರ ತಾ|| ಸುರಪೂರ ಇದ್ದು ತಮ್ಮಲ್ಲಿ ಅಜರ್ಿ ಸಲ್ಲಿಸುವುದೇನೆಂದರೆ, ನಮ್ಮ ತಮ್ಮನಾದ ಶರಣಪ್ಪ ಹಾಗು ನಾನು ಇಬ್ಬರು ಜೈನಾಪೂರದಲ್ಲಿ ಬೇರೆ ಬೇರೆ ಮನೆ ಮಾಡಿಕೊಂಡು ಇರುತ್ತೇವೆ. ನಮ್ಮ ತಮ್ಮನಾದ ಶರಣಪ್ಪ ಈತನ ಮಗ ಮುತ್ತಣ್ಣ ವ|| 06 ವರ್ಷ ಈತನು ನನ್ನ ಹತ್ತಿರವೇ ನಮ್ಮ ಮನೆಯಲ್ಲಿಯೇ ಇರುತ್ತಿದ್ದನು. ಹೀಗಿದ್ದು ದಿನಾಂಕ 27.09.2021 ರಂದು ಕೆಲಸದ ನಿಮಿತ್ಯವಾಗಿ ನಾನು ಹಾಗು ನಮ್ಮ ಮೊಮ್ಮಗನಾದ ಮುತ್ತಣ್ಣ ಇಬ್ಬರೂ ಕೂಡಿಕೊಂಡು ಕೆಂಭಾವಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗುವ ಕುರಿತು ಒಂದು ಅಟೋ ಟಂ ಟಂ ಹಿಡಿದು ನಾನು ಹಾಗು ಮೊಮ್ಮಗ ಮುತ್ತಣ್ಣ ಇಬ್ಬರೂ ಕೂಡಿಕೊಂಡು ನಮ್ಮೂರವರೆಗೆ ಬಂದು ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ನಮ್ಮೂರ ಕೆನಾಲ ಕಾಲುವೆಯ ಹತ್ತಿರ ರೋಡಿನ ಪಕ್ಕದಲ್ಲಿ ನಾನು ಹಾಗು ನನ್ನ ಮೊಮ್ಮಗ ಮುತ್ತಣ್ಣ ಇಬ್ಬರು ಅಟೋದಿಂದ ಇಳಿದು ರೋಡ ದಾಟುತ್ತಿದ್ದಾಗ ಅಂದಾಜು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಕೆಂಭಾವಿ ಕಡೆಯಿಂದ ಒಂದು ಕಾರ ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ರೋಡ ದಾಟುತ್ತಿದ್ದ ನನ್ನ ಹಿಂದೆ ಬರುತ್ತಿದ್ದ ಮೊಮ್ಮಗನಾದ ಮುತ್ತಣ್ಣ ತಂದೆ ಶರಣಪ್ಪ ಮಡಿವಾಳ ಈತನಿಗೆ ಬಲವಾಗಿ ಡಿಕ್ಕಿಪಡಿಸಿದನು. ಮೊಮ್ಮಗ ಮುತ್ತಣ್ಣ ಈತನು ರೋಡಿನ ಪಕ್ಕದಲ್ಲಿ ಪುಟಿದು ಬಿದ್ದನು ನಾನು ಹೋಗಿ ಎಬ್ಬಿಸಿ ನೋಡಲಾಗಿ ಮುತ್ತಣ್ಣನಿಗೆ ಬಲಗಾಲ ಮೊಳಕಾಲ ಕೆಳಗೆ ಭಾರೀ ರಕ್ತಗಾಯವಾಗಿ ಕಾಲು ಮುರಿದಿದ್ದು ಅಲ್ಲದೇ ಹಣೆಗೆ ಹಾಗು ಮೂಗಿಗೆ ತರಚಿದ ಗಾಯಗಳಾಗಿದ್ದು ಮತ್ತು ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ನಂತರ ನನ್ನ ಮೊಮ್ಮಗನಿಗೆ ಅಪಘಾತ ಪಡಿಸಿದ ಅಲ್ಲಿಯೇ ನಿಂತಿದ್ದ ಕಾರ ನಂಬರ ನೋಡಲಾಗಿ ಕೆಎ-33 ಎ-7493 ಅಂತ ಇದ್ದು ಅಲ್ಲಿಯೇ ಇದ್ದ ಚಾಲಕನಿಗೆ ವಿಚಾರಿಸಲಾಗಿ ಸೋಮರಾಯ ತಂದೆ ಹಣಮಂತ ಸಾ|| ಯಾದಗಿರಿ ಅಂತ ತಿಳಿಸಿದನು. ನಂತರ ಸದರ ಕಾರ ಚಾಲಕನು ನನಗೂ ಹಾಗು ನಮ್ಮ ಮೊಮ್ಮಗನಾದ ಮುತ್ತಣ್ಣ ಈತನಿಗೆ ಕರೆದುಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಮೊಮ್ಮಗ ಮುತ್ತಣ್ಣ ಈತನಿಗೆ ಕಾಲು ಮುರಿದು ಬಹಾಳ ತ್ರಾಸ ಆಗುತ್ತಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿ ಕಾಮರಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನ ಮೊಮ್ಮಗ ಮುತ್ತಣ್ಣ ಈತನಿಗೆ ಅಪಘಾತಪಡಿಸಿದ ಕಾರ ನಂ ಕೆಎ 33 ಎ 7493 ನೇದ್ದರ ಚಾಲಕ ಸೋಮರಾಯ ತಂದೆ ಹಣಮಂತ ಸಾ|| ಯಾದಗಿರಿ ಈತನ ಅತೀವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ

ಇತ್ತೀಚಿನ ನವೀಕರಣ​ : 29-09-2021 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080