ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-09-2022


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 79/2022 ಕಲಂ 279, 304(ಎ) ಐ.ಪಿ.ಸಿ : ದಿನಾಂಕ:27/09/2022 ರಂದು 10.30 ಪಿ.ಎಮ್. ಸುಮಾರಿಗೆ ಮೃತಆರೋಪಿ ಯಂಕೋಬ ಈತನುತನ್ನ ಪರಿಚಯದವನಾದರಾಚೋಟಿಈತನಿಗೆತನ್ನಅಟೋಟಂಟಂ ನಂ:ಕೆಎ-33, ಎ-1068 ನೇದ್ದರಲ್ಲಿ ಕೂಡಿಸಿಕೊಂಡು ಶಹಾಪೂರದಿಂದತನ್ನಊರಕಡೆಗೆ ಹೊರಟಾಗ ಮದ್ರಕಿಕ್ರಾಸ್ದಿಂದ ಸ್ವಲ್ಪದೂರದಲ್ಲಿ ಶಹಾಪೂರ-ಕಲಬುರಗಿ ಮುಖ್ಯರಸ್ತೆಯ ಮೇಲೆ ಹೊರಟಾಗಆರೋಪಿತನುರಸ್ತೆಯ ಮೇಲಿರುವತೆಗ್ಗುಗುಂಡಿಯನ್ನು ಲೆಕ್ಕಿಸದೇತನ್ನಅಟೋವನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿ ತೆಗ್ಗುತಪ್ಪಿಸಲುಒಮ್ಮೆಲೆ ಬಲಕ್ಕೆ ಕಟ್ ಹೊಡೆದಿದ್ದರಿಂದಅಟೋರಸ್ತೆಯ ಬಲ ಪಕ್ಕದಲ್ಲಿ ಬಲ ಮಗ್ಗುಲಿನ ಮೇಲೆ ಪಲ್ಟಿಯಾಗಿಆರೋಪಿ ಯಂಕೋಬ ಮತ್ತುರಾಚೋಟಿಇವರ ಮೇಲೆ ಬಿದ್ದುಅಪಘಾತವಾಗಿದ್ದರಿಂದ ಸದರಿಅಪಘಾತದಲ್ಲಿಯಂಕೋಬ ಈತನತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದರಕ್ತ ಬಂದಿದ್ದುರಾಚೋಟಿಈತನತಲೆ ಮತ್ತುಎದೆಗೆ ಭಾರಿ ಒಳಪೆಟ್ಟಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ದೂರುಇರುತ್ತದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 143/2022, ಕಲಂ.323, 324, 504.506. ಐ ಪಿ ಸಿ : ಇಂದು ದಿನಾಂಕ: 28-09-2022 ರಂದು ಮದ್ಯಾಹಣ 12-30 ಗಂಟೆಗೆ ಪಿರ್ಯಾಧಿದಾರಳು ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 22-09-2022 ರಂದು ಮುಂಜಾನೆ 11-30 ಗಂಟೆ ಸುಮಾರಿಗೆ ಫಿರ್ಯಾಧಿಯ ಹತ್ತಿ ಹೊಲದಲ್ಲಿ ಸದಿ ತಗೆಯುತ್ತಿರುವಾಗ ಫಿರ್ಯಾಧಿಯ ಮಗ (ಆರೋಪಿತ) ಶರಣಪ್ಪ ತಂದೆ ಮಲ್ಲಿಕಾಜರ್ುನ ಇತನು ಬಂದು ಏ ರಂಡಿ, ಬೊಸಡಿ, ಚಿನಾಲಿ, ನಾನು ಹತ್ತಿ ಹೊಲಕ್ಕೆ ನೀರು ಬಿಡುತ್ತಿರುವಾಗ ಏಕೆ ಕರೆಂಟ ತೆಗೆದಿದ್ದಿ ನಿಮ್ಮವ್ವನ ನೀನ್ನ್ ಕಾಲಗ ಸಾಕಾಗ್ಯಾದ ಅಂತ ಅವಚ್ಯಾವಾಗಿ ಬೈಯುತ್ತಿರುವಾಗ, ಇಲ್ಲಪ್ಪ ನಾನೇಕ ಕರೆಂಟ ತಗ್ಲಿ ಅದೇ ಹೊಗ್ಯಾದ ಅಂತ ಅಂದಾಗ ಇಲ್ಲ ನೀನೆ ತಗದಿದಿ ರಂಡಿ ಅಂದವನೇ ಇಲ್ಲಿ ಯ್ಯಾಂಗಿದ್ರು ಯಾರು ಇಲ್ಲ ಖಲಾಸ ಮಾಡುತ್ತಿನಿ ಅಂತ ತನ್ನ ಕೈ ಮುಷ್ಟಿ ಮಾಡಿ ಎಡಗಡೆ ದವಡಿ ಗುದ್ದಿ, ಕಪಾಳಕ್ಕೆ ಹೊಡೆದನು ಆಗ ನಾನು ಯಾಕಲೋ ನಾನು ನಿನ್ನ ತಾಯಿ ಇದೀನೋ ಅಂದರು ಹಿಗೆ ಹೊಡೆಯುತ್ತಿಯಲ್ಲ ಅಂದೆನು ಆಗ ಅವನು ನಿನ್ನವ್ವನ್ ನೀನ ಯಾವ ತಾಯಿ ಇವತ್ತ ಒಂದ ಗತಿ ಕಾಣಿಸುತ್ತೆನೆ ಅಂತ ಕಟ್ಟಿಗೆಯಿಂದ ಎಡಪಕ್ಕೆಲುಬಿಗೆ ಹೊಡೆದು ಭಾರಿಗುಪ್ತಗಾಯ ಮಾಡಿರುತ್ತಾನೆ. ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 168/2022. ಕಲಂ. 279.337 ಐ.ಪಿ.ಸಿ. : ಇಂದು ದಿನಾಂಕ 28.09.2022 ರಂದು 14.45 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮಹೇಶ ತಂದೆ ಸಿದ್ದಲಿಂಗಪ್ಪ ಪಾಟೀಲ ವ|| 40 ಜಾ|| ಲಿಂಗಾಯತ ರಡ್ಡಿ ಉ|| ವ್ಯಾಪಾರ ಸಾ|| ಗಣೇಶ ನಗರ ಶಹಾಪೂರ [ಮೋ.ನಂ 9900469555] ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮದು ಒಂದು ಹುಂಡಾಯಿ ಕ್ರಯೆಟಾ ಕಂಪನಿಯ ಕಾರ ನಂಬರ ಕೆಎ-33 ಎಮ್-6660 ಇದ್ದು ಅದಕ್ಕೆ ಚಾಲಕನಾಗಿ ರಾಜೇಶ ತಂದೆ ಮಹಾದೇವಪ್ಪ ಚಲುವಾದಿ ಸಾ|| ದೇವೆಗೌಡ ನಗರ ದೇವದುಗರ್ಾ ಈತನು ಇದ್ದು ಎಲ್ಲಿಗಾದರೂ ಹೋಗಬೇಕಾದರೆ ನಮ್ಮ ಇದೆ ಕಾರ ತೆಗೆದುಕೊಂಡು ಹೋಗುತ್ತಿದ್ದೆನು. ಹೀಗಿದ್ದು ಇಂದು ದಿನಾಂಕ 28/09/2022 ರಂದು ರಾತ್ರಿ 2 ಗಂಟೆಗೆ ತುತರ್ಾಗಿ ಹತ್ತಿಗುಡುರ ಗ್ರಾಮಕ್ಕೆ ಹೋಗಬೇಕಾಗಿ ಬಂದಿದ್ದರಿಂದ ರಾತ್ರಿ 2 ಗಂಟೆಯ ಸುಮಾರಿಗೆ ನಮ್ಮ ಕಾರ ನಂಬರ ಕೆಎ-33 ಎಮ್-6660 ನೇದ್ದನ್ನು ತೆಗೆದುಕೊಂಡು ನಾನು ಹಾಗು ನನ್ನ ಜೊತೆಯಲ್ಲಿ ಅಮೃತರಡ್ಡಿ ತಂದೆ ದೇವೀಂದ್ರಪ್ಪ ಹೊಸಮನಿ ಸಾ|| ಹತ್ತಿಗುಡುರ ಹಾಗು ಶ್ರೀನಿವಾಸರಡ್ಡಿ ತಂದೆ ಸತ್ಯನಾರಾಯಣ ಸಾ|| ಕೊಂಗಂಡಿ [ಎಸ್] ನಾವೂ ಮೂರು ಜನರು ಸೇರಿ ನಮ್ಮ ಕಾರಿನಲ್ಲಿ ಯಾದಗಿರಿಯಿಂದ ತಡಿಬಿಡಿ ಮುಖಾಂತರ ಹತ್ತಿಗುಡುರ ಗ್ರಾಮಕ್ಕೆ ಬರುತ್ತಿರುವಾಗ ರಾತ್ರಿ 03.00 ಗಂಟೆ ಸುಮಾರಿಗೆ ಅನ್ವರ ಇನ್ನು ಒಂದು ಕಿಲೋಮಿಟರ ದೂರವಿರುವಾಗ ನಮ್ಮ ಕಾರ ಚಾಲಕನಾದ ರಾಜೇಶ ತಂದೆ ಮಹಾದೇವಪ್ಪ ಚಲುವಾದಿ ಸಾ|| ದೇವೆಗೌಡ ನಗರ ದೇವದುಗರ್ಾ ಈತನು ಕಾರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೇ ಬಲಭಾಗಕ್ಕೆ ಕಟ್ ಮಾಡಿದಾಗ ಒಮ್ಮಲೇ ನಮ್ಮ ಕಾರ ಚಾಲಕನ ನಿಯಂತ್ರಣ ತಪ್ಪಿ ರೋಡಿನ ಬಲಮಗ್ಗಲಿನ ಕಲ್ಲಿಗೆ ಡಿಕ್ಕಿಯಾಗಿ ರೋಡಿನ ಬಲಭಾಗದಲ್ಲಿ ಮೂರು ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಕಾರನಲ್ಲಿದ್ದ ನನಗೆ ಎಡಗೈ ಮಣಿಕಟ್ಟಿನ ಹತ್ತಿರ ಹಾಗು ತಲೆಗೆ ತರಚಿದ ಗಾಯಗಳಾಗಿದ್ದು ಹಾಗು ಟೊಂಕಕ್ಕೆ ಗುಪ್ತಗಾಯವಾಗಿದ್ದು ಆದರೆ ನನ್ನ ಜೊತೆಯಲ್ಲಿದ್ದ ಅಮೃತರಡ್ಡಿ ಹಾಗು ಶ್ರೀನಿವಾಸರಡ್ಡಿ ಇವರಿಗೆ ಯಾವದೇ ಗಾಯ ವಗೈರೆ ಆಗಿರುವದಿಲ್ಲ. ಹಾಗು ಕಾರ ಚಾಲಕನಿಗೂ ಸಹ ಯಾವದೇ ಗಾಯ ವಗೈರೆ ಆಗಿರುವದಿಲ್ಲ, ಆದರೆ ಈ ಅಪಘಾತದಿಂದ ನಮ್ಮ ಕಾರ ಪೂತರ್ಿಯಾಗಿ ಜಖಗೊಂಡಿದ್ದು ಇರುತ್ತದೆ. ನಂತರ ನಮ್ಮ ಅಪಘಾತವಾದ ಕಾರ ಹಾಗು ಚಾಲಕನನ್ನು ಅಲ್ಲಿಯೆ ಬಿಟ್ಟು ನಾನು ಇಂದು ದಿನಾಂಕ 28.09.2022 ರಂದು ಬೆಳಿಗ್ಗೆ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಉಪಚಾರ ಪಡೆದುಕೊಂಡು ತಡವಾಗಿ ಬಂದು ಈ ದೂರು ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ. ಅಪಘಾತಕ್ಕೆ ನಮ್ಮ ಹುಂಡಾಯಿ ಕ್ರಯೆಟಾ ಕಂಪನಿಯ ಕಾರ ನಂಬರ ಕೆಎ-33 ಎಮ್-6660 ನೇದ್ದರ ಚಾಲಕ ರಾಜೇಶ ತಂದೆ ಮಹಾದೇವಪ್ಪ ಚಲುವಾದಿ ಸಾ|| ದೇವೆಗೌಡ ನಗರ ದೇವದುಗರ್ಾ ಈತನ ಅತೀ ವೇಗ ಹಾಗು ಅಲಕ್ಷತನದ ಚಾಲನಯೇ ಕಾರಣವಿದ್ದು ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 168/2022 ಕಲಂ 279,337 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ: 363 ಐ.ಪಿ.ಸಿ : ಇಂದು ದಿನಾಂಕ: 28.09.2022 ರಂದು 4.45 ಗಂಟೆಗೆ ಪಿರ್ಯಾಧಿದಾರರಾದ ಅಂಜಪ್ಪ ತಂದೆ ಅಯ್ಯಣ್ಣ ನಾಗಣ್ಣನೋರ ವಯಾ-54 ವರ್ಷ ಜಾತಿ-ಕುರುಬರು ಉ-ಗಾರೆಕೆಲಸ ಸಾ-ಕನಕನಗರ ನಗರ ಯಾದಗಿರಿ ನಿವಾಸಿಯಾಗಿರುತ್ತೇನೆ. ಮೊಬೈಲ್ ನಂಬರ - 9892785951, 9221336650 ನನಗೆ 1) ರೇಣುಕಾ ವಯಾ-24 ವರ್ಷ  2) ಲಕ್ಷ್ಮಿ ವಯಾ-22 ವರ್ಷ, 3) ನಿಂಗಮ್ಮ ವಯಾ-20 ವರ್ಷ (B.SC Final Year) ರಾಯಚೂರುನಲ್ಲಿ ಓದುತ್ತಿರುತ್ತಾಳೆ.) 4) ಮಾರುತಿ ವಯಾ-18 ವರ್ಷ 5) ಶಿವಕುಮಾರ ವಯಾ-16 ವರ್ಷ ಈ ರೀತಿ ಐದು ಜನ ಮಕ್ಕಳಿರುತ್ತಾರೆ. ಹೊಟ್ಟೆ ಪಾಡಿಗಾಗಿ ಸಧ್ಯ ನಾನು ಮತ್ತು ನನ್ನ ಹೆಂಡತಿ ಗಂಗಮ್ಮ ಮತ್ತು ಹಿರಿಯ ಮಗನಾದ ಮಾರುತಿಯೊಂದಿಗೆ ಮುಂಬೈ ನಗರ ಶಿವಡಿ ಕೋಲಿವಾಡಾ  ಏರಿಯಾದಲ್ಲಿ ವಾಸವಾಗಿರುತ್ತೇವೆ. ನನ್ನ ಹಿರಿಯ ಮಗಳಾದ ರೇಣುಕಾ ಮತ್ತು ಎರಡನೇಯ ಮಗಳಾದ ಲಕ್ಷ್ಮಿ ಇವರಿಗೆ ಈಗಾಗಲೇ ಮದುವೆ ಮಾಡಿಕೊಟ್ಟಿರುತ್ತೇನೆ. ಮೂರನೇ ಮಗಳಾದ ನಿಂಗಮ್ಮ ಈಕೆಯು ರಾಯಚೂರಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾಳೆ. ನನ್ನ ಕೊನೆಯ ಮಗನಾದ ಶಿವಕುಮಾರನನ್ನು ನನ್ನ ಖಾಸಾ ತಮ್ಮನಾದ ಬಸವರಾಜ ತಂದೆ ಅಯ್ಯಣ್ಣ ಈತನ ಹತ್ತಿರ ವಿದ್ಯಾಭ್ಯಾಸಕ್ಕಾಗಿ ಬಿಟ್ಟಿರುತ್ತೇನೆ. ನನ್ನ ಮಗ  ಶಿವಕುಮಾರ ಇತನು ಯಾದಗಿರಿ ಆದರ್ಶ ವಿದ್ಯಾಲಯದಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುತ್ತಾನೆ. ಶಿವಕುಮಾರನು ಟ್ಯೂಷನ್ ಕೂಡ ಹೊಗುತ್ತಿದ್ದನು. ನಮಗೆ ಪರಿಚಯಸ್ಥರಾದ ಯಾದಗಿರಿಯ ಲೀಟ್ಲ್ ರಾಕ ಪಬ್ಲಿಕ ಸ್ಕೂಲನ ಮುಖ್ಯ ಗುರುಗಳಾದ ರೋಟ್ನಡಗಿ ಗ್ರಾಮದ ಶ್ರೀ ಖಾಸಿಂ ತಂದೆ ಬಂದಿಸಾಬ್ ಇವರ ಹತ್ತಿರ ನನ್ನ ಮಗ ರಾತ್ರಿ ಓದಲು ಹೋಗುತ್ತಿದ್ದನು. ಹೀಗೆ ಹದಿನೈದು  ದಿನಗಳಿಂದ ಅದೇ ಶಾಲೆಯಲ್ಲಿ ಮಲಗಿಕೊಳ್ಳುತ್ತಿದ್ದನು.

            ಹೀಗಿರುವಾಗ ದಿನಾಂಕ 25-09-2022 ರಂದು ಬೆಳಿಗ್ಗೆ 9.30 ಗಂಟೆಗೆ ನನಗೆ ಪರಿಚಯಸ್ಥರಾದ ಖಾಸಿಂ ತಂದೆ ಬಂದಿಸಾಬ್ ರವರು ಪೋನ್ ಮಾಡಿ ತಿಳಿಸಿದೇನೆಂದರೆ ನಿಮ್ಮ ಮಗನಾದ ಶಿವಕುಮಾರ ಈತನು ಈ ದಿನ ಬೆಳಗಿನ ಜಾವ 5.00 ಗಂಟೆ ಸುಮಾರಿಗೆ ಯಾರಿಗೂ ಹೇಳದೇ ಕೇಳದೆ ಶಾಲೆಯಿಂದ ಹೋಗಿದ್ದು, ಮರಳಿ ಇಲ್ಲಿಯವರೆಗೂ ಶಾಲೆಗೆ ಬಂದಿರುವುದಿಲ್ಲ. ನಂತರ ನಾನು  ನಿಮ್ಮ ತಮ್ಮನ ಹೆಂಡತಿಗೆ  ಶಿವಕುಮಾರನು ನಿಮ್ಮ ಮನೆಗೆ ಬಂದಿದ್ದಾನೋ ಇಲ್ಲವೋ ಎಂದು ವಿಚಾರಿಸಿದ್ದು, ಶಿವಕುಮಾರನು ನಮ್ಮ ಮನೆಗೆ ಬಂದಿಲ್ಲ ಅಂತ ತಿಳಿಸಿರುತ್ತಾರೆ. ಅಂತ ನನಗೆ ಪೋನಿನಲ್ಲಿ ತಿಳಿಸಿದ್ದು, ನಾನು ವಿಷಯ ತಿಳಿದು ಮುಂಬೈಯಿಂದ ಸೋಮುವಾರ ದಿನಾಂಕ: 26.09.2022 ರಂದು ಯಾದಗಿರಿಗೆ ಬಂದಿರುತ್ತೇನೆ. ನನ್ನ ಮಗ ಶಿವಕುಮಾರ ಈತನು ಕಾಣೆಯಾದ ಬಗ್ಗೆ ನಮ್ಮ ಸಂಬಂಧಿಕರಲ್ಲಿ ಮತ್ತು  ಪರಿಚಯಸ್ಥರಿಗೆ  ವಿಚಾರಿಸಲಾಗಿ ನನ್ನ ಮಗನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ.  ನನ್ನ ಮಗ ಶಿವಕುಮಾರನು ಲೀಟ್ಲ್ ರಾಕ ಪಬ್ಲಿಕ ಸ್ಕೂಲದಿಂದ ಹೋಗುವಾಗ ರೆಡ್ ಕಲರ್ ಟೀ ಶರ್ಟ,  ಮತ್ತು ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದನು  ಅಂತಾ ಖಾಸಿಂ ಸರ್ ಅವರು ತಿಳಿಸುರುತ್ತಾರೆ. ನನ್ನ  ಮಗ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಕಾಣೆಯಾದ ನನ್ನ ಮಗನನ್ನು ದಿನಾಂಕ: 25.09.2022 ರಿಂದ ಇಲ್ಲಿಯವರಗೆ ಹುಡುಕಾಡಿದ್ದು ಸಿಗದೇ ಇದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನ್ನ ಮಗ ಅಪ್ರಾಪ್ತ ವಯಸ್ಸಿನವನಾಗಿದ್ದರಿಂದ ಯಾವುದೇ ದಿನ ಪತ್ರಿಕೆಗಳಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಬಾರದೆಂದು ವಿನಂತಿಸುತ್ತೇನೆ. ಆದ್ದರಿಂದ ಕಾಣೆಯಾದ ನನ್ನ ಮಗನಾದ ಶಿವಕುಮಾರ ತಂದೆ ಅಂಜಪ್ಪ ವಯಾ-16 ವರ್ಷ ಸಾ-ಯಾದಗಿರಿ ಈತನನ್ನು ಪತ್ತೆ ಮಾಡಿ ಕೊಡಲು ತಮ್ಮಲ್ಲಿ ವಿನಂತಿ ಅಂತ ಕೊಟ್ಟ ದೂರಿನ ಸಾರಂಶದ ಆಧಾರದ  ಮೇಲಿಂದ  ಠಾಣೆಯ ಗುನ್ನೆ ನಂ:  50/2022 ಕಲಂ:  363 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಢಿಕೊಂಡು ತನಿಖೆ ಕೈಗೊಂಡಿರುತ್ತದೆ

ಇತ್ತೀಚಿನ ನವೀಕರಣ​ : 29-09-2022 10:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080