ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-10-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 169/2021 ಕಲಂ 447 504 506 ಸಂ 34 ಐ.ಪಿ.ಸಿ. : ಪಿರ್ಯಾಧಿ ಜಮೀನು ಸವರ್ೇ ನಂ 610* ನೇದ್ದರಲ್ಲಿ ಜಮೀನುನನ್ನು ಉಳುಮೆ ಮಾಡುವ ಸಲುವಾಗಿ ಕೆಲಸಗಾರರಾದ ಅಶೋಕ ಕಂದೆನಪಲ್ಲಿ ಮತ್ತು ಮೌನೇಶ ರೆಡ್ಡೆಪ್ಪ ಇವರುಗಳು ಟ್ಯಾಕ್ಟರ್ ಗಳಿಂದ ಕೆಲಸ ಮಾಡುತ್ತಿರುವಾಗ ಆರೋಪಿತರು ಪಿರ್ಯಾಧಿಯ ಜಮೀನನ್ನು ಅತೀಕ್ರಮ ಪ್ರವೇಶ ಮಾಡಿ ಪಿರ್ಯಾಧಿಯ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ಟ್ಯಾಕ್ಟರ್ ಗಾಲಿಯ ಗಾಳಿ ಬಿಡುವದಾಗಿ ಅಂಜಿಸಿದ್ದು ಅವರು ಅಂಜಿ ಕೆಲಸ ಬಿಟ್ಟು ಹೋಗಿದ್ದು. ಈ ಬಗ್ಗೆ ಪಿರ್ಯಾಧಿಯು ತನ್ನ ಜಮೀನನ್ನು ಅತೀಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿ ಹೋದವರ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ವಗೈರೆ ಸಾರಾಂಶ ಇರುತ್ತದೆ.

 

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 127/2021 ಕಲಂ: 78(3) ಕೆ.ಪಿ.ಆಕ್ಟ್ 1963 : ದಿನಾಂಕ:28/10/2021 ರಂದು 12-45 ಪಿಎಮ್ ಕ್ಕೆ ಪಿ.ಎಸ್.ಐ (ತನಿಖೆ) ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದೇನಂದರೆ ಇಂದು ದಿನಾಂಕ:28/10/2021 ರಂದು ಸಮಯ ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ಸಾಬಣ್ಣ ಹೆಚ್.ಸಿ 102, ಮಹೇಂದ್ರ ಪಿಸಿ 254, ಮರಿಲಿಂಗ ಪಿಸಿ 355 ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಗುಂಡಳ್ಳಿ ಗ್ರಾಮದ ಅಂಬಿಗರ ಚೌಡಯ್ಯನ ಕಟ್ಟೆ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ನಮಗೆ ಖಚಿತ ಮಾಹಿತಿ ಬಂದಿದ್ದು, ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮಾಹಿತಿ ಬಂದ ಸಂಗತಿ ತಿಳಿಸಿ, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು, ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಕುಳಿತು ವಡಗೇರಾ ಠಾಣೆಯಿಂದ ಹೊರಟು ಸಮಯ 11-15 ಎಎಮ್ ಸುಮಾರಿಗೆ ಗುಂಡಳ್ಳಿ ಗ್ರಾಮದ ಅಂಬಿಗರ ಚೌಡಯ್ಯ ಕಟ್ಟೆ ಹತ್ತಿರ ಹೋಗಿ ಸಂತೋಷ ಕುಂಬಾರ ಈತನ ಹಳೆ ಗೋದಾಮ ಸಮೀಪ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿ, ಸದರಿ ಗೋದಾಮ ಅನ್ನು ಮರೆಯಾಗಿ ನಿಂತು ನೋಡಲಾಗಿ ಚೌಡಯ್ಯ ಕಟ್ಟೆ ಹತ್ತಿರ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕೂಗಿ ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 11-20 ಎಎಮ್ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಉಸ್ಮಾನ ತಂದೆ ಮೈನೊದ್ದಿನ ಟಪ್ಪಾದವರ, ವ:28, ಜಾ:ಮುಸ್ಲಿಂ, ಉ:ಡ್ರೈವರ ಸಾ:ಗುಂಡಳ್ಳಿ ತಾ:ಶಹಾಪೂರ ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 1500/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ದೊರೆತ್ತಿದ್ದು, ಸದರಿ ಮುದ್ದೆಮಾಲನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಮ್ಮ ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಮಟ್ಕಾ ನಂಬರ ಬರೆಸಲು ಬಂದಿದ್ದ ಜನರು ಅಲ್ಲಿಂದ ಓಡಿ ಹೋದರು. ಸದರಿ ಘಟನೆ ಸ್ಥಳವು ಗುಂಡಳ್ಳಿ ಗ್ರಾಮದ ಅಂಬಿಗರ ಚೌಡಯ್ಯನ ಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇರುತ್ತದೆ. ಸದರಿ ವಶಕ್ಕೆ ಪಡೆದುಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 128/2021 ಕಲಂ: 78 (3) ಕೆ.ಪಿ ಎಕ್ಟ 1963 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 29-10-2021 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080