ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-11-2021

ಯಾದಗಿರ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 61/2021 ಕಲಂ 279, 338 ಐಪಿಸಿ : ದಿನಾಂಕ 26/11/2021 ರಂದು ಸಮಯ 07-45 ಪಿ.ಎಂ.ಕ್ಕೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಯಾದಗಿರಿ ನಗರದ ಆರ್.ಟಿ.ಓ ಕಾಯರ್ಾಲಯದ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಈ ಪ್ರಕರಣದ ಗಾಯಾಳು ಅಮೃತ ಈಕೆಗೆ ಮೋಟಾರು ಸೈಕಲ್ ನಂಬರ ಕೆಎ-33, ಎಕ್ಸ್-7779 ನೇದ್ದರ ಸವಾರನು ತನ್ನ ಮೊಟಾರು ಸೈಕಲನ್ನು ಸುಬಾಷ್ ವೃತ್ತದ ಕಡೆಯಿಂದ ಡಾನ್ ಬೋಸ್ಕೋ ಶಾಲೆಯ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ಡಿಕ್ಕಿಕೊಟ್ಟಿದ್ದರಿಂದ ಆಕೆಯು ಡಿಕ್ಕಿ ಕೊಟ್ಟ ರಭಸಕ್ಕೆ ಪುಟಿದು ರಸ್ತೆಯ ಡಿವೇಡರ್ ಮೇಲೆ ಹೋಗಿ ಬಿದ್ದಾಗ ಸದರಿ ಅಪಘಾತದಲ್ಲಿ ಆಕೆಗೆ ತಲೆಯ ಹಿಂಭಾಗಕ್ಕೆ ಭಾರೀ ಗುಪ್ತಗಾಯವಾಗಿದ್ದು, ಹಣೆಗೆ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿ ಪ್ರಜ್ಞೆ ತಪ್ಪಿರುತ್ತಾರೆ ಈ ಘಟನೆಯ ನಂತರ ಆಕೆಗೆ ಉಪಚಾರ ಕೊಡಿಸುವ ಅವಸರದಲ್ಲಿ ಮತ್ತು ಮನೆಯ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಲಿಖಿತ ಅಜರ್ಿ ಸಲ್ಲಿಸಿದ್ದು, ಘಟನೆಗೆ ಕಾರಣನಾದ ಮೋಟಾರು ಸೈಕಲ್ ಸವಾರನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 61/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ.73/2021 ಕಲಂ: 283, 188 ಐಪಿಸಿ ಮತ್ತು ಕಲಂ: 136 ಆರ್.ಪಿ ಕಾಯ್ದೆ-1951 : ಇಂದು ದಿನಾಂಕ:28.11.2021 ರಂದು 6:00 ಪಿಎಮ್ಕ್ಕೆ ಪಿರ್ಯಾಧಿ ಶ್ರೀ ಪರಮೇಶ್ವರ ತಂದೆ ಬಳಿರಾಮ ಭತ್ತಮುರಗೆ ವ:44 ವರ್ಷ ಜಾ:ಹಿಂದೂ ಕುರುಬರ ಉ:ಸಹಾಯಕ ತೋಟಗಾರಿಕೆ ನಿದರ್ೇಶಕರು ಸುರಪೂರ ಸದ್ಯ ವಿಧಾನ ಪರಿಷತ್ತ ಚುನಾವಣೆ-2021 ಕಲಬುರಗಿ ಕ್ಷೇತ್ರದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪ್ಲಾಯಿಂಗ್ ಸ್ಕ್ವಾಡ್ ಟೀಮ್ನ ಅಧಿಕಾರಿ ಸಾ:ಬೀದರ ಹಾ.ವ:ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರು ಅಜರ್ಿಯ ಸಾರಾಂಶವೆನೇಂದರೆ ನಾನು ಪರಮೇಶ್ವರ ತಂದೆ ಬಳಿರಾಮ ಭತ್ತಮುರಗೆ ವ:44 ವರ್ಷ ಜಾ:ಹಿಂದೂ ಕುರುಬರ ಉ:ಸಹಾಯಕ ತೋಟಗಾರಿಕೆ ನಿದರ್ೇಶಕರು ಸುರಪೂರ ಸದ್ಯ ವಿಧಾನ ಪರಿಷತ್ತ ಚುನಾವಣೆ-2021 ಕಲಬುರಗಿ ಕ್ಷೇತ್ರದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪ್ಲಾಯಿಂಗ್ ಸ್ಕ್ವಾಡ್ ಟೀಮ್ನ ಅಧಿಕಾರಿ ಸಾ:ಬೀದರ ಹಾ.ವ:ಸುರಪೂರ ಇದ್ದು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶದಂತೆ ನಾನು ದಿನಾಂಕ 12.11.2021 ರಿಂದ ವಿಧಾನ ಪರಿಷತ್ತ ಚುನಾವಣೆ-2021 ಕಲಬುರಗಿ ಕ್ಷೇತ್ರದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಪ್ಲಾಯಿಂಗ್ ಸ್ಕ್ವಾಡ್ ಟೀಮ್ನ ಅಧಿಕಾರಿ ಅಂತ ಕೆಲಸ ಮಾಡುತ್ತಿದ್ದು ನನ್ನೊಂದಿಗೆ ದಿನಾಂಕ 27.11.2021 ರಿಂದ ಹಣಮಂತ್ರಾಯ ಹೆಚ್ಸಿ-124 ಹುಣಸಗಿ ಠಾಣೆ ರವರು ಇದ್ದು ನಾನು ಮತ್ತು ಹಣಮಂತ್ರಾಯ ಹೆಚ್ಸಿ-124 ರವರು ಇಂದು ಇದೇ ವಿಧಾನ ಪರಿಷತ್ತ ಚುನಾವಣೆಯ ವಿಡಿಯೋ ವಿಜಿಲೆನ್ಸ್ ಟೀಮ್ನ ಮುಖ್ಯಸ್ಥರಾದ ಸತ್ಯನಾರಾಯಣ ತಂದೆ ಕಾಮಣ್ಣ ದರಬಾರಿ ಸಮಾಜ ಕಲ್ಯಾಣ ಸಹಾಯಕ ನಿದರ್ೇಶಕರು ಸದ್ಯ ವಿಧಾನ ಪರಿಷತ್ತ ಚುನಾವಣೆ-2021 ಕಲಬುರಗಿ ಕ್ಷೇತ್ರದ ಹುಣಸಗಿ ತಾಲೂಕಿನ ವಿಎಸ್ಟಿ ಟೀಮ್ ಮತ್ತು ಅವರ ಕಾರ್ ಚಾಲಕ ಮಂಜುನಾಥ ತಂದೆ ತಿರುಮಣ್ಣ ಕವಲಿ ಸಾ|| ಸುರಪೂರ ರವರೊಂದಿಗೆ ಕೊಡೆಕಲ್ಲ ಗ್ರಾಮದಲ್ಲಿ ಸುರಪೂರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪನಾಯಕ ರವರ ಅಭಿಮಾನಿಗಳು ಕೊಡೆಕಲ್ಲ ಗ್ರಾಮದಲ್ಲಿ ಶ್ರೀ ವೆಂಕಟಪ್ಪನಾಯಕ ರವರ ಹುಟ್ಟುಹಬ್ಬವನ್ನು ಇಂದು ದಿನಾಂಕ 28.11.2021 ರಂದು ಆಚರಿಸುತ್ತಾರೆ ಅಂತ ಮಾಹಿತಿ ಗೊತ್ತಾಗಿ ಸತ್ಯನಾರಾಯಣ ರವರ ಕಾರ ನಂ:ಕೆಎ-33 ಎ-6609 ನೇದ್ದರಲ್ಲಿ ಇಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾವೆಲ್ಲರೂ ಕೊಡೇಕಲ್ಲ ಗ್ರಾಮದಲ್ಲಿನ ಬೂದಿಹಾಳ ಕ್ರಾಸ್ಗೆ ಬಂದು ನೋಡಲಾಗಿ ಬೂದಿಹಾಳ ಕ್ರಾಸ್ದಲ್ಲಿನ ಶ್ರೀ ಗದ್ದೆಮ್ಮ ದೇವಿಯ ದೇವರ ಕಟ್ಟೆಯ ಹತ್ತಿರ ತಾಳಿಕೋಟಿಗೆ ಹೋಗುವ ರೋಡಿನ ಮೇಲೆ ವೇದಿಕೆ ನಿಮರ್ಾಣ ಮಾಡಿ ಶ್ರೀ ರಾಜಾ ವೆಂಕಟಪ್ಪನಾಯಕ ರವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳಾದ 1) ಸಂಗಮೇಶ @ ಸಂಗು ತಂದೆ ಬಸಣ್ಣ ಕಕ್ಕೇರಿ, 2) ನಿಂಗಪ್ಪ ತಂದೆ ಬಸವರಾಜ ಬೂದಿಹಾಳ, 3) ಅವಿನಾಶ ತಂದೆ ಹಣಮಂತ್ರಾಯ ದೊರಿ ಸಾ:ಎಲ್ಲರೂ ಕೊಡೆಕಲ್ಲ ರವರು ಆಯೋಜನೆ ಮಾಡಿದ್ದು ಈ ಮೂವರಿಗೆ ನಾನು ಸದರಿ ಕಾರ್ಯಕ್ರಮದ ಕುರಿತು ಸದ್ಯ ಜಿಲ್ಲೆಯಲ್ಲಿ ವಿಧಾನ ಪರಿಷತ್ತ-2021 ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಈ ಕಾರ್ಯಕ್ರಮಕ್ಕೆ ಪರವಾನಿಗೆ ಪಡೆದುಕೊಳ್ಳಲಾಗಿದೆ ಅಂತಾ ಕೇಳಲಾಗಿ ಸದರಿ ಮೂವರು ತಾವು ಯಾವುದೇ ಇಲಾಖೆಯಿಂದ ಪರವಾನಿಗೆ ಪಡೆಯದೇ ಶ್ರೀ ರಾಜಾ ವೆಂಕಟಪ್ಪನಾಯಕರವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಸದರಿ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಗುರುತಿನ ದ್ವಜವನ್ನು ಹಿಡಿದು ಪ್ರದರ್ಶನ ಮಾಡಿ ವಿಧಾನ ಪರಿಷತ್ತ-2021 ಚುನಾವಣೆಯ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ಮಾಜಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪನಾಯಕ ರವರ ಹುಟ್ಟುಹಬ್ಬವನ್ನು ಆಚರಣೆ ಮಾಡಿರುತ್ತಾರೆ. ವಿಧಾನ ಪರಿಷತ್ತ-2021 ಚುನಾವಣೆಯ ನೀತಿ ಸಂಹಿತೆಯು ಜಾರಿಯಲ್ಲಿದರೂ ಸಹ ಯಾವುದೇ ಇಲಾಖೆಯಿಂದ ಮತ್ತು ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಯಾಗುವ ರೀತಿಯಲ್ಲಿ ವೇದಿಕೆ ನಿಮರ್ಾಣ ಮಾಡಿ ಮಾಜಿ ಶಾಸಕರಾದ ಶ್ರೀ ರಾಜಾ ವೆಂಕಟಪ್ಪನಾಯಕ ರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ 1) ಸಂಗಮೇಶ @ ಸಂಗು ತಂದೆ ಬಸಣ್ಣ ಕಕ್ಕೇರಿ, 2) ನಿಂಗಪ್ಪ ತಂದೆ ಬಸವರಾಜ ಬೂದಿಹಾಳ, 3) ಅವಿನಾಶ ತಂದೆ ಹಣಮಂತ್ರಾಯ ದೊರಿ ಸಾ:ಎಲ್ಲರೂ ಕೊಡೆಕಲ್ಲ ಇವರ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.73/2021 ಕಲಂ: 283, 188 ಐಪಿಸಿ ಮತ್ತು ಕಲಂ: 136 ಆರ್.ಪಿ ಕಾಯ್ದೆ-1951 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 29-11-2021 12:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080