ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-11-2022

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 131/2022 ಕಲಂ: 379 ಐಪಿಸಿ: ಇಂದು ದಿನಾಂಕ:28/11/2022 ರಂದು 2-30 ಪಿಎಮ್ ಕ್ಕೆ ಶ್ರೀ ಲಿಂಗರಾಜ ತಂದೆ ಕುಪ್ಪೆರಾಯ ವ:32, ಉ:ಭೂ ವಿಜ್ಞಾನಿ ಕಛೇರಿ ವಿಳಾಸ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾದಗಿರಿ ಜಿಲ್ಲೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:28/11/2022 ರಂದು ರಾತ್ರಿ 00:30 ಗಂಟೆ ಸುಮಾರಿಗೆ ಮಾನ್ಯ ಸಹಾಯಕ ಆಯುಕ್ತರು ಯಾದಗಿರಿ ರವರು ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದೇನಂದರೆ ವಡಗೇರಾ ತಾಲೂಕಿನ ಗೋನಾಳ ಸೀಮಾಂತರದ ಕೃಷ್ಣಾ ನದಿ ವ್ಯಾಪ್ತಿಯಲ್ಲಿನ ನೈಸಗರ್ಿಕ ಮರಳನ್ನು ಯಾರೋ ಕಳ್ಳರು ಟಿಪ್ಪರಗಳ ಮೂಲಕ ಮರಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿರುವ ಕಾರಣ ಮುಂಜಾನೆ 5 ಗಂಟೆ ಸುಮಾರಿಗೆ ವಡಗೇರಾ ತಹಸೀಲ್ದಾರರ ಕಾರ್ಯಲಯದಲ್ಲಿ ಹಾಜರಿರಲು ಸೂಚಿಸಿದ ಮೇರೆಗೆ ಇಂದು ದಿನಾಂಕ:28/11/2022 ರಂದು ಮುಂಜಾನೆ 4-30 ಗಂಟೆ ಸುಮಾರಿಗೆ ನಾನು ಹಾಗೂ ಕಿರಣ ಡಿ.ಆರ್ ಭೂ ವಿಜ್ಞಾನಿ ಹಾಗೂ ನಮ್ಮ ಇಲಾಖೆಯ ಜೀಪ ವಾಹನ ನಂ. ಕೆಎ 04 ಜಿ 1490 ನೇದರಲ್ಲಿ ಚಾಲಕರಾದ ವಿನೋದ ರವರೊಂದಿಗೆ ಯಾದಗಿರಿ ನಗರದಿಂದ ಹೊರಟು ವಡಗೇರಾ ತಾಲೂಕಿನ ತಹಸೀಲ್ದಾರರ ಕಾರ್ಯಲಯಕ್ಕೆ ಮುಂಜಾನೆ ಸುಮಾರು 5 ಗಂಟೆಗೆ ತಲುಪಿದೆವು. ಅಲ್ಲಿ ಮಾನ್ಯ ಸಹಾಯಕ ಆಯುಕ್ತರಾದ ಶ್ರೀ ಶಾ ಆಲಂ ಹುಸೇನ ಕಂದಾಯ ಉಪ-ವಿಭಾಗ ಯಾದಗಿರಿ ಜಿಲ್ಲೆ ಹಾಗೂ ಸದರಿಯವರ ವಾಹನ ನಂ. ಕೆಎ 33 ಜಿ 8008 ರ ಚಾಲಕ ಶಶಿಧರ ಇವರು ಹಾಗೂ ವಡಗೇರಾ ತಹಸೀಲ್ದಾರರಾದ ಶ್ರೀ ಸುರೇಶ ಅಂಕಲಗಿ, ಕಂದಾಯ ನಿರೀಕ್ಷಕರಾದ ಶ್ರೀ ಗಿರೀಶ ವಡಗೇರಾ ವಲಯ, ಶ್ರೀ ನಾಗರಾಜ ಗ್ರಾ, ಲೇ ಗೋನಾಳ ಹಾಗೂ ಶ್ರೀ ಗೊಲ್ಲಾಳಪ್ಪ ಗ್ರಾ, ಲೇ ಬೆಂಡೆಬೆಂಬಳ್ಳಿ ಗ್ರಾಮ ಹಾಗೂ ಸದರಿಯವರ ವಾಹನ ನಂ. ಕೆಎ 33 ಜಿ 4567 ರ ಚಾಲಕ ಖಂಡಪ್ಪ ರವರೊಂದಿಗೆ ಇದ್ದರು. ವಡಗೇರಾ ಪೊಲೀಸ್ ಠಾಣೆಯ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ಮತ್ತು ಅವರ ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ವೇಣಗೋಪಾಲ ಪಿಸಿ 36, ಹಾಗೂ ಜೀಪ ಚಾಲಕರಾದ ಶ್ರೀ ಶೇಖರ ಎಪಿಸಿ 51 ರವರು ಜೀಪ ನಂ. ಕೆಎ 33 ಜಿ 0164 ರಲ್ಲಿ ವಡಗೇರಾ ತಹಸೀಲ್ದಾರರ ಕಾರ್ಯಲಯಕ್ಕೆ ಬಂದಿದ್ದು, ಅಲ್ಲಿಂದ ನಾವು ಎಲ್ಲರೂ ತಮ್ಮ ತಮ್ಮ ಇಲಾಖೆಯ ವಾಹನಗಳಲ್ಲಿ ಕುಳಿತುಕೊಂಡು ಎಲ್ಲರೂ ಸೇರಿ ವಡಗೇರಾ ತಹಸೀಲ್ದಾರರ ಕಾರ್ಯಲಯದಿಂದ ಬೆಳಗ್ಗೆ 5-30 ಗಂಟೆ ಸುಮಾರಿಗೆ ಹೊರಟು ಹತ್ತಿಗೂಡುರು-ಸಂಗಮ ಮೇನ ರೋಡ ರಲ್ಲಿ ಹೊರಟಿರುವಾಗ ಮುಂಜಾನೆ 6-30 ಗಂಟೆ ಸುಮಾರಿಗೆ ಬೆಂಡೆಬೆಂಬಳ್ಳಿ ಗ್ರಾಮದ ಹತ್ತಿರ ಗೋನಾಳ ಗ್ರಾಮದ ಕಡೆಯಿಂದ ಟಿಪ್ಪರ ವಾಹನ ಸಂ. 1) ಟಿಪ್ಪರ ನಂ. ಕೆಎ 32 ಡಿ 8495, 2) ಟಿಪ್ಪರ ನೋಂದಣಿ ನಂ. ಇಲ್ಲ ಚೆಸ್ಸಿ ನಂ. ಒಃ1ಎಎಗಿಐಆ7ಓಖಊಘಿ9537, 3) ಟಿಪ್ಪರ ನಂ. ಕೆಎ 32 ಎಎ 3573, 4) ಟಿಪ್ಪರ ನೋಂದಣಿ ನಂ. ಇಲ್ಲ ಚೆಸ್ಸಿ ನಂ. ಒಃ1ಎಎಐಊಆ2ಓಖಇಂ7435, 5) ಟಿಪ್ಪರ ನಂ. ಕೆಎ 32 ಡಿ 9505 ಮತ್ತು 6) ಟಿಪ್ಪರ ನಂ. ಕೆಎ 33 ಎ 9720 ನೇದವುಗಳಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನಾವೆಲ್ಲರೂ ವಾಹನಗಳನ್ನು ತಡೆದು ನಿಲ್ಲಿಸಿ, ಟಿಪ್ಪರ ವಾಹನ ಸಂ. ಕೆಎ 32 ಡಿ 8495 ರ ವಾಹನ ಚಾಲಕನನ್ನು ವಿಚಾರಿಸಲಾಗಿ ಸದರಿ ವಾಹನ ಚಾಲಕನು ಗೋನಾಳ ಗ್ರಾಮದ ಸೀಮಾಂತರದ ಕೃಷ್ಣಾ ನದಿಯಿಂದ ಮರಳನ್ನು ತುಂಬಿಕೊಂಡು ಬರಲು ಸದರಿ ವಾಹನದ ಮಾಲಿಕರು ತಿಳಿಸಿರುತ್ತಾರೆ ಎಂದು ಹೇಳಿದನು. ನಂತರ ನಾವು ವಾಹನಗಳ ನಂಬರ ನೋಡಲು ಮತ್ತು ಇನ್ನುಳಿದ ಟಿಪ್ಪರಗಳನ್ನು ನಿಲ್ಲಿಸಲು ಹೋದಾಗ ಸದರಿ ಟಿಪ್ಪರ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ, ಚಾಲಕರು ಓಡಿ ಹೋಗಿರುತ್ತಾರೆ. ಅದರಂತೆ ನಾವೆಲ್ಲರೂ ಸೇರಿ 1) ಟಿಪ್ಪರ ನಂ. ಕೆಎ 32 ಡಿ 8495 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಮಾರುಕಟ್ಟೆ ದರವು ಅಂದಾಜು 40,000/- ಇರುತ್ತದೆ. 2) ಟಿಪ್ಪರ ನೋಂದಣಿ ನಂ. ಇಲ್ಲ ಚೆಸ್ಸಿ ನಂ. ಒಃ1ಎಎಗಿಐಆ7ಓಖಊಘಿ9537 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಮಾರುಕಟ್ಟೆ ದರವು ಅಂದಾಜು 40,000/- ಇರುತ್ತದೆ. 3) ಟಿಪ್ಪರ ನಂ. ಕೆಎ 32 ಎಎ 3573 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಮಾರುಕಟ್ಟೆ ದರವು ಅಂದಾಜು 40,000/- ಇರುತ್ತದೆ. 4) ಟಿಪ್ಪರ ನೋಂದಣಿ ನಂ. ಇಲ್ಲ ಚೆಸ್ಸಿ ನಂ. ಒಃ1ಎಎಐಊಆ2ಓಖಇಂ7435 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 16 ರಿಂದ 20 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1280/- ರೂ. ಗಳು ಮಾರುಕಟ್ಟೆ ದರವು ಅಂದಾಜು 35,000/- ಇರುತ್ತದೆ. 5) ಟಿಪ್ಪರ ನಂ. ಕೆಎ 32 ಡಿ 9505 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಮಾರುಕಟ್ಟೆ ದರವು ಅಂದಾಜು 40,000/- ಇರುತ್ತದೆ ಮತ್ತು 6) ಟಿಪ್ಪರ ನಂ. ಕೆಎ 33 ಎ 9720 ಅನ್ನು ಪರಿಶೀಲಿಸಿದ್ದು, ಸದರಿ ಟಿಪ್ಪರನಲ್ಲಿ ಅಂದಾಜು 20 ರಿಂದ 25 ಮೆಟ್ರಿಕ್ ಟನ್ ಮರಳು ತುಂಬಿರುವುದು ಕಂಡುಬಂದಿರುತ್ತದೆ. ಅದರ ರಾಜಧನ ಮೊತ್ತವು 1600/- ರೂ. ಗಳು ಮಾರುಕಟ್ಟೆ ದರವು ಅಂದಾಜು 40,000/- ಇರುತ್ತದೆ. ಈ ಮೇಲಿನ 6 ಟಿಪ್ಪರ ವಾಹನಗಳ ಚಾಲಕರು ಹಾಗೂ ಮಾಲಿಕರು ಸರಕಾರಕ್ಕೆ ಯಾವುದೇ ರಾಜಧನ ಹಾಗೂ ಇತರೆ ತೆರಿಗೆಗಳನ್ನು ಪಾವತಿಸದೆ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಗೋನಾಳ ಗ್ರಾಮದ ಸೀಮಾಂತರದ ಕೃಷ್ಣಾ ನದಿಯಿಂದ ಮರಳನ್ನು ಕಳ್ಳತನ ಮಾಡಿ ಮಾರಾಟದ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿರುತ್ತದೆ. ಸದರಿ 6 ಟಿಪ್ಪರಗಳ ಚಾಲಕರು ಓಡಿ ಹೋಗಿರುವ ಕಾರಣ ಅನ್ಯ ವಾಹನ ಚಾಲಕರ ಸಹಾಯವನ್ನು ಪಡೆದು ಸುಮಾರು 2-30 ಪಿಎಮ್ ಕ್ಕೆ ತಮ್ಮ ಠಾಣೆಗೆ ಬಂದಿದ್ದು, ಈ ಮೂಲಕ ತಮಗೆ ಲಿಖಿತ ದೂರು ಸಲ್ಲಿಸಿದ್ದು ಇರುತ್ತದೆ. ಮಾನ್ಯರವರು ಸದರಿಯವರ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಈ ಮೂಲಕ ಕೋರಿದೆ ಎಂದು ಕೊಟ್ಟ ದೂರನ್ನು ಸ್ವಿಕೃತ ಮಾಡಿಕೊಂಡು ಠಾಣಾ ಗುನ್ನೆ ನಂ. 131/2022 ಕಲಂ:379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ : 125/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ.28/11/2022 ರಂದು 6-30 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 28/11/2022 ರಂದು 4-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಸ್ಟೇಷನ್ ಏರಿಯಾದ ಸಿದ್ದೇಶ್ವರ ಲಾಡ್ಜ ಕ್ರಾಸಿನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 5-15 ಪಿಎಂಕ್ಕೆ ದಾಳಿ ಮಾಡಿ ಆರೋಪಿತರಿಗೆ ಹಿಡಿದು ವಿಚಾರಿಸಲು ಅವರು ತಮ್ಮ ಹೆಸರು 1) ಭೀಮು ತಂದೆ ತಿಪ್ಪಣ್ಣ ನಿಡಗುಂದಿ ವ; 23 ಜಾ; ಕಬ್ಬಲಿಗ ಉ; ಕೂಲಿಕೆಲಸ ಸಾ; ಲಾಡೆಜಗಲ್ಲಿ ಯಾದಗಿರಿ 2) ಕೃಷ್ಣ ತಂದೆ ದೇವಿಂದ್ರಪ್ಪ ಮದ್ದೂರ ವ; 23 ಜಾ; ಬೇಡರು ಉ; ಕೂಲಿಕೆಲಸ ಸಾ; ಶಿವನಗರ ಯಾದಗಿರಿ ಅಂತಾ ತಿಳಿಸಿದ್ದು ನಂತರ ಸದರಿಯವರಿಗೆ ಅಂಗಶೋಧನೆ ಮಾಡಲಾಗಿ ಅವರ ಹತ್ತಿರ 1) ನಗದು ಹಣ 620-00 ರೂ. 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00, ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 28/11/2022 ರಂದು 5-15 ಪಿಎಂ ದಿಂದ 6-15 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-30 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.125/2022 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ: 78 (3) ಕೆ.ಪಿ ಯಾಕ್ಟ್: ದಿನಾಂಕ 28/11/2022 ರಂದು 6:00 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀಮತಿ ದಿವ್ಯಮಹಾದೇವ್ ಪಿ.ಎಸ್.ಐ (ಕಾ&ಸು) ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ತಾವು ಠಾಣೆಯಲ್ಲಿ ಇದ್ದಾಗ 5:30 ಪಿ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಗ್ರಾಮದ ಶ್ರೀ ಧರ್ಮಲೀಂಗೇಶ್ವರ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 40/2022 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 164/2022, ಕಲಂ, 143, 147, 341, 504, 506, ಸಂಗಡ 149 ಐ ಪಿ ಸಿ: ಇಂದು ದಿನಾಂಕ:28-11-2022 ರಂದು ಸಾಯಂಕಾಲ 7-00 ಗಂಟೆಗೆ ಶ್ರೀ ಮೋಹನ ತಂದೆ ಭೀಮ್ಲಾನಾಯಕ ರಾಠೋಡ ವ|| 40 ವರ್ಷ ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಮುದ್ನಾಳ ದೊಡ್ಡ ತಾಂಡ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ ಸಾರಂಶವೆನೆಂದರೆ, ನಾನು ಮುದ್ನಾಳ ದೊಡ್ಡ ತಾಂಡದಲ್ಲಿ ಕೃಷಿ ಜಮೀನ ಇದ್ದು ಅದರಲ್ಲಿ ಒಕ್ಕಲುತನ ಮಾಡಿಕೊಂಡು ಕುಟುಂಬದೊಂದಿಗೆ ಉಪ ಜೀವನ ಮಾಡಿಕೊಂಡಿರುತ್ತೆನೆ. ನಮ್ಮ ಅಣ್ಣ ತಮ್ಮಕಿಯವರಾದ ಚಂದರ ತಂದೆ ತೇಜು ರಾಠೋಡ ಮತ್ತು ನಮ್ಮ ನಡುವೆ ಆಸ್ತಿ ವಿಚಾರವಾಗಿ ಜಗಳ ಮಾಡಿಕೊಂಡಿದ್ದು ಅವರು ನಮ್ಮ ದ್ವೇಷ ಇಟ್ಟುಕೊಂಡಿದ್ದರು. ಹಿಗಿದ್ದು ಇಂದು ದಿನಾಂಕ: 28-11-2022 ರಂದು ಸಾಯಂಕಾಲ 4-30 ಗಂಟೆಗೆ ನಾನು ಮುದ್ನಾಳ ಸೀಮಾಂತರದ ಮಣ್ಣೂರ ಶಾಲೆ ಹಿಂದುಗಡೆ ಇರುವಾಗ ನಮ್ಮ ಅಣ್ಣತಮ್ಮಕಿಯವರಾದ 1) ಸಚಿನ ತಂದೆ ಚಂದರ ರಾಠೋಡ 2) ಪಪ್ಯಾ ತಂದೆ ಚಂದರ ರಾಠೋಡ 3) ವಿಕ್ರಮ @ ವಿಕ್ಯಾ ತಂದೆ ಸುಭಾಸ ರಾಠೋಡ 4) ಕಿರಣ ತಂದೆ ಕಿಶನ ರಾಠೋಡ 5) ಚಂದರ ತಂದೆ ತೇಜು ರಾಠೋಡ ಇವರೆಲ್ಲರೂ ಕೂಡಿಕೊಂಡು ನಾನು ಒಬ್ಬವನೆ ಇರುವುದು ನೋಡಿಕೊಂಡು, ಆಕಾರಿ ಓಡಿಯುತ್ತಾ ಕೈಯಲ್ಲಿ ಕಟ್ಟಿಗೆ ಬಡಿಗೆ, ಮತ್ತು ಕೊಡಲಿ ಹಿಡಿದುಕೊಂಡು ಬಂದು ಲೇ ಸೂಳೆ ಮಗನೆ ನಮ್ಮ ಕೈಯಾಗ ಇವತ್ತು ಯಾಂಗಿದ್ದರು ಒಬ್ಬವನಿ ಸಿಕ್ಕಿದಿ ರಂಡಿ ಮಗನೆ ಚೋದ ಸೂಳೇ ಮಗನೆ ನಿನಗ ಒಂದು ಗತಿ ಕಾಣಿಸುತ್ತೆವೆ ಅಂತ ಅವ್ಯಾಚವಾಗಿ ಬೈದು ಅವರಲ್ಲಿ ಸಚಿನ ಇತನು ಲೇ ರಂಡಿ ಮಗನೆ ಅಂತ ಬೈದು ಎದೆ ಮೇಲಿನ ಅಂಗಿ ಹಿಡಿದು ಜಗ್ಗಾಡಿದನು ಪಪ್ಯಾ, ವಿಕ್ರಮ ಮತ್ತು ಕಿರಣ ಇವರು ಹಡಿರ್ರಿಲೇ ಸೂಳೇ ಮಗನಿಗೆ ಖಲಾಸ ಮಾಡೋಣಾ ಅಂತ ಓಮ್ಮೆ ಹೊಡೆಯಲು ಬರುತ್ತಿದ್ದಾಗ ನಾನು ಅವರಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ಚಂದರ ಇತನು ಅಡ್ಡ ಬಂದು ತಡೆದು ನಿಲ್ಲಿಸಿ ಇವತ್ತು ಖಲಾಸ ಮಾಡುತ್ತೆವೆ ಮಗನೆ ಅಂತ ಜೀವದ ಬೇದರಿಕೆ ಹಾಕಿದನು ನಾನು ಚಿರಾಡುತ್ತಿದ್ದಾಗ ಶಾಲೆ ಹತ್ತಿರ ಇದ್ದ ರೂಪ್ಲಾ ತಂದೆ ಪೂನ್ಯಾ ಪವ್ಹಾರ ಮತ್ತು ನನಗೆ ಪರಿಚಯ ವ್ಯಕ್ತಿಯಾದ ಮೈಬೂಬ ತಂಧೆ ಚಾಂದಪಾಷ ವಡಗೇರಾ ಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು ಇಲ್ಲದಿದ್ದರೆ ಅವರೇಲ್ಲರು ನನಗೆ ಜೀವ ಸಹಿತ ಬಿಡುತ್ತಿರಲಿಲ್ಲ. ಕಾರಣ ಗುಂಪು ಕಟ್ಟಿಕೊಂಡು ಬಂದು ನನಗೆ ಅವಾಚ್ಯವಾಗಿ ಬೈದು, ತಡೆದು ನಿಲ್ಲಿಸಿ ಜೀವದ ಬೇದರಿಕೆ ಹಾಕಿದ 1) ಸಚಿನ ತಂದೆ ಚಂದರ ರಾಠೋಡ 2) ಪಪ್ಯಾ ತಂದೆ ಚಂದರ ರಾಠೋಡ 3) ವಿಕ್ರಮ @ ವಿಕ್ಯಾ ತಂದೆ ಸುಭಾಸ ರಾಠೋಡ 4) ಕಿರಣ ತಂದೆ ಕಿಶನ ರಾಠೋಡ 5)ಚಂದರ ತಂದೆ ತೇಜು ರಾಠೋಡ ಸಾ|| ಎಲ್ಲರು ಮುದ್ನಾಳ ದೊಡ್ಡ ತಾಂಡ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತ ದೂರು ಅಜರ್ಿ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.164/2022 ಕಲಂ.143, 147, 341, 504, 506, ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 29-11-2022 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080