ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 29-12-2021

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ 190/2021 ಕಲಂ: 143, 147, 323, 324, 504, 506 ಸಂ 149 ಐಪಿಸಿ : ಇಂದು ದಿನಾಂಕ 28/12/2021 ರಂದು 12.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ವಿದ್ಯಾಸಾಗರ ತಂದೆ ಬಸವರಾಜ ಗುಳ್ಯಾಳ ವ|| 16 ಜಾ|| ಹಿಂದು ಹೂಗಾರ ಉ|| ವಿದ್ಯಾಥರ್ಿ ಸಾ|| ದಂಡಸೊಲ್ಲಾಪೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಮೂರು ಜನರು ಮಕ್ಕಳಿದ್ದು ಅವರಲ್ಲಿ ಎರಡು ಜನ ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನಮ್ಮ ಅಣ್ಣನಾದ ಸಚಿನ ಈತನು ಬುದ್ದಿ ಮಾಂದ್ಯನಿದ್ದು ಮನೆಯಲ್ಲಿಯೇ ಇರುತ್ತಾನೆ. ನಮ್ಮ ತಂದೆಗೂ ಹಾಗು ನಮ್ಮ ತಾಯಿಯಾದ ಮಾಣಿಕಮ್ಮ ಇವರ ಮದ್ಯ ಸಂಸಾರಿಕ ವಿಷಯದಲ್ಲಿ ವೈಷಮ್ಯ ಬಂದು ಸದರಿಯವಳು ನಮ್ಮೆಲ್ಲರನ್ನು ಬಿಟ್ಟು ಸುಮಾರು 8 ತಿಂಗಳ ಹಿಂದೆ ತನ್ನ ತವರು ಮನೆಯಾದ ಖಾನಾಪೂರ ಎಸ್ ಕೆ ಗ್ರಾಮದಲ್ಲಿರುತ್ತಾಳೆ. ಸುಮಾರು ಸಲ ನಾನು ಹಾಗು ನಮ್ಮ ತಂದೆ ಇಬ್ಬರೂ ಕೂಡಿಕೊಂಡು ಮನೆಯಲ್ಲಿ ಬುದ್ದಿಮಾಂದ್ಯ ಅಣ್ಣನಿದ್ದಾನೆ ಬಾ ಅಂತ ಕೇಳಿಕೊಂಡರೂ ಅವಳು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ. ಹೀಗಿದ್ದು ನಿನ್ನೆ ದಿನಾಂಕ 26.12.2021 ರಮದು ರಾತ್ರಿ 8 ಗಂಟೆಯ ಸುಮಾರಿಗೆ ನಮ್ಮ ತಾಯಿಗೆ ಕರೆದುಕೊಂಡು ಬಂದರಾಯಿತು ಅಂತ ನಾನು ಹಾಗು ನಮ್ಮ ಗೆಳೆಯನಾದ ರಮೇಶ ತಂದೆ ಸಿದ್ದಣ್ಣ ಬಾಳಿ ಇಬ್ಬರೂ ಕೂಡಿಕೊಂಡು ನಮ್ಮ ತಾಯಿಯವರ ಮನೆಗೆ ಹೋಗಿ, ಮನೆಯಲ್ಲಿ ಅಣ್ಣನಾದ ಸಚಿನ ಈತನು ಬಹಾಳ ತ್ರಾಸ ಮಾಡಿಕೊಳ್ಳುತ್ತಿದ್ದಾನೆ ನೀನು ನಮ್ಮ ಮನೆಗೆ ನಡೆ, ಆಗಿದ್ದು ಆಯಿತು ಏನೂ ವಿಚಾರ ಮಾಡಬೇಡ ನಮ್ಮ ಮನೆಗೆ ನಡೆ ಅಂದಾಗ ಅವಳು ನೀನು ಯಾರು ನನಗೆ ಬಾ ಅನ್ನುವವ ಅಂತ ಅಂದಾಗ ಅಲ್ಲಿಯೇ ಇದ್ದ ನಮ್ಮ ಸೋದರ ಮಾವಂದಿರಾದ 1] ಸಂತೋಷ ತಂದೆ ಗುರುನಾಥ ಹೂಗಾರ 2] ಆನಂದ ತಂದೆ ಗುರುನಾಥ ಹೂಗಾರ 3] ಶಿವರಾಜ ತಂದೆ ಅಣ್ಣಾರಾಯ ಹೂಗಾರ ಹಾಗು ಅಜ್ಜನಾದ 4] ಗುರುನಾಥ ತಂದೆ ಹಣಮಂತ್ರಾಯ ಹೂಗಾರ ಅಜ್ಜಿಯಾದ 5] ಶಾಂತಮ್ಮ ಗಂಡ ಗುರುನಾಥ ಹೂಗಾರ ಹಾಗು ನಮ್ಮ ತಾಯಿಯಾದ 6] ಮಾಣಿಕಮ್ಮ ಗಂಡ ಬಸವರಾಜ ಗುಳ್ಯಾಳ ಎಲ್ಲರೂ ಸಾ|| ಖಾನಾಪೂರ [ಎಸ್.ಕೆ] ಈ ಎಲ್ಲಾ ಜನರು ಕೂಡಿಕೊಂಡು ಏನಲೇ ಸೂಳೇ ಮಗನೇ ಆ ಬಸ್ಯಾ ನಿನಗೆ ಕಳೂಹಿಸಿದ್ದಾನೇ ಏನೂ ನೀವು ಎಲ್ಲಾ ಸೂಳೇ ಮಕ್ಕಳು ಒಂದೇ ಇದ್ದೀರಿ ನಿಮ್ಮ ಸೊಕ್ಕು ಬಹಾಳ ಆಗಿದೆ ಅಂತ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ಸಂತೋಷ ಹೂಗಾರ ಈತನು ಅಲ್ಲಿಯೇ ಬಿದ್ದ ಬಡಿಗೆಯಿಂದ ನನ್ನ ಎಡಗೈ ಮಣಿಕಟ್ಟಿನ ಹತ್ತಿರ ಹೊಡೆದು ಗುಪ್ತಗಾಯ ಪಡಿಸಿದನು. ನಂತರ ಎಲ್ಲರೂ ಕೂಡಿ ನನಗೆ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಮನಬಂದಂತೆ ಒದ್ದಿದ್ದು ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ಜೊತೆಯಲ್ಲಿ ಬಂದ ರಮೇಶ ಬಾಳಿ ಈತನು ಬಿಡಿಸಿಕೊಂಡಿದ್ದು, ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನು ಮುಂದೆ ನೀನಾಗಲೀ ಹಾಗು ನಿಮ್ಮ ತಂದೆಯಾಗಲೀ ನಮ್ಮ ಮನೆಯ ಕಡೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದರು. ನಂತರ ನಾನು ನೇರವಾಗಿ ನಾನು ನಮ್ಮ ಮನೆಗೆ ಹೋಗಿ ನಡೆದ ವಿಷಯ ನಮ್ಮ ತಂದೆಯವರ ಮುಂದೆ ತಿಳಿಸಿ ತಡವಾಗಿ ಇಂದು ಠಾಣೆಗೆ ಬಂದಿದ್ದು ಕಾರಣ ಮೇಲ್ಕಾಣಿಸಿದ 06 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 190/2021 ಕಲಂ 143,147,323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 254/2021. ಕಲಂ. 279. 338. ಐ.ಪಿ.ಸಿ. : ಇಂದು ದಿನಾಂಕ: 27/12/2021 ರಂದು 09-00 ಗಂಟೆಗೆ ಮನೂರ ಆಸ್ಪತ್ರೆ ಕಲಬುರಗಿಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ನಾನು ಜೋತೆಯಲ್ಲಿ ತನಿಖಾ ಸಹಾಯಕ ಹೆಚ್.ಸಿ.164. ರವರೊಂದಿಗೆ ಮನೂರ ಆಸ್ಪತ್ರೆ ಕಲಬುರಗಿಗೆ ಹೋಗಿ ಎಂ,ಎಲ್,ಸಿ ಸ್ವಿಕರಿಸಿಕೊಂಡು ಗಾಯಾಳುದಾರ ವಿರೇಶ ಈತನ ಅಣ್ಣನಾದ ವಿಶ್ವರಾದ್ಯ ತಂದೆ ದೇವಿಂದ್ರಪ್ಪ ಟಣಕೇದಾರ ವ|| 33 ಜಾ|| ಕುರಿಬುರ ಉ|| ಒಕ್ಕಲುತನ ಸಾ|| ಖಾನಾಪೂರ ಇವರಿಗೆ ವಿಚಾರಣೆ ಮಾಡಲಾಗಿ ಹೇಳಿಕೆ ಪಿಯರ್ಾದಿ ನಿಡಿದ್ದೆನೆಂದರೆ. ನಮ್ಮ ಹಿರಿಯರ ಆಸ್ತಿ ಅನವಾರ ಗ್ರಾಮದಲ್ಲಿ ಇರುತ್ತದೆ. ಸದರಿ ಹೋಲದಲ್ಲಿ ಹತ್ತಿಬೇಳೆ ಬಿತ್ತಿದ್ದು ಇರುತ್ತದೆ. ದಿನಾಂಕ 27/12/2021 ರಂದು ಬೆಳಿಗ್ಗೆ ಹತ್ತಿಬಿಡಿಸಲು ನಮ್ಮೂರಾದ ಖಾನಾಪೂರದಿಂದ ಅನವಾರ ಗ್ರಾಮದ ನಮ್ಮ ಅಜ್ಜಿಯ ಹೋಲಕ್ಕೆ ನನ್ನ ತಮ್ಮ ವಿರೇಶ ತಂದೆ ದೇವಿಂದ್ರಪ್ಪ ಟಣಕೇದಾರ ಈತನು ನಮ್ಮ ಮೋಟರ್ ಸೈಕಲ್ ನಂ ಕೆಎ-33 ಇಎ-8635 ನೇದ್ದನ್ನು ತೆಗೆದುಕೊಂಡು ನನ್ನ ತಮ್ಮ ಹೆಂಡತಿಯಾದ ಮಲಮ್ಮ ಗಂಡ ಬಾಗಪ್ಪ ಟಣಕೇದಾರ, ಇವರಿಗೆ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ಬೆಳಿಗ್ಗೆ 10-00 ಗಂಟೆಗೆ ಅನವಾರದ ನಮ್ಮ ಹೋಲಕ್ಕೆ ಹತ್ತಿ ಬಿಡಿಸಲು ಬಿಟ್ಟು ಬರಲು ಹೋದನು. ನಂತರ ನನ್ನ ತಮ್ಮ ವಿರೇಶ ಈತನು 12-10 ಗಂಟೆಗೆ ನನಗೆ ಫೊನ ಮಾಡಿ ತಿಳಿಸಿದ್ದೆನೆಂದರೆ. ನಾನು ಅನವಾರ ಗ್ರಾಮದ ನಮ್ಮ ಅಜ್ಜಿಯ ಹೋಲಕ್ಕೆ ಹೋಗಿ ನನ್ನ ಅಣ್ಣನ ಹೆಂಡತಿಯಾದ ಮಲ್ಲಮ್ಮ ಇವರಿಗೆ ಬಿಟ್ಟು ಮರಳಿ ಖಾನಾಪೂರಕ್ಕೆ ಬರುತ್ತಿರುವಾಗ ಯಾದಗಿರಿ-ಸುರಪೂರ ಮುಖ್ಯ ರಸ್ತೆಯ ಮೇಲೆ ಅನವಾರ ಹಳ್ಳದ ಹತ್ತಿರ ಇರುವ ಹೈಯಾಳ (ಕೆ) ಕ್ರಾಸ್ ದಾಟಿ ದಗರ್ಾದ ಹತ್ತಿರ ಯಾದಗಿರಿ ಕಡೆಗೆ ನಾನು ನನ್ನ ಮೋಟರ್ ಸೈಕಲ್ ನಂ ಕೆಎ-33 ಇಎ-8635 ನೇದ್ದನ್ನು ಮದ್ಯಾಹ್ನ 12-00 ಗಂಟೆಗೆ ಚಲಾಯಿಸಿಕೊಂಡು ಬಂದು ಒಮ್ಮಲೇ ಎಡಕ್ಕೆ ಕಟ್ಟಮಾಡಿದಾಗ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ನನಗೆ ಭಾರಿ ಗಾಯವಾಗಿರುತ್ತದೆ ಅಂತ ತಿಳಿಸಿದ್ದರಿಂದ ನಾನು ಮತ್ತು ನನ್ನ ತಾಯಿ ನಿಂಗಮ್ಮ ಗಂಡ ದೇವಿಂದ್ರಪ್ಪ ಟಣಕೇದಾರ ಇಬ್ಬರು ಅಪಘಾತವಾದ ಸ್ಥಳಕ್ಕೆ ಹೋಗಿ ನಮ್ಮ ತಮ್ಮ ವಿರೇಶನಿಗೆ ನೋಡಿ ವಿಚಾರಿಸಿದ್ದು ಅಪಘಾತದಲ್ಲಿ ವಿರೇಶನಿಗೆ ಎಡಗಾಲು ತೋಡೆಗೆ ಬಾರಿ ಗುಪ್ತಗಾಯ, ಎಡ ಮೋಳಕಾಲಿಗೆ, ಹಿಮ್ಮಡಿಗೆ, ಹೆಬ್ಬರಳಿಗೆ ತರಚಿದ ಗಾಯ, ಬಲಮೋಳಕೈಗೆ, ಎಡಗಣ್ಣಿನ ಕೆಳಗೆ, ಹಿಂದಿನ ಕುತ್ತಿಗೆ ಗುಪ್ತಗಾಯ ವಾಗಿದ್ದು ಇರುತ್ತದೆ. ಅಪಘಾತವಾದ ಸ್ಥಳಕ್ಕೆ 108 ಅಂಬುಲೇನ್ಸ ಬಂದಿದ್ದರಿಂದ ನಾನು ಮತ್ತು ನನ್ನ ತಾಯಿ ನಿಂಗಮ್ಮ ಇಬ್ಬರು ಕೂಡಿ ವಿರೇಶನಿಗೆ ಉಪಚಾರ ಕುರಿತು ಅಂಬುಲೇನ್ಸದಲ್ಲಿ ಕರೆದುಕೊಂಡು ಬಂದು ಕಲಬುರಗಿಯ ಮನೂರ ಆಸ್ಪತ್ರೆಗೆ ಸೇರಿಕೆಮಾಡಿದ್ದು ಇರುತ್ತದೆ. ಸದರಿ ಅಪಘಾತವು ಹೈಯಾಳ (ಕೆ) ಕ್ರಾಸ್ ದಾಟಿ ದಗರ್ಾದ ಹತ್ತಿರ 12-00 ಗಂಟೆಗೆ ಅಪಘಾತವಾಗಿದ್ದು ಇರುತ್ತದೆ.
ಕಾರಣ ನನ್ನ ತಮ್ಮ ವಿರೇಶನು ನಮ್ಮ ಮೋಟರ್ ಸೈಕಲ್ ನಂ ಕೆಎ-33 ಇಎ-8635 ನೇದ್ದನ್ನು ತೆಗೆದುಕೊಂಡು ಹೋಗಿ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೆ ಎಡಕ್ಕೆ ಕಟ್ಟಮಾಡಿ ಸ್ಕಿಡ್ ಆಗಿ ಬಿದ್ದು ಅಪಘಾತದಲ್ಲಿ ಬಾರಿ ಗಾಯ ಮಾಡಿಕೊಂಡಿರುತ್ತಾನೆ. ಆದ್ದರಿಂದ ವಿರೇಶನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮರಳಿ ಸಾಯಂಕಾಲ 18-00 ಗಂಟೆಗೆ ಠಾಣೆಗೆ ಹಾಜರಾಗಿ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 254/2021 ಕಲಂ 279. 338. ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 29-12-2021 02:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080