ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-04-2022
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ 379 ಐಪಿಸಿ : ಇಂದು ದಿನಾಂಕ: 29/04/2022 ರಂದು 10-15 ಎಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 29/04/2022 ರಂದು ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜೀಪ ಚಾಲಕ ಜಗನ್ನಾಥರೆಡ್ಡಿ ಹೆಚ್.ಸಿ.10, ಮತ್ತು ಅಬ್ದುಲ್ಬಾಷಾ ಪಿಸಿ-237 ಇವರೊಂದಿಗೆ ಠಾಣೆಯ ಯಾದಗಿರಿ ನಗರದಲ್ಲಿ ಪೆಟ್ರೊಲಿಂಗ ಕುರಿತು ಠಾಣೆಯಿಂದ 9-00 ಎಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ಹೋರಟು ಡಿಗ್ರಿ ಕಾಲೇಜ್ ಕ್ರಾಸ ಮೂಲಕ ಡಾನ್ ಬೋಸ್ಕೋ ಶಾಲೆ ಹತ್ತಿರ ಬರುವ ಗುರುಸುಣಗಿ ಕ್ರಾಸಿನಲ್ಲಿ ಹೋಗುತ್ತಿರುವಾಗ 9-30 ಎಎಂಕ್ಕೆ ನಮ್ಮ ಎದುರುಗಡೆಯಿಂದ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟಿಪ್ಪರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ಟಿಪ್ಪರನ್ನು ಪರಿಶೀಲಿಸಿ ನೋಡಲಾಗಿ ಟಿಪ್ಪರ ನಂ. ಕೆಎ.51.ಡಿ.6033 ನೇದ್ದು ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಟಿಪ್ಪರ ಚಾಲಕನು ಟಿಪ್ಪರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟಿಪ್ಪರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟಿಪ್ಪರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟಿಪ್ಪರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟಿಪ್ಪರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 10-00 ಎಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರ ನಂ. ಕೆಎ.51.ಡಿ.6033 ನೇದ್ದು ಅ.ಕಿ.6,00,000/-ರೂ, ಮತ್ತು ಮರಳು ಅ.ಕಿ.15,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 10-15 ಎಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟಿಪ್ಪರ ಚಾಲಕ ಮತ್ತು ಮಾಲಿಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.44/2022 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನ: 53/2022 ಕಲಂ. 379 ಐಪಿಸಿ: ಇಂದು ದಿನಾಂಕ 29.04.2022 ರಂದು ಮಧ್ಯಾಹ್ನ 12-30 ಗಂಟೆಗೆ ಸೋಮಶೇಖರ ತಂದೆ ಬಸವರಾಜಯ್ಯ ಬಸಣ್ಣೋರ ವಯ|| 41 ವರ್ಷ, ಜಾ|| ಜಂಗಮ ಉ|| ಒಕ್ಕಲುತನ ಸಾ|| ಕಾಳೇಬೆಳಗುಂದಿ ಇವರು ಠಾಣೆಗೆ ಬಂದು ನೀಡಿದ ದೂರು ಸಾರಾಂಶವೇನೆಂದರೆ, ನನ್ನ ಹೆಸರಿನಲ್ಲಿ ಒಂದು ಹಿರೋ ಫ್ಯಾಶನ ಪ್ರೋ ಕಂಪನಿಯ ಬೂದು ಮಿಶ್ರಿತ ಬಣ್ಣದ ಮೋಟರ ಸೈಕಲ್ ನಂ. ಕೆಎ-33 ಎಸ್-8143 ಅಂತಾ ಇರುತ್ತದೆ. ಸದರಿ ಮೋಟಾರ ಸೈಕಲನ್ನು ದಿನಾಂಕ 24.04.2022 ರಾತ್ರಿ 11.00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿದ್ದು ರಾತ್ರಿ ಮನೆಯಲ್ಲಿ ಮಲಗಿಕೊಂಡಿರುತ್ತೇನೆ. ದಿನಾಂಕ 25.04.2022 ರಂದು ಬೆಳಿಗ್ಗೆ 05-30 ಗಂಟೆ ಸುಮಾರಿಗೆ ಎದ್ದು ಮನೆಯ ಮುಂದೆ ಬಂದು ನೋಡಿದಾಗ ಮೋಟರ ಸೈಕಲ್ ಮನೆಯ ಮುಂದೆ ಇರಲಿಲ್ಲ. ಆಗ ನಾನು ಸುತ್ತ ಮುತ್ತ ನೋಡಿದ್ದು, ಯಾರಾದರು ತೆಗೆದುಕೊಂಡು ಎಲ್ಲಿಯಾದರು ನಿಲ್ಲಿಸಿರಬೇಕು ಅಂತಾ ನಮ್ಮ ಮನೆಯ ಸುತ್ತ ಮುತ್ತ ಮತ್ತು ರೋಡಿಗೆ ಹೋಗಿ ನೋಡಿದೆನು. ನಂತರ ನಾನು ಸುತ್ತ ಮುತ್ತ ಊರುಗಳಾದ ಮಾದ್ವಾರ, ಬಳಿಚಕ್ರ ಗ್ರಾಮಗಳಲ್ಲಿ ಕೂಡ ಹೋಗಿ ನನ್ನ ಮೋಟರ ಸೈಕಲ್ ಹುಡುಕಾಡಲಾಗಿ ಸಿಕ್ಕಿರುವದಿಲ್ಲ. ನನ್ನ ಮೋಟರ ಸೈಕಲನ್ನು ದಿನಾಂಕ: 24.04.2022 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ: 25.04.2022 ರ ಬೆಳಿಗ್ಗೆ 05-30 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದರ ಅ|| ಕಿ|| 25000=00 ಇರುತ್ತದೆ, ಎಲ್ಲಿಯೂ ಪತ್ತೆಯಾಗದ ಕಾರಣ ಇಂದು ಠಾಣೆಗೆ ಬಂದಿರುತ್ತೇನೆ. ನನ್ನ ಮೋಟರ ಕಳ್ಳತನವಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 53/2022 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 72/2022 ಕಲಂ: 279, 337, 338 ಐಪಿಸಿ, 187 ಐಎಂವಿ ಯಾಕ್ಟ್ : ಇಂದು ದಿನಾಂಕ 28.04.2022 ರಂದು 06.45 ಎಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರಿ ನಭಿಸಾ ತಂದೆ ಮಾಬುಸಾ ಮಂಗಳೂರ ವ|| 42ವರ್ಷ ಜಾ|| ಮುಸ್ಲೀಂ ಉ|| ಕೂಲಿಕೆಲಸ ಸಾ|| ಅಗ್ನಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಏಳು ಜನ ಮಕ್ಕಳಿದ್ದು ಅವರಲ್ಲಿ ಮೂರು ಜನ ಗಂಡು ಮಕ್ಕಳು ನಾಲ್ಕು ಜನ ಹೆಣ್ಣು ಮಕ್ಕಳಿರುತ್ತೇವೆ. ಎಲ್ಲಾ ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ನಾವು ಎಲ್ಲಾ ಜನ ಗಂಡು ಮಕ್ಕಳದು ಮದುವೆಯಾಗಿದ್ದು ಎಲ್ಲಾ ಗಂಡು ಮಕ್ಕಳು ಕೂಡಿಯೇ ಸಂಸಾರ ಮಾಡಿಕೊಂಡು ಇರುತ್ತೇವೆ. ನಾವು ಎಲ್ಲಾ ಜನರು ಕೂಲಿಕೆಲಸ ಮಾಡಿಕೊಂಡು ಇರುತ್ತೇವೆ. ನಮ್ಮ ತಮ್ಮನಾದ ರಾಜಅಹ್ಮದ್ ತಂದೆ ಮಾಬುಸಾ ಮಂಗಳೂರು ವ|| 36 ವರ್ಷ ಈತನು ಅಲ್ಲಿಇಲ್ಲಿ ಕೂಲಿಕೆಲಸ ಮಾಡಿಕೊಂಡು ಇದ್ದನು. ಹೀಗಿದ್ದು ದಿನಾಂಕ 17.04.2022 ರಂದು ಬೆಳಿಗ್ಗೆ 7 ಗಂಟೆಗೆ ನಮ್ಮ ತಮ್ಮನಾದ ರಾಜಹ್ಮದ್ ಈತನು ನಮ್ಮ ಹೊಲದಲ್ಲಿ ಗಿಡಗಳನ್ನು ಹಚ್ಚಿದ್ದು ಅವುಗಳಿಗೆ ನೀರು ಬಿಡಲು ಹೋಗಿದ್ದನು. ನಾನು ನಮ್ಮ ಮನೆಯಲ್ಲಿಯೇ ಇದ್ದೆನು. ರಾತ್ರಿ 9 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಮಹ್ಮದ್ ಸರ್ಫರಾಜ ತಂದೆ ಲಾಲಸಾಬ ಪೀರಾಪೂರ ಈತನು ನನಗೆ ಫೋನ ಮಾಡಿ ನಮ್ಮ ತಮ್ಮನಾದ ರಾಜಅಹ್ಮದ ಈತನಿಗೆ ನಮ್ಮೂರ ಸೀಮಾಂತರದ ಕೆನಾಲ ರೋಡಿನ ಎಸ್ಕೇಪ್ ಗೇಟ ಹತ್ತಿರ ಅಪಘಾತವಾಗಿದೆ ಅಂತ ತಿಳಿಸಿದಾಗ ನಾನು ಕೂಡಲೇ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮನು ಅಲ್ಲಿಯೇ ಕೆನಾಲ ರೋಡಿನ ಪಕ್ಕದಲ್ಲಿ ಬಿದ್ದಿದ್ದನು. ಆತನಿಗೆ ನೋಡಿ ವಿಚಾರಿಸಲಾಗಿ ಆತನಿಗೆ ಎಡಗಾಲ ಮೊಳಕಾಲ ಕೆಳಗೆ ರಕ್ತಗಾಯವಾಗಿ ಕಾಲು ಮುರಿದಂತಾಗಿತ್ತು. ನಂತರ ಆತನಿಗೆ ವಿಚಾರಿಸಲಾಗಿ ಅವನು ಹೊಲದಿಂದ ಮನೆಗೆ ಬರುವ ಕುರಿತು ಕೆನಾಲ ರೋಡಿನ ಬಂದೇನವಾಜ ಕೊತ್ವಾಲ್ ಇವರ ಹೊಲದ ಪಕ್ಕದ ರೋಡಿನಲ್ಲಿ ನಡೆದುಕೊಂಡು ಬರುವಾಗ ಎದುರಿನಿಂದ ನಮ್ಮೂರ ಕುಲಕಣರ್ಿ ಇವರ ಟ್ರ್ಯಾಕ್ಟರ ಇಂಜಿನ ನಂಬರ ಕೆಎ-33ಟಿಬಿ-0003 ನೇದ್ದರ ಚಾಲಕ ನಾಗೇಶ್ವರರಾವ ತ ಮಂದೆ ಶಂಕರರಾವ ಕುಲಕಣರ್ಿ ರವರು ತಮ್ಮ ಟ್ರ್ಯಾಕ್ಟ್ಟರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಲವಾಗಿ ಡಿಕ್ಕಿಡಪಿಸಿದ್ದರಿಂದ ನನ್ನ ಎಡಗಾಲ ಮೊಳಕಾಲ ಹತ್ತಿರ ಕಾಲು ಮುರಿದಂತಾಗಿರುತ್ತದೆ ಅಂತ ತಿಳಿಸಿದ್ದು ಇರುತ್ತದೆ. ಅಪಘಾತ ಪಡಿಸಿದ ಟ್ರ್ಯಾಕ್ಟರ ನೋಡಲಾಗಿ ಅಲ್ಲಿಯೇ ನಿಂತಿದ್ದು ಅದರ ನಂಬರ ನೋಡಲಾಗಿ ಕೆಎ-33ಟಿಬಿ-0003 ಅಂತ ಇತ್ತು. ಅದರ ಚಾಲಕ ನಾಗೇಶ್ವರರಾವ ಕುಲಕಣರ್ಿ ರವರು ಅಪಘಾತ ಪಡಿಸಿದ ತಕ್ಷಣ ತಮ್ಮ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಇರುತ್ತದೆ. ನಂತರ ನಮ್ಮ ತಮ್ಮನನ್ನು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ವಿಜಯಪುರದ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಪಡಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ನನ್ನ ತಮ್ಮನಿಗೆ ಅಪಘಾತ ಪಡಿಸಿದ ನಾಗೇಶ್ವರರಾವ ಕುಲಕಣರ್ಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಸದ ಮೇಲಿಂದ ಠಾಣಾ ಗುನ್ನೆ ನಂಬರ 72/2022 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 73/2022 ಕಲಂ 15[ಎ],32[3] ಕೆ. ಇ ಯಾಕ್ಟ : ಇಂದು ದಿನಾಂಕ 29.04.2022 ರಂದು 06.20 ಪಿ ಎಮ್ ಕ್ಕೆ ಮಾನ್ಯ ಪಿ ಎಸ್ ಐ ಸಾಹೇಬರಾದ ಶ್ರಿ ಗಜಾನಂದ ಬಿರಾದಾರ ಪಿ ಎಸ್ ಐ [ಕಾ&ಸು] ರವರು ಠಾಣೆಗೆ ಹಾಜರಾಗಿ ಕೊಟ್ಟ ವರಧಿ ಏನಂದರೆ , ಇಂದು ದಿನಾಂಕ: 29.04.2022 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ಕೆಂಭಾವಿ ಪಟ್ಟಣದಲ್ಲಿ ಸಿಬ್ಬಂದಿಯವರಾದ ಆನಂದ ಪಿಸಿ 43 ರವರೊಂದಿಗೆ ಪೆಟ್ರೋಲ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಬೈಚಬಾಳ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸರಕಾರದ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮಧ್ಯವನ್ನು ಮಾರಾಟ ಮಾಡಿ ಮಧ್ಯ ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದಾನೆಂದು ಮಾಹಿತಿ ಮೇರೆಗೆ ಠಾಣೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವಯಾ|| 37 ಜಾ|| ಪ.ಜಾತಿ ಉ||ಕೂಲಿ ಸಾ|| ಕೆಂಭಾವಿ 2) ಮಕ್ತುಮ ತಂದೆ ಮಾಸುಮಸಾಬ ವಡಕೇರಿ ವಯಾ|| 36 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ಇವರನ್ನು ಬರಮಾಡಿಕೊಂಡು ಅವರಿಗೂ ಮಾಹಿತಿ ತಿಳಿಸಿ ದಾಳಿ ಮಾಡಲು ಸಹಕರಿಸಲು ತಿಳಿಸಿದ್ದು ಅವರು ಒಪ್ಪಿದ್ದರಿಂದ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಜೀಪ ಚಾಲಕ ಪೆದ್ದಪ್ಪಗೌಡ ಹಾಗು ಆನಂದ ಪಿಸಿ 43 ರವರನ್ನು ಕರೆದುಕೊಂಡು ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರಲ್ಲಿ ಠಾಣೆಯಿಂದ 04.15 ಪಿಎಮ್ಕ್ಕೆ ಹೊರಟು 04.45 ಪಿಎಮ್ಕ್ಕೆ ಬೈಚಬಾಳ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಸ್ಥಳದಿಂದ ಸುಮಾರು 100 ಅಡಿ ದೂರದಲ್ಲಿ ನಿಂತು ಮದ್ಯ ಮಾರಾಟ ಮಾಡುವದನ್ನು ನೋಡಿ ಖಚಿತಪಡಿಸಿಕೊಂಡು ನಾನು, ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಹೋಗುತ್ತಿದ್ದಾಗ ನಮ್ಮನ್ನು ನೋಡಿ ಅಲ್ಲಿ ಸೇರಿದ್ದ ಜನರು ಓಡಿ ಹೋದರು. ಮಧ್ಯ ಮಾರಾಟ ಮಾಡುತ್ತಿದ್ದವನು ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ನಾನು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯನ್ನು ಹಿಡಿದು ಅವರ ಹೆಸರು ಮತ್ತು ವಿಳಾಸವನ್ನು ವಿಚಾರಿಸಲಾಗಿ ಯಂಕೋಬಾ ತಂದೆ ಜಯಪ್ಪ ಉಪ್ಪಾರ ವಯಾ|| 36 ವರ್ಷ ಜಾ|| ಹಿಂದೂ ಉಪ್ಪಾರ ಉ|| ಕೂಲಿ ಸಾ|| ಬೈಚಬಾಳ ಅಂತ ತಿಳಿಸಿದನು. ನಂತರ ಸದರಿ ಸ್ಥಳದಲ್ಲಿದ್ದ ಒಂದು ಹಳೆಯ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿ ನೋಡಲಾಗಿ ಅದರಲ್ಲಿ ಮಧ್ಯ ತುಂಬಿದ್ದು ಸದರ ಚೀಲದಲ್ಲಿ 180 ಎಮ್ಎಲ್ನ ಓರಿಜಿನಲ್ ಚೊಯಿಸ್ ವಿಸ್ಕಿ ಪೌಚು ಇದ್ದು ಒಟ್ಟು 08 ಪೌಚುಗಳು ಇದ್ದು ಒಂದು ಪೌಚಿನ ಬೆಲೆ 70.26 ರೂ. ಅಂತ ಇದ್ದು ಒಟ್ಟು ಪೌಚ್ಗಳ ಬೆಲೆ 562.08/- ರೂ ಆಗುತ್ತಿದ್ದು ನಂತರ ಸಿಕ್ಕ ವ್ಯಕ್ತಿಗೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ಮಾಡಿಕೊಡಲು ಯಾವುದಾದರು ಅಧಿಕೃತ ಪರವಾನಿಗೆ ಇದೆಯೇ ಎಂದು ವಿಚಾರಿಸಲಾಗಿ ತನ್ನ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದನು. ಸದರಿ ಮಧ್ಯ ತುಂಬಿದ 180 ಎಮ್ಎಲ್ನ 08 ಪೌಚ್ಗಳನ್ನು 04:50 ಪಿಎಮ್ದಿಂದ 05.50 ಪಿಎಮ್ದವರೆಗೆ ಪಂಚರ ಸಮಕ್ಷಮ ಪಂಚನಾಮೆ ಮೂಲಕ ಜಪ್ತಪಡಿಸಿಕೊಳ್ಳಲಾಯಿತು ನಂತರ ಮೇಲ್ಕಂಡ ಆರೋಪಿತನೊಂದಿಗೆ 06:20 ಪಿಎಮ್ಕ್ಕೆ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕಲಂ: 15(ಎ), 32(3) ಕೆಇ ಆಕ್ಟ ರೀತ್ಯಾ ಕ್ರಮ ಜರುಗಿಸಬೇಕು ಅಂತ ಇದ್ದ ವರಧಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂಬರ 73/2022 ಕಲಂ 15[ಎ],32[3] ಕೆಇ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 74/2022 ಕಲಂ: 279, 337, 338 ಐಪಿಸಿ, 187 ಐಎಂವಿ ಯಾಕ್ಟ್ : ಇಂದು ದಿನಾಂಕ 29.04.2022 ರಂದು ಯುನೈಟೆಡ್ ಆಸ್ಪತ್ರೆ ಕಲಬುಗರ್ಿಯಿಂದ ಆರ್ ಟಿ ಎ ಎಮ್ ಎಲ್ ಸಿ ವಸೂಲಾದ ಮೇರೆಗೆ ಠಾಣೆಯ ಶಂಕರಗೌಡ ಹೆಚ್ ಸಿ 33 ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಲಾಲಸಾಬ ತಂದೆ ಬಾಷಾಸಾಬ ಬುಕ್ಕದ್ ರವರು ಕೊಟ್ಟ ಅಜರ್ಿಯನ್ನು ಸ್ವೀಕರಿಸಿಕೊಂಡು ಮರಳಿ ಠಾಣೆಗೆ 08.15 ಪಿಎಮ್ ಕ್ಕೆ ಬಂದು ಕೊಟ್ಟ ಅಜರ್ಿ ಸಾರಾಂಶವೇನೆಂದರೆ ನಿನ್ನೆ ದಿನಾಂಕ 28.04.2022 ರಂದು ಸಾಯಂಕಾಲ 5 ಗಂಡೆಯ ಸುಮಾರಿಗೆ ಅಜರ್ಿದಾರರು ಹಾಗು ಇತರೆ ಏಳು ಜನರು ಸೇರಿ ಗೂಡ್ಸ ಟಂಟಂ ನಂಬರ ಕೆಎ-28 ಎಎ-2481 ನೇದ್ದರಲ್ಲಿ ತರಕಾರಿ ಮಾರಲು ಹೋಗಿ ಮರಳಿ ಮನೆಗೆ ಹೋಗುವ ಕುರಿತು ಮಲ್ಲಾದ ಜೆಕೆ ಪೆಟ್ರೋಲ ಬಂಕ ಮುಂದೆ ಹೋಗುತ್ತಿದ್ದಾಗ ಹಿಂದಿನಿಂದ ಬಸ್ಸ ನಂಬರ ಕೆಎ-28 ಎಫ್-2325 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿದ್ದರಿಂದ ಟಂಟಂ ಪಲ್ಟಿಯಾಗಿ ಬಿದ್ದು ನನಗೂ ಹಾಗು ಇತರರಿಗೂ ಭಾರೀ ಹಾಗು ಸಾದಾಗಾಯಗಳಾಗಿದ್ದು ಆರೋಪಿತನು ಅಪಘಾತ ಪಡೆಸಿದ ತಕ್ಷಣ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 74/2022 ಕಲಂ 279,337,338 ಐಪಿಸಿ ಸಂಗಡ 187 ಐಎಮ್ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ.35/2022 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:29.04.2022 ರಂದು 7:00 ಪಿ.ಎಮ್ಕ್ಕೆ ಸರಕಾರಿ ತಪರ್ೆ ಶ್ರೀಶೈಲ ಅಂಬಾಟಿ ಪಿಎಸ್ಐ (ಕಾ.ಸು) ಕೊಡೆಕಲ್ಲ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಂದು ಜ್ಞಾಪನ ಪತ್ರವನ್ನು ಹಾಗೂ ತಾವು ಪೂರೈಸಿದ ಮಟಕಾ ಜೂಜಾಟದ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿದ್ದು, ಪಿಎಸ್ಐ ರವರು ಹಾಜರ ಪಡಿಸಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ಇಂದು ದಿನಾಂಕ:29/04/2022 ರಂದು ಮಧ್ಯಾಹ್ನ 3:40 ಗಂಟೆಗೆ ನಾನು ಕೊಡೆಕಲ್ಲ ಠಾಣಾ ವ್ಯಾಪ್ತಿಯ ಅಂಬಾನಗರ ಕಕ್ಕೇರಾದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಮಟಕಾ ಜೂಜಾಟ ಬರೆಯುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಯಲ್ಲಪ್ಪ ಹೆಚ್ಸಿ-117 ರವರಿಗೆ ದಾಳಿ ಮಾಡುವ ಕುರಿತು ಇಬ್ಬರು ಪಂಚರಿಗೆ ಕರೆದುಕೊಂಡು ಬರಲು ತಿಳಿಸಿದ್ದು, ಸದರಿ ಹೆಚ್.ಸಿ-117 ರವರು ಪಂಚರನ್ನಾಗಿ 1) ಸಂಗಯ್ಯ ತಂದೆ ಬಸಯ್ಯ ಹಿರೇಮಠ ವ:34 ವರ್ಷ ಜಾ:ಹಿಂದೂ ಲಿಂಗಾಯತ ಉ:ಕೂಲಿಕೆಲಸ 2) ಕೃಷ್ಣಪ್ಪ ತಂದೆ ಶಿವನಪ್ಪ ಹೆಬ್ಬಾಳದವರ ವ:50 ವರ್ಷ ಜಾ:ಹಿಂದೂ ಬೇಡರ ಉ:ಕೂಲಿಕೆಲಸ ಇಬ್ಬರೂ ಸಾ:ಕೊಡೆಕಲ್ಲ ತಾ:ಹುಣಸಗಿ ಜಿ:ಯಾದಗಿರಿ ರವರಿಗೆ 3:40 ಪಿಎಮ್ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು ನಾನು ಸದರಿ ಪಂಚರಿಗೆ & ಸಿಬ್ಬಂದಿಯವರಾದ ಯಲ್ಲಪ್ಪ ಹೆಚ್ಸಿ-117, ರವಿಕಿರಣ ಹೆಚ್ಸಿ-39 & ಜೀಪ್ ಚಾಲಕ ಬಸವರಾಜ ಪಿಸಿ-76 ರವರಿಗೆ ಕೊಡೆಕಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಾನಗರ ಕಕ್ಕೇರಾದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಮಟಕಾ ಜೂಜಾಟ ಬರೆಯುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದು, ನಾವು ದಾಳಿ ಮಾಡಿ ಅವನನ್ನು ಹಿಡಿಯುವರಿದ್ದು ನೀವು ನಮ್ಮೊಂದಿಗೆ ಬಂದು ದಾಳಿ ಮಾಡಿದಾಗ ಹಾಜರಿದ್ದು, ಜಪ್ತಿ ಪಂಚನಾಮೆಯನ್ನು ಬರೆಯಿಸಿಕೊಡಲು ಪಂಚರಾಗಿ ಬರಲು ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿದ್ದು, ನಂತರ ಪಂಚರ & ಮೇಲೆ ಹೇಳಿದ ಎಲ್ಲಾ ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ್ ನಂ:ಕೆಎ-33 ಜಿ-0165 ವಾಹನದಲ್ಲಿ ಕುಳಿತುಕೊಂಡು ಠಾಣೆಯನ್ನು ಮಧ್ಯಾಹ್ನ 3:45 ಪಿ.ಎಮ್ ಕ್ಕೆೆ ಬಿಟ್ಟಿದ್ದು ನಾನು ಕಕ್ಕೇರಾ ಉಪ-ಠಾಣೆಯ ಅವರ ಸಿಬ್ಬಂದಿಯವರಾದ ಸಾಂತಪ್ಪ ಪಿ.ಸಿ-91, ರಾಜೇಶ ಪಿ.ಸಿ-146 ರವರಿಗೆ ಕಕ್ಕೇರಾ ಆಯಕಟ್ಟು ರೋಡಿನ ಹತ್ತಿರ ಬರಲು ಫೋನ್ ಮೂಲಕ ತಿಳಿಸಿದ್ದು, ನಾವು 4:30 ಪಿ.ಎಮ್ ಸುಮಾರಿಗೆ ಆಯಕಟ್ಟು ರೋಡ ಹತ್ತಿರ ಹೋದಾಗ ಕಕ್ಕೇರಾ ಉಪ-ಠಾಣೆಯ ಸಿಬ್ಬಂದಿಯವರಾದ ಸಾಂತಪ್ಪ ಪಿ.ಸಿ-91, ರಾಜೇಶ ಪಿ.ಸಿ-146 ರವರು ಮೋಟರ್ ಸೈಕಲ್ ಮೇಲೆ ಬಂದು ನಿಂತಿದ್ದು ಅವರಿಗೆ ನಮ್ಮ ಹಿಂದೆ ಬರಲು ತಿಳಿಸಿದ್ದು, ಸದರಿಯವರು ತಮ್ಮ ಮೋಟರ್ ಸೈಕಲ ಮೇಲೆ & ನಾವು ಜೀಪಿನಲ್ಲಿ ಬಾತ್ಮೀ ಬಂದ ಸ್ಥಳದ ಹತ್ತಿರ 4:45 ಪಿಎಮ್ಕ್ಕೆ ತಲುಪಿ ಜೀಪ್ನ್ನು & ಮೋಟರ್ ಸೈಕಲನ್ನು ಮರೆಯಲ್ಲಿ ನಿಲ್ಲಿಸಿ ಎಲ್ಲರೂ ಜೀಪ್ನಿಂದ ಇಳಿದು ನಡೆದುಕೊಂಡು ಸ್ವಲ್ಪ ಮುಂದೆ ಹೋಗಿ, ಮರೆಯಾಗಿ ನಿಂತು 5-10 ನಿಮಿಷ ನೋಡಲು ಒಬ್ಬ ವ್ಯಕ್ತಿಯು ಅಂಬಾನಗರ ಕಕ್ಕೇರಾದ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ನಿಂತು ಹೋಗಿ ಬರುವ ಜನರಿಗೆ ಕರೆದು ಇದು ಕಲ್ಯಾಣಿ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ 80 ರೂಪಾಯಿ ಬರುತ್ತದೆ ಅದೃಷ್ಟ ಇದ್ದವರು ನಂಬರ ಬರೆಯಿಸಿ ಹಣ ಪಡೆದುಕೊಳ್ಳಿ ಅಂತಾ ಅನ್ನುತ್ತಾ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರವುಳ್ಳ ಚೀಟಿಗಳನ್ನು ಬರೆದುಕೊಡುವದನ್ನು ಖಚಿತಪಡಿಸಿಕೊಂಡು 5:00 ಪಿಎಮ್ಕ್ಕೆ ನಾನು ಹಾಗೂ ಎಲ್ಲಾ ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಒಮ್ಮೇಲೆ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದಿದ್ದು, ನಾನು ಪಂಚರ ಸಮಕ್ಷಮದಲ್ಲಿ ಸದರಿ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಿದ್ದು, ಅವನು ತನ್ನ ಹೆಸರು ವೆಂಕಟೇಶ ತಂದೆ ಮಾನಪ್ಪ ಕುರಿ ವ:34 ವರ್ಷ ಜಾ:ಹಿಂದೂ ಕುರುಬರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಅಂಬಾನಗರ ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಇದ್ದ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟಿಯನ್ನು ಹಾಗೂ ಒಂದು ಬಾಲಪೆನ್ನನ್ನು ಹಾಜರುಪಡಿಸಿದ್ದು, ನಾನು ಸದರಿಯವನು ಹಾಜರಪಡಿಸಿದ ಹಣವನ್ನು ಪಂಚರ ಸಮಕ್ಷಮದಲ್ಲಿ ಎಣಿಸಿದ್ದು 500 ರೂಪಾಯಿಯ 1 ನೋಟ್, 100 ರೂಪಾಯಿಯ 6 ನೋಟ್ಗಳು ಹಾಗೂ 10 ರೂಪಾಯಿಯ 4 ನೋಟ್ಗಳು ಹೀಗೆ ಒಟ್ಟು 1140/- ರೂಗಳು ಇದ್ದು, ಸದರಿ 1) 1140/- ರೂ ನಗದು ಹಣ, 2) ಒಂದು ಮಟಕಾ ನಂಬರ ಬರೆದ ಚೀಟಿ, 3) ಒಂದು ಬಾಲಪೆನ್ನನ್ನು ಕೇಸಿನ ಮುಂದಿನ ಪುರಾವೆಗೆಂದು ಜಪ್ತಿ ಮಾಡಿಕೊಂಡು ಒಂದು ಕಾಗದದ ಪಾಕೇಟ್ನಲ್ಲಿ ಹಾಕಿ ಶೀಲ್ ಮಾಡಿ ಪಂಚರ & ನನ್ನ ಸಹಿ ನಿಶಾನೆ ಚೀಟಿ ಅಂಟಿಸಿ ನಮ್ಮ ವಶಕ್ಕೆ ಪಡೆದುಕೊಂಡು ಸದರಿಯವನಿಗೆ ವಿಚಾರಿಸಲಾಗಿ ಸದರಿಯವನು ಈ ಹಣ ಮಟಕಾ ನಂಬರ್ ಬರೆಯಿಸುವವರಿಂದ ಹಣ ಪಡೆದು ಚೀಟಿ ಬರೆದು ಕೊಟ್ಟಿದ್ದರಿಂದ ಬಂದಿರುವದಾಗಿ ತಿಳಿಸಿದ್ದು ಸದರಿಯವನು ಕಲ್ಯಾಣ ಮಟಕಾ ಎಂಬುವ ಓಪನಿಂಗ್ ಮತ್ತು ಕ್ಲೋಸಿಂಗ್ ಆಟ ಆಡುತ್ತಿದ್ದುದು ಖಚಿತಪಟ್ಟಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ:29/04/2022 ರಂದು 5:00 ಪಿ.ಎಮ್ ದಿಂದ 6:00 ಪಿ.ಎಮ್ ವರೆಗೆ ಸದರಿ ಸ್ಥಳದಲ್ಲಿ ಹಾಜರಿದ್ದು ನಾನು ಸಿಬ್ಬಂದಿಯವರಾದ ರವಿಕಿರಣ ಹೆಚ್.ಸಿ-39 ರವರಿಂದ ಲ್ಯಾಪ್ಟಾಪದಲ್ಲಿ ಹೇಳಿ ಜಪ್ತಿ ಪಂಚನಾಮೆಯನ್ನು ಟೈಪ್ ಮಾಡಿಸಿದ್ದು, ನಂತರ ರವಿಕಿರಣ ಹೆಚ್.ಸಿ-39 ರವರು ಅದನ್ನು ಪ್ರಿಂಟ್ ಹಾಕಿಸಿಕೊಂಡು ಬಂದಿದ್ದು ಅದನ್ನು ನಾನು ಪಂಚರಿಗೆ ಓದಿ ಹೇಳಿದ್ದು ನಂತರ ಸದರಿ ಮಟಕಾ ಬರೆದುಕೊಳ್ಳುತ್ತಿದ್ದ ವೆಂಕಟೇಶ ತಂದೆ ಮಾನಪ್ಪ ಕುರಿ ವ:34 ವರ್ಷ ಜಾ:ಹಿಂದೂ ಕುರುಬರ ಉ:ಕಿರಾಣಿ ಅಂಗಡಿ ವ್ಯಾಪಾರ ಸಾ:ಅಂಬಾನಗರ ಕಕ್ಕೇರಾ ತಾ:ಸುರಪೂರ ಜಿ:ಯಾದಗಿರಿ ಈತನನ್ನು ವಶಕ್ಕೆ ಪಡೆದುಕೊಂಡು ಸಿಬ್ಬಂದಿಯೊಂದಿಗೆ ಮರಳಿ ಕೊಡೆಕಲ್ಲ ಪೊಲೀಸ್ ಠಾಣೆಗೆ 6:55 ಪಿ.ಎಮ್ಕ್ಕೆ ಬಂದಿದ್ದು, ಠಾಣೆಯಲ್ಲಿ ಆರೋಪಿತನ ವಿರುದ್ದ ವರದಿಯನ್ನು ತಯಾರಿಸಿ ಆರೋಪಿ & ಮೂಲ ಜಪ್ತಿ ಪಂಚನಾಮೆ, ಮುದ್ದೇಮಾಲು ಹಾಜರಪಡಿಸಿ ಸರಕಾರದ ಪರವಾಗಿ ಮಧ್ಯಾಹ್ನ 7:00 ಗಂಟೆಗೆ ನಿಮಗೆ ವರದಿ ಸಲ್ಲಿಸಿದ್ದು, ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:35/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 68/2022 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ-1960 ಸಂಗಡ 177 ಐ.ಎಮ್.ವಿ ಎಕ್ಟ್ : ಇಂದು ದಿನಾಂಕ: 29/04/202 ರಂದು ಬೆಳಿಗ್ಗೆ 10-30 ಗಂಟೆಗೆ ಸ.ತಪರ್ೆ ಶ್ರೀ ಶಾಮಸುಂದರ ಪಿ.ಎಸ್.ಐ(ಅ.ವಿ) ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ್ದೆನೆಂದರೆ ದಿನಾಂಕ: 29/04/2022 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದ್ದಿದ್ದೇನೆಂದರೆ ಶಹಾಪೂರ ನಗರದ ಡಿಗ್ರಿ ಕಾಲೇಜ ಕಡೆಯಿಂದ ಒಂದು ಗೂಡ್ಸ ವಾಹನದಲ್ಲಿ ದನಗಳನ್ನು ಹಾಕಿಕೊಂಡು ಪ್ರಾಣಿಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಸಾಗಾಣಿಕೆ ಮಾಡಲು ಶಹಾಪುರ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ, ಅಂತ ಮಾಹಿತಿ ಬಂದ ಮೇರೆಗೆ ನಾನು ಇಬ್ಬರು ಪಂಚರಾದ 1) ಬಸವರಾಜ ತಂದೆ ಮಲ್ಲಯ್ಯ ಪಿರಂಗಿ ವಯಾ: 22 ವರ್ಷ ಜಾತಿ: ಮರಾಠ ಉ: ಕೂಲಿಕೆಲಸ ಸಾ:ಜಿವೇಶ್ವರ ನಗರ ಶಹಾಪೂರ 2) ಶೀವು @ ಶಿವಲಿಂಗ ತಂದೆ ಭೀಮರಾಯ ಶಿರವಾಳ ವಯಾ: 27 ವರ್ಷ ಉ: ಪೆಂಟಿಂಗ ಕೆಲಸ ಜಾತಿ: ಪ.ಜಾತಿ(ಮಾದಿಗ) ಸಾ: ಚೌಡೇಶ್ವರಿ ನಗರ ಶಹಾಪೂರ ಇವರಿಗೆ 7.15 ಎ.ಎಮ್.ಕ್ಕೆ ಠಾಣೆಗೆ ಕರೆಯಿಸಿ ಸದರಿಯವರಿಗೆ ವಿಷಯ ತಿಳಿಸಿ ಸಿಬ್ಬಂದಿಯವರಾದ ನಾರಾಯಣ ಹೆಚ್ಸಿ-49, ಬಾಬು ಹೆಚ್.ಸಿ-162 ಭಾಗಣ್ಣ ಪಿಸಿ-194 ಇವರಿಗೂ ಸದರಿ ವಿಷಯ ತಿಳಿಸಿ ನಾವೆಲ್ಲರೂ ಕೂಡಿ ಠಾಣೆಯ ಸರಕಾರಿ ಜೀಪ್ ನಂ:ಕೆಎ-33, ಜಿ-0162 ನೇದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 7.30 ಎ.ಎಮ್ ಕ್ಕೆ ಹೊರಟು ಭೀ.ಗುಡಿ-ಶಹಾಪೂರ ಮುಖ್ಯ ರಸ್ತೆಯ ಮೇಲೆ ಹೊಸ ತಹಸಿಲ್ದಾರ ಕಾಯರ್ಾಲಯದ ಮುಂದೆ ರೋಡ ಜಂಪ ಹತ್ತಿರ ಹೋಗಿ ನಿಂತಿದ್ದಾಗ 7-40 ಎ.ಎಮ್ ಸುಮಾರಿಗೆ ಸರಕಾರಿ ಪದವಿ ಕಾಲೇಜ ಕಡೆಯಿಂದ ಒಂದು ಗೂಡ್ಸ್ ವಾಹನ ಬಂದಿದ್ದು ಆಗ ನಾವು ಸದರಿ ವಾಹನವನ್ನು ನಿಲ್ಲಿಸಿ ನೋಡಲಾಗಿ ವಾಹನದಲ್ಲಿ ಚಾಲಕನಿದ್ದು ಆತನ ಹೆಸರು ವಿಳಾಸ ವಿಚಾರಿಸಲಾಗಿ ಚಾಲಕ ತನ್ನ ಹೆಸರು ರಾಯಣ್ಣ ತಂದೆ ಮಲ್ಲಪ್ಪ ಚಟ್ನಳ್ಳಿ ವ: 23 ವರ್ಷ, ಜಾ:ಕುರುಬ, ಉ: ಟಾಟಾ ಎ.ಸಿ ಚಾಲಕ, ಸಾ: ಕನ್ಯಾಕೋಳುರ ತಾ: ಶಹಾಪೂರ ಅಂತಾ ತಿಳಿಸಿದನು. ಸದರಿ ವಾಹನದಲ್ಲಿ ಏನು ಇದೆ ಅಂತ ಕೇಳಿದಾಗ ಅವನು ವಾಹನದಲ್ಲಿ ದನಗಳು ಇದ್ದು ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದರು. ನಂತರ ಅವನಿಗೆ ದನಗಳನ್ನು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಿಗೆ ಪಡೆದಿದ್ದರೆ, ದಾಖಲಾತಿಗಳನ್ನು ತೋರಿಸು ಎಂದು ಕೇಳಿದಾಗ ಯಾವುದೇ ದಾಖಲಾತಿಗಳು ಇರುವದಿಲ್ಲ ಅಂತ ಹೇಳಿದರು. ಈ ದನಗಳನ್ನು ಹಳ್ಳಿಗಳಲ್ಲಿ ರೈತರಿಂದ ಕಡಿಮೆ ಹಣಕ್ಕೆ ಖರೀದಿ ಮಾಡಿ ಇಂದು ದಿನಾಂಕ: 29/04/2022 ರಂದು ಶಹಾಪುರದ ದನಗಳ ಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಶಹಾಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಅಂತ ತಿಳಿಸಿದ್ದು ಇರುತ್ತದೆ. ಸದರಿ ವಾಹನಗಳನ್ನು ನೋಡಲಾಗಿ ಒಂದು ಟಾಟಾ ಎ.ಸಿ ಗೂಡ್ಸ್ ವಾಹನ ಇದ್ದು ಅದರ ನಂಬರ್ ಕೆಎ-33/ಎ-8810 ಇದ್ದು ಸದರಿ ವಾಹನದ ಇಕ್ಕಟ್ಟಾದ ಸ್ಥಳದಲ್ಲಿ ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ನಿಲ್ಲಿಸಿ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಆಗ ನಾವು ಟಾಟಾ ಎ.ಸಿ ವಾಹನದಲ್ಲಿದ್ದ ಎರಡು ದನಗಳನ್ನು ಕೆಳಗಡೆ ಇಳಿಸಿ ಒಂದೊಂದಾಗಿ ಪರಿಶೀಲಿಸಿ ನೊಡಲಾಗಿ 1) ಒಂದು ಬಿಳಿ ಬಣ್ಣದ ಆಕಳು ಅ.ಕಿ. 8,000, ಅದಕ್ಕೆ ಕಾಲಿಗೆ ತರಚಿದ ರಕ್ತಗಾಯ ಆಗಿರುತ್ತದೆ. 2) ಬಿಳಿ ಮತ್ತು ಕಪ್ಪು ಬಣ್ಣದ ಮಿಶ್ರೀತ ಹೋರಿ ಅ.ಕಿ. 6000, ಇದಕ್ಕೆ ಬಾಲಕ್ಕೆ ತರಚಿದ ರಕ್ತಗಾಯ ಆಗಿದ್ದು ಹೀಗೆ ಒಟ್ಟು 2 ದನಗಳು ಇದ್ದು ಅವುಗಳು ಒಟ್ಟು ಅ.ಕಿ 14,000/- ರೂಪಾಯಿ ಆಗುತ್ತದೆ ಮತ್ತು ಸದರಿ ಟಾಟಾ ಎ.ಸಿ ವಾಹನ ನಂ: ಕೆಎ-33,/ಎ-8810 ಅ.ಕಿ 50,000/-ರೂಪಾಯಿ, ಇದ್ದು ಸದರಿ 02 ದನಗಳು, ವಾಹನವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ, ಇದರ ಬಗ್ಗೆ 08.15 ಎ.ಎಮ್. ದಿಂದ 09.45 ಎ.ಎಮ್.ವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ದನಗಳು, ವಾಹನ ಮತ್ತು ಆರೋಪಿತನೊಂದಿಗೆ ಮರಳಿ 10.00 ಎ.ಎಮ್ಕ್ಕೆ ಠಾಣೆಗೆ ಬಂದು ವರದಿಯ್ನು ತಯ್ಯಾರಿಸಿ ವಾಹನ ಚಾಲಕ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 68/2022 ಕಲಂ: 11(ಡಿ) ಪ್ರಾಣಿ ಹಿಂಸೆ ಪ್ರತಿಬಂದಕ ಕಾಯಿದೆ-1960 ಸಂಗಡ 177 ಐ.ಎಮ್.ವಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.