ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-05-2022


ಕೊಡೆಕಲ್ಲ ಪೊಲೀಸ್ ಠಾಣೆ:-
ಗುನ್ನೆ ನಂ: 43/2022 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ: 29.05.2022 ರಂದು ಮಧ್ಯಾಹ್ನ 3:00 ಗಂಟೆಗೆ ಪಿರ್ಯಾಧಿ ಶ್ರೀ ವಿರುಪಾಕ್ಷಿ ತಂದೆ ಮಹಿಮಪ್ಪ ಮದ್ಲಿ ವ:30 ವರ್ಷ, ಉ:ಒಕ್ಕಲುತನ, ಜಾ||ಚಿನ್ನಾದಾಸರ, ಸಾ||ದಾಸರಗೋಟ ರಾಯನಪಾಳ್ಯಾ ತಾ|| ಹುಣಸಗಿ, ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಯವರಿಗೆ ನಾವು 5 ಜನ ಗಂಡು ಮಕ್ಕಳಿದ್ದು, ಎಲ್ಲರದೂ ಮದುವೆಯಾಗಿದ್ದು ಬೇರೆ ಬೇರೆಯಾಗಿ ಇರುತ್ತೇವೆ. ಈಗ 10-12 ವರ್ಷಗಳ ಹಿಂದೆ ನಮ್ಮ ತಂದೆತಾಯಿಯವರು ನನಗೆ ನಮ್ಮೂರ ಪಂಪಾಪತಿ ತಂದೆ ಆನಂದಪ್ಪ ಗಂಗಾವತಿ ರವರ ಮಗಳಾದ ಮಹಾದೇವಿ ರವರನ್ನು ತೆಗೆದು ನನ್ನ ಜೋತೆಗೆ ಮದುವೆ ಮಾಡಿದ್ದು, ನಮ್ಮ ದಾಂಪತ್ಯ ಜೀವನದಿಂದ ನನಗೆ ಸಂಜನಾ, ಖುಷಿ, ಪಲ್ಲವಿ ಅಂತಾ ಮೂರು ಜನ ಹೆಣ್ಣು ಮಕ್ಕಳು ಹಾಗೂ ಮುತ್ತಪ್ಪ@ಶರತ ಅಂತಾ ಒಬ್ಬ ಗಂಡು ಮಗ ಜನಿಸಿದ್ದು ಇರುತ್ತದೆ. ನಾವು ಗಂಡ ಹೆಂಡತಿ ಇಬ್ಬರೂ ಅನ್ಯೂನ್ಯವಾಗಿರುತ್ತೇವೆ. ನಮ್ಮ ಜೋತೆಗೆ ನನ್ನ ತಾಯಿ ಭೀಮವ್ವ ರವರು ಇದ್ದು, ನನ್ನ ತಂದೆ ಮಹಿಮಪ್ಪ ರವರು ತೀರಿಕೊಂಡಿರುತ್ತಾರೆ.
ಹೀಗಿದ್ದು, ದಿನಾಂಕ:24/05/2022 ಮಂಗಳವಾರ ರಂದು ನನ್ನ ಹೆಂಡತಿ ಮಹಾದೇವಿ ಇವಳು ಕೊಡೇಕಲ್ದಲ್ಲಿ ಸಂತೆ ಇದ್ದುದ್ದರಿಂದ ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಮಧ್ಯಾಹ್ನ 12:00 ಗಂಟೆ ಸುಮಾರಿಗೆ ನನಗೆ ಹೇಳಿ ನನ್ನ ಅಣ್ಣ ಶಾಂತಪ್ಪನ ಹೆಂಡತಿಯಾದ ಯಲ್ಲಮ್ಮ ಹಾಗೂ ನನ್ನ ದೊಡ್ಡ ಅಣ್ಣನಾದ ಹಣಮಂತನ ಹೆಂಡತಿಯಾದ ಶಾಂತಮ್ಮ ರವರೊಂದಿಗೆ ನನ್ನ ಹೆಂಡತಿಯು ನಮ್ಮೂರಿನಿಂದ ಕೊಡೇಕಲ್ ಕ್ಕೆ ಹೋಗಿದ್ದು, ಸಾಯಂಕಾಲ 5:00 ಗಂಟೆ ಸುಮಾರಿಗೆ ನನ್ನ ಹೆಂಡತಿಯ ಜೋತೆಗೆ ಕೊಡೇಕಲ್ ಕ್ಕೆ ಹೋದ ಯಲ್ಲಮ್ಮ ರವರು ನನ್ನ ಅಣ್ಣನಾದ ಲಕ್ಷ್ಮಣ ತಂದೆ ಮಹಿಮಪ್ಪ ಮದ್ಲಿ ಇವರ ಫೋನಿಗೆ ಫೋನ್ ಮಾಡಿ ನಿಮ್ಮ ತಮ್ಮನ ಹೆಂಡತಿ ಮಹಾದೇವಿಯು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ನಮ್ಮೊಂದಿಗೆ ಕೊಡೇಕಲ್ ಕ್ಕೆ ಬಂದು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ನಾವು ಕೊಡೇಕಲ್ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಇದ್ದಾಗ ನನಗೆ ಮತ್ತು ಶಾಂತಮ್ಮ ರವರಿಗೆ ನೀವು ಹೋಗಿ ಸಂತೆ ಮಾಡಿರಿ ನಾನು ನನ್ನ ಮಗಳಾದ ಸಂಜನಾಳಿಗೆ ಕಸ್ತೂರ ಬಾ ಶಾಲೆಗೆ ಹಚ್ಚಬೇಕಾಗಿದೆ ಅಲ್ಲಿಗೆ ಹೋಗಿ ವಿಚಾರಿಸಿಕೊಂಡು ಬರುತ್ತೇನೆ ಅಂತಾ ಹೇಳಿ ಹೋಗಿದ್ದು, ನಾನು ಮತ್ತು ಶಾಂತಮ್ಮ ರವರು ಸಂತೆ ಮಾಡಿಕೊಂಡು ಇಲ್ಲಿಯವರೆಗೆ ಹುಡುಕಾಡಿದರು ಮತ್ತು ಕಸ್ತೂರ ಬಾ ಶಾಲೆಗೆ ಹೋಗಿ ನೋಡಿದರೂ ಮಹಾದೇವಿಯು ಕಾಣಿಸುತ್ತಿಲ್ಲ ಅಂತಾ ತಿಳಿಸಿದ್ದು, ನನ್ನ ಅಣ್ಣ ಲಕ್ಷ್ಮಣನು ನನಗೆ ಈ ವಿಷಯವನ್ನು ನಮ್ಮ ಮನೆಗೆ ಬಂದು ತಿಳಿಸಿದ್ದು, ಕೂಡಲೇ ನಾನು ಮತ್ತು ನನ್ನ ಅಣ್ಣ ಲಕ್ಷ್ಮಣ ಹಾಗೂ ನನ್ನ ಅಕ್ಕ ನರಸಮ್ಮಳ ಮಗನಾದ ಅಳಿಯ ನಾಗರಾಜ ರವರು ಕೊಡೇಕಲ್ಕ್ಕೆ ಬಂದು ಸಂತೆಯಲ್ಲಿ ಹಾಗೂ ಇತರೆ ಕಡೆಗೆ ಹುಡುಕಾಡಿದ್ದು ನನ್ನ ಹೆಂಡತಿಯು ಸಿಗಲಿಲ್ಲಾ. ನಂತರ ನಾನು ತುಮಕೂರಿನಲ್ಲಿರುವ ನನ್ನ ಹೆಂಡತಿಯ ತಾಯಿಯಾದ ಹುಲಿಗೆಮ್ಮ, ಅಳಿಯನಾದ ಯಮನೂರಪ್ಪ ಹಾಗೂ ನನ್ನ ಅಣ್ಣ ಲಕ್ಷ್ಮಣನ ಹೆಂಡತಿಯಾದ ಅಂಬಿಕಾ ರವರಿಗೆ ನನ್ನ ಹೆಂಡತಿಯು ಕಾಣೆಯಾದ ಬಗ್ಗೆ ಫೋನ್ ಮಾಡಿ ತಿಳಿಸಿದ್ದು ಇವರೆಲ್ಲರೂ ದಿನಾಂಕ:25/05/2022 ರಂದು ಬುಧವಾರ ದಿವಸ ನಮ್ಮೂರಿಗೆ ಬಂದಿದ್ದು, ನಂತರ ನಾನು ನನ್ನ ಅಣ್ಣ ಲಕ್ಷ್ಮಣ ಹಾಗೂ ಅಳಿಯಂದಿರಾದ ಯಮನೂರಪ್ಪ, ನಾಗರಾಜ ರವರು ಕೂಡಿ ಅಂದಿನಿಂದ ಇಂದಿನವರೆಗೆ ತುಮಕೂರು, ಲಿಂಗಸ್ಗೂರು, ಮುದ್ದೇಬಿಹಾಳ, ಸುರಪೂರ, ಹುಣಸಗಿ, ಕೊಡೇಕಲ್, ತಾಳಿಕೋಟಿ, ನಾಲತ್ವಾಡ, ನಾರಾಯಣಪೂರ, ಕಕ್ಕೇರಾ, ಕುಷ್ಟಗಿ, ಗಂಗಾವತಿ ಹಾಗೂ ಇತರೆ ಕಡೆಗಳಿಗೆ ಹೋಗಿ ಹುಡುಕಾಡಿದ್ದು ಮತ್ತು ನಮ್ಮ ಸಂಬಂಧಿಕರುಗಳಿಗೆ ಫೋನ್ ಮಾಡಿ ವಿಚಾರಿಸಿದ್ದು ನನ್ನ ಹೆಂಡತಿಯು ಇಂದಿನವರೆಗೂ ಸಿಕ್ಕಿರುವುದಿಲ್ಲಾ. ನನ್ನ ಹೆಂಡತಿ ಮಹಾದೇವಿ ಗಂಡ ವಿರುಪಾಕ್ಷಿ ಮದ್ಲಿ ವ:26 ವರ್ಷ, ಉ:ಕೂಲಿಕೆಲಸ ಇವರು ದಿನಾಂಕ:24/05/2022 ರಂದು ಕೊಡೇಕಲ್ಕ್ಕೆ ಸಂತೆಗೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ನನ್ನ ಮುಂದೆ ಹೇಳಿ ಹೋದವಳು ಕೊಡೇಕಲ್ಕ್ಕೆ ಹೋಗಿ ಕೊಡೇಕಲ್ದಿಂದ ಕಾಣೆಯಾಗಿದ್ದು, ನನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡಬೇಕು ನನ್ನ ಹೆಂಡತಿಯು ಸಧೃಡ ಮೈಕಟ್ಟು, ಕಪ್ಪು ಬಣ್ಣ, ಉದ್ದನೆಯ ಮೂಗು, ದುಂಡ ಮುಖ ಹೊಂದಿದ್ದು, ತಲೆಯ ಮೇಲೆ ಕಪ್ಪು ಬಣ್ಣದ ಕೂದಲು ಹಾಗೂ ಹಣೆಯ ಮೇಲೆ ಹಣಚಿ ಬಟ್ಟ ಹಾಕಿದ ಗುರುತು ಇದ್ದು, ಸುಮಾರು 5 ಫೀಟ್ ಎತ್ತರ ಇದ್ದು, ಹಸಿರು ಬಣ್ಣದ ಪತ್ತಲ, ಹಸೀರು ಬಣ್ಣದ ಜಂಪರ ಧರಿಸಿದ್ದು. ಕನ್ನಡ, ತೆಲಗು, ಭಾಷೆ ಮಾತನಾಡುತ್ತಿದ್ದು, ಕನ್ನಡ, ಹಿಂದಿ, ಇಂಗ್ಲಿಷ ಭಾಷೆ ಬರೆಯಲು ಒದಲು ಬರುತ್ತಿದ್ದು ನನ್ನ ಹೆಂಡತಿಯು 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ನಾವು ಇಲ್ಲಿಯವರೆಗೂ ಹುಡುಕಾಡಿದರೂ ನನ್ನ ಹೆಂಡತಿ ಮಹಾದೇವಿ ಗಂಡ ವಿರುಪಾಕ್ಷಿ ಮದ್ಲಿ ವ:26 ವರ್ಷ, ಉ:ಕೂಲಿಕೆಲಸ ಇವಳು ಸಿಕ್ಕಿರುವುದಿಲ್ಲ. ನನ್ನ ಹೆಂಡತಿ ಕಾಣೆಯಾಗಿದ್ದು ಅವಳಿಗೆೆ ಪತ್ತೆ ಮಾಡಿಕೊಡಬೇಕು ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:43/2022 ಕಲಂ: ಮಹಿಳೆ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 17/2022 ಕಲಂ: 107 ಸಿ.ಆರ್.ಪಿ.ಸಿ: ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಮನೋಹರ್ ಎ.ಎಸ್.ಐ. ಶೋರಾಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಬರೆದುಕೊಡುವುದೇನೆಂದರೆ, ಇಂದು ದಿನಾಂಕ: 29/05/2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಠಾಣೆಯ ಸಿಬ್ಬಂದಿಯಾದ ಶ್ರೀ ಶೀವರಾಜ ಹೆಚ್.ಸಿ-05 ರವರನ್ನು ಸಂಗಡ ಕರೆದುಕೊಂಡು ರಂಗಂಪೇಠ ನಗರದಲ್ಲಿ 11-30 ಎ.ಎಂ ಕ್ಕೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ತಿಳಿದು ಬಂದ ಮಾಹಿತಿ ಏನೆಂದರೆ ರಂಗಂಪೇಠ ಏರಿಯಾದ ಮುಸ್ಲಿಂ ಜನಾಂಗದವರಾದ ಮಹ್ಮದ್ ಚಾಂದ ತಂದೆ ಮಹ್ಮದ್ ಮೈನೋದ್ದೀನ್ ಶೇರಬೈ ಮತ್ತು ಕರೀಂಸಾಬ ತಂದೆ ಕಮತರ ಹುಸೇನ್ ಶೇರಬೈ ಇವರು ಶರಕಿ ಮೋಹಲ್ಲಾದ ಮಟನ್ ಮಾಕರ್ೇಟ ಹತ್ತಿರ ಇರುವ ಆಸ್ತಿ ನಂ. (ಕಟ್ಟಿದ ಮನೆ) 15-2-29:15-2-24 ಹಾಗೂ 15-2-16:15-2-14 ಅಳತೆಯ ಕಟ್ಟಿದ ಮನೆಯ ವಿಷಯದಲ್ಲಿ ವೈಶಮ್ಯ ಬೆಳಸಿಕೊಂಡು ಒಬ್ಬರಿಗೊಬ್ಬರು ಗುಂಪು ಕಟ್ಟಿಕೊಂಡು, ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೋಡೆ ಬಿಡೋಣ ಅಂತಾ ಏರಿಯಾದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು, ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮರಳಿ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 17/2022 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಎದುರುದಾರರನ್ನು ಕರೆಯಿಸಿ ಗ್ರಾಮದಲ್ಲಿ ಯಾವುದೆ ರೀತಿ ಕಿರಿ ಕಿರಿ ತೊಂದರೆ ಮಾಡಿಕೊಳ್ಳದಂತೆ ಹೊಡೆದಾಟ ಬಡೆದಾಟ ಮಾಡಿಕೊಳ್ಳದಂತೆ ಶಾಂತತೆಯಿಂದ ಇರುವಂತೆ ಅವರಿಂದ ಕಲಂ: 116 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಇಂಟೇರಿಯಮ್ ಬಾಂಡ ಬರೆಯಿಸಿಕೊಳ್ಳಲು ವಿನಂತಿ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ: 107 ಸಿ.ಆರ್.ಪಿ.ಸಿ: ಮಾನ್ಯರವರ ಬಳಿಗೆ ಈ ಮೂಲಕ ನಿವೇದಿಸಿಕೊಳ್ಳುವುದೆನೆಂದರೆ, ನಾನು ಮನೋಹರ್ ಎ.ಎಸ್.ಐ. ಶೋರಾಪೂರ ಪೊಲೀಸ ಠಾಣೆ ಆದ ನಾನು ಸರಕಾರಿ ತಪರ್ೆ ಫಿರ್ಯಾದಿ ಬರೆದುಕೊಡುವುದೇನೆಂದರೆ, ಇಂದು ದಿನಾಂಕ: 29/05/2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಠಾಣೆಯ ಸಿಬ್ಬಂದಿಯಾದ ಶ್ರೀ ಶೀವರಾಜ ಹೆಚ್.ಸಿ-05 ರವರನ್ನು ಸಂಗಡ ಕರೆದುಕೊಂಡು ರಂಗಂಪೇಠ ನಗರದಲ್ಲಿ 11-30 ಎ.ಎಂ ಕ್ಕೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ತಿಳಿದು ಬಂದ ಮಾಹಿತಿ ಏನೆಂದರೆ ರಂಗಂಪೇಠ ಏರಿಯಾದ ಮುಸ್ಲಿಂ ಜನಾಂಗದವರಾದ ಕರೀಂಸಾಬ ತಂದೆ ಕಮತರ ಹುಸೇನ್ ಶೇರಬೈ ಮತ್ತು ಮಹ್ಮದ್ ಚಾಂದ ತಂದೆ ಮಹ್ಮದ್ ಮೈನೋದ್ದೀನ್ ಶೇರಬೈ ಇವರು ಶರಕಿ ಮೋಹಲ್ಲಾದ ಮಟನ್ ಮಾಕರ್ೇಟ ಹತ್ತಿರ ಇರುವ ಆಸ್ತಿ ನಂ. (ಕಟ್ಟಿದ ಮನೆ) 15-2-29:15-2-24 ಹಾಗೂ 15-2-16:15-2-14 ಅಳತೆಯ ಕಟ್ಟಿದ ಮನೆಯ ವಿಷಯದಲ್ಲಿ ವೈಶಮ್ಯ ಬೆಳಸಿಕೊಂಡು ಒಬ್ಬರಿಗೊಬ್ಬರು ಗುಂಪು ಕಟ್ಟಿಕೊಂಡು, ಎರಡು ಪಾಟರ್ಿಯವರು ತಮ್ಮ ತಮ್ಮಲ್ಲಿ ವೈಮನಸ್ಸು ಮಾಡಿಕೊಂಡು ಒಂದು ಕೈ ನೋಡೆ ಬಿಡೋಣ ಅಂತಾ ಏರಿಯಾದಲ್ಲಿ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದು, ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮರಳಿ ಠಾಣೆಗೆ ಬಂದು ಮುಂಜಾಗ್ರತಾ ಕ್ರಮವಾಗಿ ಸದರಿಯವರ ವಿರುದ್ಧ ಠಾಣಾ ಪಿ.ಎ.ಆರ್ ನಂಬರ 18/2022 ಕಲಂ:107 ಸಿಆರ್ಪಿಸಿ ನೇದ್ದರಂತೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಎದುರುದಾರರನ್ನು ಕರೆಯಿಸಿ ಗ್ರಾಮದಲ್ಲಿ ಯಾವುದೆ ರೀತಿ ಕಿರಿ ಕಿರಿ ತೊಂದರೆ ಮಾಡಿಕೊಳ್ಳದಂತೆ ಹೊಡೆದಾಟ ಬಡೆದಾಟ ಮಾಡಿಕೊಳ್ಳದಂತೆ ಶಾಂತತೆಯಿಂದ ಇರುವಂತೆ ಅವರಿಂದ ಕಲಂ: 116 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಇಂಟೇರಿಯಮ್ ಬಾಂಡ ಬರೆಯಿಸಿಕೊಳ್ಳಲು ವಿನಂತಿ.

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 81/2022, ಕಲಂ, 341, 323, 354, 504.506. ಸಂಗಡ 34 ಐ ಪಿ ಸಿ: 29-05-2022 ರಂದು ಸಾಯಂಕಾಲ 06-00 ಗಂಟೆಗೆ ಠಾಣೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 25-05-2022 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲ ಸವರ್ೆ ನಂ. 294 ರಲ್ಲಿ ನಾನು ದುಟ್ಟು ಕೊಟ್ಟು ಬೆರೆಯವರ ಕಡೆಯಿಂದ ಹೊಲ ಸಾಗುವಳಿ ಮಾಡಿಸುತ್ತಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಬಂದು ಲೆ ಸುಳೆ ಮಗಳೆ ಯಾಕೆ ಹೊಲ ಸಾಗುವಳಿ ಮಾಡುತಿ ಅಂತಾ ಸಾಗುವಳಿ ಮಾಡುವದನ್ನು ಅಡ್ಡಿ ಪಡಿಸಿ ಹೊಲದ ತಂಟೆಗೆ ಬಂದರೆ ನಿನಗೆ ಖಲಾಸ ಮಾಡುತ್ತೇವೆ ಅಂತಾ ಬೇದರಿಕೆ ಕೈಯಿಂದ ಹೊಡೆ ಬಡೆಮಾಡಿ ಜೀವದ ಬೇದರಿಕೆ ಹಾಕಿ ಹೊಲದಿಂದ ಹೊರಗೆ ನಡಿ ಅಂತಾ ದಬ್ಬಿ ಸೀರೆ ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 82/2022, ಕಲಂ, 323,324,504.506. ಐ ಪಿ ಸಿ: ಇಂದು ದಿನಾಂಕ: 29/05/2022 ರಂದು 06:00 ಪಿ.ಎಮ್ ಸುಮಾರಿಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ ವಸೂಲಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಗಾಯಾಳುದಾರನಾದ ಶ್ರೀ ಚನ್ನಪ್ಪ ತಂದೆ ಹಣಮಂತ ಪರದೇಶಿನವರು ವಯ:-52 ಉ:ಒಕ್ಕಲತನ ಜಾತಿ: ಕಬ್ಬಲಿಗ ಸಾ: ಬಂದಳ್ಳಿ ತಾ:ಜಿ:ಯಾದಗಿರಿ ರವರ ನೀಡಿದ ದೂರು ಹೇಳಿಕೆಯ ಸಾರಂಶವೆನೆಂದರೆ, ನನಗೆ ಇಬ್ಬರು ಗಂಡ ಮಕ್ಕಳಿದ್ದು ನಾನು ಮತ್ತು ನನ್ನ ಮಕ್ಕಳಿಬ್ಬರು ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದು ನಮ್ಮ ಹನುಮಾನ ಗುಡಿ ಹೊಲದಲ್ಲಿಯೇ ದಿನಾಲು ಎತ್ತುಗಳನ್ನು ಮೇಯಿಸಿ ಅಲ್ಲಿಯೇ ಕಟ್ಟಿ ಮನೆಗೆ ಬಂದು ರಾತ್ರಿ ಮತ್ತೆ ಹೊಲಕ್ಕೆ ಹೋಗುತ್ತಿದ್ದೆ ಅದರಂತೆ ಇಂದು ದಿನಾಂಕ 28-05-2022 ರಂದು ಮುಂಜಾನೆಯಿಂದ ಸಾಯಂಕಾಲದವರಿಗೆ ಎತ್ತುಗಳನ್ನು ಮೇಯಿಸಿ ಹೊಲದಲ್ಲಿ ಕಟ್ಟಿ ಮನೆಗೆ ಬಂದಿರುತ್ತೇನೆ. ರಾತ್ರಿ 09:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಜೊತೆ ನಮ್ಮ ಹೊಲದ ಪಕ್ಕದವರಾದ ದೇವಪ್ಪ ತಂದೆ ಸಣ್ಣಸಾಬಣ್ಣ ಕೊಂಡನೋರ ಜಾತಿ:ಕಬ್ಬಲಿಗ ಸಾ: ಬಂದಳ್ಳಿ ಇಬ್ಬರು ಕುಡಿದಿದ್ದು ಕುಡಿದ ನಶೆಯಲ್ಲಿ ನನಗೆ ಇತನು ಲೇ ಮಗನೇ ನಿನು ನಿಮ್ಮ ಅಣ್ಣತಮ್ಮಂದಿರ ಹೊಲ ತಿನ್ನುತಿ ಅಲ್ಲಲೇ ನಾಚಿಕೆ ಆಗಲ್ಲಾ ನಿನಗೆ ಅಂತ ಹೇಳಿದಕ್ಕೆ ನಾನು ಅದಕ್ಕೆ ಅವನಿಗೆ ನಿನ್ನಂಗ ಇನ್ನೊಬರು ಹೊಲ ಮಾರಿ ದುಡ್ಡು ತಿನ್ನಲ್ಲ ಅಂತ ಹೇಳಿದಕ್ಕೆ ರಂಡಿ ಮಗನೇ ಇವತ್ತು ಹೊಲಕ್ಕೆ ಬಾ ಲೇ ಅಂತ ಹೇಳಿ ಹೋದನು ನಾನು ಮನೆಯಲ್ಲಿ ಊಟ ಮಾಡಿ ನನ್ನ ಮಗನಾದ ಮಲ್ಲಪ್ಪ ತಂದೆ ಚನ್ನಪ್ಪ ಪರದೇಶಿ ಇತನನ್ನು ಕರೆದುಕೊಂಡು ರಾತ್ರಿ 11:30 ಗಂಟೆಗೆ ಗುಡಿ ಹೊಲಕ್ಕೆ ಹೋದೆವು ನಮ ಹೊಲದಲ್ಲಿ ಎತ್ತುಗಳಿಗೆ ಸೊಪ್ಪೆ ಹಾಕಿ ಮಲಗೋಣ ಅಂತ ಅಂದಾಗ ನಮ್ಮ ಶಬ್ದ ಕೇಳಿ ಒಮ್ಮಲೇ ದೇವಪ್ಪ ಇತನು ಲೇ ಚನ್ನಾ ಸೂಳೇ ಮಗನೇ ರಂಡಿ ಮಗನೇ ಅಂತ ತನ್ನ ಕೈಯಲ್ಲಿ ಇದ್ದ ಕೊಡಲಿಯಿಂದ ಹೊಡೆದಿದ್ದರಿಂದ ಎಡಭಾಗದ ತಲೆಗೆ ಭಾರಿ ರಕ್ತಗಾಯ, ಎಡಭಾಗ ಕಪಾಳಕ್ಕೆ ಗುಪ್ತಗಾಯ, ಎಡಕೈನ ರಟ್ಟಿಗೆ ಗುಪ್ತಗಾಯಗಳಾಗಿರುತ್ತವೆ. ಆಗ ನನ್ನ ಜೊತೆಯಲ್ಲಿ ಇದ್ದ ನನ್ನ ಮಗ ಮಲ್ಲಪ್ಪ ಮತ್ತು ದೇವಪ್ಪನ ಜೊತೆಗೆ ಬಂದಿದ್ದ ಸಾಬಣ್ಣ ತಂದೆ ಸಾಬಣ್ಣ ಕಟಗಿ ಶಹಾಪುರದವರ ಸಾ: ಬಂದಳ್ಳಿ ಇವರಿಬ್ಬರು ಆತನ ಕೈಯಿಂದ ಕೊಡಲಿಯನ್ನು ಕಸಿದುಕೊಂಡು ಜಗಳ ಬಿಡಿಸಿದ್ದು ಆಗ ದೇವಪ್ಪ ಇತನು ಬಿಡ್ರಲೇ ಇವನನ್ನ ಇವತ್ತು ಖಲಾಸ ಮಾಡಬೇಕು ಅಂತ ಜೀವ ಬೆದರಿಕೆ ಹಾಕಿದ್ದು ಇತನನ್ನು ಸಾಬಣ್ಣ ಕರೆದುಕೊಂಡು ಹೋದನು ಆಗ ನಮಗೆ ಯಾವುದೆ ವಾಹನ ಸೌಲಭ್ಯ ಇಲ್ಲದ ಕಾರಣ ನಮ್ಮ ಊರಿಗೆ ಹೋಗಲು ಆಗದೆ ಯಾದಗಿರಿ ಆಸ್ಪತ್ರೆಗೆ ಹೋಗದೆ ಕತ್ತಲಾದ ಕಾರಣ ರಾತ್ರಿ ಹೊಲದಲ್ಲಿಯೇ ಮಲಗಿಕೊಂಡೇವು ಮರುದಿವಸ ಮುಂಜಾನೆ 6:00 ಗಂಟೆಗೆ ಎದ್ದು ನಮ್ಮ ಊರಿಗೆ ಹೋಗಿ ನಂತರ ನನ್ನ ತಮ್ಮನಾದ ಧರ್ಮಣ್ಣ ತಂದೆ ಹಣಮಂತ ಪರದೇಶಿ ಇತನಿಗೆ ನಡೆದಿರುವ ಘಟನೆ ಬಗ್ಗೆ ತಿಳಿಸಿ ನನ್ನ ಮಗ ಮತ್ತು ನನ್ನ ತಮ್ಮ ಸೇರಿ ಮುಂಜಾನೆ 11:00 ಗಂಟೆಯ ಸುಮಾರಿಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗ ಬಂದು ಚಿಕಿತ್ಸೆಗಾಗಿ ತಂದು ಸೇರಿಕೆ ಮಾಡಿರುತ್ತಾರೆ. ನನ್ನ ಮೇಲೆ ಕೊಡಲಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ದೇವಪ್ಪ ತಂದೆ ಸಣ್ಣಸಾಬಣ್ಣ ಕೊಂಡನೋರ ಸಾ: ಬಂದಳ್ಳಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಲ್ಯಾಪಟ್ಯಾಪನಲ್ಲಿ ಹೇಳಿ ಟೈಪ್ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ದೂರು ಹೇಳಿಕೆ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ:82/2022 ಕಲಂ 323, 324, 504, 506, ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 90/2022 ಕಲಂ: 286, 338 ಐಪಿಸಿ ಮತ್ತು ಕಲಂ: 25 ಆಮ್ಸರ್್ ಆಕ್ಟ್: ದಿನಾಂಕ 26.05.2022 ರಂದು ರಾತ್ರಿ 9:00 ಗಂಟೆಯ ಸುಮಾರಿಗ ಗಾಯಾಳು ಮನೆಯಲ್ಲಿ ಊಟ ಮಾಡಿದ ನಂತರ ತಮ್ಮ ಬೋರಿಂಗ ಹೊಲಕ್ಕೆ ಹೋಗಿರುತ್ತಾನೆ. ಅದೇ ರೀತಿ ಆರೋಪತನು ಯಾವುದೇ ಲೈಸನ್ಸ ಇಲ್ಲದೇ ಇರುವ ಬಂದೂಕಿಗೆ ಮದ್ದನ್ನು ತುಂಬಿಕೊಂಡು ಗಾಯಾಳುವಿನ ಪಕ್ಕದ ಹೊಲದಲ್ಲಿರುವ ತನ್ನ ಹೊಲಕ್ಕೆ ಬಂದಿರುತ್ತಾನೆ. ಗಾಯಾಳು ಮತ್ತು ಆರೋಪಿತ ಇಬ್ಬರು ರಾತ್ರಿ 11:00 ಗಂಟೆಯ ವರೆಗೆ ಎಚ್ಚರದಿಂದ ಇದ್ದು ನಂತರ ಇಬ್ಬರು ಆರೋಪಿತನ ಹೊಲದಲ್ಲಿ ಮಲಗಿರುತ್ತಾರೆ. ದಿನಾಂಕ 27.05.2022 ರ 04:00 ಗಂಟೆಯ ಸುಮಾರಿಗೆ ಆರೋಪಿತನ ಹತ್ತಿರ ಇದ್ದ ಯಾವುದೇ ಪರವಾನಿಗೆ ಇಲ್ಲದೇ ಇರುವ ಬಂದುಕಿಗೆ ಆರೋಪಿತನ ಕೈ ತಾಗಿದ್ದರಿಂದ ಫಯರ್ ಆಗಿ ಗಾಯಾಳುವಿನ ಬಲ ಪಕ್ಕೆಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿರುತ್ತದೆ. ಆ ನಂತರ ಗಾಯಳು ತನ್ನ ತಮ್ಮನಾದ ರಡ್ಡಿ ಎಂಬಾತನಿಗೆ ಫೋನ್ ಮಾಡಿ ವಿಷಯ ತಿಳಿಸಿ ಆತನೊಂದಿಗೆ ಚಿಕಿತ್ಸೆ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದು ರಡ್ಡಿಯಿಂದ ವಿಷಯ ತಿಳಿದ ಕೂಡಲೆ ಗಾಯಳುವಿನಲ್ಲಿಗೆ ಹೋದ ಫೀರ್ಯಾದಿಯು ಗಾಯಾಳು ತನ್ನ ಗಂಡನಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದುಕಂಡು ಇಂದು 29.05.2022 ರಂದು ಖುದ್ದಾಗಿ ಠಾಣೆಗೆ ಬಂದು ಆರೋಪಿತನು ತನ್ನಲ್ಲಿಯ ಯಾವುದೇ ಲೈಸನ್ಸ್ ಇಲ್ಲದೇ ಇರುವ ಬಂದೂಕಿಗೆ ಆತನ ಅಜಾಗರುಕತೆಯಿಂದ ಕೈ ತಗಲಿ ಫಯರ್ ಆಗಿದ್ದರಿಂದ ತನ್ನ ಗಂಡನಿಗೆ ಭಾರಿ ಸ್ವರೂಪದ ರಕ್ತಗಾಯವಾಗಿದ್ದು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಸಲ್ಲಿಸಿದ ಗಣಕೀಕೃತ ದೂರು ಅಜರ್ಿಯ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 90/2022 ಕಲಂ: 286, 338 ಐಪಿಸಿ ಮತ್ತು ಕಲಂ: 25 ಆಮ್ಸರ್್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 30-05-2022 11:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080