ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30-06-2021

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ ; 46/2021 279, 304(ಎ) ಐಪಿಸಿ : ದಿನಾಂಕ:29/06/2021 ರಂದು ರಾತ್ರಿ 01.00 ಎ.ಎಮ್ ಸುಮಾರಿಗೆ ಮೃತ ಅಯ್ಯಣ್ಣ @ ಅಯ್ಯನಗೌಡ ತಂದೆ ಅಶ್ವತ್ಥಾಮಗೌಡ ಪೊಲೀಸ್ ಪಾಟೀಲ ವಯಾ-25 ಜಾ:ಕುರುಬರ ಉ:ಡ್ರೈವರ್ ಕೆಲಸ ಸಾ:ಹುಣಸಿಹೊಳೆ ತಾ:ಸುರಪೂರ ಜಿ:ಯಾದಗಿರಿ ಈತನು ತಾನು ಚಲಾಯಿಸುವ ಭಾರತ ಬೆಂಜ್ ಟ್ಯಾಂಕರ್ ವಾಹನ ನಂ:ಕೆಎ-36 ಬಿ-3949 ನೇದ್ದರಲ್ಲಿ ಬೂದಿ ತುಂಬಿಕೊಂಡು ರಾಯಚೂರಿನ ಶಕ್ತಿನಗರದಿಂದ ಮಹಾರಾಷ್ಟ್ರದ ಹೊಟಗಿ ಗ್ರಾಮಕ್ಕೆ ಹೊರಟಿದ್ದು, ಹುಣಸಗಿ ದಾಟಿದ ಮೇಲೆ ಅರಕೇರಾ(ಜೆ) ಸೀಮಾಂತರದ ಹುಣಸಗಿ-ಕೆಂಭಾವಿ ರೋಡಿನ ಮೇಲೆ ರೋಡಿನ ಇಳಿಜಾರಿನಲ್ಲಿ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಎಡಗಡೆ ಟ್ಯಾಂಕರ ವಾಹನ ಪಲ್ಟಿಯಾಗಿದ್ದು, ಮೃತನು ಸದರಿ ಟ್ಯಾಂಕರ್ ವಾಹನದಲ್ಲಿ ಸಿಕ್ಕು ಎಡ ಕಿವಿ ಹತ್ತಿರ ತಲೆಗೆ & ಎದೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಪರಾಧ.


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 80/2021 ಕಲಂ: 279, 337, 338 ಐಪಿಸಿ : ಇಂದು ದಿನಾಂಕ: 29/06/2021 ರಂದು 12-30 ಪಿಎಮ್ ಕ್ಕೆ ಶ್ರೀಮತಿ ಭೀಮವ್ವ ಗಂಡ ಬಸವರಾಜ ಹೊಸಮನಿ ವ:55, ಜಾ:ಮಾದಿಗ (ಎಸ್.ಸಿ) ಉ:ಕೂಲಿ ಕೆಲಸ ಸಾ:ಖಾನಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 4 ಜನ ಗಂಡು ಮತ್ತು 4 ಜನ ಹೆಣ್ಣು ಮಕ್ಕಳಿರುತ್ತಾರೆ. ನನ್ನ 4 ನೇ ಮಗಳಾದ ತಾಯಮ್ಮಳಿಗೆ ಮದುವೆ ನಿಶ್ಚಯವಾಗಿದ್ದು, ನನ್ನ ಮಗಳ ಮದುವೆಗೆ ಬೇಕಾದ ಸಾಮಾನುಗಳನ್ನು ಖರಿದಿ ಮಾಡಿಕೊಂಡು ಬರುವ ಕುರಿತು ನಮ್ಮ ಅಣ್ಣತಮಕೀಯವರಾದ 1)ಲಕ್ಷ್ಮಣ ತಂದೆ ಹಣಮಂತ ಹೊಸಮನಿ ವ:35, 2) ಶಿವಮ್ಮ ಗಂಡ ಬಸವರಾಜ ಹೊಸಮನಿ ವ:50, 3) ಶೋಭಾ ಗಂಡ ತಿಮ್ಮಣ್ಣ ಮಳ್ಳಳ್ಳಿ ವ:25, 4) ಲಕ್ಷ್ಮೀ ಗಂಡ ಲಕ್ಷ್ಮಣ ಹೊಸಮನಿ ವ:30, 5) ಬಸಮ್ಮ ಗಂಡ ಅಜರ್ುನಪ್ಪ ಹಳಿಸಗರ ವ:45, 6) ಕು: ಹಣಮಂತಿ ತಂದೆ ಶರಣಪ್ಪ ಹೊಸಮನಿ ವ:3 ವರ್ಷ ಎಲ್ಲರೂ ಸಾ:ಖಾನಾಪೂರ ಎಲ್ಲರೂ ಸೇರಿಕೊಂಡು ನನ್ನ ಮಗಳ ಮದುವೆಯ ಸಾಮಾನುಗಳನ್ನು ತರಲು ದಿನಾಂಕ: 28/06/2021 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಮ್ಮೂರಿನ ತಾಯಪ್ಪ ತಂದೆ ಅಡಿವೆಪ್ಪ ಬಂಗಾಲಿ ಇತನ ಟಂ. ಟಂ ಅಟೋ ನಂ. ಕೆಎ 33 ಎ 8186 ನೆದ್ದರಲ್ಲಿ ಖಾನಾಪೂರದಿಂದ ಯಾದಗಿರಿಗೆ ಬಂದೆವು. ನನ್ನ ಮಗಳ ಮದುವೆಗೆ ಬೇಕಾದ ಎಲ್ಲಾ ಬಟ್ಟೆ ಬರೆ ಮತ್ತು ಹಾಂಡೆ ಬಾಂಡೆ ಸಾಮಾನುಗಳನ್ನು ಖರಿದಿ ಮಾಡಿಕೊಂಡು ನಾವು ತಂದ ಟಂ ಟಂ ನಲ್ಲಿ ಮರಳಿ ಸಾಯಂಕಾಲ 5 ಗಂಟೆ ಸುಮಾರಿಗೆ ಯಾದಗಿರಿಯಿಂದ ಖಾನಾಪೂರಕ್ಕೆ ಹೊರಟೆವು. ಯಾದಗಿರಿ-ಶಹಾಪೂರ ಮೇನ ರೋಡ ಖಾನಾಪೂರ ಗ್ರಾಮದ ಶ್ರೀ ಹನುಮಾನ ಗುಡಿಯ ಹತ್ತಿರ ಸಂಜೆ 5-30 ಗಂಟೆ ಸುಮಾರಿಗೆ ನಮ್ಮ ಪಾಡಿಗೆ ನಾವು ಹೋಗುತ್ತಿದ್ದಾಗ ನಮ್ಮ ಹಿಂದುಗಡೆಯಿಂದ ಕಾರ್ ನಂ. ಕೆಎ 28 ಪಿ 0318 ನೇದ್ದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ತಿರುವಿನಲ್ಲಿ ಒಮ್ಮೆಲೇ ಎಡಕ್ಕೆ ಕಟ್ ಹೊಡೆದು ನಮಗೆ ಸೈಡಿನಿಂದ ನಮ್ಮ ಟಂ ಟಂ ಗೆ ಡಿಕ್ಕಿಪಡಿಸಿ, ಕಾರನ್ನು ಒಮ್ಮಲೆ ಎಡಗಡೆ ತಿರುವಿದ್ದರಿಂದ ಅದರ ರಭಸಕ್ಕೆ ನಮ್ಮ ಟಂ ಟಂ ಉರುಳಿ ಬಿತ್ತು. ಕಾರಿನ ಚಾಲಕನು ಅಲ್ಲಿಯೇ ಸ್ವಲ್ಪ ಮುಂದೆ ಹೋಗಿ ಕಾರ ನಿಲ್ಲಿಸಿ, ಕೆಳಗೆ ಇಳಿದು ಬಂದನು. ಅವನಿಗೆ ಹೆಸರು ವಿಳಾಸ ಕೇಳಿದಾಗ ಆನಂದ ತಂದೆ ಜೆಟ್ಟೆಪ್ಪ ಟಣಕೆದಾರ ಸಾ:ಹುಲಕಲ್ (ಕೆ) ತಾ:ಶಹಾಪೂರ ಎಂದು ಹೇಳಿದನು. ಸದರಿ ಅಪಘಾತದಲ್ಲಿ ನನಗೆ ಗದ್ದಕ್ಕೆ ಭಾರಿ ಒಳಪೆಟ್ಟಾಗಿ ಬಾಯಿಯಲ್ಲಿನ 2-3 ಹಲ್ಲುಗಳು ಮುರಿದಿರುತ್ತವೆ. ಎಡ ಮೊಳಕಾಲ ಕೆಳಗೆ ತರಚಿದ ಗಾಯವಾಗಿರುತ್ತದೆ. ಟಂ ಟಂ ಡ್ರೈವರನಾದ ವೆಂಕಟೇಶ ತಂದೆ ಹಣಮಂತ ಈತನ ಪಕ್ಕ ಕುಳಿತಿದ್ದ ಲಕ್ಷ್ಮಣ ಇತನಿಗೆ ಬಲ ಮೊಳಕಾಲ ಕೆಳಗೆ ಭಾರಿ ಒಳಪೆಟ್ಟಾಗಿ ಮುರಿದಿರುತ್ತದೆ. ಮೂಗಿಗೆ ಹರಿದ ರಕ್ತಗಾಯ ಮತ್ತು ಹಣೆಗೆ ತರಚಿದ ಗಾಯವಾಗಿತ್ತು. ಬಸಮ್ಮಳಿಗೆ ಹಣೆಗೆ ತರಚಿದ ರಕ್ತ ಗಾಯ ಆಗಿರುತ್ತದೆ. ಶಿವಮ್ಮ ಇವಳಿಗೆ ಎದೆಗೆ, ಹಣೆಗೆ ಭಾರಿ ಒಳಪೆಟ್ಟು ಎಡಗಡೆ ಚಪ್ಪೆಗೆ ಮತ್ತು ಟೊಂಕಕ್ಕೆ ಬಲ ಬುಜಕ್ಕೆ ಭಾರಿ ಒಳಪೆಟ್ಟು ಆಗಿರುತ್ತದೆ. ಶೋಭಾ ಇವಳಿಗೆ ಬಾಯಿಗೆ ಒಳಪೆಟ್ಟಾಗಿ ಹಲ್ಲು ಮುರಿದಿರುತ್ತದೆ. ಬಲ ಮೊಳಕಾಲಿಗೆ ಒಳಪೆಟ್ಟಾಗಿರುತ್ತದೆ. ಲಕ್ಷ್ಮೀ ಇವಳಿಗೆ ಬಾಯಿಗೆ ಗುಪ್ತ ಪೆಟ್ಟಾಗಿರುತ್ತದೆ ಮತ್ತು ಕುಮಾರಿ ಹಣಮಂತಿ ಇವಳಿಗೆ ಎಡಗೈ ಬೆರಳುಗಳ ಸಂದಿಯಲ್ಲಿ ತರಚಿದ ಗಾಯವಾಗಿರುತ್ತವೆ. ಗಾಯಾಳುಗಳಾದ ನಮಗೆ ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಪಘಾತದಲ್ಲಿ ಕಾರ ಮತ್ತು ಟಂ ಟಂ ಎರಡು ಜಖಂ ಗೊಂಡಿರುತ್ತವೆ. ಕಾರಣ ಸದರಿ ಕಾರ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಟಂ ಟಂ ನಲ್ಲಿ ಹೊರಟ ನಮಗೆ ಡಿಕ್ಕಿಪಡಿಸಿ, ಭಾರಿ ರಕ್ತ ಮತ್ತು ಗುಪ್ತಗಾಯಗೊಳಿಸಿರುತ್ತಾನೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 80/2021 ಕಲಂ: 279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 104/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 29-06-2021 ರಂದು ಸಾಯಂಕಾಲ 05-30 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಕೂಡ್ಲೂರ ಗ್ರಾಮದ ಬಸಲಿಂಗಪ್ಪ ತಾತನ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 620=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.104/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 69/2021 ಕಲಂ: 323, 354, 504, 506 ಸಂ: 149 ಐಪಿಸಿ : ಇಂದು ದಿನಾಂಕ: 29/06/2021 ರಂದು 09.30 ಪಿಎಂ ಕ್ಕೆ ಶ್ರೀಮತಿ. ಪದ್ಮಾವತಿ ಗಂಡ ಬಸವರಾಜ ಹುಣಿಸಿಗಿಡ ವಯ|| 42 ಜಾ: ಬೇಡರ ಉ|| ಮನೆಗೆಲಸ & ಕಿರಾಣಿ ಅಂಗಡಿ ವ್ಯಾಪಾರ ಸಾ|| ವನದುರ್ಗ ತಾ: ಶಹಾಪೂರ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದರ ಸಾರಂಶ ಏನಂದರೆ, ನಾನು ದಿನಾಂಕ: 27/06/2021 ರಂದು ಸಂಜೆ 06.15 ಪಿ.ಎಮ್ ಸುಮಾರಿಗೆ ನಮ್ಮ ಅಂಗಡಿಯಲ್ಲಿ ಇದ್ದಾಗ 1) ವಿಶ್ವರಾಧ್ಯ ತಂದೆ ತಿರುಪತಿ ಮುನಮುಟಗಿ 2) ರಾಮುನಾಯಕ ತಂದೆ ಹುಮ್ಮಣ್ಣದೋರಿ ಮುನಮುಟಗಿ 3) ಅಜಿತ ತಂದೆ ತಿರುಪತಿ ಮುನಮುಟಗಿ ಎಲ್ಲರೂ ಸಾ: ವನದುಗರ್ಾ ಇವರುಗಳು ಕುಡಿದು ಬಂದ ಗುಟಕಾ ಚೀಟ ಕೇಳಿದರು ಆಗ ನಾನು ಗುಟಕಾ ಕೊಟ್ಟು ಹಣ ಕೊಡಲು ಕೇಳಿದಾಗ ಸದರಿ ಮೂರು ಜನರು ನಿನಗೆ ಎಷ್ಟು ಬೇಕು ಸೂಳಿ ನೀನು ಬೇಡಿದಷ್ಟು ಕೊಡತಿನಿ ಬಾ ನನ್ನ ಜೋತೆಗೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕ ನಿಮ್ಮ ಮನೆಯಲ್ಲಿ ಅಕ್ಕ ತಂಗಿಯರು ಇಲ್ಲ ಏನು ಅವರ ಜೋತೆ ಹೋಗು ಅಂದಿದ್ದಕ್ಕೆ ಅಜಿತ ತಂದೆ ತಿರುಪತಿ ಮುನಮುಟಗಿ ಸಾ: ವನದುಗರ್ಾ ಈತನು ನನ್ನ ಕೈ ಹಿಡಿದು ಎಳೆದು ರಂಡಿ ನಿಂದು ಸೋಕ್ಕು ಬಹಳ ಆಗಿದೆ ನಿನಗೆ ಎತ್ತಿ ಹಾಕಿಕೊಂಡು ಹೋಗುತ್ತೇನೆ ಅಂತಾ ಅಂದು ನನ್ನ ಬೆನ್ನಿಗೆ ಕೈಯಿಂದ ಹೊಡೆದು ಅವಾಚ್ಯವಾಗಿ ಬೈಯತೊಡಗಿದನು, ಆಗ ಮಾಲಾಶ್ರೀ ಗಂಡ ಭಾಗಪ್ಪ ಹುಣಸಿಗಿಡ ಇವಳು ಬಿಡಿಸಲು ಬಂದಾಗ ರಾಮುನಾಯಕ ತಂದೆ ಹುಮ್ಮಣ್ಣದೋರಿ ಈತನು ಅವಳಿಗೂ ಕೂಡ ಕುತ್ತಗಿ ಹಿಡಿದು ದಬ್ಬಿ ಅವಾಚ್ಯವಾಗಿ ಬೈತೊಡಗಿದನು. ಅಷ್ರಲ್ಲಿ ನನ್ನ ಗಂಡನಾದ ಬಸವರಾಜ ತಂದೆ ಹಣಮಂತ್ರಾಯ ಹುಣಸಿಗಿಡ, ನಮ್ಮ ಮೈದುನನಾದ ಮಾನಪ್ಪ ತಂದೆ ಭೀಮಣ್ಣ ಹುಣಸಿಗಿಡ, ನಮ್ಮ ಸಂಬಂದಿಕರಾದ ಭೀಮರಾಯ ತಂದೆ ಗೋವಿಂದಪ್ಪ ನಗಾರಿ ಇವರುಗಳು ಬಂದು ಹೇಣ್ಣು ಮಕ್ಕಳ ಜೋತೆ ಜಗಳ ಮಾಡಲು ನಿಮಗ ನಾಚಿಕೆ ಬರುವದಿಲ್ಲ ಏನು, ನಿಮ್ಮ ಮನೆಯಲ್ಲಿ ಅಕ್ಕ ತಂಗಿಯರು ಇಲ್ಲ ಏನು ಅಂದಾಗ ವಿಶ್ವರಾಧ್ಯ ತಂದೆ ತಿರುಪತಿ ಮುನಮುಟಗಿ ಈತನು ನನ್ನ ಗಂಡನಿಗೆ ಬೋಸಡಿ ಮಗನೆ ನೀ ಗಂಡಸ ಇದ್ದರ ಬಾರಲೆ ನೋಡೋಣ ಅಂತಾ ಅವಾಚ್ಯವಾಗಿ ಬೈಯತೊಡಗಿದನು, ಆಗ 4) ಅಶೋಕನಾಯಕ ತಂದೆ ತಿರುಪತಿ ಮುನಮುಟಗಿ, 5) ಸುಧಾಕರ ತಂದೆ ಫಿಡ್ಡನಾಯಕ ಮುನಮುಟಗಿ, 6) ವೆಂಕಟಪ್ಪನಾಯಕ ತಂದೆ ಮಾದಪ್ಪನಾಯಕ ಮುನಮುಟಗಿ 7) ಶ್ರೀರಾಮನಾಯಕ ತಂದೆ ಮಾದಪ್ಪನಾಯಕ ಮುನಮುಟಗಿ 8) ಅನೀಲ ತಂದೆ ತಿರುಪತಿ ಮುನಮುಟಗಿ ಎಲ್ಲರು ಜಾ: ಬೇಡರ ಸಾ: ವನದುಗರ್ಾ ಕೂಡಿ ಬಂದು ಎಲ್ಲರೂ ಕೂಡಿ ಬಂದು ಮಕ್ಕಳೆ ಇವತ್ತು ಏನಾದರೂ ಆಗಲಿ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಹೊಡೆಯಲು ಬಂದಾಗ ಮಾನಪ್ಪ ತಂದೆ ಭಿಮಣ್ಣ, ಭಿಮರಾಯ ತಂದೆ ಗೋವಿಂದಪ್ಪ ಇವರುಗಳು ಬಿಡಿಸಿಕೊಳ್ಳಲು ಅಡ್ಡ ಬಂದಿದ್ದು ಅವರಿಗೆ ಇಬ್ಬರೀಗೂ ಎಲ್ಲರೂ ಕೈಯಿಂದ ಹೊಡೆದಿರುತ್ತಾರೆ. ಆಗ ಯಂಕೋಬಾ ತಂದೆ ನಿರಂಜಪ್ಪ ಹುಣಸಿಗಿಡ, ದ್ಯಾವಣ್ಣ ತಂದೆ ಭಾಗಣ್ಣ ಗೆಜ್ಜಿ, ಮಹಾದೇವಪ್ಪ ತಂದೆ ಲಕ್ಷ್ಮಣ ಸಾ: ಎಲ್ಲರೂ ವನದುಗರ್ಾ ಇವರುಗಳು ಬಿಡಿಸಿಕೊಂಡರೂ, ಆಗ ಮೇಲಿನ 8 ಜನರು ಮಕ್ಕಳೆ ಇನ್ನೊಮ್ಮೆ ನಮಗೆ ಎದರು ಮಾತಾಡಿದರೆ ನಿಮಗೆ ಒಬ್ಬೋಬ್ಬರಿಗೆ ಖಡದು ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ದಿನಾಂಕ: 29/06/2021 ರಂದು ಠಾಣೆಗೆ ಬಂದು ಈ ಅಜರ್ಿ ನೀಡಿರುತ್ತೇನೆ. ನಾನು ಗುಟಕಾದ ಹಣ ಕೇಳಿದರೆ, ನನಗೆ ವಾಚ್ಯವಾಗಿ ಬೈಯ್ದು ನನ್ನ ಕೈಹಿಡಿದು ಎಳೆದು ನನಗೆ ತನ್ನ ಜೋತೆಗೆ ಬಾ ಅಂತಾ ಕೈ ಹಿಡಿದು ಎಳೆದಾಡಿ ಅವಾಚ್ಯವಾಗಿ ಬೈಯ್ದು ಬಿಡಿಸಿಕೊಳ್ಳಲು ಬಂದವರಿಗೆ ಹೊಡೆದು ಬೈಯ್ದು ನಮಗೆ ಜೀವದ ಭಯ ಹಾಕಿದ ಮೇಲಿನ ಎಲ್ಲಾ 8 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2021 ಕಲಂ: 323, 354, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 30-06-2021 03:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080