ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-06-2022


ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ.25/2022 ಕಲಂ.342, 307, 302, 504 ,506, ಐ.ಪಿ.ಸಿ : ಇಂದು ದಿನಾಂಕ:29.06.2022 ರಂದು 3:30 ಪಿಎಮ್ಕ್ಕೆ ಲಿಂಗಸೂರು ಸರಕಾರಿ ಆಸ್ಪತ್ರೆಯಿಂದ ನಾಗನಗೌಡ ಪಿಸಿ-371 ರವರು ಬಾಬು ರಾಠೋಡ ಎ.ಎಸ್.ಐ ನಾರಾಯಣಪೂರ ಪೊಲಿಸ್ ಠಾಣೆ ರವರು ಲಿಂಗಸೂರು ಆಸ್ಪತ್ರೆಯಲ್ಲಿ ಫಿರ್ಯಾದಿ ಶ್ರೀಮತಿ ಹುಲಿಗೆಮ್ಮ ಗಂಡ ಶರಣಪ್ಪ ಹಗರಗುಂಡ ಸಾ:ಮುದ್ಧೇಬಿಹಾಳ ಹಾ:ವ:ಲಿಂಗಸೂರು ಇವರು ನೀಡಿದ ಹೇಳಿಕೆ ಫೀರ್ಯಾದಿಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ನನ್ನ ಮುಂದೆ ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ನನಗೆ ಸುಮಾರು 16 ವರ್ಷಗಳ ಹಿಂದೆ ಮುದ್ದೇಬಿಹಾಳ ತಾಲೂಕಿನ ಗಾಳಪೂಜಿ ಗ್ರಾಮದ ಶರಣಪ್ಪ ತಂದೆ ಈರಣ್ಣ ಹಗರಗುಂಡ ರವರೊಂದಿಗೆ ಮದುವೆಯಾಗಿದ್ದು ನನ್ನ ಗಂಡನ ತಂದೆಯಾದ ಈರಣ್ಣ ಇವರು ನಾರಾಯಣಪೂರದಲ್ಲಿ ನೌಕರಿ ಮಾಡುತ್ತಿದ್ದರಿಂದ ನಾವು ನಾರಾಯಣಪೂರದಲ್ಲಿ ವಾಸವಾಗಿದ್ದೇವು. ಈಗ್ಗೆ ಸುಮಾರು 12 ವರ್ಷಗಳ ಹಿಂದೆ ನನಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ಮೆಕ್ಯಾನಿಕ್ ಅಂತಾ ನೌಕರಿಯಾಗಿದ್ದು, ಮೊದಲು ಬೆಂಗಳೂರಿನಲ್ಲಿ ನೌಕರಿ ಮಾಡಿ 2016 ನೇ ಸಾಲಿನಲ್ಲಿ ಅಲ್ಲಿಂದ ವಗರ್ಾವಾಗಿ ಲಿಂಗಸೂರು ಡಿಪೋಕ್ಕೆ ಬಂದು ಮೆಕ್ಯಾನಿಕ್ ಕರ್ತವ್ಯ ಮಾಡುತ್ತಿದ್ದೇನು. ನಾನು ಲಿಂಗಸೂರಿನಲ್ಲಿ ನೌಕರಿ ಮಾಡುತ್ತಿದ್ದರಿಂದ ಲಿಂಗಸೂರಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದೇವು. ಅಲ್ಲದೇ ನಾವು ನಾರಾಯಣಪೂರದ ಛಾಯಾ ಕಾಲೋನಿಯಲ್ಲಿ ಒಂದು ಮನೆಯನ್ನು ಕಟ್ಟಿದ್ದು, ಆ ಮನೆ ನನ್ನ ಹೆಸರಿನಲ್ಲಿ ಇರುತ್ತದೆ. ನನ್ನ ಗಂಡನು ಈಗ್ಗೆ ಸುಮಾರು 2 ವರ್ಷಗಳಿಂದಾ ನನ್ನೊಂದಿಗೆ ವಿನಾಕಾರಣ ಜಗಳ ಮಾಡುತ್ತಾ ನನ್ನ ಬಿಟ್ಟು ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದನು ನಾನು ನನ್ನ 2 ಮಕ್ಕಳೊಂದಿಗೆ ಲಿಂಗಸೂಗುರದಲ್ಲಿ ಬೇರೆ ಮನೆಮಾಡಿಕೊಂಡು ವಾಸವಾಗಿದ್ದೇನು. ನನ್ನ ಗಂಡ ನಾರಾಯಣ ಪೂರದಲ್ಲಿರುವ ನನ್ನ ಹೆಸರಿನಲ್ಲಿರುವ ಮನೆಯನ್ನು ತನ್ನ ಹೆಸರಿಗೆ ಬಿಟ್ಟು ಕೊಡುವಂತೆ ನನ್ನೊಂದಿಗೆ ದಿನಾಲು ಜಗಳ ಮಾಡುತ್ತಿದ್ದನು. ನಾನು ಈ ವಿಷಯವನ್ನು ನನ್ನ ತವರು ಮನೆಯವರ ಮುಂದೆ ಹೇಳಿದ್ದು, ಅವರು ನನಗೆ ಮನೆಯನ್ನು ಬಿಟ್ಟು ಕೊಡುವದು ಬೇಡ ಬೇಕಾದರೆ ಮನೆಯ ಬಾಡಿಗೆ ಹಣವನ್ನು ಅವನೇ ತೆಗೆದುಕೊಳ್ಳಲಿ ಅಂತಾ ಹೇಳಿದ್ದರು. ನಾನು ಈ ವಿಷಯವನ್ನು ನನ್ನ ಗಂಡನಿಗೆ ಹೇಳಿದಾಗ ನನ್ನ ಗಂಡನು ನನಗೆ ಬೋಸಡಿ ಮಕ್ಕಳೇ ಮನೆಯನ್ನು ನನ್ನ ಹೆಸರಿಗೆ ಬಿಟ್ಟುಕೊಡದೇ ಇದ್ದರೇ ನಿನ್ನನ್ನು ಮತ್ತು ನಿನ್ನ ತವರು ಮನೆಯವರನ್ನು ಖಲಾಸ್ ಮಾಡಿಬಿಡುತ್ತೆನೆ ಅಂತ ನನ್ನೊಂದಿಗೆ ಜಗಳ ಮಾಡಿ ನಮ್ಮ ಮೇಲೆ ಸಿಟ್ಟಾಗಿದ್ದನು, ನಾನು ಈ ವಿಷಯವನ್ನು ನನ್ನ ತವರು ಮನೆಯವರಿಗೆ ಹೇಳಿದ್ದೇನು. ಅದಕ್ಕೆ ನನ್ನ ತಂದೆ ಸಿದ್ರಾಮಪ್ಪನು ನನಗೆ ನಿನ್ನ ಗಂಡನ್ನೊಂದಿಗೆ ಮಾತನಾಡಿ ಮನೆಯ ಪಾಲಿನ ವಿಷಯವನ್ನು ಪೈನಲ್ ಮಾಡಿ ಬಿಡೋಣ ಅಂತ ನನಗೆ ಹೇಳಿದ್ದನು. ಇಂದು ದಿನಾಂಕ:29.06.2022 ರಂದು ಮುಂಜಾನೆ 11:30 ಕ್ಕೆ ನಾನು ಲಿಂಗಸೂರಿನಲ್ಲಿ ನನ್ನ ಕರ್ತವ್ಯ ದ ಮೇಲೆ ಇದ್ದಾಗ ನಮ್ಮ ಸಂಬಂಧಿಯಾದ ಚೆನ್ನಪ್ಪ ತಂದೆ ಸಿದ್ರಾಮಪ್ಪ ಹಗರಗುಂಡ ಸಾ:ಮುದ್ದೇಬಿಹಾಳ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿನ್ನ ಗಂಡನಾದ ಶರಣಪ್ಪನು ಮನೆಯ ಪಾಲಿನ ವಿಷಯದಲ್ಲಿ ಮಾತಾಡುವದು ಇದೆ ನಾರಾಯಣಪೂರಕ್ಕೆ ಬನ್ನಿ ಅಂತಾ ಹೇಳಿದ್ದರಿಂದ ನಾನು ಮತ್ತು ನಿಮ್ಮ ತಂದೆಯಾದ ಸಿದ್ರಾಮಪ್ಪ ನಿಮ್ಮ ಮಾವಂದಿರಾದ ನಾಗೇಶ, ಶರಣಪ್ಪ,ಮತ್ತು ನಿಮ್ಮ ಅಣ್ಣ ಮುತ್ತಪ್ಪ ಎಲ್ಲರೂ ಕೂಡಿಕೊಂಡು ಮುದ್ದೇಬಿಹಾಳದಿಂದ ನಾರಾಯಣಪೂರಕ್ಕೆ ಬಂದು ನಿಮ್ಮ ಮನೆಗೆ ಹೋಗಿದ್ದಾಗ ನಿನ್ನ ಗಂಡನಾದ ಶರಣಪ್ಪನು ಮನೆಯಲ್ಲಿದ್ದು, ಮನೆಯ ಮೇಲಿನ ಅಂತಸ್ತಿನಲ್ಲಿರುವ ರೂಮದಲ್ಲಿ ಕುಳಿತು ಮಾತಾಡೋಣ ಮೇಲೆ ನಡೆಯಿರಿ ಅಂತಾ ಅಂದಾಗ ನಾವೆಲ್ಲರೂ ಕೂಡಿಕೊಂಡು ಮನೆಯ ಮೇಲಿರುವ ರೂಂ ನಲ್ಲಿ ಕುಳಿತು ಮನೆಯ ಪಾಲಿನ ವಿಷಯ ಮಾತನಾಡುತ್ತ ಕುಳಿತಿದ್ದೇವು. ನಿಮ್ಮ ತಂದೆಯವರು ನಿನ್ನ ಗಂಡನಿಗೆ ಮನೆಯ ಬಾಡಿಗೆಯನ್ನು ತೆಗೆದುಕೊ ಮನೆಯ ನನ್ನ ಮಗಳ ಹೆಸರಿನಲ್ಲಿ ಇರಲಿ ಅಂತಾ ಅಂದನು. ಅದಕ್ಕೆ ನಿನ್ನ ಗಂಡನು ಸಿಟ್ಟಾಗಿ ನಿನ್ನ ತಂದೆಗೆ ಮನೆ ನನ್ನ ಹೆಸರಿಗೆ ಬಿಟ್ಟು ಕೊಡದಿದ್ದರೆ ನಿಮ್ಮನ್ನು ಇಲ್ಲೆ ಖಲಾಸ ಮಾಡಿಬಿಡುತ್ತೇನೆ ಅಂತಾ ಅನ್ನುತ್ತಿದ್ದನು ಆಗ ನನಗೆ ಒಂದಾಕ ಬಂದಿದ್ದು ಒಂದಾಕ ಹೋಗಲು ಹೊರಗಡೆ ಬಂದಿದ್ದು, ಮರಳಿ 10:45 ಎ.ಎಮ್ ಕ್ಕೆ ಮೇಲಗಡೆ ಹೋದಾಗ ನಿನ್ನ ಗಂಡನು ಮನೆಯ ಪಾಲಿನ ವಿಷಯ ಮಾತನಾಡಲು ಬಂದಿದ್ದ ಸಿದ್ರಾಮಪ್ಪ, ನಾಗೇಶ ಹಾಗು ಶರಣಪ್ಪ ಮತ್ತು ಮುತ್ತಪ್ಪರನ್ನು ರೂಂನಲ್ಲಿ ಕೂಡಿಹಾಕಿ ಬಾಗಿಲಿಗೆ ಕೀಲಿ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಕಿಟಕಿಯಿಂದ ರೂಮಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮತ್ತೆ ಪೆಟ್ರೋಲ್ ತುಂಬಿದ ಮೂರು ಪ್ಲಾಸ್ಟಿಕ್ ಬಾಟಲಿಗಳನ್ನು ಕಿಟಕಿಯಿಂದ ರೂಮಿನೊಳಗೆ ಎಸೆದು ಓಡಿ ಹೋಗುವಾಗ ನನಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೇ ನಿನಗೂ ಇದೆ ಗತಿಕಾಣಿಸುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿ ಓಡಿಹೋಗಿದ್ದು, ಆಗ ನಾನು ಗಾಬರಿಗೊಂಡು ಚಿರಾಡಹತ್ತಿದಾಗ ಅಕ್ಕಪಕ್ಕದವರು ಬಂದು ಮನೆಯ ಬಾಗಿಲು ಕೀಲಿ ಮುರಿದು ನಾಲ್ಕು ಮಂದಿಯನ್ನು ಹೊರಗಡೆ ತೆಗೆದು ಹಾಕಿದ್ದು, ಎಲ್ಲರ ದೇಹದ ಬಹುತೇಕ ಬಾಗ ತಿವ್ರತರಹವಾಗಿ ಸುಟ್ಟಿದ್ದು ಉಪಚಾರ ಕುರಿತು 108 ವಾಹನದಲ್ಲಿ ಹಾಕಿಕೊಂಡು ಲಿಂಗಸೂರು ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ ನೀನು ಅಲ್ಲಿಗೆ ಹೋಗು ಅಂತಾ ಹೇಳಿದಾಗ ಈ ವಿಷಯ ನನಗೆ ಗೊತ್ತಾಗಿ ಗಾಬರಿಗೊಂಡು ಕೂಡಲೇ ಲಿಂಗಸೂರು ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಂದೆ ಸಿದ್ರಾಮಪ್ಪ, ಮತ್ತು ಅವರೊಂದಿಗೆ ಬಂದಿದ್ದ ಮುತ್ತಪ್ಪ ಹಾಗು ಶರಣಪ್ಪ ರವರಿಗೆ ಬಹಳ ಸುಟ್ಟ ಗಾಯಗಳಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ರಾಯಚೂರು ಆಸ್ಪತ್ರೆಗೆ ಕಳುಹಿಸಿದರು ನಾಗೇಶ ತಂದೆ ಚನ್ನಪ್ಪ ಹಗರಗುಂಡ ವಯ:35 ವರ್ಷ ಈತನು 1:15 ಪಿ.ಎಮ್ ಕ್ಕೆ ಉಪಚಾರ ಫಲಕಾರಿಯಾಗದೇ ಮೃತಪಟ್ಟಿನು. ನನ್ನ ಗಂಡ ಶರಣಪ್ಪ ತಂದೆ ಈರಣ್ಣ ಹಗರಗುಂಡ ಈತನು ನಾರಾಯಣಪೂರದಲ್ಲಿ ನನ್ನ ಹೆಸರಿನಲ್ಲಿ ಇರುವ ಮನೆಯನ್ನು ತನ್ನ ಹೆಸರಿಗೆ ಬಿಟ್ಟುಕೊಡಲಾರದಕ್ಕೆ ಅದೇ ಸಿಟ್ಟಿನಿಂದ ಮನೆಯ ನ್ಯಾಯಪಂಚಾಯಿತಿ ಮಾಡಲು ಕರೆಯಿಸಿ ನಾಲ್ಕು ಮಂದಿಗೆ ರೂಮಿನಲ್ಲಿ ಕೂಡಿಹಾಕಿ ಕೊಲೆ ಮಾಡುವ ಉದ್ಧೇಶದಿಂದ ಮನೆ ಕೀಲಿ ಹಾಕಿ ಮೊದಲೆ ತಂದು ಇಟ್ಟಿದ್ದ ಪೆಟ್ರೋಲ್ನ್ನು ಕಿಟಿಯ ಮುಖಾಂತರ ಮನೆಯೊಳಗೆ ಹಾಕಿ ಬೆಂಕಿ ಹಚ್ಚಿ ಸುಟ್ಟಿದ್ದು, ಇದರಿಂದ ನಾಗೇಶನು ಸತ್ತಿದ್ದು, ಉಳಿದ ಮೂವರಿಗೆ ಮೈಯಲ್ಲ ಸುಟ್ಟ ತೀವ್ರಗಾಯಗಳಾಗಿದ್ದು ಇರುತ್ತದೆ. ಆದ್ದರಿಂದ ಈ ಘಟನೆಗೆ ಕಾರಣವಾದ ನನ್ನ ಗಂಡ ಶರಣಪ್ಪ ತಂದೆ ಈರಣ್ಣ ಹಗರಗುಂಡ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫೀರ್ಯಾದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:25/2022 ಕಲಂ:342, 307, 302, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 55/2022 ಕಲಂ: 279, 337, 338, 304(ಎ) ಐಪಿಸಿ : ದಿನಾಂಕ:29.06.2022 ರಂದು ಫಿರ್ಯಾದಿ ಮತ್ತು ಅವನ ಗೆಳೆಯ ದೇವರಾಜ ಇಬ್ಬರೂ ಕೂಡಿ ತಮ್ಮೂರಿನ ದೇವಮ್ಮ ಆಯಿ ಗುಡಿಗೆ ಹೋಗು ಕ್ರಾಸ್ ಹತ್ತಿರ ಮಾತನಾಡುತ್ತಾ ನಿಂತಾಗ, ಮೃತನು ಅಟೋ ಟಂ-ಟಂ ನಂ:ಕೆಎ-33, 7190 ನೇದ್ದನ್ನು ತೆಗೆದುಕೊಂಡು ಬಂದು ಹುಣಸಗಿಗೆ ಹೋಗಿ ಹಾಲು ತೆಗೆದುಕೊಂಡು ಬರುವದಿದೆ, ಹೋಗಿ ಬರೋಣ ನಡೆಯಿರಿ ಅಂತಾ ಅಂದಾಗ ಫಿರ್ಯಾದಿ & ದೇವರಾಜ ಇಬ್ಬರೂ ನಡುವಿನ ಶಿಟಿಗೆ ಕುಳಿತಿದ್ದು, ಮೃತನ ಅಟೋವನ್ನು ಚಾಲು ಮಾಡಿ ಕಚಕನೂರ ಮಾರ್ಗವಾಗಿ ಹೊರಟಿದ್ದು, ವಜ್ಜಲ ದಾಟಿದ ಮೇಲೆ ಅಟೋವನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಎದರುಗಡೆ ಬರುವ ಎಮ್ಮಗೆ ಡಿಕೊಟ್ಟು ಅಟೋವನ್ನು ಪಲ್ಟಿ ಮಾಡಿದ್ದು, ಮೃತನು ಅಟೋದ ಗ್ಲಾಸಿನ ಮೇಲ್ಬಾಗ ಸಿಕ್ಕಿಕೊಂಡು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಫಿರ್ಯಾದಿಗೆ 2 ಕೈಗಳ ರಟ್ಟೆಗೆ ಭಾರಿ ರಕ್ತಗಾಯಗಳಾಗಿದ್ದು, ಮತ್ತು ಬಲಗೈ 3&4ನೇ ಬೆರಳುಗಳಿಗೆ ಉಗುರುಗಳು ಕಿತ್ತಿ ಹೋಗಿದ್ದು, ತಲೆಯ ಬಲಗಡೆ ರಕ್ತಗಾಯವಾಗಿದ್ದು, ಹಾಗೂ ದೇವರಾಜ ಈತನಿಗೆ ತಲೆಗೆ ರಕ್ತಗಾಯವಾದ ಬಗ್ಗೆ ಅಪರಾಧ

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 77/2022 ಕಲಂ.419, 420, 465 ಸಂ.34 ಐಪಿಸಿ : ಇಂದು ದಿನಾಂಕ; 29/06/2022 ರಂದು 11-00 ಎಎಮ್ ಕ್ಕೆ ಮಾನ್ಯ ನ್ಯಾಯಾಲಯದಿಂದ ಒಂದು ಖಾಸಗಿ ಪಿಯರ್ಾಧಿ ನಂ.02/2022 ನೇದ್ದರ ಪಿರ್ಯಾಧಿಯ ಸಾರಾಂಶವೆನೆಂದರೆ, ಯಾದಗಿರಿ ತಾಲೂಕಿನ ಆಶನಾಳ ಗ್ರಾಮದ ಸೀಮಾಂತರದಲ್ಲಿ ಬರುವ ಜಮೀನು ಸವರ್ೆ ನಂ.77/78ಆ ವಿಸ್ತೀರ್ಣ 34 ಗುಂಟೆ ಜಮೀನು ಇದ್ದು ಇದರ ಸಾಗುವಳಿ ಮತ್ತು ಕಬ್ಜೆದಾರ ನಾನೇ ಇರುತ್ತೇನೆ. ಸದರಿ ಜಮೀನು ನನ್ನ ತಂದೆಯ ಅಣ್ಣನಾದ ಯಂಕಣ್ಣ ಇವರ ಹೆಂಡತಿಯಾದ ಅಂದರೆ ನನ್ನ ದೊಡ್ಡಮ್ಮಳಾದ ಆಶಮ್ಮ ಗಂಡ ಯಂಕಣ್ಣ ಇವರ ಹೆಸರಿನಲ್ಲಿದ್ದು ಇವರಿಗೆ ಮಕ್ಕಳಿಲ್ಲದ ಕಾರಣ ನಾನೇ ನೇರ ವಾರಸುದಾರನಿದ್ದು ಸದರಿ ಜಮೀನನ್ನು ನಾನೇ ಕಬ್ಜೆದಾರನಿರುತ್ತೇನೆ. ಸದರಿ ಜಮೀನು ಆರೋಪಿಯಾದ ಅನ್ನಪೂರ್ಣ ತಂದೆ ಮಹಾದೇವಪ್ಪ ಮಡ್ಡಿ ವ; 30 ವರ್ಷ ಉ; ಮನೆಗೆಲಸ ಸಾ; ಸ್ಟೇಷನ ಏರಿಯಾ ಯಾದಗಿರಿ ಇವರು ದಿನಾಂಕ; 11/04/2012 ರಂದು ಮಾನ್ಯ ಉಪನೊಂದಣಾಧಿಕಾರಿಗಳು ಯಾದಗಿರಿ ರವರಲ್ಲಿ ದಾಖಲೆ ಸಂ.87/2012-13 ರಂದು ಸದರಿ ಸವರ್ೆ ನಂಬರ ಕಬ್ಜೆ ರಹಿತ ಅಡಮಾನ ಮಾಡಿಕೊಂಡಿದ್ದು ಇರುತ್ತದೆ. ಸದರಿ ನನ್ನ ದೊಡ್ಡಮ್ಮಳಾದ ಆಶಮ್ಮ ಗಂಡ ಯಂಕಮ್ಮ ಇವಳು ದಿನಾಂಕ; 30/07/1990 ರಂದು ಮರಣ ಹೊಂದಿದ್ದು ಇರುತ್ತದೆ. ಇವಳ ಹೆಸರಿನ ಮೇಲೆ ಅನ್ನಪೂರ್ಣ ತಂದೆ ಮಹಾದೇವಪ್ಪ ಇವರು ಮೋಸದಿಂದ ಮತ್ತು ವಂಚನೆಯಿಂದ ಕಾನೂನು ವಿರುದ್ದವಾಗಿ ಬೇರೆಯವರನ್ನು ಉಪನೊಂದಣಾಧಿಕಾರಿಗಳು ಯಾದಗಿರಿ ರವರ ಕಛೇರಿಗೆ ಬೇರೆ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಅವರ ಹೆಸರನ್ನು ಸುಳ್ಳು ಮಾಹಿತಿ ಹೇಳಿ ಮೃತರಾದ ಆಶಮ್ಮ ಗಂಡ ಯಂಕಣ್ಣ ಇವರೇ ಇರುತ್ತಾರೆಂದು ಸುಳ್ಳು ಹೇಳಿ ಅವರು ಮೃತಪಟ್ಟಿದ್ದರು ಕೂಡಾ ಮೃತರ ಹೆಸರಿನಲ್ಲಿ ಸುಳ್ಳು ನೊಂದಣಿ ಪತ್ರ ಮಾಡಿಕೊಂಡಿರುತ್ತಾರೆ. ಇದಕ್ಕೆ ಸಾಕ್ಷಿದಾರರಾಗಿ ನಾಗಪ್ಪ ತಂದೆ ಭೀಮರಾಯ ಸಾ; ಯಾದಗಿರಿ ಮತ್ತು ಮಹಾದೇವಮ್ಮ ಗಂಡ ಮಹಾದೇವಪ್ಪ ಮಡ್ಡಿ ಸಾ; ಯಾದಗಿರಿ ಇರುತ್ತಾರೆ. ಸದರಿ ಮೇಲ್ಕಾಣಿಸಿದ ಮೂವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ನಾನು ಯಾದಗಿರಿ ತಾಲೂಕಿನ ಆಶನಾಳ ಗ್ರಾಮದ ಸೀಮಾಂತರದಲ್ಲಿ ಬರುವ ಜಮೀನು ಸವರ್ೆ ನಂ.77/78ಆ ವಿಸ್ತೀರ್ಣ 34 ಗುಂಟೆ ಜಮೀನಿಗೆ ನಾನು ವಾರಸುದಾರನಿದ್ದು ಈಗ ಸದರಿ ನನ್ನ ಹೆಸರಿಗೆ ವಗರ್ಾವಣೆ ಮಾಡಿಕೊಳ್ಳಲು ಅಜರ್ಿ ಸಲ್ಲಿಸಿದಾಗ ಸದರಿ ವಿಷಯವು ನನಗೆ ಗೊತ್ತಾಗಿದ್ದು ಇರುತ್ತದೆ. ಮೇಲೆ ಹೇಳಿದ ಆಪಾದಿತರು ಕಲಂ.419, 420, 465 ಸಂ.34 ಭಾ.ದಂ.ಸಂ. ಕೆಳಗಡೆ ಅಪರಾಧವೆಸಗಿರುತ್ತಾರೆ. ಆದ ಕಾರಣ ಸದರಿಯವರ ಮೇಲೆ ಕಾನೂನಿನ ಕ್ರಮ ಕೈಕೊಳ್ಳಬೇಕೆಂದು ವಸೂಲಾದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.77/2022 ಕಲಂ.419, 420, 465 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 29/06/2022 ರಂದು ಸಮಯ 12-30 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಹಳ್ಳೆರಾಯ ತಂದೆ ಶಂಕರ ಮಂದೇವಾಲ್ ವಯ;27 ವರ್ಷ, ಉ;ಪ್ಲಂಬರ್ ಕೆಲಸ, ಜಾ;ಪ.ಜಾತಿ(ಮಾದಿಗ), ಸಾ;ಹೊಸಳ್ಳಿ ಕ್ರಾಸ್, ಯಾದಗಿರಿ (ಮೊ.ನಂ.9845216666) ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 28/06/2022 ರಂದು ರಾತ್ರಿ 8-30 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಅಜರ್ಿ ನೀಡಿದ್ದನ್ನು ಪಡೆದುಕೊಂಡಿದ್ದು, ಪಿಯರ್ಾದಿಯ ಅಜರ್ಿಯ ದೂರಿನ ಸಾರಾಂಶವೇನೆಂದರೆ ನಾನು ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ನನ್ನ ದೊಡ್ಡಮ್ಮಳಾದ ಶಂಕ್ರೆಮ್ಮ ಗಂಡ ಧರ್ಮಣ್ಣ ಮಂದೆವಾಲ್ ಇವರು ಕಲಬುರಗಿಯ ಸುಂದರನಗರದಲ್ಲಿ ಅಂಗನವಾಡಿ ಶಿಕ್ಷಕರಾಗಿದ್ದು, ಯಾದಗಿರಿಯಿಂದ ಕಲಬುರಗಿಗೆ ದಿನಾಲು ಹೋಗಿ ಬರುವುದು ಮಾಡುತ್ತಾರೆ. ನಿನ್ನೆ ದಿನಾಂಕ 28/06/2022 ರಂದು ರಾತ್ರಿ 8-45 ಪಿ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ಮಾವನವರಾದ ಶ್ರೀ ಸಣ್ಣ ಬೂದೆಪ್ಪ ತಂದೆ ಬಸಪ್ಪ ಲೋಟನವರ್ ಸಾ;ಹೊಸಳ್ಳಿ ಕ್ರಾಸ್ ಯಾದಗಿರಿ ಇಬ್ಬರು ನಮ್ಮ ಮನೆ ಹತ್ತಿರ ಇದ್ದಾಗ ನಮ್ಮ ಸಂಬಂಧಿಕ ಹುಡುಗನಾದ ಸಚಿನ್ ತಂದೆ ಚಂದ್ರಶೇಖರ ದಾಸನಕೇರಿ ಸಾ;ಅಂಬೆಡ್ಕರ್ ನಗರ ಯಾದಗಿರಿ ಈತನು ನಮ್ಮ ಮನೆ ಹತ್ತಿರ ಬಂದು ನನಗೆ ತಿಳಿಸಿದ್ದೇನೆಂದರೆ ನಾನು ನನ್ನ ಆಟೋ ನೇದ್ದನ್ನು ಶುಭಂ ಪೆಟ್ರೋಲ್ ಬಂಕ್ ಮುಂದಿನ ಪಿಲ್ಟರ್ ಬೆಡ್ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ನಿಂತಿದ್ದಾಗ ಸಮಯ ರಾತ್ರಿ 8-30 ಪಿ.ಎಂ.ಕ್ಕೆ ನಾನು ನೋಡು ನೋಡುತ್ತಿದ್ದಂತೆ ನಿಮ್ಮ ದೊಡ್ಡಮ್ಮಳಾದ ಶಂಕ್ರಮ್ಮ ಗಂಡ ಧರ್ಮಣ್ಣ ಮಂದೆವಾಲ್ ಇವರು ಒಂದು ಆಟೋದಿಂದ ಪಿಲ್ಟರ್ ಬೆಡ್ ಕಡೆಗೆ ಹೋಗುವ ರಸ್ತೆ ಹತ್ತಿರ ಇಳಿದು ರಸ್ತೆ ಬದಿಯಲ್ಲಿ ನಡೆದುಕೊಂಡು ಪಿಲ್ಟ್ರ್ ಬೆಡ್ ಏರಿಯಾದ ಕಡೆಗೆ ಹೊರಟಿದ್ದಾಗ ಅದೇ ಸಮಯಕ್ಕೆ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಗಂಜ್ ರಸ್ತೆ ಕಡೆಯಿಂದ ಹೊಸಳ್ಳಿ ಕ್ರಾಸ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಮ್ಮ ದೊಡ್ಡಮ್ಮಳಿಗೆ ನೇರವಾಗಿ ಡಿಕ್ಕಿಹೊಡೆದು ಅಪಘಾತ ಮಾಡಿದನು ಆಗ ನಾನು ಓಡೋಡಿ ಹತ್ತಿರ ಹೋಗಿ ನೋಡಲಾಗಿ ನಿಮ್ಮ ದೊಡ್ಡಮ್ಮ ಶಂಕ್ರೆಮ್ಮಳಿಗೆ ಈ ಅಪಘಾತದಲ್ಲಿ ತಲೆಗೆ ಭಾರೀ ಒಳಪೆಟ್ಟಾಗಿದ್ದು, ಹಣೆಗೆ ಭಾರೀ ರಕ್ತಗಾಯವಾಗಿದ್ದು, ಮುಖಕ್ಕೆ ಅಲ್ಲಲ್ಲಿ ಹಾಗೂ ಎಡಗೈ ಬೆರಳುಗಳಿಗೆ ರಕ್ತಗಾಯವಾಗಿರುತ್ತವೆ. ಈ ಅಪಘಾತದಲ್ಲಿ ತಲೆಗೆ, ಹಣೆಗೆ ಆದ ಗಾಯಗಳ ಭಾದೆಯಿಂದ ಮೂಚರ್ೆ ಹೋಗಿದ್ದು, ಅಪಘಾತಪಡಿಸಿದ ಮೊಟಾರು ಸೈಕಲ್ ನಂಬರನ್ನು ಲೈಟಿನ ಬೆಳಕಿನಲ್ಲಿ ನೋಡಲಾಗಿ ಕೆಎ-33, ಎಲ್-3118 ಅಂತಾ ಇರುತ್ತದೆ, ಮೋಟಾರು ಸೈಕಲ್ ಸವಾರನು ಗಡಿಬಿಡಿ ಮಾಡುತ್ತಾ ತನ್ನ ಹೆಸರು ಮತ್ತು ವಿಳಾಸ ತಿಳಿಸದೇ ಮೋಟಾರು ಸೈಕಲನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ, ಆತನಿಗೆ ನಾನು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇನೆ. ಘಟನಾ ಸ್ಥಳದಲ್ಲಿ ನನ್ನ ಸ್ನೇಹಿತರಾದ ಆಟೋ ಚಾಲಕರನ್ನು ನಿಲ್ಲಿಸಿ ನಿಮಗೆ ವಿಷಯ ತಿಳಿಸಲು ಇಲ್ಲಿಗೆ ಬಂದಿದ್ದು, ನೀವು ಬೇಗ ನಡೀರಿ ಘಟನಾ ಸ್ಥಳಕ್ಕೆ ಹೋಗೋಣ ಅಂದಾಗ ನಾವಿಬ್ಬರು ಗಾಬರಿಯಿಂದ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನಮಗೆ ಸಚಿನ್ ಈತನು ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನನ್ನ ದೊಡ್ಡಮ್ಮ ಶಂಕ್ರೆಮ್ಮ ಮೂಚರ್ೆ ಹೋಗಿದ್ದು, ಆಗ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದಾಗ ನಾನು ಮತ್ತು ನನ್ನ ಮಾವ ಸಣ್ಣ ಬೂದೆಪ್ಪ ಹಾಗು ಸಚಿನ್ ಮೂವರು ಸೇರಿಕೊಂಡು ನನ್ನ ದೊಡ್ಡಮ್ಮಳಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಈ ಘಟನೆ ಬಗ್ಗೆ ನನ್ನ ದೊಡ್ಡಮ್ಮಳ ಮಗನಾದ ಸಂತೋಷ ಈತನು ಬಾಂಬೆಯಲ್ಲಿ ಕೂಲಿ ಕೆಲಸಕ್ಕಾಗಿ ಹೋಗಿದ್ದು ಆತನಿಗೆ ಪೋನ್ ಮಾಡಿ ವಿಷಯ ತಿಳಿಸಿರುತ್ತೇನೆ. ಈ ಘಟನೆಯ ವಿಚಾರಣೆಗಾಗಿ ಆಸ್ಪತ್ರೆಗೆ ಬಂದಿದ್ದ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯ ಪೊಲಿಸರಿಗೆ ನಾಳೆ ಬೆಳಿಗ್ಗೆ ನಮ್ಮ ಮನೆಯ ಹಿರಿಯರಲ್ಲಿ ವಿಚಾರಿಸಿ ತಿಳಿಸುವುದಾಗಿ ಹೇಳಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 29/06/2022 ರಂದು ನನ್ನ ದೊಡ್ಡಮ್ಮಳ ಮಗನಾದ ಸಂತೋಷ್ ಈತನು ಘಟನೆ ಬಗ್ಗೆ ಪೊಲಿಸ್ ಕೇಸು ಮಾಡಲು ನನಗೆ ತಿಳಿಸಿದ್ದರಿಂದ ಇಂದು ತಡವಾಗಿ ಠಾಣೆಗೆ ಖುದ್ದಾಗಿ ಹಾಜರಾಗಿ ದೂರು ನೀಡುತ್ತಿದ್ದು, ನಿನ್ನೆ ದಿನಾಂಕ 28/06/2022 ರಂದು ರಾತ್ರಿ 8-30 ಪಿ.ಎಂ.ಕ್ಕೆ ಯಾದಗಿರಿ ನಗರದ ಗಂಜ್-ಹೊಸಳ್ಳಿ ಕ್ರಾಸ್ ರಸ್ತೆಯ ಮೇಲೆ ಬರುವ ಪಿಲ್ಟರ್ ಬೆಡ್ ಹತ್ತಿರ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿದ್ದ ನನ್ನ ದೊಡ್ಡಮ್ಮ ಶಂಕ್ರಮ್ಮ ಇವರಿಗೆ ಮೋಟಾರು ಸೈಕಲ್ ನಂಬರ ಕೆಎ-33, ಎಲ್-3118 ನೇದ್ದರ ಸವಾರನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿ ನಂತರ ಘಟನಾ ಸ್ಥಳದಲ್ಲಿ ಮೊಟಾರು ಸೈಕಲನ್ನು ಬಿಟ್ಟು ಓಡಿ ಹೋಗಿದ್ದು, ಅಪಘಾತಪಡಿಸಿದ ಸವಾರನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾದಿಯ ಅಜರ್ಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 33/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 111/2022 ಕಲಂ 379 ಐಪಿಸಿ : ಇಂದು ದಿನಾಂಕ 29.06.2022 ರಂದು ಸಮಯ 03:00 ಎ.ಎಮ್ ಕ್ಕೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಕೆಂಪು ಬಣ್ಣದ ಮಹಿಂದ್ರ ಭೂಮಿಪುತ್ರ ಟ್ರ್ಯಾಕ್ಟರ್ ಇಂಜಿನ ನೊಂದಣಿ ಸಂಖ್ಯೆ ಕೆಎ-33-ಟಿಎ-5129 ಮತ್ತು ಟ್ರ್ಯಾಲಿಯ ನೊಂದಣಿ ಸಂಖ್ಯೆ ಕೆಎ-33-ಟಿಎ-5995 ನೇದ್ದರಲ್ಲಿ ಮರಳನ್ನು ತುಂಬಿಕೊಂಡು ಕೊಂಕಲ್ ಕಡೆಯಿಂದ ಗುರುಮಠಕಲ್ ಪಟ್ಟಣದ ಕಡೆಗೆ ಸಾಗಿಸುತ್ತಿದ್ದಾಗ ಪಿ.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 111/2022 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 112/2022 ಕಲಂ 379 ಐಪಿಸಿ : ಇಂದು ದಿನಾಂಕ 29.06.2022 ರಂದು ಬೆಳಿಗ್ಗೆ 7.30 ಗಂಟೆಗೆ ಖಜಜ ಛಿಠಟಣಡಿಜ ಒಚಿಜಟಿಜಡಿಚಿ ಖಿಜ ಖಿಡಿಚಿಛಿಣಠಡಿ, ಓಠ ಏಂ-33 ಖಿಃ 1813 ಜೋಡಿಸಿದ ಟ್ರ್ಯಾಲಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಸದರಿ ಮರಳನ್ನು ಸಾಗಿಸುತ್ತಿದ್ದಾಗ ಪಿಎಸ್ಐ ಸಾಹೇಬರು ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 112/2022 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 113/2022 ಕಲಂ 379 ಐಪಿಸಿ : ಇಂದು ದಿನಾಂಕ 29.06.2022 ರಂದು ಸಮಯ 10:30 ಎ.ಎಮ್ ಕ್ಕೆ ದಾಳಿಯ ಕಾಲಕ್ಕೆ ಓಡಿ ಹೋದ ಆರೋಪಿತನು ಕೆಂಪು ಬಣ್ಣದ ಮಹಿಂದ್ರ ಭೂಮಿಪುತ್ರ ಟ್ರ್ಯಾಕ್ಟರ್ ಇಂಜಿನ ನೊಂದಣಿ ಸಂಖ್ಯೆ ಎಪಿ-22-ವೈ-0267 ಮತ್ತು ಟ್ರ್ಯಾಲಿಯ ನೊಂದಣಿ ಸಂಖ್ಯೆ ಕೆಎ-33-ಟಿಬಿ-1278 ನೇದ್ದರಲ್ಲಿ ಮರಳನ್ನು ತುಂಬಿಕೊಂಡು ಕೊಂಕಲ್ ಕಡೆಯಿಂದ ಗುರುಮಠಕಲ್ ಪಟ್ಟಣದ ಕಡೆಗೆ ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಆರೋಪಿತನು ಸದರಿ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಟ್ರ್ಯಾಕ್ಟರ ಚಾಲಕ ಮತ್ತು ಸಂಬಂಧಪಟ್ಟ ಮಲೀಕರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 113/2022 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ 117/2022 ಕಲಂ ಮಹಿಳೆ ಕಾಣೆ : ಮಾನ್ಯರೆ,
ಇಂದು ದಿನಾಂಕ 29/06/2022 ರಂದು 04-00 ಪಿ ಎಮ್ ಕ್ಕೆ ಪಿಯರ್ಾದಿ ರವಿಕುಮಾರ ತಂ. ರಾಮನಗೌಡ ಮೇಟಿ ವ|| 39 ವರ್ಷ ಜಾ|| ಹಿಂದುರಡ್ಡಿ ಉ|| ವ್ಯವಸಾಯ ಕೆಲಸ ಸಾ|| ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ಮನೆಯಲ್ಲಿ ನಾನು ಹೆಂಡತಿ ಲಕ್ಷ್ಮಿ ಮತ್ತು ನನ್ನ ತಮ್ಮನಾದ ವಿನಯಕುಮಾರ ಆತನ ಹೆಂಡತಿ ಶ್ರೀಮತಿ ರತ್ನಾ ಇವರೊಂದಿಗೆ ವಾಸವಾಗಿದ್ದು ಇರುತ್ತದೆ. ನಮ್ಮ ತಮ್ಮನಿಗೆ ಶಿವಾನಿ -5ವರ್ಷ, ವೈಭವ-6 ತಿಂಗಳದ ಮಕ್ಕಳಿದ್ದು ಹೀಗಿದ್ದು ನಿನ್ನೆ ದಿನಾಂಕ 28/06/2022 ರಂದು 2.00 ಪಿ ಎಮ್ ಸುಮಾರಿಗೆ ನಮ್ಮ ತಮ್ಮ ಹೊರಗಡೆ ಕೆಲಸಕ್ಕೆ ಹೋದಾಗ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ ಇವರು ಮನೆಯಲ್ಲಿ ಇದ್ದಾಗ ನಮ್ಮ ಗಮನಕ್ಕೆ ಬಾರದ ಹಾಗೆ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲ ಅಜು ಬಾಜು ಮನೆಗೆ ಹೋಗಿರ ಬಹುದು ಎಂದು ಎಲ್ಲರೂ ಸುಮ್ಮನೆ ಇದ್ದೇವು ನಂತರ ಮದ್ಹಾನ 3.00 ಗಂಟೆಯಾದರೂ ಮನೆಗೆ ಬರದೇ ಇದ್ದಾಗ ಎಲ್ಲರೂ ಹುಡುಕಾಡುತ್ತಿದ್ದೇವು ನಂತರ ಅದೇ ವೇಳೆಗೆ ನಮ್ಮ ತಮ್ಮ ಮನೆಗೆ ಬಂದಾಗ ವಿಷಯ ಗೊತ್ತಾಗಿ ನಮ್ಮ ತಮ್ಮ ವಿನಯ ಕೂಡಾ ಹುಡುಕಾಡಲಾಗಿ ರತ್ನಾ ಇವಳು ಎಲ್ಲಿಯೂ ಸಿಗಲಿಲ್ಲ ಮತ್ತು ಅವಳು ಇರುವಿಕೆ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ ಕಾರಣ ನನ್ನ ತಮ್ಮನ ಹೆಂಡತಿಯಾದ ಶ್ರೀಮತಿ ರತ್ನಾ ಗಂ. ವಿನಯಕುಮಾರ ಮೇಟಿ ವ|| 28 ವರ್ಷ ಜಾ|| ಹಿಂದುರಡ್ಡಿ ಉ|| ಮನೆಕೆಲಸ ಸಾ|| ಬಸವೇಶ್ವರ ನಗರ ಶಹಾಪೂರ ಇವಳು ಮನೆಯಿಂದ ಕಾಣೆಯಾಗಿದ್ದು ನಮ್ಮ ಸಂಬಂದಿಕರ ಊರುಗಳಿಗೆ ಹೋಗಿ ವಿಚಾರಿಸಿ ಉಡುಕಾಡಿ ಮತ್ತು ನಮ್ಮ ಹಿರಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ.

ಕಾಣೆಯಾದ ಮಹಿಳೆ ಚಹರೆಪಟ್ಟಿ ಈ ಕೇಳಗಿನಂತೆ ಇರುತ್ತದೆ,
ಹೆಸರು :- ಶ್ರೀಮತಿ ರತ್ನಾ
ವಯಸ್ಸು :- 28 ವರ್ಷಗಳು
ಬಣ್ಣ :- ದಪ್ಪನೆಯ ದೇಹ ಕೆಂಪುಬಣ್ಣ ದುಂಡುಮುಖ
ಭಾಷೆ :- ಕನ್ನಡ
ಎತ್ತರ :- ಅಂದಾಜು 5.2 ಫೀಟ್ ಇದ್ದಾಳೆ
ದರಿಸಿದ ಬಟ್ಟೆ :- ಹಸಿರು ಬಣ್ಣದ ಚೂಡಿದಾರ
ಅಂತ ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 117/2022 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.

ಇತ್ತೀಚಿನ ನವೀಕರಣ​ : 02-07-2022 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080