Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-07-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 172/2021 ಕಲಂ 447, 427 ಸಂ 34 ಐ.ಪಿ.ಸಿ : ಇಂದು ದಿನಾಂಕ 29/07/2021 ರಂದು ರಾತ್ರಿ 20-00 ಗಂಟೆಗೆ ಫಿಯರ್ಾದಿ ಶ್ರೀ ಅಮರಯ್ಯ ತಂದೆ ನಾಗಯ್ಯ ಹಿರೇಮಠ್ ವಯಸ್ಸು 63 ವರ್ಷ ಜಾತಿ ಜಂಗಮ ಉಃ ನಿವೃತ್ತ ನೌಕರ ಸಾಃ ಬಸವಂತಪೂರ ಹಾಲಿವಸತಿ ಮಮತಾ ಕಾಲೋನಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಮುನಮುಟಗಿ ಸೀಮಾಂತರದಲ್ಲಿ ಹೊಲ ಸವರ್ೆ ನಂಬರ 110/3 ಆಕಾರ 2 ಎಕರೆ 39 ಗುಂಟೆ ಮತ್ತು ಹೊಲ ಸವರ್ೆ ನಂಬರ 110/2 ಬಿ 1 ಎಕರೆ ಹೊಲ ಇರುತ್ತದೆ. ಈ ಹೊಲ ನನ್ನ ತಂದೆಯವರಾದ ನಾಗಯ್ಯ ಹಿರೇಮಠ್ ಇವರು 2002/2003 ನೇ ಸಾಲಿನಲ್ಲಿ ಮುನಮುಟಗಿ ಗ್ರಾಮದ ಮಲಕಣ್ಣಗೌಡ ತಂದೆ ಬಸನಗೌಡ ಮತ್ತು ವೀರಣ್ಣಗೌಡ ತಂದೆ ಬಸನಗೌಡ ಇವರಿಂದ ಖರೀದಿ ಮಾಡಿರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ ಸದರಿ ಹೊಲ ನಾನೇ ಸಾಗುವಳಿ ಮಾಡಿಕೊಂಡು ಬಂದಿರುತ್ತೇನೆ. ನಮ್ಮ ತಂದೆಯವರ ಮರಣದ ನಂತರ ನಾವು ಅಣ್ಣ-ತಮ್ಮಂದಿರರು ಹೊಲ ಪಾಲು ಮಾಡಿಕೊಳ್ಳಲು ಸವರ್ೆ ಹಾಕಿದಾಗ ಸವರ್ೆಯಲ್ಲಿ 19 ಗುಂಟೆ ಹೊಲ ಪಕ್ಕದ ಜಮೀನಿನ ಮಾಲೀಕರಾದ ಗಂಗಪ್ಪ ತಂದೆ ಶರಣಪ್ಪ ಕುಂಬಾರ ಇವರಿಂದ ಒತ್ತುವರಿಯಾಗಿದ್ದು ಸವರ್ೆಯಲ್ಲಿ ತಿಳಿದು ಬಂದಿರುತ್ತದೆ. ಗಂಗಪ್ಪ ಇವರು 19 ಗುಂಟೆ ಹೊಲದ ಸಂಬಂಧ ನಮ್ಮ ಜೊತೆ ತಂಟೆ ತಕರಾರು ಮಾಡಿಕೊಂಡು ಬಂದಿರುತ್ತಾರೆ. ಸುಮಾರು 3 ವರ್ಷಗಳಿಂದ ನಮ್ಮೂರ ಮಲ್ಲಿಕಾಜರ್ುನ ತಂದೆ ಮೈಲಾರಪ್ಪ ದೋರನಹಳ್ಳಿ ಇವರಿಗೆ ಹೊಲ ಸವರ್ೆ ನಂಬರ 110/3 ಆಕಾರ 2 ಎಕರೆ 39 ಗುಂಟೆ ಮತ್ತು ಹೊಲ ಸವರ್ೆ ನಂಬರ 110/2 ಬಿ 1 ಎಕರೆ ಹೊಲ ಪಾಲಿಗೆ ಹಚ್ಚಿರುತ್ತೇನೆ. ಪ್ರಸ್ತುತ ವರ್ಷ ನನ್ನ ಹೊಲದಲ್ಲಿ ಹತ್ತಿ ಊರಿದ್ದು ಸುಮಾರು 10-12 ದಿನಗಳ ಬೆಳೆ ಇತ್ತು. ಹೀಗಿರುವಾಗ ದಿನಾಂಕ 26/07/2021 ರಂದು ಮುಂಜಾನೆ 10-30 ಗಂಟೆಯ ಸುಮಾರಿಗೆ, ನಾನು ಶಹಾಪೂರದ ಮನೆಯಲ್ಲಿದ್ದಾಗ, ನಮ್ಮ ಹೊಲ ಪಾಲಿಗೆ ಮಾಡಿದ ಮಲ್ಲಿಕಾಜರ್ುನ ಈತನು ಫೋನ್ ಮಾಡಿ ಹೇಳಿದ್ದೇನೆಂದರೆ, ಈ ಹಿಂದೆ ನಿಮ್ಮ ಜೊತೆ ತಂಟೆ ತಕರಾರು ಮಾಡಿಕೊಂಡ ಬಂದಿದ್ದ ಗಂಗಪ್ಪ ತಂದೆ ಶರಣಪ್ಪ ಕುಂಬಾರ ವಯಸ್ಸು 45 ವರ್ಷ ಮತ್ತು ಅವನ ಮಗ ದೇವರಾಜ ತಂದೆ ಗಂಗಪ್ಪ ಕುಂಬಾರ ವಯಸ್ಸು 20 ವರ್ಷ ಇಬ್ಬರು ಕೂಡಿ ನಿಮ್ಮ ಹೊಲ ಸವರ್ೆ ನಂಬರ 110/2.ಬಿ ಆಕಾರ 1 ಎಕರೆ ಹೊಲದಲ್ಲಿ ಬಂದು, ಅವರ ಹೊಲಕ್ಕೆ ಹಚ್ಚಿ ತಕರಾರು ನಡೆದಿದ್ದ 19 ಗುಂಟೆ ಹೊಲದಲ್ಲಿರುವ ಹತ್ತಿ ಬೆಳೆಯನ್ನು ಹರಗುತಿದ್ದಾರೆ ನಾನು ವಿಚಾರಿಸಿದ್ದು ಇದರಲ್ಲಿ ನೀನು ತಲೆ ಹಾಕಬೇಡ ಸುಮ್ಮನೇ ದೂರ ಸರಿದುಕೊಳ್ಳು ಅಂತ ಹೇಳಿದ್ದಾರೆ ಅಂತಾ ತಿಳಿಸಿದಾಗ ನಾನು, ಶಹಾಪೂರದಿಂದ ಮೋಟರ್ ಸೈಕಲ್ ಮೇಲೆ ಹೊಲಕ್ಕೆ ಹೋಗುತಿದ್ದಾಗ, ಹತ್ತಿಗೂಡುರದಲ್ಲಿ ನಿಂತಿದ್ದ ನಮ್ಮೂರ ಮರೆಪ್ಪ ತಂದೆ ರಂಗಪ್ಪ ನಸಲಾಯಿ ವಯಸ್ಸು 35 ಇವರಿಗೆ ವಿಷಯ ತಿಳಿಸಿ ಜೊತೆಯಲಿ ಕರೆದುಕೊಂಡು ಹೊಲಕ್ಕೆ ಹೊದೇನು. ಮುಂಜಾನೆ 11-45 ಗಂಟೆಗೆ ಹೊಲಕ್ಕೆ ಹೋಗಿ ನೋಡಿದಾಗ, ಹೊಲದಲ್ಲಿನ ಹತ್ತಿ ಬೆಳೆ ಹಾನಿಯಾಗಿತ್ತು, ಈ ಬಗ್ಗೆ ಹೊಲದಲ್ಲಿದ್ದ ಮಲ್ಲಿಕಾಜರ್ುನ ಈತನಿಗೆ ವಿಚಾರಿಸಿದಾಗ ಗಂಗಪ್ಪ ಮತ್ತು ಅವರ ಮಗ ದೇವರಾಜ ಇಬ್ಬರು ಹತ್ತಿ ಬೆಳೆ ಹರಗಿ ನೀವು ಬರುವುದಕ್ಕಿಂತ ಮುಂಚೆ ಅಂದಾಜು 15-20 ನಿಮೀಷಗಳ ಹಿಂದೆ ಇಲ್ಲಿಂದ ಹೋಗಿರುತ್ತಾರೆ ಅಂತ ತಿಳಿಸಿದನು. ಈ ಬಗ್ಗೆ ನನ್ನ ಕುಟುಂಬದವರ ಜೊತೆ ವಿಚಾರಣೆ ಮಾಡಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ. ಕಾರಣ ಗಂಗಪ್ಪ ಮತ್ತು ಅವನ ಮಗ ದೇವರಾಜ ಇಬ್ಬರು ಕೂಡಿ ಮುನಮುಟಗಿ ಸೀಮಾಂತರದಲ್ಲಿರುವ ನನ್ನ ಹೊಲ ಸವರ್ೆ ನಂಬರ 110/2.ಬಿ ಆಕಾರ 1 ಎಕರೆ ಹೊಲದಲ್ಲಿ ದಿನಾಂಕ 26/07/2021 ರಂದು ಮುಂಜಾನೆ 10-00 ಗಂಟೆಯಿಂದ 11-30 ಗಂಟೆಯ ಸುಮಾರಿಗೆ ಅಕ್ರಮವಾಗಿ ನನ್ನ ಹೊಲದಲ್ಲಿ ಬಂದು, ಅಂದಾಜು 19 ಗುಂಟೆ ಹೊಲದಲ್ಲಿದ್ದ ಹತ್ತಿ ಬೆಳೆಯನ್ನು ಹರಗಿ ಅಂದಾಜು 15 ರಿಂದ 20 ಸಾವಿರ ರೂಪಾಯಿಯಷ್ಟು ಹಾನಿ ಮಾಡಿರುತ್ತಾರೆ ಈ ಬಗ್ಗೆ ಕ್ರಮ ಕೈಗೊಳ್ಳಲು ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 172/2021 ಕಲಂ 447, 427 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 82/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ. 29/07/2021 ರಂದು 12.00 ಪಿ.ಎಮ್ ಕ್ಕೆ ಪಿರ್ಯಾದಿ ಪ್ರಶಾಂತ ಜೈನ ತಂದೆ ಭರತಕುಮಾರ ಜೈನ ವಯಾ: 33 ಜಾತಿ: ಜೈನ ಉ: ಮ್ಯಾನೇಜರ ಶ್ರೀ ರಾಜೇಂದ್ರ ಆಗ್ರೋ ಇಂಡ್ರಸ್ಟ್ರೀಜ್ ಸಾ: ಮಾತಾಮಾಣೀಕೇಶ್ವರಿ ನಗರ ಯಾದಗಿರಿ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ನೀಡಿದ್ದು ಸಾರಾಂಶವೆನಂದರೆ ನಮ್ಮ ತಂದೆ ತಾಯಿಗೆ ಇಬ್ಬರೂ ಮಕ್ಕಳಿದ್ದು ನಾನು ಹಿರಿಯ ಮಗನಾಗಿರುತ್ತೆನೆ ನಮ್ಮ ತಂಗಿ ಮೋನಿಕಾ ಇವರಿಗೆ ಪುನಾಕ್ಕೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ನಾವು ಯಾದಗಿರಿ ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿರುವ ಮಲ್ಲಿಕಾಜರ್ುನ ತಂದೆ ಬಸವರಾಜ ಬೋರಡ್ಡಿ ಎಂಬವರ ಮನೆಯಲ್ಲಿ ನಾಲ್ಕು ವರ್ಷದಿಂದ ಬಾಡಿಗೆ ಮನೆ ಮಾಡಿಕೊಂಡು ಇರುತ್ತೇವೆ ನಮ್ಮ ತಂದೆ ಭರತಕುಮಾರ ಜೈನ ತಂದೆ ತೇಜರಾಜ ಜೈನ ವಯಾ: 58 ಉ: ಮ್ಯನೇಜರ ಶುಭಂ ಪೆಟ್ರೋಲ್ ಬಂಕ ಜಾತಿ: ಜೈನ ಸಾ: ಮಾತಾಮಾಣೇಖೇಶ್ವರಿ ನಗರ ಯಾದಗಿರಿ ಇವರು ನಮ್ಮ ಚಿಕ್ಕಪ್ಪವರಾದ ಕಿಶೋರ ಕುಮಾರ ಜೈನ ರವರ ಯಾದಗಿರಿ ನಗರದಲ್ಲಿರುವ ಶುಭಂ ಪೆಟ್ರೋಲ ಬಂಕದಲ್ಲಿ 19 ವರ್ಷದಿಂದ ಮ್ಯಾನೇಜರ ಕೆಲಸ ಮಾಡಿಕೊಂಡು ಇದ್ದರು ನಮ್ಮ ತಂದೆಗೆ ಯಾವುದೇ ದುಶ್ಚಟಗಳು ಇರಲಿಲ್ಲಾ ಮತ್ತು ನಮ್ಮ ತಂದೆಯವರು ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆ ನಮ್ಮಗೆ ಏನು ತಿಳಿಸಿರುತ್ತಿರಲ್ಲಿಲ್ಲ. ದಿನಾಂಕ; 27/07/2021 ರಂದು ರಾತ್ರಿ 8-00 ಪಿ.ಎಮ್ ಸುಮಾರಿಗೆ ಎಂದಿನಂತೆ ನಮ್ಮ ತಂದೆಯವರು ಪೆಟ್ರೋಲ ಬಂಕ ಕೆಲಸ ಮುಗಿಸಿಕೊಂಡು ಮನೆಗೆ ಬಂದರು ಎಲ್ಲಾರೂ ಕೂಡಿಕೊಂಡು ಊಟ ಮಾಡಿಕೊಂಡು ಮಲಗಿಕೊಂಡೆವು ದಿನಾಂಕ 28/07/2021 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ನಮ್ಮ ತಂದೆ ಪ್ರತಿ ದಿವಸದಂತೆ ಪೆಟ್ರೋಲ್ ಬಂಕ ಕೆಲಸಕ್ಕೆ ಹೋದರು ಮಧ್ಯಹ್ನಾ ಮನೆಗೆ 2-00 ಗಂಟೆಗೆ ಸುಮಾರಿಗೆ ಊಟಕ್ಕೆಂದು ಬರುತ್ತಿದ್ದರು ಅ ದಿವಸ ಊಟಕ್ಕೆ ಮನೆಗೆ ಬರಲ್ಲಿಲ್ಲ ನಾವು ಏನು ಕೆಲಸ ಇರಬಹುದು ಅಂತಾ ಸುಮ್ನೆ ಇದ್ದೆವು ರಾತ್ರಿಯಾದರೂ ಕೂಡ ಮನೆಗೆ ಬರದ ಕಾರಣ ನಾನು ಪೆಟ್ರೋಲ ಬಂಕಿಗೆ ಬಂದು ನೋಡಲು ನಮ್ಮ ತಂದೆ ಕಾಣಿಸಲಿಲ್ಲ ಆಗ ನಾನು ಆಫೀಸನ ಒಳಗೆ ಹೋದಾಗ ನಮ್ಮ ತಂದೆಯವರ ಮೋಬೈಲ್ ಟೇಬಲ್ ಮೇಲೆ ಇಟ್ಟಿದ್ದರು ಸ್ವೀಚ ಆಫ್ ಅಗಿತ್ತು ಆಗ ನಾನು ಅಲ್ಲಿ ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುತ್ತಿದ್ದ ಹುಡುಗರಿಗೆ ವಿಚಾರಿಸಲು ನಿಮ್ಮ ತಂದೆಯವರು ಹೊಸ ಬಸ್ ನಿಲ್ದಾಣ ಹತ್ತಿರ ಕೆಲಸವಿರುತ್ತದೆ ಅಲ್ಲಿಯವರಗೆ ಬಿಡುವಂತೆ ತಿಳಿಸಿದ್ದರಿಂದ ಮಲ್ಲಿಕಾಜರ್ುನ ಪೂಜಾರಿ ಈತನು ಗಾಡಿಯ ಮೇಲೆ ಮುಂಜಾನೆ 8-00 ಗಂಟೆ ಸುಮಾರಿಗೆ ಬಿಟ್ಟು ಬಂದಿರುತ್ತಾನೆ ಇಲ್ಲಿಯವರಗೆ ನಿಮ್ಮ ತಂದೆಯವರ ಪೆಟ್ರೋಲ್ ಬಂಕಿಗೆ ಬಂದಿರುವುದಿಲ್ಲ ನಾವು ಮನೆಯಲ್ಲಿ ಇರಬಹುದು ಅಂತಾ ಸುಮ್ನೆ ಇದ್ದೇವು ಅಂತಾ ತಿಳಿಸಿದರು ನಾನು ನಂತರ ನಮ್ಮ ಸಂಭಂದಿಕರಲ್ಲಿ ಕೂಡಾ ವಿಚಾರಿಸಲು ನನ್ನ ತಂದೆಯ ಬಗ್ಗೆ ಸುಳಿವು ಸಿಗಲಿಲ್ಲಾ. ಎಲ್ಲಿಗೆ ಹೋಗಿರುತ್ತಾನೆ ಎಂಬುವುದರ ಮಾಹಿತಿ ಸಿಕ್ಕಿರುವುದಿಲ್ಲಾ ಕಾರಣ ಎಲ್ಲಾ ಕಡೆ ವಿಚಾರಿಸಿ ನನ್ನ ತಂದೆಯ ಬಗ್ಗೆ ಸುಳಿವು ಸಿಗದ ಕಾರಣ ನಮ್ಮ ಚಿಕ್ಕಪ್ಪ ಕಿಶೋರ ಕುಮಾರ ಜೈನ ಇವರಿಗೆ ಕೂಡ ವಿಷಯ ತಿಳಿಸಿದ್ದು ಆಗ ನಮ್ಮ ಚಿಕ್ಕಪ್ಪ ಯಾದಗಿರಿಗೆ ಬಂದ ನಂತರ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಕಾಣೆಯಾದ ನನ್ನ ತಂದೆ ಚಹರೆ ಪಟ್ಟಿ, ಸಾದಾಗೆಂಪು ಬಣ್ಣ, ದುಂಡನೆಯ ಮುಖ, ಎತ್ತರ 5 ಪೀಟ್ 6 ಇಂಚು ಎತ್ತರ, ಸದೃಡ ಮೈಕಟ್ಟು, ತಲೆಯ ಮೇಲೆ ಬಿಳಿಯ ಕೂದಲು, ನೀಲಿ ಬಣ್ಣದ ಟೀ ಶರ್ಟ, ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದು ಕನ್ನಡ ಭಾಷೆ, ಹಿಂದಿ ಭಾಷೆ, ಮಾರವಾಡಿ ಭಾಷೆ, ಮಾತನಾಡುತ್ತಾನೆ. ನನ್ನ ತಂದೆಯವರು ಯಾವ ಕಾರಣಕ್ಕಾಗಿ ಊರು ಬಿಟ್ಟು ಹೋಗಿರುತ್ತಾರೆ ಎಂಬುದರ ಬಗ್ಗೆ ನಮಗೆ ತಿಳಿದು ಬಂದಿರುವುದಿಲ್ಲ ಕಾರಣ ಕಾಣೆಯಾದ ನನ್ನ ತಂದೆ ಭರತಕುಮಾರ ಜೈನ ತಂದೆ ತೇಜರಾಜ ಜೈನ ಸಾಃ ಮಾತಾಮಾಣೇಕೇಶ್ವರಿ ನಗರ ಯಾದಗಿರಿ ರವರಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಂದ ಠಾಣೆ ಗುನ್ನೆ ನಂ.82/2021 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 116/2021 ಕಲಂ 87 ಕೆ.ಪಿ ಕಾಯ್ದೆ : ದಿನಾಂಕ: 29-07-2021 ರಂದು 02-00 ಪಿಎಮ್ ಕ್ಕೆ ಪಿ..ಐ ಸಾಹೇಬರು ಠಾಣೆಗೆ ಹಾಜರಾಗಿ ಮದ್ಯಾಹ್ನ 12-45 ಗಂಟೆಗೆ ಕಾಳಬೆಳಗುಂದಿ ಗ್ರಾಮದ ಅರಣ್ಯ ಪ್ರದೆಶದಲ್ಲಿ ಅಂದರ ಬಾಹರ ಎಂಬ ಇಸ್ಪೆಟ ಜೂಜಾಟದ ದಾಳಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆ ಆರೋಪಿತರನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.116/2021 ಕಲಂ.87 ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
117/2021, ಕಲಂ, 341, 323, 354, 504. 506 ಸಂಗಡ 34 ಐ ಪಿ ಸಿ : ಇಂದು ದಿನಾಂಕ. 29.07.2021 ರಂದು ಸಾಯಂಕಾಲ 4-30 ಗಂಟೆಗೆ ಶ್ರೀಮತಿ ನೀಲಮ್ಮ ಗಂಡ ಪ್ರಕಾಶ ಮಲ್ಹಾರ ಸಾ|| ಕೂಡ್ಲೂರ ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ದೂರು ಸಾರಾಂಶವೇನೆಂದರೆ, ದಿನಾಂಕ. 26.07.2021 ರಂದು 12.00 ಪಿ.ಎಮ್.ಕ್ಕೆ ಫಿಯರ್ಾದಿ ಮತ್ತು ಆಕೆಯ ಗಂಡ ಹಾಗೂ ತಾಯಿ ಸಾಬವ್ವ 3 ಜನ ಸೇರಿ ಕಣೇಕಲ್ ಸೀಮಾಂತರದ ಜಮೀನು ಸವರ್ೇ.264 ರಲ್ಲಿ ಕೆಲಸ ಮಾಡಲು ಹೋದಾಗ 1) ಮಹೇಶ ತಂದೆ ಬನ್ನಪ್ಪ ಕಿವಡನೋರ 02) ಹಣಮಂತಿ ಗಂಡ ಬನ್ನಪ್ಪ ಕಿವಡನೋರ 03) ಮಹಾದೇವಿ ಗಂಡ ಹಣಮಂತ ಕುರಳ್ಳೋರ ಸಾ|| ಗಡ್ಡೇಸೂಗುರ 04) ಹಣಮಂತ ತಂದೆ ನರಸಪ್ಪ ಕುರಳ್ಳಿ ಸಾ|| ಗಡ್ಡೇಸೂಗೂರ ಇವರು ಜಮೀನುದಲ್ಲಿ ಹೋಗದಂತೆ ಕಣೇಕಲ ಗ್ರಾಮದ ಒಳಗೆ ಹೋಗುವ ಡಾಂಬರ ರೋಡಿನ ಮೇಲೆ ತಡೆದು ನಿಲ್ಲಿಸಿದ್ದು, ಅವರಲ್ಲಿ 01) ಮಹೇಶ ಕಿವಡನೋರ ಫಿಯರ್ಾದಿ ಕಡೆಯವರಿಗೆ ಏ ಭೋಸಡೀ ಮಕ್ಕಳೇ, ನೀವು ನಮ್ಮ ಹೊಲದ ಕಡೆಗೆ ಯಾಕೆ ಬರುತ್ತೀದ್ದೀರಿ ಸೂಳೇ ಮಕ್ಕಳೇ, ಈ ಹೊಲ ನಮ್ಮದು, ತಿನ್ನಲು ಗತಿ ಇಲ್ಲದ ನಿಮಗೆ ದುಡಿದು ಉಣ್ಣಲು ನಮ್ಮ ತಾತ ಭೀಕ್ಷೆ ನೀಡಿದ್ದು ಅಂತ ಅವಾಚ್ಯವಾಗಿ ಬೈದು, ತನ್ನ ಕಾಲಿನಿಂದ ಸಾಬವ್ವಳಿಗೆ ಬಲಗಾಲ ಟೊಂಕಕ್ಕೆ ಒದ್ದಿದ್ದರಿಂದ ನೆಲಕ್ಕೆ ಕುಸಿದು ಬಿದ್ದಿದ್ದು, ನೆಲಕ್ಕೆ ಬಿದ್ದವಳಿಗೆ 02) ಹಣಮಂತಿ ಕಿವಡನೋರ ಕೂದಲು ಹಿಡಿದು ಎಳೆದಾಡಿ ಕೈಯಿಂದ ಎದೆಗೆ ಹೊಡೆದು ಚೂರಿದ್ದು, ಮತ್ತು 03) ಮಹಾದೇವಿ ಗಡ್ಡೇಸೂಗುರ ಕೈಯಿಂದ ಮುಖಕ್ಕೆ ಹೊಡೆದಿದ್ದರಿಂದ ಮೂಗಿನಿಂದ ರಕ್ತ ಬಂದಿದ್ದು, 04) ಹಣಮಂತ ಗಡ್ಡೇಸೂಗುರ ಇವನು ಮುಂದೆ ನಿಂತು ಫಿಯರ್ಾದಿ ತಾಯಿಗೆ ತನ್ನ ಹೆಂಡತಿ ಹಾಗೂ ತನ್ನ ಅತ್ತೆ ಕಡೆಯಿಂದ ಮತ್ತು ಅಳಿಯ ಮಹೇಶನಿಂದ ಹೊಡೆಸಿರುತ್ತಾನೆ. ಹೊಡೆಯುವದನ್ನು ವಿಡಿಯೋ ಮಾಡುತ್ತಿದ್ದ ಫಿಯರ್ಾದಿ ಗಂಡನಿಗೆ ವಿಡಿಯೋ ಬಂದ ಮಾಡಿಸಿ ನೀನೇಕೆ ಬರುತ್ತೀ ನಿನ್ನ ಹೆಂಡತಿ ಒಬ್ಬಳನ್ನೆ ಕಳಿಸಿ ನೋಡು ಅವಾಗ ಗೊತ್ತಾಗುತ್ತದೆ ಅಂತ ಅವಾಚ್ಯ ಶಬ್ದಗಳಿಂದ ಬೈದು ಅಡ್ಡಗಟ್ಟಿ ನಿಂತು ಸೂಳೇ ಮಕ್ಕಳೇ ನಿವೇನಾದರೂ ಬಂದರೆ ನಿಮಗೆ ಇಲ್ಲಿಯೇ ಖಲಾಸ ಮಾಡುತ್ತೇನೆ ಅಂತ ಜೀವಭಯ ಹಾಕಿದ್ದು, ನಂತರ ಜಗಳ ನೋಡಿ ರಸ್ತೆ ಮೇಲೆ ಹೊರಟಿದ್ದ ರಾಜಾ ತಂದೆ ಈರಪ್ಪ ಕಣೇಕಲ, ದೇವು ತಂದೆ ರಾಮಸ್ವಾಮಿ ಗೌಡಗೇರಾ ಮತ್ತು ಫಿಯರ್ಾದಿ ಮತ್ತು ಆಕೆಯ ಗಂಡ ಪ್ರಕಾಶ ಎಲ್ಲರೂ ಸೇರಿ ಫಿಯರ್ಾದಿ ತಾಯಿಗೆ ಹೊಡೆಯುವದನ್ನು ಬಿಡಿಸಿದ್ದು, ಫಿಯರ್ಾದಿ ಕಡೆಯವರು ತಮ್ಮ ತಾಯಿಯನ್ನು ಮನೆಗೆ ಕರೆದುಕೊಂಡು ಹೊರಟಾಗ ಮೇಲಿನ ಎಲ್ಲರೂ ನೀವೂ ಇನ್ನೊಮ್ಮೆ ಈ ಜಮೀನು ಕಡೆಗೆ ಬಂದರೆ ನಿಮಗೆ ಜೀವ ಸಹಿತ ಉಳಿಸುವದಿಲ್ಲ ಸೂಳೇ ಮಕ್ಕಳೇ ಅಂತ ಜೀವ ಬೆದರಿಕೆ ಹಾಕಿದು,್ದ ಆಸ್ತಿ ವಿಷಯದಲ್ಲಿ ಜಗಳ ಮಾಡಿ ಫಿಯರ್ಾದಿ ತಾಯಿ ಮೇಲೆ ಹಲ್ಲೆ ಮಾಡಿ ಒದ್ದು ಅವಮಾನ ಮಾಡಿದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ದೂರು ಸಾರಾಂಶ ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 108/2021 ಕಲಂ: 504,506 ಐಪಿಸಿ : ದಿನಾಂಕ: 29/07/2021 ರಂದು ಶ್ರೀ ಸದಾನಂದ ತಂದೆ ಮಲ್ಲಪ್ಪ ಕಟ್ಟಿಮನಿ ವಯಾ|| 37 ಜಾ|| ಹಿಂದೂ ಹೊಲೆಯ ಉ|| ಗ್ರಾಮ ಪಂಚಾಯತ ಪಂಪ್ ಆಪರೇಟರ ಸಾ|| ಕರಡಕಲ್ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 25/07/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ನನ್ನ ಮನೆಯಲ್ಲಿದ್ದಾಗ ನಾನು ವಾಟ್ಸಅಪ್ದ ದೇಸಾಯಿ ಬಿಲ್ಡಿಂಗ್ ಗೆಳೆಯರ ಬಳಗ ಗ್ರೂಪ್ ಗೆ ನಾನು ಭಾಗಪ್ಪ ಹರಿಜನ ಹಾಗೂ ಅಶೋಕ ಹದನೂರ ಮತ್ತು ಲಾಲಪ್ಪ ಹೊಸಮನಿ ಇವರ ಗ್ರೂಪ್ ಪೋಟೊವನ್ನು ನಾನು ಬಿಟ್ಟಿರುತ್ತೇನೆ. ಆವಾಗ ಗೆಳೆಯರ ಬಳಗದ ಗ್ರೂಪ್ನವನಾದ ಸುರೇಶ ತಂದೆ ಸಿದ್ದಪ್ಪ ನಗನೂರ ಸಾ|| ಮಾಲಹಳ್ಳಿ ಇವನು ಲೇ ರಂಡಿ ಮಗನೆ ಸೂಳೆಮಗನೆ ರೌಡಿ ಸೂಳೆ ಮಕ್ಕಳ ಫೋಟೊಗಳನ್ನು ನನಗೆ ಬಿಟ್ಟಿರುತ್ತೇಲೆ ನಿನ್ನ ತಿಂಡಿ ಎಷ್ಟು ಅದ, ನಿನ್ನ ಊರಿಗೆ ಬಂದು ಕಡಿಯುತ್ತೇನೆ. ನಾನು ಪೊಲೀಸ್ ಇದ್ದೀನಿ ನನಗೆ ಯಾರೂ ಭಾಗಪ್ಪ ಹರಿಜನ ಸೂಳೆಮಗನು ಏನು ಮಾಡಕ್ಕಾಗಲ್ಲ ಅಂತ ಅನ್ನುತ್ತ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಭಯ ಹಾಕಿರುತ್ತಾನೆ. ಅಷ್ಟೇ ಅಲ್ಲದೆ ನಾನು ಸುರಪುರಕ್ಕೆ ಹೋದಾಗ ಸುರೇಶ ಈತನು ನಾಲ್ಕೈದು ಜನ ರೌಡಿಗಳನ್ನು ಬಿಟ್ಟು ನನಗೆ ಬೆನ್ನು ಹತ್ತಿಸಿದ್ದನು. ಆವಾಗ ನಾನು ಜೀವದ ಭಯದಿಂದ ತಪ್ಪಿಸಿಕೊಂಡು ಬಂದೆನು ಹಾಗೂ ನನಗೆ ದಿನಾಲು ಫೋನ್ ಮಾಡಿ ಜೀವದ ಭಯ ಹಾಗೂ ಕೊಲೆ ಬೆದರಿಕೆ, ಅವಾಚ್ಯ ಶಬ್ದಗಳಿಂದ ಬೈದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ನನ್ನ ಜೀವಕ್ಕೆ ಮತ್ತು ಕುಟುಂಬದವರ ಜೀವಕ್ಕೆ ಏನಾದರು ಆದರೆ ಇವನೇ ಹೊಣೆಗಾರನಾಗಿರುತ್ತಾನೆ ಕಾರಣ ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಮನೆಯಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಈ ಅಜರ್ಿ ನೀಡಿರುತ್ತೇನೆ ಅಂತ ಅಜರ್ಿ ನೀಡಿದ್ದು, ಸದರಿ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಗುನ್ನೆ ನಂ 108/2021 ಕಲಂ: 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 107/2021 ಕಲಂ: 279, 337, 338 ಐಪಿಸಿ : ಇಂದು ದಿನಾಂಕ: 29/07/2021 ರಂದು 2.30 ಪಿಎಮ್ಕ್ಕೆ ವಿಜಯಪುರದ ಶ್ರೀ ಬಸವ ಬ್ರೇನ್ & ಸ್ಪೈನ್ ಸೆಂಟರ್ದಲ್ಲಿ ಗಾಯಾಳು ಚನ್ನಬಸಪ್ಪ ಮಾದರ ಸಾ|| ಮುದನೂರ ಕೆ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ನಾನು ದಿ: 26/07/2021 ರಂದು ನನ್ನ ಗೆಳೆಯನಾದ ಖಾಜಾಪಟೇಲ ತಂದೆ ಬಾಬಾಪಟೇಲ ಬಿರಾದಾರ ಸಾ|| ಕೆಂಭಾವಿ ಈತನೊಂದಿಗೆ ನಮ್ಮೂರಿನಿಂದ ನನ್ನ ಕೆಲಸದ ನಿಮಿತ್ಯ ಮೋ.ಸೈ ನಂ ಕೆಎ33 ಡಬ್ಲೂ 4352 ನೇದ್ದರ ಮೇಲೆ ಯಾಳಗಿಗೆ ಹೋಗಿ ಮರಳಿ ಕೆಂಭಾವಿಗೆ ಬರುವ ಕುರಿತು 12.30 ಪಿಎಮ್ ಸುಮಾರಿಗೆ ಮೋಟರ ಸೈಕಲ್ ನಡೆಸುತ್ತಿದ್ದ ಖಾಜಾಪಟೇಲ ಈತನು ಯಾಳಗಿ ತಾಂಡಾ ದಾಟಿ ರಾಮು ತಂದೆ ಸೇವು ರಾಠೋಡ ರವರ ಹೊಲದ ಹತ್ತಿರ ಮೋಟರ ಸೈಕಲನ್ನು ಅತಿವೇಗ & ಅಲಕ್ಷತನದಿಂದ ನಡೆಸಿ ಎಡಭಾಗಕ್ಕೆ ಕಟ್ ಮಾಡಿದಾಗ ಕೆಳಗೆ ಬಿದ್ದಿದ್ದು, ನನಗೆ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯ, ಎಡಗೈ ಅಂಗೈ ಮೇಲೆ ರಕ್ತಗಾಯ, ಎಡಗೈ ಭುಜದ ಕೆಳಗಡೆ ಒಳಪೆಟ್ಟಾಗಿ ಕೈ ಮುರಿದಂತಾಗಿದ್ದು, ಎದೆಯ ಭಾಗದಲ್ಲಿ & ಗುದದ್ವಾರದಲ್ಲಿ ಪೆಟ್ಟಾಗಿದ್ದು ಇರುತ್ತದೆ. ಖಾಜಾಪಟೇಲ ಈತನಿಗೆ ಯಾವುದೇ ಗಾಯ ಆಗಿರುವದಿಲ್ಲ ನಂತರ ಕೆಂಭಾವಿ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಅದೇ ದಿನ ಹೆಚ್ಚಿನ ಉಪಚಾರ ಕುರಿತು ವಿಜಯಪುರಕ್ಕೆ ಸೇರಿಕೆಯಾಗಿದ್ದು ಇರುತ್ತದೆ ಕಾರಣ ಸದರಿ ಖಾಜಾಪಟೇಲ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ವಿವರದ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 107/2021 ಕಲಂ: 279, 337, 338 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ
106/2021 ಕಲಂ: 498(ಎ), 304(ಬಿ) ಸಂಗಡ 34 ಐಪಿಸಿ & 3, 4 ಡಿಪಿ ಯಾಕ್ಟ್ : ಇಂದು ದಿ: 29/07/2021 ರಂದು 9.00 ಎಎಮ್ಕ್ಕೆ ಶ್ರೀ ಕಾಶಿಲಿಂಗಯ್ಯ ತಂದೆ ಶ್ರೀಶೈಲಯ್ಯ ಹಿರೇಮಠ ಸಾ: ಯಕ್ತಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನನಗೆ ಈರಯ್ಯ ಅನ್ನುವ ಒಬ್ಬನೇ ಗಂಡುಮಗನಿದ್ದು ಭಾಗ್ಯಶ್ರೀ ಹಾಗು ವಿದ್ಯಾಶ್ರೀ ಅನ್ನುವ ಎರಡು ಜನ ಹೆಣ್ಣು ಮಕ್ಕಳಿರುತ್ತಾರೆ. ಮಗಳಾದ ಭಾಗ್ಯಶ್ರೀ ವಯಾ|| 20 ವರ್ಷ ಇವಳಿಗೆ ಸುಮಾರು ಎರಡು ವರ್ಷಗಳ ಹಿಂದೆ ಶಹಾಪೂರದ ಬಸಯ್ಯ ತಂದೆ ಚರಲಿಂಗಯ್ಯ ಹಿರೇಮಠ ಇವನಿಗೆ ಕೊಟ್ಟು ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದು ಇರುತ್ತದೆ. ಅದರಂತೆ ಸದರಿ ನಿಶ್ಚಿತಾರ್ಥವನ್ನು ದಿನಾಂಕ: 06.11.2019 ರಂದು ನಮ್ಮ ಯಕ್ತಾಪೂರ ಗ್ರಾಮದ ನಮ್ಮ ಮನೆಯಲ್ಲಿ ಆಗಿದ್ದು ಇರುತ್ತದೆ. ನಿಶ್ಚಿತಾರ್ಥ ಕಾಲಕ್ಕೆ ನಾನು ನನ್ನ ಹೆಂಡತಿ ಸರಸ್ವತಿ, ನನ್ನ ಮಗ ಈರಯ್ಯ, ತಮ್ಮ ಗೋಕರ್ಣಯ್ಯ ತಂದೆ ಶ್ರೀಶೈಲಯ್ಯ, ತಮ್ಮನ ಹೆಂಡತಿ ಕಮಲಾಕ್ಷಿ, ಹಾಗೂ ನಮ್ಮೂರ ರಾಚಯ್ಯ ತಂದೆ ಶಿವಯ್ಯ ಹಿರೇಮಠ, ನಾನಾಗೌಡ ತಂದೆ ನಿಂಗನಗೌಡ ಬಿರಾದಾರ, ಗುತ್ತಪ್ಪಗೌಡ ತಂದೆ ಕುಂಟಪ್ಪಗೌಡ ಬೆಕಿನಾಳ ಹಾಗೂ ಇತರರು ಮತ್ತು ಗಂಡಿನ ಮನೆಯವರಾದ ವರನಾದ 1) ಬಸಯ್ಯ ತಂದೆ ಚರಲಿಂಗಯ್ಯ ಹಿರೇಮಠ ವರನ ತಾಯಿಯಾದ 2) ಶಾಂತಮ್ಮ ಗಂಡ ಚರಲಿಂಗಯ್ಯ ಹಿರೇಮಠ ವರನ ತಂದೆಯಾದ 3) ಚರಲಿಂಗಯ್ಯ ತಂದೆ ಶಾಂತಯ್ಯ ಹಿರೇಮಠ ಹಾಗೂ ಅವರ ಗ್ರಾಮದವರು ಶರಣಯ್ಯಸ್ವಾಮಿ ಹಿರೇಮಠ, ಸಂಗಯ್ಯಸ್ವಾಮಿ ಹಿರೇಮಠ ಅಲ್ಲದೇ ಬಸಯ್ಯಸ್ವಾಮಿ ಹಿರೇಮಠ ಇದ್ದದ್ದು ಇರುತ್ತದೆ. ನಿಶ್ಚಿತಾರ್ಥದಲ್ಲಿ ಮದುವೆ ಸಮಯದಲ್ಲಿ ಗಂಡಿನ ಮನೆಯವರಿಗೆ 2 ತೊಲಿ ಬಂಗಾರ ಮತ್ತು ಗೃಹೋಪಯೋಗಿ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು ಮತ್ತು ಮದುವೆಯನ್ನು ಹೆಣ್ಣಿನ ಮನೆಯವರಾದ ನಾವೇ ಮಾಡಿಕೊಡುವಂತೆ ಮಾತುಕತೆಯಾಗಿ ಆಗಿದ್ದು ಅದಕ್ಕೆ ನಾವು ನಮ್ಮ ಮಗಳ ಹಿತದೃಷ್ಠಿಯಿಂದ ಒಪ್ಪಿಕೊಂಡಿದ್ದು ಇರುತ್ತದೆ.ನಂತರ ದಿನಾಂಕ: 07.12.2020 ರಂದು ಈ ಮೊದಲು ನಿಶ್ಚಿತಾರ್ಥದಲ್ಲಿ ಮಾತನಾಡಿದಂತೆ 2 ತೊಲಿ ಬಂಗಾರ ಮತ್ತು ಅಂದಾಜು 2 ಲಕ್ಷ ರೂಪಾಯಿ ಕಿಮ್ಮತ್ತಿನ ಗೃಹ ಉಪಯೋಗಿ ವಸ್ತುಗಳು ವರದಕ್ಷಿಣೆಯನ್ನು ಕೊಟ್ಟು ನಮ್ಮ ಮಗಳಾದ ಭಾಗ್ಯಶ್ರೀ @ ಪುಷ್ಪಾ ಇವಳಿಗೆ ಶಹಾಪೂರ ಪಟ್ಟಣದ ಬಸಯ್ಯ ತಂದೆ ಚರಲಿಂಗಯ್ಯ ಹಿರೇಮಠ ಈತನೊಂದಿಗೆ ನಮ್ಮೂರಿನ ಜನತಾ ಕಾಲೋನಿಯಲ್ಲಿನ ಸರಕಾರಿ ಶಾಲೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆ ಸಮಯದಲ್ಲಿ ನಮ್ಮ ಕಡೆಯವರು ಮತ್ತು ಗಂಡಿನ ಕಡೆಯವರು ಹಾಜರಿದ್ದದ್ದು ಇರುತ್ತದೆ.ಮದುವೆಯಾದ ಸುಮಾರು 3 ತಿಂಗಳವರೆಗೆ ನನ್ನ ಮಗಳು ತನ್ನ ಗಂಡ ಹಾಗೂ ಅವರ ಮನೆಯವರೊಂದಿಗೆ ಚೆನ್ನಾಗಿದ್ದಳು. ನಂತರ ಸುಮಾರು ಈಗ್ಗೆ 2-3 ತಿಂಗಳಿನಿಂದ ಮಗಳಾದ ಭಾಗ್ಯಶ್ರೀ @ ಪುಷ್ಪಾ ಇವಳಿಗೆ ಅವಳ ಗಂಡ ಬಸಯ್ಯ ತಂದೆ ಚರಲಿಂಗಯ್ಯ ಹಿರೇಮಠ ಮತ್ತು ಅತ್ತೆಯಾದ ಶಾಂತಮ್ಮ ಗಂಡ ಚರಲಿಂಗಯ್ಯ ಹಿರೇಮಠ ಮಾವನಾದ ಚರಲಿಂಗಯ್ಯ ತಂದೆ ಶಾಂತಯ್ಯ ಹಿರೇಮಠ ಹಾಗು ನಾದನಿಯಾದ ದಾನಮ್ಮ ಗಂಡ ಉಮೇಶ ಹಿರೇಮಠ ಇವರೆಲ್ಲರೂ ಸೇರಿ ನನ್ನ ಮಗಳಿಗೆ ನೀನು ಚೆನ್ನಾಗಿಲ್ಲ, ನಿನ್ನಿಂದ ನಮಗೇನು ಲಾಭವಿಲ್ಲ, ನಿನಗೆ ಅಡುಗೆ ಮಾಡಲು ಬರುವದಿಲ್ಲ ನಿನಗೆ ನಿನ್ನ ತವರು ಮನೆಯವರು ಹೇಗೆ ಕೆಲಸ ಕಲಿಸಿದ್ದಾರೋ ನಿನಗೇನು ಗೊತ್ತೇ ಇಲ್ಲ, ನೀನು ನಮ್ಮಿಂದ ತೊಲಗಿ ಹೋಗು, ಇಲ್ಲದಿದ್ದರೆ ನಿನ್ನ ತವರು ಮನೆಯಿಂದ ಇನ್ನೂ 5 ತೊಲಿ ಬಂಗಾರ ಹಾಗೂ 50 ಸಾವಿರ ರೂಪಾಯಿ ಹಣ ತೆಗೆದುಕೊಂಡು ಬಾ, ಇಲ್ಲದಿದ್ದರೆ ಎಲ್ಲಾದರು ಹೋಗಿ ಸಾಯಿ ಅಂತ ದಿನಾಲು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಅಂತ ನಮ್ಮ ಮಗಳು ನಮಗೆ ಆಗಾಗ ಫೋನ್ ಮೂಲಕ ತಿಳಿಸಿದ್ದು, ನಾವು ಅವಳಿಗೆ ಇರಲಿ ತಾಳಿಕೊಂಡು ಗಂಡನ ಮನೆಯವರೊಂದಿಗೆ ಹೊಂದಿಕೊಂಡು ಹೋಗುವಂತೆ ಬುದ್ದಿಮಾತು ಹೇಳಿದ್ದು ಇರುತ್ತದೆ. ಅಲ್ಲದೇ ನಮ್ಮ ಮಗಳಿಗೆ ತೊಂದರೆ ಕೊಡಬೇಡಿರಿ ಅಂತ ಹೇಳಿ ನನ್ನ ಮಗಳ ಗಂಡ ಹಾಗು ಅವರ ತಂದೆ ತಾಯಿಗೆ ಹೇಳಿದ್ದು ಇರುತ್ತದೆ. ನಂತರ ನಮ್ಮ ಮಗಳು ಇಲ್ಲಿಯವರೆಗೂ ನಮ್ಮ ಜೊತೆ ಫೋನಿನಲ್ಲಿ ಮಾತನಾಡಿ ಪುನಃ ತನಗೆ ಗಂಡನ ಮನೆಯವರು ತೊಂದರೆ ಕೊಡುತ್ತಿದ್ದಾರೆ ಅಂತ ತಿಳಿಸುತ್ತಾ ಬಂದಿದ್ದು ಇರುತ್ತದೆ. ಈಗ ಒಂದು ತಿಂಗಳ ಹಿಂದೆ ನಾನು ಹಾಗೂ ನನ್ನ ಹೆಂಡತಿ ಇಬ್ಬರು ಕೂಡಿಕೊಂಡು ಶಹಾಪುರಕ್ಕೆ ಹೋಗಿ ನನ್ನ ಮಗಳ ಮನೆಯವರಾದ ಅವಳ ಗಂಡ, ಅತ್ತೆ, ಮಾವ ಹಾಗೂ ನಾದಿನಿ ಇವರಿಗೆ ನೀವು ಹೇಳಿದಂತೆ 50 ಸಾವಿರ ರೂಪಾಯಿ ಹಣ ಹಾಗೂ 5 ತೊಲೆ ಬಂಗಾರ ಸ್ವಲ್ಪ ದಿನಗಳ ನಂತರ ತಂದುಕೊಡುತ್ತೇವೆ ಅಂತ ಹೇಳಿ ಬಂದಿದ್ದು ಇರುತ್ತದೆ.ಹೀಗಿದ್ದು ದಿನಾಂಕ 07.07.2021 ರಂದು ನಮ್ಮ ಮಗಳಿಗೆ ಕೆಲವು ದಿನಗಳವರೆಗೆ ನಮ್ಮ ಹತ್ತಿರ ಇದ್ದರಾಯಿತು ಅಂತ ಕರೆದುಕೊಂಡು ಬಂದಿದ್ದು ಇರುತ್ತದೆ. ನಮ್ಮ ಮಗಳು ಅವರು ಕೊಡುವ ಕಿರುಕುಳಕ್ಕೆ ಬೇಸತ್ತಿದ್ದು ಇರುತ್ತದೆ. ಆದರೂ ಸಹಿತ ನಮ್ಮ ಅಳಿಯ ದಿನಾಂಕ 25.07.2021 ರಂದು ನಮ್ಮ ಮನೆಗೆ ಬಂದಿದ್ದು ಸುಮಾರು ನಾಲ್ಕು ದಿನಗಳಿಂದ ನಮ್ಮ ಮನೆಯಲ್ಲಿದ್ದನು ಹೀಗಿದ್ದು ನಿನ್ನೆ ದಿನಾಂಕ: 28/07/2021 ರಂದು ರಾತ್ರಿ ನಾನು ನನ್ನ ಕೆಲಸದ ಮೇಲೆ ಜೆಸಿಬಿ ಕೆಲಸದ ಕುರಿತು ಯಡಿಯಾಪೂರಕ್ಕೆ ಹೋಗಿದ್ದು ಇಂದು ದಿನಾಂಕ 29.07.2021 ರಂದು ನಾನು ಯಡಿಯಾಪೂರ ಗ್ರಾಮದಲ್ಲಿದ್ದಾಗ ಬೆಳಿಗ್ಗೆ 04.12 ಗಂಟೆಗೆ ನಮ್ಮ ಅಳಿಯನಾದ ಬಸಯ್ಯ ತಂದೆ ಚರಲಿಂಗಯ್ಯ ಹಿರೇಮಠ ಇವರು ನನಗೆ ಪೋನ ಮಾಡಿ ರಾತ್ರಿ 3 ಗಂಟೆಯ ಸುಮಾರಿಗೆ ನಾನು ಮಲಗಿಕೊಂಡಾಗ ನಿಮ್ಮ ಮಗಳಾದ ಬಾಗ್ಯಶ್ರೀ ಇವಳು ನಮ್ಮ ಅಡುಗೆ ಮನೆಯಲ್ಲಿ ಫ್ಯಾನಿಗೆ ಪತ್ತಲದಿಂದ ನೇಣು ಹಾಕಿಕೊಂಡಿರುತ್ತಾಳೆ ಅಂತ ತಿಳಿಸಿದಾಗ ನಾನು ಹಾಗೂ ನನ್ನ ಹೆಂಡತಿ ಸರಸ್ವತಿ, ತಮ್ಮ ಗೋಕರ್ಣಸ್ವಾಮಿ, ಅವನ ಹೆಂಡತಿ ಕಮಲಾಕ್ಷಿ ಹಾಗೂ ನಮ್ಮ ಸಂಬಂದಿಕರಾದ ಈರಯ್ಯ ತಂದೆ ಬಸಲಿಂಗಯ್ಯ, ಗುರಯ್ಯ ತಂದೆ ನಾಗಯ್ಯ ಎಲ್ಲರು ಕೂಡಿ 4.45 ಎಎಮ್ಕ್ಕೆ ನಮ್ಮ ಮನೆಗೆ ಹೋಗಿ ನೋಡಲಾಗಿ ಮಗಳು ಭಾಗ್ಯಶ್ರೀ ಇವಳು ಅಡುಗೆ ಮನೆಯಲ್ಲಿನ ಫ್ಯಾನಿಗೆ ಪತ್ತಲದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.ಕಾರಣ ನಮ್ಮ ಮಗಳಾದ ಭಾಗ್ಯಶ್ರೀ @ ಪುಷ್ಪಾ ಇವಳಿಗೆ ಅವಳ ಗಂಡ ಬಸಯ್ಯ ತಂದೆ ಚರಲಿಂಗಯ್ಯ ಹಿರೇಮಠ ಮತ್ತು ಅತ್ತೆಯಾದ ಶಾಂತಮ್ಮ ಗಂಡ ಚರಲಿಂಗಯ್ಯ ಹಿರೇಮಠ ಮಾವನಾದ ಚರಲಿಂಗಯ್ಯ ತಂದೆ ಶಾಂತಯ್ಯ ಹಿರೇಮಠ ಹಾಗು ನಾದನಿಯಾದ ದಾನಮ್ಮ ಗಂಡ ಉಮೇಶ ಹಿರೇಮಠ ಇವರೆಲ್ಲರೂ ಸೇರಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಾ ಬಂದಿದ್ದರಿಂದ ಅವರು ನೀಡುವ ಕಿರುಕುಳಕ್ಕೆ ಬೇಸತ್ತು ನನ್ನ ಮಗಳು ದಿನಾಂಕ: 29.07.2021 ರ ರಾತ್ರಿ 01 ಗಂಟೆಯಿಂದ ದಿ: 29.07.2021 ರ ಬೆಳಗಿನ 4.00 ಗಂಟೆಯ ಮದ್ಯದ ಅವಧಿಯಲ್ಲಿ ಅಡುಗೆ ಮನೆಯಲ್ಲಿನ ಫ್ಯಾನಿಗೆ ಪತ್ತಲದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳ ಸಾವಿಗೆ ಕಾರಣರಾದ ಮೇಲ್ಕಾಣಿಸಿದ 4 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ವಿವರದ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 106/2021 ಕಲಂ: 304ಬಿ, 498ಎ, 34 ಐಪಿಸಿ ಮತ್ತು 3, 4 ಡಿಪಿ ಆಕ್ಟ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 56/2021 ಕಲಂ:143, 147, 148, 341, 323, 324, 504, 506 ಸಂಗಡ 149 ಐಪಿಸಿ: ದಿನಾಂಕ:28/07/2021 ರಂದು ಸಾಯಾಂಕಾಲ 18.30ಪಿ.ಎಮ್ಕ್ಕೆ ಫಿರ್ಯಾದಿಯ ಮನೆಯ ಮುಂದೆ ಸಿಸಿ ರಸ್ತೆ ನಡೆದಿದ್ದು, ಆರೋಪಿ ನಂ:1 ನೇದ್ದವನು ರಸ್ತೆಯನ್ನು ನೇರವಾಗಿ ಒಯ್ಯಿರಿ ಅಂತಾ ಅಂದಿದ್ದಕ್ಕೆ ಫಿರ್ಯಾದಿಯು ನಡೆವೆ ಚರಂಡಿ ಪೈಪ್ ಇದೆ ಅದನ್ನು ನೋಡಿ ಸರಿಯಾಗಿ ಮಾಡಿರಿ ಇಲ್ಲದಿದ್ದರೆ ಚರಂಡಿ ನೀರು ವಾಸನೆ ಬರುತ್ತದೆ ಅಂತಾ ರಸ್ತೆಯ ಕೆಲಸ ಮಾಡುವವರಿಗೆ ಅಂದಾಗ ಅಷ್ಟಕ್ಕೆ ಆರೋಪಿ ನಂ:1 ನೇದ್ದವನು ಇನ್ನುಳಿದ ಆರೋಫಿತರಿಗೆ ಕರೆದು ಅಕ್ರಮ ಕೂಟ ಕಟ್ಟಿಕೊಂಡು ಈ ಮಕ್ಕಳಿಗೆ ಸೊಕ್ಕು ಬಹಳಾದ ಅಂತಾ ಒದರಾಡಿ ಫಿರ್ಯಾದಿಗೆ ತಡೆದು & ಕೈಯಿಂದ ಹಾಗೂ ಒಣ ಕಟ್ಟೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದು, ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

Last Updated: 30-07-2021 03:53 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080