ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-08-2021
ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 141/2021 ಕಲಂ 498(ಎ), 323, 504, 506 ಐಪಿಸಿ : ಫಿರ್ಯಾದಿದಾರಳೀಗೆ ಸುಮಾರು 7-8 ವರ್ಷಗಳ ಕೆಳಗೆ ಆರೊಪಿತನೊಂದಿಗೆ ಮದುವೆಯಾಗಿದ್ದು ಅವರ ದಾಂಪತ್ಯ ಜೀವನದಲ್ಲಿ ಇಬ್ಬರು ಹೆಣ್ಣು ಮಕ್ಕಳು ಅವಳಿ-ಜವಳಿ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿರುತ್ತಾನೆ. ಫಿರ್ಯಾದಿಗೆ ಮದುವೆಯಾದ 2-3 ವರ್ಷಗಳ ವರೆಗೆ ಆಕೆಯೊಂದಿಗೆ ಚನ್ನಾಗಿದ್ದ ಆರೋಪಿತನು ನಿನಗೆ ಅವಳಿ-ಜವಳಿ ಹೆಣ್ಣು ಮಕ್ಕಳೇ ಆಗಿವೆ ನಿನೊಂದಿಗೆ ಸಂಸಾರ ಮಾಡಿದರೆ ನನಗೆ ರೋಗ ಬರುತ್ತದೆ ಅಂತಾ ಹೇಳುತ್ತ ಫಿರ್ಯಾದಿದಾರಳಿಗೆ ಮಾನಸೀಕ ಮತ್ತು ದೈಹಿಕ ಹಿಂಸೆಯನ್ನ ನೀಡುತ್ತಾ ಬಂದಿದ್ದು ಅಲ್ಲದೇ ಕೆಲಸ ಮಾಡದೇ ಮನೆಯಲ್ಲಿದ್ದಾಗ ಫಿರ್ಯಾದಿಯು ಆತನ್ನೊಂದಿಗೆ ತನ್ನ ಮಕ್ಕಳನ್ನು ಕರೆದುಕೊಂಡು ಬಂದು ಆಕೆಯ ಚಿಕ್ಕಮ್ಮಳೊಂದಿಗೆ ಗುರುಮಠಕಲ್ ಪಟ್ಟಣದಲ್ಲಿದ್ಧಾಗಳು ಸಹ ಮಾನಸೀಕ ಮತ್ತು ದೈಹಿಕ ಹಿಂಸೆಯನ್ನು ನೀಡುವುದು ಮುಂದುವರೆಸಿಕೊಂಡು ಬಂದಿದ್ದು ಅಲ್ಲದೇ ದಿನಾಂಕ 05.08.2021 ರಂದು ಬೆಳಿಗ್ಗೆ 8:00 ಗಂಟೆಯ ಸುಮಾರಿಗೆ ಕೈಯಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿದಾರಳು ತನ್ನ ತಾಯಿ,ಚಿಕ್ಕಮ್ಮ, ತಮ್ಮನೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಇಂದು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಗುನ್ನೆ ನಂ. 141/2021 ಕಲಂ 498(ಎ), 323, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 111/2021 ಕಲಂ: 279, 338 ಐಪಿಸಿ : ದಿನಾಂಕ:29/08/2021 ರಂದು 5-45 ಪಿಎಮ್ ಕ್ಕೆ ಪಿಯರ್ಾಧಿಯಾದ ಶ್ರೀ ರವಿ ತಂದೆ ಲಿಂಗಪ್ಪ ರಾಠೋಡ, ವ:32, ಜಾತಿ:ಲಮ್ಮಾಣಿ, ಉ:ಒಕ್ಕಲುತನ, ಸಾ:ಉಳ್ಳೆಸೂಗೂರು ತಾಂಡ ತಾ:ವಡಗೇರಾ ಇವರು ಪೋಲಿಸ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನಗೆ ಮೂರು ಜನ ಗಂಡು ಮತ್ತು ಇಬ್ಬರೂ ಹೆಣ್ಣು ಮಕ್ಕಳು ಹೀಗೆ ಒಟ್ಟು ಐದು ಜನ ಮಕ್ಕಳಿರುತ್ತಾರೆ. ಬಸವರಾಜ ವ:16 ವರ್ಷ ಈತನು ಹಿರಿಯವನಾಗಿರುತ್ತಾನೆ. ನನ್ನ ಮಗ ಬಸವರಾಜನು ಮನೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇರುತ್ತಾನೆ. ಮೊನ್ನೆ ದಿನಾಂಕ: 28/08/2021 ರಂದು ಮುಂಜಾನೆ 10-30 ಗಂಟೆ ಸುಮಾರಿಗೆ ನಮ್ಮ ಮನೆಗೆ ಬೇಕಾದ ಅಗತ್ಯ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಬರುವುದು ಇದ್ದುದ್ದರಿಂದ ನಾನು ಯಾದಗಿರಿಗೆ ಹೋಗಬೇಕು ಎನ್ನುವಷ್ಟರಲ್ಲಿ ನಮ್ಮ ಅಣ್ಣತಮ್ಮಕೀಯರಾದ ದೇವಿಂದ್ರ ತಂದೆ ಲಕ್ಷ್ಮಣ ರಾಠೋಡ ಈತನು ತನ್ನ ಮೋಟರ ಸೈಕಲ್ ಮೇಲೆ ಯಾದಗಿರಿಗೆ ಹೋಗುತ್ತಿದ್ದಾನೆ ಅಂತಾ ನನಗೆ ಗೊತ್ತಾಗಿ ನಾನು ನನ್ನ ಮಗ ಬಸವರಾಜನಿಗೆ ಕರೆದು ದೇವಿಂದ್ರ ಚಿಕ್ಕಪ್ಪ ಯಾದಗಿರಿಗೆ ತನ್ನ ಮೋಟರ ಸೈಕಲ್ ಮೇಲೆ ಹೋಗುತ್ತಿದ್ದಾನೆ ನೀನು ಅವರ ಜೊತೆ ಹೋಗಿ ಅಗತ್ಯ ದಿನಸಿ ಸಾಮಾನುಗಳು ತಗೊಂಡು ಬಾ ನನಗೆ ಹೊಲದಲ್ಲಿ ಕೆಲಸವಿದೆ ಅಂತಾ ಹೇಳಿ ನನ್ನ ಮಗ ಬಸವರಾಜನಿಗೆ ನಮ್ಮ ತಮ್ಮ ದೇವಿಂದ್ರ ಈತನ ಜೊತೆ ಕಳುಹಿಸಿದ್ದು, ದೇವಿಂದ್ರನು ನನ್ನ ಮಗ ಬಸವರಾಜನಿಗೆ ತನ್ನ ಮೋಟರ ಸೈಕಲ್ ನಂ. ಕೆಎ 33 ಇಎ 6857 ನೇದ್ದರ ಮೇಲೆ ಕರೆದುಕೊಂಡು ಇಬ್ಬರೂ ಯಾದಗಿರಿಗೆ ಹೋದರು. ನಾನು ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದೇನು. ಸಂಜೆ 4-15 ಗಂಟೆ ಸುಮಾರಿಗೆ ನನ್ನ ಮಗ ಬಸವರಾಜ ಈತನು ಅಳುತ್ತಾ ನನಗೆ ಪೋನು ಮಾಡಿ ಅಪ್ಪಾ ನಾನು ಮತ್ತು ದೇವಿಂದ್ರ ಚಿಕ್ಕಪ್ಪ ಇಬ್ಬರೂ ಮೋಟರ ಸೈಕಲ್ ಮೇಲೆ ಯಾದಗಿರಿಯಿಂದ ಸಂತೆ ಮಾಡಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ಉಳ್ಳೆಸೂಗೂರು-ಮಳ್ಳಳ್ಳಿ ರೋಡ ಮಳ್ಳಳ್ಳಿ ಗ್ರಾಮದ ಹಳ್ಳದ ಹತ್ತಿರ ಮೋಟರ್ ಸೈಕಲ್ ಸ್ಕಿಡ್ಡ ಆಗಿ ಬಿದ್ದಿರುತ್ತೇವೆ. ನೀನು ಬೇಗ ಬಾ ಅಂತಾ ಹೇಳಿದನು. ಆಗ ಗಾಭರಿಯಾದ ನಾನು ಮತ್ತು ನಮ್ಮ ಸಂಬಂಧಿಕನಾದ ಲಕ್ಷ್ಮಣ ತಂದೆ ಈರಣ್ಣ ರಾಠೋಡ ಇಬ್ಬರೂ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗ ಬಸವರಾಜ ಮತ್ತು ದೇವಿಂದ್ರ ಇಬ್ಬರೂ ರಸ್ತೆಯ ಮೇಲೆ ಬಿದಿದ್ದರು. ನನ್ನ ಮಗ ಬಸವರಾಜನಿಗೆ ಅಪಘಾತದಲ್ಲಿ ಬಲ ಮೊಳಕಾಲಿನ ಪಿಕ್ಕೆ ಖಂಡಕ್ಕೆ ಭಾರಿ ರಕ್ತಗಾಯವಾಗಿತ್ತು. ಅಪಘಾತದ ಬಗ್ಗೆ ನನ್ನ ಮಗನಿಗೆ ಕೇಳಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ದೇವಿಂದ್ರ ಚಿಕ್ಕಪ್ಪ ಇಬ್ಬರೂ ಯಾದಗಿರಿಯಲ್ಲಿ ಅಗತ್ಯ ಸಾಮಗ್ರಿಗಳನ್ನು ಖರೀದಿ ಮಾಡಿಕೊಂಡು 3-30 ಗಂಟೆ ಸುಮಾರಿಗೆ ನಾವು ತಂದಿದ್ದ ಮೋಟರ ಸೈಕಲ್ ಮೇಲೆ ಮರಳಿ ನಮ್ಮ ಊರಿಗೆ ಹೊರಟಾಗ ಚಿಕ್ಕಪ್ಪ ದೇವಿಂದ್ರ ಈತನು ಗುರುಸಣಗಿ ಗ್ರಾಮ ದಾಟಿದ ನಂತರ ತನ್ನ ಮೋಟರ ಸೈಕಲ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದನು. ನಾನು ನಿಧಾನಕ್ಕೆ ಹೋಗು ಅಂತಾ ಹೇಳಿದ್ದರೂ ಕೂಡಾ ನನ್ನ ಮಾತು ಕೇಳದೆ ಮೋಟರ ಸೈಕಲನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು. 4 ಪಿಎಮ್ ಸುಮಾರಿಗೆ ಉಳ್ಳೆಸೂಗುರು-ಮಳ್ಳಳ್ಳಿ ರೋಡಿನ ಹತ್ತಿರ ಮಳ್ಳಳ್ಳಿ ಹಳ್ಳದಲ್ಲಿ ಅತಿವೇಗವಾಗಿ ಹೋಗುತ್ತಿರುವಾಗ ಒಮ್ಮಲ್ಲೇ ಎಡಕ್ಕೆ ಕಟ್ ಹೊಡೆದರಿಂದ ಮೋಟರ ಸೈಕಲ್ ಸ್ಕಿಡ್ ಮಾಡಿಕೊಂಡು ಬಿದ್ದೇವು. ಸದರಿ ಅಪಘಾತದಲ್ಲಿ ನನ್ನ ಬಲ ಮೊಳಕಾಲ ಮೇಲೆ ಮೋಟರ್ ಸೈಕಲ್ ಬಿದ್ದು, ಬಲ ಮೊಳಕಾಲಿನ ಪಿಕ್ಕೆ ಖಂಡಕ್ಕೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಎಡಗಾಲಿಗೆ ತರಚಿದ ಗಾಯವಾಗಿರುತ್ತದೆ. ಮೋಟರ ಸೈಕಲ್ ಚಲಾಯಿಸುತ್ತಿದ್ದ ದೇವಿಂದ್ರ ಈತನಿಗೆ ಎಡ ಕೈ ಮತ್ತು ಮೊಳಕಾಲಿಗೆ ಸಣ್ಣಪುಟ್ಟ ತರಚಿದ ಗಾಯವಾಗಿತ್ತು. ನಂತರ ನನ್ನ ಮಗನಿಗೆ ಉಪಚಾರ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಕಾಮರೆಡ್ಡಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಡಿರುತ್ತಾರೆ. ಕಾರಣ ಸದರಿ ಮೋಟರ್ ಸೈಕಲ್ ನಂ. ಕೆಎ 33 ಇಎ 6857 ನೇದ್ದರ ಸವಾರನಾದ ದೇವಿಂದ್ರ ಈತನು ತನ್ನ ಮೋಟರ್ ಸೈಕಲ ಅನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕಿಡ್ಡ ಮಾಡಿ ಬಿಳಿಸಿ, ಅಪಘಾತಪಡಿಸಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನನ್ನ ಮಗನಿಗೆ ಉಪಚಾರಕ್ಕೆ ಸೇರಿಕೆ ಮಾಡಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 111/2021 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ. 112/2021 ಕಲಂ: 87 ಕೆ.ಪಿ ಎಕ್ಟ್ : ದಿನಾಂಕ: 29/08/2021 ರಂದು 5-50 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದೇನಂದರೆ ಇಂದು ದಿನಾಂಕ:29/08/2021 ರಂದು ನಾನು ಮತ್ತು ಸಿಬ್ಬಂದಿಯವರು ಠಾಣೆಯಲ್ಲಿ ಇದ್ದಾಗ ನನಗೆ ಖಚಿತ ಮಾಹಿತಿ ಬಂದಿದ್ದೇನಂದರೆ ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಹೊರಟೂರು ಸೀಮಾಂತರದಲ್ಲಿ ಬರುವ ಸರಕಾರಿ ಗುಡ್ಡದಲ್ಲಿ ಯಾರೋ ಕೆಲವರು ಹಣವನ್ನು ಪಣಕ್ಕೆ ಇಟ್ಟು ಕೋಳಿ ಪಂದ್ಯ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಸದರಿ ಜೂಜುಕೋರರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡ ಲಗತ್ತಿಸಲಾಗಿದೆ ಎಂದು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.112/2021 ಕಲಂ: 87 ಕೆಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 113/2021 ಕಲಂ: 504, 324, 323, ಸಂ 34 ಐಪಿಸಿ : ಇಂದು ದಿನಾಂಕ:29/08/2021 ರಂದು 10-30 ಪಿಎಮ್ ಕ್ಕೆ ಶ್ರೀ ಅಯ್ಯಪ್ಪ ತಂದೆ ಹಣಮಂತ ಕುಂಬಾರ ಸಾ:ಹಂಚನಾಳ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:29/08/2021 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ಹೊಲದಿಂದ ಮನೆಗೆ ಬರುತ್ತಿದ್ದಾಗ ನಮ್ಮೂರ ರಾಘವೇಂದ್ರ ಹುಬ್ಬಳ್ಳಿ ಇವರ ಅಂಗಡಿ ಹತ್ತಿರ ಮಲ್ಲಪ್ಪ ತಂದೆ ನಿಂಗಪ್ಪ ಗೌಡ, ಶಿವಲಿಂಗಪ್ಪ ತಂದೆ ದೇವಿಂದ್ರಪ್ಪ, ಶಂಕ್ರೆಪ್ಪ ತಂದೆ ದೇವಿಂದ್ರಪ್ಪ, ಹೈಯಾಳಪ್ಪ ತಂದೆ ಭೀಮರಾಯ ಮೂಲಕೇರಿ ಎಲ್ಲರೂ ಸಾ:ಹಂಚನಾಳ ಇವರೆಲ್ಲರೂ ಸೇರಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಭೋಸುಡಿ ಮಗನೆ ದಿನಾಲು ರೊಕ್ಕ ಕೊಡು ರೊಕ್ಕ ಕೊಡು ಎಂದು ಕೇಳುತ್ತಿ, ನಿನ್ನ ಸೊಕ್ಕು ಜಾಸ್ತಿಯಾಗಿದೆ ಮಗನೆ ಎಂದು ಜಗಳ ತೆಗೆದವರೆ ತಡೆದು ನಿಲ್ಲಿಸಿ, ಶಂಕ್ರೆಪ್ಪ ಮತ್ತು ಹೈಯಾಳಪ್ಪ ಇಬ್ಬರೂ ನನಗೆ ಗಟ್ಟಿಯಾಗಿ ಹಿಡಿದುಕೊಂಡಾಗ ಮಲ್ಲಪ್ಪನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಬಲ ಭಜ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ಶಿವಲಿಂಗಪ್ಪನು ಬಂದು ಮುಷ್ಠಿ ಮಾಡಿ ನನ್ನ ಹೊಟ್ಟೆಗೆ ಗುದ್ದಿದ್ದನು. ಆಗ ಅಲ್ಲಿಯೇ ಇದ್ದ ದಂಡಪ್ಪಗೌಡ ತಂದೆ ನಿಂಗಪ್ಪಗೌಡ ಈತನು ಬಿಡಿಸಲು ಬಂದರೆ ಅವನಿಗೆ ಮಲ್ಲಪ್ಪನು ಎದೆ ಮೇಲಿನ ಅಂಗಿ ಹಿಡಿದು ಜಗ್ಗಾಡಿರುತ್ತಾನೆ. ಆಗ ಜಗಳವನ್ನು ಹೊನ್ನಪ್ಪ ತಂದೆ ಮಲ್ಲಪ್ಪ ವಗ್ಗಾ, ಹಣಮಂತ ತಂದೆ ಚಂದಪ್ಪ ಭಂಡಾರಿ ಇವರು ಬಂದು ಬಿಡಿಸಿರುತ್ತಾರೆ.ಕಾರಣ ಹಣಕಾಸಿನ ವಿಷಯದಲ್ಲಿ ಜಗಳ ತೆಗೆದು ನಮಗೆ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ. 113/2021 ಕಲಂ: 504, 324, 323, ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ ಠಾಣೆ
ಗುನ್ನೆ ನಂ: 134/2021, ಕಲಂ, 143, 341, 323, 504.506. ಸಂ.149 ಐ ಪಿ ಸಿ : ದಿನಾಂಕ: 29-08-2021 ರಂದು 05-00 ಪಿ ಎ.ಎಮ್ಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 28-08-2021 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯವರು ಮನೆಯಲ್ಲಿರುವಾಗ ಆರೋಪಿತರೆಲ್ಲರು ಸೇರಿಕೊಂಡು ನಮ್ಮ ಮನೆಯ ಮುಂದೆ ನಿಂತು ನಮಗೆ ಲೇ ಸೂಳೆ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದ್ದಕ್ಕೆ ನಿಮ್ಮ ಮೇಲೆ ಕೇಸು ಮಾಡಿ ಬಂದಿನಿ ನೋಡರಲೆ ಈಗ ಬರ್ರಿ ಮಕ್ಕಳೆ ನನಗೆ ಹೊಡದಿರಲ್ಲಲೆ ಮಕ್ಕಳೆ ಈಗ ನಿಮ್ಮನ್ನು ನೋಡಿಕೊಳ್ಳುತ್ತೇನೆ ಅಂತಾ ಬೈದಾಗ ಕೈಯಿಂದ ಹೊಡೆ ಬಡೆ ಮಾಡಿ ಕೂದಲು ಹಿಡಿದು ಎಳದಾಡಿ ಅಡ್ಡಗಟ್ಟಿ ನಿಲ್ಲಿಸಿ ಇವತ್ತು ಖಲಾಸ ಮಾಡುತ್ತೇವೆ ಮಕ್ಕಳೆ ನಿವೇನಾದರು ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಇನೊಂದು ಸಲ ನಮ್ಮ ತಂಟೆಗೇನಾದರು ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ.
ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ. 48/2021 ಕಲಂ: 87 ಕೆ.ಪಿ ಆಕ್ಟ್ : ಇಂದು ದಿನಾಂಕ:29.08.2021 ರಂದು 4:05 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ವೆಂಕಟೇಶ ಹುಗಿಬಂಡಿ ಡಿಎಸ್ಪಿ ಸಾಹೇಬರು ಸುರಪೂರ ಉಪವಿಭಾಗ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ಇಂದು ದಿನಾಂಕ:29.08.2021 ರಂದು 2:00 ಪಿ.ಎಮ್.ಕ್ಕೆ ನಾನು ನನ್ನ ಕಾಯರ್ಾಲಯದಲ್ಲಿದ್ದಾಗ ಕೊಡೆಕಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕೇರಾ ಸೀಮಾಂತರದ ಮಲಕಾಜೆರದೊಡ್ಡಿಯ ಹತ್ತಿರದ ಸರಕಾರಿ ಮಡ್ಡಿಯಲ್ಲಿ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದಿದ್ದು ನಾನು ಸದರಿ ಮಾಹಿತಿಯನ್ನು ಖಚಿತಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿ 2:45 ಪಿಎಮ್ ಗಂಟೆಗೆ ವಸೂಲಾಗಿದ್ದು ನಾನು ಸದರಿ ಅನುಮತಿ ಪತ್ರದೊಂದಿಗೆ 4:00 ಪಿಎಮ್ಕ್ಕೆ ಸಿಬ್ಬಂದಿಯವರೊಂದಿಗೆ ಠಾಣೆಗೆ ಬಂದಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ನಾನು ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:48/2021 ಕಲಂ: 87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ದ್ಯಾವಣ್ಣ ತಂದೆ ಬಸಣ್ಣ ಗೋನಾಟ್ಲರ್ ವಯಾ-52 ವರ್ಷ, ಜಾ:ಹಿಂದೂ ಬೇಡರ ಉ:ಒಕ್ಕಲುತನ ಸಾ:ಗೊಲಪಲ್ಲೇರದೊಡ್ಡಿ ಕಕ್ಕೇರಾ
2) ಮಾನಪ್ಪ ತಂದೆ ಮಲ್ಲಪ್ಪ ಕುರೇರ ವಯಾ-40 ವರ್ಷ, ಜಾ:ಹಿಂದೂ ಕುರುಬರ ಉ:ಒಕ್ಕಲುತನ ಸಾ:ಕಕ್ಕೇರಾ
3) ಸೋಮಣ್ಣ ತಂದೆ ಮಲಕಪ್ಪ ಮಲಕಾಜೆರ ವಯಾ-23 ವರ್ಷ, ಜಾ:ಹಿಂದೂ ಬೇಡರ ಉ:ಕೂಲಿಕೆಲಸ ಸಾ:ಮಲಕಾಜೆರದೊಡ್ಡಿ ಕಕ್ಕೇರಾ
4) ಬುಡ್ಡೆಸಾಬ @ ದವಲಸಾಬ ತಂದೆ ಮಿಯಾಸಾಬ ನದಾಫ್ ವಯಾ-25 ವರ್ಷ, ಜಾ:ಮುಸ್ಲಿಂ ಉ:ಆಟೋ ಚಾಲಕ ಸಾ:ಕಕ್ಕೇರಾ
5) ಹಣಮಂತ್ರಾಯ @ ಗೌಡಪ್ಪ ತಂದೆ ಪರಮಣ್ಣ ಬೂದಗುಂಪಿ ವಯಾ-28 ವರ್ಷ, ಜಾ:ಹಿಂದೂ ಕುರುಬರ ಉ:ಒಕ್ಕಲುತನ ಸಾ:ಕಕ್ಕೇರಾ
6) ರಮಜಾನ ತಂದೆ ಮೈಬೂಬಸಾಬ ಶಹಾನಿ ವಯಾ-45 ವರ್ಷ, ಜಾ:ಮುಸ್ಲಿಂ ಉ:ಒಕ್ಕಲುತನ ಸಾ:ಕಕ್ಕೇರಾ
7) ಹಣಮಂತ್ರಾಯ @ ಗೌಡಪ್ಪ ತಂದೆ ಭೀಮರಾಯ ಗೌಡರ ವಯಾ-33 ವರ್ಷ, ಜಾ:ಬೇಡರ ಉ:ಒಕ್ಕಲುತನ ಸಾ:ಕಕ್ಕೇರಾ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1) ನಗದು ಹಣ=17,000/- ರೂ
2) 52 ಇಸ್ಪೀಟ್ ಎಲೆಗಳು ಅ.ಕಿ:00=00 ರೂ