ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-08-2022


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 67/2022 ಕಲಂ 279, 338, 304(ಎ) ಐ.ಪಿ.ಸಿ: ದಿನಾಂಕ: 20/08/2022 ರಂದು 8 ಪಿ.ಎಮ್. ಸುಮಾರಿಗೆ ಫಿಯರ್ಾದಿಯತಮ್ಮನಾದ ಗಾಯಾಳು ಪ್ರಕಾಶರಡ್ಡಿಈತನು ಸಚಿನರಡ್ಡಿಈತನಿಗೆ ಕೂಡಿಸಿಕೊಂಡು ತನ್ನ ಮೋಟರ್ ಸೈಕಲ್ ನಂ:ಕೆಎ-38, ಡಬ್ಲ್ಯು-3374 ನೇದ್ದನ್ನು ಚಲಾಯಿಸಿಕೊಂಡು ಶಹಾಪೂರಕಡೆಗೆ ಹೊರಟಾಗ ಭೀ.ಗುಡಿಯ ಬಲಭೀಮೇಶ್ವರಗುಡಿಕಮಾನ ಹತ್ತಿರಆರೋಪಿತನುತನ್ನ ಮೋಟರ್ ಸೈಕಲ್ ನಂ:ಕೆಎ-32, ಇಎ-9741 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೆಲೆ ಬಲಕ್ಕೆ ತಿರುಗಿಸಿ ಗಾಯಾಳುವಿನ ಮೋಟರ್ ಸೈಕಲ್ಗೆಡಿಕ್ಕಿ ಹೊಡೆದು ಅಪಘಾತಪಡಿಸಿ ಗಾಯಾಳುಗಳಿಗೆ ಭಾರಿರಕ್ತಗಾಯ ಪಡಿಸಿದ ಬಗ್ಗೆ ಠಾಣೆಗುನ್ನೆ ನಂ:67/2022 ಕಲಂ 279, 338 ಐಪಿಸಿ ಅಡಿಯಲ್ಲಿ ಪ್ರಕರಣದಾಖಲಾಗಿರುತ್ತದೆ. ಅಪಘಾತದಲ್ಲಿಗಾಯಗೊಂಡ ಪ್ರಕಾಶರಡ್ಡಿಈತನು ಕಲಬುರಗಿಯಚಿರಾಯುಆಸ್ಪತ್ರೆಯಲ್ಲಿಉಪಚಾರ ಪಡೆಯುತ್ತಿದ್ದಾಗಉಪಚಾರ ಫಲಿಸದೆಇಂದು ದಿನಾಂಕ 29/08/2022 ರಂದು 8 ಎ..ಎಮ್. ಕ್ಕೆ ಮೃತಪಟ್ಟಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆಅಂತ ವಿನಂತಿ.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 97/2022 ಕಲಂ 379 ಐಪಿಸಿ:ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಹೆಸರಿನ ಮೇಲೆ ಹಿರೋ ಸ್ಪ್ಲೆಂಡರ್ ಪ್ರೋ ಮೋಟರ್ ಸೈಕಲ್ ಇದ್ದು, ಅದರ ನಂ-ಏಂ 33 ಇಃ 2349, ಇಟಿರಟಿಜ ಓಠ-ಊಂ11ಇಆಒ5ಅ028, ಅಊಂಖಖಖ ಓಔ-ಒಃಐಊಂಘ128ಒ5ಅ38211, ಅಂತಾ ಇರುತ್ತದೆ. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 35,000/-ರೂ|| ಗಳು. ಹೀಗಿದ್ದು ದಿನಾಂಕ 14/07/2022 ರಂದು ಬೆಳಿಗ್ಗೆ ನಾನು ಮತ್ತು ನಮ್ಮ ಸಂಬಂಧಿಯಾದ ಬಸವರಾಜ ತಂದೆ ಹಣಮಂತ ಚಿನ್ನಕೋಟಿ ಸಾ|| ರಯಾಗೂಳೆಗೇಟ್ ತಾ|| ಹುಸಣಗಿ ಇಬ್ಬರು ಕೂಡಿ ನನ್ನ ತಮ್ಮನ ಹೆಂಡತಿಗೆ ಕರೆದುಕೊಂಡು ಬರಲು ಅವರ ತವರು ಮನೆಯಾದ ವಡಗೇರಕ್ಕೆ ಹೋಗಿದ್ದೆವು. ನನ್ನ ತಮ್ಮನ ಹೆಂಡತಿಗೆ ಕಳುಹಿಸುವುದಿಲ್ಲ ಅಂದ ಕಾರಣ ನಾವು ಮರಳಿ ದಿನಾಂಕ 14/07/2022 ರಂದು ಸಂಜೆ 06-00 ಗಂಟೆಯ ಸುಮಾರಿಗೆ ಯಾದಗಿರಿಗೆ ಬಂದೆವು. ಮಡ್ಡಿ ಲಾಡ್ಜ್ಮುಂದೆ ನನ್ನ ಮೋಟರ್ ಸೈಕಲ್ ನಿಲ್ಲಿಸಿ, ಹತ್ತಿರದಲ್ಲಿ ಇರುವ ಖಾನಾವಳಿಗೆ ಊಟ ಮಾಡಲಿಕ್ಕೆಂದು ಹೋದೆವು. ಮರಳಿ ಊಟ ಮಾಡಿಕೊಂಡು ಸಂಜೆ 07-00 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಾನು ಮತ್ತು ನನ್ನ ಸಂಗಡ ಇದ್ದ ಬಸವರಾಜ ತಂದೆ ಹಣಮಂತ ಚಿನ್ನಕೋಟಿ ಇಬ್ಬರು ಕೂಡಿ ಅಲ್ಲಿ ಸುತ್ತಾ ಮುತ್ತಾ ಹಾಗೂ ಯಾದಗಿರಿ ನಗರದ ಹಳೆಯ ಬಸ್ ನಿಲ್ದಾಣ, ಚಿತ್ತಾಪೂರ ರೋಡ್, ರೈಲು ನಿಲ್ದಾಣದ ಕಡೆಗಳಲ್ಲಿ ತಿರುಗಾಡಿ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ಕಳ್ಳರು ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 97/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 69/2022 ಕಲಂ 323, 354, 447, 504, 506 ಸಂಗಡ 34 ಐಪಿಸಿ: ಮದ್ರಕಿ ಸೀಮಾಂತರದಲ್ಲಿ ಫಿಯರ್ಾದಿ ಹೊಲ ಮತ್ತುಆರೋಪಿತರ ಹೊಲ ಅಕ್ಕಪಕ್ಕದಲ್ಲಿದ್ದು ನಿನ್ನೆ ದಿನಾಂಕ:28/08/2022 ರಂದು ಸೋಮು ಈತನುತಮ್ಮ ಹೊಲದಲ್ಲಿನ ಮಳೆ ನೀರನ್ನುಒಡ್ಡುಒಡೆದು ಫಿಯರ್ಾದಿಯಹೊಲದಲ್ಲಿನೀರು ಬಿಟ್ಟ ವಿಷಯದಲ್ಲಿಇಬ್ಬರ ನಡುವೆ ಬಾಯಿ ಮಾತಿನತಕರಾರುಆಗಿರುತ್ತದೆ.ಹೀಗಿದ್ದುಇಂದು ದಿನಾಂಕ:29/08/2022 ರಂದು ಮುಂಜಾನೆ 08.30 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ಮನೆಯವರುತಮ್ಮ ಹೊಲದಲ್ಲಿದ್ದಾಗಆರೋಪಿತರು ಹೊಲದಲ್ಲಿಅಕ್ರಮ ಪ್ರವೇಶ ಮಾಡಿ ಭೋಸಡಿ ಮಕ್ಕಳೇ ನಿಮ್ಮ ಸೊಕ್ಕು ಬಹಳವಾಗಿದೆ, ನಿನ್ನೆ ಸಾಯಂಕಾಲ ನಮ್ಮೊಂದಿಗೆತಕರಾರು ಮಾಡುವಷ್ಟುಧೈರ್ಯ ಬಂತಾರಂಡಿ ಮಕ್ಕಳೇ ಅಂತಾಅವಾಚ್ಯ ಶಬ್ದಗಳಿಂದ ಬೈದು ಫಿಯರ್ಾದಿ ಗಂಡನಿಗೆಕೈಯಿಂದ ಹೊಡೆಬಡೆ ಮಾಡುತ್ತಿರುವಾಗ ಫಿಯರ್ಾದಿ ಜಗಳ ಬಿಡಿಸಲು ಹೋದಾಗಆರೋಪಿತರು ಫಿಯರ್ಾದಿಗೆಅವಮಾನ ಮಾಡುವಉದ್ದೇಶದಿಂದ ಕೈಗಳನ್ನು ಹಿಡಿದು ಎಳೆದಾಡಿ ಕೈಗಳಿಂದ ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 147/2022 ಕಲಂ: 279, 337, 338 ಐ.ಪಿ.ಸಿ: ಇಂದು ದಿನಾಂಕ: 29/08/2022 ರಂದು 10-15 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ಶರಣಪ್ಪ ತಂದೆ ನಿಂಗಪ್ಪ ಬಡಿಗೇರ ವಯಾ: 30 ಜಾತಿ: ಎಸ್.ಸಿ(ಹೊಲೆಯ) ಉ: ಗೌಂಡಿಕೆಲಸ ಸಾ: ದೋರನಳ್ಳಿ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ: 29/08/2022 ರಂದು ಸಾಯಾಂಕಾಲ 19-30 ಗಂಟೆ ಸುಮಾರಿಗೆ ಶಹಾಪೂರ ಕಡೆಯಿಂದ ದೋರನಳ್ಳಿ ಕಡೆಗೆ ಹೋಗುವ ಕುರಿತು ಬೇವಿನಳ್ಳಿ ಕ್ರಾಸ್ ಸಮೀಪ ನಂದಿನಿ ಹಾಲಿನ ಡೈರಿ ಹತ್ತಿರ ರಸ್ತೆ ಮೇಲೆ, ನಮ್ಮ ಬಜಾಜ ಪ್ಲಾಟಿನಮ್ ಮೋಟಾರ ಸೈಕಲ್ ನಂ: ಕೆ.ಎ.33/ವೈ-3808 ನೇದ್ದನ್ನು ತೆಗೆದುಕೊಂಡು ನಮ್ಮೂರಿನ ಸಂಬಂದಿಯಾದ ಭೀಮರಾಯ ತಂದೆ ದಂಡಪ್ಪ ಪೂಜಾರಿ ಈತನನ್ನು ಹಿಂದುಗಡೆ ಕೂಡಿಸಿಕೊಂಡು ಮೋಟಾರ ಸೈಕಲ್ ಮೇಲೆ ಹೋಗುತ್ತಿದ್ದಾಗ, ಅದೇ ವೇಳೆಗೆ ನಮ್ಮ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ್ ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ಗೆ ಹಿಂದುಗಡೆ ಡಿಕ್ಕಿ ಪಡಿಸಿದ್ದು, ನಾವು ಮೋಟಾರ ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದೆವು, ನಮಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ವು ಕೂಡಾ ರಸ್ತೆ ಮೇಲೆ ಬಿದ್ದಿತ್ತು. ನನಗೆ ಬಲ ಮತ್ತು ಎಡ ಕೈ ಅಂಗೈಗೆ ತರಚಿದ ರಕ್ತಗಾಯ ಹಾಗೂ ಎಡಬುಜಕ್ಕೆ ಒಳಪೆಟ್ಟು ಆಗಿರುತ್ತದೆ. ನಮ್ಮ ಮೋಟಾರ ಸೈಕಲ್ ಹಿಂದುಗಡೆ ಕುಳಿತ ನಮ್ಮೂರಿನ ಭೀಮರಾಯ ತಂದೆ ದಂಡಪ್ಪ ಪೂಜಾರಿ ವಯಾ: 25 ಈತನಿಗೆ ಎಡಕಾಲು ಮೋಳಕಾಲಿಗೆ, ಎಡ ಮೋಳಕಾಲಿನ ಕೆಳಗೆ, ಎಡಕಾಲು ಹಿಂಬಡಿ ಹತ್ತಿರ ಹಾಗೂ ಬಲಕಾಲು ಹಿಂಬಡಿ ಹತ್ತಿರ, ಒಳಪೆಟ್ಟು ಹಾಗೂ ತರಚಿದ ರಕ್ತಗಾಯ ಆಗಿರುತ್ತದೆ. ನಮ್ಮ ಮೋಟಾರ ಸೈಕಲ್ ಹಿಂದುಗಡೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ನಂಬರ ನೋಡಲಾಗಿ ಬಜಾಜ ಪಲ್ಸರ ಮೋಟಾರ ಸೈಕಲ್ ಇದ್ದು, ಅದರ ನಂ: ಕೆ.ಎ-33/ಎಕ್ಷ-0678 ಅಂತಾ ಇದ್ದು, ಅದರ ಚಾಲಕನ ಹೆಸರು ರಮೇಶ ತಂದೆ ಹಂಪಣ್ಣ ವಿಶ್ವಕರ್ಮ ವಯಾ: 30 ಜಾತಿ: ವಿಶ್ವಕರ್ಮ ಸಾ: ಚಟ್ನಳ್ಳಿ ಅಂತಾ ಗೊತ್ತಾಗಿದ್ದು ಆತನಿಗೆ ಬಲ ಕಿವಿಗೆ ರಕ್ತಗಾಯ ಆಗಿದ್ದು, ಅಲ್ಲದೇ ತಲೆಗೆ ರಕ್ತಗಾಯ ಮತ್ತು ಎರಡು ಮೋಳಕೈಗೆ ಹಾಗೂ ಎರಡು ಮೋಳಕಾಲಿಗೆ ಒಳಪೆಟ್ಟು ಹಾಗೂ ತರಚಿದ ರಕ್ತಗಾಯ ಆಗಿರುತ್ತವೆ, ಪಲ್ಸರ ಮೋಟಾರ ಸೈಕಲ್ ಹಿಂದುಗಡೆ ಕುಳಿತವನ ಹೆಸರು ಅಯ್ಯಣ್ಣರೆಡ್ಡಿ ತಂದೆ ಶಿವರಾಜಪ್ಪ ವಯಾ: 28 ಸಾ: ಚಟ್ನಳ್ಳಿ ಅಂತಾ ಗೊತ್ತಾಗಿದ್ದು, ಆತನಿಗೆ ತಲೆಗೆ ರಕ್ತಗಾಯ ಆಗಿದ್ದು, ಮತ್ತು ಕೈಗೆ ಹಾಗೂ ಕಾಲಿಗೆ ತರಚಿದ ರಕ್ತಗಾಯ ಆಗಿರುತ್ತವೆ. ನಾನು ಎಲ್ಲರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿರುತ್ತೇನೆ. ನಂತರ ನಮ್ಮ ಸಂಬಂಧಿ ಭೀಮರಾಯ ಪೂಜಾರಿ ಈತನಿಗೆ ದೊಡ್ಡಪ್ಪನ ಮಗನಾದ ಶರಣಪ್ಪ ತಂದೆ ಬಸಪ್ಪ ಬಡಿಗೇರ ಸಾ: ದೋರನಳ್ಳಿ ಈತನು ಬಸವೇಶ್ವರ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿರುತ್ತಾನೆ. ನಂತರ ಪಲ್ಸರ ಮೋಟಾರ ಸೈಕಲ್ ಚಾಲಕ ರಮೇಶ ತಂದೆ ಹಂಪಣ್ಣ ಸಾ: ಚಟ್ನಳ್ಳಿ ಈತನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ, ಅಲ್ಲದೇ ಪಲ್ಸರ ಮೋಟಾರ ಸೈಕಲ್ ಹಿಂದುಗಡೆ ಕುಳಿತ ಅಯ್ಯಣ್ಣರೆಡ್ಡಿ ತಂದೆ ಶಿವರಾಜಪ್ಪ ಆಸಪ್ಪಕರ ಸಾ: ಚಟ್ನಳ್ಳಿ ಈತನು ಕಲಬುರಗಿ ಸನ್ರೈಸ್ ಆಸ್ಪತ್ರೆಗೆ ಸೇರಿಕೆ ಆಗಿರುತ್ತಾರೆ ಅಂತಾ ಗೊತ್ತಾಗಿರುತ್ತದೆ. ನಮ್ಮ ಬಜಾಜ ಪ್ಲಾಟಿನಮ್ ಮೋಟಾರ ಸೈಕಲ್ ನಂ: ಕೆ.ಎ.33/ವೈ-3808 ನೇದ್ದರ ಮೇಲೆ ದೊರನಳ್ಳಿ ಕಡೆಗೆ ಬೆವಿನಳ್ಳಿ ಕ್ರಾಸ್ ಹತ್ತಿರ ನಂದಿನಿ ಹಾಲಿನ ಡೈರಿ ಮುಂದುಗಡೆ ಹೋಗುತ್ತಿರುವಾಗ ಆರೋಪಿತನು ತನ್ನ ಪಲ್ಸರ ಮೋಟಾರ ಸೈಕಲ್ ನಂ: ಕೆ.ಎ-33/ಎಕ್ಷ-0678 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ ಹಿಂದುಗಡೆ ಡಿಕ್ಕಿ ಪಡಿಸಿ ಭಾರೀ ಮತ್ತು ಸಾದಾ ರಕ್ತಗಾಯ ಪಡಿಸಿದ್ದು. ಸದರಿ ಪಲ್ಸರ ಮೋಟಾರ ಸೈಕಲ್ ಚಾಲಕ ರಮೇಶ ತಂದೆ ಹಂಪಣ್ಣ ವಿಶ್ವಕರ್ಮ ಸಾ: ಚಟ್ನಳ್ಳಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 147/2022 ಕಲಂ: 279, 337, 338 ಐಪಿಸಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ

ಇತ್ತೀಚಿನ ನವೀಕರಣ​ : 31-08-2022 04:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080