ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-09-2022

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 144/2022 ಕಲಂ. 279, 304(ಎ) ಐಪಿಸಿ & 187 ಐ.ಎಮ್ ವಿ ಕಾಯ್ದೆ: ದಿನಾಂಕ: 29-09-2022 ರಂದು ಬೆಳಿಗ್ಗೆ 09-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನಂದರೆ ದಿನಾಂಕ: 28-09-2022 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನಮ್ಮ ಸಂಬಂದಿಕರು ಯಾದಗಿರಿ ಆಸ್ಪತ್ರೆಯಲ್ಲಿ ಆರಾಮವಿಲ್ಲದ ಕಾರಣ ಸೇರಿಕೆಯಾಗಿದ್ದು ನನಗೆ ಹಣ ತೆಗೆದುಕೊಂಡು ಬರುವಂತೆ ತಿಳಿಸಿದ ಮೇರೆಗೆ ಆಗ ನಾನು ರಾಜಶೇಖರ ತಂದೆ ಬನ್ನಪ್ಪ ಸಾ|| ನೀಲಹಳ್ಳಿ ಇತನಿಗೆ ಯಾದಗಿರಿಗೆ ಹೋಗಿ ಬರುವದು ಇದೆ ಅಂತ ಹೇಳಿದಾಗ ಆತನು ಹೋಗೋಣ ಅಂತಾ ಹೇಳಿದ್ದರಿಂದ ಆ ನಾನು ಮತ್ತು ಕಾರ ಸ್ಟ್ಯಾಂಡನಲ್ಲಿರುವ ನನ್ನ ಗೆಳೆಯರಾದ ದೇವಿಂದ್ರ ತಂದೆ ಪರ್ವತಪ್ಪ ಸಾ|| ಬಾಡಿಯಾಳ, ಮೌಲಾನಾಸಾಬ ತಂದೆ ಮೈಥುನಾಸಾಬ ಸಾ|| ಕಣೆಕಲ್ ಎಲ್ಲರು ಕೂಡಿ ರಾತ್ರಿ 09-30 ಗಂಟೆ ಸುಮಾರಿಗೆ ರಾಜಶೇಖರ ನಡೆಸುವ ಕಾರ ನಂ.ಕೆಎ-03 ಎಸಿ-4209 ನೇದ್ದರಲ್ಲಿ ಯಾದಗಿರಿಗೆ ಹೋಗಿ ಯಾದಗಿರಿಯಲ್ಲಿ ನಮ್ಮ ಸಂಬಂದಿಕರಿಗೆ ಹಣಕೊಟ್ಟು ವಾಪಸ ಸೈದಾಪೂರಕ್ಕೆ ಬರುತಿದ್ದೆವು, ನಾವು ದಿನಾಂಕ: 28-09-2022 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಯಾದಗಿರಿ- ರಾಯಚೂರ ಮುಖ್ಯ ರಸ್ತೆಯ ಮೇಲೆ ಆರ್ ಹೊಸಳ್ಳಿ ದಾಟಿದ ನಂತರ ಟೂಲ್ ಗೇಟ್ ಹತ್ತಿರ ಕಾರ ಚಾಲಕ ರಾಜಶೇಖರ ಇತನು ತಾನು ನಡೆಸುವ ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಮುಂದೆ ಬರುವ ಗಾಡಿಯನ್ನು ನೋಡದೆ ಒಮ್ಮಲೆ ಬ್ರೇಕ್ ಹಾಕಿದ್ದರಿಂದ ಕಾರು ಒಮ್ಮಲೆ ರೋಡಿನ ಸೈಡಿಗೆ ತಿರಿಗಿತು ಕಾರಿನ ಹಿಂದೆ ಬರುವ ಯಾವುದೋ ವಾಹನ ಕಾರಿನ ಬಲಗಡೆ ಭಾಗಕ್ಕೆ ಡಿಕ್ಕಿ ಪಡಿಸಿ ಹೋಗಿರುತ್ತದೆ ಅದು ಯಾವ ವಾಹನ ಎಂದು ಗೋತ್ತಾಗಿರುವದಿಲ್ಲ ಕಾರಿಗೆ ಅಪಘಾತಪಡಿಸಿದ್ದರಿಂದ ಕಾರಿನ ಹಿಂದಿನ ಬಲಗಡೆ ಸೀಟಿಗೆ ಕುಳಿತಿರುವ ಮೌಲಾನಾಸಾಬ ಇತನಿಗೆ ತಲೆಗೆ, ಗುಪ್ತಾಂಗಕ್ಕೆ ಮತ್ತು ಎಡಗಡೆ ಕಾಲಿಗೆ ಭಾರಿ ರಕ್ತಗಾಯ ಹಾಗೂ ಎಡಕಾಲಿನ ಬೆರಳಿಗೆ ಭಾರಿ ರಕ್ತಗಾಯವಾಗಿದ್ದು ಎಡಕಾಲಿನ ಕಿರಿ ಬೆರಳಿನ ಪಕ್ಕದ ಬೆರಳು ಕಟ್ ಆಗಿ ಕಾರಿನಿಂದ ಕೆಳಗೆ ಬಿದ್ದಿರುತ್ತಾನೆ, ಕಾರಿನಲ್ಲಿ ಕುಳಿತ ನಮಗೆ ಯಾವುದೆ ಗಾಯಗಳು ಆಗಿರಲಿಲ್ಲ ಮೌಲಾನಾಸಾಬ ಈತನು ನಮಗೆ ಬೇಗ ಆಸ್ಪತ್ರೆಗೆ ಹೋಗಿರಿ ಅಂತಾ ಹೆಳಿದನು ಆಗ ದೇವಿಂದ್ರ ಇತನು ಕಣೆಕಲ್ ಗ್ರಾಮದ ಹಣಮಂತ ಈತನಿಗೆ ಆರ್ ಹೊಸಳ್ಳಿ ಹತ್ತಿರ ಕಾರು ಎಕ್ಸಿಡೆಂಟ್ ಆಗಿದೆ ಬಾ ಅಂತಾ ಹೆಳಿದನು ಸ್ವಲ್ಪ ಸಮಯದ ನಂತರ ಸೈದಾಪೂರ ಗ್ರಾಮದ ಗಂಗಾಧರ ಸ್ವಾಮಿ ಈತನು ಕಾರ ತೆಗೆದುಕೊಂಡು ಅಪಘಾತ ಸ್ಥಳಕ್ಕೆ ಬಂದನು ಆಗ ನಾವು ಮೌನಾನಾಸಾಬ ಈತನಿಗೆ ವೈದ್ಯಕೀಯ ಉಪಚಾರ ಕುರಿತು ಕಾರಿನಲ್ಲಿ ಹಾಕಿಕೊಂಡು ರಾಯಚೂರಿನ ರೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮದ್ಯ ರಾಯಚೂರ ಹತ್ತಿರ ಹೋಗುತ್ತಿರುವಾಗ ಮೌಲಾನಾಸಾಬ ತಂದೆ ಮೈಥಾನಸಾಬ ವ|| 24 ವರ್ಷ ಜಾ|| ಮುಸ್ಲಿಂ ಉ|| ಕೂಲಿಕೆಲಸ ಸಾ|| ಕಣೆಕಲ್ ಈತನು ಅಪಘಾತದಲ್ಲಿ ಆದ ಗಾಯಗಳಿಂದ ದಿನಾಂಕ: 29-09-2022 ರಂದು ಮಧ್ಯರಾತ್ರಿ 01-30 ಗಂಟೆಗೆ ಮೃತಪಟ್ಟಿರುತ್ತಾನೆ, ಹೆಣವನ್ನು ರಾಯಚೂರು ರೀಮ್ಸ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ಹಾಕಿರುತ್ತೇವೆ. ಕಾರಣ ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮಲೆ ಬ್ರೇಕ್ ಹಾಕಿದ ಕಾರ ಚಾಲಕ ರಾಜಶೇಖರ ತಂದೆ ಬನ್ನಪ್ಪ ಸಾ|| ನೀಲಹಳ್ಳಿ ಮತ್ತು ಕಾರಿಗೆ ಡಿಕ್ಕಿಪಡಿಸಿರುವಂತಹ ಯಾವುದೋ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ : 112/2022 ಕಲಂ: 447, 427 ಸಂ 34 ಐಪಿಸಿ: ಇಂದು ದಿನಾಂಕ:29/09/2022 ರಂದು 3-30 ಪಿಎಮ್ ಕ್ಕೆ ಶ್ರೀ ನಾಗಪ್ಪ ತಂದೆ ಹಣಮಂತ ರಂಗಾಪೂರ, ವ:53, ಜಾ:ಕುರುಬರ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಹೀಗಿದ್ದು ನನಗೆ ಸ್ವತಃ ಜಮೀನು ಕಡಿಮೆ ಇದ್ದುದ್ದರಿಂದ ನಾನು ನಮ್ಮೂರ 1) ಪಾರ್ವತೆಮ್ಮ ಗಂಡ ದೊಡ್ಡ ಶರಣಗೌಡ, 2) ಸಣ್ಣ ಶರಣಗೌಡ ತಂದೆ ಚನ್ನಾರೆಡ್ಡಿ ಮಾ: ಪಾ:, 3) ಸಿದ್ದಲಿಂಗರೆಡ್ಡಿ ತಂದೆ ಚನ್ನಾರೆಡ್ಡಿ ಮಾ: ಪಾ: ಮತ್ತು 4) ದಂಡಪ್ಪಗೌಡ ತಂದೆ ಚನ್ನಾರೆಡ್ಡಿ ಮಾ:ಪಾ: ಎಲ್ಲರೂ ಸಾ:ಉಳ್ಳೆಸೂಗೂರು ಇವರ ಜಂಟಿ ಹೆಸರಿನಲ್ಲಿರುವ ಉಳ್ಳೆಸೂಗೂರು ಸೀಮಾಂತರದ ಜಮೀನು ಸವರ್ೆ ನಂ. 356 ವಿಸ್ತೀರ್ಣ 8 ಎಕರೆ 38 ಗುಂಟೆ ಜಮೀನು ಮತ್ತು ಸದರಿ 1) ಪಾರ್ವತೆಮ್ಮ ಗಂಡ ದೊಡ್ಡ ಶರಣಗೌಡ, 2) ಸಿದ್ದಲಿಂಗರೆಡ್ಡಿ ತಂದೆ ಚನ್ನಾರೆಡ್ಡಿ ಮಾ: ಪಾ: ಮತ್ತು 3) ದಂಡಪ್ಪಗೌಡ ತಂದೆ ಚನ್ನಾರೆಡ್ಡಿ ಮಾ:ಪಾ: ಎಲ್ಲರೂ ಸಾ:ಉಳ್ಳೆಸೂಗೂರು ಇವರ ಜಂಟಿ ಹೆಸರಿನಲ್ಲಿರುವ ಉಳ್ಳೆಸೂಗೂರು ಸೀಮಾಂತರದ ಮತ್ತೊಂದು ಜಮೀನು ಸವರ್ೆ ನಂ. 358/2 ವಿಸ್ತೀರ್ಣ 5 ಎಕರೆ 31 ಗುಂಟೆ ಜಮೀನು ಹೀಗೆ ಎರಡು ಸೇರಿ ಒಟ್ಟು 14 ಎಕರೆ 29 ಗುಂಟೆ ಜಮೀನನ್ನು ಒಂದು ವರ್ಷಕ್ಕೆ ಒಂದು ಎಕರೆಗೆ 10,000/- ರೂ. ಯಂತೆ ಲೀಜಿಗೆ ಮಾತಾಡಿ ದಿನಾಂಕ:07/04/2022 ರಂದು ಲೀಜ್ ಅಗ್ರಿಮೆಂಟ್ ಮಾಡಿಕೊಂಡಿದ್ದೇನು. ಸದರಿ ಮೇಲ್ಕಂಡ ಎರಡು ಜಮೀನುಗಳು ಆಜುಬಾಜು ಒಂದಕ್ಕೊಂದು ಹತ್ತಿಕೊಂಡು ಇದ್ದುದ್ದರಿಂದ ಸದರಿ ಎರಡು ಸವರ್ೆ ನಂ. ಗಳನ್ನು ಸೇರಿಸಿ ನಾನು ಈ ವರ್ಷ ಲೀಜಿಗೆ ಮಾಡಿ ಗಳೆ ಹೊಡೆದು ಹಸನ ಮಾಡಿ, ಪ್ರಸ್ತುತ ಎರಡು ಸವರ್ೆ ನಂ. ಗಳಲ್ಲಿ ಹತ್ತಿ ಬೆಳೆಯನ್ನು ಬಿತ್ತಿದ್ದೇನು. ಸದರಿ ಹತ್ತಿ ಬೆಳೆ ಚನ್ನಾಗಿ ಬಂದಿದ್ದು, ಅದಕ್ಕೆ ನಾನು ಕಾಲ ಕಾಲಕ್ಕೆ ಕಳೆ ತೆಗೆಯುವುದು, ಗೊಬ್ಬರ ಕೊಡುವುದು ಮತ್ತು ಹತ್ತಿ ಬೆಳೆ ಮಧ್ಯದಲ್ಲಿ ಗಳೆ ಹೊಡೆಯುತ್ತಾ ಚನ್ನಾಗಿ ನಿಗಾ ಮಾಡಿದ್ದರಿಂದ ಸದರಿ ಹತ್ತಿ ಬೆಳೆ ತುಂಬಾ ಹುಲುಸಾಗಿ ಬೆಳೆದಿತ್ತು. ಕಾಯಿ ಹೂ ಕಟ್ಟಿ ಕೊಯ್ಲಿಗೆ ಬರುವ ಹಂತದಲ್ಲಿ ಇತ್ತು. ಹೀಗಿದ್ದು ದಿನಾಂಕ:05/09/2022 ರಂದು ನಾನು ಮೇಲ್ಕಂಡ ಎರಡು ಹತ್ತಿ ಹೊಲಗಳಲ್ಲಿ ಇದ್ದು, ಸಾಯಂಕಾಲದ ವರೆಗೆ ಕೆಲಸ ಮಾಡಿ ಸಾಯಂಕಾಲ ಮನೆಗೆ ಬಂದಿದ್ದೇನು. ಪ್ರತಿ ದಿನದಂತೆ ಮರು ದಿವಸ ದಿನಾಂಕ:06/09/2022 ರಂದು ಬೆಳಗ್ಗೆ 10:00 ಗಂಟೆ ಸುಮಾರಿಗೆ ನಾನು ಲೀಜಿಗೆ ಮಾಡಿರುವ ಮೇಲ್ಕಂಡ ಜಮೀನುಗಳಿಗೆ ಹೋದಾಗ ಅಲ್ಲಿ ಸವರ್ೆ ನಂ. 356 ರಲ್ಲಿ ಅಂದಾಜು 7 ಎಕರೆಯಷ್ಟು ಜಮೀನಿನಲ್ಲಿಯ ಹತ್ತಿ ಬೆಳೆಗೆ ಯಾವುದೋ ಬೆಳೆ ನಾಶಕ ಎಣ್ಣೆಯನ್ನು ಸಿಂಪರಣೆ ಮಾಡಿದ್ದು, ಇದರಿಂದ ಕೊಯ್ಲಿಗೆ ಬಂದಿದ್ದ ಹತ್ತಿ ಬೆಳೆ ಪೂತರ್ಿ ಅರಸಿನ ಬಣ್ಣಕ್ಕೆ ತಿರುಗಿ ಎಲೆ, ಕಾಂಡ ಪೂತರ್ಿ ಮುದುರಿದಂತೆ ಆಗಿತ್ತು. ಸಾಯಂಕಾಲದ ವರೆಗೆ ಸದರಿ 7 ಎಕರೆಯಲ್ಲಿಯ ಹತ್ತಿ ಬೆಳೆಯು ಪೂತರ್ಿ ಬಾಡಿ, ಅಲ್ಲಲ್ಲಿ ಸುಟ್ಟಂತೆ ಆಗಿ ಹೂ, ಕಾಯಿ ಎಲೆ ಉದುರಿ ಬೋಳಾದಂತೆ ಆಗಿಬಿಟ್ಟಿತ್ತು. ಆದರೆ ಇನ್ನುಳಿದ 7 ಎಕರೆಯಲ್ಲಿನ ಹತ್ತಿ ಬೆಳೆಗೆ ಏನು ಆಗಿರಲಿಲ್ಲ. ಅದು ಚನ್ನಾಗಿ ಇತ್ತು. ಸ್ವಲ್ಪ ದಿನಗಳ ನಂತರ ನಾನು ಲೀಜಿಗೆ ಮಾಡಿದ ಹೊಲದಲ್ಲಿಯ ಅಂದಾಜು 7 ಎಕರೆಯಲ್ಲಿನ ಹತ್ತಿ ಬೆಳೆ ಒಣಗಿ ನಿಂತಿದ್ದನ್ನು ನೋಡಿ ನಾನು ಸುತ್ತಮುತ್ತಲಿನ ಜನರಿಗೆ ವಿಚಾರಣೆ ಮಾಡುತ್ತಾ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಹತ್ತಿ ಬೆಳೆ ನಾಶ ಆದದ್ದನ್ನು ಕಂಡು ಹೊಲದಲ್ಲಿ ಅಳುತ್ತಾ ಕುಳಿತಾಗ ನಮ್ಮೂರ ದೇವಪ್ಪ ತಂದೆ ಮರಿಲಿಂಗಪ್ಪ ದುಪ್ಪಲ್ಲಿ ಮತ್ತು ಬೀರಪ್ಪ ತಂದೆ ಹಣಮಂತ ಪೂಜಾರಿ ಇಬ್ಬರೂ ಬಂದು ನನಗೆ ತಿಳಿಸಿದ್ದೇನಂದರೆ ಈಗ ಸುಮಾರು 20-25 ದಿವಸಗಳ ಹಿಂದೆ ದಿನಾಂಕ:06/09/2022 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ನಾವು ಅಜರ್ೆಂಟಾಗಿ ಮಾಳ್ಳಳ್ಳಿಗೆ ಹೋಗುವಾಗ ನೀನು ಲೀಜಿಗೆ ಮಾಡಿದ ಹೊಲದ ಸಮೀಪ ದಾರಿಯಲ್ಲಿ ಮರಿಲಿಂಗಪ್ಪ ತಂದೆ ಮಲ್ಲಪ್ಪ ರಂಗಾಪೂರ ಮತ್ತು ಮಾಳಪ್ಪ ತಂದೆ ಲಚಮಣ್ಣ ಜೋಳದಡಗಿ ಇಬ್ಬರೂ ಸಾ:ಉಳ್ಳೆಸೂಗೂರು ಇವರಿಬ್ಬರೂ ರಾತ್ರಿ ಕ್ರಿಮಿನಾಶಕ ಔಷಧಿ ಸಿಂಪರಣೆ ಮಾಡಿ ತಮ್ಮ ಔಷಧಿ ಹೊಡೆಯುವ ಗನ್ ಮಷಿನಗಳನ್ನು ಹೆಗಲಿಗೆ ಹಾಕಿಕೊಂಡು ರೋಡಿಗೆ ಬರುತ್ತಿರುವಾಗ ನಾವು ಅವರ ಹತ್ತಿರ ಹೋದಾಗ ನಮ್ಮನ್ನು ನೋಡಿ ರೋಡ ಪಕ್ಕದಲ್ಲಿ ಹತ್ತಿ ಬೆಳೆಯಲ್ಲಿ ಓಡಿ ಹೋದರು. ನಾವು ನಮ್ಮ ಮೋಟರ್ ಸೈಕಲ್ ಬೆಳಕಿನಲ್ಲಿ ಅವರಿಗೆ ನೋಡಿ ಗುರುತಿಸಿ, ಏಕೆ ಹೆದರಿ ಓಡುತ್ತಿದ್ದಿರಿ ಎಂದು ಮಾತಾಡಿಸಿದರೆ ಅವರು ಯಾವುದೇ ಉತ್ತರ ಕೊಡದೆ ಅಲ್ಲಿಂದ ಓಡಿ ಹೋಗಿರುತ್ತಾರೆ ಎಂದು ಹೇಳಿದರು. ಸದರಿ ಮರಿಲಿಂಗಪ್ಪ ಮತ್ತು ಮಾಳಪ್ಪ ಇಬ್ಬರೂ ನಾನು ಲೀಜಿಗೆ ಮಾಡಿರುವ ಹೊಲವನ್ನು ನನಗಿಂತ ಮುಂಚೆ ಗೌಡರ ಹತ್ತಿರ ಹೋಗಿ ಕಡಿಮೆ ರೇಟಿಗೆ ಲೀಜಿಗೆ ಕೇಳಿದ್ದರಿಂದ ಅವರು ಹೊಲವನ್ನು ಅವರಿಗೆ ಕೊಡದೆ ಇದ್ದುದ್ದರಿಂದ ಅವರು ನನಗೆ ಮಗನೆ ನೀನು ನಮಗೆ ಕೊಡದ ಹೊಲವನ್ನು ನೀನು ಹೇಗೆ ಲೀಜ ಮಾಡುತ್ತಿ ನಿನಗೆ ಅಷ್ಟು ಸುಲಭವಾಗಿ ಬಿಡಲ್ಲ ಎಂದು ಧಮಕಿ ಹಾಕುತ್ತಾ ಇದ್ದರು. ಸದರಿಯವರಿಬ್ಬರೂ ಸೇರಿ ದಿನಾಂಕ:05/09/2022 ರಾತ್ರಿ ವೆಳೆಯಿಂದ ದಿನಾಂಕ:06/09/2022 ರ ಬೆಳಗಿನ ಜಾವ 04:00 ಗಂಟೆ ಮಧ್ಯದ ಅವಧಿಯಲ್ಲಿ ನಾನು ಲೀಜಿಗೆ ಮಾಡಿದ ಹತ್ತಿ ಹೊಲಕ್ಕೆ ಬಂದು ಅತಿಕ್ರಮ ಪ್ರವೇಶ ಮಾಡಿ ಹತ್ತಿ ಬೆಳೆಗೆ ಯಾವುದೋ ಬೆಳೆನಾಶಕ ಎಣ್ಣೆಯನ್ನು ಸಿಂಪರಣೆ ಮಾಡಿ ನಾಶ ಮಾಡಿರುತ್ತಾರೆ. ನನ್ನ ಹತ್ತಿ ಬೆಳೆ ಪೂತರ್ಿ ಬಾಡಿ, ಅಲ್ಲಲ್ಲಿ ಸುಟ್ಟಂತೆ ಆಗಿ ಹೂ, ಕಾಯಿ ಎಲೆ ಉದುರಿ ಬೋಳಾಗಿ ಬೆಳೆ ನಾಶವಾಗಿ ಇದರಿಂದ ನನಗೆ ಸುಮಾರು 13,00,000/- (ಹದಿಮೂರು ಲಕ್ಷ ರೂಪಾಯಿ) ನಷ್ಟವುಂಟಾಗಿರುತ್ತದೆ. ಕಾರಣ ನಾನು ಅವರಿಗೆ ಕೊಡದ ಹೊಲವನ್ನು ಹೆಚ್ಚಿನ ರೇಟಿಗೆ ಲೀಜಿಗೆ ಮಾಡಿದ ಒಂದೇ ಕಾರಣದಿಂದ ನನ್ನ ಮೇಲೇ ದ್ವೇಷ ಸಾಧಿಸಿ ಮೇಲ್ಕಂಡವರಿಬ್ಬರೂ ನನ್ನ ಹೊಲಕ್ಕೆ ಬೆಳೆ ನಾಶಕ ಸಿಂಪರಣೆ ಮಾಡಿ ನನಗೆ ನಷ್ಟವುಂಟು ಮಾಡಿರುತ್ತಾರೆ. ಆದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 112/2022 ಕಲಂ: 447, 427 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 113/2022 ಕಲಂ: 504, 341, 323, 506 ಸಂಗಡ 34 ಐಪಿಸಿ : ಇಂದು ದಿನಾಂಕ:29/09/2022 ರಂದು 6-15 ಪಿಎಮ್ಕ್ಕೆ ಶ್ರೀ ಹಣಮರೆಡ್ಡಿ ತಂದೆ ತಿಪ್ಪಣ್ಣ ಕಕ್ಕಸಗೇರಾ, ವ:60, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಟಿ. ವಡಗೇರಾ ಇವರು ಪೋಲಿಸ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನಗೆ 1) ದೇವಪ್ಪ 2) ಸುನೀತಾ 3) ಹೈಯಾಳಪ್ಪ 4) ಭೀಮಾಶಂಕರ 5) ತಾಯಪ್ಪ 6) ಶರಣಪ್ಪ 7) ಮಲ್ಲಿಕಾಜರ್ುನ 8) ಸಣ್ಣ ಸುನೀತಾ ಅಂತಾ ಹೀಗೆ 6 ಜನ ಗಂಡು ಮಕ್ಕಳು ಮತ್ತು 2 ಜನ ಹೆಣ್ಣು ಮಕ್ಕಳಿರುತ್ತಾರೆ. ಎಲ್ಲ ಮಕ್ಕಳಿಗೂ ಮದುವೆ ಮಾಡಿರುತ್ತೇನೆ. ಎಲ್ಲ ಮಕ್ಕಳು ಮದುವೆಯಾದಗಿನಿಂದ ತಮ್ಮ ಪಾಡಿಗೆ ತಾವು ಸಂಸಾರ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಬೇರೆ ಬೇರೆ ಕಡೆ ವಾಸವಾಗಿರುತ್ತಾರೆ. ನಾನು ನನ್ನ 5 ನೇ ಮಗನಾದ ತಾಯಪ್ಪನೊಂದಿಗೆ ವಾಸವಾಗಿರುತ್ತೇನೆ. ಅದಕ್ಕೆ ನನ್ನ 3 ನೇ ಮಗ ಹೈಯಾಳಪ್ಪ ತಂದೆ ಹಣಮರಡ್ಡಿ 6 ನೇ ಮಗ ಶರಣಪ್ಪ ತಂದೆ ಹಣಮರಡ್ಡಿ ಮತ್ತು 7 ನೇ ಮಗ ಮಲ್ಲಿಕಾಜರ್ುನ ತಂದೆ ಹಣಮರೆಡ್ಡಿ ಕಕ್ಕಸಗೇರಾ ಎಲ್ಲರೂ ಸಾ: ಟಿ. ವಡಗೇರಾ ಇವರು ಕೂಡಿ ಕೊಂಡು ಬಂದು ನಮಗೆ ಬರಬೇಕಾದ ಹೊಲ ಮನೆ ಪಾಲು ಮಾಡಿಕೊಡು ಅಂತಾ ಸುಮಾರು ದಿವಸಗಳಿಂದ ನನ್ನೊಂದಿಗೆ ಜಗಳ ಮಾಡಿಕೊಂಡು ಬರುತ್ತಿದ್ದರು. ಆಗ ನಾನು ಅವರಿಗೆ ಹೊಲ ಮನೆ ಬೇಕೆಂದ್ರೆ ಸಾಲ ಇದೆ ಅದನ್ನು ಕಟ್ಟಿರಿ, ಸಾಲ ಕಟ್ಟಿದ ನಂತರ ಸುಮಾರು 11 ಎಕರೆ ಜಮೀನು ವಾಸಕ್ಕೆ ಮನೆ ಇರುತ್ತದೆ. ಅದನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳಿರಿ ಎಂದು ಹೇಳಿರುತ್ತೇನೆ. ಆದರೆ ಅವರು ಸಾಲದ ವಿಷಯ ನಮಗೆ ಹೇಳಬೇಡ ನಮಗೆ ಹೊಲ ಮನೆ ಹಂಚಿಕೊಡು ಎಂದು ನನಗೆ ತುಂಬಾ ತಕರಾರು ಮಾಡುತ್ತಾ ನನಗೆ ತ್ರಾಸ ಕೊಡುತ್ತಿದ್ದರು. ಹೀಗಿದ್ದು ದಿನಾಂಕ:19/09/2022 ರಂದು ಬೆಳಗ್ಗೆ 9:00 ಗಂಟೆ ಸುಮಾರಿಗೆ ನಾನು ಹೊರಗಡೆ ಹೋಗುತ್ತಿದ್ದಾಗ ನನ್ನ 5 ನೇ ಮಗ ತಾಯಪ್ಪನ ಮನೆ ಮುಂದೆ 1) ಹೈಯಾಳಪ್ಪ ತಂದೆ ಹಣಮರೆಡ್ಡಿ, 2) ಶರಣಪ್ಪ ತಂದೆ ಹಣಮರೆಡ್ಡಿ, 3) ಮಲ್ಲಿಕಾಜರ್ುನ ತಂದೆ ಹಣಮರೆಡ್ಡಿ ಎಲ್ಲರೂ ಸಾ:ಟಿ. ವಡಗೇರಾ ಇವರೆಲ್ಲರೂ ಸೇರಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿದವರೆ ಎಲ್ಲರೂ ಸೇರಿ ಭೊಸುಡಿ ಮಗನೆ ಇವತ್ತು ಹೊಲ ಮನೆ ಹಂಚಿಯೇ ತೀರಬೇಕು ಇಲ್ಲಂದ್ರೆ ನಿನಗೆ ಬಿಡಲ್ಲ ಎಂದು ಜಗಳ ತೆಗೆದವರೆ ಮಲ್ಲಿಕಾಜರ್ುನ ನನಗೆ ಈ ಮುದಿ ಸೂಳಿ ಮಗ ಹಿಂಗಂದ್ರೆ ನಿಮಗೆ ಹೊಲ ಮನೆ ಪಾಲ ಕೊಡಲ್ಲ ಎಂದು ಗಟ್ಟಿಯಾಗಿ ಹಿಡಿದುಕೊಂಡಾಗ ಹೈಯಾಳಪ್ಪನು ಬಂದು ನನ್ನ ಬಲಗೈ ಭುಜ ಹಿಡಿದು ಒಡ್ಡು ಮುರಿದು ಒಳಪೆಟ್ಟು ಮಾಡಿದನು. ಶರಣಪ್ಪನು ಬಂದು ಕೈ ಮುಷ್ಟಿ ಮಾಡಿ ನನ್ನ ಬೆನ್ನಿನ ಬಲ ಭಾಗಕ್ಕೆ ಗುದ್ದಿ ಒಳಪೆಟ್ಟು ಮಾಡಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನನ್ನ ಮಗ ತಾಯಪ್ಪ ಮತ್ತು ಅಕ್ಕಪಕ್ಕದವರಾದ ಮರೆಪ್ಪ ತಂದೆ ಮಾನಪ್ಪ ಗಗ್ಗರಿ, ರಾಘವೇಂದ್ರ ತಂದೆ ಹಣಮಂತ್ರಾಯ ಕಕ್ಕಸಗೇರಾ ಇವರು ಬಂದು ನನಗೆ ಹೊಡೆಯುವುದು ಬಿಡಿಸಿಕೊಂಡಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ನಮ್ಮ ಆಸ್ತಿ ನಮಗೆ ಹಂಚಿ ಕೊಡದಿದ್ದರೆ ನಿನಗೆ ಖಲಾಸ ಕೊಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ನಾನು ನನ್ನ ಮಕ್ಕಳೆ ಇದ್ದುದ್ದರಿಂದ ಇಂದಲ್ಲ ನಾಳೆ ನಮ್ಮ ಹಿರಿಯರ ಸಮಕ್ಷಮ ರಾಜಿ ಸಂಧಾನ ಮಾಡಿಕೊಳ್ಳೊಣ ಅಂತಾ ಕರೆಸಿದರೆ ಅವರು ಯಾರು ರಾಜಿಸಂಧಾನಕ್ಕೆ ಬರದೆ ಅವನಿಗೆ ನೋಡಿಕೊಳ್ಳುತ್ತೇವೆ ಎಂದು ಧಮಕಿ ಹಾಕುತ್ತಾ ತಿರುಗಾಡುತ್ತಿದ್ದಾರೆ. ಆದ್ದರಿಂದ ತಡವಾಗಿ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಆಸ್ತಿ ಹಂಚಿಕೆ ಸಂಬಂಧ ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ: 113/2022 ಕಲಂ: 504, 341, 323, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೇನು.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 80/2022 ಕಲಂ 323, 354, 504, 506 ಐಪಿಸಿ: ಇಂದು ದಿನಾಂಕ:29/09/2022 ರಂದು 11.30 ಗಂಟೆ ಸುಮಾರಿಗೆಆರೋಪಿತನು ಏಕಾಏಕಿ ತನ್ನಕೈಯ್ಯಲ್ಲಿ ಕಲ್ಲುಗಳನ್ನು ತೆಗೆದುಕೊಂಡು ಫಿಯರ್ಾದಿ ಮನೆ ಪಕ್ಕ ಮತ್ತು ಮನೆ ಮುಂದೆ ನಿಲ್ಲಿಸಿದ ಕಾರಗಳಿಗೆ ಕಲ್ಲು ಹೊಡೆದು ಜಖಂಗೊಳಿಸಿದಾಗ ಫಿಯರ್ಾದಿಯುಆರೋಪಿತನಿಗೆ ಕಾರಗಳಿಗೆ ಕಲ್ಲುಯಾಕೆ ಹೊಡೆದೆಅಂತಾ ಕೇಳಿದಾಗ ಸದರಿಆರೋಪಿತನು ಫಿಯರ್ಾದಿಗೆಅವಮಾನ ಮಾಡುವಉದ್ದೇಶದಿಂದ ಭೋಸಡಿ ಸೂಳಿ ಹೊಡೀತೀನಿ ನೋಡು ನೀ ಏನ ಕೇಳತಿ ಅಂತಾಅವಾಚ್ಯ ಶಬ್ದಗಳಿಂದ ಬೈದು ಬಲಗೈ ಮುಂಗೈ ಹಿಡಿದು ಎಳೆದಾಡಿ ತನ್ನಕೈಯಿಂದ ಹೊಡೆಬಡೆ ಮಾಡಿ ಒಳಪೆಟ್ಟು ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 30-09-2022 11:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080