ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-11-2021

ಯಾದಗಿರ ಮಹಿಳಾ ಪೊಲೀಸ ಠಾಣೆ

ಗುನ್ನೆ ನಂ: 78/2021 ಕಲಂ: 363  ಐಪಿಸಿ : ಇಂದು ದಿನಾಂಕ 29-11-2021 ರಂದು 4-10 ಪಿ.ಎಮ್ ಕ್ಕೆ ಅರ್ಜಿದಾರರಾದ  ಶ್ರೀ ಶರಣಪ್ಪಾ ತಂದೆ ನಿಂಗಪ್ಪಾ ಕಳ್ಳಿ ವಯಾ: 52 ಜಾ:ಕಬ್ಬಲಿಗೇರ : ಕೂಲಿ ಕೆಲಸ ಸಾ: ಯಡ್ಡಳ್ಳಿ ತಾ: ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ ತಮ್ಮ ಕೊನೆಯ ಮಗಳಾದ ವಯಾ:17 ವರ್ಷ ಮತ್ತು ತಮ್ಮ ಮಗನೊಂದಿಗೆ ಫಿರ್ಯಾಧಿದಾರರು ಬೆಂಗಳೂರಿನ ಲಕ್ಷ್ಮಿಪೂರ ಎಂಬ ಏರಿಯಾದಲ್ಲಿ ಕೂಲಿ ಕೆಲಸ ಮಾಡುವ ವೇಳೆಯಲ್ಲಿ ಆಗ ಇವರ ಸಂಗಡ ಆರೋಪಿತನು ಅಲ್ಲಿಯೇ ಲೇಬರ ಕೆಲಸ ಮಾಡುತ್ತಿದ್ದನು. ಇತನು ಫಿರ್ಯಾಧಿ ಮಗಳು ಇವಳ ಸಂಗಡ ಬಹಳ ಸಲುಗೆಯಿಂದ ಇರುತ್ತಿದ್ದನು. ಸಂಬಂಧ ಆತನಿಗೆ ಬುದ್ದಿ ಮಾತು ಹೇಳಿ ನೀನು ತರಹ ನನ್ನ ಮಗಳೊಂದಿಗೆ ಸಲುಗೆಯಿಂದ ಮಾತಾಡುವುದು ಸರಿಯಲ್ಲಾ ಅಂತಾ ಹೇಳಿ ಮುಂದೆ ಅಲ್ಲಿಂದ ಫಿರ್ಯಾಧಿದಾರರು  ತನ್ನ ಹೆಂಡತಿ ಮಕ್ಕಳೊಂದಿಗೆ ಈಗ ಒಂದು ವರ್ಷದ ಹಿಂದೆ ತಮ್ಮೂರಿಗೆ ಬಂದು ಇಲ್ಲಿಯೇ ಇದ್ದಿದ್ದು ಇರುತ್ತದೆಹೀಗಿದ್ದು ದಿನಾಂಕ 25-11-2021 ರಂದು ಬೆಳಗ್ಗೆ ನಾನು ನನ್ನ ಹೆಂಡತಿ ಮತ್ತು ಮಗನಾದ ಮೂರು ಜನರು ಕೂಡಿಕೊಂಡು ನಮ್ಮ ಹೋಲಕ್ಕೆ ಹೋದೇವು ಮನೆಯಲ್ಲಿ ನಮ್ಮ ಮಗಳಾದ ಒಬ್ಬಳೇ ಇದ್ದಳುನಾವು ಮತ್ತೆ ಹೋಲದಿಂದ ಸಾಯಂಕಾಲ 5 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ಮಗಳು ಇರಲಿಲ್ಲಾ. ನಮ್ಮ ಮನೆಯ ಪಕ್ಕದ ಮನೆಯವರಾದ ಕಳ್ಳಿ ಇವರಿಗೆ ವಿಚಾರಿಸಲಾಗಿ ಅವಳು ಹೇಳಿದ್ದೆನೆಂದರೆ ನಿಮ್ಮ ಮಗಳಾದ ಇವಳು ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಾದಗಿರಿಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿರುತ್ತಾಳೆ ಅಂತಾ ತಿಳಿಸಿದಳು. ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಮಗಳು ಮೋಬೈಲ್ ನಂ: ನೆದ್ದರಿಂದ  ನನ್ನ ಮೊಬೈಲ್ ನಂ: ಇದಕ್ಕೆ ಫೋನ ಮಾಡಿ ನಾನು ಇಂದು ಕಲಬುರಗಿಯ ಸೋಮಾ ತಂದೆ ಮನೋಹರ ಇತನ ಸಂಗಡ ಕಲಬುರಗಿಗೆ ಬಂದಿದ್ದೆನೆ ನಾವು ಸಧ್ಯ ಕಲಬುರಗಿಯಲ್ಲಿದ್ದೆವೆ, ನೀವು ನಮಗೆ ಹುಡುಕಾಡಬೇಡರಿ ಅಂತಾ ಹೇಳಿ ಫೊನ ಕಟ್ ಮಾಡಿದಳುತಮ್ಮ ಮಗಳ ಸಂಗಡ ಮೊದಲು ಬೆಂಗಳೂರಿನಲ್ಲಿ ಸಲುಗೆಯಿಂದ ಇದ್ದ ಸೋಮಾ ತಂದೆ ಮನೋಹರ ಸಾ: ಕಲಬುರಗಿ ಇತನೇ ತಮ್ಮ ಅಪ್ರಾಪ್ತ ವಯಸ್ಸಿನ ಮಗಳಾದ ಇವಳಿಗೆ ಪುಸಲಾಯಿಸಿ ಯಾದಗಿರಿಗೆ ಕರೆಯಿಸಿಕೊಂಡು ದಿನಾಂಕ 25-11-2021 ರಂದು ಮಧ್ಯಾಹ್ನ 1-00 ಗಂಟೆ  ಸುಮಾರಿಗೆ ಯಾದಗಿರಿಯಿಂದ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಅಂತಾ ಬಲವಾದ ಸಂಶಯವಿದ್ದ ಮೇರೆಗೆ  ಆತನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ನೀಡಿದ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 78/2021 ಕಲಂ 363 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕ್ಯಗೊಂಡಿದ್ದು ಇರುತ್ತದೆ.                   


ಶೋರಾಪೂರ ಪೊಲೀಸ್ ಠಾಣೆ
183/2021 ಕಲಂ: 279, 337, 338 ಐಪಿಸಿ : ಇಂದು ದಿ: 29/11/21 ರಂದು 9:30 ಪಿಎಮ್ಕ್ಕೆ ಶ್ರೀ ಧರ್ಮಣ್ಣ ತಂದೆ ಹಣಮಂತ ತಳವಾರ ವ|| 64 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಕುಂಬಾರಪೇಟ್ ಸುರಪುರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಒಟ್ಟು 4 ಜನ ಮಕ್ಕಳು ಇರುತ್ತಾರೆ. ನಾನು ಮತ್ತು ನನ್ನ ಮಗ ಭೀಮಪ್ಪ ವ|| 28 ವರ್ಷ ಇಬ್ಬರು ಕೂಡಿ ದಿನಾಂಕ:23/11/2021 ಮುಂಜಾನೆ 10:00 ಗಂಟೆಗೆ ಕೂಲಿ ಕೆಲಸಕ್ಕಾಗಿ ವಿಜುಕುಮಾರ ತಳವಾರ ಇತನ ಟ್ರ್ಯಾಕ್ಟರ ಮೇಲೆ ಲೇಬರ ಕೆಲಸಕ್ಕಾಗಿ ಹೊಗಿದ್ದು, ಕೆಲಸ ಮುಗಿಸಿಕೊಂಡು ಕುಂಬಾರಪೇಟ್ ವೃತ್ತದಿಂದ ಮರಳಿ ನಾನು ಮತ್ತು ನನ್ನ ಮಗ ಭೀಮಪ್ಪ ಇಬ್ಬರು ಮನೆಗೆ ಹೊಗುವ ಕುರಿತು ಸುರಪುರ-ಲಿಂಗಸೂಗುರು ಮುಖ್ಯ ರಸ್ತೆಯ ಬೈಲ್ ಆಂಜನೇಯ ದೇವರ ಗುಡಿಯ ಹತ್ತಿರ ರೋಡಿನ ಎಡ ಬದಿಗೆ ನಡೆದುಕೊಂಡು ಹೊಗುತ್ತಿರುವಾಗ ಸಾಯಂಕಾಲ 6:45 ಗಂಟೆ ಸುಮಾರಿಗೆ ಹಿಂದಿನಿಂದ ಒಬ್ಬ ಮೋಟರ್ ಸೈಕಲ್ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಮಗ ಭೀಮಪ್ಪನಿಗೆ ಜೊರಾಗಿ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನು ರೋಡಿನ ಮೇಲೆ ಬಿದ್ದನು, ಆಗ ನಾನು ನನ್ನ ಮಗನಿಗೆ ಎಬ್ಬಿಸಿ ನೋಡಲಾಗಿ ತಲೆಗೆ ಭಾರಿ ಪೆಟ್ಟಾಗಿ ಎಡ ಕಿವಿಯಿಂದ ರಕ್ತ ಬಂದಿರುತ್ತದೆ. ನನ್ನ ಮಗನಿಗೆ ಡಿಕ್ಕಿ ಪಡಿಸಿ ಮೋಟರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದ, ಮೋಟರ್ ಸೈಕಲ್ ಸವಾರನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ನಿಂಗಪ್ಪ ತಂದೆ ಪಕೀರಪ್ಪ ಗೋಪಾಳಪುರ ವ|| 40 ವರ್ಷ ಜಾ|| ಹೊಲೇಯ ಉ|| ಚಾಲಕ ಸಾ|| ದೇವಾಪುರ ಅಂತಾ ತಿಳಿಸಿದ್ದು ಆತನಿಗೆ ನೊಡಲಾಗಿ ಎಡ ಹಣೆಗೆ ಗುಪ್ತಗಾಯ, ಎಡಗೈಗೆ ತರಚಿದ ಗಾಯವಾಗಿ ಮುಗಿನಿಂದ ರಕ್ತ ಬಂದಿರುತ್ತದೆ. ಮೋಟರ್ ಸೈಕಲ್ ಹಿಂದೆ ಕುಳಿತ ವ್ಯಕ್ತಿಗೆ ವಿಚಾರಿಸಲಾಗಿ ಆತನು ತನ್ನ ಹೆಸರು ರಾಮಣ್ಣ ತಂದೆ ಮಾನಪ್ಪ ಎಮ್ಮೇರ ವ|| 35 ವರ್ಷ ಜಾ|| ಹೊಲೇಯ ಉ|| ಕೂಲಿ ಸಾ|| ದೇವಾಪುರ ಅಂತಾ ತಿಳಿಸಿದ್ದು ಆತನಿಗೆ ನೊಡಲಾಗಿ ಎಡಗೈಗೆ ತರಚಿದ ಗಾಯ, ಎಡ ಗಣ್ಣಿನ ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ. ಮೋಟರ್ ಸೈಕಲ್ ನೋಡಲಾಗಿ ಮೋಟರ್ ಸೈಕಲ್ ನಂ. ಕೆಎ-34 ವ್ಹಿ-1724 ಅಂತಾ ಇರುತ್ತದೆ. ಗಾಯಗೊಂಡ ನನ್ನ ಮಗ ಮತ್ತು ಅವರಿಬ್ಬರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸುರಪುರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆನು. ನಂತರ ನನ್ನ ಮಗನಿಗೆ ಪ್ರಥಮೋಪಚಾರ ಮಾಡಿದ ವೈದ್ಯರು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೊಗಲು ತಿಳಿಸಿದ್ದರಿಂದ ನನ್ನ ಮಗನಿಗೆ 108 ವಾಹನದಲ್ಲಿ ಚಿರಾಯು ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿ ಉಪಚಾರ ಪಡಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ಮೋಟರ್ ಸೈಕಲ್ ನಂ. ಕೆಎ-34 ವ್ಹಿ-1724 ನೇದ್ದರ ಚಾಲಕ ನಿಂಗಪ್ಪ ತಂದೆ ಪಕೀರಪ್ಪ ಗೋಪಾಳಪುರ ಸಾ|| ದೇವಾಪುರ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 183/2021 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ್ ಠಾಣೆ
86/2021 ಕಲಂ.379 ಐಪಿಸಿ : ದಿನಾಂಕ:28/11/2021 ರಂದು ಹಣಮಂತ್ರಾಯಗೌಡ ತಂದೆ ಶಿವಣ್ಣ ಹುಡೇದ ಸಾ:ಕುಪ್ಪಿ ಇವರ ಕಾಮನಟಗಿ ಸೀಮಾಂತರದ ಹೊಲದಲ್ಲಿ ಕವಳಿ ಕಟಾವು ಮಾಡಲು ಕವಳಿ ರಾಶಿ ಮಶೀನ್ ತೆಗೆದುಕೊಂಡು ಬಾಡಿಗೆಗೆ ಬನ್ನಿ ಅಂತಾ ತಿಳಿಸಿದ ಮೇರೆಗೆ ಪಿರ್ಯಾದಿದಾರರು ತಮ್ಮ ಕವಳಿ ಮಶೀನ್ ಆಪರೇಟರ್ ನಿಂಗಪ್ಪ ತಂದೆ ಹರಿಶ್ಚಂದ್ರ ಪವಾರ ಈತನಿಗೆ ಕವಳಿ ರಾಶಿ ಮಶೀನ್ ನಂ:0706782 ಇಂಜಿನ್ ನಂ:ಊಗಙ628590 ನೇದ್ದನ್ನು ಕೊಟ್ಟು ಕಳುಹಿಸಿದ್ದು, ಸದರಿ ಕವಳಿ ರಾಶಿ ಮಶೀನ್ನ್ನು ಆಪರೇಟರ್ ನಿಂಗಪ್ಪನು ತೆಗೆದುಕೊಂಡು, ಹಣಮಂತ್ರಾಯಗೌಡ ಇವರ ಹೊಲಕ್ಕೆ ಹೋಗಿ ರಾತ್ರಿ 10.00 ಗಂಟೆಯವರೆಗೆ ಕವಳಿ ಕಟಾವು ಮಾಡಿದ್ದು, ನಂತರ ರಾತ್ರಿ ಕವಳಿ ರಾಶಿ ಮಶೀನ್ ಅದೆ ಹೊಲದಲ್ಲಿ ಬಿಟ್ಟು ಮನೆಗೆ ಬಂದು ಇಂದು ದಿನಾಂಕ:29/11/2021 ರಂದು ಬೆಳಿಗ್ಗೆ ಹೋಗಿ ನೊಡಿದಾಗ ಸದರಿ ರಾಶಿ ಮಶೀನ್ ಅಲ್ಲಿ ಇರಲಿಲ್ಲ. ಆಪರೇಟರ್ ನಿಂಗಪ್ಪನು ಫಿರ್ಯಾದಿದಾರರಿಗೆ ವಿಷಯ ತಿಳಿಸಿದಾಗ, ಪಿರ್ಯಾದಿದಾರರು ಸದರಿ ಹೊಲಕ್ಕೆ ಹೋಗಿ ನೊಡಿ ಸಾಯಂಕಾಲದವೆರೆಗೆ ಹುಡುಕಾಡಿ ತಡವಾಗಿ ಠಾಣೆಗೆ ಬಂದಿದ್ದು, ರಾತ್ರಿ ವೇಳೆಯಲ್ಲಿ ಕವಳಿ ರಾಶಿ ಮಶೀನ್ ನಂ:0706782 ಇಂಜಿನ್ ನಂ:ಊಗಙ628590 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಅಪರಾಧ.

ಇತ್ತೀಚಿನ ನವೀಕರಣ​ : 30-11-2021 11:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080