ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-12-2021

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ. 142/2021 ಕಲಂ:279, 338 ಐಪಿಸಿ : ಇಂದು ದಿನಾಂಕ:29/12/2021 ರಂದು 1-30 ಪಿಎಮ್ ಕ್ಕೆ ಶ್ರೀಮತಿ ಪರಮ್ಮ ಗಂಡ ಬಸವರಾಜ ಖಾನಾಪೂರ, ವ:45, ಜಾ:ಹೊಲೆಯ, ಉ:ಹೊಲಮನೆ ಕೆಲಸ ಸಾ:ಗುರುಸಣಗಿ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನಗೆ 5 ಜನ ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು ಇರುತ್ತಾರೆ. ಅವರಲ್ಲಿ ಸುರೇಶ ಈತನು 5 ನೇಯವನಾಗಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:28/12/2021 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನ ಮಗ ಸುರೇಶ ಮತ್ತು ಅವನ ಗೆಳೆಯ ಭರತ ತಂದೆ ಹಣಮಂತ ದೊಡ್ಡಮನಿ ಸಾ:ಗುರುಸಣಗಿ ಇಬ್ಬರೂ ಕೂಡಿ ಮೋಟರ್ ಸೈಕಲ್ ನಂ. ಕೆಎ 33 ಯು 9207 ನೇದ್ದರ ಮೇಲೆ ನಾಯ್ಕಲ್ ಗ್ರಾಮಕ್ಕೆ ಹೋಗಿ ಬರುತ್ತೇವೆ ಎಂದು ನನಗೆ ಹೇಳಿ ಹೋದರು. ರಾತ್ರಿ 7-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗ ಸುರೇಶನ ಗೆಳೆಯ ಭರತ ಈತನು ನನ್ನ ಮಗ ಶಿವರಾಜ ಈತನ ಮೊಬೈಲಿಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ಸುರೇಶ ಇಬ್ಬರೂ ನಾಯ್ಕಲ್ ಗ್ರಾಮಕ್ಕೆ ಹೋಗಿ ಮರಳಿ ಮೋಟರ್ ಸೈಕಲ್ ಮೇಲೆ ಬರುತ್ತಿದ್ದಾಗ ನಮ್ಮ ಗ್ರಾಮದ ಆಕ್ಸಫರ್ಡ ಶಾಲೆ ಹತ್ತಿರ ಮೋಟರ್ ಸೈಕಲ್ ಸ್ಕಿಡ್ಡ ಮಾಡಿಕೊಂಡು ಬಿದ್ದಿರುತ್ತೇವೆ. ಮೋಟರ್ ಸೈಕಲ್ ನಡೆಸುತ್ತಿದ್ದ ಸುರೇಶನಿಗೆ ಭಾರಿ ಗಾಯಗಳಾಗಿವೆ ನೀವು ಬೇಗ ಬನ್ನಿ ಎಂದು ಹೇಳಿದನು. ಆಗ ನಾನು ಮತ್ತು ನನ್ನ ಮಗ ಶಿವರಾಜ ಇಬ್ಬರೂ ಕೂಡಿ ತಕ್ಷಣ ಆಕ್ಸಫರ್ಡ ಶಾಲೆ ಹತ್ತಿರ ಹೋಗಿ ನನ್ನ ಮಗ ಸುರೇಶನಿಗೆ ನೋಡಿದಾಗ ಅವನಿಗೆ ಅಪಘಾತದಲ್ಲಿ ಹಣೆಗೆ ಭಾರಿ ರಕ್ತಗಾಯ ಮತ್ತು ಮೂಗಿನ ಕೆಳಗೆ ರಕ್ತಗಾಯವಾಗಿತ್ತು. ಭರತನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿದ್ದವು. ಅಪಘಾತದ ಬಗ್ಗೆ ಭರತನಿಗೆ ಕೇಳಿದಾಗ ಅವನು ಹೇಳಿದ್ದೇನಂದರೆ ನಾನು ಮತ್ತು ಸುರೇಶ ಇಬ್ಬರೂ ನಾಯ್ಕಲ್ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿದ್ದೇವು. ಸುರೇಶನು ಮೋಟರ್ ಸೈಕಲ್ ನಡೆಸುತ್ತಿದ್ದು, ನಾನು ಹಿಂದುಗಡೆ ಕುಳಿತುಕೊಂಡಿದ್ದೆನು. ಯಾದಗಿರಿ-ಶಹಾಪೂರ ಮೇನ ರೋಡಿನಿಂದ ಗುರುಸಣಗಿ ಗ್ರಾಮಕ್ಕೆ ಬರುವ ರೋಡಿನ ಮೇಲೆ ಬರುತ್ತಿದ್ದಾಗ ಗುರುಸಣಗಿ ಗ್ರಾಮದ ಆಕ್ಸಫರ್ಡ ಶಾಲೆ ಹತ್ತಿರ ರೋಡಿನ ಮೇಲೆ ಸುರೇಶನು ಮೋಟರ್ ಸೈಕಲ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೊರಟಿದ್ದು, ಒಮ್ಮಲೆ ಬ್ರೇಕ್ ಹಾಕಿದ್ದರಿಂದ ಮೋಟರ್ ಸೈಕಲ್ ಅವನ ನಿಯಂತ್ರಣ ತಪ್ಪಿ, ಸ್ಕಿಡ್ಡಾಗಿ ಬಿದ್ದು ಬಿಟ್ಟೆವು. ಈ ಅಪಘಾತದಲ್ಲಿ ಸುರೇಶನಿಗೆ ಹಣೆಗೆ ಭಾರಿ ರಕ್ತಗಾಯ ಮತ್ತು ಮೂಗಿನ ಕೆಳಗೆ ರಕ್ತಗಾಯವಾಗಿರುತ್ತದೆ. ನನಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತವೆ ಎಂದು ಹೇಳಿದನು. ಅಪಘಾತದಲ್ಲಿ ಭಾರಿ ಗಾಯಗೊಂಡ ನನ್ನ ಮಗ ಸುರೇಶನಿಗೆ ಉಪಚಾರ ಕುರಿತು ನಾವು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ತೋರಿಸಿದ್ದು, ವೈದ್ಯಾಧಿಕಾರಿಗಳು ಪ್ರಥಮ ಉಪಚಾರ ಮಾಡಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿರುತ್ತಾರೆ. ಯಾದಗಿರಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದ್ದು, ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ನನ್ನ ಮಗನಿಗೆ ಪ್ರಥಮ ಉಪಚಾರ ಮಾಡಿಸಿ, ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿಗೆ ಕಳುಹಿಸಿ, ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿ ದೂರು ಕೊಟ್ಟಿರಲಿಲ್ಲ. ಕಾರಣ ನನ್ನ ಮಗ ಸುರೇಶನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿ, ಈಗ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮಗ ಸುರೇಶನು ಮೋಟರ್ ಸೈಕಲ್ ನಂ. ಕೆಎ 33 ಯು 9207 ನೇದ್ದನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ, ಒಮ್ಮೆಲೆ ಬ್ರೇಕ್ ಹಾಕಿ ಸ್ಕಿಡ್ಡ ಮಾಡಿಕೊಂಡು ಬಿದ್ದು ಭಾರಿ ಗಾಯಗೊಂಡು ಉಪಚಾರ ಪಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 142/2021 ಕಲಂ:279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 70/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 29/12/2021 ರಂದು ಸಮಯ 9-30 ಎ.ಎಂ.ಕ್ಕೆ ಯಾದಗಿರಿಯ ಶ್ರೀ ಶರಣಬಸವೇಶ್ವರ ಖಾಸಗಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಶ್ರೀ ರವೀಂದ್ರ ಎಚ್.ಸಿ-189 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ, ಆಸ್ಪತ್ರೆಯಲ್ಲಿ ಹಾಜರಿದ್ದ ಪಿಯರ್ಾದಿ ಶ್ರೀಮತಿ ಗೀತಾಬಾಯಿ ಗಂಡ ರಾಜು ರಾಠೋಡ ವಯ;38 ವರ್ಷ, ಜಾ;ಲಂಬಾಣಿ, ಉ;ಮನೆಗೆಲಸ, ಸಾ;ವಾಡಿ, ತಾ;ಚಿತ್ತಾಪುರ, ಜಿ;ಕಲಬುರಗಿ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 11-15 ಎ.ಎಂ.ಕ್ಕೆ ಬಂದು ಪಿಯರ್ಾದಿಯ ಅಸಲು ಹೇಳಿಕೆಯನ್ನು ನನ್ನ ಮುಂದೆ ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶವೇನೆಂದರೆ ನಾನು ಮನೆಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಿನ್ನೆ ದಿನಾಂಕ 28/12/2021 ರಂದು ನಮ್ಮ ಸಂಬಂಧಿಕರು ಮಗದಂಪುರತಾಂಡದಲ್ಲಿ ದೇವರು ಕಾರ್ಯಕ್ರಮ ಮಾಡಿದ್ದರಿಂದ ನಾನು ಮತ್ತು ನನ್ನ ಗಂಡನಾದ ರಾಜು ತಂದೆ ನಾಮದೇವ ವಯ;45 ವರ್ಷ, ಹಾಗೂ ನನ್ನ ಮಗನಾದ ಮದನ ವಯ;19 ವರ್ಷ ಎಲ್ಲರೂ ಸೇರಿಕೊಂಡು ಇನೊವಾ ಕಾರ್ ನಂಬರ ಕೆಎ-32, ಎನ್-2407 ನೇದ್ದರಲ್ಲಿ ವಾಡಿಯಿಂದ ಮಗದಂಪುರ ತಾಂಡಾಕ್ಕೆ ಬಂದಿದ್ದೆವು. ಹೀಗಿದ್ದು ಇಂದು ದಿನಾಂಕ 29/12/2021 ರಂದು ಬೆಳಿಗ್ಗೆ 5-30 ಎ.ಎಂ.ದ ಗಂಟೆ ಸುಮಾರಿಗೆ ನಾವುಗಳು ದೇವರು ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಅದೇ ಕಾರಿನಲ್ಲಿ ಮಗದಂಪುರ ತಾಂಡಾದಿಂದ ವಾಡಿಗೆ ಹೊರಟೆವು. ಕಾರನ್ನು ನನ್ನ ಗಂಡನಾದ ರಾಜು ಈತನು ಚಾಲನೆ ಮಾಡಿಕೊಂಡು ಹೊರಟಿದ್ದನು. ನಾನು ಕಾರಿನ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದು, ನನ್ನ ಮಗ ನಮ್ಮ ಹಿಂದಿನ ಸೀಟಿನಲ್ಲಿ ಕುಳಿತಿದ್ದನು. ಮಾರ್ಗ ಮದ್ಯೆ ಹೈದ್ರಾಬಾದ್-ಯಾದಗಿರಿ ಮುಖ್ಯ ರಸ್ತೆಯ ಮೇಲೆ ಬರುವ ಮುಂಡರಗಿ ಗ್ರಾಮದ ಹತ್ತಿರದ ಬಾದಲ್ ಕಾಟನ್ ಮಿಲ್ ಹತ್ತಿರ ಮುಖ್ಯ ರಸ್ತೆ ಮೇಲೆ ಹೋಗುತ್ತಿದ್ದಾಗ ನಾನು ನೋಡು ನೋಡುತ್ತಿದ್ದಂತೆ ನಮ್ಮ ಎದುರಿಗೆ ಅಂದರೆ ಯಾದಗಿರಿ ರಸ್ತೆ ಕಡೆಯಿಂದ ಹೈದ್ರಾಬಾದ್ ರಸ್ತೆ ಕಡೆಗೆ ಹೊರಟಿದ್ದ ಒಂದು ಬೂದಿ ಲಾರಿ ಟ್ಯಾಂಕರ್ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಕಾರಿನ ಬಲಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು. ಡಿಕ್ಕಿ ಹೊಡೆದ ರಭಸಕ್ಕೆ ನಮ್ಮ ಕಾರ್ ರಸ್ತೆಯ ಬಲಭಾಗಕ್ಕೆ ಹೋಗಿ ತಗ್ಗಿನಲ್ಲಿ ಪಲ್ಟಿಯಾಗಿರುತ್ತದೆ, ಸದರಿ ಅಪಘಾತದಲ್ಲಿ ನನಗೆ ಯಾವುದೆ ಗಾಯ, ವಗೈರೆ ಆಗಿರುವುದಿಲ್ಲ, ನನ್ನ ಮಗ ಮದನ ಈತನಿಗೆ ನೋಡಲು ಆತನ ಬಲಗೈ ಮುಂಗೈ ಹತ್ತಿರ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕೈ ಮುರಿದಿರುತ್ತದೆ. ಎದೆಗೆ ಭಾರೀ ಗುಪ್ತಗಾಯವಾಗಿರುತ್ತದೆ, ಕಾರ್ ನಡೆಸುತ್ತಿದ್ದ ನನ್ನ ಗಂಡನಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ. ಈ ಅಪಘಾತವು ಇಂದು ದಿನಾಂಕ 29/12/2021 ರಂದು ಬೆಳಿಗ್ಗೆ 6-30 ಎ.ಎಂ.ಕ್ಕೆ ಜರುಗಿದ್ದು, ನಮಗೆ ಅಪಘಾತಪಡಿಸಿದ ಬೂದಿ ಲಾರಿ ಟ್ಯಾಂಕರ್ ನಂಬರ ಕೆಎ-32, ಡಿ-4287 ನೇದ್ದು ಘಟನಾ ಸ್ಥಳದಲ್ಲಿದ್ದು, ಅದರ ಚಾಲಕನು ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜಗನ್ನಾಥ ತಂದೆ ಭಗವಂತ್ರಾಯ ಬಣಮಗಿ ವಯ;22 ವರ್ಷ, ಜಾ;ಲಿಂಗಾಐತ್, ಉ;ಲಾರಿ ಚಾಲಕ, ಸಾ;ಸೋನುಬಾಯಿ ಏರಿಯಾ, ವಾಡಿ ಅಂತಾ ತಿಳಿಸಿರುತ್ತಾನೆ. ಆಗ ಇದೇ ರಸ್ತೆ ಮಾರ್ಗವಾಗಿ ಮೋಟಾರು ಸೈಕಲ್ ಮೇಲೆ ಹೊರಟಿದ್ದ ನಮಗೆ ಈ ಮೊದಲೇ ಪರಿಚಯ ಇರುವ ಎಂ.ಹೊಸಳ್ಳಿ ತಾಂಡಾದ ಕರಣ ತಂದೆ ಪೇಮ್ಯಾ ಚವ್ಹಾಣ ಹಾಗೂ ರಾಹುಲ್ ತಂದೆ ತೋಳ್ಯಾರಾಮ ರಾಠೋಡ ಇವರುಗಳು ಘಟನೆಯನ್ನು ನೋಡಿ ನಮ್ಮ ಹತ್ತಿರ ಬಂದು ವಿಚಾರಿಸಿರುತ್ತಾರೆ ಆಗ ಘಟನಾ ಸ್ಥಳಕ್ಕೆ ಅಂಬುಲೆನ್ಸ್ ಬಂದಾಗ ಅವರುಗಳು ನಮಗೆಲ್ಲಾ ಯಾದಗಿರಿಯ ಶ್ರೀ ಶರಣಬಸವೇಶ್ವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಘಟನೆಯ ಸುದ್ದಿ ತಿಳಿದು ನನ್ನ ತಮ್ಮನಾದ ಶಂಕರ ತಂದೆ ತಾನಾಜಿ ಜಾಧವ ಸಾ;ಸ್ಟೇಷನ್ ತಾಂಡ, ಚಿತ್ತಾಪುರ ಇವರು ಆಸ್ಪತ್ರೆಗೆ ಬಂದು ವಿಚಾರಿಸಿದ್ದು ಇರುತ್ತದೆ.ಹೀಗಿದ್ದು ಇಂದು ದಿನಾಂಕ 29/12/2021 ರಂದು ಬೆಳಿಗ್ಗೆ 6-30 ಎ.ಎಂ.ದ ಸುಮಾರಿಗೆ ಹೈದ್ರಾಬಾದ್-ಯಾದಗಿರಿ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರದ ಬಾದಲ್ ಕಾಟನ್ ಮಿಲ್ ಮುಂದಿನ ಮುಖ್ಯ ರಸ್ತೆಯ ಮೇಲೆ ನಾವು ಹೊರಟಿದ್ದ ಕಾರ್ ನಂಬರ ಕೆಎ-32, ಎನ್-2407 ನೇದ್ದಕ್ಕೆ ಬೂದಿ ಲಾರಿ ಟ್ಯಾಂಕರ್ ನಂಬರ ಕೆಎ-32, ಡಿ-4287 ನೇದ್ದರ ಚಾಲಕ ಜಗನ್ನಾಥ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಜರುಗಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 70/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 


ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ. 79/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ:29.12.2021 ರಂದು 3:00 ಪಿಎಮ್ ಕ್ಕೆ ಪಿರ್ಯಾಧಿ ಶ್ರೀ ರಮೇಶ ತಂದೆ ಅಮರಪ್ಪ ಐದಬಾಯೆರ ವ||28 ವರ್ಷ ಜಾ||ಹಿಂದೂ ಬೇಡರ ಉ||ಕೂಲಿ ಕೆಲಸ ಸಾ||ಐದಬಾಯೆರದೊಡ್ಡಿ ಕಕ್ಕೇರಾ ತಾ||ಸುರಪೂರ ಜಿ|| ಯಾದಗಿರ (ಮೋ.ನಂ. 8971581877) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ್ದು, ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ಹಣಮಂತ, ಸಂಗಣ್ಣ, ಫಕೀರಪ್ಪ ಮತ್ತು ನಾನು ನಾಲ್ಕು ಜನ ಗಂಡು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದ್ದು ಎಲ್ಲರೂ ನಮ್ಮ ನಮ್ಮ ಕುಟುಂಬದೊಂದಿಗೆ ಬೇರೆ ಬೇರೆ ಇದ್ದು, ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಅಕ್ಕಪಕ್ಕದಲ್ಲಿಯೇ ಮನೆಮಾಡಿಕೊಂಡಿರುತ್ತೇವೆ. ನಾನು ಈಗ ಮೂರು ವರ್ಷಗಳ ಹಿಂದೆ ಲಿಂಗಸ್ಗೂರು ತಾಲೂಕಿನ ಎರಗೋಡಿ ಗ್ರಾಮದ ಮುದುಕಪ್ಪ ತಂದೆ ಹಣಮಪ್ಪ ಹಾಲಬಾವೇರ ಇವರ ಮಗಳಾದ ಶಿವಮ್ಮಳನ್ನು ಮದುವೆಯಾಗಿದ್ದು, ನಮಗೆ ಇನ್ನು ಮಕ್ಕಳು ಆಗಿರುವುದಿಲ್ಲಾ. ನಮ್ಮ ತಂದೆತಾಯಿಯವರು ನಮ್ಮ ಜೋತೆಯಲ್ಲಿಯೇ ಇರುತ್ತಾರೆ.
ಹೀಗಿದ್ದು ನಮ್ಮೂರ ಹೆಣ್ಣು ಮಕ್ಕಳು ದಿನಾಲೂ ಸುರಪೂರ ಹತ್ತಿರದ ಕೃಷ್ಣಾಪೂರಕ್ಕೆ ಹತ್ತಿಬಿಡಿಸಲು ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದು, ದಿನಾಂಕ:25/12/2021 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆ ಅಮರಪ್ಪ ತಾಯಿ ಆದಮ್ಮ ರವರು ಮನೆಯಲ್ಲಿದ್ದಾಗ ನನ್ನ ಹೆಂಡಯಿಯಾದ ಶಿವಮ್ಮಳು ಕೃಷ್ಣಾಪೂರಕ್ಕೆ ಹತ್ತಿಬಿಡಿಸಲು ಊರವರಾದ ಹಣಮಂತಿ ಗಂಡ ಆದಪ್ಪ ಐದಬಾಯೇರ, ದ್ಯಾವಮ್ಮ ಗಂಡ ಸೋಮಣ್ಣ ಐದಬಾಯೇರ ಹಾಗೂ ಇತರರೊಂದಿಗೆ ಹೋಗುತ್ತೇನೆ ಅಂತಾ ತಿಳಿಸಿದ್ದು, ನಾನು ಮತ್ತು ನನ್ನ ತಂದೆತಾಯಿಯವರು ನನ್ನ ಹೆಂಡತಿಗೆ ಆಯಿತು ಹೋಗಿ ಬಾ ಅಂತಾ ಹೇಳಿದ್ದು, ನಂತರ ನನ್ನ ಹೆಂಡತಿಯು ಬುತ್ತಿ ಕಟ್ಟಿಕೊಂಡು ಮನೆಯಿಂದ ಹೋಗಿದ್ದು ಸಾಯಂಕಾಲ 6:00 ಗಂಟೆ ಸುಮಾರಿಗೆ ಹತ್ತಿಬಿಡಿಸಲು ಕೃಷ್ಣಾಪೂರಕ್ಕೆ ಹೋದ ನಮ್ಮೂರ ಹಣಮಂತಿ ಗಂಡ ಆದಪ್ಪ ಐದಬಾಯೇರ, ದ್ಯಾವಮ್ಮ ಗಂಡ ಸೋಮಣ್ಣ ಐದಬಾಯೇರ ರವರು ಹಾಗೂ ಇತರರು ಮರಳಿ ಬಂದಿದ್ದು ಅವರ ಜೋತೆಗೆ ನನ್ನ ಹೆಂಡತಿ ಶಿವಮ್ಮಳು ಬಂದಿರಲಿಲಾ.್ಲ ನಾನು ನಮ್ಮೂರ ಹಣಮಂತಿ ಗಂಡ ಆದಪ್ಪ ಐದಬಾಯೇರ, ದ್ಯಾವಮ್ಮ ಗಂಡ ಸೋಮಣ್ಣ ಐದಬಾಯೇರ ರವರಿಗೆ ವಿಚಾರಿಸಲಾಗಿ ನಿನ್ನ ಹೆಂಡತಿಯು ನಮ್ಮೊಂದಿಗೆ ಹತ್ತಿಬಿಡಿಸಲು ಕೃಷ್ಣಾಪೂರಕ್ಕೆ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ಆಗ ನಾನು ಗಾಬರಿಯಾಗಿ ನಮ್ಮ ಮನೆಗೆ ಹೋಗಿ ನನ್ನ ತಂದೆ ತಾಯಿ ಹಾಗೂ ಅಣ್ಣಂದಿರಾದ ಹಣಮಂತ, ಸಂಗಣ್ಣ, ಫಕೀರಪ್ಪ ರವರಿಗೆ ನನ್ನ ಹೆಂಡತಿಯು ಮುಂಜಾನೆ ಕೃಷ್ಣಾಪೂರಕ್ಕೆ ಕೂಲಿ ಕೆಲಸಕ್ಕಾಗಿ ಹೋಗುತ್ತೇನೆ ಅಂತಾ ಹೇಳಿ ಹೋದವಳು ಕೃಷ್ಣಾಪೂರಕ್ಕೆ ಕೂಲಿ ಕೆಲಸಕ್ಕೆ ಹೋಗಿರುವುದಿಲ್ಲಾ ನಮ್ಮೂರ ಹಣಮಂತಿ ಗಂಡ ಆದಪ್ಪ ಐದಬಾಯೇರ, ದ್ಯಾವಮ್ಮ ಗಂಡ ಸೋಮಣ್ಣ ಐದಬಾಯೇರ ರವರು ತಮ್ಮೊಂದಿಗೆ ನನ್ನ ಹೆಂಡತಿಯು ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ನನ್ನ ಹೆಂಡತಿಯು ಎಲ್ಲಿಗೆ ಹೋಗಿದ್ದಾಳೆ ಅಂತಾ ಗೋತ್ತಾಗಿರುವದಿಲ್ಲಾ ಅಂತಾ ತಿಳಿಸಿದ್ದು, ನಂತರ ನಾವೇಲ್ಲರೂ ಆ ದಿನ ನಮ್ಮ ಊರಲ್ಲಿ ಹಾಗೂ ಅಕ್ಕಪಕ್ಕದ ದೊಡ್ಡಿಗಳಿಗೆ ಹೋಗಿ ವಿಚಾರಿಸಲಾಗಿ ನನ್ನ ಹೆಂಡತಿಯು ಸಿಗಲಿಲ್ಲಾ. ನಂತರ ನನ್ನ ಹೆಂಡತಿಯ ತಂದೆಯಾದ ಮುದಕಪ್ಪ ಹಾಗೂ ನನ್ನ ಹೆಂಡತಿಯ ಅಣ್ಣಂದಿರಾದ ಮುದೆಪ್ಪ, ಮಾಂತೇಶ ರವರಿಗೆ ಫೋನ್ ಮಾಡಿ ಕೇಳಲಾಗಿ ನನ್ನ ಹೆಂಡತಿಯು ಅಲ್ಲಿಗೆ ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು, ಮರುದಿವಸ ನನ್ನ ಹೆಂಡತಿಯ ತಂದೆ ಮುದಕಪ್ಪ ತಾಯಿ ಅಂಬ್ರಮ್ಮ ಹಾಗೂ ನನ್ನ ಹೆಂಡತಿಯ ಅಣ್ಣಂದಿರಾದ ಮುದೆಪ್ಪ, ಮಾಂತೇಶ ರವರು ನಮ್ಮೂರಿಗೆ ಬಂದಿದ್ದು, ಅವರಿಗೆ ವಿಷಯ ತಿಳಿಸಿದ್ದು ನಂತರ ಇವರೆಲ್ಲರೂ ಹಾಗೂ ನನ್ನ ಅಣ್ಣಂದಿರಾದ ಹಣಮಂತ, ಸಂಗಣ್ಣ, ಫಕೀರಪ್ಪ ರವರು ಕೂಡಿ ಅಂದಿನಿಂದ ಇವತ್ತಿನವರೆಗೆ ನಮ್ಮ ಸಂಬಂಧಿಕರ ಊರುಗಳಾದ ಎರಗೋಡಿ, ಹಟ್ಟಿ, ಲಿಂಗಸ್ಗೂರು, ಸೋಮನಮಡ್ಡಿ, ಲಕ್ಷ್ಮಪೂರ, ಯರಕಿಹಾಳ, ಬಂಡೇಬಾವಿ, ಬೆಣಸಿಗಡ್ಡಿ, ಕಕ್ಕೇರಾ, ಸುರಪೂರ, ಹಂಚಿನಾಳ, ಯಳಗುಂದಿ, ನಾರಾಯಣಪೂರ ಹಾಗೂ ಇತರ ಕಡೆಗೆ ಹೋಗಿ ಹುಡುಕಾಡಿದ್ದು ನನ್ನ ಹೆಂಡತಿಯು ಸಿಕ್ಕಿರುವುದಿಲ್ಲಾ. ನನ್ನ ಹೆಂಡತಿಯಾದ ಶಿವಮ್ಮ ಇವಳು ಸಾಧಾರಣ ಮೈಕಟ್ಟು, ಸಾದುಗಪ್ಪು ಬಣ್ಣ, ಉದ್ದನೆಯ ಮೂಗು, ಕಪ್ಪು ಕೂದಲು ಹೊಂದಿದ್ದು, ಸುಮಾರು 4 ಫೀಟ್ 10 ಇಂಚು ಎತ್ತರ ಇದ್ದು, ಹಸಿರು ಬಣ್ಣದ ಸೀರೆ, ಕೆಂಪು ಬಣ್ಣದ ಜಂಪರ ಧರಿಸಿದ್ದು. ಕನ್ನಡ ಭಾಷೆ ಮಾತನಾಡುತ್ತಿದ್ದು, ನಾವು ಇಲ್ಲಿಯವರೆಗೂ ಹುಡುಕಾಡಿದರೂ ನನ್ನ ಹೆಂಡತಿ ಶಿವಮ್ಮ ಇವಳು ಸಿಕ್ಕಿರುವುದಿಲ್ಲ. ನನ್ನ ಹೆಂಡತಿ ಶಿವಮ್ಮಳು ಹತ್ತಿಬಿಡಿಸಲು ಕೃಷ್ಣಾಪೂರಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವಳು ಇಲ್ಲಿಯವರೆಗೂ ಬಂದಿರುವುದಿಲ್ಲಾ ಮತ್ತು ನಾವು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ನನ್ನ ಹೆಂಡತಿಯು ಕಾಣೆಯಾಗಿದ್ದು ಅವಳಿಗೆೆ ಪತ್ತೆ ಮಾಡಿಕೊಡಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:79/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ.: 80/2021 ಕಲಂ: 143, 147, 323, 504, 506, 354 ಸಂಗಡ 149 ಐಪಿಸಿ : ಇಂದು ದಿನಾಂಕ:29.12.2021 ರಂದು 6:00 ಪಿಎಮ್ಕ್ಕೆ ಪಿರ್ಯಾಧಿ ಶ್ರೀಮತಿ ಲಲೀತಾ ಗಂಡ ವೆಂಕಟೇಶ ಚವ್ಹಾಣ ವಯಸ್ಸು:40 ವರ್ಷ ಉದ್ಯೋಗ: ಮನೆಕೆಲಸ ಜಾ:ಹಿಂದೂ ಲಂಬಾಣಿ, ಸಾ:ಜುಮಾಲಪೂರ ದೊಡ್ಡ ತಾಂಡಾ, ತಾ:ಹುಣಸಗಿ ಜಿಲ್ಲೆ:ಯಾದಗಿರಿ ಜಿಲ್ಲೆ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ದೂರು ಅಜರ್ಿಯ ಸಾರಾಂಶವೆನೇಂದರೆ, ನಾನು ನನ್ನ ಗಂಡ ಮಕ್ಕಳೊಂದಿಗೆ ಮನೆಗೆಲಸ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ನನ್ನ ಗಂಡನಿಗೆ ಪೂಲಸಿಂಗ ಅಂತಾ ಒಬ್ಬ ಅಣ್ಣ ಹಾಗೂ ವಾಸುದೇವ ಹಾಗೂ ತಿರುಪತಿ ಅಂತಾ ಇಬ್ಬರು ತಮ್ಮಂದಿರಿದ್ದು, ಎಲ್ಲರದು ಮದುವೆಯಾಗಿದ್ದು, ಎಲ್ಲರು ತಮ್ಮ ತಮ್ಮ ಕುಟುಂಬದೊಂದಿಗೆ ಬೇರೆ ಬೇರೆ ವಾಸ ಇರುತ್ತಾರೆ. ನನ್ನ ಗಂಡನ ಪಾಲಿಗೆ ಜುಮಾಲಪೂರ ಸೀಮಾಂತರದ ಸವರ್ೇ ನಂ:78 ರಲ್ಲಿ ಜಮೀನು ಬಂದಿದ್ದು ಅದರಲ್ಲಿಯೇ ನಾವು ಮನೆ ಕಟ್ಟಿಕೊಂಡು ಇರುತ್ತೇವೆ. ನಮ್ಮ ಈ ಹೊಲಕ್ಕೆ ಹೊಂದಿಯೇ ಪಶ್ಚಿಮಕ್ಕೆ ನನ್ನ ಗಂಡನ ದೊಡ್ಡಪ್ಪನಾದ ನಾರಾಯಣ ರವರ ಜಮೀನು ಇದ್ದು ಅವರು ಕೂಡಾ ತಮ್ಮ ಜಮೀನಿನಲ್ಲಿಯೇ ಮನೆ ಕಟ್ಟಿಕೊಂಡು ಇರುತ್ತಾರೆ.
ಹೀಗಿದ್ದು ನನ್ನ ಗಂಡ ವೆಂಕಟೇಶನ ದೊಡ್ಡಪ್ಪನಾದ ನಾರಾಯಣ ರವರ ಮಕ್ಕಳಾದ ಗೋವಿಂದ ತಂದೆ ನಾರಾಯಣ ಚವ್ಹಾಣ, ಕಾಶಿನಾಥ ತಂದೆ ನಾರಾಯಣ ಚವ್ಹಾಣ, ತುಕಾರಾಮ ತಂದೆ ನಾರಾಯಣ ಚವ್ಹಾಣ ರವರು ಈಗ ಎರಡು ತಿಂಗಳುಗಳ ಹಿಂದೆ ನಮ್ಮ ಮನೆಯ ಮುಂದಿನ ಜಾಗೆಯಲ್ಲಿ ಅವರ ಬೀಗರ ಆಡಿನ ದೊಡ್ಡಿಯನ್ನು ನಮಗೆ ಹೇಳದೆ ಕೇಳದೆ ಹಾಕಿದ್ದು, ನಾನು ಮತ್ತು ನನ್ನ ಗಂಡ ಅವರಿಗೆ ಯಾಕೆ ನಮ್ಮ ಜಾಗೆಯಲ್ಲಿ ಆಡಿನ ದೊಡ್ಡಿ ಹಾಕಿದ್ದಿರಿ ಅಂದಾಗ ಅವರು ಆಯಿತು ಒಂದು ತಿಂಗಳ ಆದ ನಂತರ ನಮ್ಮ ಬೀಗರು ಇಲ್ಲಿಂದ ಹೋಗುತ್ತಾರೆ ಅಂತಾ ಅಂದಿದ್ದು, ನಾವು ಆಗ ಸುಮ್ಮನಾಗಿದ್ದು, ಈಗ ಎರಡು ತಿಂಗಳಾದರೂ ಆಡಿನ ದೊಡ್ಡಿಯನ್ನು ತೆಗೆಯದೇ ಇದ್ದು, ಇದರಿಂದಾಗಿ ನಮ್ಮ ಮನೆಗೆ ಹೋಗಲು ಬರಲು ತೊಂದರೆಯಾಗುತ್ತಿದ್ದು, ಅಲ್ಲದೇ ನಮ್ಮ ಮನೆಗೆ ನಾನು ಮತ್ತು ನಮ್ಮ ಮಕ್ಕಳು ಹೋಗಿ ಬರುವಾಗ ಅವರ ಐದಾರು ನಾಯಿಗಳು ನಮಗೆ ಕಚ್ಚಲಿಕ್ಕೆ ಬರುತ್ತಿದ್ದು, ಅವರಿಗೆ ಇಲ್ಲಿಂದ ನಿಮ್ಮ ಆಡಿನ ದೊಡ್ಡಿ ತೆಗೆಯಿರಿ ಅಂತಾ ಹೇಳುತ್ತಾ ಬಂದರು ತೆಗೆದಿರಲಿಲ್ಲಾ. ನಾವು ಅವರಿಗೆ ಆಡಿನದೊಡ್ಡಿ ನಮ್ಮ ಜಾಗೆಯಿಂದ ತೆಗೆಯಿರಿ ಅಂತಾ ಅಂದಿದ್ದಕ್ಕೆ ನಮ್ಮ ಮೇಲೆ ಸಿಟ್ಟಾಗಿದ್ದು ಇರುತ್ತದೆ.
ಹೀಗಿರುವಾಗ ಮೊನ್ನೆ ದಿನಾಂಕ:26.12.2021 ರಂದು ಮುಂಜಾನೆ 08:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಕಸಗುಡಿಸುತ್ತಿರುವಾಗ ನಾರಾಯಣ ರವರ ನಾಯಿಗಳು ಬೊಗಳುತ್ತಾ ನನ್ನ ಹತ್ತಿರ ಬಂದಿದ್ದು, ಆಗ ಅಲ್ಲಿಯೇ ಇದ್ದ ಗೋವಿಂದ ತಂದೆ ನಾರಾಯಣ ಚವ್ಹಾಣ ಇತನಿಗೆ ನಿಮ್ಮ ನಾಯಿಗಳನ್ನು ಹೊಡೆದುಕೋ ಅಂತಾ ಅಂದಾಗ ಗೋವಿಂದನು ಅಲ್ಲಿಯೇ ಇದ್ದ ತನ್ನ ತಮ್ಮಂದಿರಾದ ಕಾಶಿನಾಥ ತಂದೆ ನಾರಾಯಣ ಚವ್ಹಾಣ, ತುಕಾರಾಮ ತಂದೆ ನಾರಾಯಣ ಚವ್ಹಾಣ ಹಾಗೂ ತನ್ನ ತಾಯಿ ಮೋತಿಬಾಯಿ ಗಂಡ ನಾರಾಯಣ ಚವ್ಹಾಣ ರವರಿಗೆ ಹಾಗೂ ತನ್ನ ಹೆಂಡತಿಯಾದ ರುಕ್ಮಾಬಾಯಿ ಗಂಡ ಗೋವಿಂದ ಚವ್ಹಾಣ ಮತ್ತು ತನ್ನ ತಮ್ಮಂದಿರ ಹೆಂಡತಿಯರಾದ ಲಕ್ಷ್ಮೀಬಾಯಿ ಗಂಡ ಕಾಶಿನಾಥ ಚವ್ಹಾಣ, ಶಿಲ್ಪಾ ಗಂಡ ತುಕಾರಾಮ ಚವ್ಹಾಣ ರವರಿಗೆ ಕರೆದಿದ್ದು ಇವರೆಲ್ಲರೂ ಗುಂಪಾಗಿ ನನ್ನ ಹತ್ತಿರ ನಮ್ಮ ಮನೆಯ ಮುಂದೆ ಬಂದವರೇ ನನಗೆ ಏ ಸೂಳೀ, ಬೋಸಡಿ ಲಲ್ಲಿ ನಿನ್ನ ಹಾಗೂ ನಿನ್ನ ಗಂಡನ ಸೊಕ್ಕು ಬಹಳ ಆಗಿದೆ, ಸುಳ್ಳು ಸುಳ್ಳೆ ನಮ್ಮ ನಾಯಿಗಳು ಕಚ್ಚಲಿಕ್ಕೆ ಬಂದಿವೆ ಅಂತಾ ಅನ್ನುತ್ತಿರಿ ನಾವು ನಿಮ್ಮ ಜಾಗೆಯಲ್ಲಿ ಹಾಕಿದ ಆಡಿನ ದೊಡ್ಡಿಯನ್ನು ಕಿತ್ತುವದಿಲ್ಲಾ ನೀನು ಮತ್ತು ನಿನ್ನ ಗಂಡ ಏನು ನಮ್ಮ ಸೆಂಟಾ ಹರಿದುಕೊಳ್ಳಲು ಆಗುವುದಿಲ್ಲಾ ಅಂತಾ ಅಂದವರೆ ಅವರಲ್ಲಿಯ ಗೋವಿಂದ ತಂದೆ ನಾರಾಯಣ ಚವ್ಹಾಣ ಹಾಗೂ ತುಕಾರಾಮ ತಂದೆ ನಾರಾಯಣ ಚವ್ಹಾಣ ಇವರಿಬ್ಬರೂ ನನ್ನ ಹತ್ತಿರ ಬಂದವರೆ ನನ್ನ ಕೈ ಹಿಡಿದು ಜಗ್ಗಾಡಿದ್ದು ಕಾಶಿನಾಥ ತಂದೆ ನಾರಾಯಣ ಚವ್ಹಾಣ ಇತನು ನನ್ನ ತಲೆಯ ಮೇಲೆ ಕೂದಲನ್ನು ಹಿಡಿದು ಜಗ್ಗಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು, ಮೋತಿಬಾಯಿ ಗಂಡ ನಾರಾಯಣ ಚವ್ಹಾಣ, ರುಕ್ಮಾಬಾಯಿ ಗಂಡ ಗೋವಿಂದ ಚವ್ಹಾಣ ಇವರುಗಳು ನನ್ನ ತೆಕ್ಕಿಗೆ ಬಿದ್ದು ನೆಲಕ್ಕೆ ಕೆಡವಿದ್ದು ಆಗ ನಾನು ನೆಲದ ಮೇಲೆ ಬಿದ್ದಾಗ ಲಕ್ಷ್ಮೀಬಾಯಿ ಗಂಡ ಕಾಶಿನಾಥ ಇವಳು ನನ್ನ ಬೆನ್ನಿನ ಮೇಲೆ, ಎದೆಯ ಮೇಲೆ, ಹೊಟ್ಟೆಯ ಮೇಲೆ ಕಾಲಿನಿಂದ ಒದ್ದು ತುಳಿದು ಗುಪ್ತಾಗಾಯಪಡಿಸಿದ್ದು, ಆಗ ನಾನು ಎದ್ದು ಕುಳಿತಾಗ ಶಿಲ್ಪಾ ಗಂಡ ತುಕಾರಾಮ ಚವ್ಹಾಣ ಇವಳು ನನ್ನ ಎಡ ಕಪಾಳದ ಮೇಲೆ ಕೈಯಿಂದ ಜೋರಾಗಿ ಹೊಡೆದಿದ್ದು ಆಗ ನಾನು ನನ್ನನ್ನು ಉಳಿಸಿರಪ್ಪೋ ಅಂತಾ ಚೀರಾಡಲು ಅಲ್ಲಿಯೇ ಇದ್ದ ನನ್ನ ಗಂಡ ವೆಂಕಟೇಶ ತಂದೆ ಖೇಮಣ್ಣ ಚವ್ಹಾಣ, ಮಾವನಾದ ಪೂಲಸಿಂಗ ತಂದೆ ಖೇಮಣ್ಣ ಚವ್ಹಾಣ ಮತ್ತು ಅಲ್ಲಿಂದಲೆ ಹೋಗುತ್ತಿದ್ದ ನಮ್ಮ ತಾಂಡಾದ ಚಂದಪ್ಪ ತಂದೆ ಶಂಕ್ರಪ್ಪ ಚವ್ಹಾಣ, ಹಣಮೇಶ ತಂದೆ ಶಂಕ್ರಪ್ಪ ಚವ್ಹಾಣ ಹಾಗೂ ಜುಮಾಲಪೂರ ಸಣ್ಣ ತಾಂಡಾದ ಗೋವಿಂದ ತಂದೆ ಮೇಲಪ್ಪ ಚವ್ಹಾಣ ಇವರುಗಳು ಬಂದು ನೋಡಿ ಜಗಳ ಬಿಡಿಸಿದ್ದು, ಹೋಗುವಾಗ ಅವರೆಲ್ಲರೂ ನನಗೆ ಸೂಳೇ ಲಲ್ಲಿ ಬೋಸಡಿ ಇವತ್ತು ನಮ್ಮ ಕೈಯಲ್ಲಿ ಉಳಿದಿದಿ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ಈ ಘಟನೆಯಲ್ಲಿ ನನಗೆ ಅಷ್ಟೇನು ಪೆಟ್ಟಾಗಿರುವುದಿಲ್ಲಾ. ನಾನು ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗುವುದಿಲ್ಲಾ. ನಾನು ನಮ್ಮ ಸಮಾಜದ ಹಿರಿಯರೊಂದಿಗೆ ಇಂದಿನವರೆಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ನನಗೆ ಅವಾಚ್ಯ ಶಬ್ದಗಳಿಂದ ಬೈದು ಮಾನಭಂಗ ಪಡಿಸಲು ಪ್ರಯತ್ನಿಸಿ ಹೊಡೆಬಡೆಮಾಡಿ ಗುಪ್ತಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿ ಏಳು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ ಅಂತಾ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.80/2021 ಕಲಂ: 143, 147, 323, 504, 506, 354 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 191/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕಃ 29/12/2021 ರಂದು 1-30 ಪಿ.ಎಮ್ ಕ್ಕೆ ಶ್ರೀಮತಿ ರೇಣುಕಾ ಗಂಡ ವೇದರಾಜ ಮರ್ಸ ಸಾಃ ಸಗರ(ಬಿ) ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕ: 28/12/2021 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ನನ್ನ ಗಂಡನಾದ ವೇದರಾಜ @ ಸಾಹೇಬಗೌಡ ತಂದೆ ಶಿವಶರಣಪ್ಪ ಮರ್ಸ ವಯಃ 34 ವರ್ಷ ಇತನು ನೀಲವಂಜಿ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದನು. ನಂತರ ಇಂದು ದಿನಾಂಕಃ 29/12/2021 ರಂದು ಮದ್ಯಾಹ್ನ 11-45 ಗಂಟೆಯ ಸುಮಾರಿಗೆ ನಮ್ಮೂರಿನ ಅಣ್ಣಾರಾಯ ಕೂಡ್ಲೂರ ಎಂಬುವವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಿನ್ನ ಗಂಡನಿಗೆ ರಾತ್ರಿ ಸುರಪೂರ ಬೈಪಾಸ್ ರಸ್ತೆಯ ಮೇಲೆ ರುಕ್ಮಾಪೂರ ಕ್ರಾಸ್ ಹತ್ತಿರ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ಹೋಗಿದ್ದರಿಂದ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿದ್ದರಿಂದ ಆತನ ಶವವನ್ನು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಇಟ್ಟಿದ್ದನ್ನು ನೋಡಿರುತ್ತೇನೆ ಅಂತ ತಿಳಿಸಿದನು. ಆದ್ದರಿಂದ ಗಾಬರಿಯಾಗಿ ನಾನು ಮತ್ತು ನನ್ನ ಭಾವನಾದ ನಾಗರಾಜ ಇಬ್ಬರೂ ಸುರಪೂರ ಸಕರ್ಾರಿ ಆಸ್ಪತ್ರೆಗೆ ಬಂದು ಶವಾಗಾರ ಕೋಣೆಯಲ್ಲಿದ್ದ ನನ್ನ ಗಂಡನ ಶವವನ್ನು ನೋಡಿದ್ದು, ನನ್ನ ಗಂಡನ ತಲೆಯ ಬಲಭಾಗದಲ್ಲಿ ಭಾರಿರಕ್ತಗಾಯವಾಗಿದ್ದು, ಎಡಗಣ್ಣಿನ ಪಕ್ಕ, ಎಡಮುಂಡಿಗೆ, ಎಡಪಕ್ಕಡಿಯಿಂದ ಹೊಟ್ಟೆ, ಟೊಂಕದ ವರೆಗೆ, ಎಡಗೈ ಹಸ್ತದ ಮಣಿಕಟ್ಟಿಗೆ ಹಾಗು ಎಡತೊಡೆಯ ಮೇಲೆ ತರಚಿದ ಗಾಯಗಳಾಗಿರುತ್ತವೆ. ನಂತರ ಈ ಬಗ್ಗೆ ಶ್ರೀ ಸುರೇಶ ಎ.ಎಸ್.ಐ ಸುರಪೂರ ಪೊಲೀಸ್ ಠಾಣೆ ರವರು ನನಗೆ ತಿಳಿಸಿದ್ದೆನೆಂದರೆ, ನಿನ್ನೆ ರಾತ್ರಿ ನಾನು ಮತ್ತು ವಿಶ್ವನಾಥ ಎ.ಹೆಚ್.ಸಿ 21 ಇಬ್ಬರೂ ಸುರಪೂರ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತ ಹಸನಾಪೂರ ವೆಂಕಟಪ್ಪನಾಯಕ ಸರ್ಕಲ್ ದಿಂದ ಸುರಪೂರ ಬೈಪಾಸ್ ರಸ್ತೆಯ ಮೇಲೆ ಕುಂಬಾರಪೇಟ ಕಡೆಗೆೆ ಹೊರಟಿದ್ದಾಗ ಇಂದು 2-50 ಎ.ಎಮ್ ಸುಮಾರಿಗೆ ರುಕ್ಮಾಪೂರ ಕ್ರಾಸ್ ಹತ್ತಿರ ನಿನ್ನ ಗಂಡನಿಗೆ ಭಾರಿಗಾಯಗಳಾಗಿ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನರಳಾಡುತ್ತಿದ್ದುದ್ದನ್ನು ನೋಡಿ ನಾವು ಆತನಿಗೆ ಸ್ಥಳದಿಂದ ರಸ್ತೆಯ ಪಕ್ಕ ಮಲಗಿಸಿ ಅಂಬ್ಯೂಲೇನ್ಸ್ ವಾಹನಕ್ಕೆ ಫೋನ್ ಮಾಡಿದ್ದು, ಅಂಬ್ಯೂಲೇನ್ಸ್ ಬರುವಷ್ಟರಲ್ಲಿ 3-00 ಎ.ಎಮ್ ಸುಮಾರಿಗೆ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ನಿನ್ನ ಗಂಡನು ರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇಂದು ದಿನಾಂಕಃ 29/12/2021 ರಂದು 2-00 ಎ.ಎಮ್ ದಿಂದ 2-30 ಎ.ಎಮ್ ಮದ್ಯದಲ್ಲಿ ಯಾವುದೋ ಒಂದು ವಾಹನದ ಚಾಲಕ ತನ್ನ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಹೊಡೆದು ಓಡಿ ಹೋಗಿರುವದರಿಂದ ಭಾರಿಗಾಯಗಳಾಗಿ ರಕ್ತಸ್ರಾವ ಆಗಿ ಮೃತಪಟ್ಟಿದ್ದು, ಆತನ ಶವವನ್ನು ನಾವು ಅಂಬ್ಯೂಲೇನ್ಸ್ ವಾಹನದಲ್ಲಿ ಹಾಕಿಕೊಂಡು ಶವಾಗಾರ ಕೋಣೆಗೆ ತಂದು ಹಾಕಿರುತ್ತೇವೆ ಅಂತ ತಿಳಿಸಿರುತ್ತಾನೆ. ಕಾರಣ ನನ್ನ ಗಂಡನಿಗೆ ಅಪಘಾತ ಪಡಿಸಿ ಓಡಿ ಹೋಗಿರುವ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 191/2021 ಕಲಂ. 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 115/2021 ಕಲಂ: 279, 338 ಐಪಿಸಿ : ಇಂದು ದಿನಾಂಕ: 29/12/2021 ರಂದು 07-15 ಪಿ.ಎಮ್ ಸುಮಾರಿಗೆ ಶ್ರೀ ಶರಣಪ್ಪ ತಂದೆ ನಾಗಪ್ಪ ಮಡ್ನಾಳ ವಯಾ: 58 ಉ: ಒಕ್ಕಲುತನ ಜಾ: ಲಿಂಗಾಯತ ಸಾ: ಗೌಡಗೇರಾ ತಾ: ಸುರಪೂರ ಇವರು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ: 27/12/2021 ರಂದು ನಮ್ಮ ತಮ್ಮನಾದ ದೇವಿಂದ್ರಪ್ಪ ತಂದೆ ನಾಗಪ್ಪ ಮಡ್ನಾಳ ವಯಾ:48 ವರ್ಷ ಉ: ಒಕ್ಕಲುತನ ಜಾ:ಲಿಂಗಾಯತ ಸಾ: ಗೌಡಗೇರಾ ತಾ: ಸುರಪೂರ ಈತನು ಶಹಾಪೂರಕ್ಕೆ ಹೋಗಿದ್ದನು. ನಂತರ ದಿನಾಂಕ: 27/12/2021 ರಂದು 7-10 ಪಿ.ಎಮ್ ಸುಮಾರಿಗೆ ನಮ್ಮೂರಿನ ದೇವಿಂದ್ರ ಕುಮಾರ ಹಾಲಬಾವಿ ಇವರು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೇನಂದರೆ, ನಾನು ಮತ್ತು ರಾಮಣ್ಣ ಗುರಿಕಾರ ಇಬ್ಬರು ನಮ್ಮ ಮೋಟಾರ ಸೈಕಲ್ ಮೇಲೆ ಶಹಾಪೂರ ದಿಂದ ಗೌಡಗೇರಾ ಬರುವ ಕುರಿತು ಶಹಾಪೂರ ಸಿಂದಗಿ ಮೇನ ರೋಡಿನ ಕರಕಳ್ಳಿ ಕ್ರಾಸ್ ಮತ್ತು ರಬ್ಬನಳ್ಳಿ ಕ್ರಾಸ್ ಹತ್ತಿರ ಮಧ್ಯದಲ್ಲಿ ಬರುತ್ತಿದ್ದಾಗ ನಮ್ಮ ಸ್ವಲ್ಪ ಮುಂದೆ ನಿಮ್ಮ ತಮ್ಮನಾದ ದೇವಿಂದ್ರಪ್ಪ ತಂದೆ ನಾಗಪ್ಪ ಮಡ್ನಾಳ ಇವರು ನಮ್ಮ ಮುಂದೆ ತಮ್ಮ ಮೋಟಾರ್ ಸೈಕಲ್ ನಂ: ಎಪಿ-22-ಎಪಿ-6340 ನೇದ್ದರ ಮೇಲೆ ಶಹಾಪುರ ದಿಂದ ಗೌಡಗೇರಾಕ್ಕೆ ಹೋಗುತ್ತಿದ್ದನು. ಆಗ ಅಂದಾಜು ಸಮಯ 7-00 ಪಿ.ಎಮ್ ಆಗಿದ್ದು ನಾವು ನೊಡುತ್ತಿದ್ದಂತೆ ನಮ್ಮ ಸ್ವಲ್ಪ ಮುಂದೆ ರೋಡಿನಲ್ಲಿ ಎದರುಗಡೆಯಿಂದ ಒಂದು ಮೋಟಾರ್ ಸೈಕಲ್ ನೇದ್ದರ ಚಾಲಕನು ಅತೀವೇಗ ಮತ್ತು ಅಕ್ಷತನದಿಂದ ನಡೆಸಿಕೊಂಡು ಬಂದು ರೋಡಿನಲ್ಲಿ ತನ್ನ ಸೈಡಿನಲ್ಲಿ ಹೊರಟಿದ್ದ ನಿಮ್ಮ ತಮ್ಮನ ಮೋಟರ್ ಸೈಕಲ್ ಕ್ಕೆ ಡಿಕ್ಕಿ ಪಡೆಸಿದ ಪರಿಣಾಮವಾಗಿ ದೇವಿಂದ್ರಪ್ಪ ಈತನು ಮೋಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿದ್ದು, ನಾನು ಮತ್ತು ರಾಮಣ್ಣ ಗುರಿಕಾರ ನೋಡಲಾಗಿ ದೇವಿಂದ್ರಪ್ಪನ ತಲೆಗೆ ಭಾರಿ ಗುಪ್ತ ಪೆಟ್ಟಾಗಿದ್ದು, ಬಲಭಾಗದ ಹಣೆಗೆ ಭಾರಿ ರಕ್ತಗಾಯವಾಗಿ, ಬಲಗಣ್ಣಿನ ಹತ್ತಿರ ಪೆಟ್ಟಾಗಿರುತ್ತದೆ. ಮತ್ತು ಎಡಗಾಲಿನ ಹೆಬ್ಬೆರಿಳಿಗೆ ರಕ್ತಗಾಯವಾಗಿರುತ್ತದೆ. ಅಪಘಾತ ಮಾಡಿದ ಮೋಟಾರ್ ಸೈಕಲ್ ನಂಬರ ನೋಡಲಾಗಿ ಅದರ ನಂ:ಕೆಎ-33-ಇಎ-2170 ಅಂತಾ ಇದ್ದು, ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಪರಶುರಾಮ ತಂದೆ ಹಣಮಂತ ನಾಯ್ಕಲ್ ವಯಾ:31 ಜಾ: ಕಬ್ಬಲಿಗ ಸಾ: ಕರಕಳ್ಳಿ ಅಂತಾ ತಿಳಿಸಿರುತ್ತಾನೆ. ನಾವು ನಿಮ್ಮ ತಮ್ಮ ದೇವಿಂದ್ರಪ್ಪ ಮಡ್ನಾಳ ಇವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ತಮ್ಮನಾದ ಗುರುಲಿಂಗಪ್ಪ ತಂದೆ ಭೀಮರಾಯ ಮಡ್ನಾಳ ಮತು ಸಿದ್ದಣ್ಣ ಸಾಹು ಇವರೊಂದಿಗೆ ಶಹಾಪುರಕ್ಕೆ ಬಂದು ನೋಡಲಾಗಿ ನಮ್ಮ ತಮ್ಮನಿಗೆ ತಲೆಗೆ ಭಾರಿ ಗುಪ್ತ ಪೆಟ್ಟಾಗಿದ್ದು, ಬಲಭಾಗದ ಹಣೆಗೆ ಭಾರಿ ರಕ್ತಗಾಯವಾಗಿ, ಬಲಗಣ್ಣಿನ ಹತ್ತಿರ ಪೆಟ್ಟಾಗಿತ್ತು, ಎಡಗಾಲಿನ ಹೆಬ್ಬೆರಿಳಿಗೆ ರಕ್ತಗಾಯವಾಗಿತ್ತು. ನಂತರ ನಮ್ಮ ತಮ್ಮನಿಗೆ ವೈದ್ಯಾಧಿಕಾರಿಗಳ ಸಲಹೇ ಮೇರೆಗೆ ಕಲಬುರಗಿಯ ಯುನೈಟೈಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕೆ ಸೇರಿಕೆ ಮಾಡಿರುತ್ತೇವೆ. ನಮ್ಮ ತಮ್ಮನಿಗೆ ಉಪಚಾರಕ್ಕೆ ಸೇರಿಕೆ ಮಾಡಿ ತಡವಾಗಿ ಇಂದು ದಿನಾಂಕ:29/12/2021 ರಂದು ಪೊಲೀಸ್ ಠಾಣೆೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 115/2021 ಕಲಂ: 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ. 199/2021 ಕಲಂ: 279, 338 ಐ.ಪಿ.ಸಿ : ದಿನಾಂಕ 27.12.2021 ರಂದು ಸಾಯಮಕಾಲ 7.00 ಕ್ಕೆ ಪಿರ್ಯಾಧಿಯ ತಮ್ಮನು ಕೋಟಗೇರಾಕ್ಕೆ ಹೋಗುವ ಸಲುವಾಗಿ ಕಮಾಂಡರ್ ಜೀಪ್ : ನಂ: ಂಕ-22 ಗ-4523 ನೇದ್ದರ ನೇದ್ದರಲ್ಲಿ ಕುಳಿತು ಹೋಗುತ್ತಿರುವಾಗ ಯಾದಗಿರಿ-ಕೋಟಗೆರಾ ಗ್ರಾಮಕ್ಕೆ ಹೋಗುವ ರಸ್ತೆಯ ಮೇಲೆ ಕೋಟಗೇರಾ ಗ್ರಾಮದ ಬಸವಣ್ಣ ದೇವರ ಗುಡಿಯ ಹತ್ತಿರ ಸದರಿ ಝೀಪ್ ಚಾಲಕನು ಅತೀವೇಗ ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗಿ ಒಮ್ಮಿಂದೊಮ್ಮಲೇ ಬ್ರೇಕ್ ಮಾಡಿದ್ದರಿಂದ ಜೀಪಿನಲ್ಲಿ ಕುಳಿತ್ತಿದ್ದ ಪಿರ್ಯಾಧಿಯ ತಮ್ಮನು ಜೀಪಿನಿಂದ ಪುಟಿದು ಕೆಳಗೆ ಬಿದ್ದು ಭಾರಿ ಸ್ವರೂಪ್ ಗಾಯಗಾಳಗಿದ್ದು ಉಪಚಾರಕ್ಕಾಗಿ ಸೇರಿಕೆಯಾಗಿದ್ದು ಇರುತ್ತದೆ. ಅಂತ ಪಿರ್ಯಾಧಿ ವಗೈರೆ ಸಾರಂಶವಿರುತ್ತದೆ.

ಇತ್ತೀಚಿನ ನವೀಕರಣ​ : 30-12-2021 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080