ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 30-12-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 143/2022 ಕಲಂ: 379 ಐಪಿಸಿ: ಇಂದು ದಿನಾಂಕ:29/12/2022 ರಂದು 3-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇದ್ದು, ಸರಕಾರಿ ತಫರ್ೆಯಿಂದ ಸಲ್ಲಿಸುವ ಇಂದು ದಿನಾಂಕ:29/12/2022 ರಂದು ಮದ್ಯಾಹ್ನ ಸಮಯದಲ್ಲಿ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಗೋಕುಲ ಹುಸೇನ ಹೆಚ್.ಸಿ 110, ಮೋನಪ್ಪ ಹೆಚ್.ಸಿ 156 ಮತ್ತು ತಾಯಪ್ಪ ಹೆಚ್.ಸಿ 79 ಜೀಪ ಚಾಲಕ ಇವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದರಲ್ಲಿ ಠಾಣೆಯಿಂದ ಪೆಟ್ರೋಲಿಂಗ ಕುರಿತು ಹೊರಟು ಮದ್ಯಾಹ್ನ 1-45 ಗಂಟೆ ಸುಮಾರಿಗೆ ಕದರಾಪೂರ ಗ್ರಾಮದ ಹತ್ತಿರ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಯಾರೋ ಕೆಲವರು ಗೋನಾಲ ಗ್ರಾಮದ ಕೃಷ್ಣಾ ನದಿ ದಡದಿಂದ ಟಿಪ್ಪರನಲ್ಲಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಬೆಂಡೆಬೆಂಬಳ್ಳಿ ಗ್ರಾಮದ ಮುಖಾಂತರ ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ನಾನು ನಮ್ಮ ಸಿಬ್ಬಂದಿಯವರನ್ನು ಕರೆದುಕೊಂಡು ಹೊರಟು 2 ಪಿಎಮ್ ಸುಮಾರಿಗೆ ಹತ್ತಿಗೂಡುರು-ಸಂಗಮ ಮೇನ ರೋಡ ಬೆಂಡೆಬೆಂಬಳ್ಳಿ ಗ್ರಾಮದ ಸಮೀಪ ಹೋಗುತ್ತಿದ್ದಾಗ ಬೆಂಡೆಬೆಂಬಳ್ಳಿ ಗ್ರಾಮದಲ್ಲಿ ಒಂದು ಟಿಪ್ಪರನಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾವು ಟಿಪ್ಪರ ನಿಲ್ಲಿಸಲು ಹೋದಾಗ ಟಿಪ್ಪರ ಚಾಲಕನು ಟಿಪ್ಪರನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ಸದರಿ ಟಿಪ್ಪರ ಚಾಲಕನಿಗೆ ಮತ್ತೆ ನೋಡಿದಲ್ಲಿ ಗುರುತಿಸುತ್ತೇವೆ. ಸದರಿ ಟಿಪ್ಪರನ್ನು ನೋಡಲಾಗಿ ಟಿಪ್ಪರ ನೊಂದಣಿ ಸಂಖ್ಯೆ ಕೆಎ 32 ಎಎ 2789 ಇದ್ದು, ಟಿಪ್ಪರನಲ್ಲಿ ಮರಳು ತುಂಬಿದ್ದು ಇರುತ್ತದೆ. ಟಿಪ್ಪರ ಅ:ಕಿ:5,00,000/- ರೂ. ಮತ್ತು ಟಿಪ್ಪರನಲ್ಲಿಯ ಮರಳಿನ ಅ:ಕಿ: 10,000/- ರೂ. ಆಗಬಹುದು. ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಅಕ್ರಮವಾಗಿ ಮತ್ತು ಕಳ್ಳತನದಿಂದ ಗೋನಾಲ ಗ್ರಾಮದ ಕೃಷ್ಣಾ ನದಿಯಿಂದ ಮರಳು ಸಾಗಾಣಿಕೆ ಮಾಡುತ್ತಿದ್ದು, ನಾವು ದಾಳಿ ಮಾಡಿದ್ದು ನೋಡಿ ಟಿಪ್ಪರ ಬಿಟ್ಟು ಓಡಿ ಹೋಗಿರುತ್ತಾರೆ. ಸದರಿ ಟಿಪ್ಪರನ್ನು ಬೇರೆ ಚಾಲಕನ ಸಹಾಯದಿಂದ ಚಲಾಯಿಸಿಕೊಂಡು 3-30 ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕಾನೂನು ಕ್ರಮಕ್ಕಾಗಿ ಈ ದೂರನ್ನು ಸಲ್ಲಿಸಲಾಗಿದೆ. ಸದರಿ ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 143/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 37/2022 ಕಲಂ: 174 ಸಿ.ಆರ್.ಪಿ.ಸಿ: ಇಂದು ದಿನಾಂಕ. 29/12/2022 ರಂದು 06-15 ಎ.ಎಂಕ್ಕೆ ಪಿರ್ಯಾದಿ ಬಾಷುಮಿಯಾ ತಂದೆ ಕಾಸಿಂಸಾಬ ಸೈಯದ್  ವಯಸ್ಸು|| 36 ಜಾ|| ಮುಸ್ಲಿಂ ಉ|| ಎಸ್ಡಿಎ ಸಾ|| ಲಕ್ಷ್ಮೀಪುರ (ಅರಕೇರಾ) ತಾ|| ಸುರಪೂರ ರವರ ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿ ನೀಡಿದ್ದು, ಅಜರ್ಿ ಸಾರಾಂಶವೆನೆಂದರೆ, ನನ್ನ ತಮ್ಮನಾದ ಅಬ್ದುಲ್ ತಂದೆ ಕಾಸಿಂಸಾಬ ಸೈಯದ್ ವ|| 32 ವರ್ಷ ಉ|| ಚಾಲಕ ಸಾ:ಲಕ್ಷ್ಮೀಪುರ (ಅರಕೇರಾ)  ಇತನು ಸುಮಾರು 5 ವರ್ಷಗಳ ಹಿಂದೆ ದೇವತ್ಕಲ್ ಗ್ರಾಮದ ಅಯೇಷಾ ಎಂಬುವವಳೊಂದಿಗೆ ಮದುವೆ ಮಾಡಿದ್ದು ಕಳೆದ ಒಂದು ತಿಂಗಳಿಂದ  ತನ್ನ ಹೆಂಡತಿಯೊಂದಿಗೆ ದೇವತ್ಕಲ್  ಗ್ರಾಮಕ್ಕೆ ಹೋಗಿ ಅಲ್ಲಿಯೇ ಖಾಸಗಿಯಾಗಿ ಕಾರು ಚಾಲಕನಾಗಿ ಮತ್ತು ಕೂಲಿ ನಾಲಿ ಮಾಡಿಕೊಂಡು ವಾಸವಾಗಿರುತ್ತಾನೆ. ಅವರಿಗೆ ಅಪ್ಸಾ ಅಂತಾ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ನನ್ನ ತಮ್ಮನು ಕಳೆದ ಎರಡು ವರ್ಷಗಳಿಂದ ವಿಪರೀತ ಮದ್ಯಪಾನ ಮಾಡುವ ಚಟಕ್ಕೆ ದಾಸನಾಗಿದ್ದು ಕುಡಿತದ ಅಮಲಿನಲ್ಲಿ ಕೆಲಸಕ್ಕೆ ಹೋಗದೇ ಹಾಗೂ ಮನೆಯಲ್ಲಿ ಊಟ ಸಹಾ ಸರಿಯಾಗಿ ಮಾಡದೇ ದೈಹಿಕವಾಗಿ ನಿಶಕ್ತನಾಗಿದ್ದನು. ಹಲವಾರು ಬಾರಿ ಕುಡಿದ ಅಮಲಿನಲ್ಲಿ ಸಾಯುತ್ತೆನೆ ಎಂದು ಉರುಳು ಹಾಕಿಕೊಳ್ಳಲು ಪ್ರಯತ್ನಿಸಿದಾಗ ಮನೆಯಲ್ಲಿ ಬಿಡಿಸಿರುತ್ತೇವೆ.ಆತನಿಗೆ ಕುಡಿತದ ಚಟ ಬಿಡಿಸಬೇಕೆಂದು ಹಲವಾರು ಕಡೆ ತೋರಿಸಿದರೂ ಮದ್ಯಪಾನ ಮಾಡುವುದನ್ನು ಬಿಟ್ಟಿರಲಿಲ್ಲ.
  ಹಿಗಿದ್ದು ನಿನ್ನೆ ದಿನಾಂಕ:28/12/2022 ರಂದು ರಾತ್ರಿ 8:30 ಗಂಟೆಗೆ ನನ್ನ ತಮ್ಮನ ಹೆಂಡತಿಯಾದ  ಅಯೇಷಾ ಇವಳು ನನಗೆ ಪೋನ್ ಮಾಡಿ ಹೇಳಿದ್ದೆನೆಂದರೆ ನನ್ನ ಗಂಡನಾದ ಅಬ್ದುಲ್ ಇತನು ನಮ್ಮ ಸಂಭಂದಿಯಾದ ರಸೂಲ್ ಬೀ ಗಂಡ ಚಿನ್ನುಸಾಬ ಇವರ ಮನೆಯಲ್ಲಿ ್ಲ ಟೀನ್ ಶೇಡ್ ಕಬ್ಬಿಣದ ಪೈಪ್ ಗೆ ನೀಲಿ ಬಣ್ಣದ ವೇಲಿನಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ  ತಿಳಿಸಿದಳು. ಆಗ ಗಾಬರಿಯಾಗಿ ನಾನು ಮತ್ತು ನನ್ನ ಅಕ್ಕಳಾದ ನಜ್ಮಾಬೇಗಂ  ಇಬ್ಬರೂ ಲಕ್ಷ್ಮೀಪುರ ಗ್ರಾಮದಿಂದ ದೇವತ್ಕಲ್ ಗ್ರಾಮಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು ನನ್ನ ತಮ್ಮನು ನನ್ನ ತಮ್ಮನು ದೇವತ್ಕಲ್ ಗ್ರಾಮದ ರಸೂಲ್ ಬೀ ಇವರ ಮನೆಯಲ್ಲಿ ಉರುಳು ಹಾಕಿಕೊಂಡು ಮೃತಪಟ್ಟಿದ್ದನು.
        ನನ್ನ ತಮ್ಮನು ಸುಮಾರು ಎರಡು ವರ್ಷಗಳಿಂದ ಕುಡಿತದ ಚಟಕ್ಕೆ ದಾಸನಾಗಿ ಆರೋಗ್ಯ ಹಾಳು ಮಾಡಿಕೊಂಡು  ಜೀವನದಲ್ಲಿ ಜಿಗುಪ್ಸೆ ಹೊಂದಿ ನಿನ್ನೆ ದಿನಾಂಕ 28/12/2022 ರಂದು 8 ಪಿ.ಎಮ್ ಸುಮಾರಿಗೆ  ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದು ಆತನ ಸಾವಿನಲ್ಲಿ ನಮಗೆ ಯಾರ ಮೇಲೆ ಯಾವುದೇ ಸಂಶಯ,ದೂರು ಇರುವುದಿಲ್ಲ ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು  ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.37/2022 ಕಲಂ.174 ಸಿಅರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ: 78(3) ಕೆ.ಪಿ ಆಕ್ಟ್: ಇಂದು ದಿನಾಂಕ:29.122022 ರಂದು 4:45 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಶ್ರೀಶೈಲ್ ಅಂಬಾಟಿ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ಇಂದು ದಿನಾಂಕ:29.12.2022 ರಂದು 3:00 ಪಿ.ಎಮ್.ಕ್ಕೆ ನಾನು ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣೆಯ ಗುಪ್ತ ಮಾಹಿತಿ ಕರ್ತವ್ಯ ನಿರ್ವಹಿಸುವ ಪ್ರಭುಗೌಡ ಹೆಚ್.ಸಿ-120 ರವರು ನನಗೆ ತಿಳಿಸಿದ್ದು ಏನೆಂದರೆ ಅಂಬಾನಗರ ಕಕ್ಕೇರಾದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮುಖಾಂತರ ರವಾನಿಸಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 4:30 ಪಿ.ಎಮ್ ಕ್ಕೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:84/2022 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಮುತ್ತಣ್ಣ ತಂದೆ ಮಾನಯ್ಯ ಕುರಿ ವ:20 ವರ್ಷ ಉ:ಚಾಲಕ ಜಾ:ಹಿಂದೂ ಕುರುಬರ ಸಾ:ಅಂಬಾನಗರ ತಾ:ಸುರಪೂರ ಜಿ:ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1)    ನಗದು ಹಣ=960/- ರೂ
2)    ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರ

ಇತ್ತೀಚಿನ ನವೀಕರಣ​ : 30-12-2022 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080