ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-05-2022
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 32/2022 ಕಲಂ. 302 ಐಪಿಸಿ: ಇಂದು ದಿನಾಂಕ: 30/05/2022 ರಂದು 4 ಪಿ.ಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಾನು ತಮ್ಮಲ್ಲಿ ಕೇಳಿಕೊಳ್ಳುವುದೆನೆಂದರೆ ನನ್ನ ಅಣ್ಣನಾದ ಸಚಿನ್ ಅವರು ನಮ್ಮೂರ ಬಸ್ ನಿಲ್ದಾಣದ ಹತ್ತಿರ ಪಂಚರ ಗ್ಯಾರೇಜ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದನು ನನ್ನ ಅಣ್ಣನಿಗೆ ಮದ್ಯಸೇವನೆ ಚಟವಿತ್ತು ನಿನ್ನೆ ದಿನಾಂಕ: 29/05/2022 ರಂದು ಮದ್ಯಾಹ್ನ 03 ಗಂಟೆಗೆ ಮನೆಯಿಂದ ಅಂಗಡಿಗೆ ಹೋಗುತ್ತೆನೆಂದು ನಮ್ಮ ತಾಯಿಗೆ ತಿಳಿಸಿ ಹೋಗಿದ್ದು ವಾಪಾಸ ಮನೆಗೆ ಬರಲಿಲ್ಲಾ ಈ ದಿನ ಬೆಳಿಗ್ಗೆ ಸುಮಾರು 11 ಗಂಟೆಯ ಸಮಯದಲ್ಲಿ ನಾನು ಕೆಲಸ ಮಾಡುತ್ತಿದ್ದ ಗ್ಯಾರೇಜನಲ್ಲಿದ್ದಾಗ ನಮ್ಮ ಅಣ್ಣ ಸಚಿನನು ತನ್ನ ಗ್ಯಾರೇಜನಲ್ಲಿದ್ದನು ಕೆಲಸದ ನಿಮಿತ್ಯ ನಾನು ಶಹಾಪೂರಕ್ಕೆ 2 ಗಂಟೆಗೆ ಹೋಗಿದ್ದು ನಾನು ಶಹಾಪೂರ ತಲುಪುತ್ತಿದ್ದಂತೆ ನಮ್ಮ ಗ್ಯಾರೇಜ ಮಾಲಿಕರಾದ ನಾಗರಾಜ ಇವರು ಮನೆಗೆ ಫೋನ್ ಮಾಡಿ ನಿಮ್ಮ ಅಣ್ಣ ಸಚಿನನು ಯಾರೋ ವ್ಯಕ್ತಿಗಳು ಸಾಹು ಶಾಲೆ ಪಕ್ಕದ ಹೊಲದಲ್ಲಿ ಕೊಲೆ ಮಾಡಿರುತ್ತಾರೆ ಅಂತಾ ತಿಳಿಸಿದನು ನಾನು ಬಂದು ನೋಡಲಾಗಿ ನಮ್ಮ ಅಣ್ಣನ ಶವವು ಪಾದ್ರಿರವರ ಹೊಲದಲ್ಲಿ ಬಿದ್ದಿದ್ದು ನನ್ನ ಅಣ್ಣನ ಕುತ್ತಿಗೆಗೆ ಯಾರೋ ವ್ಯಕ್ತಿಗಳು ಯಾವುದೋ ದುರುದ್ದೇಶ ದಿಂದ ಕುತ್ತಿಗಿಗೆ ಸೀರೆ ಬಟ್ಟೆಯನ್ನು ಬಿಗಿದು ಕೊಲೆ ಮಾಡಿರುವುದು ಕಂಡು ಬರುತ್ತದೆ. ನಾನು ನನ್ನ ತಾಯಿ, ತಂಗಿ ಸ್ನೆಹಿತರಾದ ಶಿವು , ರಾಜು ಇತರರು ಬಂದು ನೋಡಿದೆವು ನನ್ನ ಅಣ್ಣ ಸಚಿನನ್ನು ಯಾರೋ ವ್ಯಕ್ತಿಗಳು ಯಾವುದೋ ದುರುದ್ದೇಶ ದಿಂದ ಕೊಲೆ ಮಾಡಿದ್ದು ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ. ಈ ಕೊಲೆಯು ಈದಿನ 30/05/2022 ರಂದು ಬೆಳಿಗ್ಗೆ 11 ಗಂಟೆಯ ನಂತರ ದಿಂದ ಮದ್ಯಾಹ್ನ 02 ಗಂಟೆಯ ಮದ್ಯದ ಅವಧಿಯಲ್ಲಿ ನಡೆದಿರುತ್ತದೆ ಅಂತ ಫಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2022 ಕಲಂ 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ಶೀಘ್ರ ವರದಿ ಸಲ್ಲಿಸಲಾಗಿದೆ.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 83/2022. ಕಲಂ. 379ಐ.ಪಿ.ಸಿ. ಕಾಯ್ದೆ: ಇಂದು ದಿನಾಂಕ:30-05-2022 ರಂದು ಮುಂಜಾನೆ 11:00 ಗಂಟೆಗೆ ದೂರು ಅಜರ್ಿದಾರನಾದ ಶ್ರೀ ಶರಣಪ್ಪ ತಂದೆ ಮಹಾದೇವಪ್ಪ ಅಲ್ಲೂರ ವ:41 ವರ್ಷ ಜಾ:ಕಬ್ಬಲಿಗ ಸಾ:ಹತ್ತಿಕುಣಿ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸದರಿ ಅಜರ್ಿ ಸಾರಂಶವೆನೆಂದರೆ,ನಾನು ಶರಣಪ್ಪ ತಂದೆ ಮಹಾದೇವಪ್ಪ ಅಲ್ಲೂರ ವ|| 41 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಹತ್ತಿಕುಣಿ ತಾ|| ಜಿ|| ಯಾದಗಿರಿ ಇದ್ದು, ನಾನು ನಮ್ಮ ಕುಟುಂದೊಂದಿಗೆ ಪ ಜೀವನ ಮಾಡಿಕೊಂಡಿರುತ್ತೇನೆ, ನಮ್ಮ ಹತ್ತಿಕುಣಿ ಗ್ರಾಮ ಸೀಮಾಂತರದಲ್ಲಿ ಹೊಲ ಇದ್ದು ಹೊಲದ ಪಕ್ಕದಲ್ಲಿ ಹಳ್ಳ ಇದ್ದು ಹಳ್ಳದಿಂದ ಹೊಲಕ್ಕೆ ನೀರು ಹರಿಸಲು ನಮ್ಮ ಹೊಲದಲ್ಲಿ ಎರಡು ಮೋಟರಗಳನ್ನು ಇಟ್ಟು ಇರುತ್ತದೆ. ಈ ಮೋಟರಗಳಿಂದ ಹೊಲಗಳಲ್ಲಿ ಹಾಕಿದ್ದ ಕಾಯಿಪಲ್ಲೆ ಗಿಡಗಳಿಗೆ ನೀರು ಬಿಡುತಿದ್ದೆನು. ದಿನಾಂಕ: 08-05-2022 ರಂದು ಬೆಳಿಗ್ಗೆ 10-00 ಗಂಟೆ ವರೆಗೆ ಹೊಲದಲ್ಲಿ ಕಾಯಿಪಲ್ಲೆಗೆ ನೀರು ಕಟ್ಟಿ ನಂತರ ಮನೆಗೆ ಬಂದು ನಾನು ನಮ್ಮ ಸಂಬಂದಿಕರ ಊರಲ್ಲಿ ಮದುವೆ ಇರುವದರಿಂದ ಹತ್ತಿಕುಣಿ ಗ್ರಾಮದಿಂದ ಸಂಬಂದಿಕರ ಊರಿಗೆ ಹೋಗಿ ನಂತರ ದಿನಾಂಕ: 09-05-2022 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಮನೆಗೆ ಬಂದು ನಂತರ ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ಹೋಲಕ್ಕೆ ಹೋಗಿ ಕಾಯಿಪಲ್ಲೆಗೆ ನೀರು ಬಿಡುತ್ತಿರುವಾಗ ನಾನು ನಮ್ಮ ಹೊಲದಲ್ಲಿ ಇಟ್ಟಿದ್ದ ಒಂದು 3 ಹೆಚ್.ಪಿ ಮೋಟರ ಇರಲಿಲ್ಲ ಆಗ ನಾನು ನಮ್ಮ ಸುತ್ತ ಮುತ್ತ ಹೊಲದವರಿಗೆ ಯಾರಾದರು ತೆಗೆದುಕೊಂಡು ಹೋಗಿರಬಹುದು ಅಂತಾ ನಮ್ಮ ಸುತ್ತ ಮುತ್ತ ಹೊಲದವರಿಗೆ ವಿಚಾರಿಸಲಾಗಿ ಯಾರು ನಮ್ಮ ಮೋಟರ ತೆಗೆದುಕೊಂಡಿರುವದಿಲ್ಲ ಅಂತಾ ತಿಳಿಸಿದರು. ನಂತರ ನಾನು ನಮ್ಮ ಮನೆಗೆ ಬಂದು ನಮ್ಮ ಮನೆಯವರಿಗೆ ನಮ್ಮ ಮೋಟರ ಇಲ್ಲದ ಬಗ್ಗೆ ವಿಚಾರಿಸಲಾಗಿ ನಮಗೆ ಗೊತ್ತಿಲ್ಲ ಅಂತಾ ತಿಳಿಸಿದರು ಆಗ ನಾನು ನಮ್ಮೂರಿನಲ್ಲಿ ನನಗೆ ಬೇಕಾದವರಿಗೆ ನಮ್ಮ ಮೋಟರ ಯಾರಾದರು ತೆಗೆದುಕೊಂಡು ಹೋಗಿದ್ದಾರೆನು ಅಂತಾ ಕೇಳಲಾಗಿ ಇಲ್ಲ ಅಂತಾ ತಿಳಿಸಿದರು. ನಮ್ಮ ಹೊಲದಲ್ಲಿ ಇಟ್ಟಿದ್ದ ನೀರೆತ್ತುವ 3 ಹೆಚ್.ಪಿ ಮೋಟರನ್ನು ದಿನಾಂಕ: 08-05-2022 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 09-05-2022 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ನೀರೆತ್ತುವ ಮೋಟರ ಅಂದಾಜು ಕಿಮ್ಮತ್ತು 15 ಸಾವಿರ ಇರುತ್ತದೆ ನನ್ನ ಮೋಟರ ಕಳುವಾದ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ.ಅಂತಾ ನೀಡಿದ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ,83/2022 ಕಲಂ.379 ಐ.ಪಿ.ಸಿ.ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ 379 ಐಪಿಸಿ:ದಿನಾಂಕ 30-05-2022 ರಂದು ಮಧ್ಯಾಹ್ನ 01-00 ಗಂಟೆಗೆ ಪಿಯಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು 2015 ನೇ ಸಾಲಿನಿಂದ ನಮ್ಮೂರಿನಲ್ಲಿ ಪಂಪಾಪರೆಟರ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ, ಯಡ್ಡಳ್ಳಿ ಗ್ರಾಮಕ್ಕೆ ಕೂಡಿಯು ನೀರಿನ ಸಂಬಂದ ಯಡ್ಡಳ್ಳಿ ಗ್ರಾಮದ ಹಳ್ಳದ ದಂಡೆಯ ಮೇಲೆ ಕರೆಂಟ್ ಮೋಟಾರು ಅಳವಡಿಸಿದ್ದು ಅದನ್ನು ನಾನು ದಿನಾಲೂ ಚಾಲು ಮಾಡಿ ನಂತರ ಬಂದ ಮಾಡಿ ಬರುತಿದ್ದೆನು, ದಿನಾಂಕ: 19-05-2022 ರಂದು ಸಾಯಂಕಾಲ 06-00 ಗಂಟೆಗೆ ಮೋಟಾರು ಬಂದ ಮಾಡಿ ಮನೆಗೆ ಬಂದಿದ್ದು ಮರುದಿನ ದಿನಾಂಕ: 20-05-2022 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಮೋಟಾರು ಚಾಲು ಮಾಡಲು ಹೋದಾಗ ಮೋಟರ ಇರಲಿಲ್ಲ. ಆಗ ನಾನು ಸುತ್ತ ಮುತ್ತ ಹೊಲದವರಿಗೆ ಯಾರಾದರು ತೆಗೆದುಕೊಂಡು ಹೋಗಿರಬಹುದು ಅಂತಾ ಸುತ್ತ ಮುತ್ತ ಹೊಲದವರಿಗೆ ವಿಚಾರಿಸಲಾಗಿ ಯಾರು ಮೋಟರ ತೆಗೆದುಕೊಂಡಿರುವದಿಲ್ಲ ಅಂತಾ ತಿಳಿಸಿದರು. ನಂತರ ನಾನು ಊರಿಗೆ ಬಂದು ಊರಿನವರಿಗೆ ಮೋಟರ ಇಲ್ಲದ ಬಗ್ಗೆ ವಿಚಾರಿಸಲಾಗಿ ನಮಗೆ ಗೊತ್ತಿಲ್ಲ ಅಂತಾ ತಿಳಿಸಿದರು ಆಗ ನಾನು ನಮ್ಮೂರಿನಲ್ಲಿ ನನಗೆ ಬೇಕಾದವರಿಗೆ ಮೋಟರ ಯಾರಾದರು ತೆಗೆದುಕೊಂಡು ಹೋಗಿದ್ದಾರೆನು ಅಂತಾ ಕೇಳಲಾಗಿ ಇಲ್ಲ ಅಂತಾ ತಿಳಿಸಿದರು. ಊರಿಗೆ ನೀರು ಸಪ್ಲಯ ಮಾಡುವ ನೀರಿನ ಮೋಟರನ್ನು ಹಳ್ಳದ ದಂಡೆಗೆ ಇಟ್ಟಿದ್ದ 5 ಹೆಚ್.ಪಿ ಮೋಟರನ್ನು ದಿನಾಂಕ: 19-05-2022 ರಂದು ಸಾಯಂಕಾಲ 06-00 ಗಂಟೆಯಿಂದ ದಿನಾಂಕ: 20-05-2022 ರಂದು ಬೆಳಿಗ್ಗೆ 06-00 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ 457, 380 ಐಪಿಸಿ: :- ಫಿಯರ್ಾದಿ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಹಾಗೂ ನನ್ನ ಹೆಂಡತಿ ತಸನಿಮ್ ಬಾನು ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹುಟ್ಟಿದಾಗಿನಿಂದ ನನ್ನ ಮೊದಲನೆಯ ಮಗನಾದ ಮಹ್ಮದ್ ಅಸನ್ ರಜಾಖಾನ್ (9 ವರ್ಷ) ಈತನಿಗೆ ಅರಾಮ ಇಲ್ಲದ ಕಾರಣ ಇಲ್ಲಿಯ ವರೆಗೆ ಚಿಕಿತ್ಸೆ ಕೊಡಿಸುತ್ತಿದ್ದು, ಈಗ ಸದ್ಯ ಶಹಾಪೂರದಲ್ಲಿ ಉಪಚಾರ ಪಡೆಯುತ್ತಿದ್ದರಿಂದ ನಾನು ಅಲ್ಲೆ ಮನೆ ಮಾಡಿದ್ದು, ದಿನಾಲು ನಾನು ಯಾದಗಿರಿಯಿಂದ ಬಂದು ಹೋಗಿ ಮಾಡುತ್ತೇನೆ. ಹೀಗಿದ್ದು ದಿನಾಂಕ 26/05/2022 ರಂದು ಸಾಯಂಕಾಲ 07-30 ಗಂಟೆಗೆ ನಾನು ನಮ್ಮ ಮನೆಯ ಬೀಗ ಹಾಕಿಕೊಂಡು ಶಹಾಪೂರಗೆ ಹೋಗಿದ್ದು, ನಂತರ ಮರಳಿ ದಿನಾಂಕ 27/05/2022 ರಂದು ಬೆಳಿಗ್ಗೆ 07-15 ಗಂಟೆಯ ಸುಮಾರಿಗೆ ನಾನು ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಬೀಗ ಮುರಿದಿದ್ದು, ಬಾಗಿಲು ತೆಗೆದಿದ್ದು ಕಂಡು ಬಂತು ಗಾಭರಿಯಾಗಿ ಮನೆ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದಿದ್ದು, ಬೆಡ್ ರೂಮಿನಲ್ಲಿ ಇದ್ದ ಅಲಮರಿ ಹಾಲದಲ್ಲಿ ತಂದು ಹಾಕಿ ಮುರಿದಿರುತ್ತಾರೆ. ನೋಡಲಾಗಿ ಅಲಮರಿಯಲ್ಲಿ ಇದ್ದ 1] ಒಂದು ತೊಲೆಯ ಒಂದು ಬಂಗಾರದ ಚೈನ್, ಅ.ಕಿ 40,000/- ರೂ|| ಗಳು, 2] ತಲಾ 2. ಗ್ರಾಂ. ಬಂಗಾರ ಮಕ್ಕಳು ಉಂಗುರ ಒಟ್ಟು 6 ಗ್ರಾಂ. ಅ.ಕಿ 24,000/- ರೂ|| ಗಳು, 3] ನಗದು ಹಣ 30,000/- ರೂಪಾಯಿಗಳು ಮತ್ತು ಮನೆಯಲ್ಲಿಯ ಒಂದು ಸಿ.ಪಿ ಪ್ಲಸ್ ಕಂಪನಿಯ ಸಿ.ಸಿ.ಟಿ.ವ್ಹಿ ಡಿ.ವ್ಹಿ.ಆರ್, ಅ.ಕಿ 8000/- ರೂ|| ಗಳು ಹೀಗೆ ಒಟ್ಟು 1,02,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು, ನಗದು ಹಣ ಮತ್ತು ಒಂದು ಸಿ.ಸಿ ಕ್ಯಾಮರ ಡಿ.ವ್ಹಿ.ಆರ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 62/2022 ಕಲಂ 457 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ: 420 ಐಪಿಸಿ: ಇಂದು ದಿನಾಂಕ; 30/05/2022 ರಂದು ಸಾಯಂಕಾಲ 6-15 ಗಂಟೆಯ ಸುಮಾರಿಗೆ ಫಿಯರ್ಾದಿ ಶ್ರೀ ಮಲ್ಲಪ್ಪ ತಂದೆ ಚಂದ್ರಾಮಪ್ಪ ದೇವನೊರ ವಃ40 ಜಾಃ ಮಾದಿಗ ಉಃ ಕೂಲಿಕೆಲಸ ಸಾಃಖಾನಳ್ಳಿ ತಾಃಜಿಃಯಾದಗಿರಿ ಇವರ ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಯಾದಗಿರಿ ಕೋರ್ಟ ಎದುರುಗಡೆ ಇರುವ ಕನರ್ಾಟಕ ಬ್ಯಾಂಕ್ದಲ್ಲಿ ಖಾತೆ ಹೊಂದಿದ್ದು, ಖಾತೆ ನಂ- 8532500101427701 ಅಂತಾ ಇರುತ್ತದೆ. ಹೀಗಿದ್ದು ದಿನಾಂಕ. 14/05/2022 ರಂದು ಮಧ್ಯಾಹ್ನ 03-55 ಗಂಟೆಯ ಸುಮಾರಿಗೆ ನಾನು ಯಾದಗಿರಿಯ ಕೋರ್ಟ ಎದುರುಗಡೆ ಇರುವ ಕನರ್ಾಟಕ ಬ್ಯಾಂಕ ಪಕ್ಕದಲ್ಲಿರುವ ಸದರಿ ಬ್ಯಾಂಕ ಎ.ಟಿ.ಎಂ. ಗೆ ಹೋಗಿ, ನನ್ನ ಬ್ಯಾಂಕ ಖಾತೆಗೆ 20,000/- ರೂಪಾಯಿ ಹಣ ಜಮಾ ಮಾಡಲು ಹೋಗಿದ್ದೆನು. ಆಗ ನನಗೆ ಬಾರದೆ ಇದ್ದರಿಂದ ಅಲ್ಲಿ ಇದ್ದ ಒಬ್ಬ ವ್ಯಕ್ತಿಗೆ ನಾನು ಸ್ವಲ್ಪ ನನ್ನ ಹಣ ಜಮಾಮಾಡಿಕೊಡು ಅಂತಾ ಕೇಳಿ, ನನ್ನ ಎ.ಟಿ.ಎಂ ಕಾಡರ್್ ಅವನ ಹತ್ತಿರ ಕೊಟ್ಟು, ಪಾಸ್ವಡರ್್ ಕೂಡ ಹೇಳಿದೆನು. ಆಗ ಆತನು ನನ್ನ ಖಾತೆಗೆ 20,000/- ರೂ|| ಹಣ ಜಮಾ ಮಾಡಿದನು. ನಂತರ ತಿರುಗಾ ನನ್ನಾ ಎ.ಟಿ.ಎಂ ಕೊಡು ಜಮಾ ಆಗಿದೆ ಹೇಗೆ ? ಚೆಕ್ ಮಾಡೋಣ ಅಂತಾ ಅಂದಾಗ, ನಾನು ಸದರಿ ವ್ಯಕ್ತಿಗೆ ಎ.ಟಿ.ಎಂ ಕಾಡರ್್ ಕೊಟ್ಟೆನು. ಅವನು ಹಣ ಜಮಾ ಆದ ಬಗ್ಗೆ ಚೆಕ್ ಮಾಡಿದನು ಆ ವ್ಯಕ್ತಿ ಅಲ್ಲಿಂದ ಹೋದನು. ನಾನು ಕೂಡಾ ಊರಿಗೆ ಹೋದೆನು. ನಂತರ ನನ್ನ ಮೊಬೈಲಗೆ ಮೇಲಿಂದ ಮೇಲೆ ಮೇಸೆಜಗಳು ಬುರುತ್ತಿದ್ದನ್ನು ಕಂಡು ನಾನು ನನ್ನ ಖಾತೆಗೆ ಹಣ ಜಮಾ ಮಾಡಿದ ಬಗ್ಗೆ ಮೇಸೆಜಗಳು ಬರುತ್ತಿರಬಹುದು ಅಂತ ಸುಮ್ಮನಿದ್ದೆನು ನಂತರ ದಿನಾಲು ನನಗೆ ಬ್ಯಾಂಕನಿಂದ ಮೆಸೆಗಳನ್ನು ಬರುತ್ತಿದ್ದವು ನನಗೆ ಸಂಶಯ ಬಂದು ನಾನು ದಿನಾಂಕ.17/05/2022 ರಂದು ನಾನು, ನನ್ನ ಅಳಿಯ ಈಶಪ್ಪ ತಂದೆ ಮಲ್ಲಪ್ಪ ಈತನಿಗೆ ಮೆಸೆಜಗಳನ್ನು ತೋರಿಸಿದಾಗ ಆತನು ನಿನ್ನ ಬ್ಯಾಂಕ ಖಾತೆಯಿಂದ ದಿನಾಂಕ.14/05/2022 ರಿಂದ 17/05/2022 ರವರೆಗೆ ದಿನಾಲು 25,000/-ರೂ ದಂತೆ ಒಟ್ಟು 1,00,000/-ರೂ ಹಣ ಡ್ರಾ ಆದ ಬಗ್ಗೆ ತಿಳಿಸಿದನು ರಾತ್ರಿಯಾಗಿದ್ದರಿಂದ ನಂತರ ಈ ಬಗ್ಗೆ ವಿಚಾರಿಸಲು ನಾನು ಮತ್ತು ನಮ್ಮ ಅಳಿಯ ಈಶಪ್ಪ ನೊಂದಿಗೆ ದಿನಾಂಕ.18/05/2022 ರಂದು ಕನರ್ಾಟಕ ಬ್ಯಾಂಕಗೆ ಬಂದು ನನ್ನ ಹತ್ತಿರ ಇದ್ದ ಎ.ಟಿ.ಎಂ.ಕಾರ್ಡ ತೋರಿಸಿ ಬ್ಯಾಂಕನಲ್ಲಿ ವಿಚಾರಿಸಲು ನನ್ನ ಎ.ಟಿ.ಎಮ್.ಕಾರ್ಡ ಅಲ್ಲ ಅಂತಾ ಗೊತ್ತಾಯಿತು. ಮತ್ತು ಅದೇ ದಿನಾಂಕ.18/05/2022 ರಂದು ಮತ್ತೆ 25,000/-ರೂ ನನ್ನ ಖಾತೆಯಿಂದ ಡ್ರಾ ಆಗಿದ್ದು ಇರುತ್ತದೆ. ನಂತರ ನಾನು ಅದೇ ದಿವಸ ಬ್ಯಾಂಕನಲ್ಲಿ ಕಾರ್ಡ ಲಾಕ್ ಮಾಡಿಸಿದೆನು. ನಂತರ ಆ ವ್ಯಕ್ತಿ ನನಗೆ ಕೊಟ್ಟ ಕಾಡರ್್ ಕನರ್ಾಟಕ ಬ್ಯಾಂಕದು ಇದ್ದು, ಅದರ ನಂ- 6072700644427283 ಅಂತಾ ಇತ್ತು. ನಂತರ ನಾನು ಮನೆಗೆ ಹೋಗಿ ಈ ಘಟನೆಯ ಬಗ್ಗೆ ನಮ್ಮ ಮಾವನಾದ ವೀರಪ್ಪ ತಂದೆ ಭೀಮರಾಯ ಚಿತಾವಲ್ಲಿ, ನನ್ನ ತಮ್ಮನಾದ ಹಣಮಂತ ತಂದೆ ಚಂದ್ರಾಮಪ್ಪ ದೇವನೊರ ರವರಿಗೆ ತಿಳಿಸಿದೆನು. ಕಾರಣ ದಿನಾಂಕ 14/05/2022 ರಂದು ಮಧ್ಯಾಹ್ನ 03-55 ಗಂಟೆಯ ಸುಮಾರಿಗೆ ನಾನು ನನ್ನ ಖಾತೆಗೆ ಹಣ ಜಮಾ ಮಾಡಲು ಕನರ್ಾಟಕ ಬ್ಯಾಂಕ ಎ.ಟಿ.ಎಂ ಗೆ ಹೋದಾಗ, ಯಾರೋ ಒಬ್ಬ ವ್ಯಕ್ತಿ ನನಗೆ ಸಹಾಯ ಮಾಡುವವನಂತೆ ಮಾಡಿ, ನನ್ನ ಎ.ಟಿ.ಎಂ ಕಾಡರ್್ ಬದಲಾಯಿಸಿ, ನಂತರ ನನ್ನ ಎ.ಟಿ.ಎಂ ಕಾಡರ್್ ತಾನು ಉಪಯೋಗ ಮಾಡಿ, ನನ್ನ ಕಾನರ್ಾಟಕ ಬ್ಯಾಂಕ ಖಾತೆಯಿಂದ ಒಟ್ಟು 1,25,000/- ರೂ|| ಹಣ ಡ್ರಾ ಮಾಡಿರುತ್ತಾನೆ. ತಾವು ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಈ ಬಗ್ಗೆ ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 63/2022 ಕಲಂ. 420 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 77/2022 ಕಲಂ: 504, 341, 323, 506 ಸಂ 34 ಐಪಿಸಿ: ಇಂದು ದಿನಾಂಕ:30/05/2022 ರಂದು 2-45 ಪಿಎಮ್ ಕ್ಕೆ ಶ್ರೀ ಸೈಯದ ಖುಸ್ರೊ ವಲಿವುಲ್ಲಾ ಹುಸೇನಿ ತಂದೆ ಸೈಯದ ಅಹ್ಮೆದ ಹುಸೇನಿ, ವ:46, ಜಾ:ಮುಸ್ಲಿಂ, ಉ:ಖಾಸಗಿ ಕೆಲಸ ಸಾ:ಗುಲಸರಂ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಖಾಸಗಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ ಗ್ರಾಮದಲ್ಲಿರುವ ಶ್ರೀ ಹಜéರತ ಸೈಯದ ಶಹಾ ಜಲಾಲೋದ್ದಿನ ಹುಸೇನಿ ಶೇರ್-ಇ-ಸವಾರ ದಗರ್ಾಕ್ಕೆ ಸಂಬಂಧಪಟ್ಟಿರುವ ಇನಾಮಿ ಜಮೀನುಗಳನ್ನು ಸೈಯದ ಜಲಾಲ ಹುಸೇನಿ @ ಖಮರ ಪಾಷಾ ತಂದೆ ಲೇಟ್ ಸೈಯದ ಮೊಹ್ಮದ ಹುಸೇನಿ ಮತ್ತು ಸಂಗಡಿಗರು ಸೇರಿ ಮಾರಾಟ ಮಾಡಿಕೊಂಡಿರುತ್ತಾರೆ. ನಾನು ಸದರಿ ಜಮೀನು ಮಾರಾಟದ ಬಗ್ಗೆ ಮಾನ್ಯ ಹೈಕೋರ್ಟ ಪೀಠ ಬೆಂಗಳೂರಿನಲ್ಲಿ ರಿಟ್ ಪೆಟಿಷನ ನಂ. 13436/2020 (ಪಿಐಎಲ್-ವಕ್ಫ್) ಹೂಡಿರುತ್ತೇನೆ. ಅಲ್ಲದೆ ಸರಕಾರದ ಪ್ರಧಾನ ಕಾರ್ಯದಶರ್ಿಗಳು ಬೆಂಗಳೂರು ರವರಲ್ಲಿ ಪ್ರಕರಣ ದಾಖಲ ಮಾಡುವಂತೆ ಅಜರ್ಿಗಳನ್ನು ಸಲ್ಲಿಸಿ, ಕಾನೂನು ಹೊರಾಟ ಮಾಡುತ್ತಿದ್ದೇನೆ. ನಾನು ಸದರಿ ಜಮೀನು ಅವ್ಯವಹಾರ ಮಾಡಿದವರ ವಿರುದ್ಧ ಕಾನೂನು ಹೊರಾಟ ಮಾಡುತ್ತಿರುವುದನ್ನು ಸಹಿಸದ ಮೇಲ್ಕಂಡವರು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತಾ ಬರುತ್ತಿದ್ದು, ನಿನಗೆ ಖಲಾಸ ಮಾಡುತ್ತೇವೆ, ಜೀವಂತ ಬಿಡುವುಡಿಲ್ಲವೆಂದು ಕಂಡ ಕಂಡಲ್ಲಿ ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಿದ್ದು ದಿನಾಂಕ:23/05/2022 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ನಮ್ಮ ಗ್ರಾಮದಲ್ಲಿರುವ ಶ್ರೀ ಹಜéರತ ಸೈಯದ ಶಹಾ ಜಲಾಲೋದ್ದಿನ ಹುಸೇನಿ ಶೇರ್-ಇ-ಸವಾರ ದಗರ್ಾಕ್ಕೆ ಹೋಗಿ ಪೂಜೆ ಮಾಡಿ ಮರಳಿ ದಗರ್ಾದ ಮೆಟ್ಟಿಲುಗಳು ಇಳಿದು ಕೆಳಗೆ ಬರುತ್ತಿದ್ದಾಗ ಅಲ್ಲಿ ಸೈಯದ ಜಲಾಲ ಹುಸೇನಿ @ ಖಮರ ಪಾಷಾ ತಂದೆ ಲೇಟ್ ಸೈಯದ ಮೆಹಮೂದ ಹುಸೇನಿ ಈತನು ತನ್ನ ಇಬ್ಬರು ಮಕ್ಕಳೊಂದಿಗೆ ಸೇರಿ ಬಂದವನೆ ನನಗೆ ತಡೆದು ನಿಲ್ಲಿಸಿ, ಅಬ್ಬೆ ಸಾಲೆ ತು ಹಮಕೊ ಜಮೀನ್ ಬೇಚೆ ಬೊಲಕೆ ಹಮಾರೆ ಉಪರ್ ಕೇಸ ದಾಲರಹಾ ಹೈ ಆಜ್ ತುಜéೆ ಛೋಡತೆ ನಹಿ ಖಲಾಸ ಕರತೆ ಎಂದು ಜಗಳ ತೆಗೆದವರೆ ಸೈಯದ ಜಲಾಲ ಹುಸೇನಿ @ ಖಮರ ಪಾಷಾ ಮತ್ತು ಅವನ ಇಬ್ಬರೂ ಮಕ್ಕಳು ಸೇರಿ ನನಗೆ ಹಿಡಿದುಕೊಂಡು ಕೈಯಿಂದ ಮುಖಕ್ಕೆ, ಬೆನ್ನಿಗೆ ಹೊಡೆದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಮೊಹ್ಮದ ಫಾರೂಕ ಹುಸೇನ ತಂದೆ ಅಬ್ದುಲ್ ಲತೀಫ, ಜಲಾಲಸಾಬ ತಂದೆ ಜಲಾಲಸಾಬ ಮುಜಾವರ, ಜಲಾಲಸಾಬ ತಂದೆ ಅಬ್ದುಲ್ ರಹಿಂ ಮತ್ತು ಇತರರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಆಜ್ ಬಚಗಯಾ ಬೇಟೆ ಔರ ಏಕ ಬಾರ ಮಿಲಾ ತೋ ತುಜéೆ ಖಲಾಸ ಕರತೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಸೈಯದ ಜಲಾಲ ಹುಸೇನಿ @ ಖಮರ ಪಾಷಾ ಈತನೊಂದಿಗೆ ಜಗಳಕ್ಕೆ ಬಂದ ಅವನ ಮಕ್ಕಳ ಹೆಸರು ನನಗೆ ಗೊತ್ತಿಲ್ಲ ನಂತರ ತಿಳಿದುಕೊಂಡು ಹೇಳುತ್ತೇನೆ ಮತ್ತು ಅವರಿಗೆ ನೋಡಿದಲ್ಲಿ ಗುರುತಿಸುತ್ತೇನೆ. ನಾನು ಸದರಿ ಘಟನೆಯ ಬಗ್ಗೆ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಊರಲ್ಲಿಯೇ ರಾಜಿ ಸಂಧಾನ ಮಾಡೊಣ ಅಂತಾ ಕರೆದರೆ ಅವರು ಯಾರೂ ಬರಲಿಲ್ಲ. ಆಗ ನಮ್ಮ ಹಿರಿಯರು ನೀನು ಬೇಕಾದರೆ ಹೋಗಿ ಪೊಲೀಸ್ ಕೇಸು ಮಾಡು ಎಂದು ನನಗೆ ಹೇಳಿದ್ದರಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಾನು ಹೈಕೊಟರ್ಿನಲ್ಲಿ ದಾವೆ ಹೂಡಿದ್ದಕ್ಕೆ ಮತ್ತು ನ್ಯಾಯದ ಪರವಾಗಿ ಹೊರಾಟ ಮಾಡುತ್ತಿರುವುದನ್ನು ಸಹಿಸದ ಸೈಯದ ಜಲಾಲ ಹುಸೇನಿ @ ಖಮರ ಪಾಷಾ ಈತನು ತನ್ನ ಮಕ್ಕಳೊಂದಿಗೆ ಬಂದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಂನತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 77/2022 ಕಲಂ:504, 341, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 78/2022 ಕಲಂ: 504 ಐಪಿಸಿ: ಇಂದು ದಿನಾಂಕ:30/05/2022 ರಂದು 6-30 ಪಿಎಮ್ ಕ್ಕೆ ಕೋರ್ಟ ಕತವ್ಯದ ಹೆಚ್.ಸಿ 08 ರವರು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲು ಮಾಡಿಕೊಳ್ಳಲು ಅನುಮತಿ ಸ್ವಿಕೃತಿ ಪತ್ರವನ್ನು ಹಾಜರಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಲಯವು ಶ್ರೀ ದಂಡಪ್ಪ ತಂದೆ ಹಣಮಂತ ಕುಪಗಲ್, ವ:38, ಜಾ:ಬೇಡರ, ಉ:ಗುತ್ತಿಗೆದಾರ ಸಾ:ಮುದ್ನಾಳ ತಾ:ಜಿ:ಯಾದಗಿರಿ ಇವರ ದೂರು ಅಜರ್ಿಯು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಮಾನ್ಯ ನ್ಯಾಯಲಯವು ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶವೇನಂದರೆ ಸಾರಾಂಶವೇನಂದರೆ ನಾನು ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಮಾನ್ಯ ಶಾಸಕರು ಯಾದಗಿರಿ ಮತಕ್ಷೇತ್ರ ಇವರ ಅಭಿಮಾನಿ ಬಳಗದ ಅಧ್ಯಕ್ಷನಾಗಿರುತ್ತೇನೆ. ಈ ದಿವಸ ದಿನಾಂಕ:28/05/2022 ರಂದು ನಾನು ಮತ್ತು ನಮ್ಮ ಅಭಿಮಾನಿ ಬಳಗದ ರವಿ ಕೆ. ರಾಠೋಡ ಮತ್ತು ಸಾಬು ಬಗ್ಲಿ ನಾಯಕ ಎಲ್ಲರೂ ನಮ್ಮ ಕೆಲಸದ ಪ್ರಯುಕ್ತ ಶೋರಾಪೂರಕ್ಕೆ ಹೋಗುತ್ತಿದ್ದಾಗ ಬೆಳಗ್ಗೆ 10-30 ಗಂಟೆ ಸುಮಾರಿಗೆ ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮದಲ್ಲಿ ಸದರಿ ತಡಿಬಿಡಿ ಜಿಲ್ಲಾ ಪಂಚಾಯತ ಮತಕ್ಷೇತ್ರ ರದ್ದಾಗಿರುವುದನ್ನು ಖಂಡಿಸಿ, ಕೆಲವು ಸಂಘಟನೆಗಳು ಮತ್ತು ಗ್ರಾಮಸ್ಥರು ಸೇರಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತಾರೆ. ಸದರಿ ಜಿಲ್ಲಾ ಪಂಚಾಯತ ಕ್ಷೇತ್ರಗಳನ್ನು ಸರಕಾರದ ಮಟ್ಟದಲ್ಲಿ ಆಯೋಗ ರಚನೆ ಮಾಡಿ ಬದಲಾವಣೆ ಮಾಡಿರುತ್ತಾರೆ. ಇದಕ್ಕೆ ಮಾನ್ಯ ಶಾಸಕರು ಕಾರಣರಾಗಿರುವುದಿಲ್ಲ. ಆದರೆ ಸದರಿ ಪ್ರತಿಭಟನೆಯಲ್ಲಿ ಕೆಲವು ಕಿಡಿಗೇಡಿಗಳು ಸುಳ್ಳು ಅಪಪ್ರಚಾರ ಮಾಡಿ, ಮಾನ್ಯ ಶಾಸಕರಿಗೆ ಅಪಮಾನ, ಅಗೌರವ ತೋರಿ ಮಾತನಾಡಿದ್ದು ಮತ್ತು ಅವಹೇಳನಕಾರಿಯಾಗಿ ನಡೆದುಕೊಂಡು ಪ್ರತಿಭಟನೆಯಲ್ಲಿ ವಿಕೃತಿಯನ್ನು ಪ್ರದಶರ್ಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿರುತ್ತಾರೆ. ಕಾರಣ ಕ್ಷೇತ್ರದ ಶಾಸಕರಿಗೆ ಈ ರೀತಿ ಅಗೌರವ ತೋರಿ ಅವಾಚ್ಯ ಶಬ್ದಗಳನ್ನು ಬಳಸಿ, ಶಾಸಕರಿಗೆ ಬೈದಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಶ್ರೀ ವೆಂಕಟರೆಡ್ಡಿಗೌಡ ಮುದ್ನಾಳ ಮಾನ್ಯ ಶಾಸಕರು ಯಾದಗಿರಿ ಮತಕ್ಷೇತ್ರ ಇವರ ಅಭಿಮಾನಿ ಬಳಗದ ವತಿಯಿಂದ ಮನವಿ ಮಾಡಿಕೊಳ್ಳುತ್ತೇವೆ. ಸದರಿ ಪ್ರತಿಭಟನೆಯು ಇಂದು ದಿನಾಂಕ:28/05/2022 ರಂದು ಬೆಳಗ್ಗೆ 10-30 ಗಂಟೆಯಿಂದ 11-30 ಗಂಟೆ ಮದ್ಯದಲ್ಲಿ ತಡಿಬಿಡಿ ಗ್ರಾಮದ ಮದ್ಯ ಯಾದಗಿರಿ-ಶೋರಾಪೂರ ಮೇನ ರೊಡ ಮೇಲೆ ಜರುಗಿರುತ್ತದೆ. ನಾವು ಸದರಿ ಘಟನೆಯನ್ನು ಪ್ರತ್ಯಕ್ಷ ನೋಡಿರುತ್ತೇವೆ. ಆದ್ದರಿಂದ ಸದರಿ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ತಮ್ಮಲ್ಲಿ ವಿನಂತಿ ಎಂದು ಕೊಟ್ಟ ದೂರು ಅಜರ್ಿಯನ್ನು ಸ್ವಿಕೃತ ಮಾಡಿಕೊಂಡು ಸದರಿ ದೂರು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಠಾಣಾ ಎನ್.ಸಿ ನಂ. 01/2022 ರಲ್ಲಿ ದಾಖಲ ಮಾಡಿಕೊಂಡಿದ್ದು ಇರುತ್ತದೆ. ಸದರಿ ದೂರು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಮಾನ್ಯ ನ್ಯಾಯಾಲಯಕ್ಕೆ ಅಪರಾಧ ಕಲಂ:504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ಕೊಡುವಂತೆ ಕೋರಿಕೊಂಡಿದ್ದು, ಮಾನ್ಯ ನ್ಯಾಯಲಯವು ಅನುಮತಿ ಕೊಟ್ಟಿದ್ದರಿಂದ ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 78/2022 ಕಲಂ: 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 90/2022 ಕಲಂ: 143, 147, 323, 324, 504, 506 ಸಂ 149 ಐಪಿಸಿ: ಇಂದು ದಿನಾಂಕ 30/05/2022 ರಂದು 2.30 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಮಲ್ಲಪ್ಪ ತಂದೆ ಬಸಪ್ಪ ಹರಿಜನ ವ|| 26 ಜಾ|| ಹಿಂದೂ ಹೊಲೆಯ ಉ|| ಕೂಲಿಕೆಲಸ ಸಾ|| ಫತೇಪೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮ ಮನೆ ಹಾಗೂ ನಮ್ಮೂರ ಬೇಡರ ಜನಾಂಗದ ಚಂದ್ರಾಮ ತಂದೆ ಭೀಮರಾಯ ಟಣಕೆದಾರ ಇವರ ಮನೆಯು ಎದುರು ಬದುರು ಇದ್ದು ನಮ್ಮ ಮಕ್ಕಳು ಹಾಗೂ ಚಂದ್ರಾಮ ಟಣಕೆದಾರ ಇವರ ಮಕ್ಕಳು ಕೂಡಿ ಮನೆಯ ಮುಂದಿನ ಬಯಲು ಜಾಗದಲ್ಲಿ ಆಟವಾಡುತ್ತಿದ್ದಾಗ ಮಕ್ಕಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದು ನಮ್ಮ ಮಕ್ಕಳಿಗೆ ನಮ್ಮ ತಾಯಿಯಾದ ಪೀರಮ್ಮಳು ಮನೆಯೊಳಗೆ ಕರೆದುಕೊಂಡು ಬರುವಾಗ ಭಾಗಮ್ಮ ಟಣಕೆದಾರ ಇವಳು ನಮ್ಮ ತಾಯಿಗೆ ಸುಮ್ಮ ಸುಮ್ಮನೆ ಅವಾಚ್ಯವಾಗಿ ಬೈಯುತ್ತಾ ನಿಂತಳು. ಹೀಗಿದ್ದು ನಿನ್ನೆ ದಿನಾಂಕ 29/05/2022 ರಂದು ಮಧ್ಯಾಹ್ನ 2.00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಯಿಯಾದ ಪೀರಮ್ಮ ಗಂಡ ಬಸಪ್ಪ ಹರಿಜನ ವ|| 65 ಇವಳು ಮತ್ತು ನಮ್ಮ ಚಿಕ್ಕಮ್ಮಳಾದ ದೇವಕ್ಕೆಮ್ಮ ಗಂಡ ಭಾಗಪ್ಪ ಹರಿಜನ ವ|| 45 ಇಬ್ಬರೂ ನಮ್ಮ ಮನೆಯ ಮುಂದೆ ಮಾತನಾಡುತ್ತಾ ನಿಂತಿದ್ದಾಗ ನಮ್ಮ ಎದುರು ಮನೆಯ ಭಾಗಮ್ಮ ಟಣಕೆದಾರ ಮತ್ತು ರಾಮವ್ವ ಟಣಕೆದಾರ ಇವರು ವಿನಾಕಾರಣ ನಮ್ಮ ತಾಯಿಯವರು ನಿಂತಿದ್ದ ಸ್ಥಳದ ಹತ್ತಿರ ಬಂದು ಏನರೆಲೇ ಸೂಳೆರೇ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳೊಂದಿಗೆ ಆಟವಾಡಲು ಬಿಡಬೇಡರೀ ನೀವು ಈ ಮೊದಲೇ ತಿಪ್ಪಿ ಜಾಗದ ವಿಷಯದಲ್ಲಿ ನಮ್ಮೊಂದಿಗೆ ಜಗಳ ಮಾಡಿದ್ದೀರಿ ನಮ್ಮ ತಂಟೆಗೆ ಬರಬೇಡರೀ ಅಂತಾ ಹೇಳಿದರೂ ಮತ್ತೆ ನಿಮ್ಮ ಮಕ್ಕಳಿಗೆ ನಮ್ಮ ಮಕ್ಕಳೊಂದಿಗೆ ಆಟವಾಡಲು ಬಿಟ್ಟು ಜಗಳ ಮಾಡಿಸುತ್ತೀರಿ ರಂಡೆರೇ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಮ್ಮ ತಾಯಿ ಹಾಗೂ ಚಿಕ್ಕಮ್ಮ ಇವರು ಸುಮ್ಮನೆ ನಮಗೆ ಯಾಕೆ ಬೈಯುತ್ತಿದ್ದೀರಿ ಅಂತಾ ಕೇಳಿದ್ದಕ್ಕೆ 1) ಭಾಗಮ್ಮ ಗಂಡ ಯಲ್ಲಪ್ಪ ಟಣಕೆದಾರ 2) ರಾಮವ್ವ ಗಂಡ ಭೀಮರಾಯ ಟಣಕೆದಾರ, 3) ಭೀಮರಾಯ ತಂದೆ ಚಂದ್ರಾಮಪ್ಪ ಟಣಕೆದಾರ 4) ಚಂದ್ರಾಮಪ್ಪ ತಂದೆ ಭೀಮರಾಯ ಟಣಕೆದಾರ 5) ಯಲ್ಲಪ್ಪ ಟಣಕೆದಾರ 6) ವೆಂಕಟೇಶ ತಂದೆ ಭೀಮರಾಯ ಟಣಕೆದಾರ ಇವರೆಲ್ಲರೂ ಕೂಡಿ ಬಂದು ನಮ್ಮೊಂದಿಗೆ ಜಗಳ ತೆಗೆದು ಭಾಗಮ್ಮ ಮತ್ತು ರಾಮವ್ವ ಇಬ್ಬರೂ ಕೂಡಿ ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಕೂದಲು ಹಿಡಿದು ಜಗ್ಗಾಡಿ ನನಗೆ ನೆಲಕ್ಕೆ ಕೆಡವಿ ಹೊಡೆಯುತ್ತಿದ್ದಾಗ ನಮ್ಮ ತಾಯಿಯು ಸತ್ತೆನೆಪ್ಪೋ ಅಂತಾ ಚೀರುವ ಸಪ್ಪಳ ಕೇಳಿ ನಾನು ಮತ್ತು ನಮ್ಮ ತಮ್ಮನಾದ ಮೌನೇಶ ತಂದೆ ಬಸಪ್ಪ ಟಣಕೆದಾರ ಇಬ್ಬರೂ ಮನೆಯ ಹೊರಗಡೆ ಬಂದು ನೋಡಲಾಗಿ ಭೀಮರಾಯ ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನಮ್ಮ ತಾಯಿಯ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಚಂದ್ರಾಮಪ್ಪ ಈತನು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನಮ್ಮ ತಾಯಿಯ ಎದೆಗೆ, ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ್ದು ಅಲ್ಲದೇ ಜಗಳ ಬಿಡಿಸಲು ಹೋದ ನಮ್ಮ ಚಿಕ್ಕಮ್ಮಳಾದ ದೇವಕ್ಕೆಮ್ಮಳಿಗೆ ಕೈಗೆ, ಬೆನ್ನಿಗೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ನಮ್ಮ ತಾಯಿ ಹಾಗೂ ಚಿಕ್ಕಮ್ಮ ಇಬ್ಬರೂ ಸತ್ತೆವೆಪ್ಪೋ ಅಂತಾ ಚೀರುತ್ತಿದ್ದಾಗ ನಾನು ಮತ್ತು ನಮ್ಮ ಮೌನೇಶ ಇಬ್ಬರೂ ಕೂಡಿ ಹೋಗಿ ಜಗಳ ಬಿಡಿಸಿಕೊಂಡೆವು. ಆಗ ಅವರೆಲ್ಲರೂ ನಮ್ಮ ತಾಯಿಗೆ ಮತ್ತು ಚಿಕ್ಕಮ್ಮಳಿಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಮ್ಮ ತಾಯಿಗೆ ಮತ್ತು ಚಿಕ್ಕಮ್ಮಳಿಗೆ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದರಿಂದ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಯಾದಗಿರಿಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ವಿನಾಕಾರಣ ನಮ್ಮ ತಾಯಿಯಾದ ಪೀರಮ್ಮ ಮತ್ತು ನಮ್ಮ ಚಿಕ್ಕಮ್ಮಳಾದ ದೇವಕ್ಕಮ್ಮ ಇವರೊಂದಿಗೆ ನಮ್ಮೂರ ಬೇಡರ ಜನಾಂಗದ ಮೇಲ್ಕಾಣಿಸಿದ ಭಾಗಮ್ಮ ಟಣಕೆದಾರ ಹಾಗೂ ಇತರ 5 ಜನರು ಕೂಡಿ ಅವಾಚ್ಯವಾಗಿ ಬೈದು, ಕೈಯಿಂದ, ಬಡಿಗೆಯಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ್ದು ಮೇಲ್ಕಾಣಿಸಿದ 6 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 90/2022 ಕಲಂ 143,147,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 93/2022. ಕಲಂ. 279. 337. 338. ಐ.ಪಿ.ಸಿ.: ಇಂದು ದಿನಾಂಕ: 30/05/2022 ರಂದು 13-00 ಗಂಟೆಗೆ ಪಿಯರ್ಾದಿ ಶ್ರೀ ಮುನಾವರ ಪಾಶಾ ತಂದೆ ಬಾಸುಮೀಯಾ ಹೋಟೆಲ್ ವ|| 30 ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಹತ್ತಿಗುಡೂರ ತಾ|| ಶಹಾಪೂರ -9945087232 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶವೆನೆಂದರೆ. ದಿನಾಂಕ 29/05/2022 ರಂದು ಮದ್ಯಾಹ್ನ 2-15 ಗಂಟೆಯ ಸುಮಾರಿಗೆ ನಾನು ಹತ್ತಿಗುಡೂರದಲ್ಲಿ ಇದ್ದಾಗ ನನ್ನ ಅಳಿಯನಾದ ಮಹ್ಮದ ಫಾರೂಕ ತಂದೆ ಮೌಲಾಲಿ ಬಳಗಾರ ಈತನು ನನಗೆ ಫೋನ ಮಾಡಿ ತಿಳಿಸಿದ್ದೆನೆಂದರೆ. ನಾನು ಮತ್ತು ಶಮರ್ುದ್ದಿನ್ ತಂದೆ ಮಹಿಬೂಬ ಕೋಬರ್ಾ ಇಬ್ಬರು ಸುರೇಶ ತಂದೆ ಮೌನೇಶ ಸಾ|| ವಿಧ್ಯಾನಗರ ಶಹಾಪೂರ ಇವರ ಗುಜರಿಸಾಮಾನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಂದ ನಾನು ಮತ್ತು ಶಮರ್ುದ್ದಿನ್ ಇಬ್ಬರು ಕೂಡಿ ನೀರು ತೆಗೆದುಕೊಂಡು ಬರಲು ನನ್ನ ಮೋಟರ್ ಸೈಕಲ್ ನಂ ಕೆಎ-33 ಜೆ-6273 ನೇದ್ದರ ಮೇಲೆ ಚಾಂದ ಪೆಟ್ರೊಲ್ ಪಂಪಗೆ ಬಂದು. ಅಲ್ಲಿಂದ ನೀರು ತೆಗೆದುಕೊಂಡು ಮರಳಿ ಸುರೇಶ ಇವರ ಗುಜರಿ ಅಂಗಡಿಗೆ ಹೋಗುತ್ತಿರುವಾಗ ನಾನು ನನ್ನ ಮೋಟರ್ ಸೈಕಲ್ ಚಲಾಯಿಸುತ್ತಿದ್ದೆನು. ನನ್ನ ಹಿಂದೆ ಶಮರ್ುದ್ದಿನ್ ಈತನು ಕುಳಿತುಕೊಂಡಿದ್ದನು. ನಾನು ನನ್ನ ಮೋಟರ್ ಸೈಕಲ್ ಚಲಾಯಿಸುತ್ತ ಸುರಪೂರ ಕಲಬುರಗಿ ಮುಖ್ಯ ರಸ್ತೆಯ ಮೇಲೆ ಜಬ್ಬಿ ಫಂಕ್ಷನ್ ಹಾಲ ಮುಂದೆ ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ. ಯಾವುದೆ ಸಿಗ್ನಲ್, ಇಂಡಿಕೆಟರ್ ಹಾಕದೆ ನನ್ನ ಮೋಟರ್ ಸೈಕಲ್ ಒಮ್ಮಲೆ ಬಲಗಡೆಗೆ ಹೊಳ್ಳುಸುತ್ತಿರುವಾಗ ನನ್ನ ಹಿಂದಿನಿಂದ ಅಂದರೆ ಶಹಾಪೂರದ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಹಿಂದೆ ಒಬ್ಬ ಹುಡುಗನಿಗೆ ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಹಿಂದೆ ಡಿಕ್ಕಿಪಡಿಸಿ ಅಪಘಾತಮಾಡಿದ್ದು ಇರುತ್ತದೆ. ಅಪಘಾತದಲ್ಲಿ ನಮಗೆ ಬಾರಿ ಗಾಯಗಳು ಆಗಿರುತ್ತವೆ. ಅಂತ ತಿಳಿಸಿದ್ದರಿಂದ. ನಾನು ಅಪಘಾತವಾದ ಸ್ಥಳಕ್ಕೆ ಬಂದು ಮಹ್ಮದ್ ಫಾರುಕನಿಗೆ ಮತ್ತು ಶಮರ್ುದ್ದಿನ ಇವರಿಗೆ ನೋಡಿ ವಿಚಾರಿಸಿದ್ದು. ಸದರಿ ಅಫಘಾತದಲ್ಲಿ ಮಹ್ಮದ ಫಾರುಕ ಈತನಿಗೆ ತಲೆಯಹಿಂದೆ ಗುಪ್ತಗಾಯ, ಎಡಗೈ ಹಸ್ತದ ಕಿಲಿಗೆ ರಕ್ತಗಾಯ, ಬಲಗಾಲಿಗೆ ತೊಡಿಗೆ ಗುಪ್ತಗಾಯವಾಗಿರುತ್ತದೆ, ಶಮರ್ುದ್ದಿನ್ ಇವರಿಗೆ ತಲೆಗೆ ಗುಪ್ತಗಾಯ, ಬಲಗಡೆ ಹಣೆಗೆ ಭಾರಿ ರಕ್ತಾಯ, ಬಲಗಡೆ ಕಪಳಕ್ಕೆ, ಮುಗಿಗೆ ರಕ್ತಾಯ. ಎಡಗೈ ಬೆರಳುಗಳಿಗೆ ತರಚಿದ ಗಾಯ ಎರಡು ಮೋಳಕಾಲುಗಳಿಗೆ ರಕ್ತಗಾಯವಾಗಿದ್ದು ಇರುತ್ತದೆ. ಸದರಿ ಅಪಘಾತವಾದ ಮೋಟರ್ ಸೈಕಲ್ ಚಾಲಕನು ಅಲ್ಲೆ ಇದ್ದು ಸದರಿಯವನ ಹೆಸರು ವಿಚಾರಿಸಲಾಗಿ ತನ್ನ ಹೆಸರು ವೆಂಕಟೇಶ ತಂದೆ ಬೈರಪ್ಪ ಸಾಸವಿಗೇರಾ ಸಾ|| ರಾಮನಾಳ ತಾ|| ದೇವದುರ್ಗ ಅಂತ ತಿಳಿಸಿದನು ಇವನ ಹಣೆಗೆ, ಮುಖಕ್ಕೆ, ತರಚಿದ ಗಾಯ ಮೂಗಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಬಂದಿರುತ್ತದೆ ಎಡಗೈ ಹಸ್ತಕ್ಕೆ ಭಾರಿ ರಕ್ತಗಾಯ, ಎರಡು ಮೋಳಕಾಲಿಗೆ ರಕ್ತಗಾಯ, ಎರಡು ಕಾಲೀನ ಬೆರಳುಗಳಿಗೆ ತರಚಿದ ಗಾಯವಾಗಿದು ಇರುತ್ತದೆ. ಹಿಂದುಡೆಯ ಸವಾರನಾದ ರವಿ ತಂದೆ ಶರಣಪ್ಪ ಕಂದಾಳ ಸಾ|| ರಾಮನಾಳ ತಾ|| ದೇವದುರ್ಗ ಈತನಿಗೆ ಬಲಗೈ ಮೋಳಕೈಗೆ ತರಚಿದ ಗಾಯ, ಎಡಗಾಲು ಮೋಳಕಾಲಿಗೆ ತರಚಿದ ಗಾಯ, ಸದರಿ ಅಪಘಾತವಾದ ಯಮಹಾ ಕಂಪನಿಯ ಮೋಟರ್ ಸೈಕಲ್ ನಂ ಇರುವುದಿಲ್ಲಾ ಅದರ ಚೆಸ್ಸಿ ನಂ ಒಇ1ಖಉ6824ಓ0002750 ನೇದ್ದು ಇದ್ದು ಜಖಂ ಗೊಂಡಿರುತ್ತದೆ ಮತ್ತು ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ ಕೆಎ-33 ಜೆ-6273 ನೇದ್ದು ಜಖಂ ಗೊಡಿರುತ್ತದೆ. ಆಗ ನಾನು ಮತ್ತು ರವಿ ಇಬ್ಬರು ಕೂಡಿ ಅಲ್ಲೆ ಹೋರಟಿದ್ದ ಒಂದು ಆಟೋದಲ್ಲಿ ಮಹ್ಮದ ಫಾರುಕನಿಗೆ ಮತ್ತು ಶಮರ್ುದ್ದಿನನಿಗೆ, ವೆಂಕಟೇಶನಿಗೆ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆಮಾಡಿದೆವು. ಮಹ್ಮದ ಫಾರುಕನು ಶಮರ್ುದ್ದಿನ್ ತಂದೆಯಾದ ಮೈಬೂಬಸಾಬನಿಗೆ ಫೊನ ಮಾಡಿದ್ದರಿಂದ ಮೈಹಿಬೂಬ ಸಾಬನು ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಿದ್ದು ಇರುತ್ತದೆ. ಮಹ್ಮದ ಫಾರೂಕನಿಗೆ ಮತ್ತು ಶಮರ್ುದ್ದಿನ ಇವರಿಗೆ ಉಪಚಾರ ಮಾಡಿದ ವೈದ್ಯ್ಯಾಧಿಕಾರಿಗಳು ಹೆಚ್ಚಿ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮೈಹಿಬೂಬ ಸಾಬನು ಒಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗಿ ಕಲಬುರಗಿಯ ಜೀಮ್ಸ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಅಪಘಾತವು ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಜಬ್ಬಿ ಪಂಕ್ಷನ್ ಹಾಲ ಮುಂದೆ ಜರುಗಿರುತ್ತದೆ. ರವಿಗೆ ಸಣ್ಣ ಪುಟ್ಟ ಗಾಯವಾಗಿದ್ದರಿಂದ ಉಪಚಾರ ಮಾಡಿಸಿಕೊಂಡಿರುವುದಿಲ್ಲ. ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ.
ಕಾರಣ ಮಹ್ಮದ ಫಾರೂಕನು ತನ್ನ ಮೋಟರ್ ಸೈಕಲ್ ನಂ ಕೆಎ-33 ಜೆ-6273 ನೇದ್ದನ್ನು ಯಾವುದೆ ಸಿಗ್ನಲ್, ಇಂಡಿಕೇಟರ್ ಹಾಕದೆ ಹೊಳ್ಳುಸುತ್ತಿರುವಾಗ. ವೆಂಕಟೇಶನು ತನ್ನ ಮೋಟರ್ ಸೈಕಲ್ ಚೆಸ್ಸಿ ನಂ ಒಇ1ಖಉ6824ಓ0002750 ನೇದ್ದನ್ನು ಚಲಾಸಿಕೊಂಡು ಬಂದು ಅಪಾಘತ ಪಡಿಸಿದ್ದು ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 93/2022 ಕಲಂ: 279, 337, 338, ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 46/2022 ಕಲಂ 78 (3) ಕೆ.ಪಿ ಯಾಕ್ಟ : ದಿನಾಂಕ:30/05/2022 ರಂದು ಮದ್ಯಾಹ್ನ 15.30 ಗಂಟೆಯ ಸುಮಾರಿಗೆ ಆರೋಪಿತನು ಕಾಮನಟಗಿ ಗ್ರಾಮದ ಗ್ರಾಮ ಪಂಚಾಯತಿಯ ಹತ್ತಿರ ಇರುವ ವಾಲ್ಮೀಕಿ ಚೌಕ್ ಹತ್ತಿರ ಮುಂದಿನ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿಯರ್ಾದಿಯು ಪಂಚರು ಹಾಗೂ ಠಾಣೆಯ ಸಿಬ್ಬಂದಿಯರೊಂದಿಗೆ ಹೋಗಿ ಮದ್ಯಾಹ್ನ 16.00 ಗಂಟೆಗೆ ದಾಳಿ ಮಾಡಿದ್ದು ಆರೋಪಿತನಿಂದ 1240=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 30/05/2022 ರಂದು, 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶ್ರೀನಿವಾಸ್ ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 30/05/2022 ರಂದು, ಮಧ್ಯಾಹ್ನ 15-30 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರದ ಪೊಲೀಸ್ ಠಾಣಾ ವ್ಯಾಪ್ತಿಯ ಇಬ್ರಾಹಿಂಪೂರ ಗ್ರಾಮದ ಹನುಮಾನ ಗುಡಿಯ ಮುಂದೆ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿಯವರಾದ ಸಂಜಿವಕುಮಾರ ಹೆಚ್.ಸಿ.173. ಮಂಜುನಾಥ ಪಿ.ಸಿ. 271 ಮುತ್ತಪ್ಪ ಪಿ.ಸಿ.118. ಸಿದ್ರಾಮಯ್ಯ ಪಿ.ಸಿ 258 ಜೀಪಚಾಲಕ ಮಾಳಪ್ಪ ಎ.ಪಿ.ಸಿ. 93. ಮತ್ತು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಬಸವರಾಜ ತಂದೆ ನಿಂಗಪ್ಪ ಮೇಲಗೌಲಿ ವ|| 47 ಜಾ|| ಬೇಡರ ಉ|| ಮಟಕಾ ಬರೆದುಕೊಳ್ಳೂವದು ಸಾ|| ಇಬ್ರಾಹಿಂಪೂರ. ತಾಃ ಶಹಾಪೂರ. ಜಿಃ ಯಾದಗಿರಿ ಈತನ್ನು ಹಿಡಿದು ಅವನ ಹತ್ತಿರವಿದ್ದ ನಗದು ಹಣ 5200-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು. ಈ ಬಗ್ಗೆ ಸದರಿಯವನಿಗೆ ಹಣ ಪಡೆದು ಮಟಕಾ ಅಂಕಿಸಖ್ಯೆಗಳನ್ನು ಬರೆದುಕೊಂಡ ಹಣ ಮತ್ತು ಅಂಕಿಸಂಖ್ಯೆಗಳ ಚೀಟಿ ಯಾರಿಗೆ ಕೊಡುತ್ತಿ ಅಂತ ವಿಚಾರಿಸಲಾಗಿ ಮಹೇಶ ತಂದೆ ದೇವಪ್ಪ ಕಡ್ಡೆರ ಸಾ|| ಹೀರೆಅಗಸಿ ಯಾದಗಿರಿ ಇವರಿಗೆ ತೆಗೆದುಕೊಂಡು ಹೋಗಿ ಈ ಹಣ ಮತ್ತು ಮಟಕಾ ಅಂಕಿಸಂಖ್ಯೆಗಳ ಚೀಟಿಯನ್ನು ಕೊಡುತ್ತೆನೆ. ಆಗ ಮಹೇಶ ಈತನು ನನಗೆ 100 ರೂಪಾಯಿಗೆ 10 ರೂಪಾಯಿ ಕಮಿಷನ್ ಕೊಡುತ್ತಾನೆ ಅಂತ ತಿಳಿಸಿದನು. ಆರೋಪಿತಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 94/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.