ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-07-2021

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 118/2021, ಕಲಂ. 341,323,324,504.506. ಸಂ.34 ಐ ಪಿ ಸಿ : ದಿನಾಂಕ: 30-07-2021 ರಂದು ಬೆಳಿಗ್ಗೆ 10-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 29-07-2021 ರಂದು ರಾತ್ರಿ 08-00 ಗಂಟೆ ಸುಮಾರಿಗೆ ನಾನು ಬೆಂಗಲೂರಿಗೆ ಹೋಗಲು ಬಳಿಚಕ್ರ ಗ್ರಾಮದ ಗೇಟ ಹತಿರ ಇರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಲೇ ಸೂಳೆ ಮಕ್ಕಳೆ ನಮ್ಮ ಹೊಲವನ್ನು ಶಾಂತರಾಜಪ್ಪ ಇವರಿಗೆ ರಜೀಸ್ಟರ ಮಾಡಿಸು ಸೂಳೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ಬಗ್ಗೆ.

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ : 53/2021 ಕಲಂ 78(3) ಕೆಪಿ ಯ್ಯಾಕ್ಟ : ದಿನಾಂಕ 30/07/2021 ರಂದು 08.00 ಪಿ.ಎಮ್.ಕ್ಕೆ ಭೀ.ಗುಡಿಯಕೆಬಿಜೆಎನ್ಎಲ್ ಐ.ಬಿ, ಹತ್ತಿರಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 8.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 9.10 ಪಿ.ಎಮ್.ಕ್ಕೆ ದಾಳಿ ಮಾಡಿಆರೋಪಿತನಿಂದ 1) ನಗದು ಹಣರೂಪಾಯಿ 5870=00, 2) ಮಟಕಾ ನಂಬರ ಬರೆದಒಂದುಚೀಟಿ 3) ಒಂದು ಬಾಲ್ ಪೆನ್, 4) ಒಂದುಒಪ್ಪೋಕಂಪನಿಯಒಂದು ಮೊಬೈಲ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದಕ್ರಮ ಜರುಗಿಸಿದ ಬಗ್ಗೆ.

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 57/2021 ಕಲಂ : 279, 337 338 ಐಪಿಸಿ ಸಂ. 187 ಐ.ಎಮ್.ವ್ಹಿ ಕಾಯ್ದೆ : ಫಿರ್ಯಾದಿಯ ತಮ್ಮನಾದ ಬಸವರಾಜ ಹಾಗೂ ಅದೇ ಊರಿನ ಭೀಮರಾಯ ಇವರು ಕೂಡಿಕೊಂಡು ಫಿರ್ಯಾದಿದಾರನ ಮೋಟಾರ್ ಸೈಕಲ್ ನಂ: ಕೆಎ-28 ಡಬ್ಲ್ಯೂ-3511 ಪಲ್ಸರ್ ಗಾಡಿ ತೆಗೆದುಕೊಂಡು ಹುಣಸಗಿ ಹತ್ತಿರ ಇರುವ ಕಾಯಿಯವರ ಪೆಟ್ರೋಲ್ ಪಂಪನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಮರಳಿ ಕಾಮನಟಗಿ ಗ್ರಾಮಕ್ಕೆ ಹೊರಟಾಗ ಎದರುಗಡೆಯಿಂದ ಯಾವುದೋ ಒಂದು ಅಟೋ ಟಂ-ಟಂ ಚಾಲಕನು ಲೈಟ್ ಇಲ್ಲದೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಗಾಯಾಳುಗಳು ಹೊರಟ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಗಾಯಾಳುಗಳಿಬ್ಬರೂ ಕೆಳಗೆ ಬಿದ್ದು, ಬಲಗಾಲ ಮೊಣಕಾಲ ಹತ್ತಿರ & ತೊಡೆಯ ಹತ್ತಿರ ಎಲುಬು ಮುರಿದು ಭಾರೀ ರಕ್ತಗಾಯಗಳಾದ ಬಗ್ಗೆ ಅಪರಾಧ.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 119/2021 ಕಲಂ. 279, 338 ಐಪಿಸಿ: ಇಂದು ದಿನಾಂಕ: 30.07.2021 ರಂದು ಮಧ್ಯಾಹ್ನ 1.00 ಗಂಟೆಗೆ ರಾಯಚೂರ ಬಾಲಂಕು ಆಸ್ಪತ್ರೆಯಿಂದ ಎಮ್ ಎಲ್ ಸಿ ಬಂದಿದ್ದರಿಂದ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ರೋಶನ ತಂದೆ ಸದರ್ಾರ ಖಾನ ವಯ|| 30 ವರ್ಷ, ಜಾ|| ಮುಸ್ಲಿಂ, ಉ|| ಕ್ಲೀನರ ಸಾ|| ಮಾಲೂರ ತಾ|| ಮಾಲೂರ ಜಿ|| ಕೋಲಾರ ಈತನ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ:29.07.2021 ರಂದು ನಾನು ಐಶರ ಪ್ರೋ ವಾಹನ ಮಾಲಿಕರು ಮತ್ತು ಚಾಲಕರಾದ ಇಫರ್ಾನ ತಂದೆ ಅಬ್ದುಲ್ ರಹೀಮ @ ಆಸ್ರಫ್ ವಯ|| 33 ವರ್ಷ, ಜಾ|| ಮುಸ್ಲಿಂ, ಉ|| ಐಶರ ಮಾಲಿಕ ಸಾ|| ಕೆ.ಜಿ. ಮೊಹೆಲ್ಲಾ 1 ನೇ ಕ್ರಾಸ ಕೋಲಾರ ತಾ|| ಜಿ|| ಕೋಲಾರ ಇವರೊಂದಿಗೆ ಕೋಲಾರದಿಂದ ಟೊಮೊಟೋ ತೆಗೆದುಕೊಂಡು ರಾಯಚೂರ, ಯಾದಗಿರಿ ಮಾರ್ಗವಾಗಿ ಶಹಾಪೂರಕ್ಕೆ ಹೊರಟಿದ್ದೇವು. ದಿನಾಂಕ. 30.07.2021 ರಂದು 4-30 ಗಂಟೆಗೆ ಸೈದಾಪೂರದ ಕರಿಬೆಟ್ಟ ಕ್ರಾಸ ಹತ್ತಿರ ಹೊರಟಿದ್ದಾಗ ನಮ್ಮ ಐಶರ ವಾಹನ ನಂ. ಕೆಎ-07, ಎ-5539 ನಡೆಸುತ್ತಿದ್ದ ನಮ್ಮ ವಾಹನ ಮಾಲಿಕ ಮತ್ತು ಚಾಲಕ ಇಫರ್ಾನ ಇವರು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಕರಿಬೆಟ್ಟ ಹತ್ತಿರದ ಎನ್.ಎಚ್. -150 ಹೈವೇ ರೋಡಿನ ಮೇಲೆ ಪಕ್ಕಕ್ಕೆ ನಿಲ್ಲಿಸಿದ್ದ ಟ್ಯಾಕ್ಟರ ಇಂಜಿನ ನಂ.ಎ.ಪಿ-22, ವಾಯ್- 4693 ಮತ್ತು ಟ್ರಾಲಿ ನಂ. ಎ.ಪಿ-22, ವಾಯ್- 4694 ನೇದ್ದಕ್ಕೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಮ್ಮ ಐಶರ ವಾಹನ ಪಲ್ಟಿಯಾಗಿ ಬಿದ್ದಿದ್ದು ಸದರಿ ವಾಹನದ ಡೋರ ತೆಗೆದಿದ್ದರಿಂದ ಅಲ್ಲಿಂದ ಚಾಲನೆ ಮಾಡುತ್ತಿದ್ದ ಇಫರ್ಾನ ಇವರು ವಾಹನದಿಂದ ಕೆಳಗೆ ಜಿಗಿದಿದ್ದು, ವಾಹನದಲ್ಲಿದ್ದ ನನಗೆ ಎಡಗಾಲು ಮೊಣಕಾಲು ಮೇಲೆ ಮತ್ತು ಬಲಗಾಲು ತೊಡೆ ಹಾಗೂ ಮೊಣಕಾಲು ಕೆಳಗೆ ಭಾರಿ ಒಳಪೆಟ್ಟಾಗಿರುತ್ತದೆ. ಮತ್ತು ಎಡಗೈ ಮುಂಗೈ ಮಣಿಕಟ್ಟಿಗೆ ಭಾರಿ ಒಳಪೆಟ್ಟಾಗಿರುತ್ತದೆ. ಎದಗೆ ಗುಪ್ತಗಾಯವಾಗಿರುತ್ತದೆ. ಐಶರ ಮಾಲಿಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶ ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 173/2021 ಕಲಂ 504 ಐಪಿಸಿ : ಇಂದು ದಿನಾಂಕ 30/07/2021 ರಂದು ಶ್ರೀ ಶಾಮಸುಂದರ ಪಿ,ಎಸ್,ಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ದಿನಾಂಕ:24/07/2021 ರಂದು ಮಧ್ಯಾಹ್ನ 1.30 ಗಂಟೆ ಸುಮಾರಿಗೆ ನೆರೆಹಾವಳಿ ಪ್ರದೇಶಗಳ ಬೇಟಿ ಪ್ರಯುಕ್ತ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರ್.ಶಂಕರ್ ರವರು ಶಹಾಪೂರ ಪೊಲೀಸ್ ಠಾಣಾ ಸರಹದ್ದಿಯ ಎಮ್. ಕೊಳ್ಳೂರು ಗ್ರಾಮದಿಂದ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕೃಷ್ಣಾ ನದಿ ಪ್ರವಾಹದಿಂದ ಮುಳುಗಡೆಯಾಗಿದ್ದರಿಂದ ಸದರಿ ಸ್ಥಳಕ್ಕೆ ಬೇಟಿ ನೀಡಲು ಜಿಲ್ಲಾ ಉಸ್ತುವಾರಿ ಸಚಿವರು ಬಂದಿದ್ದು ಆ ಸಮಯದಲ್ಲಿ ಕೊಳ್ಳೂರು ಗ್ರಾಮಸ್ಥರ ಅಹವಾಲುಗಳನ್ನು ವಿಚಾರಿಸುತ್ತಿರುವಾಗ ಬಸಪ್ಪ ತಂದೆ ಮಲ್ಲಯ್ಯ ಭಂಗಿ ಸಾ: ಎಂ.ಕೊಳ್ಳುರು ಎಂಬ ವ್ಯಕ್ತಿ ಬಂದು ಯಾವ ಸೂಳೆ ಮಕ್ಕಳು ಬಂದು ಏನು ಮಾಡುತ್ತಾರೆ ? ನಮಗೆ ಬೆಳೆ ಪರಿಹಾರ ಸಿಕ್ಕಿಲ್ಲ ಅಂತ ಅವಾಚ್ಯವಾಗಿ ಕೂಗಾಡುತ್ತಾ ಗಲಾಟೆ ಮಾಡುತ್ತಿದ್ದನು ಅಲ್ಲಿ ಬಂದೋಬಸ್ತ ಕರ್ತವ್ಯಕ್ಕೆ ನಿಯೋಜಿಸಲ್ಲಟ್ಟ ನಾನು ಮತ್ತು ಶ್ರೀ ಸಿದ್ದಾರೂಡ ಎಎಸ್ಐ, ದೇವರಾಜ ಸಿಪಿಸಿ-282, ಭೀಮನಗೌಡ ಸಿಪಿಸಿ-402 ಹಾಗೂ ಎಂ.ಕೊಳ್ಳೂರು ಗ್ರಾಮಸ್ಥರಾದ ಹೊನ್ನಯ್ಯ ತಂದೆ ಮಾರ್ಥಂಡಪ್ಪ ಗಟ್ಟಿ ಮತ್ತು ಇತರರು ಬಂದು ಆತನನ್ನು ಸಮಾಧಾನ ಮಾಡಿ ಕಳುಹಿಸಿದೇವು. ಈ ದಿನದ ವರೆಗೆ ಪರಿಶೀಲನೆ ಮಾಡಲಾಗಿ ಗಲಾಟೆ ಮಾಡಿದ ಬಸಪ್ಪ ತಂದೆ ಮಲ್ಲಯ್ಯ ಭಂಗಿ ಸಾ:ಎಮ್.ಕೊಳ್ಳೂರು ಎಂಬ ವ್ಯಕ್ತಿ ಈಗಾಗಲೆ ಕಂದಾಯ ಇಲಾಖೆಯಿಂದ ಪರಿಹಾರ ಪಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿರುತ್ತದೆ. ಸದರಿ ವ್ಯಕ್ತಿಯು ಬೆಳೆ ಪರಿಹಾರ ಪಡೆದುಕೊಂಡಿದ್ದರ ಬಗ್ಗೆ ಕಂದಾಯ ಇಲಾಖೆಯಿಂದ ಖಚಿತ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ದೂರು ನೀಡಲು ತಡವಾಗಿರುತ್ತದೆ. ಕಾರಣ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕುರಿತು ಬಂದಾಗ ದುರುದ್ದೇಶ ಪೂರ್ವಕವಾಗಿ ಅವಾಚ್ಯವಾಗಿ ಬೈದಾಡುತ್ತಾ ಗಲಾಟೆ ಮಾಡಿದ ಬಸಪ್ಪ ತಂದೆ ಮಲ್ಲಯ್ಯ ಭಂಗಿ ಸಾ: ಎಂ.ಕೊಳ್ಳುರು ಎಂಬುವವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಠಾಣೆಯ ಎನ್,ಸಿ ನಂ.42/2021 ನೇದ್ದು ದಾಖಲಿಸಿಕೊಂಡು ಠಾಣೆಯ ಪಿಸಿ-344 ರವರ ಮೂಲಕ ಮಾನ್ಯ ನ್ಯಾಯಲಯದಿಂದ ಪರವಾನಿಗೆ ಪಡೆದುಕೊಂಡು 10-30 ಪಿ,ಎಮ್ ಕ್ಕೆ ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.173/2021 ಕಲಂ 504 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 31-07-2021 12:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080