Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-07-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 119/2022 ಕಲಂ 279,338, 304(ಎ) ಐಪಿಸಿ ಮತ್ತು 187 ಐ.ಎಮ್.ವಿಆಕ್ಟ್ : ಇಂದು ದಿನಾಂಕಃ 30-07-2022 ರಂದು 1-30 ಪಿ.ಎಮ್ ಕ್ಕೆ ಶ್ರೀ ಸಿದ್ದಪ್ಪ ತಂದೆಯಲ್ಲಪ್ಪ ಪೂಜಾರಿಸಾಃ ಕೊಳಿಹಾಳ ತಾ: ಹುಣಸಗಿಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನತಂದೆಯವರಿಗೆ ಮತ್ತು ನನ್ನದೊಡ್ಡಪ್ಪನಾದ ರೇವಣಸಿದ್ದಪ್ಪ, ಚಿಕ್ಕಪ್ಪನಾದ ನಂದಪ್ಪ ಹಾಗು ನಮ್ಮೂರಿನ ಶಿವಣ್ಣ ತಂದೆ ಶಾಂತಪ್ಪ ಪೂಜಾರಿಎಲ್ಲರಿಗೆ ಕೃಷಿ ಪತ್ತಿನ ಸಹಕಾರ ಸಂಘ ಕೊಳಿಹಾಳದಲ್ಲಿ ಸಾಲ ಮಂಜೂರಾಗಿರುತ್ತದೆ. ಆದ್ದರಿಂದಅವರು 04 ಜನರುಇಂದು ದಿ: 30/07/2022 ರಂದು ಮುಂಜಾನೆ ಸುರಪೂರದಲ್ಲಿರುವ ಸಹಕಾರಿ ಬ್ಯಾಂಕಿಗೆ ಹೋಗಿ ಸಾಲದ ಹಣತಗೆದುಕೊಂಡು ಬರುತ್ತೇವೆಅಂತ ಹೇಳಿ ತಯಾರಾಗಿದ್ದರು. ನಂತರ ನನ್ನಚಿಕ್ಕಪ್ಪ ನಂದಪ್ಪ ಹಾಗು ದೊಡ್ಡಪ್ಪ ರೇವಣಸಿದ್ದಪ್ಪ ಇಬ್ಬರೂ ನಮ್ಮ ಹಿರೋ ಹೆಚ್.ಎಫ್ಡಿಲಕ್ಸ್ ಮೋಟಾರ ಸೈಕಲ್ ನಂಬರ ಕೆ.ಎ 33 ಎಕ್ಸ್ 8500 ನೇದ್ದರ ಮೇಲೆ ಹೋಗಿದ್ದು, ಸದರಿ ಮೋಟಾರ ಸೈಕಲ್ ನಂದಪ್ಪನು ನಡೆಸುತ್ತಿದ್ದನು. ನನ್ನತಂದೆಯಾದಯಲ್ಲಪ್ಪ ಹಾಗು ಶಿವಣ್ಣ ತಂದೆ ಶಾಂತಪ್ಪಇಬ್ಬರೂಅವರ ಹಿಂದೆಇನ್ನೊಂದು ಮೋಟಾರ ಸೈಕಲ್ ಮೇಲೆ ಸುರಪೂರ ಹೋಗಿದ್ದುಇರುತ್ತದೆ. ಬಳಿಕ ಮದ್ಯಾಹ್ನ 12-00 ಗಂಟೆ ಸುಮಾರಿಗೆ ನಾನು ಹುಣಸಗಿಯಲ್ಲಿದ್ದಾಗ ನನ್ನತಂದೆಯವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾವು ಎರಡು ಮೋಟಾರ ಸೈಕಲಗಳ ಮೇಲೆ ಸುರಪೂರಕಡೆಗೆ ಹೊರಟಿದ್ದಾಗಚಿಕ್ಕಪ್ಪ ನಂದಪ್ಪನ ಮೋ.ಸೈಕಲ್ ಮುಂದುಗಡೆ ಹೊರಟಿದ್ದು, ನಾವು ಅವರ ಹಿಂದುಗಡೆ ಹೊರಟಿದ್ದೇವು. ನಾವು ದೇವಾಪೂರಕ್ರಾಸ್ದಾಟಿ ಸುರಪೂರ ಲಿಂಗಸುಗೂರ ಹೆದ್ದಾರಿ ಮೇಲೆ ಹಾವಿನಾಳ ಕ್ರಾಸ್ ಹತ್ತಿರ ಹೊರಟಿದ್ದಾಗ 11-45 ಎ.ಎಮ್ ಸುಮಾರಿಗೆತಿರುವುರಸ್ತೆಯಲ್ಲಿ ಸುರಪೂರಕಡೆಯಿಂದ ಲಾರಿ ನಂಬರ ಕೆ.ಎ 34 ಬಿ 5475 ನೇದ್ದರ ಚಾಲಕನು ತನ್ನ ಲಾರಿಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದವನೇ ನಿನ್ನಚಿಕ್ಕಪ್ಪ ಹಾಗು ದೊಡ್ಡಪ್ಪಇಬ್ಬರೂ ಹೊರಟಿದ್ದ ಮೋ.ಸೈಕಲಿಗೆ ಜೋರಾಗಿ ಡಿಕ್ಕಿಪಡಿಸಿದರಿಂದ ಇವರಿಬ್ಬರೂತಮ್ಮ ಮೋ.ಸೈಕಲ್ ಸಮೇತರಸ್ತೆಯ ಪಕ್ಕದಲ್ಲಿ ಹೋಗಿ ಬಿದ್ದರು. ತಕ್ಷಣ ನಾನು ಮತ್ತು ಶಿವಣ್ಣ ಹಾಗು ಅಪಘಾತಪಡಿಸಿದ ಲಾರಿ ಚಾಲಕ ಮೂವರುಕೂಡಿಗಾಯಗೊಂಡು ನರಳಾಡುತ್ತಿದ್ದ ಇಬ್ಬರಿಗೂ ಎಬ್ಬಿಸಿ ರಸ್ತೆಯ ಪಕ್ಕ ಮಲಗಿಸಿ ನೋಡಲಾಗಿ ರೇವಣಸಿದ್ದಪ್ಪನ ಎಡಗಣ್ಣಿನ ಹುಬ್ಬಿಗೆ, ಗದ್ದಕ್ಕೆ, ಎಡಗೈ ಹಸ್ತದ ಮಣಿಕಟ್ಟಿಗೆ ಮತ್ತುಎಡಮೊಣಕಾಲಿಗೆ ಭಾರಿ ರಕ್ತಗಾಯಗಳಾಗಿದ್ದು ಬಲಕಿವಿಯಿಂದ ಮತ್ತು ಮೂಗಿನಿಂದರಕ್ತಸ್ರಾವ ಆಗಿ ಪ್ರಜ್ಞೆತಪ್ಪಿರುತ್ತದೆ. ನಂದಪ್ಪನಿಗೆ ನೋಡಲಾಗಿ ಹಣೆಗೆ, ಮೂಗು, ಬಾಯಿ, ಕುತ್ತಿಗೆ ಹಾಗು ಎರಡು ಮೊಣಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತದೆ, ನೀನು ಬೇಗ ಸುರಪೂರಕ್ಕೆ ಬಾ ಅಂತ ತಿಳಿಸಿದನು. ಆದ್ದರಿಂದ ನಾನು ಹುಣಸಗಿಯಿಂದಅವಸರವಾಗಿಕಾರಿನಲ್ಲಿ ಸುರಪೂರ ಸಕರ್ಾರಿಆಸ್ಪತ್ರೆಗೆ ಬಂದು ನನ್ನದೊಡ್ಡಪ್ಪ ರೇವಣಸಿದ್ದಪ್ಪನ ಮೃತದೇಹ ನೋಡಿದ್ದು, ನನ್ನತಂದೆಯವರಿಗೆ ವಿಚಾರಿಸಲಾಗಿಇಬ್ಬರಿಗೂಅಪಘಾತ ಸ್ಥಳದಿಂದ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸುರಪೂರಕ್ಕೆತರುವಾಗ ಮಾರ್ಗಮದ್ಯೆ 12-15 ಪಿ.ಎಮ್ ಸುಮಾರಿಗೆ ರೇವಣಸಿದ್ದಪ್ಪನು ಸುರಪೂರ ಹಳೆ ಬಸ್ ನಿಲ್ದಾಣದ ಹತ್ತಿರ ಮೃತಪಟ್ಟಿರುತ್ತಾನೆಅಂತ ತಿಳಿಸಿರುತ್ತಾನೆ. ಹಾಗು ಅಪಘಾತಪಡಿಸಿದ ಬಳಿಕ ಲಾರಿ ಚಾಲಕನು ಗಾಯಾಳುಗಳು ನರಳಾಡುತ್ತಿರುವದನ್ನು ನೋಡಿ ಲಾರಿ ಬಿಟ್ಟು ಓಡಿ ಹೋಗಿದ್ದುಆತನ ಹೆಸರು ಸಂತೋಷತಂದೆ ಹಿರಿಯಣ್ಣಕವಲೂರ ಸಾ: ಭಾನಾಪೂರತಾ: ಯಲಬುಗರ್ಾ ಜಿ: ಕೊಪ್ಪಳ ಅಂತ ಹೇಳಿರುವ ಬಗ್ಗೆ ನಮ್ಮತಂದೆಯವರಿಂದ ಕೇಳಿ ಗೊತ್ತಾಗಿರುತ್ತದೆ. ಕಾರಣ ಅಪಘಾತಪಡಿಸಿದ ಲಾರಿ ಚಾಲಕನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 119/2022 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿಆಕ್ಟ್ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 120/2022 ಕಲಂ 379 ಐ.ಪಿ.ಸಿ. : ಇಂದು ದಿನಾಂಕ:30/07/2022 ರಂದು 3:00 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿ ಶ್ರೀ ಸಿದ್ದಣ್ಣ ಪಿಎಸ್ಐ ಸುರಪೂರ ಠಾಣೆ ರವರು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರುಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:30/07/2022 ರಂದು ಬೆಳಿಗ್ಗೆ 12 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ, ಯಾರೋ ಒಬ್ಬ ವ್ಯಕ್ತಿ ತನ್ನ ಜೆ.ಸಿ.ಬಿ. ಮುಖಾಂತರ ದೆವಾಪುರ ಸೀಮಾಂತರದ ಹಳ್ಳದ ಪಾತ್ರದಿಂದ ಮರಳನ್ನು ಕಳ್ಳತನದಿಂದ ಸಂಗ್ರಹಣೆ ಮಾಡುತ್ತಿದ್ದು, ಇನ್ನೊಬ್ಬ ವ್ಯಕ್ತಿಯು ಸಂಗ್ರಹಿಸಿದ ಮರಳನ್ನು ತನ್ನ ಟ್ರ್ಯಾಕ್ಟರ್ ಮುಖಾಂತರ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಮಹಿಬೂಬ ಅಲೀ ಹೆಚ್.ಸಿ-83, ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423, ಶ್ರೀ ಹುಸೇನಿ ಸಿಪಿಸಿ-236 ಇವರಿಗೆ ವಿಷಯ ತಿಳಿಸಿ ಮಹಿಬೂಬ ಅಲೀ ಹೆಚ್.ಸಿ-83 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಬರುವಂತೆ ತಿಳಿಸಿದ ಮೇರೆಗೆ ಸದರಿ ಹೆಚ್.ಸಿ ರವರು ಇಬ್ಬರು ಪಂಚರಾದ 1) ಶ್ರೀ ದೇವಿಂದ್ರಪ್ಪ ತಂದೆ ಹೊನ್ನಪ್ಪ ಮೂಡಬೂಳ ವ|| 35 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ರುಕ್ಮಾಪೂರ ತಾ|| ಸುರಪೂರ 2) ಶ್ರೀ ಬಸವರಾಜ ತಂದೆ ಮಹಾದೇವಪ್ಪ ಶಾಸ್ತ್ರಿ ವ|| 28 ವರ್ಷ ಜಾ|| ಹರಿಜನ ಉ|| ಕೂಲಿ ಕೆಲಸ ಸಾ|| ರುಕ್ಮಾಪೂರ ತಾ|| ಸುರಪೂರ ಇವರನ್ನು 12:30 ಪಿ. ಎಮ್. ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಕುಳಿತುಕೊಂಡು 12:45 ಪಿ.ಎಂಕ್ಕೆ ಠಾಣೆಯಿಂದ ಹೊರಟು 1:15 ಪಿ.ಎಂ ಸುಮಾರಿಗೆ ದೇವಾಪೂರ ಸಿಮಾಂತರ ಹಳ್ಳದ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಹಳ್ಳದ ದಡದಲ್ಲಿ ಜೆ.ಸಿ.ಬಿ. ಮೂಲಕ ಒಬ್ಬ ವ್ಯಕ್ತಿ ಮರಳನ್ನು ಸಂಗ್ರಹ ಮಾಡುತ್ತಿದ್ದು, ಇನ್ನೊಬ್ಬ ವ್ಯಕ್ತಿಯು ಸಂಗ್ರಹಿಸಿದ ಮರಳನ್ನು ತನ್ನ ಟ್ರ್ಯಾಕ್ಟರ್ದಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಿಸುತ್ತಿದ್ದನ್ನು ಖಚಿತಪಡಿಸಿಕೊಂಡು, 1:30 ಪಿ.ಎಮ್ಕ್ಕೆ ನಾವೆಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿಯಬೇಕೆನ್ನುಷ್ಟರಲ್ಲಿ ಆರೋಪಿತರಿಬ್ಬರು ನಮ್ಮನ್ನು ನೋಡಿ ಸ್ಥಳದಲ್ಲಿಯೇ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋದರು. ಸದರಿ ಚಾಲಕರನ್ನು ಇನ್ನೊಮ್ಮೆ ನೋಡಿದಲ್ಲಿ ಗುತರ್ಿಸುತ್ತೇನೆ. ನಂತರ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಒಂದು ಇಛಿಠ ಘಿಛಿಜಟಟಜಟಿಛಿಜ ಕಂಪನಿಯ ಎಅಃ ಇಟಿರಟಿಜ ಖಜಡಿಚಿಟ ಓಠ. ಊ00173362 ನೇದ್ದು ಇದ್ದು ಅದರ ಅ.ಕಿ. 10 ಲಕ್ಷ ರೂ ಹಾಗೂ ಒಂದು ಓಜತಿ ಊಠಟಟಚಿಟಿಜ 3600 ಕಂಪನಿಯ ಟ್ರ್ಯಾಕ್ಟರ್ ಇಟಿರಟಿಜ ಖಎ327ಂ69875 ಮತ್ತು ಚೆಸ್ಸಿ ನಂ. ಓಊಓ36000ಚಏಎ486136 ಇದ್ದು, ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಅ.ಕಿ. 2 ಲಕ್ಷ ರೂ. ಗಳು. ಹಾಗು ಟ್ರ್ಯಾಕ್ಟರದಲ್ಲಿದ್ದ 2 ಘನ ಮೀಟರ್ ಮರಳು ಅ.ಕಿ. 1600/- ರೂ.ಗಳು. ನಂತರ ಸದರಿ ಎರಡು ವಾಹನಗಳನ್ನು ಪಂಚರ ಸಮಕ್ಷಮ 1:30 ಪಿ.ಎಂ ದಿಂದ 2:30 ಪಿ.ಎಂ ದ ಅವದಿವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ವಾಹನಗಳನ್ನು ಜಪ್ತಿ ಪಡಿಸಿಕೊಂಡು ನಮ್ಮ ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಕಾರಣ ಸದರಿ ಜೆ.ಸಿ.ಬಿ. ಮತ್ತು ಟ್ರ್ಯಾಕ್ಟರ್ ನೇದ್ದವುಗಳ ಚಾಲಕ ಮತ್ತು ಮಾಲಿಕರು ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ದೇವಾಪೂರ ಹಳ್ಳದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಪ್ತಿ ಪಂಚನಾಮೆಯೊಂದಿಗೆ ಈ ವರದಿಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲುಕೈಗೊಳ್ಳುವ ಕುರಿತು ಜಪ್ತಿ ಪಂಚನಾಮೆಯೊಂದಿಗೆ ಈ ವರದಿಯನ್ನು ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 120/2022 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಸೈದಾಪೂರ  ಪೊಲೀಸ್ ಠಾಣೆ:-
ಗುನ್ನೆ ನಂ: 92/2022 ಕಲಂ 143, 147, 447, 323, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ: 30.07.2022 ರಂದು ಸಾಯಂಕಾಲ 7-30 ಗಂಟೆಗೆ ಅರುಣಕುಮಾರ ತಂದೆ ವೀರಬಸವಂತ್ರಾಯ ಐರೆಡ್ಡಿ ವಯ|| 46 ವರ್ಷ, ಜಾ|| ಲಿಂಗಾಯತ, ಉ|| ಒಕ್ಕಲುತನ, ಸಾ|| ಮನೆ ಸಂಖ್ಯೆ: ಎಮ್-111 ನಿಜಲಿಂಗಪ್ಪ ಕಾಲೋನಿ ರಾಯಚೂರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿರುತ್ತಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ಫಿಯರ್ಾದಿದಾರನಿಗೆ ಸೇರಿದ ಜಮೀನನಲ್ಲಿ ಪ್ರಕರಣದ ಎ-1, ಎ-2 ರವರು ತಮ್ಮ ಜಮೀನಿದೆ ಅಂತ ಹೇಳಿ ಫಿಯರ್ಾದಿದರನ ಜಮೀನು ಕಬಳಿಸಬೇಕೆಂಬ ಉದ್ದೇಶದಿಂದ ಸದರಿ ಜಮೀನನಲ್ಲಿ ಪೈಪಲೈನ ಮಾಡಿಸುತ್ತಿರುತ್ತಾರೆ. ಅದನ್ನು ಪಶ್ನಿಸಲು ಹೋದ ಫಿಯರ್ಾದಿದಾರನಿಗೆ ಆಪಾದಿತರೆಲ್ಲರೂ ಕೂಡಿ ಹಲ್ಲೆ ಮಾಡಿದ್ದಲ್ಲದೇ, ಅಸಭ್ಯ ಶಭ್ದಗಳಿಂದ ನಿಂಧಿಸಿ ಜೀವ ಹೊಡೆಯುವ ಬೆದರಿಕೆ ಹಾಕಿರುತ್ತಾರೆ ಅಂತ ವಗೈರೆ ಆಪಾದೆನೆ.

Last Updated: 01-08-2022 05:37 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080