Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-08-2021

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 201/2021 ಕಲಂ 279, 337, 304(ಎ) ಐ.ಪಿ.ಸಿ : ಇಂದು ದಿನಾಂಕ: 30/08/2021 ರಂದು ಬೆಳಿಗ್ಗೆ 6.30 ಎ.ಎಂ. ಕ್ಕೆ ಫಿಯರ್ಾದಿ ಶ್ರೀ ಕಾತರ್ಿಕ ತಂ/ ನಾಗರಾಜ ಘನಾತೆ ಸಾ|| ಅಶೋಕ ಓಣಿ, ದೇವದುರ್ಗ, ತಾ|| ದೇವದುರ್ಗ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದರ ಸಾರಾಂಶ ಏನೆಂದರೆ, ನಿನ್ನೆ ದಿನಾಂಕ:29/08/2021 ರಂದು 9.00 ಪಿ.ಎಂ.ಕ್ಕೆ ನನ್ನ ಮಾವ ಕಿರಣಕುಮಾರ ತಂ/ ನಾಗೇಂದ್ರ ಬಾಸುತ್ಕರ್ ಸಾ|| ದೇವಿನಗರ, ಶಹಾಪೂರ ರವರು ಮಂತ್ರಾಲಯದಿಂದ ನಮ್ಮ ಮನೆಗೆ ಬಂದು ನನಗೆ ಶಹಾಪೂರಕ್ಕೆ ಬಿಟ್ಟು ಬನ್ನಿ ಅಂತಾ ಹೇಳಿದ್ದರಿಂದ ನನ್ನ ಅಣ್ಣ ಸಾಗರನು ಬಟ್ಟೆ ಅಂಗಡಿ ಮಾಲೀಕರ ಕಾರ್.ನಂ.ಕೆಎ-36 ಪಿ-1148 ರಲ್ಲಿ ನನ್ನ ಮಾವ ಕಿರಣಕುಮಾರನಿಗೆ ಕರೆದುಕೊಂಡು ತನ್ನ ಗೆಳೆಯ ಅಭಿಷೇಕ ಮತ್ತು ಕಾರ್ ಚಾಲಕ ಸೂಗುರೇಶ್ವರ ತಂ/ ಈರಯ್ಯ ಹಿರೇಮಠ ರವರೊಂದಿಗೆ ಶಹಾಪೂರಕ್ಕೆ ಹೊರಟಾಗ ನಾನು ಬರುತ್ತೇನೆ ಅಂತಾ ಅಂದಿದ್ದಕ್ಕೆ ನನಗೆ ಕರೆದಕೊಂಡು ರಾತ್ರಿ 9.30 ಪಿ.ಎಂ.ಕ್ಕೆ ದೇವದುರ್ಗದಿಂದ ಹೊರಟೆವು. ರಾತ್ರಿ 10.30 ಪಿ.ಎಂ.ಕ್ಕೆ ಶಹಾಪೂರಕ್ಕೆ ಬಂದು ನನ್ನ ಮಾವನಿಗೆ ಶಹಾಪೂರದಲ್ಲಿ ಬಿಟ್ಟು 11.00 ಪಿ.ಎಂ.ಕ್ಕೆ ಶಹಾಪೂರದಿಂದ ದೇವದುರ್ಗಕ್ಕೆ ಹೊರಟೆವು. ಕಾರನ್ನು ಸೂಗುರೇಶ್ವರನು ಚಲಾಯಿಸುತ್ತಿದ್ದನು. ಶಹಾಪೂರ-ಹತ್ತಿಗುಡೂರ ರೋಡಿನಲ್ಲಿ ಹೊರಟಿದ್ದಾಗ ಕಾರ್ ಚಾಲಕ ಸೂಗುರೇಶ್ವರನು ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಿದ್ದನು ಆ ಸಮಯದಲ್ಲಿ ಮಳೆ ಬರುತ್ತಿದ್ದು, ನಾವು ಸೂಗುರೇಶ್ವರನಿಗೆ ನಿಧಾನವಾಗಿ ನಡೆಸು ಅಂತಾ ಹೇಳುತ್ತಾ ಹೊರಟಿದ್ದಾಗ 11.30 ಪಿ.ಎಂ. ಸುಮಾರಿಗೆ ಗೋಲಗೇರಿ ದೊಡ್ಡಿ ಕ್ರಾಸ್ ದಾಟಿ ರಸ್ತಾಪೂರ ಕಮಾನ್ ಇನ್ನೂ ಅಂದಾಜು 500 ಮೀಟರ ಅಂತರದಲ್ಲಿದ್ದಾಗ ಸೂಗೂರೇಶ್ವರನು ಅತಿವೇಗವಾಗಿ ಕಾರನ್ನು ನಡೆಸಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಎಡ ಭಾಗದಿಂದ ರಸ್ತೆಯ ಬಲಭಾಗದ ವರೆಗೆ 2-3 ಬಾರಿ ಪಲ್ಟಿಯಾಗಿ ರಸ್ತೆಯ ಪಕ್ಕದ ಹೊಲದಲ್ಲಿ ಹೋಗಿ ಬಿದ್ದ ಪರಿಣಾಮ ಕಾರಿನಲ್ಲಿ ಇದ್ದ, ನನ್ನ ಅಣ್ಣ ಸಾಗರನ ತಲೆಗೆ ಭಾರೀ ಒಳಪೆಟ್ಟಾಗಿ ಕಿವಿಯಿಂದ ರಕ್ತ ಬಂದಿದ್ದು, ಎಡ ಪಕ್ಕೆಗೆ ತರಚಿದ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿರಲಿಲ್ಲ, ನನಗೆ ಬಲ ರಟ್ಟೆಗೆ ತರಚಿದಗಾಯವಾಗಿದ್ದ, ಅಭಿಷೇಕನಿಗೆ ಎಡಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ. ನಾನು 108 ಆಂಬ್ಯೂಲೈನ್ಸ್ಗೆ ಫೋನ್ ಮಾಡಿದಾಗ ಸ್ವಲ್ಪ ಸಮಯದ ನಂತರ ಘಟನೆ ಸ್ಥಳಕ್ಕೆ 108 ಆಂಬ್ಯೂಲೈನ್ಸ್ ವಾಹನ ಬಂದಿದ್ದು, ನಮಗೆ ಅದರಲ್ಲಿ ಕರೆದುಕೊಂಡು ಶಹಾಪೂರ ಕಡೆಗೆ ಹೊರಟಿದ್ದಾಗ ವಿಭೂತಿ ಹಳ್ಳಿಯ ಹತ್ತಿರ ನನ್ನ ಅಣ್ಣ ಸಾಗರನು ಅಪಘಾತದಲ್ಲಿ ತನಗಾದ ಗಾಯಗಳಿಂದ ಚೇತರಿಸಿಕೊಳ್ಳದೆ 11.55 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ. ನಂತರ ಆಸ್ಪತ್ರೆಗೆ ಹೋಗಿ ನನ್ನ ಅಣ್ಣನ ಮೃತದೇಹವನ್ನು ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿ ಹಾಕಿರುತ್ತೆವೆ. ನನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ನನ್ನ ಅಣ್ಣ ಸುನೀಲ್ ಮತ್ತು ಮಾವ ಕಿರಣಕುಮಾರ ರವರು ಆಸ್ಪತ್ರೆಗೆ ಬಂದ ನಂತರ ಅವರೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ಈ ಅಪಘಾತಕ್ಕೆ ಕಾರಣನಾದ ಕಾರ ನಂ. ಕೆಎ-36 ಪಿ-1148 ರ ಚಾಲಕ ಸೂಗುರೇಶ್ವರ ತಂ/ ಈರಯ್ಯ ಹಿರೇಮಠ, ವ|| 28 ವರ್ಷ, ಸಾ|| ಚಿಕ್ಕಹೊನ್ನಕುಣಿ, ತಾ|| ದೇವದುರ್ಗ, ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 201/2021 ಕಲಂ 279, 337, 304(ಎ) ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

 

ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ 202/2021. ಕಲಂ. 283, 337, 338, ಐ.ಪಿ.ಸಿ. : ಇಂದು ದಿನಾಂಕ: 30/08/2021 ರಂದು 7-45 ಗಂಟೆಗೆ ಪಿಯರ್ಾದಿ ಶ್ರೀ ಉಮಾಕಾಂತ ಸಿ.ಹೆಚ್.ಸಿ.192 ಸರುಪೂರ ಪೊಲೀಸ್ ಠಾಣೆ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ. ನಾನು ದೂರು ನೀಡುವುದೇನಂದರೆ ದಿನಾಂಕ: 29-08-2021 ರಂದು ರಾತ್ರಿ ಪಟ್ರೋಲಿಂದ ಕರ್ತವ್ಯ ಕುರಿತು ನಾನು ಸುರಪುರ ಉಪವಿಭಾಗದ ವೆಂಕಟೇಶ ಡಿವೈ.ಎಸ್.ಪಿ. ಸಾಹೇಬರು ಜೊತೆ ಇಲಾಖೆಯ ನಂ. ಕೆ.ಎ.33-ಜಿ.0253 ನೇ ನಂಬರಿನ ಬೊಲೇರೋ ವಾಹನದಲ್ಲಿ ಹೋಗಿದ್ದೆನು. ಜೀಪನ್ನು ಚಾಲಕ ಚಂದಪ್ಪಗೌಡ ಎ.ಪಿ.ಸಿ.143 ರವರು ಚಾಲನೆ ಮಾಡುತ್ತಿದ್ದರು. ಸುರಪುರ, ದೇವದುರ್ಗ ಕ್ರಾಸ್, ಹತ್ತಿಗೂಡೂರ, ಹೀಗೆ ಸುರಪುರ ಉಪ-ವಿಭಾಗದ ವಿವಿಧ ಕಡೆಗಳಲ್ಲಿ ರಾತ್ರಿ ರೌಂಡ್ಸ ಮಾಡುತ್ತಾ ಈ ದಿನ ದಿನಾಂಕ: 30-08-2021 ರಂದು ಬೆಳಗಿನ ಜಾವ 4:30 ಗಂಟೆಯ ಸುಮಾರಿಗೆ ಶಹಾಪುರ ನಗರದ ಸುಬೇದಾರ ಆಸ್ಪತ್ರೆಯ ಬಳಿ ಸುರಪುರ ಕಲಬುರಗಿ ರಸ್ತೆಯಲ್ಲಿ ತಾರು ರಸ್ತೆಯ ಮೇಲೆ ಒಂದು ಲಾರಿ ಚಾಲಕನು ತನ್ನ ಲಾರಿಗೆ ಯಾವುದೇ ಇಂಡಿಕೆಟರ್/ಪಾಕರ್ಿಂಗ್ ಲೈಟ್/ಸೂಚನಾಫಲಕ ಪ್ರದಶರ್ಿಸದೇ ಮತ್ತು ಯಾವುದೇ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಕತ್ತಲಿನಲ್ಲಿ ರಸ್ತೆಯ ಮೇಲೆ ತನ್ನ ಲಾರಿಯನ್ನು ನಿರ್ಲಕ್ಷದಿಂದ ನಿಲ್ಲಿದ್ದನು. ಅದೇ ಸಂದರ್ಭದಲ್ಲಿ ಜೋರಾಗಿ ಮಳೆ ಬರುತ್ತಿದ್ದುದರಿಂದ ರಸ್ತೆಯು ಅ ಸ್ಪಷ್ಟವಾಗಿ ಕಾಣುತ್ತಿದ್ದು ನಮ್ಮ ಜೀಪ ಚಾಲಕ ಚಂದಪ್ಪಗೌಡನು ರಸ್ತೆಯ ಎಡಭಾಗದಲ್ಲಿ ಜೀಪನ್ನು ಮಿತ ವೇಗದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದನು. ತಾರು ರಸ್ತೆಯ ಮೇಲೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೇ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ನಾವು ಹೋಗುತ್ತಿದ್ದ ಕೆ.ಎ.33-ಜಿ.0253 ನೇ ನಂಬರಿನ ಜೀಪ ಡಿಕ್ಕಿಯಾಗಿ ಅಫಘಾತ ಸಂಭವಿಸಿದ್ದು ನಮ್ಮ ಜೀಪಿನ ಮುಂಭಾಗ ಜಖಂಗೊಂಡಿದ್ದು ಲಾರಿಯ ನಂಬರ ನೋಡಲಾಗಿ ಎಮ್.ಹೆಚ್.13-ಎಎಕ್ಸ್-3930 ಇರುತ್ತದೆ. ಜೀಪಿನಲ್ಲಿದ್ದ ನನಗೆ ಎಡಭುಜ, ಬಲಗೈ ಬೆರಳುಗಳಿಗೆ, ಬಲ ಎದೆಗೆ ಮತ್ತು ಪಾದಗಳಿಗೆ ರಕ್ತಗಾಯ ಮತ್ತು ಒಳಪೆಟ್ಟು ಆಗಿದ್ದವು. ಚಾಲಕ ಚಂದಪ್ಪಗೌಡನಿಗೆ ಗದ್ದಕ್ಕೆ ಹಣೆಗೆ ಎದೆಗೆ ಮೊಳಕಾಲುಗಳಿಗೆ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದವು. ಡಿವೈ.ಎಸ್.ಪಿ. ಸಾಹೇಬರಿಗೆ ಎರಡೂ ಕಿವಿಗಳಿಗೆ, ಎಡ ಮತ್ತು ಬಲ ಭುಜಕ್ಕೆ ಮತ್ತು ಎದೆಗೆ ರಕ್ತಗಾಯ ಹಾಗೂ ಒಳಪೆಟ್ಟಾಗಿದ್ದವು. ಅಷ್ಟರಲ್ಲಿ ವಿಷಯ ತಿಳಿದ ಶಹಾಪುರ ಪೊಲೀಸ ಠಾಣೆಯ ಚೆನ್ನಯ್ಯ ಎಸ್.ಹಿರೇಮಠ ಪಿ.ಐ ಸಾಹೇಬರು ಮತ್ತು ರಾತ್ರಿ ಗಸ್ತು ಸಿಬ್ಬಂದಿ ಸ್ಥಳಕ್ಕೆ ಬಂದರು ಡಿವೈ.ಎಸ್.ಪಿ. ಸಾಹೇಬರನ್ನು ಚಿಕಿತ್ಸೆಗಾಗಿ ಕಲಬುರಗಿಯ ಯುನೈಟೆಡ್. ಆಸ್ಪತ್ರೆಗೆ ಅಂಬ್ಯೂಲೆನ್ಸದಲ್ಲಿ ಪಿ.ಐ ಸಾಹೇಬರು ಕರೆದುಕೊಂಡು ಹೋದರು. ಕತ್ತಲು ಸಂದರ್ಭದಲ್ಲಿ ತಾರು ರಸ್ತೆಯ ಮೇಲೆ ವಾಹದಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುವ ರೀತಿಯಲ್ಲಿ ಲಾರಿ ನಂಬರ ಎಮ್.ಹೆಚ್.13-ಎಎಕ್ಸ್-3930 ನೇದ್ದನ್ನು ಯಾವುದೇ ಇಂಡಿಕೇಟರ ಪಾಕರ್ಿಂಗ ಲೈಟ ಮುಂಜಾಗೃತಾ ಫಲಕ ಅಥವಾ ಪರಿಕರ ಅಳವಡಿಸದೇ ನಿಲ್ಲಿಸಿ ಸದರಿ ರಸ್ತೆಯ ಅಫಘಾತಕ್ಕೆ ಕಾರಣನಾದ ಲಾರಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 202/2021 ಕಲಂ: 283, 337, 338, ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 203/2021 ಕಲಂ 306 ಸಂ 34 ಐ.ಪಿ.ಸಿ : ಇಂದು ದಿನಾಂಕ 30/08/2021 ರಂದು, ಮಧ್ಯಾಹ್ನ 15-00 ಗಂಟೆಗೆ ಫಿಯರ್ಾದಿ ಶ್ರೀಮತಿ ದೇವಮ್ಮ ಗಂಡ ನಿಂಗಣ್ಣ ಹಳಿಮನಿ, ವಯಸ್ಸು 22 ವರ್ಷ, ಜಾತಿ ಕುರುಬ, ಉಃ ಹೊಲ ಮನೆ ಕೆಲಸ, ಸಾಃ ಕನಕನಗರ ಹಳಿಸರ ಶಹಾಪೂರ ಇವರು ಠಾಣೆಗೆ ಹಾಜರಾಗಿ ದಸ್ತೂರು ಮೂಲಕ ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾನು ದಿನಾಂಕ 24/08/2021 ರಂದು ಮುಂಜಾನೆ 09-10 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ನನ್ನ ಗಂಡ ನಿಂಗಣ್ಣ ಇವರು ಸುಮಾರು 7 ರಿಂದ 8 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ಮಾಡಿದ ಸಾಲ ಹೇಗೆ ತಿರಿಸಬೇಕೆಂದು ಜೀವನದಲ್ಲಿ ಜಿಗುಪ್ಸೆಹೊಂದಿ ದಿನಾಂಕ 23/08/2021 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 24/08/2021 ರಂದು ಬೆಳಗಿನ ಜಾವ 07-00 ಗಂಟೆಯ ಅವಧಿಯಲ್ಲಿ ಕನಕನಗರ ಹಳಿಸಗರ ಏರಿಯಾದಲ್ಲಿರುವ ನಮ್ಮ ಮನೆಯ ಮೇಲೆ ಇರುವ ಇನ್ನೊಂದು ರೂಮಿನಲ್ಲಿ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡು ಮೃತ ಪಟ್ಟಿದ್ದರಿಂದ ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವುದಿಲ್ಲ ಸಾಲಬಾಧೆಯಿಂದ ವಿಷ ಕುಡಿದು ಮೃತ ಪಟ್ಟಿರುತ್ತಾನೆ ಅಂತ ಪರಿಚಯಸ್ಥರಾದ ರಸ್ತಾಪೂರ ಗ್ರಾಮದ ಮಹೇಶ ತಂದೆ ಮಾನಪ್ಪ ಕಮತಗಿ ಇವರ ಕಡೆಯಿಂದ ಬರೆಯಿಸಿದ ಫಿಯರ್ಾದಿಯನ್ನು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂಬರ 28/2021 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಯು.ಡಿ.ಆರ್ ದಾಖಲಾಗಿರುತ್ತದೆ. ಅದಕ್ಕೆ ಮುಂದುವರೆದು ದೂರು ನೀಡುವುದೇನೆಂದರೆ, ಆಗಾಗ ನನ್ನ ಗಂಡ ನಿಂಗಣ್ಣ ಹಳಿಮನಿ ಇವರು, ಸುರಪೂರ ತಾಲೂಕಿನ ಮಂಗಳೂರಿನ ಬಸವೇಶ್ವರ ಪೈನಾನ್ಸ್ನಲ್ಲಿ ಸಾಲವಿದೆ ಅವರು ಸಾಲ ಕಟ್ಟುವಂತೆ ನನಗೆ ಕಿರಕುಳ ನೀಡುತಿದ್ದಾರೆ, ಇದರಿಂದ ನನಗೆ ಜೀವನ ಸಾಕಾಗಿದೆ ಅಂತಾ ನನ್ನ ಹಾಗೂ ಕುಟುಂಬದವರ ಮುಂದೆ ಹೇಳಿಕೊಂಡಿದ್ದರು, ಹೀಗಿರುವಾಗ ದಿನಾಂಕ 24/08/2021 ರಂದು ನನ್ನ ಗಂಡ ನಿಂಗಣ್ಣ ಇವರ ಅಂತ್ಯ ಸಂಸ್ಕಾರವಾದ ನಂತರ ಮನೆಗೆ ಬಂದು, ಮನೆ ಸ್ವಚ್ಚತೆ ಮಾಡುವ ಸಮಯದಲ್ಲಿ ನನ್ನ ಗಂಡ ನಿಂಗಣ್ಣ ಇವರು ಜೀವಂತವಿದ್ದಾಗ ಅವರ ಕೈಯಾರೇ ಬರೆದಿರುವ ಚೀಟಿಗಳು ಸಿಕಿದ್ದು, ಆ ಚೀಟಿಗಳಲ್ಲಿ ಸಾಲಗಾರ ಬಡ್ಡಿ ಹಾಗೂ ಚಕ್ರ ಬಡ್ಡಿಯ ಹಣ ಕಟ್ಟಲು ಕಷ್ಟವಾಗಿದ್ದರಿಂದ ಅಲ್ಲದೇ ಫೈನಾನ್ಸ್ ನವರು ನನ್ನ ಕಡೆಯಿಂದ ಬ್ಲ್ಯಾಂಕ್ ಚೆಕ್ ಇಟ್ಟುಕೊಂಡು ಸಾಲ ಮರುಪಾವತಿಸದಿದ್ದರೆ ಕೋರ್ಟಗೆ ಹಾಕಿ ದಂಡ ವಸೂಲಿ ಮಾಡುತ್ತೇವೆ ಅಂತಾ ಹೆದರಿಸಿದ್ದರಿಂದ ಮಂಗಳೂರಿನ ಮುದಕಪ್ಪ ಪೂಜಾರಿ ಹಾಗೂ ಇತರರ ಕಿರಕುಳ ಹೆಚ್ಚಾಗಿ ಸಾವಿಗೆ ಶರಣಾಗುತ್ತಿದ್ದೇನೆ ಅಂತಾ ಇತ್ಯಾದಿಯಾಗಿ ಬರೆದಿರುವ ಚೀಟಿಗಳು ಸಿಕ್ಕಿದ್ದು ನಾನು, ನನ್ನ ಗಂಡ ಸತ್ತ ದುಃಖದಲ್ಲಿ ಮನಸ್ಸಿಗೆ ಆಘಾತಕ್ಕೊಳಗಾಗಿ ಆ ದಿನ ಠಾಣೆಗೆ ಹಾಜರಾಗದೇ ಸುಧಾರಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ, ಆ ಚೀಟಿಗಳು ಕಾನೂನು ಕ್ರಮಕ್ಕಾಗಿ ತಮ್ಮ ಮುಂದೆ ಹಾಜರ ಪಡಿಸುತಿದ್ದೇನೆ. ಕಾರಣ ನನ್ನ ಗಂಡನ ಸಾವಿಗೆ ಕಾರಣರಾದ ಮುದಕಪ್ಪ ಪೂಜಾರಿ ಸಾಃ ಮಂಗಳೂರ ತಾಃ ಸುರಪೂರ ಹಾಗೂ ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 203/2021 ಕಲಂ 306 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 204/2021 ಕಲಂ 279, 338 ಐ.ಪಿ.ಸಿ. : ಇಂದು ದಿನಾಂಕ 30-08-2021 ರಂದು 3:15 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಸಂಗನಗೌಡ ತಂದೆ ಯಲ್ಲನಗೌಡ ಗ್ಯಾನಪ್ಪನವರ ವಯ: 24 ವರ್ಷ ಜಾ: ಕುರುಬ ಉ: ಕಾರ ಡ್ರೈವರ ಸಾ:ಯರಿಗೋನಾಳ ತಾ: ಕುಷ್ಟಗಿ ಜಿ: ಕೊಪ್ಪಳ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪಯೂಟರ ಟೈಪ ಮಾಡಿಸಿದ ಫಿರ್ಯಾದಿ ಹಾಜರು ಪಡಸಿದ್ದು ಸದರಿ ಫಿರ್ಯಾದಿ ಏನಂದರೆ, ನಾನು ಒಂದು ಮಾರುತಿ ಕಂಪನಿಯ ಸ್ವಿಪ್ಟ ಡಿಸೈರ ಕಾರ ನಂ. ಕೆ.ಎ.02-ಎಜಿ.2215 ನೆದ್ದನ್ನು ಹೊಂದಿದ್ದು ಅದರಲ್ಲಿ ಬಾಡಿಗೆಗೆ ಪ್ರಯಾಣಿಕರನ್ನು ಸಾಗಿಸಿ ಜೀವನ ಸಾಗಿಸುತ್ತೇನೆ. ಹೀಗಿದ್ದು ನಾನು ಮತ್ತು ನಮ್ಮೂರ ಪ್ರವೀಣ ತಂದೆ ಸಂಗಪ್ಪ ತಮ್ಮಣ್ಣವರ ,ರವಿ ತಂದೆ ಸಂಗಪ್ಪ ತಮ್ಮಣ್ಣವರ, ಮತ್ತು ಮಹೇಶ ತಂದೆ ಅಂದಾನೆಪ್ಪ ಬಿಂಜವಾಡಗಿ ರವರು ಕೂಡಿ ದಿನಾಂಕ: 28-08-2021 ರಂದು ರಾತ್ರಿ 11:00 ಗಂಟೆಗೆ ನಮ್ಮೂರಿನಿಂದ ಯಾದಗಿರಿ ಜಿಲ್ಲೆಯ ಮೈಲಾಪುರದ ಶ್ರೀ ಮಲ್ಲಯ್ಯ ದೇವಸ್ಥಾನಕ್ಕೆ ಹೊರಟಿದ್ದೆವು. ಹೀಗೆ ಹೊರಟು ದಿನಾಂಕ: 29-08-2021 ರಂದು ಬೆಳಗ್ಗೆ 5:00 ಗಂಟೆ ಸುಮಾರಿಗೆ ಶಹಾಪುರ ತಾಲೂಕಿನ ಬೊಮ್ಮನಳ್ಳಿ ಕ್ರಾಸ ಹತ್ತಿರ ಡಾಂಬರ ರಸ್ತೆಯ ಮೇಲೆ ನಾನು ನನ್ನ ಕಾರನ್ನು ರಸ್ತೆ ಎಡಗಡೆ ಮಿತ ವೇಗದಲ್ಲಿ ಚಲಾಯಿಸಿಕೊಂಡು ಹೊರಟಾಗ ನಮ್ಮ ಎದುರಿನಿಂದ ಒಂದು ಟ್ಯಾಂಕರ ಲಾರಿ ಹೊರಟಿದ್ದು ಅದರ ಚಾಲಕನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೆ ನಮ್ಮ ಕಾರಿಗೆ ಡಿಕ್ಕಿ ಪಡಿಸಿದನು. ಆಗ ನಮ್ಮ ಕಾರ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದು ಅದರಿಂದ ನನಗೆ ಬಲಗಡೆ ಕಪಾಳಕ್ಕೆ ರಕ್ತಗಾಯವಾಗಿದೆ. ಮತ್ತು ಎದೆಗೆ ಒಳಪಟ್ಟಾಗಿದೆ. ಕುತ್ತಿಗೆಗೆ ಗುಪ್ತಗಾಯವಾಗಿದೆ. ಕಾರಿನಲ್ಲಿ ಇದ್ದ ಪ್ರವೀಣ, ರವಿ ಮತ್ತು ಮಹೇಶ ಮೂರು ಜನರಿಗೂ ಯಾವುದೇ ಗಾಯವಾಗಿರುವುದಿಲ್ಲ. ಅವರು ನನಗೆ ಎಬ್ಬಿಸಿ ರಸ್ತೆಗೆ ಕರೆದು ತಂದರು. ನನ್ನ ಕಾರು ಬಲಗಡೆಯ ಮುಂಭಾಗದಲ್ಲಿ ಜಖಂಗೊಂಡಿದೆ. ಟ್ಯಾಂಕರ ಲಾರಿಯ ನಂಬರ ನೋಡಲಾಗಿ ಕೆ.ಎ.32-ಡಿ-4661 ಇದ್ದು ಅದರ ಚಾಲಕ ಅಲ್ಲೆ ಇದ್ದು ಆತನ ಹೆಸರು ಕೇಳಲಾಗಿ ಹರಿ ತಂದೆ ಥಾವರು ಚವ್ಹಾಣ ಸಾ: ಮಳಖೇಡ ತಾ: ಸೇಡಂ ಜಿ: ಕಲಬುರಗಿ ಅಂತಾ ತಿಳಿಸಿದನು. ಅಗ ನನಗೆ ಪ್ರವೀಣ, ರವಿ ಮತ್ತು ಮಹೇಶ ಮೂವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಶಹಾಪುರದ ಸರಕಾರಿ ಆಸ್ಪತ್ರಗೆ ಸೇರಿಕೆ ಮಾಡಿರುತ್ತಾರೆ. ನಾನು ಶಹಾಪುರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಇಂದು ದಿನಾಂಕ 30-08-2021 ರಂದು ತಡವಾಗಿ ಠಾಣೆಗೆ ಬಂದು ದೂರನು ನೀಡುತ್ತಿದ್ದೇನೆ. ಉಳಿದ ಮೂರು ಜನರು ಇಂದು ದೇವಸ್ಥಾನಕ್ಕೆ ಬೇರೆ ವಾಹನದಲ್ಲಿ ಹೋಗಿದ್ದಾರೆ. ದಿನಾಂಕ: 29-08-2021 ರಂದು ಬೆಳಗಿನ ಜಾವ 5:00 ಗಂಟೆ ಸುಮಾರಿಗೆ ಹತ್ತಿಗೂಡೂರ ದಿಂದ ಯಾದಗಿರಿ ಗೆ ಹೋಗುವ ಮುಖ್ಯ ಡಾಂಬರ ರಸ್ತೆ ಬೊಮ್ಮನಹಳ್ಳಿ ಕ್ರಾಸ ಹತ್ತಿರ ನಮ್ಮ ಕಾರ ನಂ. ಕೆ.ಎ.02-ಎಜಿ.2215 ನೆದ್ದಕ್ಕೆ ಡಿಕ್ಕಿ ಪಡಿಸಿ ನನಗೆ ಭಾರಿ ಗಾಯಪಡಿಸಿದ ಟ್ಯಾಂಕರ ಲಾರಿ ನಂ. ಕೆ.ಎ.32-ಡಿ-4661 ನೇದ್ದರ ಚಾಲಕ ಹರಿ ತಂದೆ ಥಾವರು ಚವ್ಹಾಣ ಸಾ: ಮಳಖೇಡ ತಾ: ಸೇಡಂ ಜಿ: ಕಲಬುರಗಿ ರವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.204/2021 ಕಲಂ 279, 338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 119/2021 ಕಲಂ 279, 337, 338 ಐಪಿಸಿ ಸಂ 187 ಐ.ಎಂ.ವಿ ಕಾಯ್ದೆ. : ದಿನಾಂಕ 29/08/2021 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿದಾರನು, ತನ್ನ ಅಳಿಯ ಮತ್ತು ರಾಕೇಶ ಮೂವರೂ ಕೂಡಿಕೊಂಡು ರಾಕೇಶ ಇತನ ಕಾರ ನಂ ಕೆ.ಎ-32-ಪಿ-5614 ನೆದ್ದರ್ಲಿ ಕುಳಿತುಕೊಂಡು ಗುರುಮಿಠಕಲ್ ಹತ್ತಿರ ಇರುವ ಧಬಧಬಿ ಫಾಲ್ಸಕ್ಕೆ ಹೋಗಿ ಅಲ್ಲಿ ನೋಡಿಕೊಂಡು ಮರಳಿ ತಮ್ಮೂರಿಗೆ ಅದೇ ಕಾರಿನಲ್ಲಿ ಹೋಗುವಾಗ ರಾಕೇಶ ಇತನು ಕಾರನ್ನು ಓಡಿಸಿಕೊಂಡು ಹೋಗುತ್ತಿದ್ದು, ಮಾರ್ಗಮಧ್ಯ ಹತ್ತಿಕುಣಿ-ಭೀಮನಳ್ಳಿ ರೋಡಿನ ಮೇಲೆ ಹೋಗುವಾಗ ಎದುರುಗಡೆ ಸೆಡಂ ಕಡೆಯಿಂದ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಫಿರ್ಯಾಧಿಗೆ ಮತ್ತು ಅವನ ಗೆಳೆಯರಿಗೆ ಭಾರಿ ರಕ್ತಗಾಯ, ಗುಪ್ತಗಾಯ ಮತ್ತು ತರಚಿದ ಗಾಯವಾಗಿರುತ್ತದೆ, ಅಪಘಾತ ಮಾಡಿ ಅಪರಿಚಿತ ವಾಹನ ಚಾಲಕನು ವಾಹನ ನಿಲ್ಲಿಸದೇ ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ ವಾಹನದ ನಂಬರ ಮತ್ತು ಚಾಲಕನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ ಅಂತಾ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

 

ಭೀಗುಡಿ ಪೊಲೀಸ ಠಾಣೆ
ಗುನ್ನೆ ನಂ: 62/2021 ಕಲಂ 78(3) ಕೆಪಿ ಯ್ಯಾಕ್ಟ : ಇಂದು ದಿನಾಂಕ:30/08/2021 ರಂದು 06.30 ಪಿ.ಎಮ್.ಕ್ಕೆ ಭೀ.ಗುಡಿಯ ಕೆ.ಬಿ.ಜೆ.ಎನ್.ಎಲ್, ಐ.ಬಿ, ಹತ್ತಿರಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 07.30 ಪಿ.ಎಮ್ ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 08.15 ಪಿ.ಎಮ್.ಕ್ಕೆ ದಾಳಿ ಮಾಡಿಆರೋಪಿತನಿಂದ 1) ನಗದು ಹಣರೂಪಾಯಿ 1267=00, 2) ಮಟಕಾ ನಂಬರ ಬರೆದಒಂದುಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡು ಆರೋಪಿತನ ವಿರುದ್ದಕ್ರಮ ಜರುಗಿಸಿದ ಬಗ್ಗೆ.

Last Updated: 31-08-2021 10:12 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080