ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-08-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 149/2022 ಕಲಂ: 279, 337, 338 ಐ.ಪಿ.ಸಿ: ಇಂದು ದಿನಾಂಕ 30.08.2022 ರಂದು 2.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮಲ್ಲಣ್ಣ ತಂದೆ ಸೂರಪ್ಪ ಹಡಪದ ವ|| 55 ಜಾ|| ಹಡಪದ ಉ|| ಕುಲಕಶಬು ಸಾ.ದೇವಿನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಏನಂದರೆ ನಾವೂ ಒಟ್ಟು ಮೂರು ಜನ ಅಣ್ಣತಮ್ಮಂದಿರಿದ್ದು ಅವರಲ್ಲಿ ನಮ್ಮ ಅಣ್ಣನವರಾದ ಹಳ್ಳೆಪ್ಪ ತಂದೆ ಸೂರಪ್ಪ ಹಡಪದ ಇವರು ಬೇರೆ ಮನೆ ಮಾಡಿಕೊಂಡು ವಾಸವಿರುತ್ತಾರೆ. ಆದರೆ ನಾನು ಹಾಗು ನಮ್ಮ ತಮ್ಮನಾದ ಚಂದ್ರಶೇಖರ ತಂದೆ ಸೂರಪ್ಪ ಹಡಪದ ವ|| 45 ನಾವಿಬ್ಬರೂ ಕೂಡಿಯೇ ನಮ್ಮ ಕುಲಕಶಬು ಮಾಡಿಕೊಂಡು ಒಂದೇ ಮನೆಯಲ್ಲಿ ವಾಸವಿರುತ್ತೇವೆ. ನಮ್ಮ ತಮ್ಮನು ಒಂದು ಹಿರೋ ಮೆಸ್ಟ್ರೋ ಕಂಪನಿಯ ಸ್ಕೂಟಿ ಮೋಟಾರ ಸೈಕಲ್ ನಂ: ಕೆ.ಎ. ಕೆಎ.32/ಇಟಿ-8041 ನೇದ್ದನ್ನು ಖರೀದಿ ಮಾಡಿದ್ದು ಎಲ್ಲಿಗಾದರೂ ಹೋಗಬೇಕಾದರೆ ಅದನ್ನೇ ತೆಗೆದುಕೊಂಡು ಹೋಗುತ್ತಿದ್ದನು. ಹೀಗಿದ್ದು ದಿನಾಂಕ 25/08/2022 ರಂದು ಡಿಗ್ಗಿಯಲ್ಲಿ ನಮ್ಮ ಸಂಬಂದಿಕರು ತೀರಿಹೋಗಿದ್ದರಿಂದ ಮದ್ಯಾಹ್ನ 2 ಗಂಟೆಗೆ ನಮ್ಮ ತಮ್ಮನಾದ ಚಂದ್ರಶೇಖರ ಈತನು ಡಿಗ್ಗಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ತನ್ನ ಸ್ಕೂಟಿ ನಂಬರ ಕೆಎ.32ಇಟಿ-8041 ನೇದ್ದನ್ನು ತೆಗೆದುಕೊಂಡು ಹೋದನು. ನಂತರ 2.15 ಪಿ ಎಮ್ ಕ್ಕೆ ನಾನು ಮನೆಯಲ್ಲಿದ್ದಾಗ ನನಗೆ ಪರಿಚಯದ ಹಾಗು ನಮ್ಮ ಜನಾಂಗದ ಮಲ್ಲಿಕಾಜರ್ುನ ತಂದೆ ಸಾಯಬಣ್ಣ ಹಡಪದ ಸಾ|| ಗೋಗಿ ಪೇಠ ಇವರು ನನಗೆ ಪೋನ ಮಾಡಿ ನಮ್ಮ ತಮ್ಮನಾದ ಚಂದ್ರಶೇಖರ ಈತನು ತನ್ನ ಸ್ಕೂಟರ ಮೇಲೆ ಡಿಗ್ಗಿಗೆ ಹೋಗುವ ಕುರಿತು ಶಹಾಪೂರ ಪಟ್ಟಣದ ಉಪ್ಪಿಟ್ಟು ಹೋಟಲ ಮುಂದಿನ ಶಹಾಪೂರ ಕಲಬುಗರ್ಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಸ್ಕೂಟಿ ನೇದ್ದರ ಚಾಲಕನು ತನ್ನ ಸ್ಕೂಟಿಯನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನ ಸ್ಕೂಟಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿರುತ್ತಾನೆ ಅಂತ ತಿಳಿಸಿದಾಗ ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲು ನನ್ನ ತಮ್ಮನು ರೋಡಿನ ಪಕ್ಕದಲ್ಲಿ ಬಿದ್ದಿದ್ದು ಅಪಘಾತದಲ್ಲಿ ಆತನಿಗೆ ಬಲಮೆಲಕಿಗೆ ಹಾಗು ತಲೆಗೆ ರಕ್ತಗಾಯ ಹಾಗು ಭಾರೀ ಗುಪ್ತಗಾಯವಾಗಿ ಎರಡು ಮೊಳಕಾಲಿಗೆ ತರಚಿದ ರಕ್ತಗಾಯ ಆಗಿದ್ದು ಕಂಡು ಬಂದಿತು. ನನ್ನ ತಮ್ಮನ ಸ್ಕೂಟಿಗೆ ಅಪಘಾತ ಪಡಿಸಿದ ಇನ್ನೊಂದು ಸ್ಕೂಟಿ ಚಾಲಕನು ಸಹ ಅಲ್ಲಿಯೇ ನಿಂತಿದ್ದು ಆತನಿಗೆ ವಿಚಾರಿಸಲು ಆತನು ತನ್ನ ಹೆಸರು ಗುಲಾಮ ರಸೂಲ ತಂದೆ ಖಾಜಾಸಾಬ ಶೇಖ ಸಾ|| ಶಹಾ ಕಾಲೋನಿ ಶಹಾಪೂರ ಅಂತ ತಿಳಿಸಿದ್ದು ಆತನಿಗೂ ಸಹ ಬಲಗೈ ಮೊಳಕೈಗೆ ಗುಪ್ತಗಾಯವಾಗಿ ಎರಡು ಮೊಳಕಾಲಿಗೆ ತರಚಿದ ರಕ್ತಗಾಯವಾಗಿದ್ದು ಕಂಡು ಬಂದಿತು. ಆತನು ತನ್ನ ಸ್ಕೂಟಿ ಮೇಲೆ ತನ್ನ ಅಣ್ಣನಾದ ಮಹ್ಮದ್ ಶರೀಫ್ ಈತನಿಗೆ ಕೂಡಿಸಿಕೊಂಡು ಭೀಗುಡಿ ಕಡೆಯಿಂದ ತನ್ನ ಸ್ಕೂಟಿಯನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ನನ್ನ ತಮ್ಮನ ಸ್ಕೂಟಿಗೆ ಭಲವಾಗಿ ಡಿಕ್ಕಿಪಡಿಸಿ ಸಾದಾ ಹಾಗು ಭಾರೀ ಗಾಯ ಪಡಿಸಿದ್ದು ಇರುತ್ತದೆ. ನನ್ನ ತಮ್ಮನಿಗೆ ಅಪಘಾತ ಪಡಿಸಿದ ಸ್ಕೂಟಿಯ ಹಿಂದೆ ಕುಳಿತ ಶರೀಫ್ ಈತನಿಗೆ ಯಾವದೇ ಗಾಯ ವಗೈರೆ ಆಗಿರುವದಿಲ್ಲ. ನಂತರ ನನ್ನ ತಮ್ಮನಿಗೆ ಅಪಘಾತ ಪಡಿಸಿದ ಸ್ಕೂಟಿ ಅಲ್ಲಿಯೇ ಬಿದ್ದಿದ್ದು ಅದರ ನಂಬರ ಪರಿಶೀಲಿಸಿ ನೋಡಲಾಗಿ ಅದು ಡಿಯೋ ಹೊಂಡಾ ಕಂಪನಿಯ ಸ್ಕೂಟಿ ಮೋಟರ ಸೈಕಲ್ ಇದ್ದು ನಂಬರ: ಕೆ.ಎ-28/ಇ-2757 ಅಂತ ಇತ್ತು. ನಂತರ ನನ್ನ ತಮ್ಮನಿಗೂ ಹಾಗು ಆತನಿಗೆ ಅಪಘಾತಪಡಿಸಿದ ಚಾಲಕ ಗುಲಾಮರಸೂಲ ಇಬ್ಬರನ್ನು ನಾನು ಹಾಗು ಅಲ್ಲಿಯೇ ಇದ್ದ ಶಿವಾನಂದ ತಂದೆ ರಾಜಶೇಖರ ಉಕ್ಕಿನಾಳ ಹಾಗು ಮಲ್ಲಿಕಾಜರ್ುನ ತಂದೆ ಸಾಯಬಣ್ಣ ಹಡಪದ ನಾವೂ ಮೂರು ಜನರು ಸೇರಿ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ತಮ್ಮನು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ವೈದ್ಯರು ಉಪಚಾರ ನೀಡಿ, ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಹೋಗಲು ತಿಳಿಸಿದ ಮೇರೆಗೆ ನಾನು ನಮ್ಮ ತಮ್ಮನಾದ ಚಂದ್ರಶೇಖರ ಹಡಪದ ಈತನಿಗೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ಮೆಟ್ರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಲ್ಲಿಯವರೆಗೆ ಉಪಚಾರ ಕೊಡಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನ ತಮ್ಮನಿಗೆ ಅಪಘಾತ ಪಡಿಸಿದ ಡಿಯೋ ಹೊಂಡಾ ಕಂಪನಿಯ ಸ್ಕೂಟಿ ಮೋಟರ ಸೈಕಲ್ ನಂಬರ: ಕೆ.ಎ-28/ಇ-2757 ನೇದ್ದರ ಚಾಲಕ ಗುಲಾಮ ರಸೂಲ ತಂದೆ ಖಾಜಾಸಾಬ ಶೇಖ ಸಾ|| ಶಹಾ ಕಾಲೋನಿ ಶಹಾಪೂರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 149/2022 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 63/2022 ಕಲಂ 20(ಎ)(1), 20(ಬಿ)(2)(ಸಿ) ಎನ್ಡಿಪಿಎಸ್ ಎಕ್ಟ್ 1985: ಇಂದು ದಿನಾಂಕ 30.08.2022 ರಂದು 7:15 ಪಿ.ಎಮ್ ಕ್ಕೆ ಮಾನ್ಯ ಸಿ.ಪಿ.ಐ ಸಾಹೇಬರು ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಅಸಲ ಗಾಂಜಾ ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರವನ್ನು ಹಾಜರುಪಡಿಸಿದ್ದು, ಮಾನ್ಯ ಸಿ.ಪಿಐ ಸಾಹೇಬರು ಹಾಜರುಪಡಿಸಿದ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ಬೆಳಿಗ್ಗೆ 10.00 ಗಂಟೆಗೆ ನಾನು ಕೊಡೇಕಲ್ ಠಾಣೆಯಲ್ಲಿದ್ದಾಗ ನನಗೆ ಮಾಹಿತಿ ಬಂದಿರುವುದೆನೆಂದರೆ, ಕೊಡೇಕಲ್ ಠಾಣೆ ವ್ಯಾಪ್ತಿಯ ಕಕ್ಕೇರಾದ ಗೊಲಪಲ್ಲೇರದೊಡ್ಡಿ ಸಮೀಪ ಗೋನಾಟ್ಲರದೊಡ್ಡಿಯ ಒಬ್ಬ ವ್ಯೆಕ್ತಿಯು ತನ್ನ ಮನೆಯಲ್ಲಿ ಅಕ್ರಮವಾಗಿ ನಿಷೇಧಿತ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿ ಇಟ್ಟಿರುತ್ತಾನೆ ಹಾಗೂ ತನ್ನ ಮನೆಯ ಪಕ್ಕದ ಹೊಲದಲ್ಲಿ ಗಾಂಜಾ ಬೆಳೆ ಬೆಳೆದಿರುತ್ತಾನೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಈ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ ಸುರಪೂರ ರವರಿಗೆ ದಾಳಿ ಮಾಡುವ ಕುರಿತು ಸರ್ಚ ವಾರೆಂಟ್ ಹೊರಡಿಸಲು ಪತ್ರದ ಮುಖಾಂತರ ನಿವೇದಿಸಿಕೊಂಡು ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ ರವರಿಂದ ಸರ್ಚ ವಾರೆಂಟ್ ಪಡೆದುಕೊಂಡು ಕಕ್ಕೇರಾ ಉಪ ಪೊಲೀಸ್ ಠಾಣೆಯ ಸಿಬ್ಬಂದಿಯವರೊಂದಿಗೆ ಹೋಗಿ ಮುಖ್ಯಾಧಿಕಾರಿಗಳು ಪುರಸಭೆ ಕಕ್ಕೇರಾ ರವರಿಗೆ ಪತ್ರಾಂಕೀತ ಅಧಿಕಾರಿಗಳು ದಾಳಿ ಮಾಡುವ ಕಾಲಕ್ಕೆ ಖುದ್ದಾಗಿ ನಮ್ಮೊಂದಿಗೆ ಹಾಜರಿದ್ದು ಹಾಗೂ ಪಂಚನಾಮೆಯನ್ನು ಬರೆಯಿಸಿ ಕೊಡಲು 2 ಜನ ಸರಕಾರಿ ನೌಕರನ್ನು ಪಂಚರನ್ನಾಗಿ ಒದಗಿಸಿ ಕೊಡಲು ನಿವೇಧಿಸಿಕೊಂಡಿದ್ದರ ಮೇರೆಗೆ ಪಂಚರನ್ನಾಗಿ 1) ಶ್ರೀ ಕಾಶಿಮಸಾಬ ತಂದೆ ಹುಸೇನಸಾಬ ನದಾಪ್(ಪಿಂಜಾರ) ವಯ: 44 ವರ್ಷ ಉ: ಅಟೆಂಡರ್ ಪುರಸಭೆ ಕಕ್ಕೇರಾ, ಜಾ||ಮುಸ್ಲಿಂ, ಸಾ: ಕಕ್ಕೇರಾ, ತಾ||ಸುರಪೂರ, 2) ಶ್ರೀ ಜೆಟ್ಟೆಪ್ಪ ತಂದೆ ಗದ್ದೆಪ್ಪ ಬಾಚಾಳ ವಯ: 32 ವರ್ಷ ಉ: ಬಿಲ್ ಕಲೆಕ್ಟರ್ ಪುರಸಭೆ ಕಕ್ಕೇರಾ, ಜಾ||ಹಿಂದೂ ಬೇಡರ, ಸಾ: ಕಕ್ಕೇರಾ, ತಾ||ಸುರಪೂರ ರವರನ್ನು ಪಂಚನಾಮೆಯ ಕಾಲಕ್ಕೆ ಪಂಚರಾಗಿರಲು ನೇಮಿಸಿ ಕಳುಹಿಸಿದ್ದು ಹಾಗೂ ಮುಖ್ಯಾಧಿಕಾರಿಗಳು ಪುರಸಭೆ ಕಕ್ಕೇರಾ ರವರು ಬಂದಿದ್ದು, ದಾಳಿ ವೇಳೆಯಲ್ಲಿ ಕಿರಾಣಿ ಅಂಗಡಿಯಲ್ಲಿ ಮಾಲೀಕನಾದ ಆಂಜನೇಯ ಗುರಿಕಾರ ಸಾ||ಕಕ್ಕೇರಾ ರವರಿಗೆ ಮಾದಕ ವಸ್ತು ದೊರೆತಲ್ಲಿ ತೂಕ ಮಾಡಿ ಪ್ರಮಾಣವನ್ನು ತಿಳಿಸಲು ತೂಕದ ಯಂತ್ರದೊಂದಿಗೆ ಕಕ್ಕೇರಾ ಉಪ ಠಾಣೆಗೆ ಹಾಜರಾಗಲು ಪೊಲೀಸ್ ನೋಟೀಸು ಮೂಲಕ ಸೂಚಿಸಿ ಕರೆದು ಅವರನ್ನು ಹಾಗೂ ಮೇಲ್ಕಂಡ ಎಲ್ಲರನ್ನು ಉಪ ಠಾಣೆ ಕಕ್ಕೇರಾಕ್ಕೆ 1:00 ಪಿ.ಎಮ್ ಕ್ಕೆ ಬರಮಾಡಿಕೊಂಡು ಎಲ್ಲರಿಗೂ ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಮಾಹಿತಿ ಬಂದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಾದ ಹಣಮಂತ ತಂದೆ ದೇವಿಂದ್ರಪ್ಪ ಗೋನಾಟ್ಲರ್ ವ:42 ವರ್ಷ, ಜಾ||ಹಿಂದೂ ಬೇಡರ, ಉ: ಒಕ್ಕಲುತನ, ಸಾ|| ಗೋನಾಟ್ಲರದೊಡ್ಡಿ ಕಕ್ಕೇರಾ ಇತನಿಗೆ ಹಿಡಿದು ವಶಕ್ಕೆ ತೆಗೆದುಕೊಂಡು ಸದರಿಯವನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಒಣ ಗಾಂಜಾ ಒಟ್ಟು 75 ಕೆ.ಜಿ 560 ಗ್ರಾಂ ಒಣ ಗಾಂಜಾದ ಅಂದಾಜು ಕಿಮ್ಮತ್ತು 74 ಲಕ್ಷ ರೂ.ಗಳು ಹಾಗೂ ಸದರಿಯವನು ತನ್ನ ಜಮೀನಿನಲ್ಲಿ ಬೆಳೆದಿದ್ದ 46 ಕೆ.ಜಿ 920 ಗ್ರಾಂ ಹಸಿ (ಬೇರು ಸಮೇತ) ಗಾಂಜಾ ಗಿಡಗಳನ್ನು ಅಂದಾಜು ಕಿಮ್ಮತ್ತು 32 ಲಕ್ಷ ರೂ.ಗಳು ಹೀಗೆ ಒಟ್ಟು 122 ಕೆ.ಜಿ 480 ಗ್ರಾಂ ಒಣ ಮತ್ತು ಹಸಿ ಗಾಂಜಾದ ಅಂದಾಜು ಕಿಮ್ಮತ್ತು 1 ಕೋಟಿ 6 ಲಕ್ಷ ರೂ.ಗಳು ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು, ಇದರ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆರೋಪಿತನ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:63/2022 ಕಲಂ: 20(ಎ)(1), 20(ಬಿ)(2)(ಸಿ) ಎನ್ಡಿಪಿಎಸ್ ಎಕ್ಟ್ 1985 ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 31-08-2022 04:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080