ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-10-2021

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 81/2021 ಕಲಂ:323, 324, 498(ಎ), 504, 506 ಸಂ. 34 ಐಪಿಸಿ & 3 &4 ಡಿ.ಪಿ ಕಾಯ್ದೆ : ಫಿರ್ಯಾದಿಯ ಮದುವೆಯು ಆರೋಪಿ ನಂ;1 ನೇದ್ದವನೊಂದಿಗೆ ಸುಮಾರು 12 ವರ್ಷಗಳ ಹಿಂದೆ ಮದುವೆ ಆಗಿದ್ದು, ಮದುವೆ ಕಾಲಕ್ಕೆ 5 ತೊಲೆ ಬಂಗಾರು 1 ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಸುರಿಗೆ ಸಾಮಾನುಗಳು ಫಿರ್ಯಾದಿಯ ಮನೆಯವರು ಆರೋಪಿ ನಂ:1 ನೇದ್ದವನಿಗೆ ಕೊಟ್ಟಿದ್ದು, ಆರೋಪಿತನು ಈಗ 3-4 ವರ್ಷಗಳಿಂದ ಫಿರ್ಯಾಧಿಗೆ ನಿನ್ನ ತವರು ಮನೆಯಿಂದ ಇನ್ನೂ 2ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಆರೋಪಿ ನಂ:1 ನೇದ್ದವನು ದಿನಾಲೂ ಕಿರುಕುಳ ಕೊಡುವದು ಚಾಕು ತೋರಿಸುವದು ಲೈಂಗಿಕ ಕಿರುಕುಳ ನೀಡುವದು, ದೈಹಿಕ ಹಿಂಸೆ ನೀಡುವದು ಹಾಗೂ ಸಿಗರೇಟದಿಂದ ಗುಪ್ತಾಂಗಕ್ಕೆ ಸುಡುವುದಕ್ಕೆ ಬರುವದು ಮಾಡುತ್ತಿದ್ದನು. ಅಲ್ಲದೆ ದಿನಾಂಕ:28/10/2021 ರಂದು ಮದ್ಯಾಹ್ನ 12.30 ಗಂಟೆಗೆ ಆರೋಪಿತರೆಲ್ಲರೂ ಸೇರಿ ಫಿರ್ಯಾದಿಗೆ ಹೊಡೆಬಡೆ ಮಾಡಿ ಕೈ & ಕಾಲುಗಳಿಗೆ ರಕ್ತಗಾಯಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ ಬಗ್ಗೆ ಫಿರ್ಯಾದಿಯ ಸಾರಾಂಶವಿರುತ್ತದೆ.

 

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 129/2021 ಕಲಂ: 379 ಐಪಿಸಿ : ದಿನಾಂಕ:30/10/2021 ರಂದು 11-30 ಎಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಚನ್ನಾರೆಡ್ಡಿ ಸಾ:ಕೋಡಾಲ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ದ್ವಿಚಕ್ರ ವಾಹನವು ನನ್ನ ತೋಟದ ಮನೆಯಲ್ಲಿ ಮುಂದೆ ನಿಲ್ಲಿಸಿರುವಾಗ ದಿನಾಂಕ:27/10/2021 ರಂದು ರಾತ್ರಿ ಕಳುವಾಗಿರುತ್ತದೆ. ಗಾಡಿಯ ವಾಹನ ಸಂ. ಕೆಎ 33 ಡಬ್ಲ್ಯೂ 2828 ವಾಹನವು ನನ್ನ ಹೆಸರಿನಲ್ಲಿರುತ್ತದೆ. ದಯಾಳುಗಳಾದ ತಾವು ನನಗೆ ಗಾಡಿಯನ್ನು ಪರಿಶೀಲಿಸಿ, ಇದರ ಬಗ್ಗೆ ಕಾನೂನಿನ ಸೂಕ್ತ ಕ್ರಮ ತೆಗೆದುಕೊಂಡು ನನಗೆ ವಾಹನದ ಬಗ್ಗೆ ತಮ್ಮ ಗಮನಕ್ಕೆ ತರುವಲ್ಲಿ ತಮಗೆ ದೂರು ಕೊಡಲಾಗಿದೆ. ಈ ವಾಹನವು 60,000/- ಅಂದಾಜು ಬೆಲೆ ಬಾಳುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 129/2021 ಕಲಮ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ: 114/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ. 30/10/2021 ರಂದು 3.00 ಪಿ.ಎಮ್ ಕ್ಕೆ ಪಿರ್ಯಾದಿ ರವರು ಠಾಣೆಗೆ ಬಂದು ಒಂದು ದೂರು ಅಜರ್ಿ ನೀಡಿದ್ದು ಸಾರಾಂಶವೆನಂದರೆ, ದಿನಾಂಕ; 12/10/2021 ರಂದು ಬೆಳೆಗ್ಗೆ 9-00 ಗಂಟೆ ಸುಮಾರಿಗೆ ನಾವು ಮನೆಯಲ್ಲಿರುವಾಗ ನನ್ನ ಗಂಡ ಸಾಬಣ್ಣ ಈತನು ಯಾದಗಿರಿಯ ಭೀಮಾ ನದಿಯ ಹಳೆ ಬ್ರಿಡ್ಜಗೆ ಹೋಗಿ ಸ್ನಾನ ಮಾಡಿ ಬರುತ್ತೇವೆ ಅಂತಾ ಹೇಳಿ ಮನೆಯಿಂದ ಹೊರಟು ಹೋದನು. ನಂತರ 10-30 ಎಎಮ್ ಸುಮಾರಿಗೆ ನಾನು ಮತ್ತು ನನ್ನ ಮೈದುನ ಭೋಜಲಿಂಗ ಮನೆಯಲ್ಲಿರುವಾಗ ಬೋಜಲಿಂಗ ಈತನಿಗೆ ಭೀಮರಾಯ ಈತನು ಫೋನ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ಅಣ್ಣ ಸಾಬಣ್ಣ ಮತ್ತು ನಾನು ಇಬ್ಬರು ಭೀಮಾ ನದಿಯ ಹಳೆ ಬ್ರಿಡ್ಜಗೆ ಸ್ನಾನ ಮಾಡಲು ಬಂದಿದ್ದು, ಭೀಮಾ ನದಿಯ ದಂಡೆಯಲ್ಲಿ ಸ್ನಾನ ಮಾಡುತ್ತಿರುವಾಗ ಸಾಬಣ್ಣ ಈತನಿಗೆ ಕಾಲು ಜಾರಿ ನೀರಿನಲ್ಲಿ ಬಿದ್ದು, ನದಿ ನೀರಿನ ಪ್ರವಾಹಕ್ಕೆ ಹರಿದುಕೊಂಡು ಹೋಗಿರುತ್ತಾನೆ ನೀವು ಕೂಡಲೇ ಬನ್ನಿ ಅಂತಾ ತಿಳಿಸಿದನು. ಆಗ ನಾನು ಮತ್ತು ಮೈದುನ ಭೋಜಲಿಂಗ ಇಬ್ಬರು ಕೂಡಿಕೊಂಡು ಭೀಮಾ ನದಿಯ ಹಳೆ ಬ್ರಿಡ್ಜ ಕೆಳಗೆ ನದಿಯ ದಂಡೆಗೆ ಹೋಗಿ ಭೀಮರಾಯ ಈತನಿಗೆ ವಿಚಾರಿಸಲಾಗಿ ತಿಳಿಸಿದ್ದೆನಂದರೆ, ನಾನು ಮತ್ತು ಸಾಬಣ್ಣ ಇಬ್ಬರೂ ಕೂಡಿಕೊಂಡು 9-30 ಎಎಮ್ ಸುಮಾರಿಗೆ ಭೀಮಾ ನದಿಗೆ ಬಂದು ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಸಾಬಣ್ಣ ಈತನು ಕಾಲು ಜಾರಿ ನೀರಿನಲ್ಲಿ ಬಿದ್ದನು ಆಗ ನಾನು ಅವನಿಗೆ ಹಿಡಿಯಲು ಹೋದಾಗ ನಾನು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು ನದಿ ದಂಡೆಯಲ್ಲಿರುವ ಕಲ್ಲನ್ನು ಹಿಡಿದುಕೊಂಡು ನಾನು ಮೇಲಕ್ಕೆ ಬಂದಿದ್ದು ಸಾಬಣ್ಣ ಈತನಿಗೆ ಈಜು ಬಾರದೇ ಇದ್ದುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ನೀರು ವೇಗವಾಗಿ ಹರಿಯುತ್ತಿದ್ದು ನೀರಿನ ರಭಸಕ್ಕೆ ಸಾಬಣ್ಣ ಈತನು ಹರಿದುಕೊಂಡು ಹೋಗಿರುತ್ತಾನೆ ಅಂತಾ ತಿಳಿಸಿದನು. ನಂತರ ನಾನು ಮತ್ತು ಮೈದುನ ಬೋಜಲಿಂಗ, ಭೀಮರಾಯ, ರಾಜು ಮತ್ತು ಇನ್ನೀತರರು ಕೂಡಿಕೊಂಡು ನನ್ನ ಗಂಡ ಸಾಬಣ್ಣ ಈತನು ನದಿಯ ನೀರಿನಲ್ಲಿ ಹರಿದುಕೊಂಡು ಮುಂದೆ ದಂಡೆಯಲ್ಲಿ ಸಿಲುಕಿರಬಹುದು ಅಂತಾ ದಂಡೆಯಲ್ಲಿ ಸ್ವಲ್ಪ ದೂರದವೆರೆಗೆ ಹೋಗಿ ಹುಡುಕಾಡಲಾಗಿ ನನ್ನ ಗಂಡ ಸಾಬಣ್ಣ ಈತನು ಸಿಕ್ಕಿರುವುದಿಲ್ಲ. ನನ್ನ ಗಂಡ ಸಾಬಣ್ಣ ಈತನಿಗೆ ನದಿಯ ದಂಡೆಯ ಅಕ್ಕಪಕ್ಕದ ಊರುಗಳಲ್ಲಿ ಹುಡುಕುತ್ತಾ ಸಂಗಮದವರೆಗೆ ಹೋಗಿ ಹುಡುಕಾಡಲಾಗಿ ಇಲ್ಲಿಯವರೆಗೆ ನನ್ನ ಗಂಡ ಸಾಬಣ್ಣ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಕಾಣೆಯಾದ ನನ್ನ ಗಂಡನ ಚಹರೆ ಪಟ್ಟಿ, ಸಾದಾಕಪ್ಪು ಬಣ್ಣ, ದುಂಡನೆಯ ಮುಖ, ಎತ್ತರ 5 ಪೀಟ್ 4 ಇಂಚು ಎತ್ತರ, ಸಾಧಾರಣ ಮೈಕಟ್ಟು, ತಲೆಯ ಮೇಲೆ ಕಪ್ಪು ಕೂದಲು, ಈಜು ಆಡುತ್ತಿರುವಾಗ ಚಾಕಲೇಟ್ ಬಣ್ಣದ ಜ್ಯಾಂಗ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ. ಕಾರಣ ಕಾಣೆಯಾದ ನನ್ನ ಗಂಡ ಸಾಬಣ್ಣ ತಂದೆ ಶರಣಪ್ಪ ಸೂಗೂರು ಸಾ; ಕೋಟಗಾರವಾಡ ಯಾದಗಿರಿ ಈತನಿಗೆ ಹುಡುಕಾಡಲಾಗಿ ಇಲ್ಲಿಯವರೆಗೆ ಯಾವುದೇ ಸುಳಿವು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಂದ ಠಾಣೆ ಗುನ್ನೆ ನಂ.114/2021 ಕಲಂ. ಮನುಷ್ಯಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ:115/2021 ಕಲಂ: 323, 324, 307, 504, 506, ಸಂ. 34 ಐಪಿಸಿ : ಇಂದು ದಿನಾಂಕ; 30/10/2021 ರಂದು 8-30 ಪಿಎಮ್ ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ; 30/10/2021 ರಂದು 3-50 ಪಿಎಮ್ ಸುಮಾರಿಗೆ ನಾನು ಯಾದಗಿರಿಯ ಲಕ್ಷ್ಮೀ ನಗರದಲ್ಲಿರುವ ಬರುವ ಸವರ್ೆ ನಂ.383 ನೇದ್ದರ ಫ್ಲಾಟ್ ನಂ.78, 79 ನೇದ್ದು ಸ್ವಚ್ಚ ಮಾಡಿಸಬೇಕಾಗಿದ್ದರಿಂದ ಸದರಿ ಜಾಗೆಯನ್ನು ನೋಡಿಕೊಂಡು ಬಂದರಾಯಿತು ಅಂತಾ ಅಲ್ಲಿಗೆ ಹೋಗಿ ನನ್ನ ಫ್ಲಾಟಗಳನ್ನು ನೋಡಿಕೊಂಡು ಬರುತ್ತಿರುವಾಗ ನನ್ನ ತಂಗಿಯ ಗಂಡ ಮಹ್ಮದ ಸಲೀಂ ಈತನ ವಾಟರ ಸವರ್ಿಸಿಂಗ್ ಸೆಂಟರ ಮುಂದುಗಡೆ ರೋಡಿನ ಮೇಲೆ 4-00 ಪಿಎಮ್ ಸುಮಾರಿಗೆ ಬರುತ್ತಿರುವಾಗ ಮಹ್ಮದ ಸಲೀಂ ತಂದೆ ಮಹ್ಮದ ಇಸ್ಮಾಯಿಲ್, ಮಹ್ಮದ ಜಾವೀದ ತಂದೆ ಮಹ್ಮದ ಇಸ್ಮಾಯಿಲ್, ಮಹ್ಮದ ಇಸ್ಮಾಯಿಲ್ ಈ ಮೂವರು ಕೂಡಿಕೊಂಡು ನನ್ನ ಹತ್ತಿರ ಬಂದು ಲೇ ಅಪ್ಸರ ಸುಳೇ ಮಗನೇ ನಿನ್ನ ಅಣ್ಣ ಮಹ್ಮದ ಅಫ್ಜಲ ಈತನ ಫ್ಲಾಟಗಳಾದ ನಂ.77, 80 ನೇದ್ದವುಗಳನ್ನು ನಿನೇ ಅವನಿಗೆ ಕರೆದುಕೊಂಡು ಬಂದು ಅಗ್ರಿಮೆಂಟ್ ಮಾಡಿಸಬೇಕು ಇಲ್ಲವಾದರೆ ನಿನಗೆ ಸುಮ್ಮನೆ ಬಿಡುವುದಿಲ್ಲ ಅಂತಾ ಅಂದವರೇ ಮಹ್ಮದ ಸಲೀಂ ಈತನು ಅಲ್ಲೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನಿನ್ನದು ಬಹಳ ಆಗಿದೆ ಮಗನೇ ನಿನೇ ಫ್ಲಾಟ್ ಅಗ್ರಿಮೆಂಟ್ ಮಾಡಲು ಬಿಡುತ್ತಿಲ್ಲ ನಿನ್ನನ್ನು ಮುಗಿಸಿದರೆ ಎಲ್ಲಾ ಸರಿ ಹೋಗುತ್ತದೆ ಅಂತಾ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಗೆ ಹೊಡೆದು ಭಾರಿರಕ್ತಗಾಯ ಮಾಡಿದನು. ಮಹ್ಮದ ಜಾವೀದ್ ಈತನು ಕೈ ಮುಷ್ಠಿ ಮಾಡಿ ನನ್ನ ತುಟಿಗೆ ಹೊಡೆದು ರಕ್ತಗಾಯಗೊಳಿಸಿದನು. ಮಹ್ಮದ ಇಸ್ಮಾಯಿಲ್ ಈತನು ನನಗೆ ಕಪಾಳಕ್ಕೆ ಹೊಡೆದು ಈ ಚಿನಾಲ್ಕೇ ಬಚ್ಚೆ ಕೊ ಚೋಡ್ ಮತ್ ಇಸಕೋ ಜಾನ್ಸ್ ಮಾರೆಂಗೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದನು. ಆಗ ನಾನು ಚೀರಾಡುತ್ತಿರುವಾಗ ಅಲ್ಲೇ ಇದ್ದ ಗೋಪಾಲ ರಾಠೋಡ ಸಾ; ಸೂಗೂರು ಎನ್ ತಾಂಡಾ ಮತ್ತು ಈತರರು ಜಗಳ ಬಿಡಿಸಿದ್ದು ನಂತರ ನಾನು ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿದ್ದು ಆ ಸಮಯದಲ್ಲಿ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಕುರಿತು ಬಂದು ನನಗೆ ವಿಚಾರಿಸಿದ್ದು ಆಗ ನಾನು ಈಗ ಸದ್ಯ ನನ್ನದು ಯಾವುದೇ ದೂರು ಪಿರ್ಯಾಧಿ ಇರುವುದಿಲ್ಲ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ನಂತರ ಠಾಣೆಗೆ ಬಂದು ದೂರು ಸಲ್ಲಿಸುವುದಾಗಿ ತಿಳಿಸಿದ್ದು ಈಗ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸುತ್ತಿದ್ದು ನನಗೆ ಅವಾಚ್ಯವಾಗಿ ಬೈದು, ಹೊಡೆಬಡೆ ಮಾಡಿ ರಕ್ತಗಾಯಗೊಳಿಸಿ, ಕೊಲೆಯ ಪ್ರಯತ್ನ ಮಾಡಿ, ಜೀವದ ಬೆದರಿಕೆ ಹಾಕಿದ 1) ಮಹ್ಮದ ಸಲೀಂ ತಂದೆ ಮಹ್ಮದ ಇಸ್ಮಾಯಿಲ್ 2) ಮಹ್ಮದ ಜಾವೀದ ತಂದೆ ಮಹ್ಮದ ಇಸ್ಮಾಯಿಲ್ 3) ಮಹ್ಮದ ಇಸ್ಮಾಯಿಲ್ ಸಾಃ ಎಲ್ಲರೂ ನಾಯ್ಕಲ್ ರವರ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.115/2021 ಕಲಂ.323, 324, 307, 504, 506 ಸಂ.34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 145/2021 ಕಲಂ. 406,420,468.ಐ.ಪಿ.ಸಿ ಕಾಯ್ದೆ : ದಿನಾಂಕ 30-10-2021 ರಂದು ಮುಂಜಾನೆ 11-30 ಗಂಟೆಗೆ ಠಾಣೆಯಲ್ಲಿರುವಾಗ ಶ್ರೀ ನವಿನಕುಮಾರ ತಂದೆ ಮೋಹನಲಾಲ ಸೋಲಂಕಿ, ಸಾ|| ಕಾಜಗಾರವಾಡಿ ಯಾದಗಿರ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿ ನಿಡಿದ್ದೆನೆಂದರೆ ದಿನಾಂಕಃ 18/08/2021 ರಂದು ಬದ್ರಿನಾಥ ಇವರು ತಮ್ಮ ಮೋಬೈಲ ನಂ. 9848061041 ನೇದ್ದರಿಂದ ನನ್ನ ಮೋಬೈಲ ನಂಬರ. 9448333391 ನೇದ್ದಕ್ಕೆ ಕರೆ ಮಾಡಿ ಪೌಲುಟರಿ ಪಾರ್ಮ ಸಲುವಾಗಿ 283 ಕ್ವಿಂಟಲ ಕನಕಿ ಬೇಕಾಗಿದೆ ಕಳುಹಿಸಿರಿ ಅಂತಾ ಆರ್ಡರ ಮಾಡಿದಾಗ ನಾನು ಕನಕಿ ರೇಟ್ ಮತ್ತು ಪೇಮೆಂಟ ವಗೈರೆ ಮಾಡುವ ಬಗ್ಗೆ ಅವನ ಜೊತೆಯಲ್ಲಿ ಮಾತುಕತೆ ಮಾಡಿ ಅಂದೆ ದಿನಾಂಕಃ18/08/2021 ರಂದು ನನ್ನ ಹೆಸರಿನಲ್ಲಿರುವ ನವೀನ ಇಂಡಸಟ್ರೀಸ ಇನವಾಯಿಸ ನಂ.1814 ನೇದ್ದರ ಮುಖಾಂತರ ಯಾದಗಿರಿ ನಗರದಲ್ಲಿರುವ ಬಿಸ್ಮಿಲ್ಲಾ ಟ್ರಾನ್ಸಪೋರ್ಟ (ಟ್ರಾನ್ಸಪೋರ್ಟ ಮಾಲಿನ ಹೆಸರು ಹಾಜಿಸಾಬ) ದ ಲಾರಿ ನಂ. ಕೆ.ಎ-33-4989 (ಸದರಿ ಲಾರಿ ಚಾಲಕನ ಹೆಸರು ಅಲ್ತಾಫ) ನೇದ್ದರಲ್ಲಿ 283 ಕ್ವಿಂಟರ ಕನಕಿ ಲೋಡ ಮಾಡಿ ಬದ್ರಿನಾಥ ಇವರ ದುಗರ್ಾ ಭವಾನಿ ಟ್ರೇಡರ್ಸ ಎಲ.ಬಿ. ನಗರ ಹೈದ್ರಾಬಾದಗೆ ಕಳುಹಿಸಿದ್ದು ಇರುತ್ತದೆ. ಅದರ ಒಟ್ಟು ಮೊತ್ತ 4,69,780=00 ರೂ. ಇರುತ್ತದೆ. ರೇಟ ಮತ್ತು ಪೇಮೆಂಟ ಮಾಡುವ ಮಾತುಕತೆಯಲ್ಲಿ ನಮ್ಮಿಬ್ಬರ ಮದ್ಯ ಕನಕಿ ಡಿಲಿವರೆ ಆಗಿದ ದಿನವೇ ಪೇಮೆಂಟ ಮಾಡಲು ನಿಧರ್ಾರ ಆಗಿತ್ತು. ಬಿಸ್ಮಿಲ್ಲಾ ಟ್ರಾನ್ಸಪೋರ್ಟ ಲಾರಿ ಚಾಲಕ ಅಲ್ತಾಫ ದಿನಾಂಕಃ 18/08/2021 ರಂದು ಸಂಜೆ 4:30-5:00 ಗಂಟೆಯ ಸುಮಾರಿಗೆ ಯಾದಗಿರ ನಗರದಲ್ಲಿ ಕನಕಿ ಲಾರಿ ಲೋಡ ಮಾಡಿಕೊಂಡು ಮರು ದಿನ ದಿನಾಂಕಃ 19/08/2021 ರಂದು ಬೆಳಗ್ಗೆ ದುಗರ್ಾ ಭವಾನಿ ಟ್ರೇಡರ್ಸ ಎಲ.ಬಿ. ನಗರ ಹೈದ್ರಾಬಾದ ಹೋಗಿ ಮುಟ್ಟಿದಾಗ ಸದರಿ ದುಗರ್ಾ ಭವಾನಿ ಟ್ರೇಡರ್ಸ ಕಂಪನಿ ಮಾಲಿಕನಾದ ಬದ್ರಿನಾಥ ಈತನು ಲಾರಿ ಡ್ರೈವರ ಅಲ್ತಾಫಗೆ ಈ ಕನಕಿ ಲಾರಿಯನ್ನು ಹೈದ್ರಾಬಾದ ನಗರದ ಕಡತಾಲದಲ್ಲಿರುವ ಒಂದು ಪೌಲುಟರಿ ಫಾರ್ಮದಲ್ಲಿ ಅನಲೋಡ ಮಾಡಬೇಕು ಅದರ ಕಿರಾಯ ಕೊಡುತಿನಿ ಎಂದು ಹೇಳಿ ನಾನು ಕಳುಹಿಸಿದ ಕನಕಿ ಲಾರಿಗೆ ಕಡತಾಲದಲ್ಲಿರುವ ವೀರಯ್ಯ ಪೌಲುಟರಿ ಫಾರ್ಮದಲ್ಲಿ ಅನಲೋಡ ಮಾಡಿಸಿ ಲಾರಿ ಚಾಲಕನಿಗೆ ಲಾರಿ ಕಿರಾಯ ಕೊಟ್ಟು ವಾಪಸ್ಸು ಕಳುಹಿಸಿದ್ದನು. ಲಾರಿ ಅನಲೋಡ ಆದ ನಂತರ ನಾನು ಬದ್ರಿನಾಥಗೆ ಫೋನ ಮಾಡಿ ಪೇಮೆಂಟ ಮಾಡಲು ಹೇಳಿದಾಗ ಆತ ಇವತ್ತು ನಾಳೆ ಮಾಡತಿನಿ ಅಂತಾ ನೆಪ ಮಾಡಲು ಪ್ರಾರಂಭಿಸಿದ. ಇದಾದ ನಂತರ ದಿನಾಂಕಃ 21-08-2021 ರಂದು ಬದ್ರಿನಾಥ ಈತನು ನನಗೆ ಫೋನ ಮಾಡಿ ವೆಂಕಟೇಶ್ವರ ಟ್ರೇಡಿಂಗ ಕಂಪನಿಯಿಂದ ನಿಮಗೆ 4 ಲಕ್ಷ ರೂಪಾಯಿ ಯುನಿಯನ ಬ್ಯಾಂಕ ಮುಖಾಂತರ ಚೆಕ ನಂ. 02001008 ನೇದ್ದರ ಮುಖಾಂತರ ಕಳುಹಿಸುತ್ತಿದ್ದಿನಿ ಅಂತಾ ಹೇಳಿ ಸದರಿ ಚೆಕನ್ನು ನನ್ನ ಮೋಬೈಲಗೆ ವಾಟ್ಸ ಅಪ ಮಾಡಿರುತ್ತಾನೆ. ಆ ದಿನ ನಾನು ಬ್ಯಾಂಕದಲ್ಲಿ ನೋಡಲಾಗಿ ನನ್ನ ಬ್ಯಾಂಕ ಖಾತೆಗೆ ಯಾವುದೇ ಹಣ ಜಮಾ ಆಗಿರುವದಿಲ್ಲ. ಬದ್ರಿನಾಥ ಈತನು ನನಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದರಿಂದ ನಾನು ಪದೇ ಪದೇ ಅವನಿಗೆ ಫೋನ ಮಾಡಿದಾಗ ದಿನಾಂಕಃ 24/08/2021 ರಂದು ಬದ್ರಿನಾಥ ನನಗೆ ಎಸ್.ಬಿ.ಐ. ಬ್ಯಾಂಕಿನ ಸ್ಲೀಪ ವಾಟ್ಸ ಅಪ ಮಾಡಿ 3 ಲಕ್ಷ ರೂಪಾಯಿ ಚೆಕ ನಂ. 002061 ನೇದ್ದರಿಂದ ಆರ.ಟಿ.ಜಿ.ಎಸ್ ಮಾಡುತ್ತಿದ್ದಿನಿ ಅಂತಾ ಅದರ ಸ್ಲಿಪ ನನಗೆ ವಾಟ್ಸ ಅಪ ಮಾಡಿರುತ್ತಾನೆ. ಮತ್ತು ಪೇಮೆಂಟ ಆಗಿದೆ ಅಂತಾ ಹೇಳಿ ಯು.ಟಿ.ಆರ. ನಂಬರ ಸಹ ನನಗೆ ವಾಟ್ಸ ಅಪ ಮಾಡಿರುತ್ತಾನೆ. ಆದರೆ ಆ ಪೇಮೆಂಟ ಸಹ ನಮ್ಮ ಬ್ಯಾಂಗ ಖಾತೆಗೆ ಜಮಾ ಆಗಿರುವದಿಲ್ಲ. ಬದ್ರಿನಾಥ ನನಗೆ ಹಣ ಕೊಡುತ್ತೇನೆ ಅಂತಾ ನಂಬಿಸಿ, ಕೊಡದೇ ನನಗೆ ಮೋಸ ಮಾಡುತ್ತಿದ್ದರಿಂದ ನಾನು ಹೈದ್ರಾಬಾದಗೆ ಬರುತ್ತೇನೆಂದು ಒಂದು ಸಲ ಜೋರಾಗಿ ಮಾತನಾಡಿದಾಗ ಮರು ದಿನ ದಿನಾಂಕಃ 25/08/2021 ರಂದು ಬದ್ರಿನಾಥ ಈತನು ಹೈದರಾಬಾದ ಕೆನರಾ ಬ್ಯಾಂಕದಿಂದ ತನ್ನ ಅಕೌಂಟ ನಂ. 5488101001338 ದಿಂದ ಯಾದಗಿರ ನಗರದ ಕೆನರಾ ಬ್ಯಾಂಕದಲ್ಲಿರುವ ನನ್ನ ಅಕೌಂಟ ನಂ. 0523201002120 (ನವೀನ ಇಂಡಸ್ಟ್ರೀಸ ಹೆಸರಿಗೆ) ನೇದ್ದಕ್ಕೆ 70,000=00 ಪೇಮೆಂಟ ಮಾಡಿ ಉಳಿದ ಹಣವನ್ನು 2-3 ದಿನಗಳಲ್ಲಿ ಕಳುಹಿಸುತ್ತೇನೆ ಅಂತಾ ತಿಳಿಸಿದನು. 2-3 ದಿನ ಗತಿಸಿದರೂ ಕೂಡ ಬದ್ರಿನಾಥ ಈತನು ಉಳಿದ ಹಣವನ್ನು ಕಳುಹಿಸದೆ ಇದ್ದಾಗ ನಮ್ಮ ಕಡೆಯಿಂದ ಏಸಿಯನ ಅಗ್ರೋ ರೈಸ ಮಿಲ ಮಾಲಿಕನಾದ ಚಾಂದ ಇವರು ಹೈದರಾಬಾದಗೆ ಹೋಗಿ ನಮ್ಮ ಪೇಮೆಂಟ ಸಲುವಾಗಿ ವಿಚಾರ ವಿನಿಮಯ ಮಾಡಿದಾಗ ಅವರ ಕೈಯಲ್ಲಿ ನವೀ ಇಂಡಸಟ್ರೀಸ ಹೆಸರಿನಲ್ಲಿ 3,70,000/- ರೂ. ಗಳ ಚೆಕ ನಂ.001010 ನೇದ್ದನ್ನು ಕೊಟ್ಟು ದಿನಾಂಕಃ 09-09-2021 ರಂದು ಚೆಕ ಪಾಸ ಮಾಡಿಕೊಳ್ಳರಿ ಅಂತಾ ಹೇಳಿ ಕಳುಹಿಸಿರುತ್ತಾನೆ. ಅದರಂತೆ ದಿನಾಂಕಃ 09/09/2021 ರಂದು ನಾನು ಬ್ಯಾಂಕಗೆ ಹೋಗಿ ನೋಡಲಾಗಿ ನವೀ ಇಂಡಸಟ್ರೀಸ ಹೆಸರಿನಲ್ಲಿ ಚೆಕ ಪಾಸ ಆಗಿರುವದಿಲ್ಲ, ಬ್ಯಾಂಕ ಮ್ಯಾನೇಜರ ಈ ಹೆಸರು ತಪ್ಪು ಇದೆ ಅಂತಾ ತಿಳಿಸಿದಾಗ ಬದ್ರಿನಾಥ ಈತನು ತಪ್ಪು ಹೆಸರು ಬರೆದು ನಮಗೆ ಮೋಸ ಮಾಡಿದ್ದಾನೆ ಅಂತಾ ಗೊತ್ತಾಗಿದ ನಂತರ ಅವನಿಗೆ ಪುನಃ ಫೋನ ಮಾಡಿ ಬೇಕಂತ ಹೆಸರು ತಪ್ಪು ಹಾಕಿ ಚೆಕಕೊಟ್ಟು ನಮಗೆ ಫ್ರಾಡ ಮಾಡುತ್ತಿದ್ದಿ ಅಂತಾ ಜೋರಾಗಿ ಹೇಳಿದಾಗ ಸದರಿಯವನು ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳರಿ, ನನ್ನ ಹತ್ತಿರ ಹಣ ಇಲ್ಲ, ನಿಮಗೆ ಹಣ ಕೊಡಲು ಆಗುವದಿಲ್ಲ ಅಂತಾ ಹೇಳಿ ನನ್ನ ಫೋನ ನಂಬರವನ್ನು ಬ್ಲ್ಯಾಕ ಲಿಸ್ಟಿನಲ್ಲಿ ಹಾಕಿರುತ್ತಾನೆ. ಬದ್ರಿನಾಥ ಈತನಿಂದ ನನಗೆ ಇನ್ನೂ 3,99,780=00 ರೂ ಬರಬೇಕಾಗಿದೆ. ಇದಾದ ನಂತರ ನಮಗೆ ಮಾಲ ಕೊಡವ ಏಸಿಯನ ಅಗ್ರೋ ರೈಸ ಮಿಲ ಮಾಲಕ ಚಾಂದ ಇವರು ನಮ್ಮ ಪರವಾಗಿ ನಿರಂತರವಾಗಿ ಫೋನಿನಲ್ಲಿ ಬದ್ರಿನಾಥ ಜೊತೆ ಮಾತನಾಡಿ ನಮಗೆ ಕೊಡುವ ಉಳಿದ ಹಣದ ಬಗ್ಗೆ ಕೇಳಿದಾಗ ಇವತ್ತು ನಾಳೆ ಕೊಡತಿನಿ ಅಂತಾ ನೆಪ ಹೇಳುತ್ತಿದ್ದಾನೆ ಅಂತಾ ತಿಳಿದುಬಂದಿರುತ್ತದೆ. ಆದರೆ ಇದುವರೆಗೆ ಸದರಿ ಹಣ ನನಗೆ ಪಾವತಿಸಿರುವದಿಲ್ಲ. ಆದ ಕಾರಣ ಮಾನ್ಯರವರು ನನಗೆ ಉಳಿದ ಹಣ ಕೊಡುತ್ತೇನೆ ಅಂತಾ ನಂಬಿಸಿ ಮಾಲು ಪಡೆದು ಹಣವನ್ನು ಕೊಡಲಾರದೇ ಮೋಸ/ನಂಬಿಕೆ ದ್ರೋಹ ಮಾಡಿದ ದುಗರ್ಾ ಭವಾನಿ ಟ್ರೇಡರ್ಸ ಕಂಪನಿಯ ಮಾಲಿಕನಾದ ಬದ್ರಿನಾಥ ತಂದೆ ಜ್ಞಾನೇಶ್ವರ ಸಾ|| ಎಲ.ಬಿ.ನಗರ ಹೈದರಾಬಾದ (ತೆ.ರಾ) ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಿ ನನಗೆ ನ್ಯಾಯ ದೊರಕಿಸಿಕೊಡಬೇಕು ಅಂತಾ ವಿನಂತಿ ಅಂತಾ ನಿಡಿದ ಅಜರ್ಿ ಸಾರಾಂಶದ ಮೆಲಿಂದ . ಠಾಣಾ ಗುನ್ನೆ 145/2021 ಕಲಂ 406,420,468.ಐ.ಪಿ.ಸಿ.. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 31-10-2021 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080