ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-12-2021
ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ: 135/2021 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ.30/12/2021 ರಂದು 4-50 ಪಿಎಂಕ್ಕೆ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ವರದಿ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 30/12/2021 ರಂದು 2-30 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಬಂಡಿಗೇರಾ ಏರಿಯಾದ ಶ್ರೀ ಚಂದ್ರಾಮ ಗುಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಅಬ್ದುಲ ಬಾಷಾ ಪಿಸಿ-237, ಸಾಬರೆಡ್ಡಿ ಪಿಸಿ-379 ರವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 3-40 ಪಿಎಂಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ತನ್ನ ಹೆಸರು ಚಂದ್ರಕಾಂತ ತಂದೆ ನರಸಪ್ಪ ಮಡಿವಾಳ ವ;51 ಜಾ; ಮಡಿವಾಳ ಉ; ಕೂಲಿಕೆಲಸ ಸಾ; ಬಂಡಿಗೇರಾ ಯಾದಗಿರಿ ಅಂತಾ ತಿಳಿಸಿದ್ದು ಆರೋಪಿತನಿಂದ ಮಟಕಾ ಜೂಜಾಟದ 1) ನಗದು ಹಣ 560/- 2) ಒಂದು ಮಟಕಾ ಅಂಕಿಬರೆದ ಚಿಟಿ ಅ.ಕಿ.00=00 3) ಒಂದು ಬಾಲಪೆನ್ ಅ.ಕಿ.00=00 ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 3-40 ಪಿಎಂ ದಿಂದ 4-40 ಪಿಎಂ ದವರೆಗೆ ಮುಗಿಸಿದ್ದು ನಂತರ ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಮದ್ಯಾಹ್ನ 4-50 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿತನ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.135/2021 ಕಲಂ. 78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ 136/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಬಜಾಜ್ ಪಲ್ಸರ್ ಮೋಟರ್ ಸೈಕಲ್ ನಂ ಏಂ 33 ಘ 3319 ಅಂತಾ ಇದ್ದು, ಅದರ ಇಟಿರಟಿಜ ಓಠ-ಆಊಙಘಎಐ81541, ಅಊಂಖಖಖ ಓಔ-ಒಆ2ಂ11ಅಙಘಿಎಘಐ29046, ಅಂತಾ ಇರುತ್ತದೆ. ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 40,000/-ರೂ|| ಗಳು. ಈ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದೆನು. ಹೀಗಿದ್ದು ದಿನಾಂಕ 14/12/2021 ರಂದು ರಾತ್ರಿ 09-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ತೆಗೆದುಕೊಂಡು ನನ್ನ ಗೆಳೆಯನ ಹುಟ್ಟು ಹಬ್ಬದ ಪ್ರಯುಕ್ತ ಯಾದಗಿರಿಯ ಗಂಜ್ ರೋಡಿನಲ್ಲಿ ಇರುವ ಸೈದಾಪೂರ ಹೊಟೇಲ್ಗೆ ಬಂದು ನನ್ನ ಮೋಟರ್ ಸೈಕಲ್ ಹೊಟೇಲ್ ಮುಂದೆ ನಿಲ್ಲಿಸಿ ನಾನು ಹೊಟೇಲ್ದಲ್ಲಿ ರೂಮ್ ಮಾಡಿಕೊಂಡು ಉಳಿದುಕೊಂಡೆನು. ನಂತರ ದಿನಾಂಕ 15/12/2021 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರಿಗೆ ಎದ್ದು ನೋಡಿದಾಗ ಹೊಟೇಲ್ ಮುಂದೆ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಗಾಭರಿಯಾಗಿ ನನ್ನ ಸಂಗಡ ಇದ್ದ ಭೀಮರಾಯ ತಂದೆ ಹಣಮಂತ್ರಾಯ & ಯಾದಗಿರಿಯಲ್ಲಿ ಇದ್ದ ರಿಯಾಜ್ ಪಟೇಲ್ ತಂದೆ ರಫಿಕ್ ಪಟೇಲ್ ಇವರಿಗೆ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಹೊಟೇಲ್ ಅಕ್ಕ ಪಕ್ಕದಲ್ಲಿ ಹಾಗೂ ಇತರ ಕಡೆಗಳಲ್ಲಿ ತಿರುಗಾಡಿ ನೋಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಯಾರೋ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ಹುಡುಕಾಡಿದರೂ ಕೂಡ ನನ್ನ ಮೋಟರ್ ಸೈಕಲ್ ಸಿಗದೇ ಇದ್ದರಿಂದ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 136/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 71/2021 ಕಲಂ 279, 338 ಐಪಿಸಿ : ದಿನಾಂಕ 30/12/2021 ರಂದು ಸಮಯ 8-15 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಿನ ವಿಚಾರಣೆ ನಂತರ, ಆಸ್ಪತ್ರೆಯಲ್ಲಿ ಹಾಜರಿದ್ದ ಗಾಯಾಳು ಕೋನಪ್ಪ ಈತನ ಪತ್ನಿಯಾದ ಪಿಯರ್ಾದಿ ಶ್ರೀಮತಿ ಶಾಂತಮ್ಮ ಗಂಡ ಕೋನಪ್ಪ ಭಗೀರಥ ವಯ;30 ವರ್ಷ, ಜಾ;ಉಪ್ಪಾರ, ಉ;ಹೊಲಮನಿ ಕೆಲಸ, ಸಾ;ಹೊನಗೇರಿ, ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಈ ಮೇಲ್ಕಾಣಿಸಿದ ಹೆಸರು ಮತ್ತು ವಿಳಾಸದ ನಿವಾಸಿತಳಿದ್ದು ಹೊಲಮನಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಗಂಡನಾದ ಕೋನಪ್ಪ ತಂದೆ ಬೀಮಣ್ಣ ಭಗೀರಥ ವಯ;35 ವರ್ಷ ಇವರು ಇಂದು ದಿನಾಂಕ 30/12/2021 ರಂದು ಬೆಳಿಗ್ಗೆ ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-0667 ನೇದ್ದನ್ನು ತೆಗೆದುಕೊಂಡು ತಮ್ಮ ಕೆಲಸದ ಮೇಲೆ ಯಾದಗಿರಿಗೆ ಹೋಗಿ ಬರುತ್ತೇನೆಂದು ನನಗೆ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 30/12/2021 ಸಾಯಂಕಾಲ 5-45 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮುರಿನ ದಳಪತಿಯವರಾದ ಶ್ರೀ ಸಿದ್ರಾಮರೆಡ್ಡಿ ತಂದೆ ಪರ್ವತರೆಡ್ಡಿ ಪೊಲಿಸ್ ಪಾಟೀಲ್ ಇವರು ಪೋನ್ ಮಾಡಿ ನನಗೆ ತಿಳಿಸಿದ್ದೇನೆಂದರೆ ಇಂದು ನಾನು ಯಾದಗಿರಿಗೆ ಬಂದು ನನ್ನ ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಬರುವುದಕ್ಕಾಗಿ ಯಾದಗಿರಿ ನಗರದಲ್ಲಿನ ಹತ್ತಿಕುಣಿ ಕ್ರಾಸ್ ಹತ್ತಿರ ಆಟೋ ಸಲುವಾಗಿ ನಿಂತಿದ್ದಾಗ ಅದೇ ಸಮಯಕ್ಕೆ ನಾನು ನೋಡು ನೋಡುತ್ತಿದ್ದಂತೆ ನಿನ್ನ ಗಂಡನಾದ ಕೋನಪ್ಪನು ತನ್ನ ಮೋಟಾರು ಸೈಕಲ್ ನೇದ್ದನ್ನು ತೆಗೆದುಕೊಂಡು ಹತ್ತಿಕುಣಿ ಕ್ರಾಸ್ ಕಡೆಯಿಂದ ನಗರಸಭೆ ಕಡೆಗೆ ಹೋಗುತ್ತಿದ್ದಾಗ, ನಗರಸಭೆ ಕಡೆಯಿಂದ ಹತ್ತಿಕುಣಿ ಕಡೆಗೆ ಹೊರಟಿದ್ದ ಒಂದು ಸಕರ್ಾರಿ ಬಸ್ ಚಾಲಕನು ತನ್ನ ವಾಹನವನ್ನು ಹತ್ತಿಕುಣಿ ಕ್ರಾಸ್ ಹತ್ತಿರ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಬಸ್ಸನ್ನು ಒಮ್ಮೊಲೆ ಚಾಲಕನು ತನ್ನ ಎಡಭಾಗಕ್ಕೆ ತಿರುಗಿಸುತ್ತಾ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿನ್ನ ಗಂಡನ ಮೊಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಸದರಿ ಅಪಘಾತದಲ್ಲಿ ನಿನ್ನ ಗಂಡನು ಮೊಟಾರು ಸೈಕಲ್ ಮೇಲಿಂದ ರಸ್ತೆಗೆ ಬಿದ್ದಾಗ ನಾನು ಆತನ ಹತ್ತಿರ ಹೋಗಿ ನೊಡಲಾಗಿ ನಿನ್ನ ಗಂಡನ ಎಡಗಾಲಿನ ಪಾದದ ಮೇಲೆ ಭಾರೀ ರಕ್ತಗಾಯವಾಗಿದ್ದು ಹಾಗೂ ಎಡಗೈನ ಮುಂಗೈಗೆ ಭಾರೀ ಗುಪ್ತಗಾಯವಾಗಿರುತ್ತದೆ. ನಿನ್ನ ಗಂಡನ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-0667 ನೇದ್ದು ಇರುತ್ತದೆ. ನಿನ್ನ ಗಂಡನಿಗೆ ಅಪಘಾತಪಡಿಸಿದ ಸಕರ್ಾರಿ ಬಸ್ ನಂಬರ ಕೆಎ-32, ಎಫ್-1853 ನೇದ್ದು ಇರುತ್ತದೆ. ಅಪಘಾತಪಡಿಸಿದ ಬಸ್ ಚಾಲಕನು ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹಮದ್ ರಫೀಕ್ ತಂದೆ ಸಾಹೇಬಪಟೇಲ್ ದೊಡ್ಡಮನಿ ವಯ;34 ವರ್ಷ, ಜಾ;ಮುಸ್ಲಿಂ, ಉ;ಬಸ್ ಚಾಲಕ, ಸಾ;ಬಾವೂರ ತಾ;ತಾಳಿಕೋಟಿ, ಜಿ;ವಿಜಯಪುರ ಹಾ;ವ;ಅಜೀಜ ಕಾಲನಿ, ಯಾದಗಿರಿ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಇಂದು ದಿನಾಂಕ 30/12/2021 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ಜರುಗಿರುತ್ತದೆ. ನಾನು ಮತ್ತು ಬಸ್ ಚಾಲಕ ಇಬ್ಬರು ಸೇರಿಕೊಂಡು ಒಂದು ಖಾಸಗಿ ಆಟೋದಲ್ಲಿ ನಿನ್ನ ಗಂಡನಿಗೆ ಲೈಫ್ ಲೈನ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಯಾದಗಿರಿಗೆ ಬರ್ರೀ ಅಂತಾ ತಿಳಿಸಿದಾಗ ನನಗೆ ಗಾಬರಿಯಾಗಿ ನನಗೆ ಬಂದ ಸುದ್ದಿಯನ್ನು ನಮ್ಮ ಓಣಿಯವರಾದ ಆದೆಪ್ಪ ತಂದೆ ಬೀಮಣ್ಣ ಭಗೀರಥ ಮತ್ತು ದೇವಿಂದ್ರಪ್ಪ ತಂದೆ ಸಾಬಣ್ಣ ನಾಯ್ಕೋಡಿ ಇವರಿಗೆ ತಿಳಿಸಿ ನನ್ನ ಸಂಗಡ ಯಾದಗಿರಿಗೆ ಬರ್ರೀ ಅಂದಾಗ ಅವರುಗಳು ಒಪ್ಪಿಕೊಂಡಾಗ ಒಂದು ಖಾಸಗಿ ಆಟೋದಲ್ಲಿ ಎಲ್ಲರೂ ಸೇರಿಕೊಂಡು ಯಾದಗಿರಿಯ ಲೈಫ್ ಲೈನ್ ಆಸ್ಪತ್ರೆಗೆ ಬಂದು ನೋಡಲು ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಆಗ ಸಿದ್ರಾಮರೆಡ್ಡಿ ದಳಪತಿ ಇವರು ಲೈಫ್ ಲೈನ್ ಆಸ್ಪತ್ರೆಯ ವೈದ್ಯರು ನಿನ್ನ ಗಂಡನಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ಇದು ರಸ್ತೆ ಅಪಘಾತ ಪ್ರಕರಣವಾಗಿದ್ದರಿಂದ ನೀವು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರಿ ಅಂತಾ ತಿಳಿಸಿದ್ದು ಇರುತ್ತದೆ ಆದ್ದರಿಂದ ನೀವು ಬರುವ ಸಲುವಾಗಿ ನಾವು ನಿಂತಿದ್ದು, ಸದ್ಯ ನಡೀರಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋಗೊಣ ಅಂದಾಗ ನಾವುಗಳು ಎಲ್ಲರೂ ಸೇರಿಕೊಂಡು ನನ್ನ ಗಂಡನಿಗೆ ಇಲ್ಲಿಗೆ ಬಂದು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ಇಂದು ದಿನಾಂಕ 30/12/2021 ರಂದು ಸಾಯಂಕಾಲ 5-30 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಹತ್ತಿಕುಣಿ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ನನ್ನ ಗಂಡನು ನಡೆಸಿಕೊಂಡು ಹೊರಟಿದ್ದ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-0667 ನೇದ್ದಕ್ಕೆ ಸಕರ್ಾರಿ ಬಸ್ ನಂಬರ ಕೆಎ-32, ಎಫ್-1853 ನೇದ್ದರ ಚಾಲಕನು ಬಸನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದಿದ್ದರಿಂದ ಘಟನೆ ಜರುಗಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 10 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 71/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 192/2021 ಕಲಂ:143, 147, 148, 323, 324, 326, 504, 506 ಸಂ.149 ಐಪಿಸಿ : ಇಂದು ದಿನಾಂಕಃ 30/12/2021 ರಂದು 1 ಪಿ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಮಂಜುನಾಥ ತಂದೆ ಗುಡದಪ್ಪ ವ|| 20 ವರ್ಷ ಜಾ|| ಬೇಡರು ಉ|| ಶಿಕ್ಷಣ ಸಾ|| ದೇವರಗೋನಾಲ ಈತನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು ನನ್ನ ತಂದೆ, ತಾಯಿ ಹಾಗೂ ಬಂಧುಗಳೊಂದಿಗೆ ವಾಸಿಸುತ್ತಿದ್ದೇನೆ. ಸರ್, ಎಂದಿನಂತೆ ನಾನು ಸುರಪುರದ ಶ್ರೀ ಪ್ರಭು ಕಾಲೇಜಿಗೆ ಬಿ.ಎ. ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಲು ಕಾಲೇಜಿಗೆ ಬಂದಿರುತ್ತೇನೆ. ಆದರೆ ವಿದ್ಯಾಥರ್ಿಗಳ ಕೊರತೆಯಿಂದ ಪಿರಿಯಡ್ ಇರಲಿಲ್ಲ. ನಾನು ಮತ್ತು ನನ್ನ ಸಹಪಾಠಿಗಳು ಕೂಡಿಕೊಂಡು ಕಲೇಜು ಮೈದಾನದಲ್ಲಿ ನಿಂತಿದ್ದೇವು. ಅದೇ ಸಮಯಕ್ಕೆ ಸುರಪುರ ಪಟ್ಟಣದ ಡೊಣ್ಣಿಗೇರಿಯ ನಿವಾಸಿಗಳಾದ 1) ವಿರೇಶ ಪ್ಯಾಪ್ಲಿ 2) ಮಂಜುನಾಥ ತಂದೆ ಬಸವರಾಜ 3) ಆಂಜನೇಯ, 4) ಅಂಬ್ರೇಶ ತಂದೆ ಗಿರಿಯಪ್ಪ 5) ಅಂಬ್ರೆಶ 6) ನಾಗು ತಂದೆ ಕಾಮಣ್ಣ ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು, ಕೈಯಲ್ಲಿ ಬಡಿಗೆ, ರಾಡುಗಳುಹಿಡಿದುಕೊಂಡು ಬಂದು ಎಲೇ ದೇವರಗೋನಾಲ ಸೂಳೆ ಮಕ್ಕಳೆ, ನಿಮ್ಮ ಸೊಕ್ಕು ಬಹಳವಾಗಿದೆ. ಬೋಸಡಿ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಚೀರಾಡುತ್ತಾ ನಮ್ಮ ಹತ್ತಿರ ಬಂದಾಗ, ನಾನು ಮತ್ತು ನನ್ನ ಗೆಳೆಯರು ಯಾಕೇ ಈ ರೀತಿ ಬೈಯುತ್ತಿರಿ ಅಂತಾ ವಿಚಾರಿಸುತ್ತಿದ್ದಂತೆ ಅವರ ಪೈಕಿ ವಿರೇಶ ಪ್ಯಾಪ್ಲಿ ಈತನು ಬೀಯರ್ ಬಾಟಲಿನಿಂದ ನನ್ನ ತೆಲೆಗೆ ಹೊಡೆದನು. ಈ ಹೊಡೆತದಿಂದ ನನ್ನ ತಲೆಗೆ ತೀವ್ರ ರಕ್ತಗಾಯ ಮಾಡಿದ್ದು ಇರುತ್ತದೆ. ಉಳಿದವರು ಕೂಡ ನನ್ನ ಅಂಗಿ ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿರುತ್ತಾರೆ. ಸತ್ಯಮೂತರ್ಿ ಈತನಿಗೆ ಆಂಜನೇಯ ಈತನು ಬಡಿಗೆಯಿಂದ ಒಡೆದು ಮೈತುಂಬಾ ಒಳಪೆಟ್ಟು ಮಾಡಿರುತ್ತಾನೆ. ಮಹಾಂತೇಶ ಈತನಿಗೆ ಮಂಜುನಾಥ ಈತನು ಕಲ್ಲಿನಿಂದ ತಲೆಗೆ ಹಾಗೂ ಮೈತುಂಬಾ ಒಡೆದಿರುತ್ತಾನೆ. ಆಂಜನೇಯನಿಗೆ ಇಬ್ಬರು ಅಂಬ್ರೇಶ ಎಂಬುವವರು ನೆಲಕ್ಕೆ ಕೆಡವಿ ಕೈಯಿಂದ ಒಡೆದು, ಕಾಲಿನಿಂದ ಒದ್ದಿರುತ್ತಾರೆ. ನಾಗಪ್ಪ ಈತನು ಬಡಿಗೆಯಿಂದ ಆಂಜನೇಯನಿಗೆ ಒಡೆದಿರತ್ತಾನೆ. ನನಗೆ ಮತ್ತು ನನ್ನ ಸಹಪಾಠಿಗಳಿಗೆ ಹಲ್ಲೆ ಮಾಡಿದ್ದಾರೆ. ಆಗ ಡೊಣ್ಣಿಗೇರಿಯ ಲೋಹಿತ ಮತ್ತು ಆತನ ಸಂಗಡಿಗರು ಬಂದು ಜಗಳ ಬಿಡಿಸಿರುತ್ತಾರೆ. ಇಲ್ಲಿದ್ದಿದ್ದರೆ ಹೆಚ್ಚಿನ ಅನಾಹುತಗಳು ಆಗುತ್ತಿತ್ತು. ಅವರುಗಳು ನಮ್ಮನ್ನು ಸಾಯಿಸುವ ಉದ್ದೇಶದಿಂದ ಬಂದು ಮಾರಣಾಂತಿಕ ಹಲ್ಲೇ ಮಾಡಿ ನಮಗೆ ರಕ್ತಗಾಯ, ಒಳಪೆಟ್ಟು ಮಾಡಿರುತ್ತಾರೆ. ಅವರುಗಳು ಜಗಳ ಬಿಟ್ಟು ಹೋಗುವಾಗ ಎಲೇ ಬೋಸಡಿ ಮಕ್ಕಳೇ ಇವತ್ತು ನಿಮ್ಮ ಪ್ರಾಣ ಉಳಿದಿದೆ. ಇಂದಲ್ಲ ನಾಳೆ ನಿಮ್ಮ ಜೀವ ನಮ್ಮ ಕೈಯಲ್ಲಿದೆ. ನಿಮ್ಮನ್ನು ಸಾಯಿಸಿ ಧಕ್ಕಿಸಿಕೊಳ್ಳುವ ಶಕ್ತಿ ನಮಗೆ ಇದೆ ಎಂದು ನಮಗೆ ಪ್ರಾಣ ಭಯ ಹಾಕಿ ಹೋಗಿರುತ್ತಾರೆ. ಸದರಿ ಘಟನೆಯು ಇಂದು ದಿನಾಂಕ: 30/12/2021 ರಂದು ಮುಂಜಾನೆ 11-35 ಗಂಟೆ ಸುಮಾರಿಗೆ ಪ್ರಭು ಕಾಲೇಜ್ ಮೈದಾನದಲ್ಲಿ ಆಗಿದ್ದು ಇರುತ್ತದೆ. ಆದ್ದರಿಂದ ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ಮತ್ತು ನನ್ನ ಸಹಪಾಠಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ದೂರು ಅಂತ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 192/2021 ಕಲಂ:143, 147, 148, 323, 324, 326, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 193/2021 ಕಲಂ:143, 147, 148, 323, 324, 341, 504, 506 ಸಂ.149 ಐಪಿಸಿ : ಇಂದು ದಿನಾಂಕಃ 30/12/2021 ರಂದು 8:30 ಪಿ.ಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಕು. ಮೌನೇಶ ತಂದೆ ಕಾಮಣ್ಣ ಕೊಂಡೋಡಿ ವ|| 18 ವರ್ಷ ಸಾ|| ಡೊಣ್ಣಿಗೇರಿ ಸುರಪುರ ಈತನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 30/12/2021 ರಂದು ಬೆಳಿಗ್ಗೆ 11:45 ಗಂಟೆಗೆ ನಾನು ಮತ್ತು ನಮ್ಮ ಕಾಲೇಜಿನಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಸಂಬಂದಿಕರಾದ ವೀರೇಶ ತಂದೆ ಗೋಪಾಲ ಪ್ಯಾಫ್ಲಿ, ಆಂಜನೇಯ ತಂದೆ ನಾಗಪ್ಪ ಪ್ಯಾಪ್ಲಿ, ನಾಗರಾಜ ತಂದೆ ಕಾಮಣ್ಣ ಬೀಸನಾಳ, ಮಂಜುನಾಥ ತಂದೆ ಬಸವರಾಜ ಎಲ್ಲರು ಕ್ರಿಕೆಟ್ ಆಟ ಆಡಬೇಕು ಅಂತ ಕಾಲೇಜಿನ ಮೈದಾನದಲ್ಲಿ ಹೋಗುತ್ತಿದ್ದಾಗ, ಅದೇ ಸಮಯಕ್ಕೆ ನಮ್ಮ ಕಾಲೇಜಿನಲ್ಲಿಯೇ ವ್ಯಾಸಂಗ ಮಾಡುತ್ತಿರುವ, ನಮ್ಮ ಜನಾಂಗದವರೆ ಆದ ದೇವರಗೊನಾಲ ಗ್ರಾಮದ 1) ಮಂಜುನಾಥ ತಂದೆ ಗುಡದಪ್ಪ 2) ಆಂಜನೇಯ ತಂದೆ ದೇವಿಂದ್ರಪ್ಪ 3) ಅನೀಲ ತಂದೆ ತಾಮರಾಯ 4)ಮಹೇಶ 5) ಶಿವಕುಮಾರ 6) ಪರಶುರಾಮ ತಂದೆ ಭೀಮಣ್ಣ ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು, ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದು ಎಲೇ ಸೂಳೆ ಮಕ್ಕಳೆ, ಕಾಲೇಜಿನಲ್ಲಿ ನಿಮ್ಮ ಸೊಕ್ಕು ಬಹಳ ಆಗಿದೆ, ಇಲ್ಲಿ ನಾವು ಹೇಳಿದಂತೆ ಕೇಳಬೇಕು ಸೂಳೇ ಮಕ್ಕಳೇ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ನಮ್ಮೆಲ್ಲರಿಗೂ ಅಡ್ಡಗಟ್ಟಿ ತಡೆದು ನಿಲ್ಲಿಸಿದರು. ಆಗ ನಾನು ಯಾಕೇ ಈ ರೀತಿ ಬೈಯುತ್ತಿರಿ, ನಾವೇನು ಮಾಡಿದ್ದೇವೆ ಅಂತಾ ಕೇಳಿದಾಗ ಅವರಲ್ಲಿ ಆಂಜನೇಯ ಈತನು ಕೈಯಿಂದ ನನ್ನ ಬಲಗೈ ಮೊಳಕೈಗೆ ಹೊಡೆದು ಗುಪ್ತಗಾಯಪಡಿಸಿದನು. ಆಗ ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಬಂದ ವೀರೇಶ ಈತನಿಗೆ ಮಂಜುನಾಥ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಟ್ಟೆಗೆ, ಬೆನ್ನಿಗೆ ಹೊಡೆದು ಗುಪ್ತಗಾಯಪಡಿಸಿದನು. ಆಂಜನೇಯ ಈತನಿಗೆ ಅನೀಲ ತಂದೆ ತಾಮರಾಯ ಈತನು ಕೈಯಿಂದ ಹೊಟ್ಟೆಗೆ ಹೊಡೆದು ಗುಪ್ತಗಾಯಪಡಿಸಿದನು. ಮಂಜುನಾಥ ಈತನಿಗೆ ಮಹೇಶ ಈತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಎಡಗಾಲಿನ ಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದನು. ಶಿವಕುಮಾರ ಮತ್ತು ಪರಶುರಾಮ ಇಬ್ಬರು ಕೂಡಿ ನಾಗರಾಜ ಈತನಿಗೆ ನೆಲಕ್ಕೆ ಕೆಡವಿ ಕಾಲಿನಿಂದು ಒದ್ದು, ಎಡಗೈ ಮಣಿಕಟ್ಟಿನ ಹತ್ತಿರ ತರಚಿದ ಗಾಯಪಡಿಸಿದರು. ಆಗ ನಾವೆಲ್ಲರು ಚೀರಾಡುತ್ತಿದ್ದಾಗ ಅಲ್ಲೆ ಹೊರಟಿದ್ದ ಮಲ್ಲಿಕಾಜರ್ುನ ತಂದೆ ಹುಲಗಪ್ಪ ಕಟ್ಟಿಮನಿ, ಮರೆಪ್ಪ ತಂದೆ ನಾಗಪ್ಪ ಗುಡಾಳಕೇರಿ ಇಬ್ಬರು ಕೂಡಿ ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಅವರು, ಇವರು ಬಂದು ಬಿಡಿಸಿದ್ದಕ್ಕೆ ನೀವು ಉಳಿದಿಕೊಂಡೀರಿ ಮಕ್ಕಳೆ ಇಲ್ಲಾ ಅಂದ್ರೆ ನಿಮ್ಮ ಜೀವ ತೆಗೆಯುತ್ತಿದ್ದೆವು ಅಂತ ಪ್ರಾಣ ಭಯ ಹಾಕಿ ಅಲ್ಲಿಂದ ಹೋದರು. ನಮ್ಮೆಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಾವು ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು, ಕಾರಣ ಮೇಲ್ಕಂಡ ಆರೂ ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಈ ವಿನಂತಿ ಅಂತ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 193/2021 ಕಲಂ:143, 147, 148, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 95/2021 ಕಲಂ. 279 ಐಪಿಸಿ : ಫಿರ್ಯಾದಿದಾರರು ಇಂದು ದಿನಾಂಕ:30/12/2021 ರಂದು ಯಾದಗಿರಿಯಲ್ಲಿ ತಮ್ಮ ಸಂಬಂದಿಕರ ಮನೆಯಲ್ಲಿ ತೊಟ್ಟಿಲು ಕಾರ್ಯಕ್ರಮ ಇದ್ದುದರಿಂದ, ತಮ್ಮ ಚಿಕ್ಕಮ್ಮ ಹಾಗೂ ತನ್ನ ಮಕ್ಕಳೊಂದಿಗೆ ಯಾದಗಿರಿಗೆ ಹೋಗಲು ತಮ್ಮ ನಿಶಾನ ಮ್ಯಾಗ್ನೆಟ್ ಕಾರ್ ಟೆಂಪ್ರುವರಿ ನಂ:ಕೆಎ-25 ಟಿಸಿ-2021/36 ನೇದ್ದರಲ್ಲಿ ಕುಳಿತುಕೊಂಡು ತಮ್ಮೂರಿನಿಂದ ಹೊರಿಟಿದ್ದು, ಸದರಿ ಕಾರನನ್ನು ಆರೋಪಿತನಾದ ಸೋಮನಗೌಡ ತಂದೆ ಗುರಣ್ಣ ಅಡ್ಡೊಡಗಿ ಉ:ಡ್ರೈವರ್ ಕೆಲಸ ಸಾ:ಡವಳಗಿ ಈತನು ಚಲಾಯಿಸಹತ್ತಿದ್ದು, ಸದರಿಯವನು ತಾಳಿಕೋಟಿ-ಹುಣಸಗಿ ರಸ್ತೆಯ ಮೇಲೆ ಗುಳಬಾಳ ಕ್ರಾಸ್ ದಾಟಿ ಮಾಳನೂರ ಪಾರ್ಮಹೌಸ್ ದಾಟಿದ ಮೇಲೆ ಆರೋಫಿತನು ಸದರಿ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ, ರಸ್ತೆಯ ಎಡಗಡೆ ಗೂಟುಕಲ್ಲಿಗೆ ಡಿಕ್ಕಿಕೊಟ್ಟು ಅದೇ ರಭಸದಲ್ಲಿ ಮುಳ್ಳುಕಂಟಿಯಲ್ಲಿ ರಸ್ತೆಯ ಕೆಳಗಡೆ ಕಾರ್ ಇಳಿಸಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳು ಆಗಿರುವದಿಲ್ಲ. ಕಾರಿನ ಮುಂಬಾಗ ಪೂತರ್ಿಯಾಗಿ ಡ್ಯಾಮೇಜ್ ಆದ ಬಗ್ಗೆ ಅಪರಾಧ.
ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 96/2021 ಕಲಂ. 279, 337, 338 ಐಪಿಸಿ ಸಂ. 187 ಐ.ಎಮ್.ವ್ಹಿ ಕಾಯ್ದೆ : ಫಿರ್ಯಾದಿ & ಗಾಯಾಳು ಕೂಡಿಕೊಂಡು ದಿನಾಂಕ:29/12/2021 ರಂದು ಸಾಯಂಕಾಲ 5.50 ಗಂಟೆಯ ಸುಮಾರಿಗೆ ತಮ್ಮೂರಿನಿಂದ ಹುಣಸಗಿಗೆ ಬರಲು ದೇವಾಪೂರ-ಹುಣಸಗಿ ರೋಡಿನ ಮೇಲೆ ಹುಣಸಗಿ ಸಮೀಪ ಸಿಮೆಂಟ್ ಪೈಪ್ ತಯಾರಿಸುವ ಸ್ಥಳದ ಹತ್ತಿರ ರೊಡಿನ ಮೇಲೆ ಸಿಡಿ ಹತ್ತಿರ, ಹಿಂದುಗಡೆಯಿಂದ ಬಸ್ ನಂ:ಕೆಎ-28 ಎಪ್-2424 ನೇದ್ದರ ಚಾಲಕ ಬಸನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ನಡೆಸುತ್ತಿದ್ದ ಮೊಟಾರ್ ಸೈಕಲ್ ನಂ:ಕೆಎ-33 ವ್ಹಿ-1526 ಹಿರೋ ಹೋಂಡಾ ಸ್ಪ್ಲೆಂಡರ್ ಪಲ್ಸ್ ನೇದ್ದರ ಬಲಗಡೆ ಹ್ಯಾಂಡಲ್ಗೆ ತರಚಿಕೊಂಡು ಬಸ್ ನಿಲ್ಲಿಸದೆ ಹೋಗಿದ್ದು ಇರುತ್ತದೆ. ಗಾಯಾಳುಗಳಿಬ್ಬರೂ ಮೋಟಾರ್ ಸೈಕಲ್ ಸಮೇತ ರೋಡಿನ ಭಾರಿ ರಕ್ತಗಾಯ & ಸಾದಾ ಗಾಯಗಳಾದ ಬಗ್ಗೆ ಅಪರಾಧ.