ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 31-12-2022


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ: 279, 304 (ಎ) ಐಪಿಸಿ: ದಿನಾಂಕ:30/12/2022 ರಂದು 1045 ಗಂಟೆಗೆ  ಫಿರ್ಯಾದಿದಾರನಾದ ಮುದೆಪ್ಪ ತಂದೆ ಅಂಬ್ರಪ್ಪ ಚಲವಾದಿ ವ:48 ವರ್ಷ ಜಾ:ಪ.ಜಾತಿ ಉ:ಕೂಲಿಕೆಲಸ ಸಾ:ಬಲಶೆಟ್ಟಿಹಾಳ ತಾ:ಹುಣಸಗಿ ಜಿಲ್ಲಾ:ಯಾದಗಿರ ಇವರು ಕೊಡೆಕಲ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪಮಾಡಿದ ದೂರು ಅಜರ್ಿಯನ್ನು ಹಾಜರಪಡಿಸಿದ್ದರ ಸಾರಂಶವೆನಂದರೆ ''ನಮ್ಮ ತಂದೆ ತಾಯಿಗೆ ನಾಲ್ಕು ಜನರ ಅಣ್ಣ ತಮ್ಮಂದಿರಿದ್ದು, ನಾನು ಮತ್ತು ಮರೆಪ್ಪ, ಪರಸಪ್ಪ@ಪರುಶರಾಮ, ಪರಮಣ್ಣ  ಇದ್ದು, ಎಲ್ಲರ ಮದುವೆಯಾಗಿದ್ದು, ಎಲ್ಲರೂ ಬೇರೆ ಬೇರೆ ಮನೆಮಾಡಿಕೊಂಡು ಇರುತ್ತೇವೆ. ಹೀಗಿದ್ದು ನಮ್ಮೂರಲ್ಲಿ ಕಾಮನಟಗಿ ಗ್ರಾಮದ ಮಲ್ಲಿಕಾಜರ್ುನ ತಂದೆ ಚಂದಪ್ಪ ಮಡಿವಾಳರ ಈತನು ಚಹಾ ಹೊಟೆಲ್ ಇಟ್ಟುಕೊಂಡು ಇರುತ್ತಿದ್ದು, ನನ್ನ ತಮ್ಮನಾದ ಪರಸಪ್ಪ@ಪರುಶರಾಮ ಈತನು ಮಲ್ಲಿಕಾಜರ್ುನ ಈತನ ಚಹಾ ಹೊಟೆಲಕ್ಕೆ ಕೂಲಿಕೆಲಸಕ್ಕೆಂದು ಹೊಗುತ್ತಿದ್ದನು. ಇಂದು ದಿನಾಂಕ:30/12/2022 ರಂದು ಬೆಳಿಗ್ಗೆ 8-30 ಗಂಟೆಯ ಸುಮಾರಿಗೆ ಮಲ್ಲಿಕಾಜರ್ುನ ತಂದೆ ಚಂದಪ್ಪ ಈತನು ಒಂದು ಮಾರುತಿ ಸ್ವೀಪ್ಟ ಡಿಜರ್ ಕಾರ ನಂ ಕೆ.ಎ.19 ಜೆಡ್ 8744 ನೇದ್ದನ್ನು ತೆಗೆದುಕೊಂಡು ಚಹಾಹೊಟೆಲಕ್ಕೆ ಬಂದು ನನ್ನ ತಮ್ಮ ಪರಸಪ್ಪ@ಪರುಶರಾಮ ಈತನಿಗೆ ಇವತ್ತು ನಮ್ಮ ಮಗನಾದ ಚಂದಪ್ಪನ ಹುಟ್ಟಿದ ದಿನವಿದೆ ನಾರಾಯಣಪೂರಕ್ಕೆ ಹೋಗಿ ಕರೆದುಕೊಂಡು ಬರೋಣ ಅಂತಾ ಅಂದಾಗ ನನ್ನ ತಮ್ಮನಾದ ಪರಸಪ್ಪ@ಪರುಶರಾಮ ಈತನು ಮಲ್ಲಿಕಾಜರ್ುನ ಈತನ ಕಾರಿನಲ್ಲಿ ಕುಳಿತುಕೊಂಡು ಬೆಳಿಗ್ಗೆ 0845 ಗಂಟೆಗೆ ನಮ್ಮೂರಿನಿಂದ ಹೊಗಿದ್ದರು,ಕಾರನ್ನು ಮಲ್ಲಿಕಾಜರ್ುನ ಈತನು ಚಲಾಯಿಸಿಕೊಂಡು ಹೋಗಿದ್ದನು, ನಂತರ ಬೆಳಿಗ್ಗೆ 9-20 ಗಂಟೆಯ ಸುಮಾರಿಗೆ ನಮ್ಮೂರ ಸೈದಪ್ಪ ತಂದೆ ಯಲ್ಲಪ್ಪ ಕಟ್ಟೀಮನಿ ಈತನು ನನಗೆ ಫೋನಮಾಡಿ ತಿಳಿಸಿದ್ದೆನಂದರೆ ನಾನು 9-15 ಗಂಟೆಯ ಸುಮಾರಿಗೆ ನನ್ನ ಮೋಟಾರ ಸೈಕಲ್ ಮೇಲೆ ಕೊಡೆಕಲ್ ಸರಕಾರಿ ಆಸ್ಪತ್ರೆಗೆ ಹೊಗುವ ಕುರಿತು ಹುಣಸಗಿ- ನಾರಾಯಣಪೂರ ಮುಖ್ಯೆ ರಸ್ತೆ ಮೇಲೆ ರಾಜನಕೋಳೂರ ದಾಟಿ ಮೇನ್ ಕೆನಾಲದ ಹತ್ತಿರ ಹೋಗುತ್ತಿದ್ದಾಗ ನನ್ನ ಮುಂದೆ  ಒಬ್ಬ ಕಾರಚಾಲಕನು ತನ್ನ ಕಾರನ್ನು ಅತೀವೆಗದಿಂದ ಹಾಗೂ ನಿಷ್ಕಾಳೀಜಿತನದಿಂದ ನಡೆಸಿಕೊಂಡು ಹೋಗಿ ಬ್ರಿಟ್ಜ್ ಹಿಂದೆ ಇರುವ ಕುಣಚಿಗೆ ಹಾಕಿದ್ದರಿಂದ ನಿಯಂತ್ರಣ ತಪ್ಪಿಕಾರನ್ನು ಬ್ರೀಡ್ಜ್ದ ಎಡಗಡೆ ಗೊಡೆಗೆ ಜೋರಾಗಿ ಡಿಕ್ಕಿಪಡಿಸಿ ಅಪಘಾತಮಾಡಿದ್ದನ್ನು ನೋಡಿ ನಾನು ಸಮೀಪಕ್ಕೆ ಹೋಗಿ ನೋಡಲು ಕಾರ ಚಾಲಕನ ಪಕ್ಕದಲ್ಲಿ ಕುಳಿತವನು ನಿನ್ನ ತಮ್ಮ ಪರಸಪ್ಪ@ಪರುಶರಾಮ ಇದ್ದು, ಚಾಲಕ ಮಲ್ಲಿಕಾಜರ್ುನ ಇದ್ದು, ಇಬ್ಬರಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದಾಗ ನಾನು ಗಾಬರಿಗೊಂಡು ನಾನು ಮತ್ತು ತಮ್ಮನಾದ ಮರೆಪ್ಪ ತಂದೆ ಅಂಬ್ರಪ್ಪ ಮತ್ತು ಮಲ್ಲಿಕಾಜರ್ುನನ ಅಣ್ಣನಾದ ತಮ್ಮಣ್ಣ ತಂದೆ ಚಂದಪ್ಪ ಮಡಿವಾಳ ಎಲ್ಲರೂ ಕೂಡಿಕೊಂಡು ಘಟನೆ ಸ್ಥಳಕ್ಕೆ ಹೋಗಿ ನೋಡಲು ನನ್ನ ತಮ್ಮನಾದ ಪರಸಪ್ಪ@ಪರುಶರಾಮ ಈತನು ಕಾರಿನಲ್ಲಿ ಮೃತಪಟ್ಟಿದ್ದು, ನೋಡಲು ತಲೆಯ ಹಿಂಬಾಗಕ್ಕೆ ಭಾರಿ ಒಳಪೇಟ್ಟಾಗಿ ಮೂಗಿನಿಂದ ರಕ್ತ ಸೊರಿದ್ದು, ಎಡಗಾಲ ಮೊಳಕಾಲ ಮೇಲೆ ಭಾರಿ ಒಳಪೇಟ್ಟಾಗಿ ಮುರಿದಿದ್ದು, ಎದೆಗೆ, ಹೊಟ್ಟೆಗೆ ಒಳಪೇಟ್ಟು ಆಗಿದ್ದು, ಎಡಗೈ ಮುಂಗೈ ಹತ್ತಿರ ಭಾರಿ ಒಳಪೇಟ್ಟಾಗಿ ತರಚಿದ ಗಾಯವಾಗಿದ್ದು ಇತ್ತು, ಮಲ್ಲಿಕಾಜರ್ುನ ಈತನಿಗೆ ನೋಡಲು ಅವನು ಕಾರಿನಲ್ಲಿ ಮೃತಪಟ್ಟಿದ್ದು, ನೋಡಲು ಅವನ ತಲೆಯ ಹಿಂಬಾಗಕ್ಕೆ ಭಾರಿರಕ್ತಗಾಯ, ಎಡಗಾಲ ಮೊಳಕಾಲಿಗೆ ಭಾರಿ ಒಳಪೇಟ್ಟು, ಹೊಟ್ಟೆ, ಎದೆಗೆ,ಬಲಪಕ್ಕಡಿಗೆ ಭಾರಿ ಒಳಪೇಟ್ಟು ಆಗಿದ್ದು ಇರುತ್ತದೆ. ಕಾರಣ ಮಲ್ಲಿಕಾಜರ್ುನ ತಂದೆ ಚಂದಪ್ಪ ಮಡಿವಾಳರ ಈತನು ಮಾರುತಿ ಸ್ವೀಪ್ಟ ಡಿಜರ್ ಕಾರ ನಂ ಕೆ.ಎ.19 ಜೆಡ್ 8744 ನೇದ್ದರಲ್ಲಿ ನನ್ನ ತಮ್ಮನಾದ ಪರಸಪ್ಪ@ಪರುಶರಾಮ ತಂದೆ ಅಂಬ್ರಪ್ಪ ಈತನಿಗೆ ಕೂಡಿಸಿಕೊಂಡು ಅತೀವೇಗದಿಂದ ಹಾಗೂ ನಿಷ್ಕಾಳೀಜಿತನದಿಂದ ಚಲಾಯಿಸಿ ರಾಜನಕೊಳೂರ ಕೆನಾಲ್ ಬ್ರಿಡ್ಜ್ ಹಿಂದೆ ಇರುವ ಕುಣಚಿಗೆ ಹಾಕಿದ್ದರಿಂದ ನಿಯಂತ್ರಣ ತಪ್ಪಿ ಕೆನಾಲ್ ಬ್ರಿಡ್ಜ್ ದ ಎಡಗಡೆ ಗೊಡೆಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದರಿಂದ ನನ್ನ ತಮ್ಮನಾದ ಪರಸಪ್ಪ@ಪರುಶರಾಮ ತಂದೆ ಅಂಬ್ರಪ್ಪ ವ:32 ವರ್ಷ ಹಾಗೂ ಚಾಲಕ ಮಲ್ಲಿಕಾಜರ್ುನ ತಂದೆ ಚಂದಪ್ಪ ವ:35 ವರ್ಷ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದು,ಇಬ್ಬರ ಮೃತದೇಹಗಳನ್ನು ಒಂದು ಖಾಸಗಿ ವಾಹನದಲ್ಲಿ ಹುಣಸಗಿ ಸರಕಾರಿ ಆಸ್ಪತ್ರೆಗೆ ಸಾಗಿಸಿರುತ್ತೇವೆ. ಮಾನ್ಯರವರು ಮುಂದಿ ಕಾನೂನ ಕ್ರಮಜರುಗಿಸಬೇಕು ಅಂತಾ ಕೊಟ್ಟ ಪಿಯರ್ಾದಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.85/2022 ಕಲಂ,279,304 (ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 181/2022 ಕಲಂ:498(ಎ),323,324, 504, 506, ಸಂ.34 ಐಪಿಸಿ: ಸುಮಾರು 5-6 ವರ್ಷಗಳ ಹಿಂದೆ ಫಿರ್ಯಾದಿಯ ಮದುವೆಯು ಆರೋಪಿತನಾದ ಮಹೇಶ  ಎಂಬಾತನೊಂದಿಗೆ ಆಗಿದ್ದು ಇರುತ್ತದೆ. ಮದುವೆಯಾದ ನಂತರ 7-8 ತಿಂಗಳ ವರೆಗೆ ಆರೋಪಿತರೆಲ್ಲಾರು ಫೀರ್ಯಾದಿಯೊಂದಿಗೆ ಚನ್ನಾಗಿ ಇದ್ದು ನಂತರದ ದಿನಗಳಲ್ಲಿ ಫಿರ್ಯಾದಿಗೆ ಹೊಲ-ಮನೆಯಲ್ಲಿ ಸರಿಯಾಗಿ ಕೆಲಸ ಬರೋದಿಲ್ಲ ಹಾಗೂ ಸರಿಯಾಗಿ ಅಡುಗೆ ಮಾಡಲು ಬರೋದಿಲ್ಲ, ಹಾಗೂ ಬಂಜಿ ಇದ್ದಿ ನಿನಗೆ ಮಕ್ಕಳಾಗೋದಿಲ್ಲ ಅಂತಾ ಹೇಳಿ ಆಕೆಗೆ ಮಾನಸೀಕ ಮತ್ತು ದೈಹಿಕ ಹಿಂಸೆ ನೀಡುತ್ತ ಬಂದಿದ್ದು ಇರುತ್ತದೆ. ಅದನ್ನು ಫಿರ್ಯಾದಿದಾರಳು ತಾಳಿಕೊಂಡು ಇದ್ದರು ಸಹ ದಿನಾಂಕ 24.05.2022 ರ ರಾತ್ರಿ 8:30 ಗಂಟೆಯ ಸುಮಾರಿಗೆ ಫೀರ್ಯಾದಿಗೆ ಮೈಯಲ್ಲಿ ಹುಷಾರಿಲ್ಲದೇ ಮಲಗಿದ್ದಾಗ ಆರೋಪಿತರೆಲ್ಲಾರು ಕೂಡಿಕೊಂಡು ಅವಾಚ್ಯ ಶಬ್ದಗಳೀಂದ ಬೈದು ಕೈಯಿಂದ ಹೊಡೆ-ಬಡೆ ಮಾಡಿದ್ದು ಜಗಳದ ಶಬ್ದ ಕೇಳಿ ಫೀರ್ಯಾದಿಯ ತಂದೆ-ತಾಯಿ ಅಲ್ಲಿಗೆ ಬಂದು ತಮ್ಮ ಮಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ನಂತರ ದಿನಾಂಕ 25.12.2022 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ತವರು ಮನೆಯಲ್ಲಿದ್ದಾಗ ಆರೋಪಿತರೆಲ್ಲಾರು ಆಕೆಯಲ್ಲಿಗೆ ಹೋಗಿ ಪುನಃ ಆಕೆಯೊಂದಿಗೆ ಜಗಳ ತೆಗೆದು ಕೈಯಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿಯು ವಿಚಾರ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ: 181/2022 ಕಲಂ:498(ಎ), 323, 324, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: ಇಂದು ದಿನಾಂಕ:30/12/2022 ರಂದು 6-15 ಪಿಎಮ್ ಕ್ಕೆ ಶ್ರೀ ನಿಂಗಣ್ಣ ತಂದೆ ಶರಣಪ್ಪ ಯಾದಗಿರಿಕರ, ವ:20, ಜಾ:ಕುರುಬರ, ಉ:ಒಕ್ಕಲುತನ ಸಾ:ಗುಂಡಳ್ಳಿ ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ನಮ್ಮ ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ. ಈಗ ಸುಮಾರು ಒಂದು ವಾರದ ಹಿಂದೆ ನಮ್ಮ ಚಿಕ್ಕಮ್ಮ ಲಕ್ಷ್ಮೀ ಗಂಡ ಮಲ್ಲಪ್ಪ ಇವಳು ಕನ್ಯಾಕೋಳುರು ಗ್ರಾಮದಿಂದ ನಮ್ಮ ಮನೆಗೆ ಬಂದಿರುತ್ತಾಳೆ. ಹೀಗಿದ್ದು ದಿನಾಂಕ:27/12/2022 ರಂದು ನಮ್ಮ ಹತ್ತಿ ಹೊಲದಲ್ಲಿ ಕೆಲಸ ಇದ್ದುದ್ದರಿಂದ ನಾನು ಮತ್ತು ನಮ್ಮ ತಂದೆ ಶರಣಪ್ಪ, ನಮ್ಮ ತಾಯಿ ದೇವಿಂದ್ರಮ್ಮ ಹಾಗೂ ನಮ್ಮ ಚಿಕ್ಕಮ್ಮ ಲಕ್ಷ್ಮೀ ನಾವು ನಾಲ್ಕು ಜನರು ನಮ್ಮ ಎತ್ತು ಬಂಡಿ ಕಟ್ಟಿಕೊಂಡು ನಮ್ಮ ಹೊಲಕ್ಕೆ ಬಂದು ಸಾಯಂಕಾಲದ ವರೆಗೆ ಹೊಲದಲ್ಲಿ ಕೆಲಸ ಮಾಡಿ ಸಾಯಂಕಾಲ ನಾವು ತಂದ ಎತ್ತಿನ ಬಂಡಿಯಲ್ಲಿ ಮರಳಿ ಊರಿಗೆ ಹೊರಟೇವು. ನಮ್ಮ ತಂದೆ ಎತ್ತಿನ ಬಂಡಿ ಹೊಡೆಯುತ್ತಿದ್ದರು. ನಾವು ಮೂರು ಜನ ಎತ್ತಿನ ಬಂಡಿಯಲ್ಲಿ ಕುಳಿತ್ತಿದ್ದೇವು. ಸಾಯಂಕಾಲ 6 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಚಟ್ನಳ್ಳಿ ಕ್ರಾಸ ಹತ್ತಿರ ಮರಿಲಿಂಗಪ್ಪ ನಿಡಗಿ ಇವರ ಹೊಲದ ಹತ್ತಿರ ರಸ್ತೆ ಬದಿಯಲ್ಲಿ ನಾವು ಬಂಡಿಯಲ್ಲಿ ಹೋಗುತ್ತಿದ್ದಾಗ ಶಹಾಪೂರ ಕಡೆಯಿಂದ ಕಾರ ನಂ. ಕೆಎ 33 ಎಮ್ 7310 ನೇದನ್ನು ಅದರ ಚಾಲಕನಾದ ತಮ್ಮಾರೆಡ್ಡಿ ತಂದೆ ನೀಲಕಂಠರಾಯ ಪಾಟಿಲ್ ಸಾ:ಮಂಡಗಳ್ಳಿ ತಾ:ಶಹಾಪೂರ ಹಾ:ವ:ಹೊಸಳ್ಳಿ ಕ್ರಾಸ ಯಾದಗಿರಿ ಈತನು ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಎತ್ತಿನ ಬಂಡಿಗೆ ಹಿಂದಿನಿಂದ ಡಿಕ್ಕಿಪಡಿಸಿದ್ದರಿಂದ ನಮ್ಮ ಎತ್ತಿನ ಬಂಡಿ ಉರುಳಿ ಬಿದ್ದಿದ್ದು, ಎತ್ತುಗಳು ಬೆದರಿಕೊಂಡು ಬಂಡಿಯನ್ನು ಎರ್ರಾಬಿರ್ರಿ ಎಳೆದುಕೊಂಡು ಹೋಗಿದ್ದರಿಂದ ಬಂಡಿಯ ಗಾಲಿಗಳು ಉಚ್ಚಿಬಿದ್ದು, ಬಂಡಿಯಲ್ಲಿದ್ದ ನನಗೆ ಬಲಗಡೆ ಸೊಂಟಕ್ಕೆ ಒಳಪೆಟ್ಟು, ಎಡ ಭುಜಕ್ಕೆ ಒಳಪೆಟ್ಟು ಆಯತು. ನಮ್ಮ ತಂದೆಯಾದ ಶರಣಪ್ಪ ತಂದೆ ನಿಂಗಣ್ಣ ಈತನಿಗೆ ಕುತ್ತಿಗೆ ಹಿಂಭಾಗ ಎಲುಬಿಗೆ ಒಳಪೆಟ್ಟಾಗಿರುತ್ತದೆ. ನಮ್ಮ ಚಿಕ್ಕಮ್ಮ ಲಕ್ಷ್ಮೀ ಇವಳಿಗೆ ತಲೆ ಹಿಂಭಾಗ ರಕ್ತಗಾಯವಾಗಿತ್ತು. ನಮ್ಮ ತಾಯಿ ದೇವಿಂದ್ರಮ್ಮಳಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದವು. ಆಗ ರಸ್ತೆ ಮೇಲೆ ಹೋಗುತ್ತಿದ್ದ ನಮ್ಮೂರ ಚಂದ್ರಶೇಖರ ತಂದೆ ಲಿಂಗಣ್ಣ ಯಾದಗಿರಿ ಮತ್ತು ಭೀಮಣ್ಣಗೌಡ ತಂದೆ ಮಲ್ಲಣ್ಣಗೌಡ ಮಾಲಿಪಾಟೀಲ್ ಇವರು ಅಪಘಾತವನ್ನು ನೋಡಿ ನಮಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಯಾದಗಿರಿಯ ಶರಣಬಸವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದರು. ನಮ್ಮ ತಂದೆಗೆ ಕುತ್ತಿಗೆ ಹಿಂಭಾಗದಲ್ಲಿ ಎಲುಬಿಗೆ ಪೆಟ್ಟಾಗಿದ್ದರಿಂದ ತಕ್ಷಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯಾಧಿಕಾರಿಗಳು ಸಲಹೆ ನೀಡಿದ್ದರಿಂದ ನಮ್ಮ ತಂದೆಗೆ ನಾವು ರಾಯಚೂರಿನ ಆರಾಧನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ಈಗ ನಮ್ಮ ತಂದೆಯವರಿಗೆ ಆಸ್ಪತ್ರೆಗೆ ಸೇರಿಸಿದ ನಂತರ ನಮ್ಮ ಹಿರಿಯರು ಪೊಲೀಸ್ ಠಾಣೆಗೆ ಹೋಗಿ ಕೇಸು ಮಾಡು ಎಂದು ಹೇಳಿದ್ದರಿಂದ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಸದರಿ ಅಪಘಾತವು ದಿನಾಂಕ:27/12/2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ಚಟ್ನಳ್ಳಿ ಕ್ರಾಸ ಮರಿಲಿಂಗಪ್ಪ ನಿಡಗಿ ಇವರ ಹೊಲದ ಸಮೀಪ ಜರುಗಿರುತ್ತದೆ. ಕಾರಣ ಸದರಿ ಕಾರ ನಂ. ಕೆಎ 33 ಎಮ್ 7310 ನೇದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 144/2022 ಕಲಂ: 279, 337 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:  86/2022  ಕಲಂ: 379 ಐಪಿಸಿ: ಇಂದು ದಿನಾಂಕ 30.12.2022 ರಂದು 6:00 ಪಿಎಮಕ್ಕೆ ಪಿರ್ಯಾದಿ ಶ್ರೀ ಬಸಪ್ಪ ತಂದೆ ಬಸಪ್ಪ ರಾಮನಗೌಡರ ವ:50 ವರ್ಷ ಉ:ಒಕ್ಕಲುತನ ಜಾ:ಹಿಂದೂ ನೇಕಾರ ಸಾ:ಕೊಡೆಕಲ್ಲ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೆಂದರೆ ದಿನಾಂಕ 02.12.2022 ರಂದು ರಾತ್ರಿ 10:30 ಗಂಟೆಯವರೆಗೆ ನಾನು ಮತ್ತು ನಮ್ಮ ಜಮೀನಿಗೆ ಕೂಲಿಕೆಲಸಕ್ಕೆ ಬರುವ ನಿಂಗಣ್ಣ ತಂದೆ ಚಂದಪ್ಪ ತೋಟಗೇರ ಇಬ್ಬರೂ ಕೂಡಿ ನಮ್ಮ ಹೊದಲ್ಲಿಯ ಶೆಂಗಾದ ಬೆಳೆಗೆ  ನಮ್ಮ ಪಂಪಸೆಟ್ನಿಂದ ನೀರು ಹಾಯಿಸಿ ಕರೆಂಟ್ ಮೋಟರ್ ಬಂದ್ ಮಾಡಿಕೊಂಡು ಮನೆಗೆ ಬಂದಿದ್ದು ನಂತರ ನಾನು ಮತ್ತು  ನಮ್ಮ ಜಮೀನಿಗೆ ಕೂಲಿಕೆಲಸಕ್ಕೆ ಬರುವ ನಿಂಗಣ್ಣ ತಂದೆ ಚಂದಪ್ಪ ತೋಟಗೇರ ಇಬ್ಬರೂ ಕೂಡಿ ದಿನಾಂಕ 03.12.2022 ರಂದು ಬೆಳಿಗ್ಗೆ 06:00 ಗಂಟೆಗೆ ನಮ್ಮ ಹೊಲದಲ್ಲಿಯ ಶೆಂಗಾದ ಬೆಳೆಗೆ ನೀರು ಹಾಯಿಸಲೆಂದು ನಮ್ಮ ಪಂಪ್ಸೆಟ್ನ ಕರೆಂಟ್ ಮೋಟರ್ ಹತ್ತಿರ ಹೋದಾಗ ನಮ್ಮ ಕರೆಂಟ್ ಮೋಟರ್ ಕಾಣಿಸಲಿಲ್ಲ. ಅದನ್ನು ಯಾರೋ ಕಳ್ಳರು ಕಿತ್ತಿಕೊಂಡು ಕಳುವು ಮಾಡಿಕೊಂಡು ಹೋಗಿದ್ದು ಕಂಡು ಬಂದಿದ್ದು ನಂತರ ನಾನು ಮತ್ತು ನಿಂಗಣ್ಣ ರವರು ನಮ್ಮ ಪಕ್ಕದ ಹೊಲದ ಮಾನಪ್ಪ ತಂದೆ ಆಮಣಪ್ಪ ಪತ್ತಾರ ಇವರಿಗೆ ಕರೆದು ನಮ್ಮ ಕರೆಂಟ್ ಮೋಟಾರ್ ಕಳುವಾದದನ್ನು ತೋರಿಸಿದ್ದು ಅವರು ಬಂದು ನೋಡಿದ್ದು ನಮ್ಮ ಪಂಪ್ಸೆಟ್ಗೆ ಕೂಡಿಸಿದ ಡಬ್ಲೂಇ ಕಂಪನಿಯ ಐದು ಹೆಚ್ಪಿಯ ಕರೆಂಟ್ ಮೋಟರನ್ನು ಯಾರೋ ಕಳ್ಳರು ದಿನಾಂಕ:02.12.2022 ರ ರಾತ್ರಿ 11:00 ಗಂಟೆಯಿಂದ ದಿನಾಂಕ03.12.2022 ರ ಬೆಳಗಿನ 05:00 ಗಂಟೆಯ ಮಧ್ಯದ ವೇಳೆಯಲ್ಲಿ ಕಿತ್ತಿಕೊಂಡು ಕಳುವು ಮಾಡಿಕೊಂಡು ಹೋಗಿದ್ದು ನಮ್ಮ ಕರೆಂಟ್ ಮೋಟರ್ನ ಅಂದಾಜು ಕಿಮ್ಮತ್ತು 20,000/- ರೂ ಆಗುತ್ತಿದ್ದು ಕಳುವು ಆದ ನಮ್ಮ ಮೋಟರ್ನ್ನು ನಾನು ನೋಡಿದರೆ ಗುತರ್ಿಸುತ್ತೇನೆ. ನಾನು ಮತ್ತು ನಮ್ಮೂರ ಬಸವರಾಜ ತಂದೆ ಗುರಪ್ಪ ಅಡ್ಡಿ ರವರು ಅಂದಿನಿಂದ ಇಂದಿನವರೆಗೆ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗಿ ಹುಡುಕಾಡಿದ್ದು ಮತ್ತು ಹಲವಾರು ಜನರಿಗೆ ವಿಚಾರಿಸಿದ್ದು ನಮ್ಮ ಕರೆಂಟ್ ಮೋಟರ್ ಸಿಕ್ಕಿರುವದಿಲ್ಲ ಕಾರಣ ಅಲ್ಲಲ್ಲಿ ಹುಡುಕಾಡಿ ಈ ದಿವಸ  ತಡವಾಗಿ ತಮ್ಮ ಠಾಣೆಗೆ ಬಂದು ದೂರು ಕೊಡುತ್ತಿದ್ದು ನನ್ನ ಕಳುವಾದ ಡಬ್ಲೂಇ ಕಂಪನಿಯ ಐದು ಹೆಚ್ಪಿಯ ಕರೆಂಟ್ ಮೋಟರ್ನ್ನು ಪತ್ತೆ ಮಾಡಿ ಕಳುವು ಮಾಡಿದ ಕಳ್ಳರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 86/2022 ಕಲಂ: 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 141/2022 ಕಲಂ 341, 323, 504, 506 34 ಐಪಿಸಿ: ಇಂದು ದಿನಾಂಕ 30.12.2022 ರಂದು ಸಾಯಂಕಾಲ 6-00 ಗಂಟೆಗೆ ಲಕ್ಷ್ಮೀ ಗಂಡ ತಿಮ್ಮಪ್ಪ ಕಾವಲಿ ವಯ|| 20 ವರ್ಷ, ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ದುಪ್ಪಲ್ಲಿಗ್ರಾಮ ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ದೂರು ಸಾರಾಂಶವೇನೆಂದರೆ,, ದಿನಾಂಕ 26.12.2022 ರಂದು ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನನ್ನ ತಂದೆ ಅಂಜಪ್ಪ ಇವರು ಅಂಗನವಾಡಿಗೆ ಭೇಟಿ ನೀಡಿದಾಗ ಅಲ್ಲಿ ಇರುವಂತಹ ಕುಂದುಕೊರತೆಗಳ ಬಗ್ಗೆ ವಿಚಾರ ಮಾಡಿ, ಬೆಲ್ಲ ಮತ್ತು ಇತರೆ ಸಾಮಾನುಗಳನ್ನು ಅಂಗಡಿಗೆ ಮಾರುತ್ತೀರಿ ಎಂದು ಅಂಗನವಾಡಿ ಕಾರ್ಯಕತರ್ೆ ರಾಧಿಕಾಳಿಗೆ ಪ್ರಶ್ನೆ ಕೇಳಿದ್ದು, ಹಾಗೂ ಸಾಮಾನುಗಳನ್ನು ಕರೆಕ್ಟ ಆಗಿ ಕೊಡಿ ಎಂದು ಹೇಳಿದ್ದಕ್ಕೆ. ಆವತ್ತಿನ ವಿಷಯವನ್ನು ಮನಸ್ಸಲ್ಲಿ ಇಟ್ಟುಕೊಂಡು ದಿನಾಂಕ 29.12.2022 ರಂದು ಮಧ್ಯಾಹ್ನ 12 ಗಂಟೆಗೆ ನಮ್ಮ ಅಪ್ಪನಾದ ಆಂಜನೇಯ ಇವರೊಂದಿಗೆ ಬಾಣಂತಿಯಾದ ನಾನು ಅಂಗನವಾಡಿ ಭತ್ತೆಯನ್ನು ಕೇಳಲು ಹೋದಾಗ ಅಂಗನವಾಡಿ ಗೇಟ್ ಹೊರಗಡೆ ನಿಂತು ಅಂಗನವಾಡಿ ಕಾರ್ಯಕತರ್ೆ ರಾಧಿಕಾ ಇವರಿಗೆ ಸಾಮಾನು ಬಂದಿದೆಯಾ ಇಲ್ಲಾ ಯಾವಾಗ ಕೊಡುತ್ತೀರಿ ಮಕ್ಕಳಿಗೆ ಹಾಗೆ ನಮ್ಮ ಮಕ್ಕಳನ್ನು ಕರೆದುಕೊಂಡು ಬಂದಿಲ್ಲ ಎಂದು ಕೇಳಿದಾಗ ಅಂಗನವಾಡಿ ಕಾರ್ಯಕತರ್ೆಯಾದ ರಾಧಿಕಾಳು ನಮ್ಮಪ್ಪನಿಗೆ ನಿಮ್ಮ ಮಕ್ಕಳನ್ನು ನಮ್ಮ ಸಲುವಾಗಿ ಹಡಕೊಂಡಿದ್ದೀರೇನೂ ಹಾಗೇ ತಂದು ಬಿಡಿ ಇಲ್ಲಾಂದ್ರೆ ಇಲ್ಲಾ ನಮ್ಮ ಜಾಬ ಹೋದರು ಪರವಾಗಿಲ್ಲ ನಂದೇನು ದುಪ್ಪಲ್ಲಿ ಅಲ್ಲಾ ತೆಲಂಗಾಣದ ಕುಣಸಿ ಗ್ರಾಮಕ್ಕೆ ಮದುವೆ ಮಾಡಿ ಕೊಟ್ಟಿದ್ದಾರೆ ನನಗೆ ಯಾರು ಕೇಳಂಗಿಲ್ಲ, ನಿಂದೆ ಜಾಸ್ತಿ ಆಗಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಗೇಟ್ ಹೊರಗಡೆ ಬಂದು ನಿಂತಿದ್ದ ನಮ್ಮ ಅಪ್ಪನಾದ ಆಂಜನೆಯನ ಎದೆ ಮೇಲಿನ ಅಂಗಿಯನ್ನು ಹಿಡಿದು ಎರಡು ಕಪಾಳಕ್ಕೆ ಬಾರಿಸಿದಳು. ಅಲ್ಲಿ ಇದ್ದಂತಹ ಸಾಬಣ್ಣ ಮತ್ತು ಬಾಲಪ್ಪ ಇವರು ಸಮಾಧಾನ ಮಾಡಿ ನನ್ನ ತಂದೆಯನ್ನು ಮನೆಗೆ ಕಳುಹಿಸಿದರು. ವಿಷಯ ಗೊತ್ತಾಗಿ ಅಲ್ಲಿಗೆ ಬಂದ ನಮ್ಮ ತಾಯಿ ನನ್ನ ಗಂಡನನ್ನು ಯಾಕೆ ಬಡಿದಿದ್ದು ಎಂದು ರಾದಿಕಾಳಿಗೆ ಕೇಳಿದಾಗ ಆ ಮಾತಿಗೆ ನನ್ನ ತಾಯಿಯ ತಲೆ ಕೂದಲನ್ನು ಹಿಡಿದು ರಾಧಿಕಾ ಹಿಗ್ಗಾಮುಗ್ಗಾ ಜಗ್ಗಾಡಿದಳು. ನಾನು ನಮ್ಮ ಅಮ್ಮನ್ನನ್ನು ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಬೇಕೆಂದಾಗ ರಾಧಿಕಾಳು ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ತಡೆದು, ಬಸುರಿಯಾದ ನನ್ನ ಹೊಟ್ಟೆಗೆ ಜೋರಾಗಿ ಒದ್ದಳು. ಆಗ ಸುದ್ದಿ ಗೊತ್ತಾಗಿ ಅಲ್ಲಿಗೆ ಬಂದ ರಾದಿಕಾಳ ತಂದೆ ಲಕ್ಷ್ಮಣ, ತಮ್ಮ ಕಿರಣ ಮತ್ತು ಚಿಕ್ಕಪ್ಪ ಹುಸೇನಪ್ಪ ನನ್ನನ್ನು ಜಾಡಿಸಿ ತಳ್ಳಿದರು. ಮತ್ತು ನಮ್ಮ ಮೇಲೆ ಆವಾಚ್ಯ ಶಬ್ದಗಳಿಂದ ಬೈದಿದ್ದು, 7 ತಿಂಗಳ ತುಂಬು ಗಭರ್ಿಣಿಯಾಗಿದ್ದು ನನಗೆ ಮುಂದೆ ಯಾವುದಾದರೂ ಹೇರಿಗೆ ಸಂದರ್ಭದಲ್ಲಿ ಮಗುಗೆ ತೊಂದರೆಯಾದಲ್ಲಿ ಮೇಲಿರುವ ಇವರೆಲ್ಲರೂ ಕಾರಣರಾಗಿರುತ್ತಾರೆ. . ದಯಾಳುಗಳಾದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಂಪ್ಲೇಂಟ್ ತೆಗೆದುಕೊಳ್ಳಬೇಕೆಂದು ನಾನು ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ಹೋಗಿ ಉಪಚಾರ ಮಾಡಿಕೊಂಡು ಮನೆಯಲ್ಲಿ ವಿಚಾರಣೆ ಮಾಡಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಅಂತಾ ಸಾರಾಂಶ ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 169/2022 ಕಲಂ: 379 ಐಪಿಸಿ  : ಇಂದು ದಿನಾಂಕ:30/12/2022 ರಂದು 7-41 ಪಿಎಮ್ಕ್ಕೆ ಆನ್ಲೈನ್ ಮೂಲಕ (ಇ ಎಫ್ಐಆರ್)  ಪಿಯರ್ಾದಿದಾರರಾದ ಶ್ರೀ ಚನ್ನಬಸಪ್ಪ ತಂದೆ ಸಿದ್ದಪ್ಪ ಚಲವಾದಿ ವ|| 32 ವರ್ಷ ಜಾ|| ಹಿಂದೂ ಹೊಲೆಯ ಉ|| ಎಫ್ಡಿಎ ತಹಸೀಲ ಕಾಯರ್ಾಲಯ ಸುರಪುರ ಹಾ.ವ|| ರಂಗಂಪೇಠ ಸುರಪುರ ಸಾ|| ಕೂಚಬಾಳ ತಾ|| ತಾಳಿಕೋಟಿ ಜಿ|| ವಿಜಯಪುರ ಇವರು ಸಲ್ಲಿಸಿದ ದೂರಿನ ಸಾರಾಂಶವೇನೆಂದರೆ, ನನ್ನದೊಂದು ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಮೋಟರ ಸೈಕಲ್ ನಂಬರ ಏಂ-33-ಏ-7175 (ಅಊಇಖಖ ಓಔ ಒಃಐಊಂ10ಇಚಃಊಏ27180,  ಇಓಉಓಇ ಓಔ. ಊಂ10ಇಈಃಊಏ22002) ನೇದ್ದು ಇದ್ದು, ಅದನ್ನು ನಾನೇ ಚಲಾಯಿಸಿಕೊಂಡು ಇರುತ್ತೇನೆ. ನಾನು ಸುರಪುರದ ರಂಗಂಪೇಠ ಏರಿಯಾದ ವೀರಶೈವ ಕಲ್ಯಾಣ ಮಂಟಪದ ಹಿಂದುಗುಡೆ ಗುರುಕುಲ ಶಾಲೆಯ ಮುಂದೆ ಮನೆ ಬಾಡಿಗೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಹಿಗಿದ್ದು ದಿನಾಂಕ 25/07/2022 ರಂದು ನನ್ನ ಮೋಟರ ಸೈಕಲನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ರಾತ್ರಿ 10 ಗಂಟೆಗೆ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದೆನು. ನಂತರ ದಿನಾಂಕ: 26/07/2022 ರಂದು ಬೆಳಿಗ್ಗೆ 6 ಗಂಟೆಗೆ ಎದ್ದು ಮನೆಯ ಹೊರಗಡೆ ಬಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ ಮೋಟರ ಸೈಕಲ್ ಇರಲಿಲ್ಲ ನಂತರ ಸುತ್ತಮುತ್ತ ಹುಡುಕಾಡಲು ಎಲ್ಲಿಯೂ ಕಾಣಿಸಲಿಲ್ಲ ನಂತರ ನಾನು ಮತ್ತು ನಮ್ಮ ಮನೆಯ ಮಾಲಿಕನಾದ ಯಮನಪ್ಪ ಇಬ್ಬರು ಕೂಡಿಕೊಂಡು ಸುರಪುರ ಪಟ್ಟಣದ ಎಲ್ಲಾ ಕಡೆ ಹುಡುಕಾಡಲಾಗಿ ನಮ್ಮ ಮೋಟರ ಸೈಕಲ್ ಸಿಕ್ಕಿರುವದಿಲ್ಲ. ಕಾರಣ ದಿನಾಂಕ 25/07/2022 ರಂದು ರಾತ್ರಿ 10 ಗಂಟೆಯಿಂದ ದಿನಾಂಕ: 26/07/2022 ರ ಬೆಳಗಿನ 6 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟರ್ ಮೋಟರ ಸೈಕಲ್ ನಂಬರ ಏಂ-33-ಏ-7175 ಅ.ಕಿ 25,000=00 ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಮತ್ತು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ನಮ್ಮ ಮೋಟರ ಸೈಕಲ್ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಇದ್ದ್ಟ ಅಜರ್ಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 169/2022 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 140/2022 ಕಲಂ 323, 324, 504, 506 ಜೊತೆಗೆ 149 ಐ.ಪಿ.ಸಿ: ಇಂದು ದಿನಾಂಕ 30-12-2022 ರಂದು ಮಾನ್ಯ ನ್ಯಾಯಾಲಯದಿಂದ ಖಾಸಗೀ ದೂರು ಅಜರ್ಿಯು ಠಾಣೆಗೆ ವಸೂಲಾಗಿದ್ದು ಅದರಲ್ಲಿ ದೂರುದಾರರಾದ ಬಾಲರಾಜ (43), ತಂದೆ: ಭೀಮಣ್ಣ, ಉ:ಖಾಸಗೀ ಕೆಲಸ, ಸಾ: ಮನೆ ನಂ 5-1-23/7ಎ ನಳಿನಿ ನಿಲಯ, ಕಾಡ್ಲೂರ ಪೆಟ್ರೋಲ್ ಬಂಕ್ನ ಹತ್ತಿರ, ಬಾಲಾಜಿ ನಗರ ಯಾದಗಿರಿ. ಇವರು ನೀಡಿದ ದೂರು ಅಜರ್ಿಯ ಸಾರಾಂಶವೇನೆಂದರೆ ದಿನಾಂಕ 07-11-2022 ರಂದು ಬೆಳಿಗ್ಗೆ 08:00 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆ ಮುಂದೆ ಕುಳಿತಿರುವಾಗ ಆರೋಪಿತರೆಲ್ಲರೂ ಸೇರಿಕೊಂಡು ವಿನಾ ಕಾರಣ ನಮ್ಮ ಮನೆಯ ಹತ್ತಿರ ಬಂದು ಆರೋಪಿತ ಎಂ. ವೆಂಕಟೇಶ್ ತಂದೆ: ಬಾಲಪ್ಪ ಇವರು ನನ್ನ ಮಗಳನ್ನು ನೋಡಿಕೊಳ್ಳುವುದಿಲ್ಲವೆಂದು ಬೈಯುತ್ತಿರುವಾಗ ಎಂ.ಅವಿನಾಶ್ ಈತನು ಕೈಯಿಂದ ನನಗೆ ಬಲಗಡೆ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆದನು, ಅದೇ ಸಮಯಕ್ಕೆ ನನಗೆ ಎಂ. ಬಾಲರಾಜ್ ಈತನು ಮುಷ್ಠಿಯಿಂದ ನನ್ನ ಹೊಟ್ಟೆಯ ಭಾಗಕ್ಕೆ ಕೈಯಿಂದ ಜೋರಾಗಿ ಗುದ್ದಿದನು ನಂತರ ಎಂ ಪದ್ಮಾವತಿ ಮತ್ತು ಗೀತಾ ಇಬ್ಬರು ಸೇರಿಕೊಂಡು ನನ್ನ ಶಟರ್್ ಕಾಲರ್ ಹಿಡಿದುಕೊಂಡು ನನಗೆ ಎಳೆದು ನೆಲಕ್ಕೆ ಹಾಕಿದರು, ಆಗ ಎಂ. ವೆಂಕಟೇಶ್ ಈತನು ಈ ಬೋಸುಡಿ ಮಗನದು ಬಹಳ ಆಗಿದೆ ಇವತ್ತು ಇವನನ್ನು ಬಿಡಬಾರದೆಂದು ಪಕ್ಕದಲ್ಲಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ತಲೆಗೆ ಬಲವಾಗಿ ಹೊಡೆದನು ಇದರಿಂದ ನನ್ನ ತಲೆಯಿಂದ ರಕ್ತ ಸೋರಲು ಆರಂಭಿಸಿತು. ನಂತರ ಎಲ್ಲರೂ ಸೇರಿಕೊಂಡು ನನಗೆ ಇವತ್ತು ಜೀವ ಸಹಿತ ಮುಗಿಸೋಣ ಎಂದು ಜೀವ ಬೆದರಿಕೆ ಒಡ್ಡಿ ಈ ಬೋಸುಡಿ ಮಗನದು ಬಹಳ ಆಗಿದೆ ಇವತ್ತೇ ಜೀವ ಬೆದರಿಕೆ ಹಾಕಿ ತೆಗೆದುಬಿಡೋಣ ಎಂದು ಎಲ್ಲರೂ ಸೇರಿಕೊಂಡು ಉದ್ದೇಶ ಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿರುತ್ತಾರೆ. ಅದೇ ಸಮಯಕ್ಕೆ ಸದ್ರಿ ಜಗಳವನ್ನು ಅಲ್ಲೇ ಇದ್ದ ದುರುಗಪ್ಪ ತಂದೆ ನಿಂಗಪ್ಪ ಮತ್ತು ಸತೀಶ ತಂದೆ ಸೈದಪ್ಪ ಇವರು ನೋಡಿ ಸದ್ರಿ ಜಗಳವನ್ನು ಬಿಡಿಸಿರುತ್ತಾರೆ.
ನಂತರ ನಾನು ಮುಂಜಾನೆ 10:00 ಗಂಟೆಯ ಸುಮಾರಿಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪಿಯರ್ಾದಿಯನ್ನು ಸಲ್ಲಿಸಲು ಹೋದಾಗ ಯಾದಗಿರಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ರವರು ನನ್ನ ಪಿಯರ್ಾದಿಯನ್ನು ತೆಗೆದುಕೊಳ್ಳಲು ನಿರಾಕರಿಸಿರುತ್ತಾರೆ ಇಂದು ಬಾ, ನಾಳೆ ಬಾ ಅಲ್ಲಿ ಕೂಡು ಎನ್ನುತ್ತಾ ಕಾಲಹರಣ ಮಾಡಿರುತ್ತಾರೆ.
ಅದಕ್ಕಾಗಿ ಮಾನ್ಯ ನ್ಯಾಯಾಲಯದ ಸನ್ನಿಧಿಯಲ್ಲಿ ಈ ಖಾಸಗೀ ಪಿಯರ್ಾದಿಯನ್ನು ಸಲ್ಲಿಸುತ್ತಿದ್ದೇನೆ. ಆದ್ದರಿಂದ ಮಾನ್ಯ ನ್ಯಾಯಾಲಯವು ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂಬುದಾಗಿ ನೀಡಿದ ಖಾಸಗೀ ಪಿಯರ್ಾದಿಯ ಸಾರಾಂದ ಮೇರೆಗೆ ಠಾಣಾ ಮೊಕದ್ದಮೆ ನಂ 140/2022 ಕಲಂ 323, 324, 504, 506 ಜೊತೆಗೆ 149 ಐ.ಪಿ.ಸಿ ನೇದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 142/2022 ಕಲಂ 341, 323, 504, 506 ಐಪಿಸಿ: ಇಂದು ದಿನಾಂಕ: 30.12.2022 ರಂದು ರಾತ್ರಿ 8.15 ಗಂಟೆಗೆ ಮಹಿಪಾಲರೆಡ್ಡಿ  ತಂದೆ  ಚೋಳಪ್ಪ ಪೊಲೀಸ್ ಪಾಟೀಲ್, ವ|| 40 ವರ್ಷ, ಜಾ|| ಲಿಂಗಾಯತ, ಉ|| ಒಕ್ಕಲುತನ, ಸಾ|| ಸಾವೂರ ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೆನೆಂದರೆ ಇಂದು ದಿನಾಂಕ 30.12.2022 ರಂದು ಸಾಯಂಕಾಲ ನಾನು ನಮ್ಮೂರಿನ ದೊಡ್ಡಪ್ಪ ತಾತನ ಗುಡಿಯ ಕಡೆಗೆ ಹೋಗಿದ್ದೆ. ನಾನು ಮರಳಿ ಮನೆಯ ಕಡೆಗೆ ಬಂದಾಗ ಇಂದು ಸಾಯಂಕಾಲ 7 ಗಂಟೆ ಸುಮಾರಿಗೆ ನಮ್ಮೂರಿನ ಶಿವುಕುಮಾರ ತಂದೆ ಸೋಮರೆಡ್ಡಿ ಪೊಲೀಸ್ ಪಾಟೀಲ್ ಈತನು ನಮ್ಮ ಮನೆಯ ಮುಂದೆ ನಿಂತು ನನ್ನ ಹೆಂಡತಿ ಗಿರಿಜಾ, ನನ್ನ ತಾಯಿ ಸೌಭಾಗ್ಯಮ್ಮಳಿಗೆ ಹೇ ರಂಡಿ, ಬೋಸಡಿಗಳೇ ಎಲ್ಯಾನಾ ಅವ ಮಹಿಪಾಲರೆಡ್ಡಿ ಕರೀರಿ ಆ ಸೂಳೆಮಗನಿಗೇ ಮನೆ ಪಕ್ಕದಲ್ಲಿ ಮೊರಂ ಹಾಕಿದರೆ ನಿಮ್ಮಪ್ಪನದೆನಾದರೂ ಗಂಟು ಹೋಗುತ್ತದೇನು ಅಂತಾ ಅಸಭ್ಯ ಶಬ್ದಗಳಿಂದ ಬೈದಾಡುತ್ತಿದ್ದ. ಅದನ್ನು ಕೇಳಿದ ನಾನು ನೀನ್ಯಾಕ ನಮ್ಮ ಮನೆ ಮುಂದೆ ಬಂದು ಓದಾರುಡುತ್ತಿದೀಯಾ ಅಂತಾ ನಾನು ಶಿವುಕುಮಾರಗೆ ಕೇಳಿದ ತಕ್ಷಣ ಸದರಿಯವ ನನ್ನ ಎದೆಯ ಮೇಲೆ ಅಂಗಿ ಹಿಡಿದು ಸುರೇಶ ಕಾಳಬೆಳಗುಂದಿ ನಿಮ್ಮ ಮನೆಯ ಪಕ್ಕದಲ್ಲಿ ಮೊರಂ ಹಾಕಿದರೆ ಬ್ಯಾಡ ಅಂತಿಯಂತಾ ಅದೇನು ನಿಮ್ಮಪ್ಪನ ಜಾಗನೇನು ಅಂತಾ ಅಂದವನೆ ತನ್ನ ಕೈಯಿಂದ ನನ್ನ ಕಪಾಳಕ್ಕೆ ಐದಾರು ಸಲ ಹೊಡೆದ ಆಗ ನಾನು ನಿನಗ್ಯಾಕೇ ಬೇಕು ಆ ವಿಷಯ ಅಂತಾ ನಾನಂದಾಗ ಊರಿನ ಎಲ್ಲರ ವಿಷಯ ನನಗೆ ಬೇಕಲೇ ಸೂಳೆ ಮಗನ್ಯಾ ಎಂದು ಕಾಲಿನಿಂದ ನನಗೆ ಓದೆಯಾಹತ್ತಿದ. ಅವನಿಂದ ನಾನು ಬಿಡಿಸಿಕೊಂಡು ಮನೆಯ ಓಳಗಡೆ ಹೋಗಬೇಕೆಂದು ಒಂದು ಎರಡು ಹೆಜ್ಜೆ ಮುಂದೆ ಹೋದ ತಕ್ಷಣ ಪುನ: ನನ್ನ ಎದಿರುಗೆ ಬಂದು ನನ್ನನ್ನು ತಡೆದು ನಿಲ್ಲಿಸಿ ನನ್ನ ಮೇಲೆ ಹಲ್ಲೆ ಮಾಡಿದಲ್ಲದೆ ನನ್ನ ಹೆಂಡತಿ, ತಾಯಿಗೆ ಬಾಯಿಗೆ ಬಂದಾಂಗ ನೀಚ ಶಬ್ದಗಳಿಂದ ನಿಂದಿಸತೊಡಗಿದ. ಅದೇ ವೇಳೆ ಹೋರಗಡೆ ಹೋಗಿದ್ದ ನಮ್ಮ ಅಣ್ಣ ಮನೆಯ ಹತ್ತಿರ ಬಂದು ನನ್ನನ್ನು ಪಕ್ಕಕ್ಕೆ ಎಳೆದುಕೊಂಡ. ಅಷ್ಟಾದರೂ ಶಿವುಕುಮಾರ ಈತನು ಮಹಿಪಾಲ್ಯಾ ಒಂದಿಲ್ಲ ಒಂದು ದಿನ ನಿನ್ನ ಜೀವ ನನ್ನ ಕೈಯಲ್ಲಿದೆ ಹಲವಾರು ವರ್ಷಗಳಿಂದ ನೀನು ನಮಗೆ ತೊಂದರೆ ಕೊಟ್ಟಿದ್ದೀಯಾ ಅಂತಾ ಜೀವ ತೆಗೆಯುವ ಬೇದರಿಕೆ ಹಾಕಿದ. ಓಣ್ಯಾಗಿನ ಜನ ಬಂದು ಶಿವುಕುಮಾರನಿಗೆ ಸಮಾದಾನ ಮಾಡಿದರು ಅವರು ಮಾತು ಸಹ ಕೇಳದೆ ಹಾಗೇ ಬೈಯುವುದು ಮಾಡಿದ. ನಾವೇ ನಮ್ಮ ಮನೆಯ ಓಳಗಡೆ ಹೋಗಿ ಬಾಗಿಲ ಹಾಕಿಕೊಂಡೆವು. ಸುಮಾರು ಹೊತ್ತಿನ ನಂತರ ಶಿವುಕುಮಾರ ನಮ್ಮ ಮನೆಯ ಮುಂದಿನಿಂದ ಹೋದ ನಂತರ ನಾವು ಸೈದಾಪೂರಕ್ಕೆ ಬಂದೇವು.
    ಸುಮಾರು 15-16 ವರ್ಷಗಳಿಂದೆ ನಮಗೆ ಮತ್ತು ಶಿವುಕುಮಾರ ರವರಿಗೆ ಜಮೀನು ವಿಷಯದಲ್ಲಿ ತಂಟೆ ತಕರಾರು ಆಗಿತ್ತು. ಅಂದಿನಿಂದ ಅವರ ಪಾಡಿಗೆ ಅವರು ಮತ್ತು ನಮ್ಮ ಪಾಡಿಗೆ ನಾವು ಇದ್ದೇವು. ಅದೇ ಹಳೆಯ ವೈಷಮ್ಯದಿಂದ ಇಂದು ಶಿವುಕುಮಾರ ಈತನು ನನ್ನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ನಮ್ಮ ಮನೆಯ ಹತ್ತಿರ ಬಂದು ನನ್ನ ಹೆಂಡತಿ, ತಾಯಿಗೆ ಅಸಭ್ಯ ಶಬ್ದಗಳಿಂದ ಬೈದಿರುತ್ತಾನೆ. ಮತ್ತು ನನಗೆ ಹೊಡೆಬಡೆ ಮಾಡಿ ಅಸಭ್ಯ ಶಬ್ದಗಳಿಂದ ನಿಂದಿಸಿ ಜೀವ ಬೇದರಿಕೆ ಹಾಕಿರುತ್ತಾನೆ. ಕಾರಣ ಶಿವುಕುಮಾರ ತಂದೆ ಸೋಮರೆಡ್ಡಿ ಪೊಲೀಸ್ ಪಾಟೀಲ್ ವ|| 28 ವರ್ಷ, ಜಾ|| ಲಿಂಗಾಯತ, ಉ|| ಕಾರು ಚಾಲಕ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ನನ್ನನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಿಕೊಡಲು ಕೋರಿದೆ. ಘಟನೆ ನಡೆದಾಗ ನಮ್ಮ ಮನೆಯ ಮುಂದೆ ಲೈಟಿನ ಬೆಳಕು ಇತ್ತು. ಅಂತಾ ಆಪಾದನೆ

ಇತ್ತೀಚಿನ ನವೀಕರಣ​ : 31-12-2022 12:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080