ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-11-2021

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 102/2021 ಕಲಂ: 302, 201 ಐಪಿಸಿ : ಇಂದು ದಿನಾಂಕ:06/11/2021 ರಂದು 12.20 ಪಿ.ಎಮ್.ಕ್ಕೆ ಫಿಯರ್ಾದಿ ಶಿವಮಾನಪ್ಪ ತಂದೆ ಭೀಮಯ್ಯ ಕಟ್ಟಿಮನಿ ವಯಾ:45 ಉ: ಒಕ್ಕಲುತನ ಜಾ; ವಡ್ಡರ ಸಾ: ನಗನೂರ ತಾ: ಸುರಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿಯರ್ಾದಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನನಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇದ್ದು, ನನ್ನ ದೊಡ್ಡ ಮಗನಾದ ನಾಗಪ್ಪ @ ನಾಗೇಶ ವಯಾ:26 ಈತನು ಒಕ್ಕಲುತನ ಮಾಡಿಕೊಂಡು ನಮ್ಮ ಜೋತೆಯಲ್ಲಿ ನಮ್ಮ ಹೊಲದಲ್ಲಿಯ ಮನೆಯಲ್ಲಿ ವಾಸವಾಗಿದ್ದನು. ನಮ್ಮ ಹೊಲದ ಜೋತೆಯಲ್ಲಿ ನಗನೂರದಲ್ಲಿ 30 ಎಕರೆ ಹೊಲ, ಚನ್ನೂರ ಕೆ ಗ್ರಾಮದಲ್ಲಿ 20 ಎಕರೆ ಹೊಲವನ್ನು ಲೀಜಿಗೆ ಹಾಕಿಕೊಂಡು ಕೃಷಿ ಕೆಲಸ ಮಾಡಿಕೊಂಡು ಇದ್ದನು. ಒಕ್ಕಲುತನ ಕೆಲಸದ ಸಲುವಾಗಿ ಆಗಾಗ ಕೆಲಸ ವಿದ್ದಾಗ ಹಗಲು ರಾತ್ರಿ ಎನ್ನದೆ ನನ್ನ ಮಗನು ಮೋಟಾರ್ ಸೈಕಲ ಮೇಲೆ ತಿರುಗಾಡುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ: 05/11/2021 ರಂದು ನನ್ನ ಮಗನು ನಮ್ಮೂರಿನ ಮೈಬೂಬ ತಂದೆ ಅಲ್ಲಿಸಾಬ ಹಳ್ಳದ ಇವರ ಮದುವೆ ನಿಚ್ಚಿತಾರ್ಥಕ್ಕೆ ಹುಣಚ್ಯಾಳಕ್ಕೆ ಹೋಗಿ ಸಾಯಂಕಾಲ ಊರಿಗೆ ಬಂದಿದ್ದ ಗೆಳಯರ ಜೋತೆಯಲ್ಲಿಯೇ ರಾತ್ರಿ ವರೆಗೆ ನಗನೂರ ಗ್ರಾಮದಲ್ಲಿಯ ಅಂಗಡಿ ಪೂಜೆ ಇರುವದರಿಂದ ಪೂಜೆ ಮುಗಿಸಿಕೊಂಡು 08.00 ಗಂಡೆಯ ಸುಮಾರಿಗೆ ಮನೆಗೆ ಬಂದಿದ್ದನು. ಆಗ ಯಾರೋ ಪೋನ ಮಾಡಿದ್ದು, ಮನೆಗೆ ಬಂದಿದ್ದೇನೆ ಅಂತಾ ಹೇಳಿದ. ನಂತರ 09.00 ಗಂಟೆಯ ಸುಮಾರಿಗೆ ಮತ್ತೆ ಯಾರೋ ಪೋನ ಮಾಡಿದರು ನಾನು ಅಂಗಳದಲ್ಲಿ ಮಲಗಿದ್ದೇನು. ನಮ್ಮ ಅಕ್ಕ ಯಂಕಮ್ಮ ಇವರು ರಾತ್ರಿ ಆಗಿದೆ ಮಲಗಿಕೊ ನಾಗಪ್ಪ ಅಂತಾ ಹೇಳಿದಳು, ಆಗ ನಾಗಪ್ಪನು ಈಗ ಬರುತ್ತೇನೆ ಅನ್ನುತ್ತಾ ಮನೆಯಿಂದ ಕಪ್ಪ ಬಣ್ಣದ ಹೀರೋ ಹೋಂಡಾ ಸ್ಪ್ಲೇಂಡರ ಮೋಟಾರ ಸೈಕಲ್ ತಗೆದುಕೊಂಡು ಹೊದನು. ನಾನು ಯಾವುದಾದರೂ ಅಂಗಡಿ ಪೂಜೆಗೆ ಅಥವಾ ಹೊಲಕ್ಕೆ ಹೊಗುತ್ತಿದ್ದಾನೆ ಅಂತಾ ಸುಮ್ಮನಾದೆನು. ನಂತರ ಇಂದು ದಿನಾಂಕ: 06/11/2021 ರಂದು 09.45 ಎಎಂ ಸುಮಾರಿಗೆ ನಮ್ಮ ಅಣ್ಣನ ಮಗನಾದ ತಿಮ್ಮಯ್ಯ ತಂದೆ ತಿಪ್ಪಣ್ಣ ಕಟ್ಟಿಮನಿ ವಯಾ: 28 ಸಾ: ನಗನೂರ ಈತನು ಪ್ರತಿ ದಿನದಂತೆ ವನದುಗರ್ಾ ಗ್ರಾಮಕ್ಕೆ ಕೆಲಸಕ್ಕೆ ಹೋಗುವಾಗ ಬೂದನೂರ ಗ್ರಾಮದ ಕೆನಾಲ ರೋಡಿನ ದಂಡೆಯ ಮೇಲೆ ಬಹಳಷ್ಟು ಜನರು ಕೂಡಿರುವದು ನೋಡಿ ಅವರ ಹತ್ತಿರ ಹೋಗಿ ನೋಡಿದಾಗ ಮೃತದೇಹವನ್ನು ನೋಡಿ ನಮ್ಮ ನಾಗಪ್ಪನ ತರಹ ಇದ್ದಾನೆ ಅಂತಾ ಸಂಶಯಗೊಂಡು ನನ್ನ ಜೋತೆಗೆ ಇದ್ದು ನಮ್ಮ ಅಣ್ಣನ ಮಗನಾದ ಪ್ರಕಾಶ ಈತನಿಗೆ ಪೋನ ಮಾಡಿ ಬೂದನೂರ ಗ್ರಾಮದ ಹತ್ತಿರ ಮೇನ್ ಕೆನಾಲ ರೋಡಿನಲ್ಲಿ ಈರಣ್ಣ ಕೊಂಕಲ್ ಇವರ ಹೊಲದ ಪಕ್ಕದಲ್ಲಿಯ ಕೆನಾಲ ಹತ್ತಿರ ಬರಲು ಹೇಳಿದ ಆಗ ನಾನು ಮತ್ತು ಪ್ರಕಾಶ ಇಬ್ಬರು 10.30 ಎಎಂ ಸುಮಾರಿಗೆ ಸ್ಥಳಕ್ಕೆ ಹೋಗಿ ಕೆನೆಲ ರೋಡಿನ ದಂಡಯಲ್ಲಿ ನೋಡಲಾಗಿ, ನನ್ನ ಮಗನ ಶವ ಇರುವದನ್ನು ನೋಡಿ ಗುರುತಿಸಿದೆನು. ನನ್ನ ಮಗನಾದ ನಾಗಪ್ಪ @ ನಾಗೇಶ ಈತನಿಗೆ ಯಾರೋ ದುಷ್ಕಮರ್ಿಗಳು, ಯಾವದೋ ದುರುದ್ದೇಶದಿಂದ ಬಲಬಾದ ಆಯುಧದಿಂದ ತೆಲೆ ಹಿಂಬಾಗದಲ್ಲಿ ಮತ್ತು ಬಲಗಡೆಯ ಮೆಲಕಿಗೆ ಹೊಡೆದು ಭಾರಿ ರಕ್ತಗಾಯ ಮಾಡಿ ಕೋಲೆ ಮಾಡಿ ರಕ್ತ ಸೋರದಂತೆ ತೆಲೆಗೆ ಟಾವೇಲ್ ಸುತ್ತಿ, ಶವವನ್ನು ಬೂದನೂರ ಹತ್ತಿರ ಕೆನಾಲ ದಂಡೆ ಮೇಲೆ ತಂದು ಹಾಕಿ ಬೆಂಕಿ ಹಚ್ಚಿರುತ್ತಾರೆ. ನನ್ನ ಮಗನ ಮೈಮೇಲಿನ ಶರ್ಟ ಮತ್ತು ಬನೀನ ಸುಟ್ಟಿದ್ದು, ಜೀನ್ಸ ಪ್ಯಾಂಟ ಅಲ್ಲಲ್ಲಿ ಸುಟ್ಟಿರುತ್ತದೆ, ಟಾವೇಲ್ ಕೂಡ ಸ್ವಲ್ಪ ಸುಟ್ಟಿರುತ್ತದೆ. ಎದೆಯ ಹತ್ತಿರ ಎರಡು ಕೈಗಳ ರಟ್ಟೆಯ ಹತ್ತಿರ ಎರಡು ತೋಡೆಗಳ ಹತ್ತಿರ ಮೈಗೆ ಅಲ್ಲಲ್ಲಿ ಸುಟ್ಟ ಗಾಯಗಳಾಗಿರುತ್ತವೆ. ಕಾರಣ ನನ್ನ ಮಗನಿಗೆ ಯಾರೋ ದುಷ್ಕಮರ್ಿಗಳು, ದಿನಾಂಕ:05/11/2021 ರಂದು ರಾತ್ರಿ 09.00 ಗಂಟೆಯಿಂದ ದಿನಾಂಕ:06/11/2021 ರಂದು ಬೆಳಗಿನ 09.45 ಎಎಂ ಮಧ್ಯದ ಅವಧಿಯಲ್ಲಿ, ಯಾವುದೋ ದುರುದ್ದೇಶದಿಂದ, ಕೋಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವವನ್ನು ಬೂದನೂರ ಕೆನಾಲ ಪಕ್ಕದಲ್ಲಿ ಎಸೆದು ಬೆಂಕಿ ಹಚ್ಚಿದ್ದು, ಅವರಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:102/2011 ಕಲಂ 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 55/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 06/11/2021 ರಂದು 08-30 ಎ.ಎಂ.ದ ಸುಮಾರಿಗೆ ಯಾದಗಿರಿ ನಗರದ ಅಂಬೇಡ್ಕರ್ ವೃತ್ತದ ಬಿ.ಎಸ್.ಎನ್.ಎಲ್ ಕಛೇರಿ ಹತ್ತಿರ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಗಾಯಾಳು ಪಿಯರ್ಾದಿ ತಮ್ಮ ಮೋಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-03, ಇಬಿ-8750 ನೇದ್ದರ ಮೇಲೆ ರಸ್ತೆ ಬದಿಯಲ್ಲಿ ನಿಂತಿದ್ದಾಗ ಈ ಕೇಸಿನ ಆರೋಪಿತ ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಕೆ-2118 ನೇದ್ದನ್ನು ಕನಕವೃತ್ತದ ಕಡೆಯಿಂದ ಕೋಟರ್ು ರಸ್ತೆ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಪಿಯರ್ಾದಿಯವರ ಮೋಟಾರು ಸೈಕಲ್ ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಸದರಿ ಅಪಘಾತದಲ್ಲಿ ಪಿಯರ್ಾದಿಗೆ ತಲೆಯ ಬಲಭಾಗಕ್ಕೆ ಗುಪ್ತಗಾಯ ಮತ್ತು ಕೈಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಪಿಯರ್ಾದಿಯವರ ಮೋಟಾರು ಸೈಕಲ್ ಸವಾರನಿಗೆ ಬಲಗಾಲಿನ ಪಾದದ ಮೇಲೆ ಭಾರೀ ರಕ್ತಗಾಯ ಮತ್ತು ಬಲಗೈನ ಬೆರಳುಗಳಿಗೆ ಗುಪ್ತಗಾಯಗಳಾಗಿದ್ದು ಇರುತ್ತವೆ. ಈ ಘಟನೆಗೆ ಕಾರಣನಾದ ಮೋಟಾರು ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ಪಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 175//2021 ಕಲಂ 323, 324 504 506 ಸಂ 34 ಐ.ಪಿ.ಸಿ : ಪಿರ್ಯಾಧಿಗೆ ತನ್ನ ಆಡುಗಳನ್ನು ಮೇಯಿಸಿಕೊಂಡು ಮರಳಿ ಬರುತ್ತಿರುವಾಗ ಗಾಜರಕೋಟ ಸೀಮಾಂತರ ಮಲ್ಕಪ್ಪನ ಹೊಲದ ಹತ್ತಿರ ಪಿರ್ಯಾಧಿಯ ಆಡುಗಳು ಆರೋಪಿತರ ಹೊಲದ ಬದುವಿಗೆ ಮೇಯಿಯಲು ಹೋಗಿದ್ದು. ಇದೇ ಸಿಟ್ಟಿನಿಂದ ಆರೋಪಿತರು ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ರಕ್ತ ಮತ್ತು ಗುಪ್ತ ಗಾಯ ಪಡಿಸಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 176/2021 ಕಲಂ 447, 323, 504, 506 ಸಂ 34 ಐ.ಪಿ.ಸಿ. : ಇಂದು ದಿನಾಂಕ 06.11.2021 ರಂದು ಸಂಜೆ 05:00 ಗಂಟೆಯ ಸುಮಾರಿಗೆ ಫಿರ್ಯಾದಿಯು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿತರು ತಮ್ಮ ಕುರಿಗಳನ್ನು ಮೇಯಿಸುತ್ತಾ ಫಿರ್ಯಾದಿದಾರನ ಹೊಲದ ಹತ್ತಿರ ಬಂದು ಮೇಯಿಸುತ್ತಿರುವಾಗ ಕುರಿಗಳು ಹೊಲದಲ್ಲಿ ಬಂದು ಜೋಳದ ಬೆಳೆ ನಾಶ ಮಾಡತಾವ ಹೊಡ್ಕೋರಿ ಅಂತಾ ಅಂದಾಗ ಆರೋಪಿತರು ಫಿರ್ಯಾದಿದಾರನು ಇದ್ದಲ್ಲಿಗೆ ಹೋಗಿ ಆತನ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ.176/2021 ಕಲಂ 447, 323, 504, 506, ಸಂಗಡ 34 ಐಪಿಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 07-11-2021 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080