ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 08/02/2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 07/2021 ಕಲಂ 279, 337, 338, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ದಿನಾಂಕ 06/02/2021 ರಂದು ರಾತ್ರಿ 9-30 ಪಿ.ಎಂ.ದ ಸುಮಾರಿಗೆ ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮೇಲೆ ಬರುವ ಹಾವಿನಾಳ ಬ್ರಿಡ್ಜ್ (ಕೆ,ಎಸ್,ಆರ್,ಟಿ,ಸಿ ವರ್ಕಶಾಪ್) ಹತ್ತಿರ ಈ ಕೇಸಿನ ಪಿಯರ್ಾದಿ ಮತ್ತು ಮೃತ ಹಾಗೂ ಗಾಯಾಳುಗಳು ಸೇರಿಕೊಂಡು ಬೆಂಗಳೂರಿನಲ್ಲಿರುವ ಕುರಬರ ಎಸ್.ಟಿ. ಸೇರ್ಪಡೆ ಸಮಾವೇಶದಲ್ಲಿ ಭಾಗವಹಿಸುವ ಸಲುವಾಗಿ ರಾಮಸಮುದ್ರ ಗ್ರಾಮದಿಂದ ಯಾದಗಿರಿಗೆ ಆಟೋ ಟಂ,ಟಂ ನಂಬರ ಕೆಎ-33, ಎ-5646 ನೇದ್ದರಲ್ಲಿ ಬರುವಾಗ ಯಾವುದೋ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ಆಟೋವನ್ನು ಓವರ್ ಟೇಕ್ ಮಾಡುವಾಗ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಸದರಿ ಅಪಘಾತದಲ್ಲಿ ಆಟೋದಲ್ಲಿದ್ದವರ ಪೈಕಿ ಸಾದೇವಪ್ಪನಿಗೆ ತಲೆಗೆ, ಎದೆಗೆ ಭಾರೀ ಗುಪ್ತಗಾಯವಾಗಿ ಚಿಕಿತ್ಸೆ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಸೇರಿಕೆಯಾಗಿ ಚಿಕಿತ್ಸೆಗೆ ಸ್ಪಂದಿಸದೇ ರಾತ್ರಿ 10-40 ಪಿ.ಎಂ.ಕ್ಕೆ ಮೃತಪಟ್ಟಿದ್ದು ಮತ್ತು ಆಟೋದಲ್ಲಿದ್ದ ಉಳಿದವರಿಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ. ಈ ಘಟನೆಯ ನಂತರ ಲಾರಿ ಚಾಲಕನು ತನ್ನ ಲಾರಿ ಸಮೇತ ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 07/2021 ಕಲಂ 279, 337, 338, 304(ಎ) ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 34/2021 ಕಲಂ 379 ಐ.ಪಿ.ಸಿ. ಮತ್ತು ಕಲಂ. 44(1) ಕೆ,ಎಮ್,ಎಮ್,ಸಿ,ಆರ್.ಆಕ್ಟ 1994 : ಇಂದು ದಿನಾಂಕ:07-02-2021 ರಂದು 11 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸೂ)-2 ಸುರಪೂರ ಪೊಲೀಸ್ ಠಾಣೆ ರವರು ಒಂದು ಮರಳು ತುಂಬಿದ ಟ್ಯಾಕ್ಟರದೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:07-02-2021 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬ ವ್ಯಕ್ತಿಯು ತಮ್ಮ ಟ್ಯಾಕ್ಟರದಲ್ಲಿ ಶೆಳ್ಳಗಿ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ದೇವಾಪೂರ ಕ್ರಾಸ ಕಡೆಗೆ ಸಾಗಿಸುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಮಂಜುನಾಥ ಹೆಚ್.ಸಿ-176, ಶ್ರೀ ಮಂಜುನಾಥ ಸಿಪಿಸಿ-271 ಇಬ್ಬರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್.ಸಿ. ರವರಿಗೆೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಮಂಜುನಾಥ ಹೆಚ್.ಸಿ. ರವರು ಇಬ್ಬರು ಪಂಚರಾದ 1) ಶ್ರೀ ಚೌಡಪ್ಪ ತಂದೆ ಮಲ್ಲಪ್ಪ ಅಂಬಿಗೇರ ವಯಾ:32 ವರ್ಷ ಜಾತಿ:ಕಬ್ಬಲಿಗ ಉ:ಒಕ್ಕಲುತನ ಸಾ:ದೇವಾಪೂರ 2) ಶ್ರೀ ಹುಸೇನಸಾಬ ತಂದೆ ಖಾಸಿಂಸಾಬ ಖುರೇಶಿ ವಯಾ:45 ವರ್ಷ ಜಾತಿ:ಮುಸ್ಲಿಂ ಉ:ಒಕ್ಕಲುತನ ಸಾ:ದೇವಾಪೂರ ತಾ|| ಸುರಪುರ ಇವರನ್ನು ಬೆಳಿಗ್ಗೆ 7-15 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಕುಳಿತುಕೊಂಡು ಬೆಳಿಗ್ಗೆ 7-30 ಗಂಟೆ ಸುಮಾರಿಗೆ ಠಾಣೆಯಿಂದ ಹೊರಟು ಬೆಳಿಗ್ಗೆ 8 ಗಂಟೆ ಸುಮಾರಿಗೆ ದೇವಾಪೂರ ಕ್ರಾಸ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಿಂತುಕೊಂಡಾಗ ಅಂದಾಜು ಬೆಳಿಗ್ಗೆ 08-15 ಗಂಟೆ ಸುಮಾರಿಗೆ ಶೆಳ್ಳಗಿ ಕ್ರಾಸ್ ಕಡೆಯಿಂದ ಒಂದು ಟ್ಯಾಕ್ಟರ ಚಾಲಕನು ತನ್ನ ಟ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವುದನ್ನು ನೋಡಿ ನಾನು ಸಿಬ್ಬಂಧಿಯವರ ಸಹಾಯದಿಂದ ಟ್ಯಾಕ್ಟರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟ್ಯಾಕ್ಟರ ಚಾಲಕನು ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ಯಾಕ್ಟರನ್ನು ಸೈಡಿಗೆ ನಿಲ್ಲಿಸಿ, ಕೆಳಗೆ ಇಳಿದು ಓಡಿ ಹೋದನು. ನಾವು ಸದರಿ ಟ್ಯಾಕ್ಟರ ಹತ್ತಿರ ಹೋಗಿ ಟ್ಯಾಕ್ಟರನ್ನು ಪಂಚರ ಸಮಕ್ಷಮ ಪರೀಶಿಲಿಸಿ ನೋಡಲು ಒಂದು ಸೋನಾಲೀಕ ಆ-35ಖಘಿ ಕಂಪನಿಯ ಟ್ಯಾಕ್ಟರ ಇದ್ದು ಅದರ ಇಂಜಿನ ನಂಬರ 3100ಈಐಗ93ಐ893313ಈ18 ಹಾಗೂ ಚೆಸ್ಸಿ ನಂಬರ: ಃಙಂಖಊ901384ಖ3 ಇದ್ದು ಅದರ ಟ್ರಾಲಿಗೆ ನಂಬರ ಇರುವದಿಲ್ಲ. ಸದರಿ ಟ್ಯಾಕ್ಟರದಲ್ಲಿ ಅಂದಾಜು 2 ಘನ ಮೀಟರ ಮರಳು ಇದ್ದು ಅದರ ಅ.ಕಿ 1600/- ರೂಗಳು ಆಗುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ ಬೆಳಿಗ್ಗೆ 08-15 ಗಂಟೆಯಿಂದ 9-15 ಗಂಟೆಯವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟ್ಯಾಕ್ಟರನ್ನು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟ್ಯಾಕ್ಟರ ಚಾಲಕ ಮತ್ತು ಮಾಲಿಕ ಇಬ್ಬರು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 1600/- ರೂ.ಗಳ ಕಿಮ್ಮತ್ತಿನ ಅಂದಾಜು 02 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟ್ಯಾಕ್ಟರನ್ನು ಖಾಸಗಿ ಚಾಲಕರ ಸಹಾಯದಿಂದ ಠಾಣೆಗೆ ಬೆಳಿಗ್ಗೆ 11 ಗಂಟೆಗೆ ತಂದು ಒಪ್ಪಿಸಿ ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 35/2021 ಕಲಂ: 279, 337, 338, 304(ಎ) ಐಪಿಸಿ : ಇಂದು ದಿನಾಂಕಃ 07/02/2021 ರಂದು 12-15 ಪಿ.ಎಮ್ ಕ್ಕೆ ಶ್ರೀಮತಿ ದೇವಮ್ಮ ಗಂಡ ಭೀಮರಾಯ ಶಹಾಪೂರ ಸಾ: ಕೂಡಲಗಿ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾಧಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಹಿರಿಯ ಮಗಳಾದ ಶಿವಮ್ಮ ಇವಳಿಗೆ ಸುಮಾರು 12 ವರ್ಷಗಳ ಹಿಂದೆ ಲಿಂಗಸುಗೂರ ತಾಲೂಕಿನ ಕುಪ್ಪೆಗುಡ್ಡಾ ಗ್ರಾಮದ ಶರಣಬಸವ ತಂದೆ ದಂಡಪ್ಪ ನೆಲೋಗಿ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದೇವು. ಅವರಿಗೆ ಲಕ್ಷ್ಮೀ ಅಂತ 7 ವರ್ಷದ ಒಬ್ಬಳು ಮಗಳಿರುತ್ತಾಳೆ. ನನ್ನ ಮಗಳಾದ ಶಿವಮ್ಮ ಹಾಗು ಅಳಿಯ ಶರಣಬಸವ ಇವರಿಗೆ ಸಂಸಾರೀಕ ಜೀವನದಲ್ಲಿ ಮನಸ್ತಾಪ ಆಗಿದ್ದರಿಂದ ಕಳೆದ 4 ವರ್ಷಗಳ ಹಿಂದೆ ನನ್ನ ಮಗಳು ಗಂಡನ ಮನೆಬಿಟ್ಟು ತನ್ನ ಮಗಳೊಂದಿಗೆ ತವರು ಮನೆಗೆ ಬಂದಿರುತ್ತಾಳೆ. ಹೀಗಿದ್ದು ದಿನಾಂಕ: 04/02/2021 ರಂದು ಮುಂಜಾನೆ ನಾನು ಮತ್ತು ನನ್ನ ಮಗಳಾದ ಶಿವಮ್ಮ, ಮೊಮ್ಮಗಳಾದ ಲಕ್ಷ್ಮೀ ಹಾಗು ಮಗನಾದ ಬಲಭೀಮ ಎಲ್ಲರೂ ನಮ್ಮ ಅಟೋರಿಕ್ಷಾ ನಂಬರ ಕೆ.ಎ 33 ಎ 3123 ನೇದ್ದರಲ್ಲಿ ಕೂಡಲಗಿ ಗ್ರಾಮದಿಂದ ಖಾನಾಪೂರ ಗ್ರಾಮದಲ್ಲಿರುವ ನಮ್ಮ ಮಗಳಾದ ಶಾಂತಮ್ಮ ಇವಳ ಮನೆಗೆ ಹೋಗಿದ್ದೇವು. ನಾವು ಸಾಯಂಕಾಲದ ವರೆಗೆ ಮಗಳ ಮನೆಯಲ್ಲಿದ್ದು, ನಂತರ ರಾತ್ರಿ 7-30 ಗಂಟೆಯ ಸುಮಾರಿಗೆ ಖಾನಾಪೂರ ಗ್ರಾಮದಿಂದ ಮರಳಿ ನಾವೆಲ್ಲರೂ ನಮ್ಮ ಅಟೋರಿಕ್ಷಾದಲ್ಲಿ ಹೊರಟು ಹತ್ತಿಗುಡೂರ, ಸುರಪೂರ ಮಾರ್ಗವಾಗಿ ಕೂಡಲಗಿ ಗ್ರಾಮಕ್ಕೆ ಹೊರಟಿದ್ದೇವು. ಸುರಪೂರ ದಾಟಿದ ಬಳಿಕ ನನ್ನ ಮಗನಾದ ಬಲಭೀಮ ಇತನು ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದರಿಂದ ನಾವು ಆತನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರೂ ಕೇಳದೇ ಅದೇ ವೇಗದಲ್ಲಿ ನಡೆಸಿಕೊಂಡು ಹೋಗುತ್ತಿರುವಾಗ 9-05 ಪಿ.ಎಮ್ ಸುಮಾರಿಗೆ ಸಿದ್ದಾಪೂರ ಗ್ರಾಮದ ದಾಟಿದ ಬಳಿಕ ಒಂದು ನಾಯಿ ರಸ್ತೆ ದಾಟುತ್ತಿರುವಾಗ ಅದೇ ತಪ್ಪಿಸಲು ಒಮ್ಮೆಲೆ ಎಡಕ್ಕೆ ಕಟ್ ಮಾಡಿದ್ದರಿಂದ ಅಟೋರಿಕ್ಷಾ ಆತನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿತು. ಸದರಿ ಅಪಘಾತದಲ್ಲಿ ನನ್ನ ಎಡಗಾಲಿನ ಪಾದಕ್ಕೆ ತರಚಿದ ಗಾಯವಾಗಿರುತ್ತದೆ. ನನ್ನ ಮಗಳಾದ ಶಿವಮ್ಮ ಇವಳ ಎಡಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೂಗು ಮತ್ತು ಎರಡು ಕಿವಿಯಿಂದ ರಕ್ತಸ್ರಾವ ಆಗಿದ್ದು, ಮೂಗಿನ ಮೇಲೆ, ಎಡಗಣ್ಣಿನ ಪಕ್ಕ, ಎರಡು ಕೈಗಳ ಮೇಲೆ ಹಾಗು ಎರಡು ಮೊಣಕಾಲುಗಳಿಗೆ ರಕ್ತಗಾಯಗಳಾಗಿದ್ದು ಇರುತ್ತದೆ. ಲಕ್ಷ್ಮೀ ಇವಳ ಎಡಗಾಲಿನ ತೊಡೆಯಲ್ಲಿ ಭಾರಿಗುಪ್ತಗಾಯವಾಗಿದ್ದು, ತಲೆಯಲ್ಲಿ ಹಾಗು ಬಲಗಾಲಿನ ಪಾದದ ಮೇಲೆ ರಕ್ತಗಾಯಗಳಾಗಿರುತ್ತವೆ. ಬಲಭೀಮ ಇತನ ಎಡಗಾಲಿನ ಪಾದದ ಮಣಿಕಟ್ಟಿನ ಹತ್ತಿರ ತರಚದಂತಾಗಿ ಭಾರಿ ಗುಪ್ತಗಾಯ ಆಗಿರುತ್ತದೆ. ಆಗ 112 ತುತರ್ು ವಾಹನದವರು ಬಂದು ನಮಗೆ ಚಿಕಿತ್ಸೆಗಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದರು. ಅಲ್ಲಿಂದ ನಾವು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿದ್ದು, ಅಲ್ಲಿ ನನ್ನ ಮಗಳಾದ ಶಿವಮ್ಮ ಗಂಡ ಶರಣಬಸವ ನೆಲೋಗಿ ವಯಃ 34 ವರ್ಷ ಸಾ: ಕುಪ್ಪೆಗುಡ್ಡಾ ಹಾವ: ಕೂಡಲಗಿ ಇವಳು ಚಿಕಿತ್ಸೆ ಪಡೆಯುತ್ತ ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಲ್ಲಿ ಆಗಿರುವ ಭಾರಿಗಾಯಗಳಿಂದಾಗಿ ನಿನ್ನೆ ದಿನಾಂಕ: 06/02/2021 ರಂದು ರಾತ್ರಿ 10-10 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತ ವಗೈರೆ ಹೇಳಿಕೆ ಸಾರಾಂಶದ ಠಾಣೆ ಗುನ್ನೆ ನಂಬರ 35/2021 ಕಲಂ. 279, 337, 338, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಇತ್ತೀಚಿನ ನವೀಕರಣ​ : 08-02-2021 01:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ