ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 30/01/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 14/2021 ಕಲಂ 143, 147, 148, 323, 324, 504, 506 ಸಂ 149 ಐಪಿಸಿ :-ದಿನಾಂಕ 29/01/2021 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಫಿರ್ಯಾಧಿ ಮತ್ತು ಅವರ ಮನೆಯವರೆಲ್ಲರೂ ತಮ್ಮ ಮನೆ ಮುಂದೆ ಕೆಲಸ ಮಾಡುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಬಂದು ಹಳೇ ದ್ವೇಶದಿಂದ ಜಗಳ ತೆಗೆದು ಸೂಳೇ ಮಕ್ಕಳೇ ಅಂತಾ ಅವಾಚ್ಯವಾಗಿ ಬೈದು, ಕೊಡಲಿಯಿಂದ, ಕಲ್ಲಿನಿಂದ ಮತ್ತು ಕೈಯಿಂದ ಫಿರ್ಯಾದಿಗೆ, ಮತ್ತು ಅವನ ಮನೆಯವರಿಗೆ ಹೊಡೆದು ರಕ್ತಗಾಯ, ಗುಪ್ತಗಾಯ ಮತ್ತು ತರಚಿದಗಾಯಗಳು ಮಾಡಿದ್ದು ಮತ್ತು ಜಗಳ ಬಿಟ್ಟು ಹೋಗುವಾಗ ಇವತ್ತು ಉಳಿದಿರಿ ಮಕ್ಕಳೇ ಇನ್ನೊಂದು ಸಲ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣದಾಖಲು ಆಗಿರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ :- 15/2021 ಕಲಂ 143, 147, 148, 323, 323, 504, 506,ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 30-01-2021 ರಂದು 6-15 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಎಡವಿನಸನ್ ತಂದೆ ಇಮಾನುವೇಲ್ ಬಡಿಗೇರ ವಯಾ;22 ಉ: ವಿಧ್ಯಾಥರ್ಿ ಸಾ:ಚಿರಂಜಿವಿ ಯಾದಗಿರಿ ಇವರು ಠಾಣೆಗೆ ಹಜರಾಗಿ ತಮ್ಮ ಫಿರ್ಯಾಧೀ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನಿನ್ನೆ ದಿನಾಂಕ 29-01-2021 ರಂದು 6-15 ಪಿ.ಎಮ್ ಕ್ಕೆ ಆರೋಪಿತರು ಫಿರ್ಯಾಧಿಗೆ ಹಳೆಯ ವéೈಯಮ್ಯದಿಂದ ಯಾದಗಿರಿಯಲ್ಲಿ ಜಗಳಾ ಮಾಡಿ ಕೈಯಿಂದ ಹೊಡೆ ಬಡೆ ಮಾಡಿದ್ದ ಬಗ್ಗೆ ಆರೋಪಿತರಿಗೆ ಸಾಯಂಕಾಲ 7-30 ಗಂಟೆಗೆ ಕ್ಯಾಸಪ್ಪನಳ್ಳಿ ಗ್ರಾಮಕ್ಕೆ ಹೋಗಿ ಕೇಳಿದಾಗ ಆರೋಪಿತರು ಮತ್ತೆ ಅಲ್ಲಿ ಜಗಳಾ ತೆಗೆದು ಫಿರ್ಯಾಧಿಗೆ ಮತ್ತು ಆತನ ತಂದೆ ತಾಯಿಗೆ ಕೊಡಲಿ ಮತ್ತು ಬಡಿಗೆಯಿಂದ ಹೊಡೆದು ರಕ್ತಗಾಯ ಗೊಳಿಸಿ ಜೀವಧ ಭಯ ಹಾಕಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 16/2021, ಕಲಂ, 324, 504. 506 ಐ ಪಿ ಸಿ : ದಿನಾಂಕ: 30-01-2021 ರಂದು 12.30 ಪಿ.ಎಮ್.ಕ್ಕೆ ಅಜರ್ಿದಾರನಾದ ಶ್ರೀ ಮಲ್ಲಪ್ಪ ತಂದೆ ತಾಯಪ್ಪ ಮಲ್ಲಯ್ಯನ್ನೋರ ಸಾ|| ತೋರಣತಿಪ್ಪ ಈತನು ಠಾಣೆಗೆ ಬಂದು ಗಣಕೀಕರಣ ಮಾಡಿದ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿಯರ್ಾದಿಗೆ ಮತ್ತು ಆರೋಪಿತನಿಗೆ ಆಸ್ತಿ ಹಂಚಿಕೆ ವಿಷಯದಲ್ಲಿ ತಕರಾರು ಇದ್ದು, ದಿನಾಂಕ. 29.01.2021 ರಂದು ಸಾಯಂಕಾಲ ಫಿಯರ್ಾದಿ ತನ್ನ ಮಗಳು ನಿಖಿತಾ ಇವಳಿಗೆ ಮನೆಯ ಮುಂದಿನ ಕಸ ಹೊಡೆಯಲು ಹೇಳಿದಾಗ ಅದನ್ನು ಕೇಳಿಸಿಕೊಂಡ ಆರೋಪಿತನು ತನ್ನ ಮೇಮೇಲೆ ಹಾಕಿಕೊಂಡು ಫಿಯರ್ಾದಿಗೆ ಅವಾಚ್ಯವಾಗಿ ಬೈದು, ಜಗಳ ತೆಗೆದು ಕಟ್ಟಿಗೆಯಿಂದ ನೆತ್ತಿಯ ಮೇಲೆ ಜೋರಾಗಿ ಹೊಡೆದು ರಕ್ತಗಾಯ ಮಾಡಿ, ಅದೇ ಕಟ್ಟಿಗೆಯಿಂದ ಎಡಗಾಲಿನ ತೊಡೆಗೆ ಹೊಡೆದು ಗುಪ್ತಗಾಯ ವ ಾಡಿ, ಮೈ, ಕೈಗೆ ಹೊಡೆದು ಸಣ್ಣ-ಪುಟ್ಟ ಗಾಯ, ಗುಪ್ತ ಒಳಪೆಟ್ಟು ಮಾಡಿ, ಇನ್ನೊಮ್ಮ ಸಿಕ್ಕರೆ ಖಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಾರಾಂಶ ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 22/2021 ಕಲಂ 279, 338 ಐ.ಪಿ.ಸಿ : ಇಂದು ದಿನಾಂಕ 30/01/2021 ರಂದು ಮದ್ಯಾಹ್ನ 14-30 ಗಂಟೆಗೆ ಫಿಯರ್ಾದಿ ಶ್ರೀ ಉಮೇಶ ತಂದೆ ಮಾನು ನಾಯಕ ರಾಠೋಡ, ವಯ 53 ವರ್ಷ, ಜಾತಿ ಲಂಬಾಣಿ, ಸಾಃ ಕನ್ಯಾಕೊಳ್ಳುರ ಮಾನಸಿಂಗ್ ನಾಯಕ್ ತಾಂಡಾ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 23/01/2021 ರಂದು, ಸಾಯಂಕಾಲದ ಸುಮಾರಿಗೆ ಫಿಯರ್ಾದಿಯವರು ತಮ್ಮ ಮಗ ಅಭಿಮಾನ ವಯ 28 ವರ್ಷ ಈತನೊಂದಿಗೆ ಲೀಜಿಗೆ ಹಾಕಿಕೊಂಡಿರುವ ತನ್ನ ಅಣ್ಣನ ಹೊಲದಲ್ಲಿನ ಹೆಸರಿನ ಬೆಳೆಗೆ ನೀರು ಹಾಯಿಸುತಿದ್ದರು. ಆಗ ಮಾನಸಿಂಗ ನಾಯಕ ತಾಂಡಾದ ಸಂಗಪ್ಪ ತಂದೆ ತಾರಾನಾಥ ರಾಠೋಡ ವಯ 28 ವರ್ಷ ಇವನು ಅಲ್ಲಿಗೆ ಹೋಗಿದ್ದು, ಫಿಯರ್ಾದಿಯವರು, ಸಂಗಪ್ಪನಿಗೆ ನಮ್ಮ ಮನೆಗೆ ಹೋಗಿ ಬುತ್ತಿ ಕಟ್ಟಿಸಿಕೊಂಡು ಬರುವುದಿದೆ ನಮ್ಮ ಮಗ ಅಭಿಮಾನನಿಗೆ ಮೋಟರ್ ಸೈಕಲ್ ಬರುವುದಿಲ್ಲ. ನೀನು ಅಭಿಮಾನನ್ನು ಮೋಟರ್ ಸೈಕಲ್ ಮೇಲೆ ಕರೆದುಕೊಂಡು ನಮ್ಮ ಮನೆಗೆ ಹೋಗಿ ಬಾ ಅಂತ ತಿಳಿಸಿದ ಮೆರೆಗೆ, ಸಂಗಪ್ಪನು ಸದರಿ ಮೋಟರ್ ಸೈಕಲ್ ನಂಬರ ಕೆಎ-33-ಡಬ್ಯೂ-0205 ನೇದ್ದರ ಮೇಲೆ ಅಭಿಮಾನ ಇವನ್ನು ಕೂಡಿಸಿಕೊಂಡು ಊರ ಕಡೆಗೆ ಹೋದನು. ಸ್ವಲ್ಪ ಸಮಯದ ನಂತರ ರಾತ್ರಿ 9-30 ಗಂಟೆಯ ಸುಮಾರಿಗೆ, ಸಂಗಪ್ಪನು ಮಾನಸಿಂಗ್ ನಾಯಕ್ ತಾಂಡಾದ ಕಡೆಯಿಂದ ಮೋಟರ್ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ಫಿಯರ್ಾದಿಯವರ ಅಣ್ಣನ ಹೊಲದ ಹತ್ತಿರ ರೋಡಿನ ದಂಡೆಯ ಮೇಲೆ ಸ್ಕಿಡ್ಡಾಗಿ ಮೋಟರ್ ಸೈಕಲ್ ಸಮೇತ ಬಿದ್ದರು. ಸದರಿ ಅಪಘಾತದಲ್ಲಿ ಫಿಯರ್ಾದಿಯ ಮಗ ಅಭಿಮಾನನಿಗೆ ಬಲಗಣ್ಣಿನ ಹತ್ತಿರ ರಕ್ತಗಾಯ ಮತ್ತು ಎಡಗಾಲ ಮೋಳಕಾಲ ಹತ್ತಿರ ಎಲಬು ಮುರಿದು ಭಾರಿ ಗುಪ್ತಗಾಯವಾಗಿದ್ದು, ಮೋಟರ್ ಸೈಕಲ್ ಸವಾರ ಸಂಗಪ್ಪನಿಗೆ ಸಣ್ಣ-ಪುಟ್ಟ ತರಚಿದ ಗಾಯಗಳಾಗಿದ್ದವು. ಸದರಿ ಮೋಟರ್ ಸೈಕಲ್ ನಂಬರ ಕೆಎ-33-ಡಬ್ಲ್ಯೂ-0205 ರ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡು ಹಾನಿಯಾಗಿತ್ತು. ನಂತರ ಸ್ಥಳಕ್ಕೆ ಆಟೋ ಕರೆಯಿಸಿಕೊಂಡು ಗಾಯಾಳುವನ್ನು ಅದರಲ್ಲಿ ಕರೆದುಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಸದರಿ ಆಸ್ಪತ್ರೆಯಲ್ಲಿ ಸಂಗಪ್ಪ ಈತನು ತನಗೆ ಸಣ್ಣ-ಪುಟ್ಟ ಗಾಯಗಳಾಗಿರುತ್ತವೆ ಅಂತ ಹೇಳಿ ಉಪಚಾರ ಪಡೆದುಕೊಂಡಿರುವುದಿಲ್ಲ. ಅಭಿಮಾನ ಈತನಿಗೆ ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದ್ದು, ವೈದ್ಯರ ಸಲಹೆ ಮೆರೆಗೆ ಹೆಚ್ಚಿನ ಉಪಚಾರ ಕುರಿತು ಫಿಯರ್ಾದಿಯವರು ತನ್ನ ಮಗ ಅಭಿಮಾನ ಇವನನ್ನು ಅಂಬುಲೇನ್ಸ ವಾಹನದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ ದಿನಾಂಕ 24/01/2021 ರಂದು ಬೆಳಗಿನ ಜಾವ 03-00 ಗಂಟೆಯ ಸುಮಾರಿಗೆ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಫಿಯರ್ಾದಿಯು ತನ್ನ ಮಗನ ಯೋಗಕ್ಷೇಮ ನೋಡಿಕೊಳ್ಳಲು ಆಸ್ಪತ್ರೆಯಲ್ಲಿ ಜೊತೆಯಲ್ಲಿಯೇ ಇದ್ದು, ಕೆಲವು ದಿನಗಳವರೆಗೆ ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು, ಆಸ್ಪತ್ರೆಯಿಂದ ಡಿಸ್ ಜಾರ್ಜ ಆಗಿ ಊರಿಗೆ ಬಂದ ನಂತರ ತನ್ನ ಕುಟುಂಬದವರ ಜೊತೆ ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿರುತ್ತಾರೆ. ಕಾರಣ ಸದರಿ ಅಪಘಾತಕ್ಕೆ ಕಾರಣಿಭೂತನಾದ ನನ್ನ ಮೋಟರ್ ಸೈಕಲ್ ನಂಬರ ಕೆಎ-33-ಡಬ್ಲ್ಯೂ-0205 ನೇದ್ದರ ಸವಾರನಾದ ಸಂಗಪ್ಪ ತಂದೆ ತಾರಾನಾಥ ರಾಠೋಡ ವಯ 28 ವರ್ಷ ಜಾತಿ ಲಂಬಾಣಿ ಉಃ ಒಕ್ಕಲುತನ ಸಾಃ ಕನ್ಯಾಕೊಳ್ಳುರ ಮಾನಸಿಂಗ್ ನಾಯಕ್ ತಾಂಡಾ ತಾಃ ಶಹಾಪೂರ ಈತನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 22/2021 ಕಲಂ 279, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ :- 17/2021 ಕಲಂ: 279, 304(ಎ) ಐಪಿಸಿ ಸಂ 187 ಐಎಮ್ಐ ಎಕ್ಟ್ : ಇಂದು ದಿನಾಂಕ: 30/01/2021 ರಂದು ಮದ್ಯಾಹ್ನ ಸಮಯದಲ್ಲಿ ಮೃತ ತಿಪ್ಪಣ್ಣ ತಂದೆ ರಾಮುನಾಯ್ಕ ರಾಠೋಡ ಈತನು ಕೂಲಿ ಕೆಲಸ ಹುಡುಕಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ತನ್ನ ಮೊಪೆಡ್ ನಂ. ಕೆಎ 33 ಎಕ್ಸ 5891 ನೇದ್ದರ ಮೇಲೆ ಅಲ್ಲಲ್ಲಿ ಕೆಲಸ ಹುಡುಕುತ್ತಾ ಯಾದಗಿರಿಗೆ ಬರುತ್ತಿದ್ದಾಗ ಸಾಯಂಕಾಲ 6-45 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಸಾಯಿಮಂದಿರ ಸಮೀಪ ತನ್ನ ಮೊಪೆಡ್ ಮೇಲೆ ಹೋಗುತ್ತಿದ್ದಾಗ ಎದುರುಗಡೆಯಿಂದ ಟಿಪ್ಪರ ನಂ. ಕೆಎ 32 ಡಿ 2560 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಿಪ್ಪಣ್ಣನಿಗೆ ಡಿಕ್ಕಿಪಡಿಸಿದ್ದರಿಂದ ಮುಖ, ಎಡ ಹಣೆ, ಬಲಗೈಗೆ ಸಾದಾಗಾಯಗಳಾಗಿದ್ದು, ಬಲಮೊಳಕಾಲ ಕೆಳಗೆ ಭಾರಿ ಹರಿದ ರಕ್ತಗಾಯವಾಗಿ ಎಲುಬು ಹೊರಗಡೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಟಿಪ್ಪರ ಚಾಲಕನ ಟಿಪ್ಪರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 17/2021 ಕಲಂ: 279, 304(ಎ) ಐಪಿಸಿ ಸಂ 187 ಐಎಮ್ಐ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 31-01-2021 12:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ