ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/01/2021

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ:- 12/2021 ಕಲಂ.409,465,420,468 ಐಪಿಸಿ. : ಇಂದು ದಿನಾಂಕ; 29/01/2021 ರಂದು 8-15 ಪಿಎಮ್ ಕ್ಕೆ ಶ್ರೀ ಎಮ್.ಎ ರಬ್ ತಂದೆ ಎಮ್.ಎ. ರವುಫ್ ವ;56 ಜಾ; ಮುಸ್ಲಿಂ ಉ; ವಕ್ಫ್ ಅಧಿಕಾರಿ ಯಾದಗಿರಿ ಸಾ; ನವನಗರ ಬಾಗಲಕೋಟೆ ಹಾ.ವ; ವಕ್ಫ್ ಬೋರ್ಡ ಕಾಯರ್ಾಲಯ ಚಿತ್ತಾಪೂರ ರಸ್ತೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಖಜಾತ (ಸುನ್ನಿ) ವಕ್ಫ್ ಸಂಸ್ಥೆಯು ಯಾದಗಿರಿ ಪಟ್ಟಣ ಇದು ಉಲ್ಲೇಖ 2 ರಲ್ಲಿ ಕಾಣಿಸಿರುವ ಅಧಿಸೂಚನೆಯಂತೆ ಕನರ್ಾಟಕ ರಾಜ್ಯ ಪತ್ರದಲ್ಲಿ ಅಧಿಸೂಚಿತ ವಕ್ಫ್ ಸಂಸ್ಥೆ ಆಗಿರುತ್ತದೆ. ಕನರ್ಾಟಕ ರಾಜ್ಯ ಪತ್ರದಲ್ಲಿ ನಮೂದಾಗಿರುವಂತೆ ಏಖಿಘ/ಂಖಖ/74 ದಿನಾಂಕ; 25/03/1974 ಂಣ ಖಟ. ಓಠ.18 ಸವರ್ೆ ನಂ.381 ರಲ್ಲಿನ 44ಎ-11ಗು (ಗೆಜೆಟ್ ಲಗತ್ತಿಸಿದೆ) ಒಟ್ಟು ಜಮೀನನ್ನು ಈ ಸಂಸ್ಥೆಯ ಹೆಸರಿನಲ್ಲಿರುವ ಜಮೀನು ಅಧಿಸೂಚಿತಗೊಂಡವಕ್ಫ್ ಆಸ್ತಿಯಾಗಿರುತ್ತದೆ. ಈ ಆಸ್ತಿಯಲ್ಲಿ 30ಎ-14ಗು ಜಮೀನನ್ನು ಅಕ್ರಮ ದಾಖಲೆಗಳನ್ನು ಸೃಷ್ಠಿಸಿ ಪರಭಾರೆಯಾಗಿರುವ ವಿಷಯವು ತಿಳಿದು ಬಂದಿದೆ. ಈ ಕುರಿತು ಕಛೇರಿಯಲ್ಲಿ ಲಭ್ಯ ಕಡತದಲ್ಲಿನ ದಾಖಲೆಗಳನ್ನು ಪರಿಶೀಲಿಸಲಾಗಿ ರಾಜ್ಯ ಪತ್ರದಲ್ಲಿ ಅಧಿಸೂಚಿತ ಮುತವಲ್ಲಿಯಾದ ಖಾಜಿ ಶ್ರೀ ಮಹ್ಮದ ಅಲ್ಲಾವುದ್ದೀನ್ ಸಿದ್ದಿಕಿ ಇವರ ಮಕ್ಕಳಾದ 1) ಶ್ರೀ ಮಹ್ಮದ ಹಸನ ಸಿದ್ದಿಕಿ 2) ಮಹ್ಮದ ಅಫ್ಜಲುದ್ದೀನ್ ಸಿದ್ದಿಕಿ 3) ಮಹ್ಮದ ಅಸಿಪುದ್ದಿನ ಸಿದ್ದಿಕಿ 4) ಮಹ್ಮದ ಅಜರುದ್ದೀನ್ ಸಿದ್ದಿಕಿ 5) ಮಹ್ಮದ ಯೆತಶಾಮುದ್ದೀನ್ ಸಿದ್ದಿಕಿ 6) ಮಹ್ಮದ ಯಜಾಸುದ್ದಿನ್ ಸಿದ್ದಿಕಿ 7)ಮಹ್ಮದ ಇಮತೆಯಾಜುದ್ದಿನ್ ಸಿದ್ದಿಕಿ ಯಾದಗಿರಿ ರವರು ದಿನಾಂಕ; 25/10/2017 ರಲ್ಲಿ ಅಕ್ಷೇಪಣೆ ಪ್ರಮಾಣಪತ್ರದಿಂದ ಅಕ್ರಮವಾಗಿ ದಾಖಲಾತಿಗಳನ್ನು ಸೃಷ್ಠಿಸಿ ಯಾದಗಿರಿ ವಕ್ಫ್ ಕಛೇರಿ ಪತ್ರ ಸಂಖ್ಯೆ; ಆಘಂಅ/ಙಆಉ/2017-18 ದಿನಾಂಕ; 25/10/2017 ನ್ನು ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ಕಛೇರಿಗೆ ಸಲ್ಲಿಸಿ ಸವರ್ೆ ನಂ.381/1 30ಎ-14ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ದಿನಾಂಕ; 24/07/2018 ರಂದು ಭೂ ಪರಿವತರ್ಿತಗೋಳಿಸಿರುತ್ತಾರೆ. ಈ ಅವಧಿಯಲ್ಲಿ ಶ್ರೀ ಅಲಿಮುದ್ದಿನ್ ಪ್ರಸ್ತುತ ಲೆಕ್ಕ ಪರಿಶೋಧಕರು ಜಿಲ್ಲಾ ವಕ್ಫ್ ಕಛೇರಿ ರಾಯಚೂರು ಇವರು ಫ್ರಭಾರ ಜಿಲ್ಲಾ ವಕ್ಪ್ ಅಧಿಕಾರಿ ಯಾದಗಿರಿ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಹಾಗೂ ವಕ್ಫ್ ಆಸ್ತಿಯ ಆಕ್ಷೇಪಣೆ ಪ್ರಮಾಣಪತ್ರ ನೀಡುವ ಅಧಿಕಾರ ಜಿಲ್ಲಾ ವಕ್ಫ್ ಅಧಿಕಾರಿಗೆ ಇರುವುದಿಲ್ಲಾ. ಆದರೆ ಈ ಪ್ರಕರಣದಲ್ಲಿ ನೀಡಿರುವ ಆಕ್ಷೇಪಣೆ ಪ್ರಮಾಣಪತ್ರ ಕಾನೂನು ಬಾಹಿರವಾಗಿರುತ್ತದೆ. ಖಜಾತ್ ಸುನ್ನಿ ಯಾದಗಿರಿ ವಕ್ಫ್ ಮಂಡಳಿಯಲ್ಲಿ ನೊಂದಾಯಿತ ಸಂಸ್ಥೆಯಾಗಿದ್ದು ಈ ಸಂಸ್ಥೆಯ ಯಾವುದೇ ಆಸ್ತಿಯನ್ನು ಮಾರಾಟ ಮಾಡುವುದು ಪರಭಾರೆ ಮಾಡುವುದು ಕಾನೂನು ಬಾಹಿರವಾಗಿರುತ್ತದೆ. ಒಂದು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಲಾದ ಆಸ್ತಿ ಎಂದೆಂದಿಗೂ ವಕ್ಫ್ ಆಸ್ತಿಯಾಗಿ ಉಳಿಯುತ್ತದೆ. ಆದರೆ ಮೇಲಿನ ಆಸ್ತಿಯ ಕುರಿತು ಎಲ್ಲರೂ ಕೂಡಿ ತಮ್ಮ ಸತ ಲಾಭಕ್ಕಾಗಿ ಅಕ್ರಮ ದಾಖಲೆಗಳನ್ನು ಸೃಷ್ಠಿಸಿ ವಂಚನೆ, ಮೋಸ ಮಾಡಿ ಕಬಳಿಸುವುದು ಹಾಗೂ ಸಕರ್ಾರದ ವಕ್ಫ್ ಆಸ್ತಿ ಪರಭಾರೆ ಮಾರಾಟದಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಇದಕ್ಕೆ ಸಂಭಂದಿಸಿದ ದಾಖಲೆ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿದೆ. ಅಕ್ರಮವಾಗಿ ದಾಖಲೆಗಳನ್ನು ಸೃಷ್ಠಿಸಿ ವಕ್ಫ್ ಸಂಸ್ಥೆ ಆಸ್ತಿಯ ಅಕ್ರಮ ಮಾರಾಟಕ್ಕೆ ಕಾರಣರಾದವರ 1) ಶ್ರೀ ಮಹ್ಮದ ಹಸನ ಸಿದ್ದಿಕಿ 2) ಮಹ್ಮದ ಅಫ್ಜಲುದ್ದೀನ್ ಸಿದ್ದಿಕಿ 3) ಮಹ್ಮದ ಅಸಿಪುದ್ದಿನ ಸಿದ್ದಿಕಿ 4) ಮಹ್ಮದ ಅಜರುದ್ದೀನ್ ಸಿದ್ದಿಕಿ 5) ಮಹ್ಮದ ಯೆತಶಾಮುದ್ದೀನ್ ಸಿದ್ದಿಕಿ 6) ಮಹ್ಮದ ಯಜಾಸುದ್ದಿನ್ ಸಿದ್ದಿಕಿ 7)ಮಹ್ಮದ ಇಮತೆಯಾಜುದ್ದಿನ್ ಸಿದ್ದಿಕಿ 8) ಶ್ರೀ ಅಲಿಮುದಿನ್ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳಲಾಗಿದೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.12/2021 ಕಲಂ.409, 420, 465, 468 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ :- 16/2021 ಕಲಂ: 341, 323, 504, ಸಂ 34 ಐಪಿಸಿ : ಇಂದು ದಿನಾಂಕ: 29/01/2021 ರಂದು 6-15 ಪಿಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಹಣಮಂತ ಚಟ್ನಳ್ಳಿ, ವ:36, ಜಾ:ಕುರುಬರು, ಉ:ಕೂಲಿ, ಸಾ:ಕಂದಳ್ಳಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನನಗೆ 11 ವರ್ಷಗಳ ಹಿಂದೇ ಇದ್ದೂರಲ್ಲೇ ಬಸಮ್ಮ ತಂದೆ ಸಿದ್ದಪ್ಪ ಇವಳೊಂದಿಗೆ ಮದುವೆಯಾಗಿದ್ದು ನಮಗೆ ಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ ಇತ್ತಿಚಿಗೆ ಸುಮಾರು ಒಂದುವರೆ ವರ್ಷಗಳ ಹಿಂದೆ ನನ್ನ ಹೆಂಡತಿ ಬಸಮ್ಮ ಇವಳಿಗೆ ಆರೋಗ್ಯದಲ್ಲಿ ಏರುಪೇರಾಗಿ ಅವಳಿಗೆ ಮೂತ್ರಪಿಂಡ ಸಮಸ್ಯೆ ಇರುವುದಾಗಿ ಆಸ್ಪತ್ರೆಗೆ ತೋರಿಸಿದಾಗ ಗೋತ್ತಾಗಿರುತ್ತದೆ. ಆಗಿನಿಂದ ನನ್ನ ಹೆಂಡತಿ ಇದ್ದೂರಲ್ಲಿಯೇ ಇರುವ ತನ್ನ ತವರು ಮನೆಗೆ ಹೋಗಿ ಅಲ್ಲಿಯೇ ಇರುತ್ತಾಳೆ. ಆಗಿನಿಂದ ನನ್ನ ಅತ್ತೆ. ಗೌರಮ್ಮ ಗಂಡ ಸಿದ್ದಪ್ಪ ಮಾವನಾದ ಸಿದ್ದಪ್ಪ ತಂದೆ ಸಕ್ರಪ್ಪ ಮತ್ತು ಭಾವಮೈದುನನಾದ ಮಾಳಪ್ಪ ತಂದೆ ಸಿದ್ದಪ್ಪ ಇವರೆಲ್ಲರೂ ಸೇರಿ ಬಸ್ಸಮ್ಮಳಿಗೆ ತವರು ಮನೆಗೆ ಯಾಕೇ ಕಳುಹಿಸಿದಿ ಎಂದು ತಂಟೆ ತಕರಾರು ಮಾಡುತ್ತಾ ಬರುತ್ತಿದಾರೆ. ಹೀಗಿದ್ದು ದಿನಾಂಕ: 12/01/2021 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನಮ್ಮೂರ ದೇವಮ್ಮ ಅಗಸರು ಇವರ ಹೋಟೆಲಕ್ಕೆ ಚಹಾ ಕುಡಿಯಲು ಹೋಗುತ್ತಿದಾಗ ಅಲ್ಲಿಯೇ ಹೋಟೆಲ ಹತ್ತಿರ ರಸ್ತೆಯ ಮೇಲೆ 1) ಮಾಳಪ್ಪ ತಂದೆ ಸಿದ್ದಪ್ಪ ಕ್ವಾಟೇರ, 2) ಹಣಮಂತ ತಂದೆ ಸಕ್ರೆಪ್ಪ ಕ್ವಾಟೇರ, 3) ಸಿದ್ದಪ್ಪ ತಂದೆ ಸಕ್ರಪ್ಪೆ ಕ್ವಾಟೇರ, 4) ಗೌರಮ್ಮ ಗಂಡ ಸಿದ್ದಪ್ಪ ಕ್ವಾಟೇರ ಎಲ್ಲರೂ ಸಾ: ಕಂದಳ್ಳಿ ಇವರೇಲ್ಲರೂ ಕೂಡಿಕೊಂಡು ಬಂದವೆರೇ ನನಗೆ ತಡೆದು ನಿಲ್ಲಿಸಿ. ಸಿದ್ದಪ್ಪ ಮತ್ತು ಗೌರಮ್ಮ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ಮಾಳಪ್ಪನು ಕೈ ಮುಷ್ಟಿ ಮಾಡಿ ನನ್ನ ಎದೆಗೆ ಗುದ್ದಿ ಒಳಪೆಟ್ಟು ಮಾಡಿದನು. ಹಣಮಂತನು ಕೈಯಿಂದ ಮುಷ್ಠಿ ಮಾಡಿ ಮುಖಕ್ಕೆ ಗುದ್ದಿದನು. ಆಗ ಜಗಳವನ್ನು ಅಲ್ಲಿಯೇ ಇದ್ದ ಕಡಿ ಬಸಪ್ಪ ತಂದೆ ಸಿದ್ದಪ್ಪ ಮತ್ತು ಯಂಕಪ್ಪ ತಂದೆ ಸಿದ್ದಪ್ಪ ನಾಯ್ಕೊಡಿ ಇವರು ಬಂದು ಬಿಡಿಸಿದರು. ಈ ಬಗ್ಗೆ ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಮೇಲ್ಕಂಡ ಜನರು ನನಗೆ ವಿನಾಕಾರಣ ಬಂದು ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹೊಡೆದಿರುವುದರಿಂದ ಸದರಿಯವರ ಮೇಲೆ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ನಿಜವಿರುತ್ತದೆ ಎಂದು ಕೊಟ್ಟ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 16/2021 ಕಲಂ: 341,504,323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- ಯು.ಡಿ.ಆರ್ ನಂ 04/2021 ಕಲಂ 174 ಸಿ.ಆರ್.ಪಿ.ಸಿ : ಇಂದು ದಿನಾಂಕ 29/01/2021 ರಂದು 7:30 ಪಿ.ಎಂ ಕ್ಕೆ ಪಿರ್ಯಾದಿ ಸುರೇಶ ತಂದೆ ದೇವರಡ್ಡಿ ಬಿರೇದಾರ ವ|| 26 ವರ್ಷ ಉ|| ಖಾಸಗಿ ಕೇಲಸ ಸಾ|| ಟಿ ವಡಿಗೇರಾ ತಾ|| ಶಹಾಪೂರ ಇದ್ದು ನಾವೂ ನಮ್ಮ ತಂದೆ-ತಾಯಿಗೆ 4 ಜನ ಮಕ್ಕಳಿದ್ದು ನಮ್ಮ ಅಣ್ಣ ಅನೀಲ ರಡ್ಡಿ ಈತನಿಗೆ ಮಾನಸಿಕ ಖಾಯಿಲೆಯಿದ್ದು ಕಲಬುರಗಿ ಖಾಸಗಿ ಆಸ್ಪತ್ರೆ ಆ ಕಡೆ ಈ ಕಡೆ ತೋರಿಸಿದ್ದರು ಕಡಿಮೆ ಆಗಿರಲಿಲ್ಲಾ, ಮತ್ತು ಮುಂಗೋಪಿ ಆಗಿದ್ದು ಇರುತ್ತದೆ. ದಿನಾಂಕ 29/01/2021 ರಂದು 10:30 ಶಹಾಪೂರಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದು ನಂತರ ಸಾಯಂಕಾಲ ಆದರು ಮನೆಗೆ ಬರದಿದ್ದಾಗ ನಾವೂ ಕಡೆ ಈ ಕಡೆ ಹುಡಕಾಡುತ್ತಿದ್ದಾಗ 6:00 ಪಿ.ಎಂ ಸುಮಾರಿಗೆ ರಸ್ತಾಪೂರ ಸೀಮಾಂತರದಲ್ಲಿ ಯಾರೋ ಜಾಲಿ ಗಿಡಕ್ಕೆ ನೇಣುಹಾಕಿಕೊಂಡಿದ್ದಾರೆ ಅಂತಾ ಸದರಿಯವನ ಪೋಟ ವಾಟ್ಸಪ್ ನಲ್ಲಿ ಬಂದುದ್ದು ನೋಡಿ ಹೋಗಿ ಗುರುತ್ತಿಸಲಾಗಿ ನಮ್ಮ ಅಣ್ಣ ಸುರೇಶ ಇದ್ದು, ತನಗಿದ್ದ ಮಾನಸಿಕ ಕಾಯಿಲೆಯಿಂದ ಶೇಖಪ್ಪ ತಂದೆ ತಿಮಪ್ಪ ಇವರ ಹೋಲದ ಹತ್ತಿರ ಜಾಲಿಗಿಡಕ್ಕೆ ದಿನಾಂಕ 29/01/2021 10:30 ಪಿ.ಎಂ ದಿಂದ 06:30 ಪಿ.ಎಂ ದೋಳಗೆ ನೇಣುಹಾಕಿಕೊಂಡು ಮೃತ ಪಟ್ಟಿದ್ದು ಯಾರ ಮೇಲೆ ಯಾವುದೆ ರೀತಿಯಾ ಸಂಶಾಯ ವಗೇರಾ ಇರುವದಿಲ್ಲಾ ಮುಂದಿನ ಕ್ರಮ ಕೈಗೊಳ್ಳಲು ವಿನಂತಿ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ. 04/2021 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಯು.ಡಿ.ಆರ್. ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 26/2021 ಕಲಂ:341, 323, 504, 506 ಸಂ. 34 ಐಪಿಸಿ : ಇಂದು ದಿನಾಂಕ:29/01/201 ರಂದು 10:30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀ ಮಾನಪ್ಪತಂದೆ ಭೀಮಣ್ಣ ಮಕಾಶಿ ವ|| 38 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಲಿಂಗದಳ್ಳಿ ಎಸ್.ಕೆಈತನುಠಾಣೆಗೆ ಬಂದುಒಂದು ಗಣಕಿಕರಿಸಿದ ಅಜರ್ಿತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:29/01/2021 ರಂದು ಸಾಯಂಕಾಲ ಅಂದಾಜು 6:30 ಗಂಟೆಗೆ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತಾಗ ನಮ್ಮೂರಿನ ನಮ್ಮಜನಾಂಗದವರಾದ 1) ಯಲ್ಲಪ್ಪತಂದೆಗುಂಡಪ್ಪಕಡ್ಡೋಣಿ ವ|| 35 ವರ್ಷ 2) ಬಸವರಾಜತಂದೆ ನರಸಪ್ಪ ಮಕಾಶಿ ವ|| 28 ವರ್ಷ, 3) ಹುಗಲಮ್ಮಗಂಡಯಲ್ಲಪ್ಪಕಡ್ಡೋಣಿ ವ|| 30 ವರ್ಷ, 4) ಸೋಮವ್ವಗಂಡ ನರಸಪ್ಪ ಮಕಾಶಿ ವ|| 50 ವರ್ಷಎಲ್ಲರೂಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದವರೆ ಏ ಭೊಸಡಿ ಮಗನೆ ನಿಮ್ಮ ಆಕಳು ಕರು ನಮ್ಮ ಮನೆಯ ಮುಂದೆ ಬಿಟ್ಟುಕಟ್ಟೆಯ ಮೇಲೆ ಕುಂತಿ ಸೂಳೆ ಮಗನೆ ಅವಚ್ಯ ಶಬ್ದಗಳಿಂದ ಬೈಯುತ್ತಾಯಲ್ಲಪ್ಪಇತನು ನನಗೆ ಕೈ ಹಿಡಿದುತಡೆದು ನಿಲ್ಲಸಿ ಕೈಯಿಂದ ನನ್ನ ಕಪಾಳಕ್ಕೆ ಹೊಡೆದುನು, ಬಸವರಾಜಇತನು ನನ್ನ ಹಿಂದೆ ಬಂದು ಬೆನ್ನಿಗೆಒದ್ದು ಕಾಲು ಹಿಡಿದು ನೇಲಕ್ಕೆ ಕೆಡವಿ ಕೈಯಿಂದ ಬೆನ್ನಿಗೆ ಹೊಡೆದನು, ನಂತರ ಹುಲಗಮ್ಮ ಮತ್ತು ಸೋಮವ್ವಇಬ್ಬರುಕೂಡಿ ಕಾಲಿನಿಂದಒದ್ದು, ಕೈಯಿಂದ ಹೊಟ್ಟೆಗೆ, ಪಕ್ಕಡಿಗೆ ಹೊಡೆಯುತ್ತಿದ್ದಾಗ ನಾನು ಚಿರಾಡುವದನ್ನು ಕೇಳಿ ನಮ್ಮ ಮನೆಯಲ್ಲಿದ್ದ ನನ್ನತಮ್ಮ ಶರಣಪ್ಪ ಮಕಾಶಿ, ಅಣ್ಣನಾದ ನಿಂಗಪ್ಪ ಮಕಾಶಿ ಇವರುಗಳು ಬಂದು ಜಗಳನ್ನು ಬಿಡಿಸಿಕೊಂಡರು. ಆಗ ಆರೋಪಿತರೆಲ್ಲರುಇವರು ಬಂದು ಜಗಳ ಬಿಡಿಸಿದ್ದಾರೆ ಅಂತಾಇವತ್ತು ನಿನಗೆ ಬಿಟ್ಟಿವಿ ಸೂಳೆ ಮಗನೆ ಇಲ್ಲದಿದ್ದರೆ ನಿನ್ನಜೀವ ಸಹಿತ ಬಿಡುತ್ತಿರಲಿಲ್ಲ ಅಂತಾಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ನನಗೆ ಹೊಟ್ಟೆಗೆ ಮತ್ತು ಪಕ್ಕಡಿಗೆ ನೋವು ಆಗುತ್ತಿದ್ದರಿಂದ ನನಗೆ ಒಂದು ಖಾಸಗಿ ವಾಹನದಲ್ಲಿ ಸರಕಾರಿಆಸ್ಪತ್ರೆ ಸುರಪುರಕ್ಕೆಕರೆದುಕೊಂಡು ಬಂದುಚಿಕಿತ್ಸೆ ಮಾಡಿಸಿಕೊಂಡು ಠಾಣೆ ಬಂದಿರುತ್ತೇನೆ. ಕಾರಣ ನನಗೆ ಹೊಡೆ ಬಡಿ ಜೀವದ ಬೆದರಿಕೆ ಹಾಕಿ ಹೋಗಿರುವ ನಾಲ್ಕು ಜನರ ಮೇಲೆ ಕಾನೂನು ಕ್ರಮಜರುಗಿಸಬೇಕಾಗಿತಮ್ಮಲ್ಲಿ ವಿನಂತಿಅಂತಾಕೊಟ್ಟಅಜರ್ಿಯ ಸರಾಂಶದ ಮೇಲಿಂದಠಾಣೆಗುನ್ನೆ ನಂ. 26/2021 ಕಲಂ: 341, 323, 504, 506 ಸಂ. 34 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 27/2021 ಕಲಂ:323, 324, 504, 506 ಸಂ. 34 ಐಪಿಸಿ : ಇಂದು ದಿನಾಂಕ:30/01/201 ರಂದು 00:30 ಎ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀ ಯಲ್ಲಪ್ಪತಂದೆಗುಂಡಪ್ಪಕಡ್ಡೋಣಿ ವ|| 31 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಲಿಂಗದಳ್ಳಿ ಎಸ್.ಕೆತಾ|| ಸುಪರುರಈತನುಠಾಣೆಗೆ ಬಂದುಒಂದು ಗಣಕಿಕರಿಸಿದ ಅಜರ್ಿತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:29/01/2021 ರಂದು ಸಾಯಂಕಾಲ ಅಂದಾಜು 7 ಗಂಟೆಗೆ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ನಾನು ಮತ್ತು ನನ್ನ ಹೆಂಡತಿ ಹುಲಗಮ್ಮ, ನಮ್ಮಅತ್ತೆ ಸೋಮವ್ವ, ಅಳಿಯ ಬಸವರಾಜಎಲ್ಲರು ಮಾತನಾಡುತ್ತಾ ಕುಳಿತಾಗ ನಮ್ಮೂರಿನ ನಮ್ಮಜನಾಂಗದವರಾದ 1) ಶರಣಪ್ಪತಂದೆ ಭೀಮಣ್ಣ ಮಕಾಶಿ 2) ಮಾನಪ್ಪತಂದೆ ಭೀಮಣ್ಣ ಮಕಾಶಿ, 3) ನಿಂಗಪ್ಪತಂದೆ ಭೀಮಣ್ಣ ಮಕಾಶಿ, 4) ನೀಲಮ್ಮಗಂಡ ಮಾನಪ್ಪ ಮಕಾಶಿ ಎಲ್ಲರೂಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದವರೆ ಏ ಭೊಸಡಿ ಮಗನೆ ನಮ್ಮ ಆಕಳು ಕರುವಿಗೆ ಏಕೆ ಹೊಡೆಯತ್ತಿರಿ ಸೂಳೆ ಮಗನೆ ಅಂತಾಅವಚ್ಯ ಶಬ್ದಗಳಿಂದ ಬೈಯುತ್ತಾ ಶರಣಪ್ಪಇತನು ನನಗೆ ಒಂದು ಬಡಿಗೆಯಿಂದಎಡಗೈ ಮಣಿಕಟ್ಟಿಗೆ ಮತ್ತುಕಿರಿ ಬೆರಳಿಗೆ ಹೊಡೆದುಗುಪ್ತಗಾಯ ಮತ್ತುತರಚಿದಗಾಯಮಾಡಿದನು. ಮಾನಪ್ಪ ಮತ್ತು ನಿಂಗಪ್ಪಇಬ್ಬರು ನನಗೆ ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ಕಾಲಿನಿಂದ ಕಾಲಿಗೆ ಒದ್ದರು. ಬಿಡಿಸಲು ಬಂದ ನಮ್ಮಅತ್ತೆ ಸೋಮವ್ವ ಇವಳಿಗೆ ನೀಲಮ್ಮ ಇವಳು ಬಡಿಗೆಯಿಂದಎಡಗೈ ಮುಂಗೈ ಕೆಳಗೆ ಹೊಡೆದುಗುಪ್ತಗಾಯ ಮಾಡಿದಳು. ನಾವು ಚಿರಾಡುತ್ತಿರುವಾಗ ನನ್ನ ಅಳಿಯ ಬಸವರಾಜ ಮತ್ತು ನನ್ನ ಹೆಂಡತಿ ಹುಲಗಮ್ಮಇಬ್ಬರುಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಆರೋಪಿತರೆಲ್ಲರುಇವರು ಬಂದು ಜಗಳ ಬಿಡಿಸಿದ್ದಾರೆ ಅಂತಾಇವತ್ತು ನಿನಗೆ ಬಿಟ್ಟಿವಿ ಸೂಳೆ ಮಕ್ಕಳೆ ಇಲ್ಲದಿದ್ದರೆ ನಿಮ್ಮಜೀವ ಸಹಿತ ಬಿಡುತ್ತಿರಲಿಲ್ಲ ಅಂತಾಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊರಟು ಹೊದರು. ನಮಗೆ ಗಾಯವಾಗಿದ್ದರಿಂದ ನಮಗೆ ಒಂದು ಖಾಸಗಿ ವಾಹನದಲ್ಲಿ ಸರಕಾರಿಆಸ್ಪತ್ರೆ ಸುರಪುರಕ್ಕೆಕರೆದುಕೊಂಡು ಬಂದುಚಿಕಿತ್ಸೆ ಮಾಡಿಸಿಕೊಂಡು ಠಾಣೆ ಬಂದಿರುತ್ತೇನೆ. ಕಾರಣ ನನಗೆ ಮತ್ತು ನಮ್ಮಅತ್ತೆ ಸೋಮವ್ವ ಇವಳಿಗೆ ಹೊಡೆ ಬಡೆ ಮಾಡಿಜೀವದ ಬೇದರಿಕೆ ಹಾಕಿ ಹೋಗಿರುವ ನಾಲ್ಕು ಜನರ ಮೇಲೆ ಕಾನೂನು ಕ್ರಮಜರುಗಿಸಬೇಕಾಗಿತಮ್ಮಲ್ಲಿ ವಿನಂತಿಅಂತಾಕೊಟ್ಟಅಜರ್ಿಯ ಸರಾಂಶದ ಮೇಲಿಂದಠಾಣೆಗುನ್ನೆ ನಂ. 27/2021 ಕಲಂ: 323, 324, 504, 506 ಸಂ. 34 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಇತ್ತೀಚಿನ ನವೀಕರಣ​ : 30-01-2021 11:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080