ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07/04/2021

ಸೈದಾಪೂರ ಪೊಲೀಸ್ ಠಾಣೆ:- 55/2021 ಕಲಂ 379 ಐಪಿಸಿ : ಇಂದು ದಿನಾಂಕ: 06-04-2021 ರಂದು ಬೆಳಿಗ್ಗೆ 08-15 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ರಾಚನಳ್ಳಿ ಹಳ್ಳದಲ್ಲಿ ಮರಳು ತುಂಬಿದ ಟ್ರ್ಯಾಕ್ಟರ ನಂ ಕೆಎ-33 ಟಿ-6535 ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.55/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:- 73/2021 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ : ಇಂದು ದಿನಾಂಕ 06/04/2021 ರಂದು 3-30 ಎ.ಎಂ. ಕ್ಕೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ. ಶಹಾಪುರ ಪೊಲಿಸ್ ಠಾಣೆ ರವರು, ಒಂದು ಮರಳು ತುಂಬಿದ ಲಾರಿ ನಂ ಎಪಿ-39 ಯು-4879 ಮತ್ತು ಸದರಿ ಲಾರಿ ಚಾಲಕ ಮತ್ತು ಕ್ಲಿನ್ನರ್ ಇಬ್ಬರಿಗು ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ: 05/04/2021 ರಂದು ಅಕ್ರಮ ಮರಳು ತಡೆಗಟ್ಟುವ ಕುರಿತು ನಾನು ಮತ್ತು ಸಂಗಡ ಶ್ರೀ ಮಲ್ಲಣ್ಣ ಹೆಚ್,ಸಿ,79, ದೇವರಾಜ ಪಿ.ಸಿ.282. ಮತ್ತು ಠಾಣೆಯ ಜೀಪ್.ನಂ. ಕೆಎ-33 ಜಿ-0138 ನೇದ್ದರ ಚಾಲಕ ನಾಗರೆಡ್ಡಿ ಎ.ಹೆಚ್..ಸಿ-25. ರವರನ್ನು ಕರೆದುಕೊಂಡು ರಾತ್ರಿ 11-30 ಗಂಟೆಗೆ ಠಾಣೆಯಿಂದ ಹೊರಟು ಪೇಟ್ರೋಲಿಂಗ ಮಾಡುತ್ತ ದಿನಾಂಕ 06/04/2021 ರಂದು 00-20 ಗಂಟೆಗೆ ಹತ್ತಿಗುಡೂರದ ದೇವದುರ್ಗ ಕ್ರಾಸ್ ಹತ್ತಿರ ಹೋಗಿ 00-30 ಗಂಟೆಗೆ ದೇವದುರ್ಗ ಕಡೆಯಿಂದ ಒಂದು ಲಾರಿ ಬರುತ್ತಿರುವದನ್ನು ನೋಡಿ ಅದಕ್ಕೆ ಕೈಮಾಡಿ ನಿಲ್ಲಸಿ ನೋಡಲಾಗಿ ಮರಳು ಲೋಡ್ ಮಾಡಿದ ಲಾರಿ ಇದ್ದು ಸದರಿ ಲಾರಿ ನೋಡಲಾಗಿ ಟಾಟಾ ಕಂಪನಿಯ ಲಾರಿ ನಂ ಎಪಿ-39 ಯು-4879 ಅಂತಾ ಇದ್ದು, ಸದರಿ ಲಾರಿ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಹ್ಮದ್ ಅಬ್ಬು ತಂದೆ ಮಹ್ಮದ ಜಾಫರ್ ಶೇಖ್ ವ|| 30 ಜಾ|| ಮುಸ್ಲಿಂ ಉ|| ಚಾಲಕ ಸಾ|| ಅಬ್ದುಲ್ ಫೈಯಿಜ್ ಧಗರ್ಾದ ಹತ್ತಿರ ಬಿದರ ಅಂತಾ ಹೇಳಿದನು, ಲಾರಿಯಲ್ಲಿ ಇದ್ದ ಇನ್ನೊಬ್ಬನಿಗೆ ವಿಚಾರಿಸಲಾಗಿ ತನ್ನ ಹೆಸರು ಖಾಜಾಮೈನು ತಂದೆ ಪೀರೋಜ್ ಮೀಯಾ ಶೇಖ್ ವ|| 35 ಜಾ|| ಮುಸ್ಲಿಂ ಉ|| ಕ್ಲಿನರ್ ಕೆಲಸ ಸಾ|| ಮಲ್ಕಾಪೂರ ತಾ||ಜಿ|| ಬಿದರ ನಾನು ಸದರಿ ಲಾರಿಯ ಕ್ಲಿನರ್ ಇರುತ್ತೆನೆ ಅಂತ ತಿಳಿಸಿದನು. ಸದರಿ ಲಾರಿ ಚಾಲನಿಗೆ ಮರಳನ್ನು ಲಾರಿಯಲ್ಲ್ಲಿ ಲೋಡ ಮಾಡಿ ಸಾಗಿಸುತ್ತಿರುವ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಲು ಹೇಳಿದಾಗ ತನ್ನ ಹತ್ತಿರ ಯಾವುದೆ ಕಾಗದ ಪತ್ರ ಇರುವುದಿಲ್ಲ ನಮ್ಮ ಲಾರಿ ಮಾಲೀಕರಾದ ಶ್ರೀನಿವಾಸ ಸಾ|| ಗುಂಪಾ ಬಿದರ ಇವರು ಕಳ್ಳತನದಿಂದ ಕೃಷ್ಣ ನದಿಯಲ್ಲಿ ಮರಳನ್ನು ತುಂಬಿಕೊಂಡು ಬಿದರಗೆ ತೆಗೆದುಕೊಂಡು ಬಂದು ಮಾರಾಟ ಮಾಡಲು ತಿಳಿಸಿದ್ದರಿಂದ, ನಾವಿಬ್ಬರು ಸದರಿ ಲಾರಿಯನ್ನು ತೆಗೆದುಕೊಂಡು ಬಂದು ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಭಿದರಕ್ಕೆ ಹೋರಟಿರುತ್ತೆವೆ ಅಂತಾ ಹೇಳಿದನು. ಸದರಿ ಲಾರಿ ನಂ ಎಪಿ-39 ಯು-4879 ನೇದ್ದರ ಅ.ಕಿ|| 8 ಲಕ್ಷ ರೂಪಾಯಿ, ಸದರಿ ಲಾರಿಯಲ್ಲ್ಲಿ ಅಂದಾಜು 10 ಕ್ಯೂಬಿಕ್ ಮೀಟರ್ ನಷ್ಟು ಮರಳು ಇದ್ದು, ಅಂದಾಜು ಕಿಮ್ಮತ್ತು 7500=00 ರೂಪಾಯಿ ಮೌಲ್ಯದ ಮರಳನ್ನು ಯಾವದೆ ಧಾಖಲಾತಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲಾರಿಯ ಚಾಲಕ ಮತ್ತು ಕ್ಲಿನ್ನರ್ ಹಾಗೂ ಮಾಲಿಕನು ಸೇರಿ ಸದರಿ ಲಾರಿಯಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಲಾರಿ ಚಾಲಕನಿಗೆ ಮತ್ತು ಲಾರಿ ಕ್ಲಿನರ್ಗೆ ವಶಕ್ಕೆ ತೆಗೆದುಕೊಂಡು ಸದರಿ ಲಾರಿಯನ್ನು ಸದರಿ ಚಾಲಕನ ಸಹಾಯದಿಂದ ಲಾರಿಯನ್ನು ಬೆಳಗ್ಗೆ 3-00 ಎ.ಎಂ.ಕ್ಕೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಲಾರಿ ಮತ್ತು ಇಬ್ಬರು ಆರೋಪಿತರನ್ನು ಹಾಜರ ಪಡಿಸಿ ಲಾರಿ ಚಾಲಕ ಮತು ಕ್ಲಿನ್ನರ್ ಹಾಗೂ ಮಾಲಿಕನ ವಿರುದ್ದ ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ ಬೆಳಗಿನಜಾವ 3-30 ಎ.ಎಂ.ಕ್ಕೆ ಸರಕಾರದ ಪರವಾಗಿ ಫಿಯರ್ಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 73/2021 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.

ಶಹಾಪೂರ ಪೊಲೀಸ್ ಠಾಣೆ :- 74/2021 ಕಲಂ 363, 109 ಐ.ಪಿ.ಸಿ : ಇಂದು ದಿನಾಂಕ: 06-04-2021 ರಂದು 2:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಶರಣಪ್ಪ ತಂದೆ ಸಣ್ಣಭಾಗಣ್ಣ ಮಡಿವಾಳ ವಯ: 19 ವರ್ಷ ಜಾ: ಅಗಸ ಉ: ಆಟೋ ಚಾಲಕ ಸಾ: ನಾಲವಾಡಗಿ ತಾ: ಶಹಾಪುರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ: 01-04-2021 ರಂದು 2:30 ಪಿ.ಎಮ್.ಕ್ಕೆ ತನ್ನ ಅಪ್ರಾಪ್ತ ವಯಸ್ಸಿನ ತಂಗಿ ಕುಮಾರಿ ನಾಗರತ್ನ ತಂದೆ ಸಣ್ಣಭಾಗಣ್ಣ ಮಡಿವಾಳ ವಯ: 15 ವರ್ಷ ಇವಳನ್ನು ಅದೇ ಗ್ರಾಮದ ಮುನಿಯಪ್ಪ ತಂದೆ ಮಾಳಪ್ಪ ಕಟಿಗೇರ ಎಂಬುವವನು ಚಟ್ನಳ್ಳಿ ಗ್ರಾಮದ ಮಸೀದಿಯ ಹತ್ತಿರ ನೀರಿನ ಟ್ಯಾಂಕ ಗೆ ಬಟ್ಟೆ ತೊಳೆಯಲು ಹೋದಾಗ ಯಾವುದೋ ಉದ್ದೇಶದಿಂದ ಅಥವಾ ಮದುವೆಯಾಗುವ ಉದ್ದೇಶದಿಂದ ತನ್ನ ಗೆಳೆಯರಾದ 1) ಈಶಪ್ಪ ತಂದೆ ಭೀಮಣ್ಣ ಚಪ್ಪರ 2) ಶಿವು ತಂದೆ ಬಾಲಪ್ಪ ಮಾಚನೂರ 3) ಅಯ್ಯಪ್ಪ ತಂದೆ ಅಮಲಪ್ಪ ಬಡಿಗೇರ 4) ಸಿದ್ದಪ್ಪ ಸಣ್ಣ ಹಣಮಂತ ಬಂಡೇರ ಇವರುಗಳ ಕುಮ್ಮಕ್ಕಿನಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಇತ್ಯಾದಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 74/2021 ಕಲಂ. 363, 109 ಐ.ಪಿ.ಸಿ. ಅಡಿಯಲ್ಲಿ ಪ್ರಕರಣಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ವಡಗೇರಾ ಪೊಲೀಸ್ ಠಾಣೆ:- 41/2021 ಕಲಂ: 78(3) ಕೆ.ಪಿ.ಆಕ್ಟ್ : ದಿನಾಂಕ: 06/04/2021 ರಂದು 5-50 ಪಿಎಮ್ ಕ್ಕೆ ಪಿ.ಎಸ್.ಐ (ಕಾಸು) ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದೇನಂದರೆ ಇಂದು ದಿನಾಂಕ: 06/04/2021 ರಂದು ಸಮಯ ಮಧ್ಯಾಹ್ನ 3-45 ಗಂಟೆಗೆ ನಾನು ಮತ್ತು ಸಿಬ್ಬಂದಿಯವರಾದ ರಾಜಕುಮಾರ ಹೆಚ್.ಸಿ 179, ಮಹೇಂದ್ರ ಪಿಸಿ 254 ರವರು ಠಾಣೆಯಲ್ಲಿದ್ದಾಗ ನನಗೆ ಬಾತ್ಮಿ ಬಂದಿದ್ದೇನಂದರೆ ತುಮಕೂರು ಗ್ರಾಮದ ರಾಮಲಿಂಗೇಶ್ವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ನಾವು ಅಲ್ಲಿಗೆ ಹೋಗಿ ದಾಳಿ ಮಾಡಬೇಕಾಗಿದೆ ದಾಳಿ ಸಮಯದಲ್ಲಿ ಪಂಚರಾಗಿ ಹಾಜರಿದ್ದು ಸಹಕರಿಸಲು ಕೇಳಿಕೊಂಡ ಮೇರಗೆ ಪಂಚರು ಒಪ್ಪಿಕೊಂಡರು. ನಂತರ ಈ ಮೇಲ್ಕಂಡ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕುಳಿತು ವಡಗೇರಾ ಠಾಣೆಯಿಂದ ಸಮಯ 3-50 ಪಿಎಮ್ ಕ್ಕೆ ಹೊರಟು ಸಮಯ 4-15 ಪಿಎಮ್ ಸುಮಾರಿಗೆ ತುಮಕೂರು ಗ್ರಾಮ ತಲುಪಿ ತುಮಕೂರು ಗ್ರಾಮದ ರಾಮಲಿಂಗೇಶ್ವರ ಗುಡಿ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ರಾಮಲಿಂಗೇಶ್ವರ ಗುಡಿಯನ್ನು ಮರೆಯಾಗಿ ನಿಂತು ನೋಡಲಾಗಿ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 4-20 ಪಿಎಮ್ ಕ್ಕೆ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಬಸವರಾಜ ತಂದೆ ನಾಗಪ್ಪ ಚನ್ನೂರು, ವ:48, ಜಾ:ಬೇಡರು, ಉ:ಒಕ್ಕಲುತನ ಸಾ:ಚಿಕ್ಕರಾಯಕುಂಪಿ ತಾ:ದೇವದುರ್ಗ ಜಿಲ್ಲಾ:ರಾಯಚೂರು ಅಂತಾ ತಿಳಿಸಿದ್ದು, ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 3900/- ರೂ ಮತ್ತು 3) ಒಂದು ಬಾಲ ಪೆನ್ನ ಅ.ಕಿ.00=00 ಹೀಗೆ ಒಟ್ಟು 3900/- ರೂ. ನಗದು ಹಣ ಮತ್ತು ಮುದ್ದೆ ಮಾಲನ್ನು ವಶಪಡಿಸಿಕೊಂಡು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ತಾಭಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿಯವನಿಗೆ ಮಟ್ಕಾ ನಂಬರಗಳನ್ನು ಬರೆದ ಚೀಟಿ ಮತ್ತು ಹಣ ಯಾರಿಗೆ ಕೊಡುತ್ತಿ ಎಂದು ಕೇಳಿದಾಗ ಮಲ್ಲಣ್ಣಗೌಡ ತಂದೆ ಬಸವರಾಜಪ್ಪಗೌಡ ಪೊಲೀಸಪಾಟೀಲ್ ಸಾ:ಚನ್ನೂರು. ಹಾಲಿ ವಸತಿ:ಶಹಾಪೂರು ಎಂಬ ಬುಕ್ಕಿಗೆ ಕೊಡುವುದಾಗಿ ಹೇಳಿರುತ್ತಾನೆ. ನಂತರ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜುರುಪಡಿಸಿದ್ದು ಇರುತ್ತದೆ. ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಗುನ್ನೆ ದಾಖಲ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ. 41/2021 ಕಲಂ: 78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ:- 48/2021 ಕಲಂ 87 ಕೆ.ಪಿ ಎಕ್ಟ : ಇಂದು ದಿನಾಂಕ 06-04-2021 ರಂದು 3-30 ಪಿ.ಎಮ್ ಕ್ಕೆ ಫಿರ್ಯಾಧಿದಾರರು ಠಾಣೆಯಲ್ಲಿದ್ದಾಗ ನನಗೆ ಮಾಹಿತಿ ಬಂದಿದ್ದೆನೆಂದರೆ ಯರಗೋಳ ಗ್ರಾಮದ ಸೀಮಾಂತರದಲ್ಲಿ ಬರುವ ಚೀಲಗುಡ್ಡದಲಿ ಯಾರೋ ಕೆಲವರು ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಅಂದರ ಬಾಹರ ಎಂಬ ಜೂಜಾಟದಲ್ಲಿ ತೊಡಗಿದ್ದಾರೆೆ ಅಂತಾ ಮಾಹಿತಿ ಪಡೆದುಕೊಂಡು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಕೈಗೆ ಸಿಕ್ಕ 6 ಜನರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 41,670/ರೂ ಹಾಗೂ 52 ಇಸ್ಪಿಟ ಎಲೆಗಳನ್ನು ಜಪ್ತಿಪಡಿಸಿಕೊಂಡಿದ್ದು ಆರೋಪಿತರ ಪೈಕಿ ಮೂರು ಜನರು ಹಾಗೂ ಇತರರು ಓಡಿ ಹೋಗಿದ್ದು ಇರುತ್ತದೆ

ಗುರಮಿಠಕಲ್ ಪೊಲೀಸ್ ಠಾಣೆ:- 52/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 06.04.2021 ರಂದು ಸಂಜೆ 05:30 ಗಂಟೆಗೆ ಧರ್ಮಪೂರ ಗ್ರಾಮದ ಹನುಮಾನ ದೇವರ ಗುಡಿಯ ಮುಂದಿನ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 09/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಹೆಚ್.ಸಿ-214 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ರಾತ್ರಿ ಸಂಜೆ 7:50 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ರಾತ್ರಿ 8:30 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1650/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಇಂದು ದಿನಾಂಕ 06.04.2021 ರಂದು ಸಮಯ ರಾತ್ರಿ 10:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 52/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು

ಕೊಡೇಕಲ್ ಪೊಲೀಸ್ ಠಾಣೆ:- 25/2021 ಕಲಂ:323, 383, 447, 504, 506, 390 ಸಂಗಡ 34 ಐಪಿಸಿ : ಇಂದು ದಿನಾಂಕ 06.04.2021 ರಂದು 7:00 ಪಿಎಮ್ಕ್ಕೆ ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಪಿಸಿ-251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರ ರವರ ನ್ಯಾಯಾಲಯದ ಪತ್ರ ನಂ ನೇದ್ದನ್ನು ಮತ್ತು ಅದರ ಜೊತೆಗೆ ಮಾನ್ಯ ನ್ಯಾಯಾಲಯದ ಖಾಸಗಿ ಫಿಯರ್ಾದಿ ಸಂಖ್ಯೆ 56/2015 ನೇದ್ದನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು 156(3) ಸಿಆರಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖಾ ವರದಿಯನ್ನು ಸಲ್ಲಿಸಿಲು ಆದೇಶಿಸಿದ್ದು ಸದರಿ ಖಾಸಗಿ ಫಿಯರ್ಾದಿ ನಂ:56/2015 ನೇದ್ದರ ಫಿಯರ್ಾದಿದಾರರಾದ ಶ್ರೀ ಹೊನ್ನಪ್ಪ ತಂದೆ ನಿಂಗಪ್ಪ ಪುಟ್ಟಿ ಮಾಜಿ ಸದಸ್ಯ ಗ್ರಾಮ ಪಂಚಾಯತ ಕಕ್ಕೇರಾ ವ||60 ವರ್ಷ ಜಾ|| ಹಿಂದೂ ಕಬ್ಬಲಿಗ ಉ|||ಒಕ್ಕಲುತನ ಸಾ||ಕಕ್ಕೇರಿ ತಾ||ಸುರಪೂರ ಜಿ||ಯಾದಗಿರಿ ರವರ ಸದರಿ ಖಾಸಗಿ ಫಿಯರ್ಾದದ ಸಾರಾಂಶವೆನೆಂದರೆ ಪಿರ್ಯಾದಿ ದೂರು ಅಜರ್ಿದಾರನು ಕಕ್ಕೇರಾದಲ್ಲಿರುವ ಜಮೀನು ಸವರ್ೆ ನಂ:357 ವಿಸ್ತೀರ್ಣ 2 ಎಕರೆ 20 ಗುಂಟೆ ಇದರ ಮಾಲೀಕ ಹಾಗೂ ಖಬ್ಜೆದಾರನಿದ್ದು ಇದು ಆತನ ಪಿತ್ರಾಜರ್ಿತ ಆಸ್ತಿಯಾಗಿರುತ್ತದೆ. ಸದರಿ ಆರೋಪಿತರಾದ ಮಲ್ಲಣ್ಣಗೌಡ ರಾಂಪೂರ ಮತ್ತು ಸಂಗನಗೌಡ ರಾಂಪೂರ ರವರು ಸದರಿ ಜಮೀನಿಗೆ ಯಾವುದೇ ರೀತಿಯ ಹಕ್ಕು ಬಾದ್ಯತೆಗಳನ್ನು ಅಥವಾ ಮಾಲೀಕತ್ವವನ್ನು ಹೊಂದಿರುವದಿಲ್ಲ.ಮತ್ತುಅವರುರಾಜಕೀಯವಾಗಿ ಪ್ರಭಾವ ಹೊಂದಿದ ಗುತ್ತಿಗೆದಾರರಾಗಿರುತ್ತಾರೆ. ಮತ್ತು ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ ಇವನ ಖಾಸಾ ವ್ಯಕ್ತಿಗಳಾಗಿರುತ್ತಾರೆ.ಹೀಗಿರುವಾಗ ದಿನಾಂಕ 28.05.2015 ರಂದು ಮೇಲ್ಕಂಡ ಆರೋಪಿತರು ನಾನು ನನ್ನ ಮೇಲ್ಕಂಡ ಸದರಿ ಹೊಲದಲ್ಲಿರುವಾಗ ಏಕಾಏಕಿಯಾಗಿ ಬಂದು ತಮ್ಮ ಒಂದು ಹಿಟಾಚಿ ಮತ್ತು ಸುಮಾರು 10 ರಿಂದ 12 ಟ್ರ್ಯಾಕ್ಟರಗಳನ್ನು ಇದರಲ್ಲಿ ಕೆಲವೊಂದು ಟ್ರ್ಯಾಕ್ಟರಗಳ ನಂಗಳ ಸಂಖ್ಯೆ ಕೆಎ-29 ಟಿಎ-6406, ಕೆಎ-29 ಟಿಎ-6407 ಹಾಗೂ ಕೆಎ-33 ಟಿಎ-6200, ಕೆಎ-33 ಟಿಎ-8983, ಕೆಎ-33 ಟಿಎ-9673, ಕೆಎ-33 ಟಿಎ-9316, ಕೆಎ-33 ಟಿಎ-2318 ಮತ್ತು ಇನ್ನಿತರ ಟ್ರ್ಯಾಕ್ಟರಗಳನ್ನು ತೆಗೆದುಕೊಂಡು ಏಕಾಏಕಿಯಾಗಿ ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿದಾಗ ನಾನು ನನ್ನ ಹೊಲದಲ್ಲಿಯೇ ಇದ್ದಾಗ ಯಾಕೇ ಹೀಗೆ ನನ್ನ ಹೊಲದಲ್ಲಿ ಬರುತ್ತೀರಿ ಎಂದು ಕೇಳಿದಾಗ ಸದರಿ ಇಬ್ಬರೂ ಆರೋಪಿತರು ನಾವು.ಬಿ.ಜೆ.ಎನ್.ಎಲ್ ನವೀಕರಣ ಕೆಲಸಕ್ಕಾಗಿ ಗುತ್ತಿಗೆಕೆಲಸ ತೆಗೆದುಕೊಂಡು ನವೀಕರಣ ಮಾಡುತ್ತಿದ್ದು ನಾವು ಮುರಮ್ ಕ್ವಾರಿಯನ್ನು ಯಾರ ಹೊಲದಲ್ಲಿಬೇಕಾದರೂ ಪುಕಸಟ್ಟೆಯಾಗಿ ತೆಗೆದುಕೊಂಡು ಹೋಗುತ್ತೇವೆ ಅದಕ್ಕೆ ಅಡ್ಡಿಯಾದವರನ್ನು ಅಲ್ಲಿಯೇ ಖಲಾಸ್ ಮಾಡುತ್ತೇವೆ ಎಂದರು ಮತ್ತು ನೀನು ಏನು ಕೇಳುತ್ತೀ ಬೋಸಡಿ ಮಗನೇ ನೀ ಹೆಚ್ಚು ಕಡಿಮೆ ಮಾತನಾಡಿದರೆ, ನಿನ್ನನ್ನು ನಾವು ತೊಡಿದ ತೆಗ್ಗಿನಲ್ಲಿ ಮುಚ್ಚಿಹಾಕಿಬಿಡುತ್ತೇವೆ ಅಂತಾ ಅವಾಚ್ಯ ಶಬ್ದದಿಂದ ಬೈದರು ಅಲ್ಲಿಯೇ ಸ್ಥಳದಲ್ಲಿ ಇದ್ದ 1)ಗುರಪ್ಪ ಮಾದರ, 2) ಷಣ್ಮುಕಪ್ಪ ತಂಧೆ ರಾಮಚಂದ್ರ, 3)ಭೀಮಣ್ಣ ತಂದೆ ಸೋಮಣ್ಣ ರವರು ಬಂದು ತಿಳಿಸಿದರೂ ಅವರ ಮಾತು ಕೇಳದೆ ಅವರಿಗೆ ಜೀವದ ಬೆದರಿಕೆ ಹಾಕಿದರು. ನನ್ನ ಹೊಲದಲ್ಲಿನ ಮಣ್ಣು ತೆಗೆದುಕೊಂಡು ಹೋಗಿ ಸುಮಾರು 20 ಗುಂಟೆ ಜಮೀನನ್ನು ತೆಗ್ಗಿನಿಂದ(ಮುರಮ್ ಕ್ವಾರಿ) ಹಾಳು ಮಾಡಿರುತ್ತಾರೆ. ಇದರಿಂದಾಗಿ ನನಗೆ ಅರ್ಧ ಎಕರೆಯಷ್ಟು ಜಮೀನು ನಷ್ಟವುಂಟಾಗಿರುತ್ತದೆ.ತದನಂತರ ನಾನು ನನ್ನ ಜಮೀನಿನ ನಷ್ಟ ತುಂಬಿಕೊಡುವ ಬಗ್ಗೆ ಕೇಳಿದಾಗ ಅವರು ಏನಲೇ ಬೊಸಡಿ ಮಗನೇ ನಿನ್ನ ತಿಂಡಿ ಬಾಳ ಆಗಿದೆ ನಾವುಗಳು ಲಿಂಗಸ್ಗೂರು ಶಾಸಕರಾದ ತಮ್ಮನಾದ ಕರೆಪ್ಪ ವಜ್ಜಲ ರವರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ನಮಗೆ ಬೇಕಾದ ಮಣ್ಣನ್ನು ಎಲ್ಲಿಯಾದರೂ ಅಥವಾ ಯಾರ ಹೊಲದಲ್ಲಾದರೂ ತೆಗೆದುಕೊಳ್ಳುತ್ತೇವೆ ಅದನ್ನು ಕೇಳುವ ಅಧಿಕಾರ ಯಾರಿಗೂ ಇಲ್ಲ ನೀನು ಅಡ್ಡ ಬಂದರೆ ನಿನ್ನನ್ನು ಇಲ್ಲಿಯೇ ಕೊಂದು ನಿನ್ನ ಮನೆಗೆ ಬೆಂಕಿ ಹಚ್ಚುತ್ತೇವೆ ಎಂದು ಬಲವಂತವಾಗಿ ಸುರಪೂರ ರಸ್ತೆಯ ಉತ್ತರ ಭಾಗದಲ್ಲಿ 20 ಗುಂಟೆಯಷ್ಟು ಜಮೀನನ್ನು ಅಂದರೆ ಅರ್ಧ ಎಕರೆ ಜಮೀನಿನಲ್ಲಿ ಕನಿಷ್ಟ 26 ರಿಂದ 30 ಅಡಿ ಆಳದವರೆಗೆ ಜಮೀನು ತಗ್ಗು ತೊಡಿರುತ್ತಾರೆ. ಸುಮಾರು ನನಗೆ 2,00,000/- (2 ಲಕ್ಷದಷ್ಟು) ನಷ್ಟ ಉಂಟಾಗಿರುತ್ತದೆ. ನಾನು ಪರಿಹಾರ ಕೇಳಲು ಹೋದಾಗ ನನಗೆ ಜೀವ ಭಯ ಹಾಕಿ ಕೊಲೆ ಮಾಡುತ್ತೇವೆ ಎಂದು ಹೆದರಿಸಿ ಉದ್ದೇಶಪೂರ್ವಕವಾಗಿ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಬಂದ ಮತ್ತು ನನ್ನ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಮಣ್ಣನ್ನು ದರೋಡೆ ಮಾಡಿ ತೆಗೆದುಕೊಂಡು ನನಗೆ ನಷ್ಟವುಂಟು ಮಾಡಿದ ಮೇಲೆ ಕಂಡ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಕೊಳ್ಳಲು ಸಲ್ಲಿಸಿದ ದೂರು ಅಜರ್ಿ.ಸದರಿ ಆರೋಪಿತರು ನನ್ನ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಜೀವ ಬೆದರಿಕೆ ಹಾಕಿ ನನ್ನ ಜಮೀನಿನಲ್ಲಿ 20 ಗುಂಟೆಯಷ್ಟು ಜಮೀನನ್ನು ಅಂದರೆ ಅರ್ಧ ಎಕರೆ ಜಮೀನಿನಲ್ಲಿ ಕನಿಷ್ಟ 26 ರಿಂದ 30 ಅಡಿ ಆಳದವರೆಗೆ ಜಮೀನು ತಗ್ಗು ತೊಡಿ ಹಾಳು ಮಾಡು ಸುಮಾರು ನನಗೆ 2,00,000/- (2 ಲಕ್ಷದಷ್ಟು) ನಷ್ಟ ಉಂಟು ಮಾಡಿದ ಆರೋಪಿತರ ಮೇಲೆ ಕ್ರಮ ಜರುಗಿಸಿ ತನಗೆ ನ್ಯಾಯ ದೊರಕಿಸಿಕೊಡಬೇಕೆಂದು ಪಿರ್ಯಾದಿಯವರ ಖಾಸಗಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:25/2021 ಕಲಂ:323, 383, 447, 504, 506, 390 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯಾದಗಿರ ಸಂಚಾರಿ ಪೊಲೀಸ್ ಠಾಣೆ:- 19/2021 ಕಲಂ 279, 304(ಎ) ಐಪಿಸಿ: ಇಂದು ದಿನಾಂಕ 06/04/2021 ರಂದು 9-30 ಪಿ.ಎಂ.ದ ಸುಮಾರಿಗೆ ಯಾದಗಿರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಎಸ್ಸಾರ್ ಪೆಟ್ರೋಲ್ ಬಂಕ್ ಹತ್ತಿರ ಮುಖ್ಯ ರಸ್ತೆ ಮೇಲೆ ಈ ಕೇಸಿನ ಮೃತ ಉಮಾಜಿ ತಂದೆ ಬಾಲಾಜಿ ಪವಾರ್ ಈತನು ತನ್ನ ಟ್ರ್ಯಾಕ್ಟರ್ ಇಂಜಿನ್ ನಂಬರ ಕೆಎ-33, ಟಿಎ-0225 ಹಾಗೂ ಟ್ರ್ಯಾಲಿ ನಂಬರ ಕೆಎ-32, ಟಿಎ-7463 ನೇದ್ದನ್ನು ನಡೆಸಿಕೊಂಡು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಎಸ್ಸಾರ್ ಪೆಟ್ರೋಲ್ ಬಂಕ್ ಹತ್ತಿರ ವಾಡಿ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ಒಂದು ಲಾರಿ ನಂಬರ ಕೆಎ-56, 2654 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್ಟರ ನೇದ್ದಕ್ಕೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಟ್ರ್ಯಾಕ್ಟರ ನಡೆಸುತ್ತಿದ್ದ ಮೃತ ಉಮಾಜಿ ಈತನಿಗೆ ಸದರಿ ಅಪಘಾತದಲ್ಲಿ ತಲೆಗೆ, ಎದೆಗೆ ಗಂಬೀರ ಸ್ವರೂಪದ ಗಾಯಗಳಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಬಗ್ಗೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 19/2021 ಕಲಂ 279, 304(ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 08-04-2021 10:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080