ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 01-06-2021

ಕೆಂಭಾವಿ ಪೊಲೀಸ್ ಠಾಣೆ :- 78/2021 ಕಲಂ: 279,304(ಎ) ಐ.ಪಿ.ಸಿ ಸಂಗಡ 187 ಐಎಮ್ ವಿ ಆಕ್ಟ್ : ಇಂದು ದಿನಾಂಕ 31.05.2021 ರಂದು ಫಿಯರ್ಾದಿದಾರರಾದ ಶ್ರೀ ಲಕ್ಷ್ಮಣ ತಂದೆ ಗೇಮು ಜಾಧವ ವಯಾ||51 ಜಾತಿ||ಲಂಬಾಣಿ ಉ||ಒಕ್ಕಲುತನ ಸಾ: ಏವೂರ ದೊಡ್ಡ ತಾಂಡ ತಮ್ಮಲ್ಲಿ ಸಲ್ಲಿಸುವ ಪಿರ್ಯಾದಿ ಅಜರ್ಿ ಏನೆಂದರೆ, ನನ್ನ ಮಗನಾದ ಶಿವಪ್ಪ ತಂದೆ ಲಕ್ಷ್ಮಣ ಜಾಧವ ವ||25 ವರ್ಷ ಈತನಿಗೆ ಮದುವೆಯ ನಿಶ್ಚಯ ಮಾಡಿದ್ದು ಮದುವೆಯು ದಿನಾಂಕ:05/06/2021 ರಂದು ಏವೂರ ತಾಂಡದ ನಮ್ಮ ಮನೆಯ ಮುಂದೆ ಇಟ್ಟಿದ್ದೆವು ಮಗನಾದ ಶಿವಪ್ಪ ಈತನಿಗೆ ತಾಳಿಕೋಟಿ ತಾಲೂಕಿನ ಗಡಿಸೋಮನಾಳ ತಾಂಡದ ರಮೇಶ ರಾಠೋಡ ಇವರ ಮಗಳನ್ನು ತೆಗೆದುಕೊಂಡಿದ್ದು ಇರುತ್ತದೆ. ಮದುವೆಯ ವರೋಪಚಾರವಾಗಿ ಒಂದು ಮೋಟಾರು ಸೈಕಲ್ ಕೊಡುವಂತೆ ಮಾತನಾಡಿದ್ದು ಇರುತ್ತದೆ. ಸದರಿ ಮೋಟಾರು ಸೈಕಲ್ ಖರೀದಿಗಾಗಿ ಇಂದು ಒಂದು ಲಕ್ಷ ರೂಪಾಯಿ ಹಣ ಕೊಡುವುದಾಗಿ ತಿಳಿಸಿದ್ದರಿಂದ ನನ್ನ ಮಗನಾದ ಶಿವಪ್ಪ ಈತನು ಇಂದು ದಿನಾಂಕ:31/05/2021 ರಂದು ನಮ್ಮ ಮೋಟಾರು ಸೈಕಲ್ ನಂಬರ್ ಕೆಎ-33 ಎಕ್ಸ್-1318 ಹೋಂಡಾ ಶೈನ್ ಮೋಟಾರು ಸೈಕಲ್ ತೆಗೆದುಕೊಂಡು ನಮ್ಮ ತಾಂಡದಿಂದ ಮದ್ಯಾಹ್ನ ಒಂದು ಗಂಟೆಗೆ ಹೋದನು. ನಂತರ ನಾನು ಮನೆಯಲ್ಲಿದ್ದಾಗ ಮಗನಾದ ಶಿವಪ್ಪ ತಂದೆ ಲಕ್ಷ್ಮಣ ಜಾಧವ ಈತನು ಗಡಿಸೋಮನಾಳ ತಾಂಡದಿಂದ ನನಗೆ ಫೋನ್ ಮಾಡಿ ಬೀಗರು ಒಂದು ಲಕ್ಷ ರೂಪಾಯಿ ಹಣ ಕೊಟ್ಟಿದ್ದಾರೆ ಸದರಿ ಹಣವನ್ನು ತೆಗೆದುಕೊಂಡು ನಾನು ಹಾಗೂ ಆಳಿಯನಾದ ಅನೀಲ ತಂದೆ ರಮೇಶ ರಾಠೋಡ್ ಇಬ್ಬರು ಮೋಟಾರು ಸೈಕಲ್ ಮೇಲೆ ಬರುತ್ತಿದ್ದೆವೆ ಅಂತಾ ಸಾಯಂಕಾಲ 6.00 ಗಂಟೆಗೆ ನನ್ನ ಮಗ ಫೋನ್ ಮಾಡಿ ತಿಳಿಸಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:31/05/2021 ರಂದು ರಾತ್ರಿ 08.45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ತಾಂಡದ ವಿಠ್ಠಲ ತಂದೆ ಸಾಧು ರಾಠೋಡ್ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ ತಾಳಿಕೋಟಿ-ಕೆಂಭಾವಿ ಮುಖ್ಯ ರಸ್ತೆಯ ಪತ್ತೇಪೂರ ಕ್ರಾಸ್ ಹತ್ತಿರ ನಮ್ಮ ಮಗನ ಮೋಟಾರ ಸೈಕಲ್ ಅಪಘಾತವಾಗಿ ಮಗ ಶಿವಪ್ಪ ತಂದೆ ಲಕ್ಷ್ಮಣ ಜಾಧವ ಹಾಗೂ ಆತನ ಅಳಿಯ ಅನೀಲ್ ತಂದೆ ರಮೇಶ ರಾಠೋಡ್ ಈ ಎರಡು ಜನರು ಭಾರೀ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತ ತಿಳಿಸಿದಾಗ ನಾನು ಮತ್ತು ನಮ್ಮ ತಾಂಡದ ವಿಠ್ಠಲ ತಂದೆ ಪಾಂಡು ಚವ್ಹಾಣ, ತಿಪ್ಪಣ್ಣ ತಂದೆ ದೇವಲು ಚವ್ಹಾಣ ನಾವು ಮೂರು ಜನರು ಸೇರಿ ತಾಳಿಕೋಟಿ-ಕೆಂಭಾವಿ ಮುಖ್ಯ ರಸ್ತೆಯ ಪತ್ತೇಪೂರ ಕ್ರಾಸ್ ಹತ್ತಿರ ಹೋಗಿ ನೋಡಲಾಗಿ ನನ್ನ ಮಗ ಶಿವಪ್ಪ ಹಾಗೂ ಅಳಿಯ ರಮೇಶ ಈ ಎರಡು ಜನರು ರೋಡಿನ ಮೇಲೆ ಸತ್ತು ಬಿದ್ದಿದ್ದು ನನ್ನ ಮಗನಿಗೆ ನೋಡಲಾಗಿ ಬಲಗಾಲು ಪೂತರ್ಿಯಾಗಿ ಜಜ್ಜಿದಂತಾಗಿ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಅದರಂತೆ ಅಳಿಯ ಅನೀಲ್ ಈತನ ತಲೆ ಪೂತರ್ಿಯಾಗಿ ಜಜ್ಜಿ ತಲೆ ಮೇಲೆ ಯಾವುದೋ ಒಂದು ವಾಹನ ಹಾದು ಹೋಗಿದ್ದು ಇರುತ್ತದೆ. ಕಾರಣ ನನ್ನ ಮಗ ಶಿವಪ್ಪ ಹಾಗೂ ಅಳಿಯ ಅನೀಲ್ ಈ ಎರಡು ಸೇರಿ ನಮ್ಮ ತಾಂಡಕ್ಕೆ ಬರುವ ಕುರಿತು ತಾಳಿಕೋಟಿ ರಸ್ತೆಯ ಪತ್ತೇಪೂರ ಕ್ರಾಸ್ ಹತ್ತಿರ ಬರುತ್ತಿದ್ದಾಗ ಅವರಿಗೆ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಸಿ ಬಲವಾಗಿ ಡಿಕ್ಕಿ ಪಡಿಸಿ ಅವರ ಮೇಲೆಯೇ ತನ್ನ ವಾಹನವನ್ನು ಹಾಯಿಸಿಕೊಂಡು ವಾಹನವನ್ನು ನಿಲ್ಲಿಸದೆ ಓಡಿ ಹೋಗಿದ್ದು ಕಾರಣ ನನ್ನ ಮಗ ಹಾಗೂ ಅಳಿಯ ಇವರ ಸಾವಿಗೆ ಕಾರಣವಾದ ವಾಹನ ಹಾಗೂ ಅದರ ಚಾಲಕನನ್ನು ಪತ್ತೆ ಮಾಡಿ ಸದರ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 78/2021 ಕಲಂ 279, 304[ಎ] ಐಪಿಸಿ ಸಂಗಡ 187 ಐಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 28/2021 ಕಲಂ 279, 338 ಐಪಿಸಿ : ನಿನ್ನೆ ದಿನಾಂಕ 30/05/2021 ರಂದು ರಾತ್ರಿ 11 ಪಿ.ಎಂ. ದ ಸುಮಾರಿಗೆ ಯಾದಗಿರಿ ನಗರದ ಎಲ್.ಐ.ಸಿ ಕಛೇರಿ ಹತ್ತಿರ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಪಿಯರ್ಾದಿ ಗಾಯಾಳು ವಿಜಯಕುಮಾರ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-32, ಕ್ಯೂ-2660 ನೇದ್ದರ ಮೇಲೆ ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಯಾಸೀನ್ ಈತನು ತನ್ನ ಬುಲೆರೋ ಪಿಕಪ್ ಗೂಡ್ಸ್ ವಾಹನ ನಂಬರ ಕೆಎ-29, ಬಿ-8832 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನೇರವಾಗಿ ಮೋಟಾರು ಸಯಕಲ್ ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತಪಡಿಸಿದ್ದು, ಈ ಅಪಘಾತದಲ್ಲಿ ಗಾಯಾಳುವಿನ ತಲೆಗೆ, ಹಣೆಗೆ, ಕಣ್ಣಿಗೆ, ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಘಟನೆಯ ನಂತರ ಗಾಯಾಳುವಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಯನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 31/05/2021 ರಂದು ಬೆಳಿಗ್ಗೆ 10 ಎ.ಎಎಂ.ಕ್ಕೆ ದೂರು ನೀಡಿದ್ದು ಅಪಘಾತಪಡಿಸಿದ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 28/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 29/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 31/05/2021 ರಂದು ಬೆಳಿಗ್ಗೆ 11 ಎ.ಎಂ. ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಅರಿಕೇರಾ(ಬಿ) ಕ್ರಾಸ್ ಹತ್ತಿರ ಈ ಕೇಸಿನ ಪಿಯರ್ಾದಿ ಗಾಯಾಳು ಈತನು ಮೋಟಾರು ಸೈಕಲ್ ನಂಬರ ಕೆಎ-33, ಯು-8620 ನೇದ್ದರ ಮೇಲೆ ಹೋಗುತ್ತಿದ್ದಾಗ ಮೋಟಾರು ಸೈಕಲ್ ನಡೆಸುತ್ತಿದ್ದ ಸಣ್ಣ ಮಲ್ಲಪ್ಪ ಈತನು ಮೋಟಾರು ಸೈಕಲ್ ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಯಾದಗಿರಿ ಕಡೆಯಿಂದ ಯರಗೊಳ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮೋಟಾರು ಸೈಕಲ್ ನಂಬರ ಕೆಎ-33, ಆರ್-7224 ನೇದ್ದರ ಸವಾರನು ಕೂಡ ಯರಗೋಳ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದಾಗ ಎರಡು ಮೋಟಾರು ಸೈಕಲ್ ಸವಾರರು ಎದುರು ಬದರು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಈ ಅಪಘಾತದಲ್ಲಿ ಭಾರೀ ಗುಪ್ತಗಾಯ ಮತ್ತು ರಕ್ತಗಾಯ, ಸಾದಾ ಗಾಯಗಳು ಆಗಿದ್ದು ಇರುತ್ತದೆ. ಅಪಘಾತಪಡಿಸಿದ ಎರಡು ಮೋಟಾರು ಸೈಕಲ್ ಸವಾರರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 29/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 28/2021 ಕಲಂ 279, 338, 304(ಎ) ಐಪಿಸಿ : ದಿನಾಂಕ 30/05/2021 ರಂದು ರಾತ್ರಿ 11 ಪಿ.ಎಂ. ದ ಸುಮಾರಿಗೆ ಯಾದಗಿರಿ ನಗರದ ಎಲ್.ಐ.ಸಿ ಕಛೇರಿ ಹತ್ತಿರ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಪಿಯರ್ಾದಿ ಗಾಯಾಳು ವಿಜಯಕುಮಾರ ಈತನು ತನ್ನ ಮೋಟಾರು ಸೈಕಲ್ ನಂಬರ ಕೆಎ-32, ಕ್ಯೂ-2660 ನೇದ್ದರ ಮೇಲೆ ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಯಾಸೀನ್ ಈತನು ತನ್ನ ಬುಲೆರೋ ಪಿಕಪ್ ಗೂಡ್ಸ್ ವಾಹನ ನಂಬರ ಕೆಎ-29, ಬಿ-8832 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನೇರವಾಗಿ ಮೋಟಾರು ಸಯಕಲ್ ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತಪಡಿಸಿದ್ದು, ಈ ಅಪಘಾತದಲ್ಲಿ ಗಾಯಾಳುವಿನ ತಲೆಗೆ, ಹಣೆಗೆ, ಕಣ್ಣಿಗೆ, ಸೊಂಟಕ್ಕೆ ಭಾರೀ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿ ಘಟನೆಯ ನಂತರ ಗಾಯಾಳುವಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಯನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ಈ ಘಟನೆ ಬಗ್ಗೆ ಮನೆಯ ಹಿರಿಯರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 31/05/2021 ರಂದು ಬೆಳಿಗ್ಗೆ 10 ಎ.ಎಎಂ.ಕ್ಕೆ ದೂರು ನೀಡಿದ್ದು ಅಪಘಾತಪಡಿಸಿದ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 28/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ಸದರಿ ಪ್ರಕರಣದಲ್ಲಿನ ಗಾಯಾಳು ವಿಜಯಕುಮಾರ ಈತನು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನಿನ್ನೆ ದಿನಾಂಕ 31/05/2021 ರಂದು ರಾತ್ರಿ 8-50 ಪಿ.ಎಂ.ಕ್ಕೆ ಚಿಕಿತ್ಸೆಗೆ ಸ್ಪಂದಿಸದೇ ಅಪಘಾತದಲ್ಲಾದ ಭಾರೀ ಗುಪ್ತಗಾಯಗಳ ಭಾದೆಯಿಂದ ಮೃತಪಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ 304(ಎ) ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ :- 96/2021 ಕಲಂ:323, 354, 504, 506 ಸಂಗಡ 34 ಐಪಿಸಿ : ಇಂದು ದಿನಾಂಕಃ 31/05/2021 ರಂದು 7:00 ಎ.ಎಮ್ ಕ್ಕೆ ಶ್ರೀಮತಿ ದೀಪಾ ಗಂಡ ಉದಯಕುಮಾರ ಕಟ್ಟಿಗೆ ಅಡ್ಡೆ ವ|| 35 ವರ್ಷ ಜಾ|| ಲಿಂಗಾಯತ ಉ|| ಮನೆಗೆಲಸ ಸಾ|| ದೊಬಿಗಲ್ಲಿ ಸುರಪುರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಮಗೆ ಮೂರು ಜನ ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ಸುಮಾರು ಎರಡು ತಿಂಗಳ ಹಿಂದೆ ನನ್ನ ಮಗ ಸೃಜನ ಮತ್ತು ನಾಗರಾಜ ಇಬ್ಬರು ಕೂಡು ಬಾವಿಯಲ್ಲಿ ಈಜಾಡಲು ಹೊಗಿದ್ದು, ನಾಗರಾಜ ಇತನಿಗೆ ಈಜು ಬರದೆ ಇದ್ದುದರಿಂದ ಬಾವಿಯಲ್ಲಿ ಮುಳಗಿ ಮೃತ ಪಟ್ಟಿರುತ್ತಾನೆ. ಅದೇ ವಿಷಯವಾಗಿ ದಿನಾಂಕ:28/05/2021 ರಂದು ಸಾಯಂಕಾಲ ಎಸ್.ಪಿ ಕಾಲೇಜ್ನಲ್ಲಿ ವಾಕಿಂಗ್ ಹೊದಾಗ ಮಾನಪ್ಪ ತಂದೆ ಸೋಮಪ್ಪ ಕಟ್ಟಿಮನಿ ಇತನು ನನ್ನ ಗಂಡನ ಜೊತೆ ಬಾಯಿ ಮಾತಿನ ಜಗಳವಾಡಿ ಅಲ್ಲೆ ಬಗೆ ಹರಿಸಿಕೊಂಡು ಬಂದ ವಿಷಯ ನನ್ನ ಗಂಡ ನನ್ನ ಮುಂದೆ ಹೇಳಿದನು. ಹಿಗಿದ್ದು ದಿನಾಂಕ:28/05/2021 ರಂದು ರಾತ್ರಿ 10:30 ಪಿ.ಎಂ ಕ್ಕೆ ನಾನು ಮತ್ತು ನನ್ನ ಗಂಡ ಊಟಮಾಡಿ ಮನೆಯ ಮುಂದೆ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ಅದೇ ಸಮಯಕ್ಕೆ 1) ಮಾನಪ್ಪ ತಂದೆ ಸೋಮಪ್ಪ ಕಟ್ಟಿಮನಿ, 2) ಅಶೋಕ ತಾಯಿ ಶಾಂತಾಬಾಯಿ ಪ್ಯಾಪ್ಲಿ ಇಬ್ಬರು ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನನ್ನ ಗಂಡನಿಗೆ ಏನಲೇ ಉದೆ ಸೂಳೆ ಮಗನೆ ನೀನು ಒಂದು ಲಕ್ಷ ರೂಪಾಯಿ ಕೊಡು ಅಂತಾ ಹೇಳಿದರು ಕೊಡುವದಿಲ್ಲ ಅಂತಿ ಸೂಳೆಮನಗೆ ನಿನ್ನ ಮೇಲೆ ಅಟ್ರಾಸಿಟಿ ಕೇಸ್ ಮಾಡಿಸುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಮಾನಪ್ಪ ಇತನು ನನ್ನ ಗಂಡನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ, ಹೊಟ್ಟೆಗೆ, ಹೊಡೆದು ಗುಪ್ತಗಾಯ ಮಾಡಿದನು. ನಾನು ಬಿಡಿಸಿಕೊಳ್ಳಲು ಹೊದಾಗ ನನಗೆ ಅಶೋಕ ಪ್ಯಾಪ್ಲಿ ಇತನು ಕೈಯಿಂದ ಕಪಾಳಕ್ಕೆ ಹೊಡೆದು ಗುಪ್ತಗಾಯ ಮಾಡಿ ನನ್ನ ಸೀರೆ ಸೇರಗ ಹಿಡಿದು ಎಳೆದಾಡಿ ಅವಮಾನ ಮಾಡುತ್ತಿದ್ದಾಗ ಬಾಯಿ ಮಾತಿನ ಜಗಳ ಕೇಳಿ ಕೃಷ್ಣಾ ತಂದೆ ಸಿದ್ರಾಮಪ್ಪ ಪಾಟೀಲ್, ಮತ್ತು ಚನ್ನರೆಡ್ಡಿ ತಂದೆ ವಿಶ್ವನಾಥರಡ್ಡಿ ತೆಗ್ಗಿನಮನಿ ಇಬ್ಬರು ಜಗಳವನ್ನು ಬಿಡಿಸಿಕೊಂಡರು. ಆಗ ಅವರೆಲ್ಲರೂ ಇವತ್ತು ಜನರು ಬಂದು ಬಿಡಿಸಿದ್ದಕ್ಕೆ ಉಳಿದಿದ್ದೀರಿ ಮಕ್ಕಳೇ, ನಿಮ್ಮ ಮನೆಯಲ್ಲಿ ಒಬ್ಬರಿಗಾದರೂ ಖಲಾಸ ಮಾಡುವತನಕ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ಹೀಗೆ ಸುಮಾರು 35 ವರ್ಷಗಳಿಂದ ನಮ್ಮ ಮನೆಯ ಮೇಲೆ ಒಂದಾಲ್ಲಾ ಒಂದು ಕಾರಣ ಹಗೆತನ ಮಾಡುತ್ತಾ ಬಂದ ಬಗ್ಗೆ ನನ್ನ ಗಂಡ ಮತ್ತು ಅತ್ತೆಯಿಂದ ಕೆಳುತ್ತಿದ್ದನೇನು. ನನ್ನ ಗಂಡನಿಗೆ ಮತ್ತು ನಮ್ಮ ಮನೆಯವರಿಗೆ ಏನಾದರು ಆದರೆ ಅಶೋಕ ಮತ್ತು ಮಾನಪ್ಪ ಇಬ್ಬರು ಕಾರಣರಾಗುತ್ತಾರೆ. ನಮಗೆ ಸಣ್ಣ ಪುಟ್ಟ ಒಳಪೆಟ್ಟಾಗಿದ್ದರಿಂದ ನಾವು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಮನೆಯಲ್ಲಿ ನನ್ನ ಗಂಡನ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ನನ್ನ ಗಂಡನಿಗೆ ಹೊಡೆ ಬಡೆ ಮಾಡಿ ಅವಮನಾನ ಮಾಡಿ ಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 96/2021 ಕಲಂ. 323, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಯಾದಗಿರ ನಗರ ಪೊಲೀಸ್ ಠಾಣೆ :- 62/2021 ಕಲಂ 188, 269, 270 ಐಪಿಸಿ ಸಂಗಡ ಕಲಂ 51 ಖಿಜ ಆಚಿಚಿಣಜಡಿ ಒಚಿಟಿಜರಟಜಟಿಣ ಂಛಿಣ 2005, : ಇಂದು ದಿನಾಂಕ 31/05/2021 ರಂದು 11.45 ಎ.ಎಮ್ ಗಂಟೆಗೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ [ಕಾ.ಸು] ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ವರದಿ ನೀಡಿದ್ದರ ಸಾರಾಂಶವೇನೆಂದರೆ ಕೋರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದ್ದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರ ಆದೇಶ ಸಂ. ಸಂ/ಕಂ/ದಂಡ/53/2019-20 ದಿನಾಂಕ; 17/04/2021 ರ ಆದೇಶದ ಪ್ರಕಾರ ಒಟ್ಟಾರೆಯಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಈ ಮೇಲಿನಂತೆ ಆದೇಶ ಹೊರಡಿಸಿದ್ದು ಇರುತ್ತದೆ. ಇಂದು ದಿನಾಂಕ 31/05/2021 ರಂದು ಬೆಳಿಗ್ಗೆ 10-30 ಗಂಟೆ ಸುಂಆರಿಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ.10 ಮತ್ತು ಸಾಬರೆಡ್ಡಿ ಪಿಸಿ-379 ರವರೊಂದಿಗೆ ನಮ್ಮ ಸಕರ್ಾರಿ ಜೀಪ್ ನಂ ಕೆ.ಎ 33 ಜಿ 0075 ನೇದ್ದರಲ್ಲಿ ಯಾಧಗಿರಿ ನಗರದಲ್ಲಿ ಲಾಕಡೌನ್ ಪ್ರಯುಕ್ತ ಪೆಟ್ರೊಲಿಂಗ ಕರ್ತವ್ಯದಲ್ಲಿರುವಾಗ ಕನಕ ಸರ್ಕಲ್ ಮುಖಾಂತರ ಅಂಬೇಡ್ಕರ ಚೌಕ ಕಡೆಗೆ ಹೋದಾಗ ಅಂಬೇಡ್ಕರ ಚೌಕದಲ್ಲಿರುವ, ಅಂಬೇಡ್ಕರ ಭವನದ ಹಿಂದುಗಡೆ 11-00 ಎಎಂ ಸುಮಾರಿಗೆ ಒಂದು ಮದುವೆ ಸಮಾರಂಭ ನಡೆದಿದ್ದು ಸುಮಾರು 20 ರಿಂದ 25 ಜನರು ಸೇರಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಹೋಗಿ ಪರೀಶಿಲಿಸಿ ನೋಡಲಾಗಿ ಅಲ್ಲಿದ್ದ ಸುಭಾಸ ತಂ. ಹಾಜಪ್ಪ ಹಾಗೂ ರಮೇಶ ತಂ. ಶಿವಪ್ಪ ಟೋಕಾಪುರ ಇವರು ಮಾನ್ಯ ತಹಸೀಲ್ದಾರರು ಯಾದಗಿರಿ ರವರಿಂದ ಮದುವೆ ಕಾರ್ಯಕ್ರಮದ ಅನುಮತಿ ಪತ್ರವನ್ನು ಹಾಜರಪಡಿಸಿದ್ದು ಅದನ್ನು ನೋಡಲಾಗಿ ಮಾನ್ಯ ತಹಸೀಲ್ದಾರರು ಯಾದಗಿರಿ ರವರು ಮದುವೆ ಸಮಾರಂಭದಲ್ಲಿ ಕೇವಲ 10 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪರವಾನಿಗೆ ನೀಡಿದ್ದು ಇರುತ್ತದೆ. ಆದರೆ ಮದುವೆ ಸಮಾರಂಭದಲ್ಲಿ ಸುಮಾರು 20 ರಿಂದ 25 ಜನ ಸೇರಿದ್ದು ಅಲ್ಲಿ ಸಾರ್ವಜನಿಕರು ಮದುವೆ ಸಮಾರಂಭದಲ್ಲಿ ಯಾವುದೇ ದೈಹಿಕ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಬ್ಬರಿಗೊಬ್ಬರು ಅಂಟಿಸಿಕೊಂಡು ನಿಂತು ಆದೇಶ ಉಲ್ಲಂಘನೆ ಮಾಡಿದ್ದು ಇರುತ್ತದೆ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಲಾಕ್ ಡೌನ್ ವಿಧಿಸಿ, ಸಾರ್ವಜನಕರು ಖಡ್ಡಾಯಾಗಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಪಾಲನೆಗಾಗಿ ಆದೇಶ ಹೊರಡಿಸಿದರು ಕೂಡಾ ಮತ್ತು ಪ್ರಾಣಕ್ಕೆ ಅಪಾಯಕಾರಿಯಾದ ಕೊರೋನಾ ವೈರಸ್ ಸೊಂಕು ಹರಡುವ ಸಂಭವವಿರುವ ಬಗ್ಗೆ ತಿಳಿದ್ದಿದ್ದು, ಕೋರೋನಾ ವೈರಸ್ (ಕೋವೀಡ್-19) ಬಗ್ಗೆ ನಿರ್ಲಕ್ಷತನ ವಹಿಸಿ ಮಾನ್ಯ ತಹಸೀಲ್ದಾರರು ಯಾದಗಿರಿ ರವರು ನೀಡಿದ ಮದುವೆ ಕಾರ್ಯಕ್ರಮದ ಅನುಮತಿ ಪತ್ರದಲ್ಲಿ ಕೇವಲ 10 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಪಾಲಗೊಳ್ಳಲು ಅನುಮತಿ ನೀಡಿದ್ದು ಅದನ್ನು ಪರಿಗಣಿಸದೇ 1. ಸುಭಾಸ ತಂದೆ ಹಾಜಪ್ಪ ವಯಾಃ28, ಸಾಃ ಯಾದಗಿರಿ 2. ರಮೇಶ ತಂ. ಶಿವಪ್ಪ ಟೋಕಾಪೂರ, ವಯಾಃ40, ಸಾಃ ಯಾದಗಿರಿ ರವರು ಆದೇಶ ಉಲ್ಲಂಘನೆ ಮಾಡಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ನಾನು ಯಾದಗಿರಿ ನಗರ ಠಾಣೆ ಗುನ್ನೆ ನಂ 62/2021 ಕಲಂ 269, 270 ಐಪಿಸಿ ಸಂಗಡ ಕಲಂ 51 ಖಿಜ ಆಚಿಚಿಣಜಡಿ ಒಚಿಟಿಜರಟಜಟಿಣ ಂಛಿಣ 2005, ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:- 82/2021 ಕಲಂ ಮಹಿಳೆ ಕಾಣೆ : ಇಂದು ದಿನಾಂಕ: 31-05-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿದಾರನು ಠಾನೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 28-05-2021 ರಂದು ಬೆಳಿಗ್ಗೆ 07-30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯವರು ಮನೆಯಲ್ಲಿ ಇರುವಾಗ ನನ್ನ ತಂಗಿ ಮದೀನಾ ಬೇಗಂ ವ|| 24 ವರ್ಷ ಈಕೆಯು ಮನೆಯಿಂದ ಅಂಗನವಾಡಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದಳು. ಸಾಯಂಕಾಲ ಆದರೂ ನಮ್ಮ ತಂಗಿ ಮನೆಗೆ ಬಾರದೆ ಇರುವಾಗ ಆಗ ನಾವು ಅಂಗನವಾಡಿಗೆ ಹೋಗಿ ನೋಡಲಾಗಿ ಅಂಗನವಾಡಿ ಕೇಂದ್ರ ಬೀಗ ಹಾಕಿತ್ತು, ನಂತರ ನಮ್ಮ ಮನೆಯವರು ಮತ್ತು ನಾನು ನಮ್ಮೂರಿನ ಎಲ್ಲಾ ಕಡೆ ನಮ್ಮ ತಂಗಿಗೆ ಹುಡುಕಾಡಿದೆವು ಸಿಗಲಿಲ್ಲ ನಂತರ ಆಕೆಯ ಪೊನಿಗೆ ಕರೆ ಮಾಡಿದಾಗ ಆಕೆಯ ಪೊನ್ ಮನೆಯಲ್ಲೆ ಬಿಟ್ಟು ಹೋಗಿದ್ದಳು. ಆಗ ನಾವು ನಮ್ಮ ಬೀಗರ ಊರುಗಳಿಗೆ ಪೊನ್ ಮಾಡಿ ನಮ್ಮ ತಂಗಿ ಬಂದಿದ್ದಾಳೆನು ಅಂತಾ ಕೇಳಲಾಗಿ ಬಂದಿರುವದಿಲ್ಲ ಅಂತಾ ತಿಳಿಸಿದರು. ಕೆಲಸದ ಅವಸರದಲ್ಲಿ ತನ್ನ ಪೊನ್ ಬಿಟ್ಟು ಯಾದಗಿರಿಗೆ ಅಥವಾ ಎಲ್ಲಿಗಾದರೂ ಹೋಗಿರಬಹುದು ನಾಳೆ ಬರಬಹುದು ಅಂತಾ ಸುಮ್ಮನಿದ್ದೆವು. ಮರು ದಿನ ಕೂಡ ನನ್ನ ತಂಗಿ ಮನೆಗೆ ಬರಲಿಲ್ಲ ಆಗ ನಾವು ನಮ್ಮ ಸಂಬಂಧಿಕರ ಊರುಗಳಿಗೆ ಹೋಗಿ ಹುಡುಕಾಡಲಾಗಿ ನನ್ನ ತಂಗಿ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು ಅಂತಾ ಪಿಯರ್ಾಧಿ ಇರುತ್ತದೆ..

ಗುರಮಿಠಕಲ್ ಪೊಲೀಸ ಠಾಣೆ :- 77/2021 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ : ದಿನಾಂಕ: 31.05.2021 ರಂದು ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಠಾಣೆಯಲ್ಲಿದ್ದಾಗ ಸಂಜೆ 04:00 ಗಂಟೆಗೆ ಆರೋಪಿತನು ಗುರುಮಠಕಲ್ ಪಟ್ಟಣದ ಮೋಮಿನಪೂರ ಓಣಿಯ ಹಳೆ ಗಾರಂಪಳ್ಳಿ ಐಟಿಐ ಕಾಲೇಜು ಕಟ್ಟಡದ ಪಕ್ಕದ ರೋಡಿನ ಮೇಲೆ ಅಕ್ರಮವಾಗಿ ಹೆಂಡ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಂಜೆ 04:30 ಗಂಟೆಗೆ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ ಮಸಾಲಿ ಚೀಲದಲ್ಲಿಯ ಪ್ಲಾಸ್ಟೀಕ್ ಪಾಕೆಟ್ಗಳಲ್ಲಿ ಕಟ್ಟಿದ ಹೆಂಡವನ್ನು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನ ವಶದಲ್ಲಿದ್ದ 40 ಲೀಟರ ಹೆಂಡವನ್ನು ಮತ್ತು ಹೆಂಡ ಮಾರಾಟದಿಂದ ಬಂದ ನಗದು ಹಣ 520/- ರೂ ಹೀಗೆ ಒಟ್ಟು 1420/-ರೂ ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಆರೋಪಿತನ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದ ಅದರ ಸಾರಾಂಶದ ಮೇಲಿಂದ ಪ್ರಕರಣದ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 02-06-2021 10:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080