ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03/03/2021

ಶೋರಾಪೂರ ಪೊಲೀಸ್ ಠಾಣೆ:- 46/2021 ಕಲಂ 87 ಕೆ.ಪಿ. ಕಾಯ್ದೆ : ಕೇಸಿನ ಸಂಕ್ಷಿಪ್ತ ಸಾರಾಂಶ:ಇಂದು ದಿನಾಂಕ: 02-03-2021 ರಂದು 11-15 ಎ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ&ಸು-2) ಸಾಹೇಬರು 5 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:02/03/2021 ರಂದು 8 ಎ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ಲಾಪೂರ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್.ಸಿ-105, 3) ಶ್ರೀ ಮಂಜುನಾಥ ಸಿಪಿಸಿ-271 4) ಶ್ರೀ ಪರಮೇಶ ಸಿಪಿಸಿ 142, 5) ಬಸಪ್ಪ ಪಿಸಿ-393 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ದೇವಿಂದ್ರಪ್ಪ ತಂದೆ ಭೀಮನಗೌಡ ಮಾಲಿಬಿರೆದಾರ ವ|| 48 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಬೇವಿನಾಳ ತಾ|| ಸುರಪುರ 2) ಶಂಕ್ರಪ್ಪ ತಂದೆ ಬಸಣ್ಣ ಒಂಟೂರ ವ|| 58 ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಚಂದ್ಲಾಪೂರ ತಾ|| ಸುರಪುರ ಇವರನ್ನು 8:15 ಎ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 8:30 ಎ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 9:15 ಎ.ಎಂ ಕ್ಕೆ ಚಂದ್ಲಾಪೂರ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 9:20 ಎ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 5 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಬಸನಗೌಡ ತಂದೆ ಗುರುಬಸಪ್ಪ ಬಿರೆದಾರ ವ|| 49 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಸೂಗೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1750/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಮರೆಪ್ಪ ತಂದೆ ಬಸಣ್ಣ ಮಡಿವಾಳ ವ|| 35 ವರ್ಷ ಜಾ|| ಅಗಸರ ಉ|| ಒಕ್ಕಲುತನ ಸಾ|| ಬೇವಿನಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1550/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಮಲ್ಲೇಶಿ ತಂದೆ ಬಸಣ್ಣ ಗುಜ್ಜಲ್ ವ|| 35 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಚಂದ್ಲಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1450/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಸೋಪಿಶರ್ಮತ್ ತಂದೆ ಚುನ್ನುಸಾಬ ಮಾಸ್ತರ್ ವ|| 27 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಬೇವಿನಾಳ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1800/- ರೂಗಳು ವಶಪಡಿಸಿಕೊಳ್ಳಲಾಯಿತು. 5) ತಿಮ್ಮಣ್ಣ ತಂದೆ ಹಣಮಂತ ಹೊಸಮನಿ ವ|| 35 ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಚಂದ್ಲಾಪೂರ ತಾ:ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1350/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 22,250/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 30,150/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 9:20 ಎ.ಎಮ್ ದಿಂದ 10:20 ಎ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 5 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 18/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶಹಾಪೂರ ಪೊಲೀಸ್ ಠಾಣೆ:- 42/2021.ಕಲಂಃ 323, 448, 504, 506 ಸಂಗಡ 34.ಐ.ಪಿ.ಸಿ. : ಇಂದು ದಿನಾಂಕ:02-03-2021 ರಂದು 1:30 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಮರೆಮ್ಮ ಗಂಡ ಬಸವರಾಜ ಅಗಸ್ದಾಳ ವಯ: 35 ವರ್ಷ ಜಾ: ಕುರುಬ ಉ: ಕೂಲಿಕೆಲಸ ಸಾ: ವಿಭೂತಿಹಳ್ಳಿ ತಾ: ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನಂದರೆ ನಮ್ಮ ಮನೆಯ ಎದುರಿನ ನಮ್ಮ ಜನಾಂಗದ ಬೀಮಪ್ಪ ತಂದೆ ನಾಗಪ್ಪ ಅನಸೂರ ಮನೆಯವರು ನಮ್ಮೊಡನೆ ಆಗಾಗ ಸಣ್ಣ ಪುಟ್ಟ ವಿಷಯಕ್ಕಾಗಿ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ದಿನಾಂಕ:28-02-2021 ರಂದು ಸಾಯಂಕಾಲ 7:30 ಗಂಟೆ ಸುಮಾರಿಗೆ ನನ್ನ ಮಗು ಮನೆಯಲ್ಲಿನ ಕಸವನ್ನು ರಸ್ತೆಯ ಮೇಲೆ ಹಾಕಿದ್ದನ್ನು ನೆವ ಮಾಡಿಕೊಂಡು ಬೀಮಪ್ಪ ಅನಸೂರ ನ ಹೆಂಡತಿ ಮಾನಮ್ಮ ಇವಳು ಸೂಳಿದಾಳಿ ಅಂತಾ ನನಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇದ್ದಳು. ಆಗ ನಾನು ಯಾಕೆ ಒದರಾಡುತ್ತಿ ಎಂದು ಕೇಳಿದ್ದಕ್ಕೆ ಮನೆಯವರೆಲ್ಲರೂ ಅಂದರೆ 1) ಭೀಮಪ್ಪ ತಂದೆ ನಾಗಪ್ಪ ಅನಸೂರ 2) ಮಾನಮ್ಮ ಗಂಡ ಭೀಮಪ್ಪ ಅನಸೂರ 3) ಖಾನಬಾಯಿ ಗಂಡ ಬೀಮಪ್ಪ ಶೆಟ್ಟಿಕೇರಿ ಮತ್ತು ಸಿದ್ದಮ್ಮ ಗಂಡ ಉಯ್ಯಪ್ಪ ಅನಸೂರ ಮೂರಿ ಜನರು ಕೂಡಿ ಏ ಸೂಳಿ ನಿಂದು ಬಹಳ ಆಗಿದೆ ಇವತ್ತು ನಿನಗೆ ಇದೆ ಅಂತಾ ಅನ್ನುತ್ತಾ ನಾಲ್ಕು ಜನರು ಕೂಡಿ ನಮ್ಮ ಮನೆ ಹೊಕ್ಕು ಎಲ್ಲರೂ ಕೂಡಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನೆಲಕ್ಕೆ ಹಾಕಿ ಹೊಡೆದರು. ಭಿಮಪ್ಪನು ಹೊಡಿರಿ ಈ ಸೂಳಿದು ಬಹಳ ಆಗಿದೆ ಎಂದು ಹೇಳಿ ಹೊಡೆಸಿದ್ದಾನೆ ಮತ್ತು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಿದ್ದಾನೆ. ನಾನು ಚೀರಾಡುತ್ತಿದ್ದಾಗ ದಾರಿಯಲ್ಲಿ ಹೊರಟಿದ್ದ ನಮ್ಮೂರ ಶಿವಪ್ಪ ತಂದೆ ಭೀಮಪ್ಪ ಬೇವಿನಳ್ಳಿ ಮತ್ತು ನಿಂಗಪ್ಪ ತಂದೆ ಬಸಲಿಂಗಪ್ಪ ಮಾಳಪ್ಪನವರ ಇಬ್ಬರೂ ಕೂಡಿ ಬಂದು ಜಗಳ ಬಿಡಿಸಿಕೊಂಡರು. ಆಗ ಬೀಮಪ್ಪ ಅನಸೂರ ಈತನು ಸೂಳಿ ಈಗ ಉಳಿದೀದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಉಳಿಯುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿ ತಮ್ಮ ಮನೆಯೊಳಗೆ ಹೋದರು. ನನ್ನ ಗಂಡನು ಟ್ರ್ಯಾಕ್ಟರ ನಡೆಸಲು ಹೋಗಿದ್ದು ಆತನು ಬಂದ ನಂತರ ಆತನಿಗೆ ವಿಷಯ ತಿಳಿಸಿ ಇಂದು ದಿನಾಂಕ: 02-03-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಕಾರಣ ದಿನಾಂಕ: 28-02-2021 ರಂದು 7:30 ಪಿ. ಎಮ್.ಕ್ಕೆ ಮೇಲಿನ ನಾಲ್ಕು ಜನರು ಕೂಡಿ ನಮ್ಮ ಮನೆಯಲ್ಲಿ ಅಕ್ರಮ ಪ್ರವೇಶ ಮಾಡಿ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ, 42/2021 ಕಲಂ 323, 448, 504, 506 ಸಂಗಡ 34 ಐ.ಪಿ.ಸಿ.ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಸೈದಾಪೂರ ಪೊಲೀಸ್ ಠಾಣೆ:- 34/2021, ಕಲಂ, 143, 147,341, 323,354,504.506. ಸಂ.149 ಐ ಪಿ ಸಿ : ದಿನಾಂಕ: 02-03-2020 ರಂದು 03-00 ಪಿ.ಎಮ್ ಕ್ಕೆ ಪಿಯರ್ಾಧಿದಾರರು ಠಾಣೆಗೆ ಹಾಜರಾಗಿ ಪಿಯರ್ಾಧಿ ಸಲ್ಲಿಸಿದ ಸಾರಂಶವೇನೆಂದರೆ ದಿನಾಂಕ: 01-03-2021 ರಂದು ಸಾಯಂಕಾಲ 05-30 ಗಂಟೆಗೆ ನಮ್ಮ ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ನಮಗೆ ಸೂಳೆ ಮಕ್ಕಳೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೀವು ಯಾಕೆ ನಮ್ಮ ಎದರು ನಿಂತಿರಿ ಸೂಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಸೀರೆ ಹಿಡಿದು ಎಳದಾಡಿ ಅವಮಾನ ಮಾಡಿ ಲೇ ಸುಳೆ ಮಕ್ಕಳೆ ಇನ್ನೊಂದು ಸಲ ನಮ್ಮ ಎದರು ನಿಂತರೆ ನಿಮಗೆ ಖಲಾಸ ಮಾಡುತ್ತೇವೆ ಅಂದು ಟ್ರ್ಯಾಕ್ಟರ ಮತ್ತು ಜೆಸಿಬಿಯಿಂದ ಗುದ್ದಿ ಖಲಾಸ ಮಾಡುತ್ತೇವೆ ಅಂತಾ ಅಂದು ಟ್ರ್ಯಾಕ್ಟರ ದಿಂದ ಕಾಲಿಗೆ ಗುದ್ದಿ ಎದೆಯ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿ ನಮಗೆ ಎದರು ಹಾಕಿಕೊಂಡರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಮಕ್ಕಳೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯಾಧಿ ಸಾರಂಶ

ಸೈದಾಪೂರ ಪೊಲೀಸ್ ಠಾಣೆ:- 35/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 02-03-2021 ರಂದು ರಾತ್ರಿ 08-15 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ಹಳೆ ಪೊಸ್ಟ ಆಫಿಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತರಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವರಿಂದ ನಗದು ಹಣ 2350=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.35/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 ಹುಣಸಗಿ ಪೊಲೀಸ್ ಠಾಣೆ:- 13/2021 78 (3) ಕೆ.ಪಿ ಯಾಕ್ಟ : ದಿನಾಂಕ:02/03/2021 ರಂದು 18.05 ಪಿ.ಎಮ್ ಕ್ಕೆ, ಶ್ರೀ.ಬಾಪುಗೌಡ ಪಿಎಸ್ಐ ಹುಣಸಗಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ವಜ್ಜಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:13/2021 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದ

ಹುಣಸಗಿ ಪೊಲೀಸ್ ಠಾಣೆ:-14/2021 323, 324, 355, 504, 506 ಸಂ.34 ಐಪಿಸಿ : ಇಂದು ದಿನಾಂಕ:03/02/2021 ರಂದು ರಾತ್ರಿ 08.30 ಗಂಟೆಗೆ ಎಎಸ್ಐ ಮಾಣಿಕರೆಡ್ಡಿ ರವರು ಕೆರೋಡಿ ಆಸ್ಪತ್ರೆ ಬಾಗಲಕೋಟದಲ್ಲಿ ಇಲಾಜು ಹೊಂದುತ್ತಿರುವ ಶ್ರೀ. ಶಿವರಾಜ ತಂದೆ ಬಸಣ್ಣ ಕರಡಿ ವಯಾ-26 ವರ್ಷ, ಜಾ:ಕುರುಬರ ಉ:ಒಕ್ಕಲುತನ ಸಾ:ಹಿರೇಹಳ್ಳ ಕಕ್ಕೇರಿ ತಾ:ಸುರಪೂರ ಈತನ ಹೆಳಿಕೆಯನ್ನು ಪಡೆದುಕೊಂಡು ಠಾಣೆಗೆ ಬಂದು ನನಗೆ ವರದಿ ಸಮೇತ ಹೇಳಿಕೆಯನ್ನು ಕೊಟ್ಟಿದ್ದು, ಹೇಳಿಕೆಯಲ್ಲಿ ಫಿರ್ಯಾದಿ ತಿಳಿಸಿದ್ದೆನೆಂದರೇ, ದಿನಾಂಕ:28/02/2021 ರಂದು ಸಾಯಂಕಾಲ 04.00 ಗಂಟೆಗೆ ಹೊಲದಲ್ಲಿ ನೀರು ಬಿಡುವಾಗ ಆರೋಪಿ ನಂ:1 ನೇದ್ದವನು ಫಿರ್ಯಾದಿಯೊಂದಿಗೆ ತಕರಾರು ಮಾಡಿ ಫಿರ್ಯಾದಿಯ ಹೊಲಕ್ಕೆ ನೀರು ಹೋಗದಂತೆ ಅಡ್ಡಗಟ್ಟಿದಾಗ ಫಿರ್ಯಾದಿಯು ಕೇಳಿದ್ದರಿಂದ ಅವನಿಗೆ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಪಡಸಿದ್ದು, ಇನ್ನುಳಿದ 3 ಜನ ಆರೋಪಿತರು ಕಲ್ಲಿನಿಂದ & ಚ್ಪಪಲಿಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿಯ ಸಾರಾಂಶ ಇದ್ದು, ಸದರಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ:- 26/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನ ಮಾಲಿಕತ್ವದಲ್ಲಿ ಇರುವ ಬೂದಿ ಟ್ಯಾಂಕರ್ ವಾಹನ ಸಂ. ಕೆ.ಎ 32 ಸಿ-5939, ಮಾಡೆಲ್ [2015-16] ಟಾಟಾ ಕಂಪನಿದಾಗಿರುತ್ತದೆ. ಸದರಿ ಬೂದಿ ಟ್ಯಾಂಕರ್ ಅನ್ನು ರಿಜ್ವಾನ್ ತಂದೆ ಬಾಬುಲಾಲ್ ವಯಾ 35 ವರ್ಷ, ಉ|| ಚಾಲಕ ಸಾ|| ದಗರ್ಾ ಏರಿಯಾ ಹತ್ತಿರ ವಾಡಿ ತಾ|| ಚಿತ್ತಾಪೂರ ಜಿ|| ಕಲಬುರಗಿ ಮೊ.ನಂ-9483642906 ಇವರು ನನ್ನ ಬೂದಿ ಟ್ಯಾಂಕರನ್ನು ಸುಮಾರು 01 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದರು. ಈ ವಾಹನಕ್ಕೆ ಕ್ನಿನ್ನರ್ ಇರುವುದಿಲ್ಲ. ಇತನೇ ಚಾಲಕನಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದನು. ಸದರಿ ವಾಹನ ಅಂದಾಜು ಕಿಮ್ಮತ್ತು 09 ಲಕ್ಷ ರೂಪಾಯಿಗಳು. ಹೀಗಿದ್ದು ದಿನಾಂಕ 15/02/2021 ರಂದು ರಾತ್ರಿ 10-00 ಪಿ.ಎಂ ಸುಮಾರಿಗೆ ಯಾದಗಿರಿ ನಗರದ ಗಂಜ್ಗೇಟ್ [2] ರಲ್ಲಿ ಬೂದಿ ವಾಹನವನ್ನು ರಿಜ್ವಾನ್ ಚಾಲಕ ನಿಲ್ಲಿಸಿ, ತನ್ನ ಹೆಂಡತಿ ಮನೆಯಿಂದ ಮೈಯಲ್ಲಿ ಆರಾಮವಿಲ್ಲ ಅಂತಾ ಪೋನ್ ಬಂದಾಗ ಹೋಗಿರುತ್ತಾನೆ. ದಿನಾಂಕ 16/02/2021 ರಂದು 9-00 ರಿಂದ 10-00 ಎ.ಎಂ ಅವಧಿಯಲ್ಲಿ ನೋಡಿದಾಗ ವಾಹನ ಇರುವುದಿಲ್ಲ. ನಂತರ ನನಗೆ ಪೋನ್ ಮಾಡಿದಾಗ ವಾಹನವು ನಿಲ್ಲಿಸಿದ ಜಾಗದಲ್ಲಿ ಇರುವುದಿಲ್ಲ. ವಿಷಯ ತಿಳಿಸಿದಾಗ ನಾನು ಮುಗಳನಾಗಾವಿ ತಾಂಡಾದಲ್ಲಿ ಇದ್ದೆನು. ನಂತರ ನಾನು ಅಂದು ಯಾದಗಿರಿಗೆ ಒಬ್ಬನೇ ಬಂದೆನು. ಡ್ರೈವರ್ ಮಾತ್ರ ಇದ್ದನು. ವಾಹನ ವಾಡಿಯಿಂದ ಶಕ್ತಿನಗರಕ್ಕೆ ಬೂದಿ ತರಲು ಹೊರಟಿತ್ತು. ವಾಡಿಯಿಂದ ದಿನಾಂಕ 15/02/2021 ರಂದು ರಾತ್ರಿ 8-30 ಪಿ.ಎಂ ಸುಮಾರಿಗೆ ಬಿಟ್ಟು ಯಾದಗಿರಿಗೆ 10-00 ಪಿ.ಎಂಕ್ಕೆ ತಲುಪಿ ಗಂಜ್ ಏರಿಯಾದ 2 ನೇ ಗೇಟ್ ಹತ್ತಿರ ನಿಲ್ಲಿಸಿ, ಮನೆ ಕಡೆಯಿಂದ ಆರಾಮ ಇಲ್ಲ ಅಂತಾ ಪೋನ್ ಬಂದಾಗ ಗಾಡಿ ಇಲ್ಲಿ ನಿಲ್ಲಿಸಿ, ಮರಳಿ ವಾಡಿಗೆ ಬಂದು, ಮಾಲಿಕನಿಗೆ ಗೊತ್ತಿಲ್ಲದಂತೆ ಬಂದು ತಿರುಗಿ ಮರು ದಿನ ದಿನಾಂಕ 16/02/2021 ರಂದು ಬೆಳಿಗ್ಗೆ 9-00 ಎ.ಎಂ ರಿಂದ 10-00 ಎ.ಎಂ ಅವಧಿಯಲ್ಲಿ ಗಾಡಿ ನೋಡಿದಾಗ ಗಾಡಿ ಇರಲಿಲ್ಲ. ನಂತರ ಚಾಲಕನು ಮಾಲಿಕನಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಮಾಲಿಕನಾದ ನಾನೇ ಒಬ್ಬನೇ ಸ್ಥಳಕ್ಕೆ ಬಂದಿದ್ದು ಇರುತ್ತದೆ. ನಾನು ನನ್ನ ವಾಹನವನ್ನು ಎಲ್ಲಾ ಕಡೆ ಹುಡುಕಾಡಿದರೂ ನನ್ನ ಬೂದಿ ಟ್ಯಾಂಕರ್ ವಾಹನ ನನಗೆ ಸಿಕ್ಕಿರುವುದಿಲ್ಲ. ಆದ ಕಾರಣ ಮಾನ್ಯರಾದ ತಾವುಗಳು ನನ್ನ ಬೂದಿ ಟ್ಯಾಂಕರ್ ವಾಹನವನ್ನು ಪತ್ತೆ ಮಾಡಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನನ್ನ ವಾಹನವನ್ನು ನನಗೆ ಒದಗಿಸಿ, ನನಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಇಲ್ಲಿಯ ವರೆಗೆ ನನ್ನ ವಾಹನವನ್ನು ಹುಡುಕಾಡಿದರು ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2021 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಯಾದಗಿರ ನಗರ ಪೊಲೀಸ್ ಠಾಣೆ ಗುನ್ನೆ ನಂ :- 27/2021 ಕಲಂ. ಮನುಷ್ಯಕಾಣೆ : ಇಂದು ದಿನಾಂಕ. 02/03/2021 ರಂದು ರಾತ್ರಿ 8-30 ಪಿಎಂಕ್ಕೆ ಶ್ರೀ ಮಹ್ಮದ ಶಬ್ಬೀರ್ ಅಹೆಮದ ತಂದೆ ಮಹ್ಮದ ನಜೀರ ಅಹೆಮ್ಮದ ಖೊತ ವಯಾ: 54 ಉ: ಸಹಾಯಕ ಶಿಕ್ಷಕರು ಜಾತಿಃ ಮುಸ್ಲಿಂ ಸಾ;ಚಾಮಾ ಲೇಔಟ ಯಾದಗಿರಿ ರವರು ಒಂದು ದೂರು ಅಜರ್ಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ಮೂರು ಜನ ಮಕ್ಕಳಿದ್ದು ಯಾದಗಿರಿಯ ಚಾಮಾ ಲೇಔಟ ಏರಿಯಾದಲ್ಲಿ ಸ್ವಂತ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿರುತ್ತೇವೆ. ನನ್ನ ಎರಡನೇಯ ಮಗನಾದ ಮಹ್ಮದ ಶಕೀಬ್ ಅಹ್ಮದ ತಂದೆ ಮಹ್ಮದ ಶಬ್ಬೀರ್ ಅಹೆಮದ ಖೋತ ವಯಾ: 20 ಜಾತಿ: ಮುಸ್ಲಿಂ ಉ: ವಿದ್ಯಾಥರ್ಿ ಸಾ: ಚಾಮಾ ಲೇಔಟ ಯಾದಗಿರಿ ಈತನು ಕಲಬುರಗಿಯ ಕೆ.ಬಿ.ಎನ್ ಕಾಲೇಜ ಸಿವಿಲ್ ನಾಲ್ಕನೇಯ ಸೇಕ್ಷನ ಪ್ರಥಮ ವರ್ಷದ ಇಂಜಿನೀಯರಿಂಗ್ ಓದುತ್ತಿದ್ದನು ನನ್ನ ಮಗ 4-5 ದಿವಸಗಳಿಂದ ಕಾಲೇಜಿಗೆ ಬರುತ್ತಿಲ್ಲ ನನ್ನ ಮಗನ ಸಂಗಡ ಓದುತ್ತಿರುವ ನಮ್ಮ ಅಳಿಯನಾದ ಅವೇಜ್ ಅಮಾನ ತಂದೆ ಅಬ್ದುಲ್ ರಜಾಕ್ ಈತನು ಪೋನ ಮಾಡಿ ನನಗೆ ತಿಳಿಸಿದ್ದರಿಂದ ನಾನು ದಿನಾಂಕ 28/02/2021 ರಂದು ಮುಂಜಾನೆ 8-00 ಗಂಟೆ ಸುಮಾರಿಗೆ ನಾನು ನನ್ನ ಮಗನ ಹತ್ತಿರ ಹೋಗಿ ಅತನಿಗೆ ಕಾಲೇಜಿಗೆ ಹೋಗದಿರುವ ಬಗ್ಗೆ ವಿಚಾರಿಸಲು ನನ್ನ ಮಗನು ನನಗೆ ಏನೊ ತಿಳಿಸದೆ ಮನೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಆಗ ನಾನು ನನ್ನ ಮಗನ್ನು ಯಾದಗಿರಿಗೆ 12-30 ಪಿ.ಎಂ ಕ್ಕೆ ಕರೆದುಕೊಂಡು ಬಂದೆನು ನಂತರ ನನ್ನ ಮಗನು ಮಧ್ಯಹ್ನಾ 1-30 ಗಂಟೆ ಸುಮಾರಿಗೆ ನಮಾಜಗೆ ಹೋಗಿ ಪ್ರಾರ್ಥನೆ ಮಾಡಿ ಬರುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋದನು ರಾತ್ರಿ ಹೋತ್ತಾದರೂ ಮನೆಗೆ ಬರಲಿಲ್ಲ ನಂತರ ಅಲ್ಲಿ ಇಲ್ಲಿ ಎಲ್ಲಾ ಕಡೆ ವಿಚಾರಿಸಿದರೂ ನನ್ನ ಮಗನ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ. ನಾನು ಮತ್ತು ನನ್ನ ತಂಗಿಯ ಮಗನಾದ ಶಕೀಬ್ ಪಟೇಲ್ ತಂದೆ ಅಕ್ತರ ಪಟೇಲ್, ಮುದಸೀರ್ ಆಹೆಮದ ತಂದೆ ಮಂಜಿರ್ ಅಹೆಮದ ಹಾಗೂ ಮನೆಯವರು ಕೂಡಿಕೊಂಡು ಎಲ್ಲಾ ಕಡೆ ಇಲ್ಲಿಯವರೆಗೆ ಹುಡುಕಾಡಲಾಗಿ ಮತ್ತು ನಮ್ಮ ಸಂಭಂಧಿಕರಲ್ಲಿ ಎಲ್ಲಾ ಕಡೆಗೆ ವಿಚಾರಿಸಿದರೂ ಕೂಡಾ ಸಿಕ್ಕಿರುವುದಿಲ್ಲಾ. ನನ್ನ ಮಗ ಮಹ್ಮದ ಶಕೀಬ್ ಆಹ್ಮದ ಈತನು ಕಾಣೆಯಾಗಿದ್ದು ಇಲ್ಲಿಯವರೆಗೆ ಮನೆಗೆ ಬರದೇ ಇದ್ದುದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುತ್ತಿದ್ದು ಕಾಣೆಯಾದ ನನ್ನ ಮಗನ ಚಹರೆ ಪಟ್ಟಿ- ಸಾದಾಗೆಂಪು ಬಣ್ಣ, ಕೋಲು ಮುಖ, ಎತ್ತರ 5 ಪೀಟ್4 ಇಂಚು ಎತ್ತರ, ತೆಳುವಾದ ಮೈಕಟ್ಟು, ವಯಸ್ಸು; 20 ವರ್ಷ, ಮೈಮೇಲೆ ತಿಳಿ ನೀಲಿ ಕಪ್ಪು ಬಣ್ಣದ ಜಕರ್ಿನ ಶರ್ಟ, ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದು, ಹಿಂದಿ, ಇಂಗ್ಲಿಷ್, ಕನ್ನಡ ಭಾಷೆ ಮಾತನಾಡುತ್ತಾನೆ. ಕಾರಣ ಕಾಣೆಯಾದ ನನ್ನ ಮಗ ಮಹ್ಮದ ಶಕೀಬ್ ಆಹ್ಮದ ಈತನಿಗೆ ಪತ್ತೆ ಮಾಡಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.27/2021 ಕಲಂ. ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 03-03-2021 10:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080