Feedback / Suggestions


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 03-06-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 75/2021 ಕಲಂ 379 ಐಪಿಸಿ : ದಿನಾಂಕ 02/06/2021 ರಂದು ಬೆಳಿಗ್ಗೆ 9-00 ಎ.ಎಂ.ಕ್ಕೆ ಹೊರುಂಚಾ ಗ್ರಾಮದ ಸೀಮೆಯಲ್ಲಿ ಬರುವ ಸರಕಾರಿ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತನಾದ ಟ್ರ್ಯಾಕ್ಟರ ಚಾಲಕ ಇತನು ತನ್ನ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟಿಎ-4029 ಮತ್ತು ಟ್ರ್ಯಾಲಿ ಚೆಸ್ಸಿ ನಂ 146/2013ನೆದ್ದರಲ್ಲಿ ಮರಳು ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 76/2021 ಕಲಂ 269, 270 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 : ಇಂದು ದಿನಾಂಕ 02/06/2021 ರಂದು ಮಧ್ಯಾಹ್ನ 12-00 ಗಂಟೆಗೆ ಶ್ರೀ ಸುರೇಶಕುಮಾರ ಇವರು ಠಾಣೆಗೆ ಬಂದು ವರದಿ ಕೊಟ್ಟಿದ್ದೆನೆಂದರೆ ಈ ಮೂಲಕ ನಾನು ಸುರೇಶಕುಮಾರ ಪಿ.ಎಸ.ಐ(ಕಾ.ಸು) ಆದ ನಾನು ಈ ಮೂಲಕ ಸರಕಾರಿ ತಪರ್ೆ ವರದಿ ನೀಡುತ್ತಿರುವುದೆನೆಂದರೆ ಇಂದು ದಿನಾಂಕ 02/06/2021 ರಂದು ಬೆಳಗ್ಗೆ 11 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿ ರವರು ಕೋವಿಡ್-19 ಸೊಂಕು ಹರಡುತ್ತಿದ್ದುದ್ದರಿಂದ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದು, ಪೆಟ್ರೋಲಿಂಗ್ ಕರ್ತವ್ಯ ಕುರಿತು ನಾನು, ಸಿಬ್ಬಂಧಿಯವರಾದ ಶ್ರೀ ಪ್ರಭುಗೌಡ ಸಿಪಿಸಿ-361 ಮತ್ತು ನಮ್ಮ ಜೀಪ ಚಾಲಕನಾದ ಭೀಮರಾಯ ಸಿಪಿಸಿ-33 ರವರು ಇಬ್ಬರೂ ಬಂದಳ್ಳಿ, ಯಡ್ಡಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಹತ್ತಿಕುಣಿ ಗ್ರಾಮಕ್ಕೆ ಬೆಳಿಗ್ಗೆ 11-30 ಗಂಟೆಗೆ ಹೋದಾಗ ಅಲ್ಲಿ ಹತ್ತಿಕುಣಿ ಗ್ರಾಮದಲ್ಲಿ 1)ಅಂಬಾರಾಮ ತಂದೆ ಜೆಟರಾಮ ಸೊಲಂಕಿ 2)ಕಮಲರೆಡ್ಡಿ ತಂದೆ ಬಸವರಾಜರೆಡ್ಡಿ ಬೂದಿ ಮತ್ತು ಎದುರುಗಡೆ ಇನ್ನೊಂದು ಅಂಗಡಿಯ ಮಲ್ಲಪ್ಪ ತಂದೆ ಕಾಶಪ್ಪ ಇವರ ಲಾಕ್ ಡೌನ್ ಇದ್ದಿದ್ದು ಗೋತ್ತಿದ್ದರು ಸಹಿತ ತಮ್ಮ ತಮ್ಮ ಕಿರಾಣಿ ಅಂಗಡಿಗಳನ್ನು ತೆರೆದಿದ್ದು, ಗ್ರಾಹಕರಿಗೆ ಕರೆದು ಯಾವುದೇ ಮಾಸ್ಕ ಧರಿಸದೇ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಸೊಂಕು ಹರಡುತ್ತದೆ ಅಂತಾ ಗೋತ್ತಿದ್ದರೂ ಕೂಡಾ ಕಿರಾಣಿ ಸಾಮಾನುಗಳನ್ನು ಮಾರಾಟ ಮಾಡುತ್ತಾ ನಿರ್ಲಕ್ಷ ವಹಿಸಿರುತ್ತಾರೆ, ಸಾರ್ವಜನಿಕರಿಗೆ ಕೊವಿಡ್ ಪರೀಕ್ಷೆ ಮಾಡಿಕೊಳ್ಳಲು ಸೂಚಿಸಿದ್ದು ಇರುತ್ತದೆ, ಈ ಘಟನೆಗೆ ಈ ಮೇಲ್ಕಂಡ ಎರಡು ಕಿರಾಣಿ ಅಂಗಡಿಗಳ ಮಾಲೀಕರು ಕೊವಿಡ್ ಸೊಂಕು ಹರಡುವದರ ಬಗ್ಗೆ ನಿರ್ಲಕ್ಷ ವಹಿಸಿದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 76/2021 ಕಲಂ 269, 270 ಐಪಿಸಿ ಮತ್ತು 51 ಡಿಜಸ್ಟರ ಮ್ಯಾನೆಜಮೆಂಟ ಆ್ಯಕ್ಟ 2005 ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ :- 84/2021 ಕಲಂ. 323, 324, 354, 504,506 ಸಂಗಡ 149 ಐಪಿಸಿ : ಇಂದು ದಿನಾಂಕ. 02.06.2021 ರಂದು ಮಧ್ಯಾಹ್ನ 01-30 ಗಂಟೆಗೆ ಶ್ರೀ ದೇವಪ್ಪ ತಂದೆ ಭೀಮಶಪ್ಪ ಭಜಂತ್ರಿ ಸಾ|| ಬಾಡಿಯಾಳ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಬಂದು ನೀಡಿದ ದೂರು ಅಜರ್ಿ ಸಾರಾಂಶವೇನೆಂದರೆ, ದಿನಾಂಕ. 01.06.2021 ರಂದು ಫಿಯರ್ಾದಿ ಕುಟುಂಬದವರು ಆರೋಪಿತನ ಮನೆಗೆ ಹೋಗಿ ನಾವಿಬ್ಬರು ಒಂದೇ ಸಮಾಜದವರಿದ್ದು, ನೀವೂ ಬಾಡಿಯಾಳದಲ್ಲಿ ಬ್ಯಾಂಡ ಬಾರಿಸಿದರೆ ನಾವು ಲಿಂಗದಹಳ್ಳಿಯಲ್ಲಿ ಬ್ಯಾಂಡ ಬಾರಿಸುತ್ತೇವೆ. ಈಗ ಹಿಂದಿನ ಪದ್ದತಿ ಮುರಿಯಬಾರದು ಅಂತ ಕೇಳಲು ಹೋದರೆ ಅದಕ್ಕೆ ಅಲ್ಲಿ ಆರೋಪಿತರ ಮನೆ ಮುಂದೆ ಸೇರಿದ್ದ 11 ಜನ ಆರೋಪಿತರು ಫಿಯರ್ಾದಿಗೆ ಮತ್ತು ಮನೆಯವರಿಗೆ ಸೂಳೇ ಮಕ್ಕಳೇ. ರಂಡೀ ಮಕ್ಕಳೇ ಅಂತ ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು, ನೀವು ಹೇಳಿದಂತೆ ಕೇಳಲಾಗುದಿಲ್ಲ ಅದು ನಮ್ಮ ಇಷ್ಟ ಅಂತ ಹೇಳಿ ಇನ್ನೊಮ್ಮೆ ನಮ್ಮ ಮನೆ ಕಡೆಗೆ ಬರಬಾರದು ಸೂಳೇ ಮಕ್ಕಳೇ ಅಂತ ಮನೆಯಲ್ಲಿನ ಕೊಡಲಿ, ಕುಡುಗೋಲು, ಕಲ್ಲು ಮತ್ತು ಬಡಿಗೆ ಯಿಂದ ಫಿಯರ್ಾದಿ ಮನೆಯವರಿಗೆ ಹೊಡೆಬಡೆ ಮಾಡಿ ಫಿಯರ್ಾದಿಯ ಅತ್ತಿಗೆಗೆ ಸೀರೆ ಹಿಡಿದು ಎಳೆದಾಡಿ ಕುಪ್ಪಸ ಹರಿದು ಅವಮಾನ ಮಾಡಿ ಜೀವ ಭಯ ಹಾಕಿದ ಬಗ್ಗೆ ಫಿಯರ್ಾದಿ ಸಾರಾಂಶ ಇರುತ್ತದೆ. ಅಂತ ದೂರು ಸಾರಾಂಶ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ :- 85/2021, ಕಲಂ. 143,147,148,341, 323,324,354, 504.506. ಸಂ.149 ಐ ಪಿ ಸಿ : ದಿನಾಂಕ: 02-06-2021 ರಂದು ಸಾಯಂಕಾಲ 04-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 01-06-2021 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯವರು ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಾವು ತಲಾ ತಲಾಂತರದಿಂದ ಬ್ಯಾಡ ಬಾರಿಸಿಕೊಂಡು ಬಂದ ಮನೆಯವರಿಗೆ ನೀವು ಬ್ಯಾಂಡ ಬಾರಿಸಲು ಯಾಕೆ ಒಪ್ಪಿಕೊಂಡಿದ್ದಿರಿ ಸುಳೆ ಮಕ್ಕಳೆ ಅಂತಾ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮತ್ತು ಗುಪ್ತ ಗಾಯ ಮಾಡಿ ಹೆಣ್ಣು ಮಕ್ಕಳಿಗೆ ಸೀರೆ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ಎದೆಯ ಮೇಲಿನ ಅಂಗಿ ಹಿಡಿದು ಲೇ ಸುಳೆ ಮಕ್ಕಳೆ ನಿಮಗೆ ಜೀವ ಸಹಿತಿ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ

ಸೈದಾಪೂರ ಪೊಲೀಸ್ ಠಾಣೆ :- 85/2021, ಕಲಂ. 143,147,148,341, 323,324,354, 504.506. ಸಂ.149 ಐ ಪಿ ಸಿ : ದಿನಾಂಕ: 02-06-2021 ರಂದು ಸಾಯಂಕಾಲ 04-30 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 01-06-2021 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯವರು ಮನೆಯ ಹತ್ತಿರ ಇರುವಾಗ ಆರೋಪಿತರೆಲ್ಲರೂ ಸೇರಿಕೊಂಡು ಬಂದು ಲೇ ಸೂಳೆ ಮಕ್ಕಳೆ ನಾವು ತಲಾ ತಲಾಂತರದಿಂದ ಬ್ಯಾಡ ಬಾರಿಸಿಕೊಂಡು ಬಂದ ಮನೆಯವರಿಗೆ ನೀವು ಬ್ಯಾಂಡ ಬಾರಿಸಲು ಯಾಕೆ ಒಪ್ಪಿಕೊಂಡಿದ್ದಿರಿ ಸುಳೆ ಮಕ್ಕಳೆ ಅಂತಾ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತಗಾಯ ಮತ್ತು ಗುಪ್ತ ಗಾಯ ಮಾಡಿ ಹೆಣ್ಣು ಮಕ್ಕಳಿಗೆ ಸೀರೆ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿ ಅಡ್ಡಗಟ್ಟಿ ನಿಲ್ಲಿಸಿ ಎದೆಯ ಮೇಲಿನ ಅಂಗಿ ಹಿಡಿದು ಲೇ ಸುಳೆ ಮಕ್ಕಳೆ ನಿಮಗೆ ಜೀವ ಸಹಿತಿ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ

ಶಹಾಪೂರ ಪೊಲೀಸ್ ಠಾಣೆ :- 117/2021 ಕಲಂ 32,34 ಕೆ.ಇ. ಆಕ್ಟ ಮತ್ತು 188 ಐ.ಪಿ.ಸಿ. : ದಿನಾಂಕ: 02-06-2021 ರಂದು 12:00 ಪಿ.ಎಮ್.ಕ್ಕೆ ಆರೋಪಿತನು ತನ್ನ ಕಿರಾಣಿ ಅಂಗಡಿಯ ಮುಂದೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆ ಮಾಡಿದ್ದು ಅಲ್ಲದೇ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಸಂಗ್ರಹ ಮಾಡಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು ಮಾಹಿತಿ ಆಧಾರದ ಮೇಲಿಂದ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು ಆಗ ಆರೋಪಿತನು ಓಡಿ ಹೋಗಿದ್ದು ಸ್ಥಳದಸಲ್ಲಿ 2237=47 ಮೊತ್ತದ ಮದ್ಯದ ಬಾಟ್ಲಿಗಳು ಮತ್ತು ಪೌಚ ಗಳು ನ್ನು ವಶ ಪಡಿಸಿಕೊಂಡು ಠಾಣೆೆಗೆ ಬಂದು ವದಿ ಸಲ್ಲಿಸಿ ಆರೋಪಿತನ ಮೇಲೆ ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ವರದಿಯ ಸಾರಾಶದ ಮೇಲಿಂದ ಠಾಣೆ ಗುನ್ನೆ ನಂ. 117/2021 ಕಲಂ. 32, 34, ಕೆ.ಇ. ಆಕ್ಟ ಮತ್ತು 188 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಗೊಮಡಿದ್ದು ಇದೆ

ಶಹಾಪೂರ ಪೊಲೀಸ್ ಠಾಣೆ :- 118/2021.ಕಲಂ.15(ಎ), 32(3) ಕೆ.ಇ.ಯ್ಯಾಕ್ಟ : ಇಂದು ದಿನಾಂಕ 02/06/2021 ರಂದು 21-45 ಗಂಟೆಗೆ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ. ಸಾಹೇಬರು ಠಾಣೆಗೆ ಹಾಜರಾಗಿ ಒಂದು ಆರೋಪಿ ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಹಾಜರ ಪಡಿಸಿ ಒಂದು ವರದಿಯನ್ನು ಸಲ್ಲಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ: 02/06/2021 ರಂದು ಸಾಯಂಕಾಲ 18-30 ಗಂಟೆಗೆ ನಾನು ಹತ್ತಿಗುಡೂರ ಹತ್ತಿರ ಲಾಕ್ ಡೌನ ಪ್ರಯುಕ್ತವಾಗಿ ಕರ್ತವ್ಯದ ಮೇಲೆ ಇದ್ದಾಗ, ನನಗೆ ಬಂದ ಮಾಹಿತಿ ಏನೆಂದರೆ ಬೇವಿನಳ್ಳಿ ಕ್ರಾಸನಲ್ಲಿರುವ ಹೋಟೆಲ್ ಒಂದರ ಪಕ್ಕದಲ್ಲಿ ಮದ್ಯವನ್ನು ಇಟ್ಟುಕೊಂಡು ಜನರಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಮಾಹಿತಿಯನ್ನು ಠಾಣೆಯ ಸಿಬ್ಬಂದಿಯಾದ ಶ್ರೀ ನಾರಾಯಣ ಹೆಚ್ಸಿ-49, ಶ್ರೀ ಮುತ್ತಪ್ಪ ಸಿಪಿಸಿ-118, ಶ್ರೀ ನಿಂಗಪ್ಪ ಸಿಪಿಸಿ 284 ರವರಿಗೆ ಮಾಹಿತಿ ವಿಷಯ ತಿಳಿಸಿ ನಾನು ಬರುತ್ತೇನೆ ನೀವು ಸ್ಥಳಕ್ಕೆ ಹೋಗಿ ಪರಿಶೀಲಿಸಲು ತಿಳಿಸಿದೇನು. ಠಾಣೆಯ ಸರಕಾರಿ ಜೀಪ್ ನಂ. ಕೆಎ-33 ಜಿ-0316 ನೇದ್ದರ ಚಾಲಕ ನಾಗರೆಡ್ಡಿ ಎಹೆಚ್ಸಿ-25 ರವರಿಗೆ ಮಾಹಿತಿ ತಿಳಿಸಿದೇನು.ನಂತರ 07-00 ಗಂಟೆಗೆ ಸಮಯದಲ್ಲಿ ಸಿಬ್ಬಂದಿಯವರು ಮಾಹಿತಿ ತಿಳಿಸಿದ್ದೇನೆಂದರೆ, ಸದರಿ ಹೋಟೆಲ್ ಪಕ್ಕದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ನೀಡಿರುವುದಾಗಿ ತಾವು ಬರುತ್ತಲ್ಲೆ ಮದ್ಯಪಾನ ಮಾಡುತ್ತಿರುವ ಜನರು ಓಡಿ ಹೋಗಿದ್ದಾಗಿ ಮತ್ತು ಮದ್ಯದ ಬಾಟಲ್, ಟಿನ್ ಮತ್ತು ಪಾಕೇಟ್ಗಳು ಸಿಕ್ಕಿದ್ದು. ಮದ್ಯ ಕುಡಿಯಲು ಅನೂಕೂಲ ಮಾಡಿಕೊಡುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಇರುತ್ತದೆ ಅಂತಾ ತಿಳಿಸಿದರು.ನಂತರ ನಾನು ಸದರಿ ಸ್ಥಳಕ್ಕೆ 19-30 ಕ್ಕೆ ಬೇಟಿ ನೀಡಿ ಪರಿಶೀಲಿಸಲಾಗಿ ಬೇವಿನಳ್ಳಿ ಕ್ರಾಸದಲ್ಲಿ ಹೋಟೆಲ್ ಪಕ್ಕದಲ್ಲಿ ಮದ್ಯದ ಬಾಟಲ್, ಟಿನ್ ಮತ್ತು ಪಾಕೇಟ್ಗಳು ಸಿಕ್ಕಿದ್ದು ಮದ್ಯ ಕುಡಿಯಲು ಅನೂಕೂಲ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡಿದ್ದು ಮತ್ತು ನಮ್ಮ ಸಿಬ್ಬಂದಿಯವರಾದ ಶ್ರೀ ನಾರಾಯಣ ಹೆಚ್ಸಿ-49, ಶ್ರೀ ಮುತ್ತಪ್ಪ ಸಿಪಿಸಿ-118, ಶ್ರೀ ನಿಂಗಪ್ಪ ಸಿಪಿಸಿ 284 ರವರು ಹಾಜರಿದ್ದು ತಾವು ಬರುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಜನರು ಸ್ತಳದಿಂದ ಓಡಿ ಹೋದ ಬಗ್ಗೆ ತಿಳಿಸಿದರು. ನಂತರ 19-40 ಗಂಟೆಗೆ ಅಲ್ಲೆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳಾದ 1] ಶ್ರೀ ವಿಜಕುಮಾರ ತಂದೆ ಬಸವರಾಜ ಕಾಟಮನಹಳ್ಳಿ ವ|| 30 ಜಾ|| ಬೇಡರ ಉ|| ಚಾಲಕ ಸಾ|| ಹಳಿಸಗರ ಶಹಾಪೂರ. 2] ಶರಣಪ್ಪ ತಂದೆ ಯಂಕಪ್ಪ ಒದರಬಾಯಿ ವ|| 24 ಜಾ|| ಬೇಡರ ಉ|| ಒಕ್ಕಲುತನ ಸಾ|| ಹಳಿಸಗರ ಶಹಾಪೂರ. ರವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಮ್ಮ ಜೋತೆಯಲ್ಲಿ ಇದ್ದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.ಪಂಚರ ಸಮಕ್ಷಮದಲ್ಲಿ 19-50 ಗಂಟೆಗೆ ಮದ್ಯ ಕುಡಿಯಲು ಅನುವು ಮಾಡಿಕೊಟ್ಟ ವ್ಯಕ್ತಿ ಸಿಕ್ಕಿದ್ದವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಹಣಮಂತ ತಂದೆ ಯಲ್ಲಪ್ಪ ಹೆಳವರ ವಯಾ:28 ವರ್ಷ ಜಾ: ಹೆಳವರು ಉ: ಹೋಟೆಲ್ ಕೆಲಸ ಸಾ: ಹಳಿಸಗರ ಅಂತ ತಿಳಿಸಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿಯವನಿಗೆ ವಿಚಾರಣೆ ಮಾಡಲಾಗಿ ಬೇವಿನಳ್ಳಿ ಕ್ರಾಸ್ ಹತ್ತಿರ ತನ್ನ ಹೋಟೆಲ್ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಲಾಗಿ ಸದರಿಯವನು ಯಾವದೆ ದಾಖಲಾತಿಗಳು ಹೊಂದಿರುವದಿಲ್ಲ ಅಂತ ಹೇಳಿದನು. ಆಗ ನಾನು ಪಂಚರ ಸಮಕ್ಷಮದಲ್ಲಿ ಸದರಿ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 1] 650 ಎಂ.ಎಲ್.ನ ಒಟ್ಟು 03 ಕಿಂಗಫಿಶರನ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ ಬಾಟಲ್ಗಳು ಇದ್ದು ಒಂದು ಬಾಟಲ್ನ ಕಿಮ್ಮತ್ತು 150/- ರೂ ಅಂತಾ ಇದ್ದು, ಒಟ್ಟು 03 ಕಿಂಗಫಿಶರನ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ ಬಾಟಲ್ಗಳು ಕಿಮ್ಮತ್ತು 450/- ರೂ ಗಳಾಗುತ್ತಿದ್ದು, 2] 330 ಎಂ.ಎಲ್.ನ ಒಟ್ಟು 05 ಕಿಂಗಫಿಶರನ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ ಟಿನ್ಗಳು ಇದ್ದು ಒಂದು ಟಿನ್ ಕಿಮ್ಮತ್ತು 85/- ರೂ ಅಂತಾ ಇದ್ದು, ಒಟ್ಟು 05 ಕಿಂಗಫಿಶರನ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ ಟಿನ್ಗಳು ಕಿಮ್ಮತ್ತು 425/- ರೂ ಗಳಾಗುತ್ತಿದ್ದು 3] 180 ಎಂ.ಎಲ್.ನ ಒಟ್ಟು 10 ಓಲ್ಡ ಟವೇರಾ ವಿಸ್ಕಿ ಪೌಚ್ಗಳು ಇದ್ದು ಒಂದು ಪೌಚಿನ ಕಿಮ್ಮತ್ತು 86.75/- ರೂ ಅಂತಾ ಇದ್ದು, ಒಟ್ಟು 10 ಓಲ್ಡ ಟವೇರಾ ವಿಸ್ಕಿ ಪೌಚ್ಗಳ ಕಿಮ್ಮತ್ತು 867.5/- ರೂ ಗಳಾಗುತ್ತಿದ್ದು 4] 4 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಇದ್ದು ಮದ್ಯಕುಡಿಯಲು ಉಪಯೋಗಿಸಿದಂತೆ ಕಂಡುಬಂದಿದ್ದು ಅ:ಕಿ: 00=00 ರೂ 5] ಮದ್ಯ ಕುಡಿಯಲು ಉಪಯೋಗಿಸಿದ 180 ಎಂ.ಎಲ್.ನ 02 ಖಾಲಿ ಓಲ್ಡ ಟವೇರಾ ವಿಸ್ಕಿ ಪೌಚ್ಗಳು ಇದ್ದವು. ಅ:ಕಿ: 00=00 ರೂ, ಈ ಮೇಲ್ಕಂಡವುಗಳಲ್ಲಿ ಸ್ಯಾಂಪಲ್ ಕುರಿತು 1] 650 ಎಂ.ಎಲ್.ನ 01 ಕಿಂಗಫಿಶರನ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ ಬಾಟಲ್ 2] 330 ಎಂ.ಎಲ್.ನ 01 ಕಿಂಗಫಿಶರನ ಸ್ಟ್ರಾಂಗ್ ಪ್ರೀಮಿಯಮ್ ಬೀಯರ್ ಟಿನ್ 3] 180 ಎಂ.ಎಲ್.ನ 01 ಓಲ್ಟಡ್ ತವೇರಾ ವಿಸ್ಕಿ ಪೌಚ್ ಪಂಚರ ಸಮಕ್ಷಮದಲ್ಲಿ ಪ್ರತೇಕವಾಗಿ ಎಫ್.ಎಸ್.ಎಲ್ ಪರೀಕ್ಷೆ ಕುರಿತು ಕಳುಹಿಸುವ ಸಲುವಾಗಿ ಪ್ರತೇಕವಾಗಿ ಒಂದೋದು ಬಿಳಿಯ ಬಟ್ಟೆ ಚೀಲದಲ್ಲಿ ಹಾಕಿ ಹೊಲೆದು ಖಊಕ ಅಂತಾ ಇಂಗ್ಲೀಷ ಅಕ್ಷರದ ಅರಗಿನ ಶೀಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದನಿಶಾನೆಯುಳ್ಳ ಚೀಟಿ ಅಂಟಿಸಿ ಇನ್ನೂಳಿದ ಮುದ್ದೆಮಾಲುಗಳನ್ನು ತಾಬೆಗೆ ತೆಗದುಕೊಂಡು. ಸದರಿ ಜಪ್ತಿ ಪಂಚನಾಮೆಯನ್ನು 19-50 ಗಂಟೆಯಿಂದ 20-50 ಗಂಟೆಯವರೆಗೆೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡೆನು. ಮತ್ತು ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮರಳಿ ಠಾಣೆಗೆ 21-05 ಗಂಟೆಗೆ ಬಂದು ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಆರೋಪಿತನ ವಿರುದ್ಧ ವರದಿಯನ್ನು ತಯಾರಿಸಿ ಒಬ್ಬ ಆರೋಪಿ ಮತ್ತು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರುಪಡಿಸಿ 21-45 ಗಂಟೆಗೆ ಮುಂದಿನ ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 118/2021 ಕಲಂ 15(ಎ) 32( 3) ಕೆ.ಇ.ಯಾಕ್ಟ ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ:- 97/2021 ಕಲಂ:143, 147, 148, 323, 324, 326, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕಃ 02/06/2021 ರಂದು 2:00 ಪಿ.ಎಂ ಕ್ಕೆ ಕ್ಕೆ ಶ್ರೀಮತಿ ಕವಿತಾಗಂಡ ಮಾನಪ್ಪಕವಡಿಮಟ್ಟಿ ವ|| 37 ವರ್ಷಜಾ|| ಮಾದಿಗ ಉ|| ಮನೆಗೆಲಸ ಸಾ|| ಜಾಲಗಾರಓಣಿ ಸುರಪುರತಾ|| ಸುರಪುರಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನಗೆ ಮೂರುಜನ ಮಕ್ಕಳಿದ್ದು, ಇಬ್ಬರುಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಇರುತ್ತಾಳೆ. ನಮ್ಮ ಮನೆಯ ಬಾಜು ಮನೆಯವರಾದ ಹುಲಗಪ್ಪತಂದೆ ಹಣಮಂತ ಬೊಂಬಾಯಿ ಇವರು ನಮ್ಮಜೊತೆ ಮನೆಯದಾರಿಯ ವಿಷಯವಾಗಿ ಆಗಾಗ ನಮ್ಮಜೊತೆ ಜಗಳ ಮಾಡುತ್ತಾ ಬಂದಿರುತ್ತಾರೆ. ನಾವು ಸರಿ ಹೊಗಬಹುದುಅಂತಾ ಸುಮ್ಮನಿದ್ದೇವು. ಇಂದು ದಿನಾಂಕ:02/06/2021 ರಂದು ಮುಂಜಾನೆ 09:00 ಗಂಟೆ ಸುಮಾರಿಗೆ ಭೀಮಣ್ಣತಂದೆಯಲ್ಲಪ್ಪ ತೇಕರಾಳ ಸಾ|| ಬೊಮ್ಮನಳ್ಳಿ ಇವರ ಮನೆಯಲ್ಲಿ ಮದುವೆಇದ್ದುದರಿಂದ ನಮ್ಮ ಮನೆಗೆ ಅಕ್ಕಿಕಾಳ ಕೊಡುವದಕ್ಕಾಗಿ ಹುಲಗಪ್ಪ ಬೊಂಬಾಯಿ ಇವರ ಮನೆಯ ಮುಂದೆ ಹಾದು ಬಂದಿದ್ದರಿಂದಅವರ ಮನೆಗೆ ಹೊಗ ಬೇಕಾದರೆಇಲ್ಲಿದಾರಿಇರುವದಿಲ್ಲ ಅಂತಾ ಹೇಳುತ್ತಿದ್ದಾಗ ಭೀಮಣ್ಣ ತೆಕರಾಳ ಇವರು ನನಗೆ ಗೊತ್ತಾಗಿರುವದಿಲ್ಲ ಅಂತಾ ಹೇಳಿ ಹೊದನು. ಹಿಗಿದ್ದು ದಿನಾಂಕ:02/06/2021 ರಂದು ಮುಂಜಾನೆ 9:30 ಗಂಟೆಗೆ ನಾನು ಮತ್ತು ನನ್ನಗಂಡ ಮಾನಪ್ಪ, ಮಕ್ಕಳಾದ ಸಾಗರ, ಸುಸ್ಮಿತಾ, ಸತೀಶಎಲ್ಲರು ನಮ್ಮ ಮನೆಯಲ್ಲಿದ್ದಾಗ, ನಮ್ಮಜನಾಂಗದ ಬಾಜು ಮನೆಯವರಾದ 1) ಹುಲಗಪ್ಪತಂದೆ ಹಣಮಂತ ಬೊಂಬಾಯಿ, 2) ನಾಗಪ್ಪತಂದೆ ಹಣಮಂತ ಬೊಂಬಾಯಿ, 3) ಪರಮಣ್ಣತಂದೆರಾಮಣ್ಣ ಅರಳಹಳ್ಳಿ, 4) ಮಲ್ಲಮ್ಮಗಂಡ ಹಣಮಂತ ಬೊಂಬಾಯಿ, 5) ಹುಲಗಮ್ಮಗಂಡ ಪರಮಣ್ಣ ಅರಳಹಳ್ಳಿ, 6) ಪ್ರೇಮಾತಂದೆ ಹಣಮಂತ ಬೊಂಬಾಯಿ, 7) ಕಾವೇರಿತಂದೆ ಪರಮಣ್ಣ ಅರಳಹಳ್ಳಿ ಎಲ್ಲರುಅಕ್ರಮಕೂಟ್ ರಚಿಸಿಕೊಂಡು ಕೂಡಿತಮ್ಮಕೈಯಲ್ಲಿ ಬಿಡಿಗೆಕಲ್ಲು ಹಿಡಿದುಕೊಂಡು ಬಂದವರೆ ಹುಲಗಪ್ಪಇತನು ಏನಲೇ ಮಾನೆ ಸೂಳೆ ಮಗನೆ ನಿಮ್ಮ ಮನೆಗೆ ಬರುವವರು ನಮ್ಮ ಮನೆಯ ಮುಂದೆಯಾಕೆ ಬರುತ್ತಾರೆಅಂತಾಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನಗಂಡನುಅವರುಎಲ್ಲಿಂದ ಬಂದಿದ್ದು ನಮಗೆ ಗೊತ್ತಿಲ್ಲಅಂತಾಅನ್ನುತ್ತಿರುವಾಗ ಹುಲಗಪ್ಪಇತನು ನನ್ನಗಂಡಎದೆಯ ಮೇಲಿನ ಅಂಗಿ ಹಿಡಿದು ಹೊಟ್ಟೆಗೆ ಬೆನ್ನಿಗೆ ಹೊಡೆದುಗುಪ್ತಗಾಯ, ನಾಗಪ್ಪ ಬೊಂಬಾಯಿ ಇತನುತನ್ನಕೈಯಲ್ಲಿದ್ದ ಬಡಿಗೆಯಿಂದ ನನ್ನಗಂಡನತಲೆಗೆ ಹೊಡೆದು ಭಾರಿರಕ್ತಗಾಯ ಮಾಡಿದನು. ನಾನು ಬಿಡಿಸಲು ಹೊದಾಗ ಪರಮಣ್ಣ ಅರಳಹಳ್ಳಿ ಇತನು ನನ್ನಎಡಗೈಒತ್ತಿ ಹಿಡಿದುತಿರುವುಗುಪ್ತಗಾಯ ಹಾಗೂ ನನ್ನಎದೆಯ ಮೆಲಿನ ವೇಲ್ ಹಿಡಿದುಜೊಗ್ಗಾಡಿಅವಮಾನ ಮಾಡಿದನು. ಮಲ್ಲಮ್ಮ ಇವಳು ನನಗೆ ಕೈಯಿಂದ ಬೆನ್ನಿಗೆ ಹೊಟೆಗೆ ಹೊಡೆದುಗುಪ್ತಗಾಯ, ಮತ್ತುಗುಂಡಮ್ಮ ಇವಳು ಬಡಿಗೆಯಿಂದ ಸೊಂಟಕ್ಕೆ ಹೊಡೆದುಗುಪ್ತಗಾಯ ಮಾಡಿದಳು. ನನ್ನ ಮಗ ಸಾಗರಇತನಿಗೆ ಪ್ರೇಮಾ ಮತ್ತುಕಾವೇರಿಇಬ್ಬರುಕೈಯಿಂದ ಕಪಾಳಕ್ಕೆ ಎದೆಗೆ ಹೊಟ್ಟೆಗೆ ಹೊಡೆದುಗುಪ್ತಗಾಯ ಮಾಡಿದರು. ಅಲ್ಲೆ ಹೊರಟಿದ್ದ ಶರಣಪ್ಪತಂದೆ ಅಮಲಪ್ಪತೊಟದ, ಮಾಂತೇಶತಂದೆದುರ್ಗಪ್ಪ ಬೊಮ್ಮನಳ್ಳಿ ಇವರುಗಳು ಬಂದು ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರೂಇವತ್ತುಜನರು ಬಂದು ಬಿಡಿಸಿದ್ದಕ್ಕೆ ಉಳಿದಿದ್ದೀರಿ ಮಕ್ಕಳೇ, ನಿಮ್ಮ ಮನೆಯಲ್ಲಿಒಬ್ಬರಿಗಾದರೂ ಖಲಾಸ ಮಾಡುವತನಕ ಬಿಡುವದಿಲ್ಲ ಅಂತಜೀವದ ಬೆದರಿಕೆ ಹಾಕಿ ಹೋದರು. ನಾನು ಮತ್ತು ನನ್ನಗಂಡ ಮಾನಪ್ಪ, ನನ್ನ ಮಗ ಸಾಗರ ಮೂವರುಒಂದು ಖಾಸಗಿ ವಾಹನದಲ್ಲಿ ಸರಕಾರಿಆಸ್ಪತ್ರೆ ಸುರಪುರಕ್ಕೆ ಹೊಗಿ ಚಿಕಿತ್ಸೆ ಪಡೆದುಕೊಂಡು ನಾನು ಠಾಣೆಗೆ ಬಂದುದೂರುಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ನನ್ನಗಂಡ ಮಾನಪ್ಪ, ನನ್ನ ಮಗ ಸಾಗರಎಲ್ಲರಿಗೂ ಹೊಡೆ ಬಡೆ ಮಾಡಿ ಅವಮನಾನ ಮಾಡಿಜೀವದ ಬೇದರಿಕೆ ಹಾಕಿದ ಮೇಲೆ ಹೇಳಿದ ಏಳು ಜನರ ಮೇಲೆ ಕಾನೂನು ಕ್ರಮಜರುಗಿಸಲು ಮಾನ್ಯರವರಲ್ಲಿ ವಿನಂತಿಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ97/2021 ಕಲಂ:143, 147, 148, 323, 324, 326, 354, 504, 506 ಸಂಗಡ 149 ಐಪಿಸಿಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

Last Updated: 03-06-2021 01:33 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080