Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04/03/2021

ಯಾದಗಿರಿ ನಗರ ಪೊಲೀಸ್ ಠಾಣೆ:- ಗುನ್ನೆ ನಂ.28/2021 ಕಲಂ.323,392,308,504,506 ಸಂ.34 ಐಪಿಸಿ ಮತ್ತು ಕಲಂ. 3(1)rs, 3(2)(va)  sc/st Pa Act-1989: ಇಂದು ದಿನಾಂಕ:03/03/2021 ರಂದು 7-45 ಪಿಎಂಕ್ಕೆ ಅಜರ್ಿದಾರರಾದ ಶ್ರೀ ಕೃಷ್ಣ ತಂ. ಭೀಮು ರಾಠೋಡ ವಃ 30 ಜಾಃ ಲಂಬಾಣಿ ಉಃ ಲಕ್ಕಿ ಬಾರನಲ್ಲಿ ಸಹಾಯಕ ಮ್ಯಾನೇಜರ ಸಾಃ ಗಾಂದಿ ನಗರ ಯದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಅಜಿಯನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ, ದಿನಾಂಕ: 25/02/2021 ರಂದು ನಾನು ಲಕ್ಕಿ ಬಾರನಲ್ಲಿ ಕೆಲಸದಲ್ಲಿದ್ದಾಗ ರಾತ್ರಿ 8-00 ಗಂಟೆ ಸುಮಾರಿಗೆ ನಮಗೆ ಅಪರಿಚಯಸ್ಥರಾದ ರವಿಕುಮಾರ ತಂ. ಶ್ರೀನಿವಾಸ, ಸುಬಾಷ ತಂ. ಬಾನು ಚವ್ಹಾಣ, ಬ್ರಹ್ಮನಂದರೆಡ್ಡಿ ತಂ. ಬಸವರಾಜ ದೇಸಾಯಿ, ಹಾಗೂ ಮಹಮ್ಮದ ಅಮೀರೊದ್ದಿನ್ ತಂ. ಮಹಮ್ಮದ ಜಾಹೀರುದ್ದಿನ್ ಇವರು ನಮ್ಮ ಲಕ್ಕಿ ಬಾರ್ಗೆ ಬಂದು ನಮ್ಮ ಮಾಲಿಕರಾದ ರಾಘವೇಂದ್ರ ಇವರೊಂದಿಗೆ ಟೈಲ್ಸನ ಹಣ ಕೊಡು ಎಂದು ಜಗಳ ಮಾಡುತ್ತಿದ್ದು ನಮ್ಮ ಮಾಲಿಕರು ನಾಳೆ ಕೊಡುತ್ತೇವೆ ಈಗ ಬಂದವರು ಹೋಗಿ ಎಂದು ಕೇಳದೆ ಅವರ ಮೇಲೆ ಹಲ್ಲೆ ಮಾಡಿ ಅವರ ಕೊರಳಲ್ಲಿದ್ದ ಅಂದಾಜು 5 ತೊಲೆ ಬಂಗಾರದ ಚೈನ್ ಹಾಗೂ ಕಂಟರದಲ್ಲಿದ್ದ 21 ಸಾವಿರ ರೂ ಹಾಗೂ ಅವರ ಟೇಬಲ್ ಮೆಲೆ ಇಟ್ಟಿದ್ದ ಮೋಬೈಲ್ ತೆಗೆದುಕೊಂಡಿದ್ದು ಆಗ ನಮ್ಮ ಮಾಲಿಕರು ಅದಕ್ಕೆ ವಿರೋಧ ಮಾಡಿದಾಗ ರವಿಕುಮಾರ ನಮ್ಮ ಮಾಲಿಕನ ಮೈಮೆಲಿನ ಅಂಗಿ ಹಿಡಿದು ಜೀವಕ್ಕೆ ಅಪಾಯವಾಗುತ್ತದೆ ಅಂತಾ ಗೊತ್ತಿದ್ದರೂ ಕೂಡ ಅವರ ಗುಪ್ತಾಂಗಕ್ಕೆ ಕಾಲಿನಿಂದ ಒದ್ದಿದ್ದು ಆಗ ನಾನು ಮಧ್ಯ ಪ್ರವೇಶ ಮಾಡಿದಾಗ ನನಗೆ ಲೇ ಲಮಾಣಿ ಸೂಳೆ ಮಗನೇ ಈ ಮಾಲಿಕನಿಗಿಂತ ಇಲ್ಲಿ ನಿನ್ನದೆ ಬಹಳ ಆಗಿದೆ ಅಂತ ಮೇಲ್ಕಂಡ ಎಲ್ಲರೂ ನನಗೆ ಜಾತಿ ನಿಂಧನೆ ಮಾಡಿ ಕೈಗಳಿಂದ ಹೊಡೆ ಮಾಡಿದ್ದು ಇರುತ್ತದೆ. ಆಗ ಅಲ್ಲಿಯೇ ಇದ್ದ ಸಾಬಣ್ಣ ತಂ. ನರಸಪ್ಪ ಬಾಗಲಿ, ರಾಘವೇಂದ್ರ ರೆಡ್ಡಿ ತಂ. ಭಿಮರೆಡ್ಡಿ ಇವರು ಜಗಳವನ್ನು ಬಡಿಸಿದ್ದು ಇರುತ್ತದೆ. ರವಿಕುಮಾರ ಈತನು ಕಾಲಿನಿಂದ ನಮ್ಮ ಮಾಲಿಕನ ಗುಪ್ತಾಂಗಕ್ಕೆ ಒದ್ದು ಗುಪ್ತಗಾಯ ಪಡಿಸಿದ್ದು ಅಲ್ಲದೆ ನಮ್ಮ ಮಾಲಿಕನ ಕೊರಳಿಗೆ ಕೈ ಹಾಕಿ ಅವರ ಕೊರಳಲ್ಲಿನ 5 ತೊಲೆ ಚೈನ್ ಕಿತ್ತುಕೊಂಡಿದ್ದು, ಸುಭಾಷ ಈತನು ನಮ್ಮ ಮಾಲಿಕರ ಮೋಬೈಲ್ ತೆಗೆದುಕೊಂಡಿದ್ದು, ಅಮೀರೊದ್ದಿನ್ ಇತನು ಕೌಂಟರನಲ್ಲಿರುವ ಅಂದಾ ಜು 21 ಸಾವಿರ ರೂ ಗಳನ್ನು ದೋಚಿಕೊಂಡು ಹೋಗಿದ್ದು, ಬ್ರಹ್ಮನಂದರೆಡ್ಡಿ ಇತನು ಅವಾಚ್ಯ ಶಬ್ದಗಳಿಂದ ಚೀರಾಡುತ್ತಾ ಈ ಸೂಳೆ ಮಕ್ಕಳಿಗೆ ಇವತ್ತು ಖಲಾಸ ಮಾಡಬೇಕು ಅಂತಾ ಬೈದಾಡಿದ್ದು ಇರುತ್ತದೆ. ನಮ್ಮ ಮಾಲಿಕನ ಗುಪ್ತಾಂಗಕ್ಕೆ ಗುಪ್ತ ಗಾಯ ಆಗಿರುವುದರಿಂದ ಅವರು ಚೇತರಿಸಿಕೊಂಡು ಈ ದಿನ ನನಗೆ ಠಾಣೆಗೆ ಹೊಗಿ ದೂರು ಕೊಡಲು ತಿಳಿಸಿದ್ದರಿಂದ ಈ ದೂರು ಕೊಡಲು ವಿಳಂಭವಾಗಿರುತ್ತದೆ. ಇದರೊಂದಿಗೆ ಘಟನೆ ನಡೆದ ಬಗ್ಗೆ ಸಿಸಿ ದೃಶ್ಯವಳಿಗಳನ್ನು ಸೆರೆ ಹಿಡಿಯಲಾದ ಸಿಡಿ ಯನ್ನು ಲಗತ್ತಿಸಿದ್ದು, ಕಾರಣ ಈ ಮೇಲ್ಕಂಡ ಜನರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ತಮ್ಮಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.28/2021 ಕಲಂ.323,392,308,504,506,ಸಂ.34 ಐಪಿಸಿ ಮತ್ತು 3(1)ಡಿ, 3(2)(ತಚಿ) ಛಿ/ಣ ಕಚಿ ಂಛಿಣ-1989 ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ.:- 29/2021 ಕಲಂ: 279, 338 ಐಪಿಸಿ: ಇಂದು ದಿನಾಂಕ:03/03/2021 ರಂದು 7 ಪಿಎಮ್ ಕ್ಕೆ ಶ್ರೀ ಬಾಪುಗೌಡ ತಂದೆ ಅಯ್ಯಣ್ಣಗೌಡ ಕೋಡಮನಹಳ್ಳಿ, ವ:37, ಉ:ಸಿವ್ಹಿಲ್ ಪೊಲೀಸ್ ಕಾನ್ಸಟೇಬಲ್ ಸಂ. 189 ಗೋಗಿ ಪೊಲೀಸ್ ಠಾಣೆ ಸಾ:ಬಿಳವಾರ ತಾ:ಜೇವಗರ್ಿ ಜಿ:ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ದಿನಾಂಕ: 10/11/2020 ರಿಂದ ಗೋಗಿ ಪೊಲೀಸ್ ಠಾಣೆಯಲ್ಲಿ ಸಿವ್ಹಿಲ್ ಪೊಲೀಸ್ ಕಾನ್ಸಟೇಬಲ್ ಎಂದು ಕೆಲಸ ಮಾಡಿಕೊಂಡಿರುತ್ತೇನೆ. ನನಗೆ ಪಿ.ಎಸ್.ಐ ಗೋಗಿ ರವರು ಠಾಣೆಯಲ್ಲಿ ಸರಕಾರಿ ಜೀಪ್ ನಂ. ಕೆಎ 33 ಜಿ 0160 ನೇದ್ದರ ಚಾಲಕ ಕರ್ತವ್ಯಕ್ಕೆ ನೇಮಕ ಮಾಡಿದ ಪ್ರಕಾರ ನಾನು ಜೀಪ್ ಚಾಲಕ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದೇನೆ. ಹೀಗಿದ್ದು ಇಂದು ದಿನಾಂಕ: 03/03/2021 ರಂದು ಯಾದಗಿರಿ ಜಿಲ್ಲಾ ಪೊಲೀಸ್ ಕ್ರಿಡಾಂಗಣದಲ್ಲಿ ವಾಷರ್ೀಕ ಕ್ರೀಡಾಕೂಟದ ರಿಹರ್ಸಲ್ ಇದ್ದುದ್ದರಿಂದ ನಮ್ಮ ಪಿ.ಎಸ್.ಐ ಸಾಹೇಬರಿಗೆ ಕರೆದುಕೊಂಡು ಸರಕಾರಿ ಜೀಪ್ ನಂ. ಕೆಎ 33 ಜಿ 0160 ನೇದ್ದರಲ್ಲಿ ಯಾದಗಿರಿಗೆ ಬಂದು ರಿಹರ್ಸಲ್ ಮುಗಿಸಿಕೊಂಡು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ಲಕ್ಕಪ್ಪ ಪಿಸಿ 198 ಗೋಗಿ ಪೊಲೀಸ್ ಠಾಣೆ, ಹಣಮಂತ್ರಾಯ ಪಿಸಿ 136 ಗೋಗಿ ಪೊಲೀಸ್ ಠಾಣೆ, ಸಿದ್ದವೀರ ಹೆಚ್.ಸಿ 167 ಶಹಾಪೂರ ಪೊಲೀಸ್ ಠಾಣೆ, ವಿರೇಶ ಪಿಸಿ 401 ಶಹಾಪೂರ ಪೊಲೀಸ್ ಠಾಣೆ, ಗುರುಶೇಖರ ಪಿಸಿ 186 ಶಹಾಪೂರ ಪೊಲೀಸ್ ಠಾಣೆ ಎಲ್ಲರೂ ಸೇರಿ ಸಾಯಂಕಾಲ ಮರಳಿ ಕೇಂದ್ರಸ್ಥಾನಕ್ಕೆ ಹೊರಟೇವು. ಯಾದಗಿರಿ-ಶಹಾಪೂರ ಮೇನ ರೋಡ ಲಿಟಲ್ ರಾಕ ಪಬ್ಲಿಕ ಸ್ಕೂಲ್ ಹತ್ತಿರ ಸಾಯಂಕಾಲ 6-30 ಗಂಟೆ ಸುಮಾರಿಗೆ ನಮ್ಮ ಪಾಡಿಗೆ ನಾವು ಹೊರಟಾಗ ಎದರುಗಡೆಯಿಂದ ಒಬ್ಬ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ ನಂ. ಕೆಎ 33 ಹೆಚ್ 0724 ನೇದ್ದರ ಸವಾರನು ತನ್ನ ಮೋಟರ್ ಸೈಕಲ್ ಅನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ತನ್ನ ಮುಂದೆ ಹೋಗುತ್ತಿದ್ದ ಯಾವುದೋ ಒಂದು ಕಾರಿಗೆ ಓವರಟೇಕ್ ಮಾಡಿಕೊಂಡು ವೇಗವಾಗಿ ಬಂದವನೆ ನಮ್ಮ ಜೀಪಿಗೆ ಬಲ ಸೈಡಿಗೆ ಡಿಕ್ಕಿಪಡಿಸಿ ಮೋಟರ್ ಸೈಕಲ್ ಸಮೇತ ಬಿದ್ದುಬಿಟ್ಟನು. ಕೂಡಲೇ ನಾವು ಜೀಪ್ ನಿಲ್ಲಿಸಿ, ಎಲ್ಲರೂ ಕೆಳಗಡೆ ಹೋಗಿ ಇಳಿದು ನೋಡಲಾಗಿ ಮೋಟರ್ ಸೈಕಲ್ ಸವಾರನಿಗೆ ಎಡ ತೆಲೆಗೆ ಭಾರಿ ರಕ್ತಗಾಯ, ಬಲ ಮೊಳ ಕೈ ರಟ್ಟೆಯು ಮುರಿದಿತ್ತು. ಬಲ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದಿತ್ತು. ಆಗ 112 ಇಆರ್ಎಸ್ಎಸ್ ವಾಹನ ಬಂದಿದ್ದು, ಗಾಯಾಳುವನ್ನು ಕೂಡಲೇ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಸದರಿ ಮೋಟರ್ ಸೈಕಲ್ ಸವಾರನು ಅಪರಿಚಿತನಿದ್ದು, ಗುರತು ಸಿಕ್ಕಿರುವುದಿಲ್ಲ. ಕಾರಣ ಸದರಿ ಅಪರಿಚಿತ ಮೋಟರ್ ಸೈಕಲ್ ಸವಾರನು ತನ್ನ ಮೋಟರ್ ಸೈಕಲ್ ನಂ. ಕೆಎ 33 ಹೆಚ್ 0724 ನೇದ್ದನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಜೀಪಿಗೆ ಡಿಕ್ಕಿಪಡಿಸಿ, ಭಾರಿ ಗಾಯಗೊಂಡಿರುತ್ತಾನೆ. ಆದ್ದರಿಂದ ಸದರಿ ಮೋಟರ್ ಸೈಕಲ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 29/2021 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಸದರಿ ಪ್ರಕರಣದ ಗಾಯಾಳು ಮೋಟರ್ ಸೈಕಲ್ ನಂ:ಕೆಎ-33 ಹೆಚ್-0724 ನೇದ್ದರ ಸವಾರನು ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:03/03/2021 ರಂದು 8:00 ಗಂಟೆಗೆ ಗಾಯಾಳುದಾರನು ಮೃತಪಟ್ಟ ಬಗ್ಗೆ ರಾತ್ರಿ 9:00 ಗಂಟೆಗೆ ನಿಸ್ತಂತು ಮೂಲಕ ಎಮ್.ಎಲ್.ಸಿ. ವಸೂಲಾಗಿದ್ದು, ಸದರಿ ಪ್ರಕರಣದ ಗಾಯಾಳುದಾರನು ಅಪಘಾತದಲ್ಲಿ ಭಾರಿಗಾಯಗೊಂಡು ಮೃತಪಟ್ಟಿದ್ದರಿಂದ ಕಲಂ:304(ಎ) ಅಳವಡಿಸಿಕೊಂಡು ತನಿಖೆ ಕೈಗೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಲಾಗಿದೆ ಅಂತಾ ವಿನಂತಿ.

ಸೈದಾಪೂರ ಪೊಲೀಸ್ ಠಾಣೆ ಯಾದಗಿರಿ:- 36/2021, ಕಲಂ, 143, 147, 341, 323, 504, 506 ಸಂ.149 ಐ.ಪಿ.ಸಿ : ಇಂದು ದಿನಾಂಕ 03.03.2021 ರಂದು ಬೆಳಿಗ್ಗೆ 9.00 ಗಂಟೆಗೆ ಫಿಯರ್ಾದಿ ಶ್ರೀ ವಿಶ್ವನಾಥ ತಂದೆ ಅಭಿಮನ್ಯು ಯಾದವ ಸಾ|| ಬದ್ದೇಪಲ್ಲಿ ತಾ|| ಗುರುಮಠಕಲ ಜಿ|| ಯಾದಗಿರಿ. ಇವರು ಠಾಣೆಗೆ ಬಂದು ದೂರು ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ಫಿಯರ್ಾದಿ ದಿನಾಂಕ. 01.03.2021 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಮನೆಯಿಂದ ಹೊಲಕ್ಕೆ ಯಲ್ಲಮ್ಮದೇವಿ ದೇವಸ್ಥಾನ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ 6 ಜನ ಆರೋಪಿತರು ಫಿಯರ್ಾದಿಗೆ ಹೊಡೆಯಬೇಕೆಂಬ ಉದ್ದೇಶದಿಂದ ಎದೆ ಮೇಲಿನ ಅಂಗಿ ಹಿಡಿದು ಅಡ್ಡಗಟ್ಟಿ ನಿಲ್ಲಿಸಿ ಲೇ ಸೂಳೇ ಮಗನೇ ಎಲ್ಲಗೆ ಹೋಗುತ್ತೀ ಅಂದು ದಪ್ಪವಾದ ಬಡಿಗೆಯಿಂದ ಬಲವಾಗಿ ಹೊಡೆದು ಟ್ಯಾಕ್ಟರ ತೆಗೆದುಕೊಂಡು ಬಂದು ಗುದ್ದಿ ಖಲಾಸ ಮಾಡುತ್ತೇವೆ ಅಂತ ಜೀವ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
ಸೈದಾಪೂರ ಪೊಲೀಸ್ ಠಾಣೆ:- 37/2021 ಕಲಂ. 279 ಐಪಿಸಿ ಮತ್ತು 181, 184,190,196 ಐ.ಎಮ್.ವಿ ಆಕ್ಟ : ಇಂದು ದಿನಾಂಕ. 03.03.2021ರಂದು ಮಧ್ಯಾಹ್ನ 2-30 ಗಂಟೆಗೆ ಸ.ತಫರ್ೇ.ಶ್ರೀ ಭೀಮರಾಯ ಪಿ.ಎಸ್.ಐ ರವರು ಒಂದು ನೊಂದಣಿ ನಂಬರ ಇಲ್ಲದ ಅಪೇ ಕಂಪನಿ ಅಟೋ ಮತ್ತು ಚಾಲಕನನ್ನು ಠಾಣೆಗೆ ತಂದು ಹಾಜರಪಡಿಸಿ ಸದರಿ ಅಟೋ ಮತ್ತು ಚಾಲಕನ ವಿರುದ್ದ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಫಿಯರ್ಾದಿ ದಿನಾಂಕ.03.03.2021 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಪೆಟ್ರೋಲಿಂಗ ಕುರಿತು ತಮ್ಮ ಸಂಗಡ ತಿಮ್ಮಪ್ಪ ಎ.ಎಸ್.ಐ, ನೂರಂದ ಪಿಸಿ-368 ರವರನ್ನು ಕರೆದುಕೊಂಡು ಕರಿಬೆಟ್ಟ ಕ್ರಾಸ ಕಡೆಗೆ ಹೋದಾಗ ಸೈದಾಪೂರ ಕಡೆಯಿಂದ ಕಣೇಕಲ ಕಡೆಗೆ ಒಬ್ಬ ಅಟೋ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಹೈವೇ ರೋಡಿನ ಕಡೆಗೆ ಓಡಿಸಿಕೊಂಡು ಬಂದಿದ್ದು ಕೈ ಮಾಡಿದರು ನಿಲ್ಲಿಸದೆ ಓಡಿಸುತ್ತಿದ್ದಾಗ ತಡೆದು ನಿಲ್ಲಿಸಿ ಸದರಿಯವನ ಹೆಸರು, ವಿಳಾಸ ವಿಚಾರಿಸಿದ್ದು,ಸದರಿ ಅಟೋ ಚಾಲಕನು ತನ್ನ ವಾಹವನ್ನು ಅತಿವೇಗ ಮತ್ತು ಅಲಕ್ಷತನದಿಂದ ಮತ್ತು ಹೈವೇ ರೋಡಿನ ಮೇಲೆ ಅಪಾಯಕರ ರೀತಿಯಲ್ಲಿ ಚಲಾಯಿಸಿದ್ದು, ಅಟೋ ವಾಹನದ ಯಾವುದೇ ದಾಖಲಾತಿ ಹಾಜರಪಡಿಸದ ಕಾರಣ ಸದರಿ ಅಟೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ವರದಿ ಸಾರಾಂಶ ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:- 30/2021 ಕಲಂ ಮಹಿಳೆ ಕಾಣೆ : ಇಂದು ದಿನಾಂಕ 03.03.2021 ರಂದು 07.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಗೋಪಾಲ ತಂದೆ ಹಳ್ಳೆಪ್ಪ ಟಣಕೇದಾರ ವಯಸ್ಸು; 54 ಜಾತಿ: ಬೇಡರ ಉ: ಒಕ್ಕಲುತನ ಸಾ: ಮಲ್ಲಾ ತಾ|| ಸುರಪೂರ ರವರು ಕೊಟ್ಟ ಅಜರ್ಿ ಏನಂದರೆ ನನಗೆ ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿರುತ್ತಾನೆ. ಎಲ್ಲಾ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮಗಳಾದ ವಿಜಯಲಕ್ಷ್ಮೀ ಇವಳಿಗೆ ಸುಮಾರು 06 ವರ್ಷಗಳ ಹಿಂದೆ ಹದನೂರ ಗ್ರಾಮದ ಭೀಮಣ್ಣ ಜಮದಾರಖಾನಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ನಾಲ್ಕು ವರ್ಷಗಳ ಹಿಂದೆ ನನ್ನ ಅಳಿಯನಾದ ಭೀಮಣ್ಣ ಈತನು ತೀರಿಹೋಗಿದ್ದು ಸದರಿಯವಳಿಗೆ ನಾಲ್ಕು ವರ್ಷದ ದೇವಿಕಾ ಎನ್ನುವ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನನ್ನ ಅಳಿಯ ತೀರಿದಾಗಿನಿಂದ ಮಗಳಾದ ವಿಜಯಲಕ್ಷ್ಮೀ ಇವಳು ತನ್ನ ಮಗಳಾದ ಕುಮಾರಿ ದೇವಿಕಾ ಇವಳೊಂದಿಗೆ ನಮ್ಮ ಮನೆಯಲ್ಲಿಯೇ ವಾಸವಾಗಿದ್ದಳು. ಹೀಗಿದ್ದು ಸುಮಾರು ಎರಡು ತಿಂಗಳ ಹಿಂದೆ ಅಂದರೆ ದಿನಾಂಕ 05.01.2021 ರಂದು ಬೆಳಿಗ್ಗೆ 10 ಗಂಟೆಗೆ ಮಗಳಾದ ವಿಜಯಲಕ್ಷ್ಮೀ ಇವಳು ಗೌಡಗೇರಾ ಗ್ರಾಮದಲ್ಲಿ ದೇವತೆ ಜಾತ್ರೆ ಇರುವದರಿಂದ ಗೌಡಗೇರಾ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ಸದರಿ ಜಾತ್ರೆಗೆ ಹೋದವಳು, ಅಲ್ಲಿಯೂ ಮನೆಗೆ ಹೋಗದೇ ಮತ್ತು ನಮ್ಮ ಮನೆಗೂ ಸಹ ಬರದೇ ಕಾಣೆಯಾಗಿದ್ದು ಈ ಬಗ್ಗೆ ನಾನು ನಮ್ಮ ಸಂಬಂದಿಕರಲ್ಲಿ ಹಾಗು ಸುರಪೂರ ಮತ್ತು ಶಹಾಪೂರಕ್ಕೆ ಹೋಗಿ ಕಾಣೆಯಾದ ಮಗಳ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ಮಗಳು ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಹೀಗೆ ಸುಮಾರು ಕಡೆಗಳಲ್ಲಿಯೂ ನನ್ನ ಮಗಳಿಗೆ ಹುಡುಕಾಡಿದರೂ ನನ್ನ ಮಗಳು ಎಲ್ಲಿಯೂ ಸಿಕ್ಕಿರುವದಿಲ್ಲ. ಸದರಿ ನನ್ನ ಮಗಳ ಚಹರೆ ಪಟ್ಟಿ ಈ ರೀತಿ ಇರುತ್ತದೆ- ದುಂಡು ಮುಖ, ಸಾದಗಪ್ಪು ಬಣ್ಣ, ಉದ್ದನೆಯ ಮೂಗು, ಸಾದಾರಣ ಮೈಕಟ್ಟು, ಎತ್ತರ 5 ಪೀಟ 1 ಇಂಚ, ಕನ್ನಡ ಮಾತನಾಡುತ್ತಿದ್ದಳು, ಸದರಿಯವಳು ಮನೆಯಿಂದ ಹೋಗುವಾಗ ಒಂದು ಕೆಂಪು ಬಣ್ಣದ ಸೀರೆ ಹಾಗು ಕೆಂಪು ಬಣ್ಣದ ಜಂಪರ ಉಟ್ಟುಕೊಂಡು ಹೋಗಿದ್ದು ಇರುತ್ತದೆ. ಕಾರಣ ಮೆಲ್ಕಾಣಿಸಿದ ನನ್ನ ಮಗಳು ನಮ್ಮ ಮನೆಯಿಂದ ಗೌಡಗೇರಾಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದವಳು ಗೌಡಗೇರಾದಲ್ಲಿಯೂ ಇರದೇ ವಾಪಸ್ಸು ವಾಪಸ್ಸ ನಮ್ಮ ಮನೆಗೂ ಸಹ ಬಂದಿರುವುದಿಲ್ಲ, ಕಾರಣ ಕಾಣೆಯಾದ ನನ್ನ ಮಗಳಾದ ವಿಜಯಲಕ್ಷ್ಮೀ ಗಂಡ ಭೀಮಣ್ಣ ಜಮದರಖಾನ ವಯಾ|| 25 ಇವಳನ್ನು ಹುಡುಕಿಕೊಡಲು ವಿನಂತಿ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 30/2021 ಕಲಂ ಹೆಣ್ಣು ಮಗಳು ಕಾಣೆ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ : 43/2021 ಕಲಂ 363 ಐ.ಪಿ.ಸಿ : ಇಂದು ದಿನಾಂಕ: 03/03/2021 ರಂದು 5.00 ಪಿಎಂ ಕ್ಕೆ ಫಿಯರ್ಾದಿ ಶ್ರೀ ಮಾನಯ್ಯ ತಂದೆ ಜೆಟ್ಟೆಪ್ಪ ನಾಟೇಕಾರ ವ|| 55ವರ್ಷ ಜಾ|| ಪ.ಜಾತಿ ಉ|| ಕೆ.ಎಸ್.ಆರ್.ಪಿ ಮೀಸಲು ಪೊಲೀಸ್ ಮುಖ್ಯ ಪೇದೆ ಕಲಬುರಗಿ ಸಾ|| ವಿಭೂತಿಹಳ್ಳಿ ತಾ|| ಶಹಾಪೂರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಸಲ್ಲಿಸಿದ್ದು ಅದರ ಸಾರಂಶವೇನೆಂದರೆ, ನನಗೆ ನಾಲ್ಕು ಜನ ಮಕ್ಕಳಿದ್ದು 3 ಜನ ಹೆಣ್ಣು ಮಕ್ಕಳು ಮತ್ತು ಒಬ್ಬನು ಗಂಡು ಮಗ ಇರುತ್ತಾರೆ. ನಮ್ಮ ಸ್ವಂತ ಊರು ಶಹಾಪೂರ ತಾಲೂಕಿನ ವಿಭೂತಿಹಳ್ಳಿ ಗ್ರಾಮವಿದ್ದು, ನನ್ನ ಹೆಂಡತಿ ಮಕ್ಕಳು ಸ್ವಗ್ರಾಮದಲ್ಲಿ ವಾಸವಾಗಿರುತ್ತಾರೆ. ನಾನು ಕಲಬುರಗಿಯಲ್ಲಿ ವಾಸವಿದ್ದು, ಆಗಾಗ್ಗೆ ಊರಿಗೆ ಬರುತ್ತೇನೆ. ನಮ್ಮ ಮಗನಾದ ನಾಗರಾಜ ಈತನು 9ನೇ ತರಗತಿಯಿದ್ದು ಶಹಾಪೂರ ನಗರದ ವಿದ್ಯಾರಣ್ಯ ಶಾಲೆಯಲ್ಲಿ ಓದುತ್ತಿದ್ದು, ಪ್ರತಿದಿನ ಶಾಲೆಗೆ ನಮ್ಮ ಊರಾದ ವಿಭೂತಿಹಳ್ಳಿ ಗ್ರಾಮದಿಂದ ಬರುವುದು ಹೋಗುವುದು ಮಾಡುತ್ತಿದ್ದಾನೆ. ಹೀಗಿದ್ದು ದಿನಾಂಕ 02/03/2021 ರಂದು ಮುಂಜಾನೆ 10.00 ಗಂಟೆಗೆ ನಮ್ಮ ಮನೆಯಿಂದ ನನ್ನ ಹೆಂಡತಿಯಾದ ಮರೆಮ್ಮ ಇವರು ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಮ್ಮ ಮಗನಾದ ನಾಗರಾಜನು ಶಾಲೆಗೆ ಹೋಗುತ್ತಿಲ್ಲ ಕೇಳಿದರೆ ಶಾಲೆಯಲ್ಲಿ ಶಿಕ್ಷಕರು ಕ್ಲಾಸ್ ತೆಗೆದುಕೊಳ್ಳುತ್ತಿಲ್ಲ ಅಂತಾ ಹೇಳುತ್ತಿದ್ದಾನೆ, ಸ್ವಲ್ಪ ನೀವು ನಾಗರಾಜನಿಗೆ ಶಾಲೆಗೆ ಹೋಗು ಅಂತಾ ಹೇಳರಿ ಎಂದು ನನಗೆ ತಿಳಿಸಿದಾಗ ಅಲ್ಲಿಯೇ ಇದ್ದ ನಾಗರಾಜನಿಗೆ ಫೋನ ಕೊಡು ಅಂತಾ ತಿಳಿಸಿದ್ದರಿಂದ ನಾಗರಾಜನು ಫೋನ ತೆಗೆದುಕೊಂಡು ಮಾತಾಡಿದ್ದು ಶಾಲೆ ತಪ್ಪಿಸಬೇಡ ಇವತ್ತು ಶಾಲೆಗೆ ಹೋಗಿ ನಿಮ್ಮ ಶಿಕ್ಷಕರಿಂದ ನನಗೆ ಮಾತನಾಡಿಸು ನಾನು ಕೇಳುತ್ತೇನೆ ಏಕೆ ಕ್ಲಾಸ್ ತೆಗೆದುಕೊಳ್ಳುತ್ತಿಲ್ಲ ಅಂತಾ ಅಂದಾಗ ನಾಗರಾಜನು ಆಯ್ತು ಮಧ್ಯಾಹ್ನ ಶಾಲೆಗೆ ಹೋಗುತ್ತೇನೆ ಅಂತಾ ಅಂದನು. ನಂತರ ದಿನಾಂಕ 02/03/2021 ರಂದು ಸಂಜೆ 7.00 ಗಂಟೆಗೆ ನನ್ನ ಪತ್ನಿಯಾದ ಮರೆಮ್ಮಳು ನನಗೆ ಫೋನ ಮಾಡಿ ನಾಗರಾಜನು ಮಧ್ಯಾಹ್ನ 1.00 ಗಂಟೆಗೆ ಶಾಲೆಗೆ ಹೋಗುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೂ ಮನೆಗೆ ಬಂದಿಲ್ಲ ಅಂತಾ ತಿಳಿಸಿದಾಗ ನಾನು ನಮ್ಮ ಸಂಬಂಧಿಕರಾದ ವಿಶ್ವನಾಥ ನಾಟೇಕಾರ, ಭೀಮಾಶಂಕರ ನಾಟೇಕಾರ ಇವರಿಗೆ ಫೋನ ಮಾಡಿ ನಾಗರಾಜನು ಮನೆಗೆ ಬಂದಿಲ್ಲ ಸ್ವಲ್ಪ ಹುಡುಕಾಡಿರಿ ಅಂತಾ ಹೇಳಿದೆನು. ಅದರಂತೆ ಅವರು ಹುಡುಕಾಡಿದ್ದು ಸಿಕ್ಕಿಲ್ಲ ಮತ್ತು ನಾನೂ ಕೂಡಾ ರಜೆ ಹಾಕಿ ಊರಿಗೆ ಬಂದು ನಿನ್ನೆ ರಾತ್ರಿ ಮತ್ತು ಇವತ್ತು ಮಧ್ಯಾಹ್ನದವರೆಗೆ ಶಹಾಪೂರ ನಗರ, ವಿಭೂತಿಹಳ್ಳಿ, ತಿಪ್ಪನಳ್ಳಿ ಕಡೆಗಳಲ್ಲಿ ಹುಡುಕಾಡಿದ್ದು ಸಿಕ್ಕಿರುವುದಿಲ್ಲ. ನನ್ನ ಮಗನಾದ ನಾಗರಾಜ ತಂದೆ ಮಾನಯ್ಯ ನಾಟೇಕಾರ ವ|| 15ವರ್ಷ ಜಾ|| ಪ.ಜಾತಿ ಉ|| ವಿದ್ಯಾಥರ್ಿ ಸಾ|| ವಿಭೂತಿಹಳ್ಳಿ ಈತನು ಕಾಣೆಯಾಗಿದ್ದು ಸಿಕ್ಕಿರುವುದಿಲ್ಲ ಆದ್ದರಿಂದ ಮುಂದಿನ ಕ್ರಮ ಜರುಗಿಸಿ ನನ್ನ ಮಗನಾದ ನಾಗರಾಜನಿಗೆ ಪತ್ತೆ ಹಚ್ಚಿಕೊಡಬೇಕೆಂದು ಈ ಅಜರ್ಿಯ ಮೂಲಕ ವಿನಂತಿಸಿಕೊಳ್ಳುತ್ತೇನೆ ಅಂತಾ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ. 43/2021 ಕಲಂ: 363 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 44/2021 ಕಲಂ 323, 354 (ಡಿ.)504, 506, ಸಂಗಡ 34 ಐ.ಪಿ.ಸಿ : ಇಂದು ದಿನಾಂಕ: 03-03-2021 ರಂದು ಕುಮಾರಿ ಗಾಯಿತ್ರಿ ತಂದೆ ಮಲ್ಲಪ್ಪ ಕನಕಗಿರಿ ವಯ: 17 ವರ್ಷ ಜಾ: ಮಾದಿಗ ಉ: ಕೂಲಿ ಕೆಲಸ ಸಾ: ಹತ್ತಿಗೂಡೂರ ತಾ: ಶಹಾಪುರ ಇವರು ಠಾಣೆಗೆ ಬಂದದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನಾನು ಮತ್ತು ನನ್ನ ತಾಯಿ ಅಕ್ಕ ತಂಗಿಯರೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ನಮ್ಮ ಊರಿನ ನಾಗರಾಜ ತಂದೆ ಶಿವಪ್ಪನು ನನಗೆ ಆಗಾಗ ನೋಡುವುದು ಮಾತನಾಡಿಸುವುದು ಚುಡಾಯಿಸುವುದು ಮಾಡುತ್ತಿದ್ದನು. ನಾನು ಸುಮ್ಮನೆ ಹೋಗುತ್ತಿದ್ದೆನು. ದಿನಾಂಕ:28-03-2021 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ನಾನು ಮನೆಯ ಮುಂದೆ ಮುಸುರಿ ತಿಕ್ಕುತ್ತಿದ್ದಾಗ ನಾಗರಾಜನು ನನ್ನ ಕಡೆ ಒಂದು ಚಿಕ್ಕ ಕಲ್ಲನ್ನು ಒಗೆದನು. ನಾನು ನನ್ನ ತಾಯಿಗೆ ಹೇಳಿದೆನು. ನನ್ನ ತಾಯಿಯು ನಾಗರಾಜನ ತಾಯಿ ಶರಣಮ್ಮಳಿಗೆ ನಿನ್ನ ಮಗನಿಗೆ ಹೇಳು ಹೀಗೇಕೆ ಮಾಡುತ್ತಾನೆ ಅಂತಾ ಹೇಳಿದಳು. ಅದಕ್ಕೆ ಶರಣಮ್ಮಳು ನನ್ನ ತಾಯಿಗೆ ಸೂಳಿ ನಿಮಗೆ ಏನು ಮಾಡಿದರೂ ಯಾರು ಕೇಳುವು ದಿಲ್ಲ ಅಂತಾ ಸುಮ್ಮನೆ ಬಿದ್ದಿರಿ ಅಂತಾ ಬೈದಳು ಆಗ ನನ್ನ ತಾಯಿ ನಾನು ಮತ್ತು ನಮ್ಮ ಅಕ್ಕ ಶೋಭಾ ಇಬ್ಬರೂ ಯಾಕೆ ಬೈಯುತ್ತೀರಿ ನಿನ್ನ ಮಗ ಚುಡಾಯಿಸಿದ್ದಾನೆ. ಅಂತಾ ಹೇಳಿದ್ದಕ್ಕೆ 1) ವಸಂತಮ್ಮ ಗಂಡ ಶಿವಪ್ಪ ದೀವಳಗುಡ್ಡ, 2) ನಾಗರಾಜ ತಂದೆ ಶಿವಪ್ಪ ದೀವಳಗುಡ್ಡ ಮತ್ತು 3) ಜಯಪ್ಪ ತಂದೆ ಶಿವಪ್ಪ ದೀವಳಗುಡ್ಡ ಮೂರು ಜನರು ಕೂಡಿ ಸೂಳೆರೆ ನಿಮ್ಮಗೆ ಏನು ಮಾಡಿದರೂ ಇಲ್ಲಿ ಯಾರೂ ಕೇಳುವವರಿಲ್ಲ ನೀವು ಬಾಯಿ ಮುಚ್ಚಿಕೊಂಡಿರಬೇಕು ಅಂತಾ ಅಂದವರೆ ನಾಗರಾಜನು ನನಗೆ ಕಪಾಳಕ್ಕೆ ಹೊಡೆದನು. ವಸಂತಮ್ಮ ಇವಳು ನಮ್ಮ ತಾಯಿ ಶರಣಮ್ಮಳಿಗೆ ಕೈಯಿಂದ ಹೊಡೆದಿದ್ದು ಜಯಪ್ಪ ತಂದೆ ಶಿವಪ್ಪ ಈತನು ಕೂಡಾ ನನಗೆ ದಬ್ಬಿ ಕೈಯಿಂದ ಹೊಡೆದಿದ್ದಾನೆ ಆಗ ಅಲ್ಲೇ ಇದ್ದ ನಮ್ಮ ಸಂಬಂಧಿಕರಾದ ಪರಸಪ್ಪ ತಂದೆ ಭೀಮಪ್ಪ ಕನಕಗಿರಿ ಮತ್ತು ದಯಾನಂದ ತಂದೆ ಭೋಜಪ್ಪ ಕನಕಗಿರಿ ಇಬ್ಬರೂ ಬಂದ ಜಗಳ ಬಿಡಿಸಿಕೊಂಡರು. ಆಗ ನಾಗರಾಜನು ಸೂಳೆರೆ ಇದೊಂದು ಸಾರಿ ಉಳಿದಿರಿ ಇನ್ನೊಮ್ಮೆ ನಿಮ್ಮ ಜೀವ ನಮ್ಮ ಕೈಯಲ್ಲಿದೆ ಅಂತಾ ಬೆದರಿಕೆ ಹಾಕಿ ಹೋದರು. ನಾನು, ನಮ್ಮ ತಾಯಿ ನಮ್ಮ ಅಕ್ಕ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ: 03-03-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ನನಗೆ ಚುಡಾಯಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.44/2021 ಕಲಂ 323, 354(ಡಿ), 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ : 45/2021 ಕಲಂ 78 (3) ಕೆ.ಪಿ. ಆಕ್ಟ : ಇಂದು ದಿನಾಂಕ: 03-03-2021 ರಂದು 7:15 ಪಿ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಚೆನ್ನಯ್ಯ ಎಸ್. ಹಿರೇಮಠ ಪಿ.ಐ ಶಹಾಪುರ ರವರು ಒಂದು ಜಾಪನ ಪತ್ರದೊಂದಿಗೆ ಮಾನ್ಯ ನ್ಯಾಯಾಲಯದ ಪರವಾನಿಗೆ ಹಾಜರು ಪಡಿಸಿದ್ದು ಅದರ ಸಾರಾಂಶವೇನಂದರೆ, ಇಂದು ದಿನಾಂಕ: 03-03-2021 ರಂದು 6:30 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಾರದಹಳ್ಳಿ ಗ್ರಾಮದ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ಖಚಿತ ಬಂದಿದ್ದು ಸದರಿ ಅಪರಾಧವು ಅ ಸಂಜ್ಞೇಯವಾಗಿದ್ದಿರಿಂದ ಈ ಬಗ್ಗೆ ಠಾಣೆ ಎನ್.ಸಿ. ನಂ 10/2021 ನೇದ್ದನ್ನು ಧಾಖಲಿಸಿದ್ದು ಇದೆ. ಮತ್ತು ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ದಾಳಿಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಕೊಡೆದುಕೊಂಡು ಪರವಾನಿಗೆ ಪತ್ರ ಈ ಕೂಡಾ ಲಗತ್ತಿಸಿದ್ದು ಇದೆ ಆದ್ದರಿಂದ ಸದರಿ ಮಟಕಾ ಜೂಚಾಟ ನಡೆಸುತ್ತಿರುವ ವ್ಯಕ್ತಿಯ ವಿರುದ್ಧ ಸಕರ್ಾರಿ ತಫರ್ೆ ಫಿರ್ಯಾದಿ ನೀಡುತ್ತಿದ್ದು ಆರೋಪಿತನ ಮೇಲೆ ಕಲಂ. 78 (3) ಅಡಿಯಲ್ಲಿ ಪ್ರಕರಣ ಧಾಖಲಿಸಿ ಕೊಡಲು ಈ ಮೂಲಕ ಸೂಚಿಸಲಾಗಿದೆ ಅಂತಾ ಇದ್ದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.45/2021 ಕಲಂ 78 (3) ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು. ನಂತರ ಪಿ.ಐ ಸಾಹೇಬರು ದಾಳಿ ಮಾಡಿ ಆರೋಪಿತನನ್ನು ಹಿಡಿದು ಆತನಿಂದ 1) ನಗದು ಹಣ 1480 ರೂ. ಒಚಿದು ವ್ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು ಒಂದು ಬಾಲ್ ಪಾಯಿಚಿಟ ಪೆನ್ ಅ.ಕಿ. 00=00 ವಶಪಡಿಸಿಕೊಂಡು ತಂದು ಹಾಜರು ಪಡಿಸಿದ್ದು ಇರುತ್ತದೆ

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ: 16/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ : ಇಂದು ದಿನಾಂಕ:03.03.2021 ರಂದು 11:30 ಕ್ಕೆ ಪಿರ್ಯಾಧಿ ಶ್ರೀಮತಿ ಮಂಜುಳಾ ಗಂಡ ಮಲ್ಲಣ್ಣ ಅಂಗಡಿ ವ|| 47ವರ್ಷ ಜಾ|| ಹಿಂದೂ ಬಣಜಿಗ ಉ|| ಮನೆ ಕೆಲಸ ಸಾ|| ರಾಜನಕೋಳೂರ ತಾ|| ಹುಣಸಗಿ ಜಿ|| ಯಾದಗಿರ( ಮೋ.ನಂ.6361513038 ) ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿಯನ್ನು ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ್ದು ಸದರ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ ನನಗೆ ಶರತಕುಮಾರ ಅಂತಾ ಹೆಸರಿನ ಒಬ್ಬ ಗಂಡು ಮಗ ಹಾಗೂ ಬಸವರಾಜೇಶ್ವರಿ @ ರಾಣಿ ಅಂತಾ ಹೆಸರಿನ ಒಬ್ಬಳು ಹೆಣ್ಣು ಮಗಳು ಇದ್ದು ನನ್ನ ಗಂಡ ಮಲ್ಲಣ್ಣನು ನಮ್ಮೂರ ಶಾಂತಗೌಡ ಮಾಗನೂರ ರವರ ಜನರಲ್ ಸ್ಟೋರ್ದಲ್ಲಿ ಕೆಲಸ ಮಾಡುತ್ತಿರುವನು. ಮಗಳಾದ ಬಸವರಾಜೇಶ್ವರಿ@ರಾಣಿ ವ|| 21 ವರ್ಷ ಇವಳದು ಇನ್ನೂ ಮದುವೆ ಮಾಡಿರುವುದಿಲ್ಲಾ ಸುರಪುರ ಕಾಲೇಜಿನಲ್ಲಿ ಸದ್ಯ ಬಿ.ಎ. ವಿದ್ಯಾಬ್ಯಾಸ ಮಾಡುತ್ತಿದ್ದು ಪರೀಕ್ಷೆ ಇದ್ದಾಗ ಮಾತ್ರ ಕಾಲೇಜಿಗೆ ಹೊಗುತ್ತಿದ್ದು ಮನೆಯಲ್ಲಿಯೆ ದಿನಾಲು ವಿದ್ಯಾಭ್ಯಾಸ ಮಾಡುತ್ತಿರುವಳು.ಹೀಗಿದ್ದು ದಿನಾಂಕ:27/02/2021 ರಂದು ಶನಿವಾರ ದಿವಸ ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗಳು ಬಸವರಾಜೇಶ್ವರಿ @ ರಾಣಿ ರವರು ನಮ್ಮ ಮನೆಯಲ್ಲಿದ್ದಾಗ ನನ್ನ ಮಗಳಾದ ಬಸವರಾಜೇಶ್ವರಿ @ ರಾಣಿ ತಂದೆ ಮಲ್ಲಣ್ಣ ಅಂಗಡಿ ವ||21 ವರ್ಷ ಇವಳು ನನಗೆ ತಿಳಿಸಿದ್ದೆನೆಂದರೆ ಬಾಗಲಕೋಟಿಯಲ್ಲಿ ನನ್ನ ಗೆಳತಿಗೆ ಮೈಯಲ್ಲಿ ಆರಾಮ ಇರುವುದಿಲ್ಲಾ ಬಾಗಲಕೋಟಿಗೆ ಹೋಗಿ ಅವಳಿಗೆ ಮಾತನಾಡಿಸಿ ಬರುತ್ತೇನೆ ನಾನು ಬಾಗಲಕೋಟಿಗೆ ಹೋಗಿ ಬರುತ್ತೆನೆ ಅಂತಾ ತಿಳಿಸಿದ್ದರಿಂದ ನಾನು ಆಯಿತು ಹೋಗಿ ಬಾ ಅಂತಾ ಹೇಳಿದೆನು. ನನ್ನ ಮಗಳು ಬಸವರಾಜೇಶ್ವರಿ @ ರಾಣಿ ಇವಳು ದಿನಾಂಕ 27/02/2021 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ಮನೆಯಿಂದ ಬಾಗಲಕೋಟಿಗೆ ಹೋಗಲು ಹೋಗಿದ್ದು ನಂತರ ನನ್ನ ಮಗಳು ದಿನಾಂಕ 28/02/2021 ರಂದು ಮರಳಿ ಮನೆಗೆ ಬರದೆ ಇದ್ದುದ್ದರಿಂದ ನಾನು ನನ್ನ ಪೊನ್ ನಂಬರ 6361513038 ಮತ್ತು ನನ್ನ ಗಂಡ ಮಲ್ಲಣ್ಣನು ತನ್ನ ಪೊನ್ ನಂಬರ 9741115805 ನೇದ್ದರಿಂದ ನಮ್ಮ ಮಗಳ ಪೊನ್ ನಂಬರ 9900961948 ನೆದ್ದಕ್ಕೆ ಪೊನ್ ಮಾಡಿದರು ನನ್ನ ಮಗಳ ಪೊನ್ ಸ್ವಿಚ್ ಆಪ್ ಅಂತಾ ಬರ ಹತ್ತಿದ್ದು ನಂತರ ನಾವು ಗಾಬರಿಯಾಗಿ ನಾನು ನನ್ನ ಗಂಡ ಮಲ್ಲಣ್ಣ ಮಗ ಶರತಕುಮಾರ ಹಾಗೂ ನಮ್ಮೂರ ಅಂಬ್ರೇಶ ತಂದೆ ಶಾಂತಗೌಡ ಮಾಗನೂರ ರವರು ಕೂಡಿ ದಿನಾಂಕ 28/02/2021 ರಂದು ಬಾಗಲಕೋಟಿಗೆ ಹೋಗಿ ಬಾಗಲಕೋಟಿಯಲ್ಲಿಯ ಎಲ್ಲಾ ಆಸ್ಪತ್ರೆಗಳಿಗೆ ಹೋಗಿ ನನ್ನ ಮಗಳಿಗೆ ಹುಡುಕಾಡಲಾಗಿ ನನ್ನ ಮಗಳು ಸಿಗಲಿಲ್ಲ ನಂತರ ನಾವೂ ನಮ್ಮ ಸಂಬಂಧಿಕರ ಊರುಗಳಾದ ಸುರಪುರ ತಾಲೂಕಿನ ಹೆಮ್ಮಡಗಿ, ಕೊರಂ ಕ್ಯಾಂಪ್ ಗಂಗಾವತಿ,ಕಾರಟಗಿ, ಬಸ್ಸಾಪುರ ಹಾಗೂ ಹುನಗುಂದ ತಾಲೂಕಿನ ಕರಡಿ ಅಮರಾವತಿ ಗ್ರಾಮಗಳಿಗೆ ಮತ್ತು ಹುಣಸಗಿ ಸುರಪುರ ತಾಳಿಕೋಟಿ ಮುದ್ದೆಬಿಹಾಳ ನಾರಾಯಣಪುರ ಲಿಂಗಸೂರ ಇತರೆ ಕಡೆಗೆ ನಾವೆಲ್ಲರು ಕೂಡಿ ಇಂದಿನವರೆಗೂ ಹುಡುಕಾಡಿದರು ನನ್ನ ಮಗಳಾದ ಬಸವರಾಜೇಶ್ವರಿಯೂ ಸಿಗಲಿಲ್ಲ. ನಮ್ಮ ಸಂಬಂದಿಕರಿಗೆ ಪೋನ್ ಮಾಡಿ ವಿಚಾರಿಸಿದರು ನನ್ನ ಮಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ನನ್ನ ಮಗಳಾದ ಬಸವರಾಜೇಶ್ವರಿ @ರಾಣಿ ಇವಳು ತೆಳ್ಳನೆ ಮೈಕಟ್ಟು, ಬಿಳಿಯ ಬಣ್ಣ, ಉದ್ದನೆಯ ಮೂಗು, ಕಪ್ಪು ಕೂದಲು ಹೊಂದಿದ್ದು, ಸುಮಾರು 5.3 ಫೀಟ್ ಎತ್ತರ ಇದ್ದು, ಹಸಿರು ಬಣ್ಣದ ಚುಡಿದಾರ ಮತ್ತು ಟಾಪ್ ಧರಿಸಿದ್ದು. ಗುಲಾಬಿ ಬಣ್ಣದ ಓಡನಿ ಹಾಕಿಕೊಂಡಿದ್ದು ಕನ್ನಡ ಭಾಷೆ ಮಾತನಾಡುತ್ತಿದ್ದು,ಕನ್ನಡ,ಇಂಗ್ಲೀಷ್ ಹಿಂದಿ, ಭಾಷೆ ಓದಲು, ಬರೆಯಲು ಬರುತ್ತಿದ್ದು ನಾವು ಹುಡುಕಾಡಿದರೂ ಇಲ್ಲಿಯವರೆಗೂ ನನ್ನ ಮಗಳು ಬಸವರಾಜೇಶ್ವರಿ @ ರಾಣಿ ಇವಳು ಸಿಕ್ಕಿರುವುದಿಲ್ಲ, ನನ್ನ ಮಗಳಾದ ಬಸವರಾಜೇಶ್ವರಿ @ರಾಣಿ ಇವರು ಕಾಣೆಯಾಗಿದ್ದು ಅವರಿಗೆ ಪತ್ತೆ ಮಾಡಿಕೊಡಬೇಕು ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ ಮಾಡಿಸಿದ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:16/2021 ಕಲಂ: ಮಹಿಳೆ ಕಾಣೆಯಾದ ಬಗ್ಗೆ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

Last Updated: 04-03-2021 11:03 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080